Article Image

ಕಾರ್ಕಳ: ಭಾರತೀಯ ಜೈನ್‌ ಮಿಲನಿನ ಮಾಸಿಕ ಸಭೆ

Article Image

ಕಾರ್ಕಳ: ಭಾರತೀಯ ಜೈನ್‌ ಮಿಲನಿನ ಮಾಸಿಕ ಸಭೆ

ಕಾರ್ಕಳ: ಇಲ್ಲಿಯ ಭಾರತೀಯ ಜೈನ್‌ ಮಿಲನಿನ ಫೆಬ್ರವರಿ ತಿಂಗಳ ಮಾಸಿಕ ಸಭೆಯು ನಾಳೆ (ಫೆ.23) ಹಿರಿಯಂಗಡಿಯಲ್ಲಿರುವ ಶ್ರೀ ಮಹಾವೀರ ಭವನದಲ್ಲಿ ನಡೆಯಲಿದೆ. ಚಾವಡಿ ಚರ್ಚೆ: ವಿಷಯ: ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆಧುನಿಕತೆ ನಡೆಸಿಕೊಡುವವರು: ಮುನಿರಾಜ ರೆಂಜಾಳ ಭಾಗವಹಿಸುವವರು: ಮಹಾವೀರ ಜೈನ್‌ ಇಚಲಂಪಾಡಿ, ನಿರಂಜನ್‌ ಅಳಿಯೂರು, ಅಜಿತ್‌ ಕುಮಾರ್‌ ಜೈನ್‌ ಕೊಕ್ರಾಡಿ, ಶ್ವೇತಾ ಜೈನ್‌ ಮೂಡುಬಿದಿರೆ.

ಪಂಚಕಲ್ಯಾಣ ಮಹೋತ್ಸವ

Article Image

ಪಂಚಕಲ್ಯಾಣ ಮಹೋತ್ಸವ

ಸಾಗರ ತಾಲೂಕಿನ ಸುಳ್ಳಳ್ಳಿ ಅಂಚೆ, ಆವಿಗೆಯಲ್ಲಿ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿಯ ಜಿನ - ಚೈತ್ಯಾಲಯವನ್ನು ನೂತನವಾಗಿ ನಿರ್ಮಿಸಿದ್ದು, ಇದರ ಪಂಚಕಲ್ಯಾಣ ಮಹೋತ್ಸವ ಮತ್ತು ಮಾನಸ್ತಂಭೋಪರಿ ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಹಾಗೂ ಕನಕಗಿರಿ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಕಂಬದಹಳ್ಳಿ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಹೊಂಬುಜ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹಾಗೂ ನರಸಿಂಹರಾಜಪುರ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಇವರುಗಳ ದಿವ್ಯ ಸಾನ್ನಿಧ್ಯದಲ್ಲಿ ಇಂದಿನಿಂದ (ಫೆ.17) ಪ್ರಾರಂಭಗೊಂಡು ದಿನಾಂಕ 21-02-2025ನೇ ಶುಕ್ರವಾರದವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಟ್ಲ: ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

Article Image

ವಿಟ್ಲ: ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

ಶ್ರೀ ಕ್ಷೇತ್ರ ವಿಟ್ಲದಲ್ಲಿ ಫೆಬ್ರವರಿ 13 ರಿಂದ ಫೆ. 17ರವರೆಗೆ ನಡೆಯುತ್ತಿರುವ ಭ|| 1008 ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವದಲ್ಲಿ ದಿನಾಂಕ 16-02-2025ರ ಭಾನುವಾರದಂದು ಸಂಜೆ 7.00 ಗಂಟೆಗೆ ಮಂಗಳೂರು ಜೈನ ಸಮಾಜ ಅರ್ಪಿಸುವ “ ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ” ಜರುಗಲಿದೆ. ಸಾಹಿತ್ಯ ಮತ್ತು ನಿರ್ದೇಶನ: ಸುಕುಮಾರ್ ಬಲ್ಲಾಳ್ ಮಂಗಳೂರು ನೃತ್ಯ ನಿರ್ದೇಶನ: ವಿಧುಷಿ ಶಾಶ್ವತಿ ಸಚಿನ್ ಮಂಗಳೂರು ರಂಗ ನಿರ್ವಹಣೆ ಹಾಗೂ ಸಂಯೋಜನೆ: ಸಚಿನ್ ಜೈನ್ ಮಂಗಳೂರು ಸಂಗೀತ: ಜಿನಗಾನ ವಿಶಾರದೆ ಜಯಶ್ರೀ ಡಿ. ಜೈನ್ ಹೊರನಾಡು ವಿಶೇಷ ಆಕರ್ಷಣೆ: ನವಿಲು ಬಸದಿಯಲ್ಲಿ ನವಿಲು ನೃತ್ಯ ಪುಟ್ಟ ಮಕ್ಕಳಿಂದ ಸಮವಸರಣ ನಿರ್ಮಾಣ ಒಂದೇ ವೇದಿಕೆಯಲ್ಲಿ ನೂರು ಶ್ರಾವಕ-ಶ್ರಾವಕಿಯರ ಅಭೂತಪೂರ್ವ ಪ್ರದರ್ಶನ.

ಬೆಳ್ತಂಗಡಿ: ವಾರ್ಷಿಕ ಸಮಾರಂಭ

Article Image

ಬೆಳ್ತಂಗಡಿ: ವಾರ್ಷಿಕ ಸಮಾರಂಭ

ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ 1008 ಭ|| ಶ್ರೀ ಪಾಶ್ವ೯ನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಹಾಗೂ ಶ್ರೀ ಪದ್ಮಾವತೀ ಅಮ್ಮನವರ ಬಿಂಬ ಪ್ರತಿಷ್ಠಾ ಮಹೋತ್ಸವದ ವಾರ್ಷಿಕೋತ್ಸವ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮಾರ್ಗದರ್ಶನ ಮತ್ತು ಆಶೀರ್ವಾದಗಳೊಂದಿಗೆ ಜರಗಲಿರುವುದು ಹಾಗೂ ಬೆಳಿಗ್ಗೆ 10.00ಗಂಟೆಗೆ ಚತುರ್ವಿಂಶತಿ ತೀರ್ಥಂಕರರ ಚರಣ ಕೂಟಗಳ ದರ್ಶನದ ದಾರಿಯನ್ನು ಲೋಕಾರ್ಪಣೆ ಮಾಡಲಿರುವರು ಹಾಗೂ ಶಾಸಕರ ಅನುದಾನದಿಂದ ಬಸದಿಗೆ ಪ್ರವೇಶಿಸುವ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು ಶಾಸಕರಾದ ಹರೀಶ್ ಪೂಂಜಾರವರು ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಗೆ ಪದವಿ

Article Image

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಗೆ ಪದವಿ

ಶ್ರೀ ಧ ಮಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಭಾರತ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯೂಷ್ ಸಚಿವರಾದ ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ ಇವರಿಂದ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಪದವಿಯನ್ನು ಪಡೆದರು. ಇವರು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ ಜೈನ್ ಹಾಗೂ ರತ್ನಶ್ರೀ ದಂಪತಿ ಪುತ್ರ. ಇವರು ಇದೇ ಕಾಲೇಜಿನಲ್ಲಿ ಎಮ್. ಡಿಗೆ (ಸ್ನಾತಕೋತ್ತರ ಪದವಿ) ಪ್ರವೇಶಾತಿಯನ್ನು ಪಡೆದಿದ್ದಾರೆ.

ನಲ್ಲೂರು ಜಗತ್ಪಾಲ ಕಡಂಬರಿಗೆ ಸನ್ಮಾನ

Article Image

ನಲ್ಲೂರು ಜಗತ್ಪಾಲ ಕಡಂಬರಿಗೆ ಸನ್ಮಾನ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ 'ಹಿರಿಯ ರೆಡೆಗೆ ಸಾಹಿತ್ಯ ನಡಿಗೆ' ಕಾರ್ಯಕ್ರಮದಲ್ಲಿ ಬಜಗೋಳಿ ನಲ್ಲೂರು ಜಗತ್ಪಾಲ ಕಡಂಬರಿಗೆ ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆಗಾಗಿ ನಲ್ಲೂರು ಗುಣಲಲಿತ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಕಳ ತಾಲೂಕು ಸಮ್ಮೇಳನದ ಸಭಾಧ್ಯಕ್ಷರಾದ ಕೆ ಗುಣಪಾಲ ಕಡಂಬ, ಕ.ಸಾ.ಪ. ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಉದ್ಯಮಿ ಬಜಗೋಳಿ ಡಾ ರವೀಂದ್ರ ಶೆಟ್ಟಿ, ನಿತ್ಯಾನಂದ ಪೈ, ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ರೂಪ ರವೀಂದ್ರ ಶೆಟ್ಟಿ, ನಲ್ಲೂರು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನಾಗೇಶ್, ದೇವದಾಸ ಕೆರೆಮನೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಅಬ್ಯಾಕಸ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಷಡ್ಜ

Article Image

ಅಬ್ಯಾಕಸ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಷಡ್ಜ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಲ್ಲಿಯೇ ಅತ್ಯಂತ ಅದ್ಬುತ ಪ್ರತಿಭಾವಂತ ಪುಟ್ಟ ಬಾಲಕ ಷಡ್ಜ ಹುಬ್ಬಳ್ಳಿಯಲ್ಲಿ ಎಜು ಸ್ಮಾರ್ಟ್ ಕೇರ್ "ಅಬ್ಯಾಕಸ್" ( ಅಂಕಗಣಿತದ ಕೌಶಲ್ಯ) ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬೆಂಗಳೂರಿನಲ್ಲಿಯೂ ಪ್ರಥಮ ಬಹುಮಾನ ತನ್ನದಾಗಿರಿಸಿಕೊಂಡಿದ್ದಾನೆ. ಇದೀಗ ಮುಂಬೈಯಲ್ಲಿ ಕಳೆದ ವಾರ ನಡೆದ 17ನೇ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ಅಬ್ಯಾಕಸ್ ಮತ್ತು ಗ್ರೇಡಿಂಗ್ ಪರೀಕ್ಷೆಯಲ್ಲಿ "ಅಚೀವರ್ " ಪ್ರಶಸ್ತಿ ಪಡೆದ ಈ ಬಾಲಕ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವನು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ನ ಸದಸ್ಯರು ಧರ್ಮನುರಾಗಿಗಳೂ ಆದ ಶಿಲ್ಪಾ ವಿಜಯಕುಮಾರ ಕಾಶಿನ ಅವರ ಮೊಮ್ಮಗ, ಉಪನ್ಯಾಸಕಿ ಭಾಗ್ಯಶ್ರೀ ಮತ್ತು ಭಾರತೀಯ ಅಂಚೆ ಇಲಾಖೆಯ ಉದ್ಯೋಗಿ ಜೀವಂಧರ ಕಾಶಿನರವರ ಪುತ್ರ, ಪ್ರಭಾ ನಾಯಕ್ ಇವರು ಷಡ್ಜನಿಗೆ ಮಾರ್ಗದರ್ಶಕರಾಗಿ ಪ್ರೇರಣೆ ಪ್ರೋತ್ಸಾಹ ನೀಡಿದ್ದಾರೆ. ಶಾಂತರಾಜ ಮಲ್ಲಸಮುದ್ರ

ಇಂಡಿಯನ್ ವುಮೆನ್ ನೆಟ್‌ವಕ್‌೯ನ 2025-26ನೇ ಸಾಲಿನ ಅಧ್ಯಕ್ಷೆಯಾಗಿ ಪದ್ಮಿನಿ ಎಸ್. ನವಲಗೂಂದ ಆಯ್ಕೆ

Article Image

ಇಂಡಿಯನ್ ವುಮೆನ್ ನೆಟ್‌ವಕ್‌೯ನ 2025-26ನೇ ಸಾಲಿನ ಅಧ್ಯಕ್ಷೆಯಾಗಿ ಪದ್ಮಿನಿ ಎಸ್. ನವಲಗೂಂದ ಆಯ್ಕೆ

ಇಂಡಿಯನ್ ವುಮೆನ್ ನೆಟ್‌ವಕ್‌೯ (ಸಿಐಐ-ಐಡಬ್ಲ್ಯುಎನ್) ಕರ್ನಾಟಕ, 2025-26ನೇ ಸಾಲಿನ ಅಧ್ಯಕ್ಷೆಯಾಗಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿನಿ ಪದ್ಮಿನಿ ಎಸ್. ನವಲಗೂಂದ ಅವರ ನೇಮಕವನ್ನು ಫೆಬ್ರವರಿ 5, 2025 ರಂದು ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಘೋಷಿಸಿದೆ. ಸ್ವೀಕಾರ ಭಾಷಣದಲ್ಲಿ, ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿ, ಮಹಿಳಾ ವೃತ್ತಿಪರರಿಗೆ ಬೆಂಬಲಾತ್ಮಕ ಪರಿಸರವನ್ನು ನಿರ್ಮಿಸಲು ತಮ್ಮ ಬದ್ಧತೆಯನ್ನು ವಿವರಿಸುತ್ತಾ, ಮುಂದಿನ ವರ್ಷದ ದೃಷ್ಟಿಕೋನವನ್ನು ಹಂಚಿಕೊಂಡರು. ಇವರು, ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿನಿ, ಪ್ರಸ್ತುತ ಬೋಶ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್‌ನಲ್ಲಿ ಉತ್ಪನ್ನ ಅನುಕೂಲತೆ ಅಧಿಕಾರಿ. ಡಿಟ್ರಾಯಿಟ್ನಲ್ಲಿ 2024ನೇ ಸಾಲಿನಲ್ಲಿ ಆಟೋಮೋಟಿವ್ ವುಮೆನ್ ಆಫ್ ದ ಇಯರ್ ಪ್ರಶಸ್ತಿಯನ್ನು ಪಡೆದಿರುವ ಪ್ರಥಮ ಭಾರತೀಯ ಮಹಿಳೆ. ಅವರು ಮಹಿಳಾ ನೆಟ್‌ವಕ್‌೯ಗೆ ಸಹಾಯ ಮಾಡುವ ಹಲವಾರು ಉಪಕ್ರಮಗಳನ್ನು ಚಲಾಯಿಸುವಲ್ಲಿ ವಿಶಾಲ ಅನುಭವವನ್ನು ಹೊಂದಿರುವ ನಾಯಕಿಯಾಗಿರುತ್ತಾರೆ.

ವರಂಗ: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವರಂಗ: ವಾರ್ಷಿಕ ರಥಯಾತ್ರಾ ಮಹೋತ್ಸವ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ವರಂಗದಲ್ಲಿರುವ ಭಗವಾನ್ ಶ್ರೀ 1008 ನೇಮಿನಾಥ ಸ್ವಾಮಿ ಬಸದಿಯ ವಾರ್ಷಿಕ ರಥಯಾತ್ರಾ ಮಹೋತ್ಸವವು ಪರಮ ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಮತ್ತು ಪಾವನ ಸಾನ್ನಿಧ್ಯದಲ್ಲಿ ನಾಳೆ (ಫೆ.13) ಯಿಂದ ಪ್ರಾರಂಭಗೊಂಡು ಫೆ.17ರವರೆಗೆ ನೆರವೇರಲಿದೆ.

ಕೈಬೀಸಿ ಕರೆಯುತ್ತಿದೆ ವೈಭವೋಪೇತ ವಿಟ್ಲದ ಬಸದಿ

Article Image

ಕೈಬೀಸಿ ಕರೆಯುತ್ತಿದೆ ವೈಭವೋಪೇತ ವಿಟ್ಲದ ಬಸದಿ

ತುಳುನಾಡಿನ ಜೈನರಿಗೆ ಈಗ ಧಾರ್ಮಿಕವಾಗಿ ಸುವರ್ಣಯುಗ. ಹಲವಾರು ಬಸದಿಗಳು ಅಳಿವಿನಂಚಿನಲ್ಲಿದ್ದರೂ ಕಲ್ಲರಳಿ ಹೂವಾಗಿ ಧರ್ಮೀಯರ ಧರ್ಮದ ಪ್ರಭಾವನೆಯನ್ನು ಬಿತ್ತಿ, ಅಂಕುರವನ್ನಾಗಿಸಿ, ಸಸಿಯಾಗಿ, ಹೆಮ್ಮರವಾಗಲು ನಿಮಿತ್ತವಾಗಿದೆ. ಭವ್ಯಾತಿಭವ್ಯ ಬಸದಿಗಳು ಜೀರ್ಣೋದ್ಧಾರಗೊಂಡು ಜಿನಧರ್ಮದ ಸಾರತತ್ವವಾದ ಬದುಕು ಬದುಕಲು ಬಿಡು, ಅಹಿಂಸಾ ಪರಮೋ ಧರ್ಮಃ ಎಂದು ಸಾರಿ ಸಾರಿ ಮಾರ್ದನಿಸುತ್ತಿದೆ. ಇದೀಗ ಬಂಟ್ವಾಳದ ತಾಲ್ಲೂಕಿನ ವಿಟ್ಲದ ಚಂದ್ರನಾಥ ಸ್ವಾಮಿ ಬಸದಿಗೆ ಎಂಟು ಶತಮಾನಗಳ ಭವ್ಯ ಇತಿಹಾಸವಿದೆ. ಧರ್ಮಸ್ಥಳದ ಅಂದಿನ ಸ್ವರ್ಗೀಯ ಧರ್ಮಾಧಿಕಾರಿಗಳಾದ ಮಂಜಯ್ಯ ಹೆಗ್ಗಡೆಯವರು ಹಾಗೂ ಪುಟ್ಟಸ್ವಾಮಿ ಸಹೋದರರು ಜೊತೆಸೇರಿ ಜೀರ್ಣೋದ್ಧಾರವಾಗಿದ್ದ ಬಸದಿ ಇಂದು ಪುನಃ ಶಿಥಿಲಾವಸ್ಥೆಗೆ ತಲುಪಿದಾಗ ಪುಟ್ಟಸ್ವಾಮಿಯವರ ಪುತ್ರ ವಿನಯ ಕುಮಾರ್ ಅವರು ಮುಂದಡಿ ಇಟ್ಟಾಗ ಎಡಬಲಗಳಲ್ಲಿ ಜೋಡೆತ್ತಿನಂತೆ ಭುಜಕ್ಕೆ ಭುಜ ಕೊಟ್ಟು, ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟವರು ವಿನಯಕುಮಾರ್ ಅವರ ಸುಪುತ್ರ ಎಂ. ಜಿತೇಶ್ ಜೈನ್ ಹಾಗೂ ಇವರ ಆಪ್ತ ಸ್ನೇಹಿತ ದರ್ಶನ್ ಜೈನ್ ಅವರುಗಳು. ಧರೆಗೆ ಅತಿಶಯವೆನಿಪ ಭವ್ಯ ಜಿನಮಂದಿರದ ನಿರ್ಮಾಣಕ್ಕೆ ಕಾರಣೀಭೂತರಾಗಿ ಭವ್ಯ ಧಾರ್ಮಿಕ ಪರಂಪರೆಗೆ ನಾಂದಿ ಹಾಡಿ ಅಸಂಖ್ಯಾತ ಯುವಪಡೆಗೆ ಮಾದರಿಯಾದರು. ಸ್ವರ್ಗ ಲೋಕದ ಅಕೃತ್ರಿಮ ಚೈತ್ಯಾಲಯದಂತೆ ವಿಟ್ಲ ಬಸದಿ ಈಗ ಕಂಗೊಳಿಸುತ್ತಿದೆ. ಅಸದಳವಾದ ಶಿಲ್ಪ ಕೆತ್ತನೆಗಳು, ಕಾಷ್ಠದ ಕೆತ್ತನೆಗಳು , ಕನ್ನಡಿಯಂತೆ ಜಗಮಗಿಸುವ ನೆಲ, ನವಿಲಿನಿಂತೆ ಶೋಭಸುವ ತಾಮ್ರ ಕವಚವನ್ನು ಹೊಂದಿದ ಮಾಡು ( ಸೂರು ) , ಇದು ಸಾಕ್ಷಾತ್ ಮಯೂರವೊಂದು ತನ್ನ ರೆಕ್ಕೆಯನ್ನು ಹರಡಿ ಜಿನಭಕ್ತಿಯಲ್ಲಿ ಲೀನವಾದಂತೆ ತೋರುತ್ತಿದೆ. ಹಸಿರ ಹೊದಿಕೆಯನ್ನು ಹೊಂದಿದ ಬಸದಿಯ ಸೂರು ಜಿನಧರ್ಮದ ಪ್ರಗತಿಯನ್ನು ಸೂಚಿಸುತ್ತಿದೆ. ತಿಳಿ ಮೆಂತ್ಯ ಬಣ್ಣದ ಗೋಡೆಗಳು, ಅದರಲ್ಲಿ ಸುಂದರವಾದ ಕೆತ್ತನೆಗಳು, ಪ್ರವೇಶದ್ವಾರದಲ್ಲೇ ಮೇಲ್ಗಡೆ ಹುಲಿ ದನ ಒಂದೇ ಹೊಂಡದಿಂದ ನೀರು ಕುಡಿಯವ ಅದ್ಭುತ ಮೈತ್ರಿಯ ಸಂದೇಶ ಸಾರುವ ಚಿತ್ರ ಪಟ್ಟಿಕೆಗಳು ಕಾಷ್ಠದಲ್ಲಿ ಅರಳಿ ಸೊಬಗ ಬೀರಿದೆ. ಮುಂದಕ್ಕೆ ಅಡಿ ಇಟ್ಟಂತೆ ಎದುರಲ್ಲಿ ಮರದ ಕೆತ್ತನೆಯ ಅರಹಂತ ದೇವನ ಪ್ರತಿಮೆ ಗೋಚರವಾಗಿ ಇಗೋ ನಿನ್ನ ಮನದ ಕಷಾಯವನ್ನು ತೊರೆದು ಭಗವಂತನ ದರ್ಶನ ಮಾಡು ಎಂಬಂತೆ ಸಾರುತ್ತಿದೆ. ಮುಂದಕ್ಕೆ ಅಡಿ ಇಟ್ಟಂತೆ ಭಗವಾನ್ ಚಂದ್ರನಾಥ ಸ್ವಾಮಿ, ಭಗವಾನ್ ಮಹಾವೀರ ಸ್ವಾಮಿಯ ದರ್ಶನವಾಗುತ್ತದೆ. ಇಡೀ ಬಸದಿಯೇ ಸಮವಸರಣದ ರೂಪ ಪಡೆದು ಜಿನಭಗವಂತನು ಸಮವಸರಣದಲ್ಲಿ ದಿವ್ಯಧ್ವನಿ ನೀಡುತ್ತಿರುವಂತೆ ಭಾಸವಾಗಿ ನಮ್ಮ ಕಿವಿಗಳೆರಡು ಆ ದಿವ್ಯಧ್ವನಿಯನ್ನು ಆಘ್ರಾಣಿಸಲು ಹೊತೊರೆಯುವಂತೆ ಭಾಸವಾಗುತ್ತದೆ. ನೋಡಲು ಬನ್ನಿರಿ ಚಂದ್ರೇಶನ ಓ ವಿಟ್ಲದಲಿ ನಿಂತಿಹ ದೇವನ ಸುಮತಿಯ ಬೋಧಿಪ ಮಹಾವೀರನ ಸುಮತಿಯ ಬೋಧಿಪ ಮಹಾವೀರನ ಹಾಗಾದರೆ ತಡವೇಕೆ ಬಂಧುಗಳೇ, ವಿಟ್ಲದತ್ತ ಧಾವಿಸೋಣ. ದಿನಾಂಕ 13.02.2025 ರಿಂದ 17.02.2025 ರವರೆಗಿನ ಪಂಚಕಲ್ಯಾಣವೆಂಬ ಜಲದಲ್ಲಿ ಮಿಂದೇಳೋಣ. ಧನ್ಯರಾಗೋಣ. ನಿರಂಜನ್ ಜೈನ್ ಕುದ್ಯಾಡಿ

ಪಾಣೆಮಂಗಳೂರು: 72ನೇ ವಾರ್ಷಿಕೋತ್ಸವ

Article Image

ಪಾಣೆಮಂಗಳೂರು: 72ನೇ ವಾರ್ಷಿಕೋತ್ಸವ

ಶ್ರೀ ಕ್ಷೇತ್ರ ಪಾಣೇರ್ ಭ|| 1008 ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದ 72ನೇ ವಾರ್ಷಿಕೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಡಾ|| ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ಶುಭಾಶೀರ್ವಾದಗಳೊಂದಿಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಸಹಕಾರದೊಂದಿಗೆ ದಿನಾಂಕ 14-02-2025ನೇ ಶುಕ್ರವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕ ಮಹೋತ್ಸವ

Article Image

ವಾರ್ಷಿಕ ಮಹೋತ್ಸವ

ಬೆಳ್ತಂಗಡಿ ತಾಲೂಕಿನ ಪೆರಿಂಜೆಯಲ್ಲಿರುವ ಶ್ರೀ ಪುಷ್ಪದಂತ ಸ್ವಾಮಿ ಬಸದಿಯ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನಮಠದ ಪ. ಪೂ. ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ, ನವಗ್ರಹ ಶಾಂತಿ 24 ಕಲಶ ಅಭಿಷೇಕ ಹಾಗೂ ಮಹೋತ್ಸವದೊಂದಿಗೆ ಫೆ. 14ರಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಟ್ಲ ಬಸದಿಯ ಪಂಚಕಲ್ಯಾಣ

Article Image

ವಿಟ್ಲ ಬಸದಿಯ ಪಂಚಕಲ್ಯಾಣ

ಹಚ್ಚ ಹಸಿರ ಪ್ರಕೃತಿಯ ಮಡಿಲಲ್ಲಿ ಗರಿಗೆದರಿ ನಿಂತ ನವಿಲನಾಕಾರದ ಹೊದಿಕೆಯಿರುವ ಸುರ ಸುಂದರ ಜಿನಮಂದಿರ ತಲೆ ಎತ್ತಿ ನಿಂತು ಕೈ ಬೀಸಿ ಕರೆಯುತಿದೆ ಪಂಚಕಲ್ಯಾಣ ಮಹೋತ್ಸವಕೆ...... ತುಳುನಾಡು ಒಂದು ಕಾಲದಲ್ಲಿ ಜೈನ ಬಂಧುಗಳಿಂದಲೇ ತುಂಬಿಹೋಗಿತ್ತು. ನೂರಾರು ಎಕರೆ ಭೂಮಾಲಕರುಗಳಾಗಿ ಬಸದಿಗಳನ್ನು, ದೇವಸ್ಥಾನಗಳನ್ನು, ದೈವಾಲಯ, ನಾಗಾಲಯಗಳ ನಿರ್ಮಾಣ ಮಾಡಿ ಭವ್ಯ ಪರಂಪರೆಯ ಹರಿಕಾರರಾಗಿ ಜೈನರು ಧಾರ್ಮಿಕ, ಸಾಮಾಜಿಕ ಪರಂಪರೆಗೆ ಅಭೂತಪೂರ್ವ ಕಾಣಿಕೆ ನೀಡಿದ್ದಾರೆ. ಭೂಮಂಡಲದಲ್ಲೇ ಅತಿಶಯವೆನಿಪ ತುಳುನಾಡಿನ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ ಪರಂಪರೆಗಳಿಗೆ ಜೈನರಸರು ನೀಡಿದ ಕೊಡುಗೆ ಅಸದೃಶವಾಗಿದೆ. ಸಮನ್ವತೆಯ ಹರಿಕಾರರಾಗಿ ಧರ್ಮ ಸೌರಭವನ್ನು ತುಳುನಾಡಿನ ಮೂಲ ಮಣ್ಣಿನಲ್ಲಿ ಬೆರೆಸಿ ಕೋಮು ಸಾಮರಸ್ಯದ ಸೊಬಗನ್ನು ವಿಶ್ವದಾದ್ಯಂತ ಪಸರಿಸಿದವರು ಜೈನ ಅರಸರೇ ಆಗಿದ್ದಾರೆ. ರಾಣಿ ಅಬ್ಬಕ್ಕ, ರಾಣಿ ಚೆನ್ನಾಭೈರಾದೇವಿ, ಬಂಗರಸರು, ಚೌಟರು, ಅಜಿಲರು, ಭೈರವರಸರು ಈ ತುಳುನಾಡಿಗೆ ನೀಡಿದ ಕೊಡುಗೆ ಶತಶತಮಾನ ಕಳೆದರೂ ಘಮಲನ್ನು ಈಗಲೂ ದಶದಿಕ್ಕುಗಳಿಗೂ ಪಸರಿಸುತ್ತಿದೆ ಹಾಗೂ ಚಿರಸ್ಥಾಯಿಯಾಗಿದೆ. ಈ ನಿಟ್ಟಿನಲ್ಲಿ ಈ ತುಳುನಾಡು ಜೈನರಸರಿಗೆ ಋಣಿಯಾಗಿದೆ. ವಿಟ್ಲದ ಜೈನರ ಪೇಟೆಯ ಬಸದಿ ತುಳುನಾಡಿನಲ್ಲಿ ಜೈನ ಸಂಖ್ಯೆ ಪ್ರಾಬಲ್ಯದ ಕಡೆಯಲ್ಲಿ ಜೈನ ಎಂಬ ಪದವನ್ನು ಸೇರಿಸಿಯೇ ಜೈನ ಪೇಟೆ, ಜೈನ ಬೀದಿ, ಜೈನ ಕೇರಿ, ಜೈನ ಪಟ್ಟಣ, ಜೈನ ಗ್ರಾಮ ಎಂಬ ನಾಮದ ಹಲವು ಊರುಗಳು ತುಳುನಾಡಿನಲ್ಲಿ ಇಂದಿಗೂ ಇದೆ. ಹಲವು ಕಡೆಗಳಲ್ಲಿ ಜೈನರ ಪ್ರಾಬಲ್ಯ ಕಡಿಮೆಯಾದಂತೆ ಜೈನರ ಹೆಸರಿನ ಊರುಗಳ ಹೆಸರುಗಳೂ ಕೂಡ ಬದಲಾದವು, ಕೆಲವು ಉಳಿದುಕೊಂಡಿವೆ. ಹಚ್ಚ ಹಸುರಿನ ಕಾನನದ ಮಧ್ಯೆ ವಿಟ್ಲ ಎಂಬ ಊರು ಜಗತ್ತಿನ ಆಗುಹೋಗುಗಳಿಗೆ ಸಾಕ್ಷಿಯಾಗಿ ನಿಂತಿದೆ. ಒಂದು ಕಾಲದಲ್ಲಿ ಜೈನರಸರ ಆಳ್ವಿಕೆ ಒಳಪಟ್ಟ ವಿಟ್ಲವು ಜೈನರೇ ಅಧಿಕವಾಗಿ ಇದ್ದ ಕಾಲ ಒಂದಿತ್ತು. ಆಗಿನ ಸಮಯದಲ್ಲಿ ಜೈನ್ ಪೇಟೆ ಎಂಬ ಊರಲ್ಲಿ ಭವ್ಯವಾದ ಜೈನರ ಬಸದಿಯೊಂದು ಶ್ರಾವಕರ ಪೂಜೆ ಪುನಸ್ಕಾರಗಳಿಂದ ರತ್ನತ್ರಯದ ಸಂದೇಶವನ್ನು ಸಾರುತ್ತಾ ಇತ್ತು. ಕಾಲಚಕ್ರ ಉರುಳಿದಂತೆ ಜೈನರಸರ ಆಳ್ವಿಕೆ ಕೊನೆಗೊಂಡಿತು. ಪರಕೀಯರ ಗುಲಾಮತನದ ಆಡಳಿತ ಜಾರಿಗೊಂಡಿತು. ಆದರೂ ಆ ಕಾಲಚಕ್ರದ ಹೊಡೆತಕ್ಕೆ ನಲುಗದೇ ಮುನ್ನುಗ್ಗಿದರು. ಬ್ರಿಟಿಷರ ನಿರಂಕುಶ ಆಡಳಿತದ ಕಾರ್ಮೋಡ ಇದ್ದರೂ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾದ ಮಂಜಯ್ಯ ಹೆಗ್ಗಡೆಯವರು ಹಾಗೂ ಇವರ ಸಹೋದರ ಪುಟ್ಟಸ್ವಾಮಿಯವರು ಜೊತೆ ಸೇರಿ 1940ರಲ್ಲಿ ಹಳೆಯ ಬಸದಿಯನ್ನ ಭವ್ಯವಾಗಿ, ದೊಡ್ಡದಾಗಿ ಮರು ನಿರ್ಮಸಿ ಐತಿಹಾಸಿಕ ಪಂಚಕಲ್ಯಾಣ ನೆರವೇರಿಸಿದರು. ಕಾಲಗತಿಸಿದಂತೆ ನೂರಾರು ಎಕರೆಗಳಷ್ಟು ಭೂಮಾಲಿಕತ್ವವನ್ನು ಹೊಂದಿದ್ದ ಜೈನರು ಭೂಮಸೂದೆ ಕಾನೂನಿನಲ್ಲಿ ಭೂಮಿಗಳನ್ನು ಕಳೆದುಕೊಂಡು ಅಕ್ಷರಶಃ ನಿರ್ಗತಿಕರಾದರು. ಜೈನರ ಸಂಖ್ಯೆ ಇಳಿಮುಖವಾಯಿತು. ಬಸದಿಗಳ ಸಾವಿರಾರು ಎಕರೆ ಭೂಮಿ ಅನ್ಯರ ಪಾಲಾಯಿತು. ಇಂದು ವಿಟ್ಲದ ಜೈನ್ ಪೇಟೆಯಲ್ಲಿ ಒಂದೇ ಒಂದು ಜೈನ ಕುಟುಂಬ ಇಲ್ಲದಿರುವುದು ವಿಪರ್ಯಾಸವೇ ಸರಿ. ಅಂದು ಬಸದಿಯನ್ನು ಪುನರುತ್ಥಾನಗೊಳಿಸಿದವರಲ್ಲಿ ಓರ್ವರಾದ ಪುಟ್ಟಸ್ವಾಮಿಯ ಸುಪುತ್ರ ಡಿ. ವಿನಯಕುಮಾರ್ ಅವರು ಇಂದು ವಿಟ್ಲದ ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳ ಗೌರವಾಧ್ಯಕ್ಷತೆಯಲ್ಲಿ ಡಿ. ವಿನಯ್ ಕುಮಾರ್ ಇವರ ಸುಪುತ್ರ ಜಿತೇಶ್ ಎಂ ಇವರ ಅಧ್ಯಕ್ಷತೆಯಲ್ಲಿ, ಅವರ ಮಿತ್ರ ದರ್ಶನ್ ಜೈನ್‌ರವರ ಸಾರಥ್ಯದಲ್ಲಿ ಹಾಗೂ ಊರಪರವೂರ ಬಂಧುಗಳ ಸಹಕಾರದೊಂದಿಗೆ ವಿಟ್ಲದ ಭಗವಾನ್ ಚಂದ್ರನಾಥ ಸ್ವಾಮಿಯ ಬಸದಿ ಸಂಪೂರ್ಣ ಶಿಲಾಮಯ ರೂಪದಲ್ಲಿ ಮರುನಿರ್ಮಾಣಗೊಂಡು ವೈಭವದ ಪಂಚಕಲ್ಯಾಣಕ್ಕೆ ಅಣಿಯಾಗಿದೆ. ಇಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ, ಭಗವಾನ್ ಮಹಾವೀರ ಸ್ವಾಮಿ, ದೇವಿ ಪದುಮಾಂಬೆ, ದೇವಿ ಜ್ವಾಲಾಮಾಲಿನಿ ಪೂಜೆಗೊಳ್ಳುತ್ತಿದ್ದಾರೆ. ವೈಭವದ ಪಂಚಕಲ್ಯಾಣವು 13.02.2025 ರಿಂದ 17.02.2025 ರವರೆಗೆ ಮೂಡುಬಿದಿರೆ ಜೈನ ಮಠದ ಪೂಜ್ಯ ಸ್ವಾಮೀಜಿಯವರ ಪಾವನ ಸಾನ್ನಿಧ್ಯ, ಮಾರ್ಗದರ್ಶನದೊಂದಿಗೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳ ನೇತೃತ್ವದಲ್ಲಿ, ಜಯಶ್ರೀ ಡಿ ಜೈನ್ ಅವರ ಭಕ್ತಿ ಸಂಗೀತದೊಂದಿಗೆ ವೈಭವವಾಗಿ ನಡೆಯಲಿದೆ. ಬಸದಿಗೆ ಧನಸಹಾಯಮಾಡಬಹುದು BANK - CANARA BANK NAME - SHREE CHANDRANATHA DEVARA BASADI TRUST A / c NO - 0631101136681 IFSC - CNRB0000631 BRANCH - Mangalure gandhinagar, CANARA BANK ಮಾಹಿತಿಗಾಗಿ ಸಂಪರ್ಕಿಸಿ - 9448545982, 8197809007 ನಿರಂಜನ್ ಜೈನ್ ಕುದ್ಯಾಡಿ

ವಾರ್ಷಿಕೋತ್ಸವ ಕಾರ್ಯಕ್ರಮ

Article Image

ವಾರ್ಷಿಕೋತ್ಸವ ಕಾರ್ಯಕ್ರಮ

ಕಾರ್ಕಳ: ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ನಿರ್ಮಾಣಗೊಂಡ ಶ್ರೀ ಜೈನ ಮಠದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ ಕಾರ್ಯಕ್ರಮವು ನಾಳೆ(ಜ.26) ಜರುಗಲಿದೆ. ನರಸಿಂಹರಾಜಪುರ, ಶ್ರೀ ಸಿಂಹನಗದ್ದೆ ಬಸ್ತಿಮಠದ ಪ.ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ದಿವ್ಯ ಉಪಸ್ಥಿತಿ ವಹಿಸಲಿದ್ದಾರೆ.

ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ, ಅಷ್ಟಾವಧಾನ ಪೂಜೆ ಹಾಗೂ ಧಾರ್ಮಿಕ ಪ್ರವಚನ

Article Image

ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ, ಅಷ್ಟಾವಧಾನ ಪೂಜೆ ಹಾಗೂ ಧಾರ್ಮಿಕ ಪ್ರವಚನ

ವೇಣೂರು: ಬಜಿರೆ ಹಲ್ಲಂದೋಡಿ ಬಸದಿ ಭಗವಾನ್ 1008 ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ಪೂಜಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ “ಭಾರತಭೂಷಣ” ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಆಶೀರ್ವಚನಗಳೊಂದಿಗೆ 108 ಕಲಶ ಮಹಾಭಿಷೇಕ, ಕಲಿಕುಂಡ ಯಂತ್ರಾರಾಧನೆ, ಶ್ರೀ ಸರ್ವಾಹ್ಣಯಕ್ಷ ಅಷ್ಟಾವಧಾನ ಪೂಜೆ, ಮಹೋತ್ಸವ, ಮಹಾಪೂಜೆ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಲಕ್ಷ ಹೂವಿನ ಪೂಜೆ ಮುಂತಾದ ಧರ್ಮಕಾರ್ಯಗಳೊಂದಿಗೆ ನಾಳೆ(ಜ.26) ನೆರವೇರಲಿದೆ.

ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ ಅಷ್ಟಾವಧಾನ ಪೂಜೆ ಹಾಗೂ ಧಾರ್ಮಿಕ ಪ್ರವಚನ

Article Image

ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ ಅಷ್ಟಾವಧಾನ ಪೂಜೆ ಹಾಗೂ ಧಾರ್ಮಿಕ ಪ್ರವಚನ

ವೇಣೂರು: ಬಜಿರೆ ಹಲ್ಲಂದೋಡಿ ಬಸದಿ ಭಗವಾನ್ 1008 ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ಪೂಜಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ “ಭಾರತಭೂಷಣ” ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಆಶೀರ್ವಚನಗಳೊಂದಿಗೆ 108 ಕಲಶ ಮಹಾಭಿಷೇಕ, ಕಲಿಕುಂಡ ಯಂತ್ರಾರಾಧನೆ, ಶ್ರೀ ಸರ್ವಾಹ್ಣಯಕ್ಷ ಅಷ್ಟಾವಧಾನ ಪೂಜೆ, ಮಹೋತ್ಸವ, ಮಹಾಪೂಜೆ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಲಕ್ಷ ಹೂವಿನ ಪೂಜೆ ಮುಂತಾದ ಧರ್ಮಕಾರ್ಯಗಳೊಂದಿಗೆ ನಾಳೆ(ಜ.26) ನೆರವೇರಲಿದೆ.

ಪೂಜಾ ಕಾರ್ಯಕ್ರಮಗಳು

Article Image

ಪೂಜಾ ಕಾರ್ಯಕ್ರಮಗಳು

ಕಾರ್ಕಳ ತಾಲೂಕಿನ ಬಜಗೋಳಿ ಧರ್ಮಶಾಲೆ ತೀರ್ಥಕ್ಷೇತ್ರದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ, ಭಗವಾನ್ ಶ್ರೀ ಮುನಿಸುವ್ರತ ಸ್ವಾಮಿ ಮಂದಿರದ ವಾರ್ಷಿಕೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಹಾಗೂ ದಿವ್ಯ ನೇತೃತ್ವದಲ್ಲಿ ಭಗವಾನ್ ಶ್ರೀ ಮುನಿಸುವ್ರತ ಸ್ವಾಮಿಯ ವಿಶೇಷ ಉತ್ಸವ, ಅಭಿಷೇಕ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕವು ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ನಾಳೆ(ಜ.26) ಜರುಗಲಿದೆ.

ಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಗೆ ಪಾದಾಭಿಷೇಕ

Article Image

ಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಗೆ ಪಾದಾಭಿಷೇಕ

ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿರುವ ಭಗವಾನ್ ಬಾಹುಬಲಿಮೂರ್ತಿಗೆ ಫೆ. 2 ರಂದು ಭಾನುವಾರ ಬೆಳಿಗ್ಯೆ ಗಂಟೆ 8.30 ರಿಂದ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು. ಇದಕ್ಕೆ ಪೂರ್ವಭಾವಿಯಾಗಿ ಫೆ. ಒಂದರಂದು ಶನಿವಾರ ಬೆಳಿಗ್ಗೆ ಗಂಟೆ 9 ರಿಂದ ರತ್ನಗಿರಿಯಲ್ಲಿ ತೋರಣಮುಹೂರ್ತ, ವಿಮಾನಶುದ್ಧಿ ಷೋಡಶ ಕಲಶಾಭಿಷೇಕ ಮತ್ತು ಸಂಜೆ ನಾಲ್ಕು ಗಂಟೆಯಿಂದ ನಾಂದಿಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ.

ಬಜಿರೆ: ಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ

Article Image

ಬಜಿರೆ: ಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ಉಜಿರೆ: ವೇಣೂರು ಬಳಿ ಇರುವ ಬಜಿರೆ ಗ್ರಾಮದ ಹಲ್ಲಂದೋಡಿ ಬಸದಿ ಭಗವಾನ್ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ಇದೇ 26 ರಂದು ಭಾನುವಾರ ವಾರ್ಷಿಕ ಪೂಜಾಮಹೋತ್ಸವ ನಡೆಯಲಿದೆ ಎಂದು ಬಸದಿಯ ಬಿ. ಶಶಿಕುಮಾರ್ ಇಂದ್ರ ತಿಳಿಸಿದ್ದಾರೆ. ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಏಳು ಗಂಟೆಯಿಂದ ವಿಮಾನಶುದ್ಧಿ, ಶಾಂತಿ ಹೋಮದ ಬಳಿಕ 108 ಕಲಶ ಅಭಿಶೇಕ ನಡೆಯಲಿದೆ. ಅಪರಾಹ್ನ ಎರಡು ಗಂಟೆಯಿಂದ ಕಲಿಕುಂಡಯಂತ್ರಾರಾಧನೆ, ಅಷ್ಟಾವಧಾನ ಪೂಜೆ ನಡೆಯಲಿದೆ. ಸಂಜೆ ಗಂಟೆ 5.30 ರಿಂದ ಪದ್ಮಾವತಿ ಅಮ್ಮನವರಿಗೆ ಲಕ್ಷಹೂವಿನ ಪೂಜೆ ನಡೆಯಲಿದೆ. ಬಳಿಕ ಮೂಡಬಿದ್ರೆಯ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿ ಮಂಗಲಪ್ರವಚನ ನೀಡುವರು.

ನಿತಿನ್ ಹೆಚ್.ಪಿ. ರವರಿಗೆ 'ಸಂಸ್ಕೃತಿ ಸಂರಕ್ಷಕ' ಗೌರವ

Article Image

ನಿತಿನ್ ಹೆಚ್.ಪಿ. ರವರಿಗೆ 'ಸಂಸ್ಕೃತಿ ಸಂರಕ್ಷಕ' ಗೌರವ

ಕೋಲ್ಕತಾ, ಡಿಸೆಂಬರ್ 30, 2024: ಐಟಿ ತಂತ್ರಜ್ಞ, ಜೈನ ಸಂಶೋಧಕ ಹಾಗೂ www.jainheritagecentres.com (ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ) ನ ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ನಿತಿನ್ ಹೆಚ್.ಪಿ. ರವರ "ಜೈನಧರ್ಮದ ಸಂರಕ್ಷಣೆ ಮತ್ತು ಸಂವರ್ಧನೆ"ಯ ಕಾರ್ಯವನ್ನು ಗುರುತಿಸಿ, ಶ್ರೀ ಭಾರತವಾರ್ಷೀಯ ದಿಗಂಬರ ಜೈನ ತೀರ್ಥಸಂರಕ್ಷಿಣಿ ಮಹಾಸಭಾದ ಪಶ್ಚಿಮ ಬಂಗಾಳ ವಿಭಾಗವು "ಸಂಸ್ಕೃತಿ ಸಂರಕ್ಷಕ" ಎಂಬ ಬಿರುದನ್ನು ನೀಡಿ ಗೌರವಿಸಿದೆ. ಕೋಲ್ಕತ್ತಾದ ಬಡಾ ಬಜಾರ್ ನ ಜೈನಭವನದಲ್ಲಿ 30 ಡಿಸೆಂಬರ್ 2024ರಂದು ನಡೆದ ವಿಶೇಷ ಸಮಾರಂಭದಲ್ಲಿ ಇವರನ್ನು ಸತ್ಕರಿಸಿ ಸನ್ಮಾನಿಸಲಾಯಿತು. ನಿತಿನ್ ರವರು ಕರ್ನಾಟಕ ವಲ್ಲದೇ ಭಾರತದ ಇತರ ರಾಜ್ಯಗಳ ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ ರಾಜ್ಯದ ಜೈನ ಪರಂಪರೆ ಕೇಂದ್ರಗಳಿಗೆ ಕ್ಷೇತ್ರಕಾರ್ಯವನ್ನು ಕೈಗೊಂಡು ಪಶ್ಚಿಮ ಬಂಗಾಳದಲ್ಲಿ ಜೈನಧರ್ಮದ ಕುರಿತು ಕಳೆದ ಎರಡು ವರ್ಷಗಳಿಂದ ವಿಶೇಷ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ದಿಗಂಬರ ಜೈನ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ರಾಜ್ ಕುಮಾರ್ ಸೇಠಿ, ಮಹಾಸಭಾದ ಪಶ್ಚಿಮ ಬಂಗಾಳ ವಿಭಾಗದ ಪದಾಧಿಕಾರಿಗಳು ಹಾಗೂ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಂದಾದ್ರಿ ವಾರ್ಷಿಕ ಜಾತ್ರ ಮಹೋತ್ಸವ

Article Image

ಕುಂದಾದ್ರಿ ವಾರ್ಷಿಕ ಜಾತ್ರ ಮಹೋತ್ಸವ

ತೀರ್ಥಹಳ್ಳಿ :- ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಶಾಖಾ ಕ್ಷೇತ್ರ ಶ್ರೀ ಕುಂದ ಕುಂದರ ತಪೋಭೂಮಿ ಶ್ರೀ ಕ್ಷೇತ್ರ ಕುಂದಾದ್ರಿ ವಾರ್ಷಿಕ ಜಾತ್ರ ಮಹೋತ್ಸವ ಶ್ರೀ ಕ್ಷೇತ್ರ ಹೊಂಬುಜ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ 14-1-2025 ನೇ ಮಂಗಳವಾರ ಅತ್ಯಂತ ವೈಭವದಿಂದ ಜರುಗಿತು. ಈ ಸಂದರ್ಭದಲ್ಲಿ ಮಕ್ಕಿಮನೆ ಕಲಾವೃಂದ ಬಳಗದ ಸಂಯೋಜನೆಯಲ್ಲಿ ಜಿನ ಭಜನೆ ಕಾರ್ಯಕ್ರಮ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

"ಮಾನವೀಯ ಮೌಲ್ಯಗಳು ಪಸರಿಸಬೇಕು : ಅನಿತಾ ಸುರೇಂದ್ರ ಕುಮಾರ್"

Article Image

"ಮಾನವೀಯ ಮೌಲ್ಯಗಳು ಪಸರಿಸಬೇಕು : ಅನಿತಾ ಸುರೇಂದ್ರ ಕುಮಾರ್"

ಬೆಂಗಳೂರು: ಮಾನವನಲ್ಲಿರುವ ಮಾನವೀಯ ಮೌಲ್ಯಗಳು ನಿಂತ ನೀರಾಗದೆ ಸದಾ ಹರಿಯುವ ನೀರಿನಂತೆ ಪಸರಿಸಬೇಕು ಇದರಿಂದ ಜನ ಮಾನವೀಯ ಮೌಲ್ಯಗಳು ರೂಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಭಾರತೀಯ ಜೈನ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಬೆಂಗಳೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ತಿಳಿಸಿದರು. ಅವರು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂದಿರದಲ್ಲಿ ನಡೆದ ಬೆಂಗಳೂರು ವಿಭಾಗೀಯ ಹೊಂಗಸಂದ್ರದ ಶ್ರೀ ಶಾಂತಿನಾಥ ಜೈನ್ ಮಿಲನ್ , ವಿಲ್ಸನ್ ಗಾರ್ಡನ್ ರತ್ನತ್ರೆಯ ಜೈನ್ ಮಿಲನ್ ಹಾಗೂ ಬನಶಂಕರಿ ಜೈನ್ ಮಿಲನ್ ಗಳ ಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು. ಧಾರ್ಮಿಕವಾಗಿ ನಾವು ಹಿಂದೆ ಬಿದ್ದಿಲ್ಲ, ಇಂದು ಕರ್ಮ ಸಿದ್ದಾಂತದಿಂದ ಎಲ್ಲರೂ ಸೇರಿದ್ದೇವೆ ನಮ್ಮಲ್ಲಿರುವ ಸಿದ್ಧಾಂತ ತತ್ವ ನೀತಿಗಳು ಮಾನವೀಯ ಮೌಲ್ಯಗಳು ಇತರರಿಗೆ ತಿಳಿಯಬೇಕಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಂಚಕಲ್ಯಾಣಗಳಲ್ಲಿ ಜಿನ ಭಜನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ತಿರಸ್ಕರಕೊಂಡಿದ್ದ ಜಿನಭಜನೆಗೆ ಇಂದು ಹೆಚ್ಚಿನ ಬೇಡಿಕೆ ಬಂದಿದೆ , ಉತ್ತಮ ಗುಣಗಳನ್ನು ಪಸರಿಸಿದಾಗ ಸಮಾಜದಲ್ಲಿ ಉತ್ತಮ ಕರ್ಮಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ನಾವು ಮಾಡುವ ಕೆಲಸ ಶಾಶ್ವತವಾಗಿರಬೇಕು, ಸಮಾಜದ ಋಣ ತೀರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷರು ಹಾಗೂ ಕರ್ನಾಟಕ ಜೈನ ಅಸೋಸಿಯೇಷನ್ ಸಹಕಾರ್ಯದರ್ಶಿಗಳಾದ ಡಾ. ನೀರಜಾ ನಾಗೇಂದ್ರ ಕುಮಾರ್ ಮಾತನಾಡಿ, ಮನಸ್ಸನ್ನು ನಿಗ್ರಹಿಸಲು ಧ್ಯಾನ ,ಯೋಗ ಅಗತ್ಯ. ಜೈನ ತತ್ವ ,ವಿದ್ಯೆಗಳು, ಕನ್ನಡದಲ್ಲಿ ಅನುವಾದವಾಗಿವೆ. ಧರ್ಮ ಬದುಕುವ ರೀತಿ ,ಇದರಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದರು. ಅರ್ದ್ಯ ಧ್ಯಾನ , ರೋದ್ರ ಧ್ಯಾನ, ಧರ್ಮ ಧ್ಯಾನ, ಶುಕ್ಲ ಧ್ಯಾನ, ಇವು ಸೌಖ್ಯ ವಾಗಿದ್ದರೆ ಜೀವನದ ಪ್ರಸಂಗಗಳು ದುಃಖಕ್ಕೆ ದೂಡುತ್ತವೆ ,ಇಷ್ಟ -ಅನಿಷ್ಟಗಳನ್ನು ಮೀರಿ ಸಲ್ಲಬೇಕು ಎಂದರು. ಮಾನಸಿಕವಾಗಿ ಯಾವುದನ್ನು ಚಿಂತಿಸಬಾರದು ಎಂದವರು, ಹೆಚ್ಚು ಯೋಚನೆ ಮಾಡಬಾರದು. ಅನುಮಾನಾಸ್ಪದವಾಗಿ ಚಿಂತಿಸಬಾರದು ಎಂದರು, ಯಾವುದೇ ಕಾರ್ಯದಲ್ಲಿ ಚಿಂತನೆಗಳ ಅಗತ್ಯವಿಲ್ಲ, ನಿಧಾನವು ಇರಬಾರದು, ಮನಸ್ಸಿನಲ್ಲಿ ಯಾವುದೇ ಆಸೆ ಆಕಾಂಕ್ಷೆಗಳಿರಬಾರದು ಎಂದರು. ನಾವು ಹೆಚ್ಚು ಪ್ರೀತಿ ಮಾಡುವವರೇ ನಮಗೆ ಕಷ್ಟ ನೀಡುತ್ತಾರೆ, ಅತಿ ಪ್ರೀತಿಸಲ್ಲದು ಎಂದರು. ಕ್ರೂರ -ಕ್ರೌರ್ಯ ಭಾವನೆ ಹಿಂಸಾತ್ಮಕವಾದದ್ದು ಇದನ್ನು ನೋಡಿ ಕೆಲ ಜನ ಸಂತೋಷ ಪಡುತ್ತಾರೆ ,ನಾಲಿಗೆ ರುಚಿಗೆ ಪ್ರಾಣಿಗೆ ಹಿಂಸೆ ನೀಡಿ ಸಂತಸ ಅನುಭವಿಸುವವರು ಇದ್ದಾರೆ ಎಂದರು. ಕಳ್ಳತನದಿಂದ ಆನಂದ ಪಡುವವರಿದ್ದಾರೆ ಎಲ್ಲವೂ ಇದ್ದರೂ ಕಳ್ಳತನವನ್ನು ಹವ್ಯಾಸ ಮಾಡಿಕೊಂಡಿರುವವರು ಇದ್ದಾರೆ ,ಕೆಲ ಜನ ವಸ್ತುಗಳನ್ನು ಸಂಗ್ರಹಿಸಿ ಇಡುತ್ತಾರೆ ಬೇಡ ಎಂದರು ಖರೀದಿಸಿ ಸಂಗ್ರಹಿಸುತ್ತಾರೆ ಇದನ್ನು ಅನುಭವಿಸಲು ಸಮಯವಿರುವುದಿಲ್ಲ ಇದರಿಂದ ದುಶ್ಚಟಗಳಿಗೆ ಬಲಿಯಾಗಲಿದ್ದಾರೆ ಎಂದರು. ಎಲ್ಲಾ ಕಷ್ಟ ಮತ್ತು ನಷ್ಟಗಳ ನಿವಾರಣೆಗೆ ಧರ್ಮಧ್ಯಾನ ಅಗತ್ಯ ಎಂದರು. ಕೆಲ ಜನ ಆಟ, ಪಾಠ, ವಿನೋದ, ನೋಟ ಗಳಲ್ಲಿ ಕಾಲ ಕಳೆಯುತ್ತಾರೆ ,ವ್ಯಸನಗಳ ಮೂಲಕ ಕಾಲ ಕಳೆಯುತ್ತಾರೆ, ಕೆಲವರು ಕಲಹ ನಿದ್ರೆಗಳಿಂದ ಸಂತಸ ಪಡುತ್ತಾರೆ ಎಂದು ಅವರು, ಈ ವಿಚಾರಗಳಿಗೆ ಧರ್ಮದಲ್ಲಿ ಪರಿಹಾರವಿದೆ ಎಂದರು. ಧರ್ಮ ಧ್ಯಾನದಿಂದ ಶಾಂತಿ ದೊರೆಯಲಿದ್ದು ಯಾವುದೇ ವಿಚಾರವನ್ನು ಅರ್ಥ ಮಾಡಿಕೊಂಡು ನಡೆದಾಗ ಸ್ವಾಧ್ಯಾಯದಿಂದ ಸಾಧ್ಯವಾಗಲಿದೆ ಇದರಿಂದ ನಮಗೆ ಉಚ್ಚಗತಿಗಳು ಪ್ರಾಪ್ತಿಯಾಗಲಿವೆ ತೀರ್ಥಂಕರರ ದಿವ್ಯ ಧ್ಯಾನದಿಂದ ಎಲ್ಲವೂ ಲಿಪಿ ಬದ್ಧವಾಗಿ ದೊರೆಯಲಿದೆ ಎಂದರು. ಕುಟುಂಬವೇ ಮೋಹದ ಜಾಲದಲ್ಲಿ ಬಿದ್ದರೆ ಇಂತಹ ಅನಾಹುತಗಳ ಬಗ್ಗೆ ಚಿಂತನೆ ಅಗತ್ಯ ರಾಗ ದ್ವೇಷ ತರವಲ್ಲ ಎಂದರು. ಕಾಲ ಸಿದ್ದಾಂತ ಕರ್ಮ ಪ್ರಕೃತಿಗಳ ಬಗ್ಗೆ ತಿಳಿದಾಗ ನಿಜವಾದ ಜ್ಞಾನಿಯಾಗಲು ಸಾಧ್ಯ. ಶುಕ್ಲಜ್ಞಾನ ಮನಸ್ಸು ನಿರ್ಮಲವಾದಾಗ ಸಾಧ್ಯ ಇದರಿಂದ ಯಾವುದೇ ಕಷ್ಟಗಳು ಬರುವುದಿಲ್ಲ ಯೋಗಕ್ಕೆ ಇವೆಲ್ಲ ಸಹಕಾರಿಯಾಗಲಿವೆ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಮದನ ಪಂಡಿತ್ ಮಾನವ ಮುನಿಗಳಿಗೆ ಆಹಾರ ಸ್ವಾಧ್ಯಾಯ ಮಾಡುವುದರಿಂದ ಸೌಮ್ಯ, ಶಾಂತಿ ,ಭಕ್ತಿ ಹೆಚ್ಚಾಗಲಿದೆ ಧ್ಯಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗಲಿದೆ ಎಂದರು. ಭಾರತೀಯ ಜೈನ್ ಮಿಲನ್ ವಲಯ - 8 ರ ಕಾರ್ಯದರ್ಶಿ ವಿಲಾಸ್ ಪಾಸಣ್ಣನವರ್ ಮಾತನಾಡಿ ಇಂತಹ ವೇದಿಕೆಗಳನ್ನು ಸಂಘಗಳು ಬಳಸಿಕೊಂಡು ಸಂಘಟಿತರಾಗಬಹುದು ಯಾವುದೇ ವ್ಯಕ್ತಿ ಗಟ್ಟಿಯಾಗಿ ನಿಂತಾಗ ಜೀವನ ಸಾಧ್ಯವಾಗಲಿದೆ, ಸಿರಿವಂತರಾದ ಜೈನ ಧರ್ಮೀಯರು, ಜನಸಂಖ್ಯೆಯಲ್ಲಿ ಕ್ಷೀಣಿಸುತ್ತಿದ್ದು ಕನಿಷ್ಠ ಕುಟುಂಬಕ್ಕೆ ಮೂರು ಮಕ್ಕಳನ್ನು ಪಡೆದು ಜೈನ ಧರ್ಮ ಉಳಿಸಿ, ಬೆಳೆಸಿ, ಸಂಘಟಿತರಾಗಬೇಕೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಭರತೇಶ್ ಜಗ ಶೆಟ್ಟಿ ಮಾತನಾಡಿ ನಮ್ಮ ಜನಸಂಖ್ಯೆ ಕುಂಠಿತವಾಗುತ್ತಿದ್ದು ,ಮುಂದಿನ ಪೀಳಿಗೆಗೆ ಬಗ್ಗೆ ಚಿಂತಿಸಬೇಕಿದೆ. ಧರ್ಮ, ಜನಸಂಖ್ಯೆಯ ಬೆಳವಣಿಗೆ ಪ್ರತಿ ಕುಟುಂಬ ಮೂರು ಮಕ್ಕಳ ಅಗತ್ಯವಿದೆ ಎಂದರು. ಪ್ರತಿ ಮಿಲನ್ ಗಳು ಸರಿಯಾದ ಮೀಟಿಂಗ್ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಪ್ರತಿ ತಿಂಗಳು ವರದಿ ನೀಡುವಂತೆ ತಿಳಿಸಿದರು. ಪ್ರತಿ ಜೈನ್ ಮಿಲನ್ ಗೆ 25 ಜನರನ್ನು ನೇಮಿಸಿ ಹೆಚ್ಚು ಹೆಚ್ಚು ಮಿಲನ್ ಗಳನ್ನು ಪ್ರಾರಂಭಿಸುವಂತೆ ತಿಳಿಸಿದರು. ಮಿಲನ್ ನಿಂದ ಒಂದು ವರ್ಷ ಕಾರ್ಯಕ್ರಮಗಳ ಯೋಜನೆಯನ್ನ ಸಿದ್ಧಪಡಿಸಿಕೊಳ್ಳುವಂತೆ ಕರೆ ನೀಡಿದ ಅವರು ,ಯಾವುದಕ್ಕೂ ಸಮಯಪ್ರಜ್ಞೆ ಅಗತ್ಯ ಎಂದರು. ಸಭೆಯ ಪ್ರಾರಂಭದಲ್ಲಿ ಧ್ಯೇಯಗೀತೆ ಆಡಬೇಕು ಎಂದು ಸಲಹೆ ನೀಡಿದರು. ಸಾಮೂಹಿಕ ದೀಪ ಪ್ರಜ್ವಲನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಜಯ್ ರವಿರಾಜ್ ಹಿಂದಿನ ಸಾಲಿನ ವರದಿ ಮಂಡಿಸಿದರು. ರಾಣಿ ಪ್ರಫುಲ್ಲ ರತ್ನತ್ರೆಯ ಜೈನ್ ಮಿಲನ ವರದಿ ಮಂಡಿಸಿದರು. ಅನಂತ ಕುಮಾರಿ ಮಕರ ಸಂಕ್ರಮಣದ ಬಗ್ಗೆ ತಿಳಿಸಿದರು. ಶ್ವೇತ ನವೀನ ರತ್ನತ್ರೆಯ ಜೈನ್ ಮಿಲನ ಬಗ್ಗೆ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಮೂರು ಜೈನ್ ಮಿಲನ್ ಸದಸ್ಯರುಗಳು ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವಗಳನ್ನು ಆಚರಿಸಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕಲಾವಿದ ಚಿತ್ತಾ. ಎಂ. ಜಿನೇಂದ್ರ, ಕೋಮಲ ಬ್ರಹ್ಮದೇವಯ್ಯ, ಡಾ.ನಾಗೇಂದ್ರ ಕುಮಾರ್, ಪ್ರೀತಮ್ ಹರ್ಷ, ಡಾ. ನವೀನ್ ಕುಮಾರ್ ಜೈನ್ ಇನ್ನಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ಆಯ್ಕೆಯಾದ ಗಣ್ಯರನ್ನು ಸನ್ಮಾನಿಸಲಾಯಿತು. ಅವನಿ ಜೈನ್ ಪ್ರಾರ್ಥಿಸಿದರು. ಸುಧ ಸುರೇಶ್ ಸ್ವಾಗತಿಸಿದರು. ಸುಖಾನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೇಮಾ ಸುಖಾನಂದ ಕಾರ್ಯಕ್ರಮ ನಿರೂಪಿಸಿದರು. ವಾಣಿ ಭರತ್ ವಂದಿಸಿದರು. ವರದಿ - ಜೆ ರಂಗನಾಥ, ತುಮಕೂರು

10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Article Image

10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

ವೇಣೂರು: ಇಲ್ಲಿನ ಶ್ರೀ ಬಾಹುಬಲಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಜೈನ ಭಾಂಧವರಿಗಾಗಿ 10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು “ಶ್ರೀ ಬಾಹುಬಲಿ ಟ್ರೋಫಿ 2025” ಬಾಹುಬಲಿ ಬೆಟ್ಟದ ಬಳಿ ಇರುವ “ಇಂದ್ರ ಗ್ರೌಂಡ್”ನಲ್ಲಿ ಜ. 04ರಂದು ನಡೆಯಿತು. ಮೂಡುಬಿದಿರೆ ಶ್ರೀ ಜೈನ ಮಠದ ಭಾರತಭೂಷಣ ಪ. ಪೂ. ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯವಹಿಸಿ, ಕ್ರೀಡೆಯ ಬಗ್ಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿ ಆಶೀರ್ವಚನವನ್ನಿತ್ತರು. ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಜೈನ್ ನೆರವೇರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ, ದ.ಕ, ಜೈನ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾದ ವಿನಯ್ ಹೆಗ್ಡೆ ನಾರಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾದ ವೇಣೂರಿನ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರಾದ ಜಿನರಾಜ್ ಜೈನ್, ಜೈನ್ ಮಿಲನ್ ಅಧ್ಯಕ್ಷರಾದ ಸುಕುಮಾರ್ ಜೈನ್, ಬಾಹುಬಲಿ ಯುವಜನ ಸಂಘದ ಅಧ್ಯಕ್ಷರಾದ ಪ್ರಭಾಚಂದ್ರ ಜೈನ್, ಶಮಂತ್ ಕುಮಾರ್ ಜೈನ್ ಕಳೆಂಜಿರೋಡಿ ಪಡಂಗಡಿ, ಸತ್ಯಪ್ರಸಾದ್ ವಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ| ಕೆ. ರವೀಂದ್ರನಾಥ್ ಪ್ರಸಾದ್, ಡಾ. ಜಯಕೀರ್ತಿಜೈನ್, ಸತೀಶ್ ಕೊಂಬ, ಜಿನರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು. ನಿಧಿ, ಸುಶ್ಮಿತಾ, ಋತ್ವಿರವರು ಪ್ರಾರ್ಥಿಸಿದರು. ನಿಧಿರವರು ಸ್ವಾಗತಿಸಿ, ಮಹಾವೀರ ಜೈನ್ ಮೂಡುಕೋಡಿಗುತ್ತುರವರು ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ನಡೆದು. ಜ. 05ರಂದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿನಯ ಕುಮಾರ್ ಜೈನ್‌ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಶಾಂತ್ ಕರಿಮುಗೇರು, ಸಂಭಾಷಣೆ ಉದಯಕುಮಾರ್, ಜಿನರಾಜ್ ಜೈನ್, ಸುದತ್ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸನ್ಮತ್‌ರಾಜ್ ನಿರೂಪಿಸಿದರು. ವಿಜೇತರ ಪಟ್ಟಿ: ಪ್ರಥಮ ಬಹುಮಾನ: ಬಳಂಜ ಟೀಮ್ ದ್ವಿತೀಯ ಬಹುಮಾನ: ಜೈನ್ ಫ್ರೆಂಡ್ಸ್ ಮೂಡುಬಿದಿರೆ ತೃತೀಯ ಬಹುಮಾನ: ಶ್ರೀ ಬಾಹುಬಲಿ ವೇಣೂರು ಚತುರ್ಥ ಬಹುಮಾನ: ಅರ್ವ ಟೀಮ್

ಜನವರಿ 14 ಕ್ಕೆ ಅತಿಶಯ ಶ್ರೀ ಕ್ಷೇತ್ರ ಕುಂದಾದ್ರಿಯಲ್ಲಿ ವಾರ್ಷಿಕ ಜಾತ್ರ ಮಹೋತ್ಸವ

Article Image

ಜನವರಿ 14 ಕ್ಕೆ ಅತಿಶಯ ಶ್ರೀ ಕ್ಷೇತ್ರ ಕುಂದಾದ್ರಿಯಲ್ಲಿ ವಾರ್ಷಿಕ ಜಾತ್ರ ಮಹೋತ್ಸವ

ತೀರ್ಥಹಳ್ಳಿ : ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ಶಾಖಾ ಕ್ಷೇತ್ರ ಅಚಾರ್ಯ ಶ್ರೀ ಕುಂದ ಕುಂದಾಚಾರ್ಯ ತಪೋಭೂಮಿ ಶ್ರೀ ಕ್ಷೇತ್ರ ಕುಂದಾದ್ರಿಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ಜಾತ್ರ ಮಹೋತ್ಸವ 14-1-2025ನೇ ಮಂಗಳವಾರ ಪರಮಪೂಜ್ಯ ಜಗದ್ಗುರು ಸ್ವಸ್ತೀಶ್ರೀ ಡಾ‌. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಜರುಗಲಿದೆ. ಕಲಿಕುಂಡ ಯಂತ್ರಾರಾಧನೆ, ಬ್ರಹ್ಮ ಯಕ್ಷ ಆರಧಾನೆ, ವಿಶೇಷ ಅಭಿಷೇಕ ಪೂಜೆ ಸಹಿತ ಅನೇಕ ದಾರ್ಮಿಕ ವಿಧಿಗಳ ಜೊತೆಗೆ ಜಿನ ಭಜನೆ, ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ, ದೀಪೋತ್ಸವ ನಡೆಯಲಿದೆ. ಶ್ರೀ ಕ್ಷೇತ್ರ ಕುಂದಾದ್ರಿ ವಾರ್ಷಿಕ ಜಾತ್ರ ಮಹೋತ್ಸವ ಇದು ಕುಂದಾದ್ರಿ ಬೆಟ್ಟದ ಸುಂದರ ಮನಮೋಹಕ ದೃಶ್ಯ. ಈ ಬೆಟ್ಟವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿದೆ. ತೀರ್ಥಹಳ್ಳಿಯಿಂದ ಆಗೊಂಬೆ ಕಡೆಗೆ ಪಯಣಿಸಿದಾಗ ಗುಡ್ಡಕೇರಿ ಗ್ರಾಮಕ್ಕೆ ತಲುಪುತ್ತೇವೆ. ಅಲ್ಲಿಂದ 9ಕಿ. ಮೀ ಮುಂದುವರಿದರೆ ಕುಂದಾದ್ರಿ ಬೆಟ್ಟವನ್ನು ಸೇರುತ್ತೇವೆ. ಈ ಬೆಟ್ಟವು 1343ಮೀ ಎತ್ತರವಿದ್ದು, ಬೆಟ್ಟವನ್ನು ತಲುಪಲು ಡಾಂಬರು ರಸ್ತೆಯಿದೆ. ಕಾಲುನಡಿಗೆಯಲ್ಲಿ ಬೆಟ್ಟದೆಡೆ ಬರುವವರಿಗೆ ಬಹು ಹತ್ತಿರದ ಕಾಲುದಾರಿಯೂ ಇದೆ. ಬೆಟ್ಟದ ಮೇಲೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿ ಇದ್ದು, ಹತ್ತಿರದಲ್ಲಿ ಬೆಟ್ಟದ ಕಲ್ಲಿನಲ್ಲಿಯೇ ಕೊರೆದ ವರ್ಷ ಪೂರ್ತಿ ನೀರು ತುಂಬಿರುವ ಕೆರೆಯೂ ಇದೆ. ಇವುಗಳನ್ನು ನೋಡಲೆಂದೇ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ಇದು ಚಾರಣ ಪ್ರಿಯ ಸ್ಥಳವೂ ಹೌದು. ಬೆಟ್ಟದ ಮೇಲಿಂದ್ದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಬಹು ಹಬ್ಬವಾಗುತ್ತದೆ. ಮನಸ್ಸಿಗೆ ಮುದವಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದಕ್ಕೆ ವಿಸ್ಮಯವೋ ವಿಸ್ಮಯ. ಜೈನ ಮುನಿ ಶ್ರೇಷ್ಠರಾದ ಕುಂದಕುಂದಾಚಾರ್ಯರ ತಪೋ ಭೂಮಿಯಾಗಿದ್ದರಿಂದ ಈ ಬೆಟ್ಟಕ್ಕೆ ಕುಂದಾದ್ರಿ ಬೆಟ್ಟ ಎಂಬ ಹೆಸರು ಬಂದಿದೆ ಎನ್ನಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಶ್ರೀಸಾನ್ನಿಧ್ಯ’ ಕ್ಯೂಕಾಂಪ್ಲೆಕ್ಸ್‌ ಉದ್ಘಾಟನೆ

Article Image

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಶ್ರೀಸಾನ್ನಿಧ್ಯ’ ಕ್ಯೂಕಾಂಪ್ಲೆಕ್ಸ್‌ ಉದ್ಘಾಟನೆ

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ಸುಸಜ್ಜಿತ ಸೌಕರ್ಯಗಳೊಂದಿಗೆ ಆರಾಮದಾಯಕ ಸರತಿ ಸಾಲಿನ ವ್ಯವಸ್ಥೆಗಳನ್ನೊಳಗೊಂಡ ನೂತನ ಸಂಕೀರ್ಣ ‘ಶ್ರೀಸಾನ್ನಿಧ್ಯ’ ಮತ್ತು 2024-25ರ ಜ್ಞಾನದೀಪ ಕಾರ್ಯಕ್ರಮದ ಶುಭಾರಂಭ ನೆರವೇರಿಸಿ ಅವರು ಮಂಗಳವಾರ ಇಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಮಾತನಾಡಿದರು. ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿಯಾದರೆ, ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ. ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ್ಯ ಇದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದು ಅವರು ಹೇಳಿದರು. ದೇಸ ಸೇವೆಗೆ ಮುಂದೆ ಬನ್ನಿ: ನಾವು ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು. ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು. ಮೆಸಪಟೋಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ಆದರೆ ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಬಾಹ್ಯ ಶಕ್ತಿಗಳು ನಮ್ಮನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಸಾರ್ವಜನಿಕ ಸೊತ್ತುಗಳನ್ನು ನಾಶಮಾಡುವಂತಹ ವೈಪರೀತ್ಯಗಳು ಸಂಭವಿಸುತ್ತಿವೆ. ಇವುಗಳಿಗೆ ಪೂರ್ಣ ತಿಲಾಂಜಲಿ ನೀಡಬೇಕು. 2047ರ ವೇಳೆಗೆ ಪರಿಪೂರ್ಣ ಸಶಕ್ತ ಭಾರತದ ಗುರಿಯನ್ನು ತಲುಪಬೇಕಾಗಿದೆ. ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ. ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ ಎಂದರು. ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ ? ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ ? ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ ಇತ್ಯಾದಿ ಬಗ್ಗೆ ಯೋಚಿಸಬೇಕು. ಅತ್ಯುನ್ನತ ನಾಗರಿಕತೆ ನಮ್ಮದು. ಯಾವುದಕ್ಕೂ ದ್ವೇಷ ಉತ್ತರವಲ್ಲ. ದೇಶದಲ್ಲಿ ಸಮಗ್ರತೆ, ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ. ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಸಾಮಾಜಿಕ ಸದ್ಭಾವ ಬರಬೇಕಾದರೆ ಭಾರತಮಾತೆ ಒಂದೇ ಎಂದು ಭಾವಿಸಿದಾಗ ಈ ಭಾವನೆ ಬರುತ್ತದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ. ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಅವರು ಆಶಿಸಿದರು. ಭಾರತೀಯ ಕಾರ್ಪೊರೇಟ್‌ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸಲು ಸಿಎಸ್‌ಆರ್‌ ನಿಧಿಯನ್ನು ಕಾಣಿಕೆಯಾಗಿ ನೀಡುತ್ತಿವೆ. ಈ ಭೂಮಿಯನ್ನು ಪರಿಸರಸ್ನೇಹಿಯಾಗಿ ಕಾಣುವುದರ ಜೊತೆಗೆ ಎಳವೆಯಲ್ಲೇ ಮಕ್ಕಳು ಧಾರ್ಮಿಕತೆಗೆ ತೆರೆದುಕೊಳ್ಳುವಂತೆ ಮಾಡಬೇಕು. ದೇಶಕ್ಕಾಗಿ ಕೆಲಸ ಮಾಡುವ ಮಾನಸಿಕತೆಯನ್ನು ಎಲ್ಲರಲ್ಲೂ ಬೆಳೆಸಬೇಕು ಎಂದು ಅವರು ಆಶಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ,.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮಗಳ ಅಧ್ಯಕ್ಷೆ ಡಾ.ಹೇಮಾವತಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್‌, ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್‌ ವೇದಿಕೆಯಲ್ಲಿದ್ದರು. ಉಪನ್ಯಾಸಕ ಡಾ.ಶ್ರೀಧರ ಭಟ್‌ ನಿರೂಪಿಸಿದರು.

ಸುಲ್ಕೇರಿ: ಶ್ರೀ ನೇಮಿನಾಥಸ್ವಾಮಿ ಸಭಾಭವನ ಉದ್ಘಾಟನೆ

Article Image

ಸುಲ್ಕೇರಿ: ಶ್ರೀ ನೇಮಿನಾಥಸ್ವಾಮಿ ಸಭಾಭವನ ಉದ್ಘಾಟನೆ

ಉಜಿರೆ: ಯುವಜನತೆ ಸಮಾಜದ ಅಮೂಲ್ಯ ಮಾನವಸಂಪನ್ಮೂಲವಾಗಿದ್ದು, ವಿದ್ಯಾವಂತರು ವಿಚಾರವಂತರಾಗುವುದರೊಂದಿಗೆ ಪರಿಶುದ್ಧ ಆಚಾರವಂತರು ಆಗಬೇಕು ಎಂದು ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಶನಿವಾರ ಸುಲ್ಕೇರಿಯಲ್ಲಿ ಭಗವಾನ್ ಶ್ರೀ ನೇಮನಾಥಸ್ವಾಮಿ ಬಸದಿ ವಠಾರದಲ್ಲಿ ನಿರ್ಮಿಸಲಾದ ಶ್ರೀ ನೇಮಿನಾಥಸ್ವಾಮಿ ಸಭಾಭವನವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಯಾವುದೇ ಸತ್ಕಾರ್ಯ ನಡೆಯಬೇಕಾದರೆ ಯೋಗ ಮತ್ತು ಸಂದರ್ಭ ಒದಗಿ ಬರಬೇಕು ಕಟ್ಟಡ ನಿರ್ಮಾಣದಲ್ಲಿ ವಾಸ್ತುವಿನ ಪ್ರಭಾವ ಇರುತ್ತದೆ. ಧರ್ಮಸ್ಥಳದ ವತಿಯಿಂದ ಕಾರ್ಕಳದಲ್ಲಿರುವ ಜೈನಮಠವನ್ನು ನವೀಕರಣಗೊಳಿಸಿ ಸಮಾಜಕ್ಕೆ ಅರ್ಪಿಸಿದ ಬಳಿಕ ಕಾರ್ಕಳ ಸೀಮೆಯ ಅನೇಕ ಪ್ರಾಚೀನ ಬಸದಿಗಳು ಜೀರ್ಣೋದ್ಧಾರಗೊಂಡು ಪಂಚಕಲ್ಯಾಣ ಸಹಿತ ಪ್ರತಿಷ್ಠಾ ಮಹೋತ್ಸವಗಳು ನಡೆಯುತ್ತಿರುವುದು ಶುಭದಾಯಕವಾಗಿದೆ. ದಾನ - ಧರ್ಮಾದಿ ಸತ್ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಸ್ತುತ್ಯಾರ್ಹವಾಗಿದೆ ಎಂದರು. ಆಶೀರ್ವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಧರ್ಮದ ಮರ್ಮವನ್ನರಿತು ಆಚರಣೆ ಮಾಡಿದಾಗ ಪಾಪಕರ್ಮಗಳ ಕ್ಷಯವಾಗಿ ಅಕ್ಷಯ ಸುಖವನ್ನೀಯುವ ಮೋಕ್ಷಪ್ರಾಪ್ತಿ ಸಾಧ್ಯವಾಗುತ್ತದೆ. ನಿತ್ಯವೂ ಮಂದಿರಗಳಿಗೆ ಹೋಗಿ ದೇವರದರ್ಶನ, ಜಪ, ತಪ, ಧ್ಯಾನ ಮಾಡಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ವಿಧಾನಪರಿಷತ್ತಿನ ಮಾಜಿಸದಸ್ಯ ಕೆ. ಹರೀಶ್‌ಕುಮಾರ್ ಮಾತನಾಡಿ ಅಲ್ಪಸಂಖ್ಯಾತರಾದರೂ ಜೈನರ ಶಿಸ್ತು, ಶ್ರದ್ಧೆ, ಭಕ್ತಿ, ಅಹಿಂಸೆ ಹಾಗೂ ಸಮಾಜ ಸೇವಾಕಳಕಳಿಯನ್ನು ಶ್ಲಾಘಿಸಿದರು. ಸರ್ಕಾರದಿಂದ ಈಗಾಗಲೇ ಸಭಾಭವನಕ್ಕೆ 50 ಲಕ್ಷ ರೂ. ಮಂಜೂರಾಗಿದ್ದು ಸದ್ಯದಲ್ಲೇ ಇನ್ನೂ 30 ಲಕ್ಷ ರೂ. ಅನುದಾನ ದೊರಕಲಿದೆ ಎಂದರು. ಕೆ. ಹರೀಶ್‌ಕುಮಾರ್ ಅವರನ್ನು ಗೌರವಿಸಲಾಯಿತು. ಶಾಸಕ ಹರೀಶ್ ಪೂಂಜ, ತುಮಕೂರಿನ ಉದ್ಯಮಿ ಜಿ. ಎಸ್. ರಾಜೇಂದ್ರ ಕುಮಾರ್ ಮತ್ತು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಶುಭಾಶಂಸನೆ ಮಾಡಿದರು. ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ ಮಾತನಾಡಿ, ಪಂಚಕಲ್ಯಾಣ ಮತ್ತು ಬಸದಿ ಜೀರ್ಣೋದ್ಧಾರ ಕಾರ್ಯದಲ್ಲಿ ಯುವಜನತೆಯ ಸಕ್ರಿಯ ಸಹಕಾರಕ್ಕೆ ಅಭಿನಂದಿಸಿದರು. ಬಸದಿಯ ಆಡಳಿತ ಮೊಕ್ತೇಸರ ಎನ್. ರವಿರಾಜ್ ಹೆಗ್ಡೆ ನಾವರಗುತ್ತು ಉಪಸ್ಥಿತರಿದ್ದರು. ಪ್ರಾಂಜಲಿ, ಪಿಲ್ಯ ಪ್ರಾರ್ಥನೆ ಹಾಡಿದರು ವಕೀಲರಾದ ಅಜಿತ್, ನಾವರಗುತ್ತು ಸ್ವಾಗತಿಸಿದರು. ಉಜಿರೆಯ ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನ ಉಪನ್ಯಾಸಕ ಪ್ರೊ. ನವೀನ್‌ಕುಮಾರ್ ಜೈನ್ ಧನ್ಯವಾದವಿತ್ತರು. ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಬಸದಿಯಲ್ಲಿ ಋಷಿಮಂಡಲ ಆರಾಧನೆ, ಕೂಷ್ಮಾಂಡಿನಿ ಆರಾಧನೆ, ಪದ್ಮಾವತಿದೇವಿಗೆ ಕುಂಕುಮಾರ್ಚನೆ, ಕ್ಷೇತ್ರಪಾಲ ಮತ್ತು ನಾಗದೇವರಿಗೆ ನವಕಲಶ ಅಭಿಷೇಕ ನಡೆಯಿತು.

ಧಾರ್ಮಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಅವರಿಗೆ ಸನ್ಮಾನ

Article Image

ಧಾರ್ಮಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಅವರಿಗೆ ಸನ್ಮಾನ

ಮೈಸೂರಿನ ಗೊಮ್ಮಟಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಅಮೃತ ಮಹೋತ್ಸವ ಕಾರ‍್ಯಕ್ರಮದಲ್ಲಿ ಧಾರ್ಮಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಅವರನ್ನು ಹೊಂಬುಜ ಹಾಗೂ ಕನಕಗಿರಿ ಜೈನ ಮಠದ ಸ್ವಾಮೀಜಿಗಳು ಅಮೃತ ಮಹೋತ್ಸವದ ಪದಾಧಿಕಾರಿಗಳ ಜೊತೆ ಸನ್ಮಾನಿಸಿದರು.

ಭ. ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ 2024ರ ಲೆಕ್ಕ ಪತ್ರ ಮಂಡಣೆ

Article Image

ಭ. ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ 2024ರ ಲೆಕ್ಕ ಪತ್ರ ಮಂಡಣೆ

ವೇಣೂರು: ಭ| ಶ್ರೀ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ-2024ರ ಲೆಕ್ಕ ಪತ್ರ ಮಂಡಣೆಯು ನಾಳೆ(ಡಿ.15) ಅಪರಾಹ್ನ ಗಂಟೆ 4.30ಕ್ಕೆ ಸರಿಯಾಗಿ ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಜರುಗಲಿರುವುದು. ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಭಾರತಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ಮಹಾಮಸ್ತಕಾಭಿಷೇಕ ಮಹೋತ್ಸವ-2024ರ ಅಧ್ಯಕ್ಷರೂ ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಗೌರವ ಮಾರ್ಗದರ್ಶನ ನೀಡಲಿದ್ದಾರೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸರು, ಮಹಾಮಸ್ತಕಾಭಿಷೇಕ ಮಹೋತ್ಸವದ 2024ರ ಕಾರ್ಯಧ್ಯಕ್ಷರಾಗಿರುವ ಡಾ. ಪದ್ಮಪ್ರಸಾದ ಅಜಿಲರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಮಾಜಿ ಸಚಿವರು, ಮಹಾಮಸ್ತಕಾಭಿಷೇಕ ಮಹೋತ್ಸವದ 2024ರ ಉಪಾಧ್ಯಕ್ಷರು ಹಾಗೂ ಸರಕಾರಿ ಸಂಪರ್ಕ ಸಮಿತಿಯ ಸಂಚಾಲಕರಾಗಿರುವ ಕೆ. ಅಭಯಚಂದ್ರ ಜೈನ್‌ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವೇಣೂರಿನ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿಗಳು, ಮಹಾಮಸ್ತಕಾಭಿಷೇಕ ಮಹೋತ್ಸವ-2024ರ ಪ್ರಧಾನ ಕಾರ್ಯದರ್ಶಿಗಳಾಗಿರುವ ವಿ. ಪ್ರವೀಣ್ ಕುಮಾರ್ ಇಂದ್ರರವರು ತಿಳಿಸಿರುತ್ತಾರೆ.

ಎಕ್ಸಲೆಂಟ್ ಸಿ.ಬಿ.ಎಸ್.ಇ, ಮೂಡುಬಿದಿರೆ ಶಾಲಾ ವಾರ್ಷಿಕೋತ್ಸವ

Article Image

ಎಕ್ಸಲೆಂಟ್ ಸಿ.ಬಿ.ಎಸ್.ಇ, ಮೂಡುಬಿದಿರೆ ಶಾಲಾ ವಾರ್ಷಿಕೋತ್ಸವ

ವಿದ್ಯಾರ್ಥಿಗಳಾದವರು ತಮ್ಮ ವ್ಯಕ್ತಿತ್ವ, ಮಾನಸಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ನಮ್ಮ ದೇಶ, ನಮ್ಮ ಸಮಾಜ, ನಮ್ಮ ಕುಟುಂಬ ಎಂಬ ಭಾವನೆಯನ್ನು ಹೊಂದಿರಬೇಕು ಅಲ್ಲದೇ ನೈತಿಕ ಮೌಲ್ಯವನ್ನು ಬೆಳೆಸುವುದರೊಂದಿಗೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗುವುದೇ ನಿಜವಾದ ಮಾನವೀಯತೆ. ವಿದ್ಯೆಯೆಂಬುದು ಮನುಷ್ಯನ ಪ್ರಶಸ್ತಿ ಪಾತ್ರದಲ್ಲಿ ಇರುವುದಲ್ಲ ಬದಲಾಗಿ ಅವನ ವ್ಯಕ್ತಿತ್ವದಲ್ಲಿರುತ್ತದೆ ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ Dr. ಎಂ ಬಿ ಪುರಾಣಿಕ್ ರವರು ಎಕ್ಸಲೆಂಟ್ ಸಿಬಿಎಸ್ಈ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪುಸ್ತಕದ ವಿದ್ಯೆಯನ್ನು ಮಸ್ತಕಕ್ಕೆ ತೆಗೆದುಕೊಳ್ಳಬೇಕು ವಿದ್ಯಾರ್ಥಿಯಾದವನು ಜೀವನದ ನಾಲ್ಕು ಕಂಬಗಳಾದ ಹೆತ್ತವರು, ಸಮಾಜ, ಗುರು ಹಿರಿಯರು ಹಾಗೂ ಸ್ನೇಹಿತರನ್ನು ಹೊಂದಿರಬೇಕು, ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ವಿರೂಪಾಕ್ಷಪ್ಪರವರು ತಿಳಿಸಿದರು. ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟಿನಿಂದಲೇ ಪ್ರತಿಭೆ ಬಂದಿರುತ್ತದೆ. ಅದು ಹೊರ ಹೊಮ್ಮಬೇಕಾದರೆ ವ್ಯಕ್ತಿಗೆ ಸೂಕ್ತ ವೇದಿಕೆ ಬೇಕು, ಸೂಕ್ತ ವಾತಾವರಣ ಹಾಗೂ ಪ್ರೋತ್ಸಾಹ ಬೇಕು. ಶಿಕ್ಷಣವು ಕೇವಲ ಪುಸ್ತಕದ ಬದನೆಕಾಯಿ ಆಗದೇ ಅದು ನೈಜ ರೀತಿಯಲ್ಲಿ ಇರಬೇಕು ಎಂದು ಮುಖ್ಯ ಅತಿಥಿಗಳಾದ ಮಾಜಿ ಎಪಿಎಂಸಿ ಅಧ್ಯಕ್ಷರಾದ ಕೃಷ್ಣರಾಜ ಹೆಗ್ಡೆಯವರು ಹೇಳಿದರು. ವಿದ್ಯಾರ್ಥಿಗಳಾದವರು ಓದು-ಬರಹದ ಜೊತೆಗೆ ಜೀವನದ ಪ್ರತಿ ಕ್ಷಣವನ್ನು ಆನಂದಿಸಬೇಕು. ಒಳ್ಳೆಯ ವಿಚಾರಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಕು. ಹೆತ್ತವರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿಯಾಗಬೇಕು ಎಂಬುವುದನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ರವರು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ರವರು ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಮೂಲಕ ಶುಭ ಹಾರೈಸಿದರು. ಪ್ರಾಂಶುಪಾಲರಾದ ಸುರೇಷರವರು ಶಾಲಾ ಶೈಕ್ಷಣಿಕ ವರದಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮಾಜಿ ಉಪಾಧ್ಯಕ್ಷೆಯಾದ ಸುಜಾತ, ಆಡಳಿತ ನಿರ್ದೇಶಕರಾದ ಬಿ. ಪಿ ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕರಾದ ಬಿ. ಪುಷ್ಪರಾಜ್, ಸಂಸ್ಥೆಯ ಹಳೆ ವಿದ್ಯಾರ್ಥಿಯಾದ ನಿಶಾಂತ್ ಪಿ ಹೆಗ್ಡೆ, ಶಾಲಾ ವಿದ್ಯಾರ್ಥಿ ನಾಯಕ ಪೃಥ್ವಿರಾಜ್ ಹಾಗೂ ನಾಯಕಿ ಸಾತ್ವಿಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿಯಾದ ಸ್ವಾತಿ ನಿರೂಪಿಸಿ, ಶೈಕ್ಷಣಿಕ ಸಂಯೋಜಕರಾದ ಶ್ರಿಪ್ರಸಾದ್ ರವರು ಸ್ವಾಗತಿಸಿ, ಸಾತ್ವಿಕ ರವರು ವಂದಿಸಿದರು.

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Article Image

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದಲ್ಲಿ ಈಗ ಕಾರ್ತಿಕ ಮಾಸದ ಲಕ್ಷದೀಪೋತ್ಸವದ ಸಂಭ್ರಮ, ಸಡಗರ. ದೇವಸ್ಥಾನ, ಬೀಡು, ವಸತಿಛತ್ರಗಳು, ಬಾಹುಬಲಿಬೆಟ್ಟ, ಪ್ರವೇಶದ್ವಾರ ಮೊದಲಾದ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ನಾಡಿನೆಲ್ಲೆಡೆಯಿಂದ ಪ್ರತಿದಿನ ಸಹಸ್ರಾರು ಭಕ್ತಾದಿಗಳು ಹಾಗೂ ಪ್ರವಾಸಿಗರು ಬರುತ್ತಿದ್ದು, ದೇವರ ದರ್ಶನದ ಬಳಿಕ ಮಂಜೂಷಾ ವಸ್ತುಸಂಗ್ರಹಾಲಯ, ಕಾರ್‌ಮ್ಯೂಸಿಯಂ, ಲಲಿತೋದ್ಯಾನ, ರತ್ನಗಿರಿ (ಬಾಹುಬಲಿಬೆಟ್ಟ) ವೀಕ್ಷಿಸಿ ಸುಂದರ ಪ್ರಾಕೃತಿಕ ಪರಿಸರದ ಸೊಗಡನ್ನು ಸವಿಯುವುದರೊಂದಿಗೆ ತಮ್ಮ ಜ್ಞಾನಕ್ಷಿತಿಜವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರನ್ನು ಸೆಳೆಯುವ ವಸ್ತುಪ್ರದರ್ಶನ: ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ವಸ್ತುಪ್ರದರ್ಶನದಲ್ಲಿ ಮುನ್ನೂರಕ್ಕೂ ಮಿಕ್ಕಿ ಮಳಿಗೆಗಳಿದ್ದು, ಪ್ರೇಕ್ಷಕರ ಕಣ್ಮನ ಸೆಳೆಯುತ್ತಿವೆ. ಪುಸ್ತಕಮಳಿಗೆಗಳು, ಕೃಷಿ, ವಿಜ್ಞಾನ, ಕಲೆ, ಸಂಸ್ಕೃತಿ ಹಾಗೂ ಗ್ರಾಮೀಣ ಕರಕುಶಲ ಕಲೆಗಳಿಗೆ ಸಂಬAಧಪಟ್ಟ ಮಳಿಗೆಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಳಿಗೆ, ಪುಸ್ತಕದ ಮಳಿಗೆಗಳು, ಮಡಿಕೆ ತಯಾರಿ, ಹಾಳೆತಟ್ಟೆಗಳ ಮಳಿಗೆ, ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಮಳಿಗೆ, ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ಮಳಿಗೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ. ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಜೀವವಿಮೆ, ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ, ಮಾರ್ಗದರ್ಶನ ನೀಡುತ್ತಿವೆ. ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಹಲವಾರು ಮಂದಿ ಭಕ್ತರು ಪಾದಯಾತ್ರೆಯಲ್ಲಿ, ಸೈಕಲ್ ಮೂಲಕ ಧರ್ಮಸ್ಥಳಕ್ಕೆ ಬರುತ್ತಿದ್ದಾರೆ. ಭಕ್ತರು ತಾವು ಬೆಳೆದ ತರಕಾರಿ, ಹಣ್ಣುಹಂಪಲು, ಅಕ್ಕಿ, ದವಸಧಾನ್ಯಗಳನ್ನು ಕೂಡಾ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಎಲ್ಲೆಲ್ಲೂ ಸೊಬಗಿದೆ, ಸೊಗಸಿದೆ. ಶಿಸ್ತು, ಸ್ವಚ್ಛತೆ, ದಕ್ಷತೆ ಹಾಗೂ ದೇವಳ ಸಿಬ್ಬಂದಿ ಮತ್ತು ಸ್ವಯಂ ಸೇವಕರ ನಗುಮೊಗದ ಸೇವೆ ಭಕ್ತರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ 6.30 ರಿಂದ ರಾತ್ರಿ 10.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದು ಶುಕ್ರವಾರ ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 92ನೆ ಅಧೀವೇಶನವನ್ನು ಗೃಹಸಚಿವ ಡಾ. ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಡಾ. ಜಿ.ಬಿ. ಹರೀಶ್, ಡಾ. ಜೋಸೇಫ್, ಎನ್. ಎಂ. ಮತ್ತು ಬಿಜಾಪುರದ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಧಾರ್ಮಿಕ ಉಪನ್ಯಾಸ ನೀಡುವರು.

First Previous

Showing 11 of 21 pages

Next Last