ಬೆಂಗಳೂರು : ಜಿನಸಮ್ಮಿಲನ ಸೀಸನ್ -09 ಚಿತ್ರಕಲೆ ಸ್ಪರ್ಧೆ
Published Date: 05-Mar-2025 Link-Copied
ಬೆಂಗಳೂರಿನ ಸುಹಾಸ್ತಿ ಜೈನ್ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09 ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ನಿಯಮಗಳು : * ಚಿತ್ರಕಲೆಯು 4 ವಿಭಾಗಗಳಲ್ಲಿ ಇರುತ್ತದೆ (ಚಿಣ್ಣರ, ಬಾಲ್ಯ, ಕಿಶೋರ & ಯುವ) ಚಿಣ್ಣರ 1 ರಿಂದ 4 ನೇ ತರಗತಿ, ಬಾಲ್ಯ 5 ರಿಂದ 7 ನೇ ತರಗತಿ, ಕಿಶೋರ 8 ರಿಂದ 10 ನೇ ತರಗತಿ & ಯುವ PUC ನಂತರ. * ಸ್ಪರ್ಧಿಗಳು ತಮ್ಮ ಹೆಸರನ್ನು ಗೂಗಲ್ ಅಂಕ್ ಮೂಲಕ ನೋಂದಾಯಿಸಬೇಕಾಗಿ ವಿನಂತಿ. * ಚಿತ್ರ ಕಲೆಯು ಜೈನ ಧರ್ಮದ ಬಗ್ಗೆ ಇರಬೇಕು ಹಾಗೂ ಚಿತ್ರ ಬಿಡಿಸಲು ಕಾಲಾವಕಾಶ 1 ಗಂಟೆ. * ಚಿತ್ರಕಲೆಯು ಕ್ರೆಯಾನ್ಸ್, ಸ್ಟೇಟ್ಟೆನ್ & ವಾಟರ್ ಕಲರ್ ಯಾವುದಾದರೂ ಮಾಡಬಹುದು. * A3 ಡ್ರಾಯಿಂಗ್ ಶೀಟ್ ನಲ್ಲಿ ಚಿತ್ರವನ್ನು ಬಿಡಿಸಬೇಕು ಮತ್ತು ಶೀಟನ್ನು ಸ್ಥಳದಲ್ಲಿಯೇ ಒದಗಿಸಲಾಗುತ್ತದೆ. * ಚಿಣ್ಣರ ವಿಭಾಗಕ್ಕೆ ಚಿತ್ರವನ್ನು ಕೊಡಲಾಗುತ್ತದೆ, ಕಲಲಿಂಗ್ ಮಾಡಬೇಕು. * ತೀರ್ಪುಗಾರರ ಆಯ್ಕೆಯ ಅನುಸಾರ ಫಲಿತಾಂಶವನ್ನು ಘೋಷಿಸಲಾಗುತ್ತದೆ. * ಸ್ಪರ್ಧಾಳುಗಳು ನೋಂದಾಯಿಸಲು ಕೊನೆಯ ದಿನಾಂಕ: 30-03-2025. ಸ್ಥಳ : ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜಿನಗರ, ಬೆಂಗಳೂರು, ಸಂಯೋಜಕರು: ಸಂದೇಶ್ ಜೈನ್, ತೇಜಪ್ಪ ಜೈನ್, ಅಭಿಷೇಕ್ ಜೈನ್, ರಚನಾ ಜಿನೇಂದ್ರ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8105077689 9483596608