‘ಭುವನವಾಹಿನಿ’ಗೆ ರಜತ ವರ್ಷದ ಸಂಭ್ರಮ
1999ರಲ್ಲಿ ‘ಭುವನವಾಹಿನಿ’ ಶಿರೋನಾಮೆಯನ್ನು ಕೇಂದ್ರ ಸರಕಾರದ ಸಚಿವಾಲಯದಿಂದ ಪಡೆದು,
2000ನೇ ಇಸವಿಯ ಫೆಬ್ರವರಿಯಲ್ಲಿ ನಡೆದ ವೇಣೂರು ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಜನವರಿಯಿಂದಲೇ ‘ಜಿನಮಿತ್ರ’ ಹಾಗೂ ‘ಜನಮಿತ್ರ’ ಸಂಚಿಕೆಗಳನ್ನು ಡಾ| ವಿಜಯ ಕುಮಾರ್ ಕತ್ತೋಡಿ ಅವರ ಸಂಪಾದಕತ್ವದಲ್ಲಿ ಬಿಡುಗಡೆಗೊಂಡವು.
ಸ್ವಾಮಿ ವಿವೇಕಾನಂದರ ಮಾತಿನಂತೆ “ಒಂದು ಕೆಲಸವನ್ನು ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರೆಯುತ್ತದೆ” ಎಂಬಂತೆ ಕರ್ತವ್ಯದಲ್ಲಿನ ಶ್ರದ್ಧೆಯ ಜೊತೆಗೆ ಓದುಗರ ಸಹಕಾರದೊಂದಿಗೆ ಭುವನವಾಹಿನಿ ಪತ್ರಿಕೆಯು ಇದೀಗ 14 ಕನ್ನಡ ಜೈನ ಮಾಧ್ಯಮಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ. ಜಿನಮಿತ್ರ-ಜನಮಿತ್ರ ಸಂಚಿಕೆಗಳು ಪಾಕ್ಷಿಕವಾಗಿ ಕರ್ನಾಟಕ, ಮಹಾರಾಷ್ಟ್ರ, ಕೇರಳ (ವೈನಾಡ್) ರಾಜ್ಯಗಳಲ್ಲಿ ಪ್ರಸರಣೆಗೊಳ್ಳುತ್ತಿದ್ದು, ಇದೀಗ ರಜತ ವರ್ಷಕ್ಕೆ ಕಾಲಿಡುತ್ತಿದೆ. ಈ ಸುಸಂದರ್ಭದಲ್ಲಿ ಓದುಗರಿಗೆ ವಿಷಯಗಳು ತ್ವರಿತವಾಗಿ ತಲುಪುವ ಉದ್ದೇಶದಿಂದ ‘ಭುವನವಾಹಿನಿ’ ವೆಬ್‌ಸೈಟ್‌ನ್ನು ಬಿಡುಗಡೆಗೊಳಿಸಲಾಗಿದೆ.