ವೇಣೂರು: ಮಹಿಳಾ ದಿನಾಚರಣೆ ಆಚರಣೆ
Published Date: 08-Mar-2025 Link-Copied
ಬೆಳ್ತಂಗಡಿ ತಾಲೂಕು, ವೇಣೂರಿನ ಬ್ರಾಹ್ಮೀ ಜೈನ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ರಂದು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಣೆಯನ್ನು ಹಿರಿಯರು ಆದ ವೇಣೂರಿನ ಸುನಂದಾದೇವಿ ಬಿ. ಪಿ. ಇಂದ್ರರವರು ನೆರವೇರಿಸಿದರು. ಮುಖ್ಯ ಭಾಷಣಕಾರರಾಗಿ ಬೆಳ್ತಂಗಡಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಉಷಾ ನಾಯಕ್‌ರವರು ಆಗಮಿಸಿ, ಮಹಿಳೆಯರು ತನ್ನ ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿ ನಿರ್ವಹಿಸುವ ವಿವಿಧ ಪಾತ್ರಗಳ ಬಗ್ಗೆ ವಿವರಿಸಿದರು. ಮಹಿಳೆ ಎಂದೂ ಕುಗ್ಗಬಾರದು ಸವಾಲುಗಳನ್ನು ತಾಳ್ಮೆಯಿಂದ ಎದುರಿಸಬೇಕು ಎಂದು ಹೇಳಿದರು. ಬ್ರಾಹ್ಮೀ ಜೈನ ಮಹಿಳಾ ಸಂಘದ ಕೋಶಾಧಿಕಾರಿಯಾದ ವಾಣಿಶ್ರೀ ವೃಷಭರಾಜ್‌ರವರು ಮಹಿಳೆಯರ ಉದಾಹರಣೆ ಮೂಲಕ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ನಂತರ ಬ್ರಾಹ್ಮೀ ಜೈನ ಮಹಿಳಾ ಸಂಘದ ಹಿರಿಯ ಸದಸ್ಯರಾದ ಸುನಂದಾ ಭರತ್‌ರಾಜ್ ಮತ್ತು ಶಶಿಪ್ರಭಾ ಸುರೇಶ್ ಆರಿಗರವರನ್ನು ಮಹಿಳಾ ದಿನಾಚರಣೆ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಾಹ್ಮೀ ಜೈನ ಮಹಿಳಾ ಸಂಘದ ಅದ್ಯಕ್ಷರು ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿರ್ದೇಶಕಿಯಾಗಿರುವ ಸರೋಜಾ ಗುಣಪಾಲ್ ಜೈನ್‌ರವರು ಮಹಿಳಾ ದಿನಾಚರಣೆ ಸಂಕ್ಷಿಪ್ತ ಮಾಹಿತಿ ನೀಡಿದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮೀ ಜೈನ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್. ಹೆಗ್ಡೆರವರು ವಹಿಸಿದ್ದರು. ದೀಪಶ್ರೀ ಕತ್ತೋಡಿ ಮತ್ತು ಪ್ರಿಯಾಲತಾ ಮೂಡುಕೋಡಿರವರು ಪ್ರಾರ್ಥಿಸಿ, ಕಾರ್ಯದರ್ಶಿ ಆಶಾಲತಾ ಜೈನ್ ಸ್ವಾಗತಿಸಿದರು. ಮಮತಾ ಪ್ರಸಾದ್ ಜೈನ್‌ರವರು ವಂದಿಸಿದರು. ಕಾರ್ಯಕ್ರಮವನ್ನು ಸಂಧ್ಯಾ ಸುಕುಮಾರ್ ಜೈನ್‌ರವರು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.