ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ
ಚತ್ತೀಸ್‌ಗಢದ, ಚಂದ್ರಗಿರಿತೀರ್ಥ ಡೊಂಗರಗಢದಲ್ಲಿ ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ಪ್ರಾಥಃಸ್ಮರಣೀಯ ದಿಗಂಬರ ಜೈನ ಸರೋವರದ ರಾಜಹಂಸ, ಈ ಶತಮಾನದ ಶ್ರೇಷ್ಠ ತಪಸ್ವಿ ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರು ಇಂದು(ಫೆ.18) ಬೆಳಗಿನಜಾವ 2.30ಕ್ಕೆ ಸಮಾಧಿಮರಣ ಹೊಂದಿದರು.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿದೇವಿ ಹಾಗೂ ಮಲ್ಲಪ್ಪಾಜಿಯವರ ಸುಪುತ್ರರಾಗಿ ಜನಿಸಿ ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಜೈನ ಮುನಿಯಾದರು. ಕಾಲಕ್ರಮೇಣ ಇವರ ತಂದೆ-ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಕೂಡ ಜೈನ ದೀಕ್ಷೆಪಡೆದು ಜಿನನ ಮಾರ್ಗವನ್ನು ಹಿಡಿದು ನಡೆದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು ಆಚಾರ್ಯರ ‘ಮೂಕ ಮಾಟಿ’ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟಿತವಾಗಿದ್ದು ಅದರೊಟ್ಟಿಗೆ ‘ತೋತಾ ಕ್ಯೂ ರೋತಾ’ ಹಾಗೂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.