Article Image

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

Article Image

ಹಿರಿಯ ವಕೀಲ ಬಿಜೆಪಿ ನೇತಾರ ಎಂ.ಕೆ. ವಿಜಯಕುಮಾರ್

ಕಾರ್ಕಳ, ಅ. 3: ಹಿರಿಯ ವಕೀಲ, ಬಿಜೆಪಿ ಹಿರಿಯ ನಾಯಕರಾದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ. ಕೆ. ವಿಜಯಕುಮಾರ್ (82) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. 1968ರಲ್ಲಿ ವಕೀಲ ವೃತ್ತಿಗೆ ಪ್ರವೇಶಿಸಿದ ಅವರು, ಬಡವರು, ಕೃಷಿ ಕಾರ್ಮಿಕರು ಮತ್ತು ಅಸಹಾಯಕ ಮಹಿಳೆಯರ ಪರ ಉಚಿತವಾಗಿ ವಾದ ಮಂಡಿಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದರು. ವಿಜ್ಞಾನ ಮತ್ತು ಕಾನೂನಿನಲ್ಲಿ ಪದವಿ ಪಡೆದ ಅವರು ಕಾನೂನು ಕ್ಷೇತ್ರದೊಂದಿಗೆ ಸಮಾಜಸೇವೆ, ಧಾರ್ಮಿಕ ಹಾಗೂ ಪರಿಸರಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸಮಾಜಮುಖಿ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದ ಅವರು, ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಕಾರ್ಕಳ ಬಿಜೆಪಿಯಲ್ಲಿ ಹಿರಿಯರಾಗಿ ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ನಿಧನ: ವೀಣಾ ಅಭಿನಂದನ್‌ ವನಕುದುರೆ

Article Image

ನಿಧನ: ವೀಣಾ ಅಭಿನಂದನ್‌ ವನಕುದುರೆ

ಹುಬ್ಬಳ್ಳಿ: ಪ್ರಿಯದರ್ಶಿನಿ ಕಾಲೋನಿ ನಿವಾಸಿ ವೀಣಾ ಅಭಿನಂದನ್‌ ವನಕುದುರೆ (53ವ) ಇವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಇವರು ಪತಿ ಅಭಿನಂದನ್‌ ವನಕುದುರೆ ಮತ್ತು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.

ಮೂಡುಬಿದಿರೆ: ಚೌಟರ ಅರಮನೆಯ ಉಷಾ ಜಯವೀರ್ ನಿಧನ

Article Image

ಮೂಡುಬಿದಿರೆ: ಚೌಟರ ಅರಮನೆಯ ಉಷಾ ಜಯವೀರ್ ನಿಧನ

ಮೂಡುಬಿದಿರೆ: ಇಲ್ಲಿನ ಚೌಟರ ಅರಮನೆಯ ದಿ. ಜಯವೀರ್ ಅವರ ಪತ್ನಿ ಮುಳಿಬೆಟ್ಟು ಮನೆತನದ ಉಷಾ ಜಯವೀರ್ (78ವ) ಅವರು ಸೆ.17ರಂದು ಸಾವಿರ ಕಂಬದ ಬಸದಿ ಬಳಿಯ ತಮ್ಮ ಮನೆಯಲ್ಲಿ ನಿಧನರಾದರು. ಇವರು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಕತ್ತೋಡಿಯ ಹಿರಿಯರಾದ ಕೆ. ಜಗತ್ಪಾಲ ಮುದ್ಯರು ಇನ್ನಿಲ್ಲ

Article Image

ಕತ್ತೋಡಿಯ ಹಿರಿಯರಾದ ಕೆ. ಜಗತ್ಪಾಲ ಮುದ್ಯರು ಇನ್ನಿಲ್ಲ

ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಕತ್ತೋಡಿ ಮನೆಯ ಹಿರಿಯ ಸದಸ್ಯರು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ, ಪ್ರಗತಿಪರ ಕೃಷಿಕರು ಆಗಿದ್ದ ಕೆ. ಜಗತ್ಪಾಲ ಮುದ್ಯ (95ವ) ಇವರು ಇಂದು ಮಧ್ಯಾಹ್ನ ನಿಧನ ಹೊಂದಿದರು. ಇವರು ಪತ್ನಿ ಕಮಲಾಜಿ, ಪುತ್ರ ಶ್ರೇಯಾಂಸ, ಪುತ್ರಿಯರಾದ ಶೈಲಶ್ರೀ, ಸೌರಭ ಹಾಗೂ ಸಹೋದರರು ಸಹೋದರಿಯರನ್ನು ಮತ್ತು ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ರಾಜರತ್ನ ಕೆ. ನಿಧನ

Article Image

ರಾಜರತ್ನ ಕೆ. ನಿಧನ

ಧಾರ್ಮಿಕ ಮುಖಂಡ, ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮ ಕೊಡಂಗೆ ಮನೆ, ಹಿರಿಯ ಮುತ್ಸದಿ ಶ್ರೀ ರಾಜರತ್ನ ಕೆ (74), ಇವರು 2025ನೇ ಜುಲೈ 24 ರಂದು ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ರಾಜೇಂದ್ರ ಜೈನ್ ಮತ್ತು ಸೊಸೆ, ಪುತ್ರಿ ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಹಾಗೂ ಅಳಿಯ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮಾನ್ಯರು ಬಂಟ್ವಾಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಮ್ಯಾನೇಜರ್ ಆಗಿ ಸುಮಾರು 25 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ್ದರು. ಸಮಾಜದ ಎಲ್ಲ ವರ್ಗದ ಜನರ ಧಾರ್ಮಿಕ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಪ್ರೀತಿಪಾತ್ರರಾಗಿ ಜನಾನುರಾಗಿಯಾಗಿದ್ದರು. ಬಾಳ್ತಿಲ ಗ್ರಾಮದ ಆದರ್ಶ ಪ್ರಗತಿಪರ ಕೃಷಿಕರಾಗಿ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿಯೂ ಹಲವಾರು ಜನಪರ ಕಾಳಜಿಯಿಂದ ಸೇವೆ ಸಲ್ಲಿಸಿದ ಅವರು ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ಟ್ರಸ್ಟಿಯಾಗಿದ್ದರು. ಜೈನ್ ಮಿಲನ್, ಪಂಚಕಲ್ಯಾಣದಂತಹ ಕಾರ್ಯಕ್ರಮಗಳಲ್ಲಿ ಪ್ರೇರಕರಾಗಿ ಕಾರ್ಯನಿರ್ವಹಿಸಿದ್ದರು.

ವೇಣೂರಿನ ಮಹಾವೀರ ನಗರದ ಪ್ರಸಾದ್‌ ಕ್ಲಿನಿಕ್‌ ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ರವರು ನಿಧನ

Article Image

ವೇಣೂರಿನ ಮಹಾವೀರ ನಗರದ ಪ್ರಸಾದ್‌ ಕ್ಲಿನಿಕ್‌ ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ರವರು ನಿಧನ

ಬೆಳ್ತಂಗಡಿ ತಾಲೂಕಿನ ಪೆರಿಂಜೆ, ಬಡಕೋಡಿಗುತ್ತು ನಿವಾಸಿ, ವೇಣೂರಿನ ಮಹಾವೀರ ನಗರದ "ಪ್ರಸಾದ್‌ ಕ್ಲಿನಿಕ್‌" ನ ಖ್ಯಾತ ವೈದ್ಯರಾದ ಡಾ. ಕೆ. ಆರ್.‌ ಪ್ರಸಾದ್‌ (75ವ) ಇವರು ಜು.04ರಂದು ನಿಧನ ಹೊಂದಿದರು. ಇವರು ಪತ್ನಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು- ವರ್ಗವನ್ನು ಅಗಲಿದ್ದಾರೆ. ಇವರು ಕೃಷಿಕರಾಗಿದ್ದು, ವೇಣೂರಿನಲ್ಲಿ ಹಲವು ದಶಕಗಳಿಂದ ವೈದ್ಯಕೀಯ ಸೇವೆ ನೀಡಿ, ಜನಪ್ರಿಯ ವೈದ್ಯರಾಗಿ ಜನರ ಪ್ರೀತಿ - ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಲ್ಲದೇ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು

ತುಮಕೂರು ಟಿ.ಎನ್. ಅಜಿತ್ ಜೈನ್ ರವರು ನಿಧನ

Article Image

ತುಮಕೂರು ಟಿ.ಎನ್. ಅಜಿತ್ ಜೈನ್ ರವರು ನಿಧನ

ತುಮಕೂರು ನಗರ ಅಗ್ರಹಾರದಲ್ಲಿ ವಾಸವಾಗಿದ್ದ ತುಮಕೂರಿನ ಹೆಸರಾಂತ ಸನ್ಮತಿ ಪೇಂಟ್ಸ್ ಮಾಲೀಕರಾದ, ಹಿರಿಯ ವಾಣಿಜ್ಯೋದ್ಯಮಿ ಟಿ.ಎನ್. ಅಜಿತ್ ಜೈನ್ ರವರು ಇಂದು (ಜೂ.13) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. ಇವರು ಪತ್ನಿ ಶಾಂತಲಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪರಮಪೂಜ್ಯ ಯುಗಳ ಮನಿ ಮಹಾರಾಜರ ಸಂಘಪತಿಗಳಾಗಿದ್ದ ಇವರು ಧಾರ್ಮಿಕ, ಸಾಮಾಜಿಕ ವ್ಯವಹಾರಿಕ, ಇಂಜಿನಿಯರಿಂಗ್, ಶೈಕ್ಷಣಿಕ ಹಾಗೂ ಧರ್ಮ ಪ್ರಭಾವನೆಗೆ ಮಾಡಿದ ಶ್ರೇಷ್ಠ ಸೇವೆ ಹಾಗೂ ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ನರಸಿಂಹರಾಜಪುರ: ಕೇವಲ ಜ್ಞಾನಕಲ್ಯಾಣ ಮಹೋತ್ಸವ

Article Image

ನರಸಿಂಹರಾಜಪುರ: ಕೇವಲ ಜ್ಞಾನಕಲ್ಯಾಣ ಮಹೋತ್ಸವ

ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಭಗವಾನ್ ಶ್ರೀ ೧೦೦೮ ಚಂದ್ರಪ್ರಭ ಸ್ವಾಮಿ ಸ್ವಾಮಿಯವರ ಕೇವಲ ಜ್ಞಾನಕಲ್ಯಾಣ ಮಹೋತ್ಸವವು ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾ ಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ಇಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾರಗುತ್ತು ವಿಜಯರಾಜ್ ಅಧಿಕಾರಿ ನಿಧನ

Article Image

ಮಾರಗುತ್ತು ವಿಜಯರಾಜ್ ಅಧಿಕಾರಿ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು, ಶ್ರೀಕ್ಷೇತ್ರ ಮುದ್ದಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರು, ನಿವೃತ್ತ ಉಪನ್ಯಾಸಕರಾದ ಮಾರಗುತ್ತು ವಿಜಯರಾಜ್ ಅಧಿಕಾರಿಯವರು ಇಂದು (ಆ. 16ರಂದು) ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಸಹಿತ ಅಪಾರ ಬಂಧು ವಗ೯ವನ್ನು ಅಗಲಿದ್ದಾರೆ. ವೇಣೂರು ಶ್ರೀ ಜೈನ ದಿಗಂಬರ ತೀಥ೯ಕ್ಷೇತ್ರ ಸಮಿತಿಯ ಮಾಜಿ ಕಾಯ೯ದಶಿ೯ಗಳು, ವಿವೇಕಾನಂದ ಸೇವಾ ಟ್ರಸ್ಟ್ ನ ಸ್ಥಾಪಾಕಾಧ್ಯಕ್ಷರೂ ಆದ ಇವರು ಪ್ರಗತಿ ಪರ ಕೃಷಿಕರು, ಧಾರ್ಮಿಕ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ನಿಧನ

Article Image

ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಕರಿಮಣೇಲು ಮಾಗಣೆಗುತ್ತು ನಿವಾಸಿ, ಹಿರಿಯ ಪತ್ರಕರ್ತ ವಿನಯ ಕುಮಾರ್ ಸೇಮಿತ (71ವ) ಇವರು ಹೃದಯಾಘಾತದಿಂದ ಇಂದು(ಜೂ. 12) ಮುಂಜಾನೆ ನಿಧನ ಹೊಂದಿದರು. ಇವರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ. ಇವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ವೇಣೂರು ಮಹಾಮಸ್ತಕಾಭಿಷೇಕದ ಮಾಧ್ಯಮ ಸಮಿತಿಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದರು. ಕಳೆದ 2000 ಇಸವಿಯ ವೇಣೂರು ಮಹಾಮಸ್ತಕಾಭಿಷೇಕದಲ್ಲಿ ಮಸ್ತಕಾಭಿಷೇಕದ ದೃಶ್ಯಗಳನ್ನು ವಿದ್ಯುನ್ಮಾನಗಳ ಮೂಲಕ ಪ್ರಚಾರ ಪಡಿಸುವ ವಿಧಾನವನ್ನು ಮೊತ್ತಮೊದಲಿಗೆ ಈ ಪರಿಸರದಲ್ಲಿ ಪ್ರಚಾರ ಪಡಿಸಿದ ಹೆಗ್ಗಳಿಕೆ ಇವರದು. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನಿಧನ: ಕಟ್ಟೆಮನೆ ಉದಯ್ ಕುಮಾರ್

Article Image

ನಿಧನ: ಕಟ್ಟೆಮನೆ ಉದಯ್ ಕುಮಾರ್

ಪುಂಜಾಲಕಟ್ಟೆ: ಇಲ್ಲಿಯ ಕಟ್ಟೆಮನೆ ಉದಯ್ ಕುಮಾರ್ (77ವ) ಇವರು ಮೇ 21 ರಂದು ರಾತ್ರಿ ನಿಧನ ಹೊಂದಿದರು. ಇವರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು- ವರ್ಗವನ್ನು ಅಗಲಿದ್ದಾರೆ

ನಿಧನ: ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ

Article Image

ನಿಧನ: ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ

ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ(72ವ) ಇವರು ಇಂದು (ಮೇ. 19) ಬೆಳಗ್ಗೆ ನಿಧನ ಹೊಂದಿದರು. ಇವರು ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ಬಸದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಓರ್ವ ಮಗ, ಸೊಸೆ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ವೇಣೂರು: ಸುರಭಿ ಮನೆ ಶ್ರೀಮತಿ ವಸಂತಿ ನಿಧನ

Article Image

ವೇಣೂರು: ಸುರಭಿ ಮನೆ ಶ್ರೀಮತಿ ವಸಂತಿ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು, ಬಜಿರೆ ಗ್ರಾಮದ ಸುರಭಿ ಮನೆ ನಿವಾಸಿ, ಬಿ. ರತ್ನವರ್ಮ ಇಂದ್ರರ ಧರ್ಮಪತ್ನಿ ಶ್ರೀಮತಿ ವಸಂತಿ (76ವ) ಇವರು ಇಂದು (ಎ.1) ನಿಧನ ಹೊಂದಿದರು. ಇವರು ಮಕ್ಕಳಾದ ಪ್ರಮೋದ್ ಕುಮಾರ್, ಶುಭ, ಮತ್ತು ಪೂರ್ಣಿಮಾ, ಸವಿತ, ಸುಧೀರ್ ಕುಮಾರ್ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಹಿರಿಯ ಸಾಹಿತಿ ನಾಗರಾಜ್ ಪೂವಣಿ ನಿಧನ

Article Image

ಹಿರಿಯ ಸಾಹಿತಿ ನಾಗರಾಜ್ ಪೂವಣಿ ನಿಧನ

ಹಿರಿಯ ಸಾಹಿತಿ, ಬರಹಗಾರರು, ನಾ ವುಜಿರೆ ಎಂದೇ ಪ್ರಸಿದ್ಧಿ ಹೊಂದಿದ್ದ ಎಸ್‌ಡಿಎಂ ಕಾಲೇಜಿನ ಹಿಂದಿ ವಿಭಾಗದ ನಿವೃತ್ತ ಪ್ರೋಫೆಸರ್, ನಾಗರಾಜ್ ಪೂವಣಿ (84 ವ). ಇವರು ಇಂದು (ಮಾ. 11) ನಿಧನ ಹೊಂದಿದರು. ಇವರು ಪತ್ನಿ ಸರಸ್ವತಿ ನಾ ವುಜಿರೆ ಮತ್ತು ಪುತ್ರ ಪಾಶ್ವನಾಥ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

Article Image

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

ಚತ್ತೀಸ್‌ಗಢದ, ಚಂದ್ರಗಿರಿತೀರ್ಥ ಡೊಂಗರಗಢದಲ್ಲಿ ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ಪ್ರಾಥಃಸ್ಮರಣೀಯ ದಿಗಂಬರ ಜೈನ ಸರೋವರದ ರಾಜಹಂಸ, ಈ ಶತಮಾನದ ಶ್ರೇಷ್ಠ ತಪಸ್ವಿ ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರು ಇಂದು(ಫೆ.18) ಬೆಳಗಿನಜಾವ 2.30ಕ್ಕೆ ಸಮಾಧಿಮರಣ ಹೊಂದಿದರು. ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿದೇವಿ ಹಾಗೂ ಮಲ್ಲಪ್ಪಾಜಿಯವರ ಸುಪುತ್ರರಾಗಿ ಜನಿಸಿ ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಜೈನ ಮುನಿಯಾದರು. ಕಾಲಕ್ರಮೇಣ ಇವರ ತಂದೆ-ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಕೂಡ ಜೈನ ದೀಕ್ಷೆಪಡೆದು ಜಿನನ ಮಾರ್ಗವನ್ನು ಹಿಡಿದು ನಡೆದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು ಆಚಾರ್ಯರ ‘ಮೂಕ ಮಾಟಿ’ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟಿತವಾಗಿದ್ದು ಅದರೊಟ್ಟಿಗೆ ‘ತೋತಾ ಕ್ಯೂ ರೋತಾ’ ಹಾಗೂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

Article Image

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಬಾವಂತಬೆಟ್ಟು ನಿವಾಸಿ, ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ ನಿರಂಜನ್ ಜೈನ್ ಬಾವಂತಬೆಟ್ಟು (75 ವ.)ರವರು ಇಂದು (ಫೆ. 12) ನಿಧನರಾಗಿದ್ದಾರೆ. ಇವರು 1973ರಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸುಮಾರು 38 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಅರುಣ, ಮಕ್ಕಳಾದ ಪವಿತ್ರ, ಚೈತ್ರ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ

ಪದ್ಮಾವತಿ ಅಮ್ಮ

Article Image

ಪದ್ಮಾವತಿ ಅಮ್ಮ

ಹಾಸನ ಜಿಲ್ಲೆಯ ಜಾವಗಲ್ ನ ನಿವಾಸಿ ಪದ್ಮಾವತಿ ಅಮ್ಮ (95ವ) ಇವರು ಜ. 8ರಂದು ನಿಧನ ಹೊಂದಿದರು. ಇವರು ಮಕ್ಕಳಾದ ಮರುದೇವಿಯಮ್ಮ, ಧರ್ಮಪಾಲ್ ಎಚ್. ಎ. ಮತ್ತು ಪೂರ್ಣಿಮಾ ಜೈನ್ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

First Previous

Showing 1 of 1 pages

Next Last