Article Image

ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Article Image

ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

1ರಿಂದ 8ನೇ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25ನೇ ಸಾಲಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ(PRE-MATRIC SCHOLARSHIP) ಯೋಜನೆಯಡಿಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್‌ನ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 31ರಂದು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು 1)ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು. 2)ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. 3)ಎಲ್ಲ ಮೂಲಗಳಿಂದ ವಿದ್ಯಾರ್ಥಿಯ/ಪಾಲಕರ/ಪೋಷಕರ ವಾರ್ಷಿಕ ಆದಾಯವು ರೂ.1.00 ಲಕ್ಷಗಳನ್ನು ಮೀರಿರಬಾರದು. ಅರ್ಜಿ ಸಲ್ಲಿಸುವವರಿಗೆ ವಿಶೇಷ ಸೂಚನೆ: *ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. *ಕಳೆದ ವರ್ಷದಲ್ಲಿ ವಿದ್ಯಾರ್ಥಿ ವೇತನ ಮಂಜೂರಾದ ವಿದ್ಯಾರ್ಥಿಗಳ ಅರ್ಜಿಗಳನ್ನು Auto Renewal ಎಂದು ಪರಿಗಣಿಸಲಾಗುವುದರಿಂದ ಸದರಿ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. *ಹಿಂದಿನ ವರ್ಷ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಮಂಜೂರಾಗದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು. *ಪ್ರೀ ಮೆಟ್ರಿಕ್ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರುವ ಬಗ್ಗೆ ಹಾಗೂ NPCI Mapping | Active ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ-2024

Article Image

ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ-2024

ಚಾತುರ್ಮಾಸ ಹಾಗೂ ದಶಲಕ್ಷಣ ಮಹಾಪರ್ವದ ನಿಮಿತ್ಯವಾಗಿ ವಿಜಯ ಪಥ ಆಯೋಜಿಸಿರುವ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ-2024. “ಜೈನ ತೀರ್ಥಂಕರ ತತ್ವಾದರ್ಶಗಳು ಈಗ ಹೆಚ್ಚು ಪ್ರಸ್ತುತ” ಈ ವಿಷಯದ ಕುರಿತು ಮಾತನಾಡಿ ಅದನ್ನು ಲ್ಯಾಂಡ್ ಸ್ಕೆಪ್ ಮೋಡ್‌ನಲ್ಲಿ ವಿಡಿಯೋ ಮಾಡಿ ನಮ್ಮ ಟೆಲಿಗ್ರಾಂ (8152970080)ಗೆ ಕಳುಹಿಸಿಕೊಡುವುದು. ವಯೋಮಿತಿ: 12+ ಸಮಯ ಮಿತಿ: 8-10 ನಿಮಿಷ ವಿಡಿಯೋ ಕಳಿಸುವ ಮುನ್ನ ಉಚಿತವಾಗಿ ಹೆಸರು ನೊಂದಾಯಿಸಿಕೊಂಡು ಹೆಚ್ಚಿನ ಮಾಹಿತಿ ಪಡೆಯುವುದು ಕಡ್ಡಾಯ. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಅತ್ಯಾಕರ್ಷಕ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಇ-ಪ್ರಶಸ್ತಿ ನೀಡಲಾಗುವುದು. ಮಾಹಿತಿ ಪಡೆದು ವೀಡಿಯೋ ಕಳಿಸಲು ಕೊನೆಯ ದಿನ: 30-ಸೆಪ್ಟೆಂಬರ್-2024. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದಿನೇಶ್ ಜೈನ್: 8152970080/9844221864.

ವೇಣೂರು : ಡಾ. ಸುಕೇಶ್ ಕುಮಾರ್ ಬಜಿರೆ ಇವರಿಗೆ ಪಿಎಚ್.ಡಿ ಪದವಿ

Article Image

ವೇಣೂರು : ಡಾ. ಸುಕೇಶ್ ಕುಮಾರ್ ಬಜಿರೆ ಇವರಿಗೆ ಪಿಎಚ್.ಡಿ ಪದವಿ

ಡಾ. ಸುಕೇಶ್ ಕುಮಾರ್ ಬಜಿರೆ ಇವರು ಡಾ. ರಾಜೇಶ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ "ರೋಲ್ ಆಫ್ ಕ್ವೊರಮ್ ಸೆನ್ಸಿಂಗ್ ಇನ್ ಸುಡೋಮೋನಾಸ್ ಅರಜಿನೋಸ ಅಡಾಪ್ಟ್ಯೇಷನ್ ಡ್ಯೂರಿಂಗ್ ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್" ಎಂಬ ಮಹಾಪ್ರಬಂಧಕ್ಕೆ ದೇರಳಕಟ್ಟೆಯ ಯೇನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯವು ಫ್ಯಾಕಲ್ಟಿ ಆಫ್ ಸೈನ್ಸ್ ನಲ್ಲಿ ಪಿಎಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ. ಬಜಿರೆ ಹಲ್ಲಂದೋಡಿ ಶಶಿ ಕುಮಾರ್ ಇಂದ್ರ ಹಾಗು ಭಾರತಿ ದಂಪತಿಗಳ ಪುತ್ರನಾದ ಇವರು ಪ್ರಸ್ತುತ 'ಯೂನಿವರ್ಸಿಟಿ ಆಫ್ ಟೆಕ್ಸಾಸ್ ಅಟ್ ಟೈಲರ್' ಅಮೇರಿಕಾದಲ್ಲಿ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿಕ್ಷಕ ಕೌಶಲ್ಯ ವರ್ಧನಾ ತರಬೇತಿ ಕಾರ್ಯಗಾರ

Article Image

ಶಿಕ್ಷಕ ಕೌಶಲ್ಯ ವರ್ಧನಾ ತರಬೇತಿ ಕಾರ್ಯಗಾರ

ದಿಗಂಬರ ಜೈನ ವಿದ್ಯಾವರ್ಧಕ ಸಂಘ(ರಿ.)ಮೂಡಬಿದ್ರೆ ಇದರ ಆಶ್ರಿತ ಸಂಸ್ಥೆಗಳಾದ ಜೈನ ಪ್ರೌಢಶಾಲೆ, ಡಿ.ಜೆ ಆಂಗ್ಲ ಮಾಧ್ಯಮ ಶಾಲೆ ಮತ್ತು ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಒಂದು ದಿನದ ‘ಶಿಕ್ಷಕ ಕೌಶಲ್ಯ ವರ್ಧನಾ’ ತರಬೇತಿ ಕಾರ್ಯಕ್ರಮವನ್ನು (Teacher’s skill Enhancement training program) ಜೈನ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ಕೆ. ಹೇಮರಾಜ್ ರವರು ನೆರವೇರಿಸಿದರು. ತರಬೇತುದಾರರಾಗಿ ರಾಷ್ಟ್ರೀಯ ತರಬೇತುದಾರರಾದ ಬಾಸುಮ ಕೊಡಗು ಆಗಮಿಸಿದ್ದರು. ಬೆಳಗ್ಗೆ 9.30 ರಿಂದ ಸಂಜೆ 4.00 ಗಂಟೆಯವರೆಗೆ ನಡೆದ ಈ ತರಬೇತಿ ಕಾರ್ಯಗಾರದಲ್ಲಿ ಶಿಕ್ಷಕರ ಅವಲೋಕನ, ವಿದ್ಯಾರ್ಥಿ-ಶಿಕ್ಷಕ ಸಂಬಂಧ, ಸಂವಹನ ಮಾಧ್ಯಮ, ಅಂತರ್ಜಾಲ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಪ್ರಭಾವ ಇತ್ಯಾದಿ ವಿಷಯಗಳನ್ನು ತರಬೇತುದಾರರು ಗುಂಪು ಚರ್ಚೆಗಳ ಮೂಲಕ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಶ್ಯಾಮ್ ಪ್ರಸಾದ್, ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ, ಡಿ.ಜೆ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಹಾಗೂ 3 ವಿದ್ಯಾಸಂಸ್ಥೆಗಳ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕರಾದ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಸುಧಾ ಕೆ. ತರಬೇತುದಾರರನ್ನು ಪರಿಚಯಿಸಿದರು.

ಮೂಡಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ

Article Image

ಮೂಡಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣೆ

ಕೊಡುಗೈ ದಾನಿಗಳು ಶಾಲಾ ಹಿತೈಶಿಗಳು ಹಾಗೂ ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಎಂ. ವಿ. ಶೆಟ್ಟಿಯವರು ಜುಲೈ 8ರಂದು ಮೂಡಬಿದಿರೆಯ ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಅರ್ಹ ಬಡ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ಜೈನ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ. ಇವರು ಉಪಸ್ಥಿತರಿದ್ದರು.

ಶಟಲ್ ಬ್ಯಾಡ್ಮಿಂಟನ್: ವಿನೀತ್ ಪ್ರಥಮ ಸ್ಥಾನ

Article Image

ಶಟಲ್ ಬ್ಯಾಡ್ಮಿಂಟನ್: ವಿನೀತ್ ಪ್ರಥಮ ಸ್ಥಾನ

ಉಜಿರೆ: ನೆಲ್ಯಾಡಿಯಲ್ಲಿ ಪ್ರೀಮಿಯರ್ ಲೀಗ್ 2024 ಆಶ್ರಯದಲ್ಲಿ ಇತ್ತೀಚೆಗೆ ನಡೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಎಸ್.ಎಂ. ಸ್ಮಾಟರ್ಸ್ ತಂಡವನ್ನು ಪ್ರತಿನಿಧಿಸಿದ ಧರ್ಮಸ್ಥಳದ ವಿನೀತ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಸಿ.ಎ. ಪದವಿ ತರಗತಿಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವಿ. ಶೆಟ್ಟಿ ಮತ್ತು ಅರುಣಾ ದಂಪತಿಗಳ ಪುತ್ರರಾಗಿರುತ್ತಾರೆ. ಇವರಿಗೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕುಮಾರ್ ತರಬೇತಿ ನೀಡಿರುತ್ತಾರೆ.

ಸತ್ತೂರು, ಧಾರವಾಡ: “ಪರ್ವ 2024”-ಸಾಂಸ್ಕೃತಿಕ ಕಾರ್ಯಕ್ರಮ

Article Image

ಸತ್ತೂರು, ಧಾರವಾಡ: “ಪರ್ವ 2024”-ಸಾಂಸ್ಕೃತಿಕ ಕಾರ್ಯಕ್ರಮ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಅಲೈಡ ಹೆಲ್ತ್ ಸೈನ್ಸ್ ವಿಭಾಗದವರಿಂದ “ಪರ್ವ 2024”-ಸಾಗರ ಸಂರಕ್ಷಣೆಯ ಭಾಗವಾಗಿ “ಸಮುದ್ರ ನಮ್ಮ ಜೀವನದ ಸೌಂದರ್ಯ” ಎಂಬ ಧ್ಯೇಯೆಯೊಂದಿಗೆ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮತ್ತಿತರ ಗಣ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪದ್ಮಲತಾ ನಿರಂಜನ್, ಸಾಕೇತ್ ಶೆಟ್ಟಿ, ಡಾ. ಚಿದೇಂದ್ರ ಶೆಟ್ಟರ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಲೈಡ ಹೆಲ್ತ್ ಸೈನ್ಸ್ ನ ಸಂಯೋಜಕರಾದ ಡಾ. ವಿದ್ಯಾ ಪಾಟೀಲ ಅವರು ಪರ್ವ 2024 ಸಾಂಸ್ಕೃತಿಕ ಕಾರ್ಯಕ್ರಮದ ಅವಲೋಕನವನ್ನು ನೀಡಿದರು. ಶೋಧನ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಮೀನಾಜ್ ಮತ್ತು ತಾಂಜೀಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಸೌಮ್ಯ ವಂದನಾರ್ಪಣೆ ಸಲ್ಲಿಸಿದರು.

ನಿರಂಜನ ಲಹರಿ ಮಾಧ್ಯಮದ ಮೂಲಕ ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ

Article Image

ನಿರಂಜನ ಲಹರಿ ಮಾಧ್ಯಮದ ಮೂಲಕ ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ

ನಿರಂಜನ ಲಹರಿ ಮಾಧ್ಯಮದ ಮೂಲಕ ಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ (ಉಚಿತ ) online ( zoom app) ಮಾಧ್ಯಮದ ಮೂಲಕ ನಡೆಸಲಾಗುತ್ತದೆ. ಕಾಯ೯ಕ್ರಮದ ನೇರ ಪ್ರಸಾರವನ್ನು ನಿರಂಜನ ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು. ಧಾರ್ಮಿಕ ಶಿಬಿರದಲ್ಲಿ ಶಿಕ್ಷಕಿಯಾಗಿ ಸುಮನಾ ಪತ್ರಾವಳಿ ಬೆಳಗಾವಿರವರು ಪಾಲ್ಗೊಳ್ಳಲಿದ್ದಾರೆ. 12.05.2024ರಿಂದ 16.05.2024 ಗುರುವಾರದವರೆಗೆ ಪ್ರತೀ ದಿನ ಮಧ್ಯಾಹ್ನ 12.00ರಿಂದ 1.00 ರವರೆಗೆ ನಡೆಯುತ್ತದೆ. ವಿಶೇಷ ಆಕರ್ಷಣೆಯಾಗಿ 16.05.2024 ರ ಗುರುವಾರ ಮಕ್ಕಳಿಗಾಗಿ ಅಷ್ಟವಿಧಾರ್ಚನೆಯನ್ನು ಕಲಿಸಿಕೊಡಲಾಗುವುದು, ಈ ಕಾರ್ಯಕ್ರಮ ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರವನ್ನು ಉದ್ದೀಪನಗೊಳಿಸಲು ಆಯೋಜಿಸಲಾಗಿದೆ. ಹೆಸರು ನೊಂದಾಯಿಸಲು ಸಂಪರ್ಕಿಸಿ ನಿರಂಜನ್ ಜೈನ್- 9945563529.

ನರಸಿಂಹರಾಜಪುರ: ಶ್ರೀ ಸಮಂತಭದ್ರ ವಿದ್ಯಾಪೀಠಕ್ಕೆ ಪ್ರವೇಶಾವಕಾಶ

Article Image

ನರಸಿಂಹರಾಜಪುರ: ಶ್ರೀ ಸಮಂತಭದ್ರ ವಿದ್ಯಾಪೀಠಕ್ಕೆ ಪ್ರವೇಶಾವಕಾಶ

ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರ ಸಿಂಹನಗದ್ದೆ ನರಸಿಂಹರಾಜಪುರ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ನಡೆಸುತ್ತಿರುವ ಶ್ರೀ ಸಮಂತಭದ್ರ ವಿದ್ಯಾಪೀಠಕ್ಕೆ ಜೈನ ವಿದ್ಯಾರ್ಥಿಗಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ. 2024-25ನೇ ಸಾಲಿನ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳ ನೋಂದಣಿ ಆರಂಭವಾಗಿದೆ. ಜೈನ ಪೋಷಕರು ಬಾಲಕರನ್ನು ವಿದ್ಯಾಪೀಠದ ಪ್ರವೇಶಕ್ಕೆ ತಮ್ಮ ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಇತರೆ ದಾಖಲೆಗಳೊಂದಿಗೆ ಸಂಪರ್ಕಿಸಬೇಕಾಗಿ ಅಪೇಕ್ಷಿಸಲಾಗಿದೆ. ಸಂಪರ್ಕ: ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರ ಪೆನುಗೊಂಡೆ ದಿಗಂಬರ ಜೈನ ಮಹಾಸಂಸ್ಥಾನ ಮಠ ಸಿಂಹನಗದ್ದೆ ಬಸ್ತಿಮಠ, ನರಸಿಂಹರಾಜಪುರ - 577134 ಮೊ: 8277741008, 08266220609

ಫಿಜೋಥೆರಪಿ ಪದವಿಯಲ್ಲಿ ಸನ್ನಿಧಿ ಜೈನ್‌ರವರು ಉತ್ತಮ ಅಂಕ

Article Image

ಫಿಜೋಥೆರಪಿ ಪದವಿಯಲ್ಲಿ ಸನ್ನಿಧಿ ಜೈನ್‌ರವರು ಉತ್ತಮ ಅಂಕ

ಬೆಂಗಳೂರು ರಾಜೀವ್ ಗಾಂಧಿ ವೈದ್ಯಕೀಯ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಇರುವ ಮೂಡಬಿದಿರೆಯ ಆಳ್ವಾಸ್ ವೈದ್ಯಕೀಯ ಕಾಲೇಜು, ಫಿಜೋಥೆರಫಿ ವೈದ್ಯಕೀಯ ವಿಭಾಗದ ಡಾಕ್ಟರ್ ಫಿಜೋಥೆರಪಿ ಪದವಿಯಲ್ಲಿ ಸನ್ನಿಧಿ ಜೈನ್‌ರವರು ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಇವರು ನಾರಾವಿ ಹಂಬಡದ ಸಂಧ್ಯಾ ಮತ್ತು ಮುನಿರಾಜ್ ಜೈನ್ ಇವರ ಸುಪುತ್ರಿ.

ವರಂಗ: ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾವಕಾಶ

Article Image

ವರಂಗ: ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾವಕಾಶ

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ಶ್ರೀಕ್ಷೇತ್ರ ವರಂಗ ಜೈನ ಮಠದಲ್ಲಿ ನಡೆಯುತ್ತಿರುವ ವಿದ್ಯಾಪೀಠಕ್ಕೆ 2024-25ನೇ ಸಾಲಿನ ಪ್ರವೇಶ ಪ್ರಾರಂಭಿಸಲಾಗಿದ್ದು, 8 ರಿಂದ 10ನೇ ತರಗತಿಯ, ಪದವಿಪೂರ್ವ ಹಾಗೂ ಪದವಿ ವಿದ್ಯಾಭ್ಯಾಸ ಮಾಡಲು ಜೈನ ವಿದ್ಯಾರ್ಥಿಗಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಮೂಲ ದಾಖಲೆಗಳೊಂದಿಗೆ ಶ್ರೀಮಠದ ಆಡಳಿತ ಮಂಡಳಿಯನ್ನು ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 8762785044, 8123924492, 9481249127, 9481944083,

ಹೊಂಬುಜ: ಶ್ರೀ ಕುಂದಕುಂದ ವಿದ್ಯಾಪೀಠಕ್ಕೆ ಪ್ರವೇಶಾವಕಾಶ

Article Image

ಹೊಂಬುಜ: ಶ್ರೀ ಕುಂದಕುಂದ ವಿದ್ಯಾಪೀಠಕ್ಕೆ ಪ್ರವೇಶಾವಕಾಶ

ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಶುಭಾಶೀರ್ವಾದದೊಂದಿಗೆ ಜೈನ ಮಠದ ಆಶ್ರಯದಲ್ಲಿ ಸುವ್ಯವಸ್ಥಿತಗೊಂಡಿರುವ ಶ್ರೀ ಕುಂದಕುಂದ ವಿದ್ಯಾಪೀಠವು ಜೈನ ಬಾಂಧವರ ಪ್ರೋತ್ಸಾಹಕ್ಕೆ ಪಾತ್ರವಾಗಿ ಜೈನ ವಿದ್ಯಾರ್ಥಿಗಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಯಶಸ್ಸುಗಳಿಸಿ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ಶ್ರೀ ಕುಂದಕುಂದ ವಿದ್ಯಾಪೀಠಕ್ಕೆ 5 ರಿಂದ 10ನೇ ತರಗತಿಯವರೆಗಿನ, 2024-25ನೇ ಸಾಲಿನ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳ ‌ನೋಂದಣಿ ಆರಂಭವಾಗಿದೆ. ಜೈನ ಪೋಷಕರು/ತಂದೆ ತಾಯಿಯರು ಬಾಲಕರನ್ನು ಈ ವಿದ್ಯಾಸ್ಫೂರ್ತಿ ಸೆಲೆಯ ವಿದ್ಯಾಪೀಠದ ಪ್ರವೇಶಕ್ಕೆ ತಾವು ಹಿಂದಿನ ತರಗತಿಯ ಉತ್ತೀರ್ಣರಾದ ಅಂಕಪಟ್ಟಿ ಹಾಗೂ ಅಲ್ಲಿಯ ಜೈನ ಸಮಾಜದ ಮುಖಂಡರಿಂದ ಪಡೆದ ಪರಿಚಯ ಪತ್ರ, ಮೂಲ ದಾಖಲೆಗಳೊಂದಿಗೆ ಸಂಪರ್ಕಿಸಬಹುದು ವಿ.ಸೂ: ಶ್ರೀ ಹೊಂಬುಜ ಪದ್ಮಾವತಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಪರಂಜ್ಯೋತಿ ಆಂಗ್ಲಮಾಧ್ಯಮ ಪ್ರಾಥಮಿಕ ಪಾಠಶಾಲೆಗೆ 8ನೇ ತರಗತಿಯಿಂದ ಅವಕಾಶವಿರುತ್ತದೆ ವ್ಯವಸ್ಥಾಪಕರು, ಶ್ರೀಕುಂದ ಕುಂದ ವಿದ್ಯಾಪೀಠ : 8123924492, 8762180697, 9481249127, 9481944083

ಕಾರ್ಕಳ: ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಪಿ.ಯು.ಸಿ ವಿದ್ಯಾರ್ಥಿಗಳ ಸಾಧನೆ

Article Image

ಕಾರ್ಕಳ: ಶ್ರೀ ಬಾಹುಬಲಿ ಶ್ರಾವಿಕಾಶ್ರಮದ ಪಿ.ಯು.ಸಿ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ ದಾನಶಾಲೆಯಲ್ಲಿರುವ ಶ್ರೀ ಬಾಹುಬಲಿ ಶ್ರಾವಿಕಾಶ್ರಮದಲ್ಲಿ ವಾಸ್ತವ್ಯವಿದ್ದು, ಹಿರಿಯಂಗಡಿ ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪದವಿಪೂರ್ವ ಕಾಲೇಜಿನ ಪಿ.ಯು.ಸಿ.ಯಲ್ಲಿ ಸಿಂಚನಾ 97% (582-ವಾಣಿಜ್ಯ), ಮಾನ್ಯ 96.8% (581-ವಾಣಿಜ್ಯ), ನಮಿತಾ 96.7% (580-ವಾಣಿಜ್ಯ), ಪ್ರಾಪ್ತಿ 96.5% (579-ವಾಣಿಜ್ಯ), ಅನ್ವೇಶ 96% (578-ವಾಣಿಜ್ಯ), ನಮ್ರತಾ 95.3% (572-ವಾಣಿಜ್ಯ), ಕುಶಿ 91.7% (550-ವಾಣಿಜ್ಯ) ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಜಿತೋ ಸಂಸ್ಥೆ ವತಿಯಿಂದ ಜೈನ ಸಮಾಜದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಉಚಿತ ತರಬೇತಿ

Article Image

ಜಿತೋ ಸಂಸ್ಥೆ ವತಿಯಿಂದ ಜೈನ ಸಮಾಜದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಉಚಿತ ತರಬೇತಿ

ಬೆಳಗಾವಿ, ಏ.6: ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ್ ಜಿತೋ ಸಂಸ್ಥೆಯ ವತಿಯಿಂದ ಕಳೆದ 11 ವರ್ಷಗಳಿಂದ ಜೈನ ಸಮಾಜದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ದತೆಗಾಗಿ ಉಚಿತ ತರಬೇತಿಯನ್ನು ನೀಡುತ್ತ ಬಂದಿದೆ. ಈ ವರ್ಷವೂ ಸಹ ಜಿತೋ ಸಂಸ್ಥೆಯ ವತಿಯಿಂದ ಯುಪಿಎಸ್‌ಸಿ ಪರೀಕ್ಷೆಯ ಸಿದ್ದತೆಗಾಗಿ ಉಚಿತ ತರಬೇತಿಯನ್ನು ನೀಡಲಿದೆ. ವಿದ್ಯಾರ್ಥಿಗಳು ಹೆಸರು ನೋಂದಾಯಿಸುವುದು ಕಡ್ಡಾಯವಾಗಿರುತ್ತದೆ. ಹೆಸರು ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಹೆಸರು ನೋಂದಣಿ ಮಾಡುವ ಕೊನೆಯ ದಿನಾಂಕ 24-04-2024 ಆಗಿದ್ದು, ಈ ಅವಧಿಯೊಳಗೆ ಹೆಸರು ನೊಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕುಂತಿನಾಥ ಕಲಮನಿ ಮೊ: 94804-48108 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭ. ಶ್ರೀ ಮಹಾವೀರ ತೀರ್ಥಂಕರರ 2250ನೇ ಜನ್ಮಕಲ್ಯಾಣದ ಪ್ರಯುಕ್ತ ಪ್ರಬಂಧ ಸ್ಪರ್ಧೆ

Article Image

ಭ. ಶ್ರೀ ಮಹಾವೀರ ತೀರ್ಥಂಕರರ 2250ನೇ ಜನ್ಮಕಲ್ಯಾಣದ ಪ್ರಯುಕ್ತ ಪ್ರಬಂಧ ಸ್ಪರ್ಧೆ

ಭ. ಶ್ರೀ ಮಹಾವೀರ ತೀರ್ಥಂಕರರ 2250ನೇ ಜನ್ಮಕಲ್ಯಾಣದ ಪ್ರಯುಕ್ತ 'ಪ್ರಾತಃಸ್ಮರಣೀಯ ಪ.ಪೂ. ಆಚಾರ್ಯ ಶ್ರೀ 108 ವಿದ್ಯಾಸಾಗರ ಮಹಾರಾಜರು, ಭ. ಮಹಾವೀರ ಸ್ವಾಮಿಯವರ ಅಹಿಂಸಾ ಪರಮೋ ಧರ್ಮ ಸಂದೇಶವನ್ನು ಜಗತ್ತಿಗೆ ಪಂಚಮಕಾಲದಲ್ಲಿ ಪರಿಚಯಿಸಿದ ಮಹಾಸಂತರು' ಈ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ವಂತ ಕೈ ಬರಹದಲ್ಲಿ ಬರೆದ ಪ್ರಬಂಧ 2 ಪುಟ ಮೀರದಂತಿರಬೇಕು. ಪ್ರಬಂಧವನ್ನು ದಿನಾಂಕ 10-04-2024ರ ಒಳಗಾಗಿ ಕಳುಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವೈ.ಡಿ. ರತ್ನಾಕರ್ : ದೂ. 9886589725, 7892159744 ಇವರನ್ನು ಸಂಪರ್ಕಿಸಬಹುದು.

ಉಜಿರೆ : “ರತ್ನಮಾನಸ” ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

Article Image

ಉಜಿರೆ : “ರತ್ನಮಾನಸ” ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುವ “ರತ್ನಮಾನಸ” ವಿದ್ಯಾರ್ಥಿ ನಿಲಯಕ್ಕೆ 8ನೇ ತರಗತಿ ಕನ್ನಡ ಮಾಧ್ಯಮಕ್ಕೆ ಸೇರಲಿಚ್ಛಿಸುವ ಬಡ, ಹಿಂದುಳಿದ ಹಾಗೂ ಕೃಷಿಕ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಇಲ್ಲಿ ನಮ್ಮ ಆಯ್ಕೆ ಪರೀಕ್ಷೆಗೆ ಹಾಜರಾಗಿ ಮೂರು ದಿನ ರತ್ನಮಾನಸದಲ್ಲಿ ಉಳಿದು ಇಲ್ಲಿನ ಪರಿಸರ ಹಾಗೂ ಶಿಸ್ತಿನ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಹೈಸ್ಕೂಲ್ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕ್ರಮವನ್ನು ಅಳವಡಿಸಿಕೊಳ್ಳುವ ಅಂಗವಾಗಿ ಕೃಷಿ, ಹೈನುಗಾರಿಕೆ, ಸಮಾಜಸೇವೆ ಮುಂತಾದ ವೃತ್ತಿಪರ ಹಾಗೂ ಸ್ವ-ಉದ್ಯೋಗ ತರಬೇತಿಯನ್ನು ನೀಡಲಾಗುವುದು. ಇಲ್ಲಿನ ಜೀವನ ಶಿಕ್ಷಣ ಕ್ರಮದ ಮಾಹಿತಿಯನ್ನು ಪಡೆದ ಬಳಿಕ ಅಭ್ಯರ್ಥಿಗೆ ಒಪ್ಪಿಗೆಯಾದಲ್ಲಿ 8ನೇ ತರಗತಿಯ ಕನ್ನಡ ಮಾಧ್ಯಮಕ್ಕೆ ಸೇರಲಿಚ್ಛಿಸುವ ಅರ್ಹ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ದಿನಾಂಕ 05-04-2024ರಿಂದ ಅರ್ಜಿಗಳನ್ನು ನೀಡಲಾಗುವುದು ಮತ್ತು 25-04-2024ರಂದು ಅರ್ಜಿ ನೀಡಲು ಕೊನೆಯ ದಿನಾಂಕವಾಗಿರುತ್ತದೆ. ವಿ.ಸೂ. : ಆಂಗ್ಲಮಾಧ್ಯಮ, 9ನೇ ಮತ್ತು 10ನೇ ತರಗತಿ ದಾಖಲಾತಿಗೆ ಅವಕಾಶವಿರುವುದಿಲ್ಲ. ಹಾಗೂ ಹುಡುಗಿಯರಿಗೆ ದಾಖಲಾತಿ ಇರುವುದಿಲ್ಲ. ಅರ್ಜಿಯನ್ನು ರತ್ನಮಾನಸ ವಸತಿ ನಿಲಯದಲ್ಲಿಯೇ ಪಡೆದುಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 08023901791, 9480351201, 9449244425, 9901546846

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.): 2023-24ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆ

Article Image

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ.): 2023-24ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆ

2023-24ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳು ಮುಂತಾದವುಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚದ ಶೇ. 33% ಅಥವಾ ಗರಿಷ್ಠ ಮಿತಿ ರೂ. 1 ಲಕ್ಷದ ಸಹಾಯಧನ ನೀಡಲಾಗುವುದು. ಅರ್ಹತೆಗಳು : 1. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. 2. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. 3. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷ ಒಳಗಿರಬೇಕು. 4 ಎಲ್ಲಾ ಮೂಲಗಳಿಂದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ರೂ. 81,000/- ಹಾಗೂ ನಗರ ಪ್ರದೇಶದಲ್ಲಿ ರೂ. 1,03,000/- ಮಿತಿಯಲ್ಲಿರಬೇಕು 5. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ/ಪಿಎಸ್‌ಯು ಉದ್ಯೋಗಿಯಾಗಿರಬಾರದು. 6. ಅರ್ಜಿದಾರರು ಕೆ.ಎಂ.ಟಿ.ಸಿ.ಯಲ್ಲಿ ಸುಸ್ತಿದಾರರಾಗಿರಬಾರದು. ದಾಖಲಾತಿಗಳು : 1. ಜಾತಿ ಮತ್ತು ಆದಾಯ ಪ್ರಮಾಣಪತ್ರ 2. ಆಧಾರ್ ಕಾರ್ಡ್ 3. ಬ್ಯಾಂಕ್ ಪಾಸ್ ಬುಕ್ 4. ಯೋಜನಾ ವರದಿ 5. ಫೋಟೊ-2 6. ಸ್ವಯಂ ಘೋಷಣಾ ಪತ್ರ. ಅರ್ಜಿ ಸಲ್ಲಿಸಲು ವೆಬ್‌ಸೈಟ್ ಲಿಂಕ್: https://kmdconline.karnataka.gov.in ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆ. 29 ಆಗಿರುತ್ತದೆ.

ಅರ್ಜಿ ಆಹ್ವಾನ

Article Image

ಅರ್ಜಿ ಆಹ್ವಾನ

ರಾಜಸ್ಥಾನ ಸಾಂಗನೇರದಲ್ಲಿರುವ ಶ್ರಮಣ ಸಂಸ್ಕೃತಿ ಸಂಸ್ಥಾನದಲ್ಲಿ ಸಂತ ಶಿರೋಮಣಿ 108 ಆಚಾರ್ಯ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರ ಆಶೀರ್ವಾದ ಮತ್ತು ಮುನಿಪುಂಗವ 108 ಶ್ರೀ ಸುಧಾಸಾಗರ ಮಹಾರಾಜರ ಪ್ರೇರಣೆಯಿಂದ ನಡೆಯುತ್ತಿರುವ ದ್ವಾದಶ ವರ್ಷಿಯ ಕೋರ್ಸ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಉತ್ತಮ ಪಂಡಿತರಿಂದ ಗ್ರಂಥ ಸ್ವಾಧ್ಯಾಯ ಮತ್ತು ಪ್ರತಿ ವರ್ಷ ಪರೀಕ್ಷೆ ಬರೆಯ ಬೇಕಾಗುತ್ತದೆ. ಇಲ್ಲಿಯವರೆಗೂ ಹಿಂದಿಯಲ್ಲಿ ನಡೆಯುತ್ತಿದ್ದು, ಪ್ರಥಮ ಬಾರಿಗೆ ಮೈಸೂರಿನಲ್ಲಿ ಪಠ್ಯಕ್ರಮವನ್ನು ಕನ್ನಡಕ್ಕೆ ಅನುವಾದಿಸಿ, ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅನುಮತಿ ನೀಡಲಾಗಿದೆ. ಕರ್ನಾಟಕ ರಾಜ್ಯಾದ್ಯಂತ ಎಲ್ಲರಿಗೂ ಈ ಪರೀಕ್ಷೆ ಬರೆಯುವ ಅವಕಾಶವಿದ್ದು, ಪರೀಕ್ಷೆಯನ್ನು ಬರೆಯಲು ಯಾವುದೇ ವ್ಯಾಸಂಗದ ಅರ್ಹತೆ ಮತ್ತು ವಯಸ್ಸಿನ ಮಿತಿ ಇರುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-01-2024 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಪ್ನ ಲಕ್ಷ್ಮೀಶ್ ಮೈಸೂರು: 9448254546 / 8660747004

First Previous

Showing 1 of 1 pages

Next Last