ಶ್ರೀ ಕ್ಷೇತ್ರ ದೇವಗಿರಿ: ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಚಿಕ್ಕನಕೊಡಿಗೆ ದೇವಗಿರಿ ಕ್ಷೇತ್ರದ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರ ಮತ್ತು ಚತುರ್ವಿಂಶತಿ ತೀರ್ಥಂಕರರ ಭವ್ಯ ಸಮವಸರಣದ ಮುಂಭಾಗದಲ್ಲಿ ನೂತನ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಂಗಳ ಆಶೀರ್ವಾದ ಮತ್ತು ದಿವ್ಯ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ದಿನಾಂಕ : 15-3-2025ನೇ ಶನಿವಾರದಿಂದ ಮೊದಲ್ಗೊಂಡು ದಿನಾಂಕ : 17-03-2025ನೇ ಸೋಮವಾರದ ಪರ್ಯಂತ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪನಾ ಪೂರ್ವಕವಾಗಿ ಜರುಗಲಿದೆ.
ಧಾರ್ಮಿಕ ವಿಧಿ-ವಿಧಾನಗಳು:
ದಿನಾಂಕ : 15-03-2025ನೇ ಶನಿವಾರ ಬೆಳಿಗ್ಗೆ ಗಂಟೆ 7-45ರಿಂದ ನಿತ್ಯವಿಧಿ ಸಹಿತ ಇಂದ್ರ ಪ್ರತಿಷ್ಠೆ, ಬೆಳಿಗ್ಗೆ 8-55ರ ಮೇಷ ಲಗ್ನ ಸುಮುಹೂರ್ತದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ದಿವಾಗಂಟೆ 11-45ರ ವೃಷಭ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಅಪರಾಹ್ನ ಗಂಟೆ 2-00ರಿಂದ ನಾಂದಿಮಂಗಲ ವಿಧಾನ, ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಸಂಜೆ ಗಂಟೆ 4-15ರ ಕರ್ಕಾಟಕ ಲಗ್ನದಲ್ಲಿ ಶ್ರೀ ಕ್ಷೇತ್ರಪಾಲ ಸ್ವಾಮಿ ಪ್ರತಿಷ್ಠೆ, ಸಂಜೆ ಗಂಟೆ 5-25ರ ಸಿಂಹಲಗ್ನದಲ್ಲಿ ನಾಗಾರಾಧನಾ ಪೂರ್ವಕ ನಾಗಪ್ರತಿಷ್ಠೆ, ನವಕಲಶ ಅಭಿಷೇಕ, ಮಹಾಮಂಗಳಾರತಿ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 7-00ರಿಂದ ಮಲೆನಾಡು ಪ್ರಾಂತ್ಯದ ಆಯ್ದ ಜಿನಭಜನಾ ತಂಡಗಳಿಂದ “ಜಿನಗಾನ ಪ್ರಸ್ತುತಿ”
ದಿನಾಂಕ : 16-03-2025ನೇ ಭಾನುವಾರ ಬೆಳಿಗ್ಗೆ ನಿತ್ಯವಿಧಿ ಸಹಿತ ಗಂಟೆ 8-30ರಿಂದ ೮೧ ಕಲಶಗಳಿಂದ ಮಾನಸ್ತಂಭ ನವಪದ ಶುದ್ಧಿ ವಿಧಾನ, ಮಾನಸ್ತಂಭದ ಆವರಣದಲ್ಲಿ ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಬೆಳಿಗ್ಗೆ ಗಂಟೆ 9-00ರಿಂದ ಸಾಮೂಹಿಕ ವೃತೋಪದೇಶ, ಬೆಳಿಗ್ಗೆ ಗಂಟೆ 10-00ರಿಂದ ವೃಷಭಾದಿ ಚತುರ್ವಿಂಶತಿ ತೀರ್ಥಂಕರರಿಗೆ ಮಹಾಭಿಷೇಕ, ಮಧ್ಯಾಹ್ನ ಗಂಟೆ 2-00ರಿಂದ ಚತುರ್ವಿಂಶತಿ ತೀರ್ಥಂಕರರ ಆರಾಧನೆ. ಸಂಜೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ 24 ಕಲಶ ಅಭಿಷೇಕ, ಮಹಾಮಂಗಳಾರತಿ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 6-00ರಿಂದ ಸುದೇಶ್ ಜೈನ್ ಮತ್ತು ಬಳಗ, ಮಕ್ಕಿಮನೆ ಕಲಾವೃಂದ, ಮಂಗಳೂರು ಇವರ ಸಂಯೋಜನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ವೈಭವ - ಪ್ರಸಿದ್ಧ ಜಿನಭಜನಾ ತಂಡಗಳಿಂದ ಜಿನಗಾನ ಪ್ರಸ್ತುತಿ
ದಿನಾಂಕ : 17-03-2025ನೇ ಸೋಮವಾರ ನಿತ್ಯವಿಧಿಯೊಂದಿಗೆ ಗಂಧಯಂತ್ರಾರಾಧನಾ ಸಹಿತ ದಿವಾಗಂಟೆ 10-25ರಿಂದ 10-35ರ ಸುಮುಹೂರ್ತದಲ್ಲಿ ಚತುರ್ಮುಖ ಜಿನಬಿಂಬ ಶುದ್ದಿ, ಮಂತ್ರನ್ಯಾಸಪೂರ್ವಕ ನಯನೋನ್ಮಿಲನ, ದಿವಾಗಂಟೆ 11-15ರಿಂದ 11-45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಮಾನಸ್ತಂಭೋಪರಿ ಶ್ರೀ ಜಿನಬಿಂಬ ಪ್ರತಿಷ್ಠಾಪನೆ, ಅಭಿಷೇಕ, ಮಧ್ಯಾಹ್ನ 12-25ರ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧನಾಪೂರ್ವಕ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 2-00ರಿಂದ ಮಾನಸ್ತಂಭೋಪರಿ ಜಿನಬಿಂಬಗಳಿಗೆ ೧೦೮ ಕಲಶಗಳ ಮಹಾಭಿಷೇಕ, ಸಮವಸರಣದಲ್ಲಿ ಕಲಿಕುಂಡ ಯಂತ್ರಾರಾಧನೆ, ೨೪ ಕಲಶಗಳ ಅಭಿಷೇಕ, ರಾತ್ರಿ 7-30ರಿಂದ ಸರ್ವಾಷ್ಣಯಕ್ಷ ಉತ್ಸವ, ಗುರುಗಳ ಪಾದಪೂಜೆ, ಕಂಕಣ ವಿಸರ್ಜನೆ, ತೋರಣ ವಿಸರ್ಜನೆ.
ಧಾರ್ಮಿಕ ಸಭಾ ಕಾರ್ಯಕ್ರಮ: ಸಂಜೆ 6-00ರಿಂದ ಪೂಜ್ಯ ಭಟ್ಟಾರಕ ಶ್ರೀಗಳಿಂದ ಮಂಗಲ ಪ್ರವಚನ, ಸನ್ಮಾನ ಸಮಾರಂಭ.