Article Image

ಮಲೆನಾಡ ಜೈನ ಅಡುಗೆ ಹಬ್ಬ

Article Image

ಮಲೆನಾಡ ಜೈನ ಅಡುಗೆ ಹಬ್ಬ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜಿಲ್ಲಾ ಜೈನ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ಆಷಾಢದಲ್ಲಿ ಒಂದು ದಿನ ಮಲೆನಾಡ ಜೈನ ಅಡುಗೆ ಹಬ್ಬ ಸಾಂಪ್ರದಾಯಿಕ ಮಲೆನಾಡ ಜೈನ ಆಹಾರ ಮಹೋತ್ಸವ ಹಾಗೂ ಇನ್ನಿತರ ಕಾರ್ಯಕ್ರಮವನ್ನು ವಳಗೆರೆ ಪಂಚಕೂಟ ಬಸದಿ ಸಭಾಭವನದಲ್ಲಿ ಆಗಸ್ಟ್ 2ರಂದು ಹಮ್ಮಿಕೊಳ್ಳಲಾಗಿದೆ.

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

Article Image

ಕಾರ್ಕಳ: ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಪೂಜ್ಯ ಯುಗಲ ಮುನಿ ಮಹಾರಾಜರ ಬೇಟಿ

2027ರ ಫೆಬ್ರವರಿಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನ, ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ ಏನ್ ರಾಜೇಂದ್ರ ಕುಮಾರ್ ರವರ ಮುಂದಾಳತ್ವದಲ್ಲಿ ನಡೆಯುವ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ 2027 ರ ಮಹಾಮಸ್ತಕಾಭಿಷೇಕ ಮಹೋತ್ಸವ ಪ್ರಯುಕ್ತ ಮುಂಬೈಯ ಧುಲೆ ಎಂಬಲ್ಲಿ ವಿಹಾರ ಇರುವ ಪೂಜ್ಯ ಯುಗಲ ಮುನಿ ಮಹಾರಾಜರನ್ನು ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಪುಷ್ಪರಾಜ್ ಜೈನ್ ಮಂಗಳೂರು, ಕಾರ್ಯದರ್ಶಿಗಳಾದ ಭರತ್ ಕುಮಾರ್ ಜೈನ್ ಇರ್ವತ್ತೂರು, ಶೀತಲ್ ಜೈನ್ ಶಿರ್ಲಾಲು, ಹಿರಿಯರಾದ ಶ್ರೀವರ್ಮ ಜೈನ್, ರಘುಚಂದ್ರ ಜೈನ್, ಮಾಲತಿ ವಸಂತರಾಜ್, ವಿಜಯಲಕ್ಷ್ಮಿ ಹೇಮಚಂದ್ರ ಜೈನ್, ಮೋಹಿನಿ ವರ್ಧಮಾನ್, ಅಭೀಷ್ಟ ಕುಮಾರ್ ರವರು ಬೇಟಿ ನೀಡಿ ಪೂಜ್ಯ ಯುಗಲ ಮುನಿಮಹಾರಾಜರಿಂದ ಆಶೀರ್ವಾದ ಪಡೆಯಲಾಯಿತು.

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

Article Image

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

ಮೈಸೂರಿನ ಬಳಿ ಇರುವ ಕುಮಾರ ಬೀಡು ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಜೈನ ಬಸದಿಯು ಈಗ ಶಿಥಿಲವಾಗಿ ಪಾಳು ಬಿದ್ದಿರುವುದು ಪತ್ತೆಯಾಗಿದೆ. ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಎರಡು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗಳು ಎರಡು ಶಾಸನಗಳು ಮತ್ತು ಅನೇಕ ಜಿನ ಬಿಂಬಗಳು ಸ್ಥಳದಲ್ಲಿವೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಜಿ ಡಿ ಪಾರ್ಶ್ವನಾಥ್ ಮತ್ತು ವೀರೇಂದ್ರ ಬೇಗೂರ್ ರವರು ಸ್ಥಳ ಪರಿಶೀಲನೆಗಾಗಿ ಇತ್ತೀಚೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕುಮಾರಬೀಡು ಅಭಿವೃದ್ಧಿಗಾಗಿ ರಚಿಸಿರುವ ಟ್ರಸ್ಟಿನ ಅಧ್ಯಕ್ಷರಾದ ಮಿತ್ರಸೇನ ಜೈನ್ ಉಪಾಧ್ಯಕ್ಷ ಚಂದ್ರಶೇಖರ್ ಅರಿಗ ಕಾರ್ಯದರ್ಶಿ ಮಹಾವೀರ ಗೋಗಿ ಸಹಕಾರ್ಯದರ್ಶಿ ವಾಗೀಶ್ವರಿ ಪ್ರಕಾಶ್ ಸಂಘಟನಾ ಕಾರ್ಯದರ್ಶಿ ನವೀನ್ ಬಸ್ತಿ ಮತ್ತು ಟ್ರಸ್ಟಿಯಾದ ಶಾಂತಪ್ಪ ಮೈಸೂರು ಜೈನ ಸಮಾಜದ ಅಧ್ಯಕ್ಷರಾದ ಸುನಿಲ್ ಕುಮಾರ್ ತೀರ್ಥಕ್ಷೇತ್ರ ಕಮಿಟಿಯ ಕರ್ನಾಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಬಾಕ್ಲೀವಾಲ್ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್ ಪ್ರಸನ್ನ ಕುಮಾರ್ ವರ್ಧಮಾನ ಜೈನ್ ಮಿಲನ್ ಉಪಾಧ್ಯಕ್ಷರಾದ ನಾಗರತ್ನ ಮತ್ತು ಚಂದ್ರಿಕಾ ರವರು ಕುಮಾರಬೀಡು ಉಪಸ್ಥಿತರಿದ್ದರು.

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

Article Image

ಮೂಡುಬಿದಿರೆ: ಕಸ ವಿಲೇವಾರಿ ಪ್ರಾತ್ಯಕ್ಷಿಕೆ

ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಸಹಕಾರದಿಂದ ಕಾಲೇಜಿನ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಹಾಗೂ ಮೂಡುಬಿದಿರೆ ಪುರಸಭೆಯ ಸಹಯೋಗದೊಂದಿಗೆ ಕಸ ವಿಲೇವಾರಿ ಪ್ರಾತ್ಯಕ್ಷಿಕೆ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಕ್ರಮದಲ್ಲಿ ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ‍್ಯ ಪಂಡಿತಾಚಾರ‍್ಯವರ‍್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡುತ್ತ ನಮ್ಮ ಊರಿನ ಪರಿಸರದ ಸ್ವಚ್ಛ ಸುಂದರವಾಗಿಸಿ ಕಸ ಇಲ್ಲದಂತೆ ನೋಡುದು ನಮ್ಮೆಲ್ಲರ ಜವಾಬ್ದಾರಿ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿದಾಗ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತದೆ ಎಂದರು. ಕಾರ‍್ಯಕ್ರಮದಲ್ಲಿ ಮೂಡುಬಿದಿರೆ ಪುರಸಭೆಯ ಮುಖ್ಯ ಅಧಿಕಾರಿ ಇಂದೂರವರು ಹಾಗೂ, ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಉಪಸ್ಥಿತರಿದ್ದರು ಇವರನ್ನು ಸ್ವಸ್ತಿಶ್ರೀ ಪೂಜ್ಯ ಸ್ವಾಮೀಜಿಯವರು ಸನ್ಮಾನಿಸಿ ಅಭಿನಂದಿಸಿದರು. ಶಿಲ್ಪಾರವರು ಕಸ ವಿಲೇವಾರಿಯ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಯಾವ ಯಾವ ರೀತಿಯ ಕಸವನ್ನು ಯಾವ್ಯಾವ ರೀತಿ ವಿಲೇವಾರಿ ಮಾಡಬೇಕು ಎನ್ನುವ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜ್ವಲ್ ಶೆಣೈ ಇವರು ಉಪಸ್ಥಿತರಿದ್ದರು. ಇವರು ಕಸ ವಿಲೇವಾರಿ ಮಾದರಿಗಳ ಮುಖಾಂತರ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಕಾರ‍್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶ್ವೇತಾ ಜೈನ್ ನೋಟರಿ ಹಾಗೂ ನ್ಯಾಯವಾದಿಗಳು ಮೂಡುಬಿದಿರೆ ಇವರು ಉಪಸ್ಥಿತರಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಬಟ್ಟೆ ಚೀಲ ಉಚಿತವಾಗಿ ನೀಡಿದರು. ಮಧ್ಯಾಹ್ನ ನಡೆದ ಈ ಸುಂದರ ಸಮಾರಂಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಸರಸ್ವತಿ ವಂದಿಸಿದರು.

ಗದಗ:- ಶ್ರೀ ಶಾಂತಿನಾಥ ವಿಧಾನ

Article Image

ಗದಗ:- ಶ್ರೀ ಶಾಂತಿನಾಥ ವಿಧಾನ

ಜೈನ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಮತ್ತು ಕರ್ಮಗಳ ವಿನಾಶಕ್ಕೆ ಅತ್ಯಂತ ಮಹತ್ವದ ಸಾಧನಗಳಾಗಿದ್ದು, ‘ಶಾಂತಿನಾಥ ವಿಧಾನ’ವು ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ ವಿದಿತಸಾಗರ ಮಹಾರಾಜರು ಉಪದೇಶಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಜೈನ ಪರಂಪರೆಯಲ್ಲಿ 16ನೆಯ ತೀರ್ಥಂಕರ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ ಎಂದು ಆರಾಧಿಸಲಾಗುತ್ತದೆ. ಈ ವಿಧಾನವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯಗಳು ದೂರವಾಗಿ ಇಡೀ ವಿಶ್ವದಲ್ಲಿ ಅಹಿಂಸೆ ಮತ್ತು ಶಾಂತಿ ನೆಲೆಸುತ್ತದೆ. ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬದಲ್ಲಿ ಎದುರಾಗುವ ಕಷ್ಟಗಳು, ವಿಘ್ನಗಳು ಮತ್ತು ಪ್ರಾಕೃತಿಕ ವಿಕೋಪಗಳು ನಿವಾರಣೆಯಾಗುತ್ತವೆ. ಈ ವಿಧಿಯಲ್ಲಿ ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ, ಅರ್ಘ್ಯ ಎಂಬ ಅಷ್ಟದ್ರವ್ಯಗಳನ್ನು ಮಂತ್ರಘೋಷಗಳೊಂದಿಗೆ ಶಾಂತಿನಾಥ ತೀರ್ಥಂಕರರಿಗೆ ಸಮರ್ಪಿಸಲಾಗುತ್ತದೆ. ಈ ವಿಧಾನದಲ್ಲಿ ಭಾಗಿಯಾಗಿರುವ ತಾವೆಲ್ಲರೂ ಪುಣ್ಯಶಾಲಿಗಳಾಗಿದ್ದು, ಈ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಲು ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಶ್ರಾವಕರು ನಗರದಲ್ಲಿ ಬಸದಿ, ಸಭಾಭವನ ನಿರ್ಮಿಸಲು ಉದಾರವಾಗಿ ಸಹಾಯ-ಸಹಕಾರ ನೀಡಬೇಕೆಂದು ಕೋರಿದರು. ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಗದಗ ಜಿಲ್ಲೆಯ ಪ್ರದೇಶದಲ್ಲಿ 7ನೆಯ ಶತಮಾನದಿಂದಲೂ ಅನೇಕ ಜೈನ ಮುನಿಗಳು, ಆರ್ಯಿಕೆಯರು ವಿಹಾರ ಕೈಗೊಂಡು ಧರ್ಮಪ್ರಭಾವನೆ ಮೂಲಕ ಲೋಕಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದ್ದು, ಆ ಪರಂಪರೆ ಮುನಿಶ್ರೀ ವಿದಿತಸಾಗರ ಮಹಾರಾಜರಿಂದಲೂ ಮುಂದುವರೆದಿರುವುದು ಇಲ್ಲಿಯ ಜೈನ ಸಮಾಜದ ಸೌಭಾಗ್ಯವಾಗಿದೆ ಎಂದು ಹೇಳಿದರು. ವಿಧಾನದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಟಿವಿ-9 ವರದಿಗಾರ ಸಂಜಯ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ ತುಕೋಳ, ಯಶವಂತ ಸಿದ್ದಣ್ಣವರ, ಸುಭಾಸ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವಾಯ್. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಹಿರಿಯರು, ಶ್ರಾವಕ- ಶ್ರಾವಿಕೆಯರು ಭಾಗವಹಿಸಿ ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿ ಕೃತಾರ್ಥರಾದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಅಧ್ಯಕ್ಷೀಯ ನುಡಿಗಳಲ್ಲಿ ಮುನಿಶ್ರೀ ಅವರು ಗದಗ ನಗರಕ್ಕೆ ಆಗಮಿಸಿ ಧರ್ಮಪ್ರಭಾವನೆ ಕೈಗೊಂಡು ಶಾಂತಿನಾಥ ವಿಧಾನ ಆಚರಣೆಗೆ ಮಾರ್ಗದರ್ಶನದೊಂದಿಗೆ ಸಾನ್ನಿಧ್ಯ ವಹಿಸಿರುವುದು ಸದಾಕಾಲ ಸ್ಮರಣೀಯವಾಗಿದ್ದು, ಎಚ್.ಕೆ. ಪಾಟೀಲ ಅವರು ನಗರಾಭಿವೃದ್ಧಿ ಇಲಾಖೆಯಿಂದ ಬಸದಿ ಮತ್ತು ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಕೊಡುವುದಾಗಿ ಜಿಲ್ಲೆಯ ಜೈನ ಸಮಾಜಕ್ಕೆ ಭರವಸೆ ನೀಡಿದ್ದಾರೆ. ಅವರ ಸಹಾಯ-ಸಹಕಾರದಿಂದ ನಗರದಲ್ಲಿ ಬಸದಿ ನಿರ್ಮಿಸಿ ಲೋಕಕಲ್ಯಾಣ ಚಟುವಟಿಕೆಗಳನ್ನು ಸಾಂಗವಾಗಿ ಮುಂದುವರೆಸಲಾಗುವುದೆಂದು ಹೇಳಿದರು. ಡಾ| ಅಪ್ಪಣ್ಣ ಹಂಜೆರವರು ಸ್ವಾಗತಿಸಿದರು. ಪ್ರಕಾಶ ಮುತ್ತಿನ ವಂದಾರ್ಪಣೆಗೈದರು. ಶಾಂತಿನಾಥ ತೀರ್ಥಂಕರರಿಗೆ ಆರತಿ ಮಾಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ತುಮಕೂರು: ವಿಶೇಷ ಕಾರ್ಯಾಗಾರ

Article Image

ತುಮಕೂರು: ವಿಶೇಷ ಕಾರ್ಯಾಗಾರ

ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಜೈನ ಅಧ್ಯಯನ ವಿಭಾಗದ ವತಿಯಿಂದ "ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ" ಎಂಬ ವಿಷಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಜೈನ ಸಂಶೋಧಕರು ಹಾಗೂ ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ (www.jainheritagecentres.com) ಅಂತರ್ಜಾಲತಾಣದ ಸಂಸ್ಥಾಪಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಬೆಂಗಳೂರಿನ ನಿತಿನ್ ಹೆಚ್.ಪಿ. ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, "ಜೈನಧರ್ಮದ ಇತಿಹಾಸ, ತತ್ವಶಾಸ್ತ್ರ, ಕಲೆ ಮತ್ತು ಪರಂಪರೆಯ ಕುರಿತು ಇದುವರೆಗೆ ನಡೆದಿರುವ ದಾಖಲೀಕರಣ ಹಾಗೂ ಸಂಶೋಧನೆಯ ಫಲವಾಗಿಯೇ ಜೈನಧರ್ಮವು ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ. ಜೈನಧರ್ಮದ ಮಹತ್ವ ಮತ್ತು ಅದರ ಅಮೂಲ್ಯ ಕೊಡುಗೆಗಳು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಬೇಕಾದರೆ, ಜೈನ ಅಧ್ಯಯನವು ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಜೈನ ಅಧ್ಯಯನ ಮತ್ತು ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಇಂದಿನ ಅಗತ್ಯವಾಗಿದೆ" ಎಂದು ಅಭಿಪ್ರಾಯಪಟ್ಟರು. "ಭಾರತವನ್ನು ಬಿಟ್ಟು ಜೈನಧರ್ಮವಿಲ್ಲ, ಜೈನಧರ್ಮವನ್ನು ಬಿಟ್ಟು ಭಾರತವಿಲ್ಲ ಎನ್ನುವಷ್ಟು ಆಳವಾಗಿ ಜೈನಧರ್ಮವು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ನಾವು ದಿಗಂಬರ ಮತ್ತು ಶ್ವೇತಾಂಬರ ಎಂಬ ಪಂಥೀಯ ಭೇದಗಳನ್ನು ಮೀರಿ, ಜೈನಧರ್ಮವನ್ನು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡುವ ಅಗತ್ಯವಿದೆ" ಎಂದು ತಿಳಿಸಿದರು. ಬಳಿಕ ಇವರು ಭಾರತದಲ್ಲಿ ಜೈನ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಪರಂಪರೆ, ಭಾರತದಲ್ಲಿನ ಜೈನ ಗುಹೆಗಳ ವೈಶಿಷ್ಟತೆಗಳು, ಜೈನ ಪ್ರತಿಮಾಶಾಸ್ತ್ರ ಮತ್ತು ಅದರ ವಿಶಿಷ್ಟ ವಿನ್ಯಾಸಗಳು, ಜೈನ ಜಿನಾಲಯಗಳ ವಾಸ್ತುಶಿಲ್ಪ ಮತ್ತು ಅದರ ವಿಶೇಷತೆಗಳು. ಈ ಉಪನ್ಯಾಸಗಳು ಜೈನ ಕಲೆ, ವಾಸ್ತುಶಿಲ್ಪ, ಇತಿಹಾಸ ಮತ್ತು ಪರಂಪರೆಯ ವಿವಿಧ ಆಯಾಮಗಳನ್ನು ಒಳಗೊಂಡಿದ್ದು, ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಂದ ಉತ್ತಮ ಪ್ರತಿಕ್ರಿಯೆ ಪಡೆದವು. ನಾಡಿನ ಹಿರಿಯ ಜೈನ ವಿದ್ವಾಂಸರು ಮತ್ತು ಸಂಶೋಧಕರಾದ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ಈ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಅವರ ಮಾರ್ಗದರ್ಶನವು ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪ್ರಾಧ್ಯಾಪಕರಾದ ಪ್ರೊ. ಶೇಟ್ ಪ್ರಕಾಶ್ ಅವರು ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟರಾಮ ರೆಡ್ಡಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎಂ. ಕೊಟ್ರೇಶ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಮಕೂರು ವಿಶ್ವವಿದ್ಯಾಲಯದ ಜೈನಧರ್ಮ ಸ್ನಾತಕೋತ್ತರ ಡಿಪ್ಲೋಮಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಕಾರ್ಯಕ್ರಮದ ಆಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜೊತೆಗೆ, ತುಮಕೂರು ನಗರದ ಶ್ರಾವಕ ಸಮುದಾಯದ ಸದಸ್ಯರು, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಖ್ಯಾತ ವಿದ್ವಾಂಸರು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

Article Image

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

ಬೆಳಗಾವಿ: ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಪ್ರಾಚಾರ್ಯರು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಗೌರವಾನ್ವಿತ ಸಿಂಡಿಕೇಟ್ ಸದಸ್ಯರಾದ ರಾಮಚಂದ್ರ ಕಿಲ್ಲೇದಾರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಿದೆ. ವಿಶ್ವ ವಿದ್ಯಾಲಯದ ವಾಣಿಜ್ಯ ನಿಕಾಯದ ವ್ಯವಹಾರ ನಿರ್ವಹಣೆ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ಎಸ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಇವರು ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರು ಉಗಾರ ಖುರ್ದದ ಹೆಸರಾಂತ ಶೈಕ್ಷಣಿಕ ಸಂಸ್ಥೆಯಾದ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2008 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಅವರ ನೇತೃತ್ವದಲ್ಲಿ ಒಂದರಿಂದ ಎಂಟನೆ ತರಗತಿಯ ಇಂಗ್ಲಿಷ್ ಮಾಧ್ಯಮಶಾಲೆ, ಪಿಯುಸಿ (ಕಲಾ ಮತ್ತು ವಾಣಿಜ್ಯ) ಹಾಗೂ ಬಿ.ಬಿ.ಎ., ಬಿ.ಸಿ.ಎ. ಮತ್ತು ಬಿ.ಕಾಂ. ಪದವಿ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವದ ನೀಡುತ್ತಿದೆ.

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

Article Image

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ಶಿವಮೊಗ್ಗ: ವೀರರಾಣಿ ಚನ್ನಭೈರಾದೇವಿ ಜೈನ ಜಿಲ್ಲಾ ಮಹಿಳಾ ಸಂಘಟನೆ ಇವರ ಆಯೋಜನೆಯಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿಷಯ:- ಮಹಾಮಂಡಲೇಶ್ವರಿ ಚನ್ನಭೈರಾದೇವಿ ನಿಯಮಗಳು: ಪ್ರಬಂಧ ಸ್ಪರ್ಧೆಗೆ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲರೂ ಭಾಗವಹಿಸಬಹುದು, ಕೈ ಅಕ್ಷರಗಳಲ್ಲಿ ಹಾಗೂ ಟೈಪ್ ಮಾಡಬಹುದು, ಎರಡು ಪುಟ ಮೀರಬಾರದು, ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕು, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ, ಸ್ಪರ್ಧಿಯ ಹೆಸರು ವಿಳಾಸ ಫೋನ್ ನಂಬರ್ ಬರೆಯಬೇಕು, ಅಂಜೆ (Post office) ಮೂಲಕ ಕಳುಹಿಸಬೇಕು. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ: 5-8-2026 ಕಳುಹಿಸುವ ವಿಳಾಸ: ಕೆ ಆರ್.ಪದ್ಮ ಬಾಹುಬಲಿ ಜೈನ್, ಎ ಪಿ ಎಂ ಸಿ ರೋಡ್, ಶ್ರೀಧರ ನಗರ, 2ನೇ ಕ್ರಾಸ್, ಸಾಗರ, ಪೋಸ್ಟ್ ಸಾಗರ, ಸಾಗರ (ತಾ) ಶಿವಮೊಗ್ಗ( ಜಿಲ್ಲೆ) ಸಾಗರ, ಪಿನ್ ನಂ:- 577421 ವಿವರಗಳಿಗೆ ಸಂಪರ್ಕಿಸಿ: 94822 04767, 94824 80220, 94497 06582, 94800 72644, 95916 83980

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

Article Image

ಲಂಡನ್: ಜೈನ್ ಮಿಲನ್ ಮಾಸಿಕ ಸಭೆ

ಇಂಗ್ಲೆಂಡ್: ಸ್ಲೋಘ್‌ನಲ್ಲಿರುವ ಶಾಂತಿನಾಥ ದಿಗಂಬರ ಜೈನ ಬಸದಿಯಲ್ಲಿ ಮೊದಲಿಗೆ ಪೂಜಾ ಕಾರ್ಯಕ್ರಮಗಳು ನಡೆದು, ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಚಾರ್ಯ ಶ್ರೀ ವಿದ್ಯಾಸಾಗರ ದಿಗಂಬರ ಜೈನ ಚಾರಿಟೇಬಲ್ ಟ್ರಸ್ಟ್ ಲಂಡನ್ ಇದರ ಟ್ರಸ್ಟಿ ಸಂತೋಷ್ ಕುಮಾರ್ ಜೈನ್ ಅವರು ಟ್ರಸ್ಟ್ ಬೆಳೆದು ಬಂದ ದಾರಿ , ಬಸದಿಯ ನಿರ್ಮಾಣ, ಉದ್ದೇಶ ಹಾಗೂ ಆಶಯಗಳ ಬಗ್ಗೆ ಮಾಹಿತಿ ನೀಡಿದರು. ಮಿಲನ್ ಉಪಾಧ್ಯಕ್ಷ ನಿಖಿಲ್ B.A ಅವರು ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಆಚರಿಸುವ ಮಿಲನ್ ಸದಸ್ಯರಿಗೆ ಶುಭ ಹಾರೈಸಿ, ಮುಂದಿನ ಜೈನ್ ಮಿಲನ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಜೈನ್ ಮಿಲನ್ ಲಂಡನ್ ಅಧ್ಯಕ್ಷ Dr. ನರೇಂದ್ರ ಅಳದಂಗಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಜೈನ ಧರ್ಮದ ತತ್ವ ಸಿದ್ಧಾಂತಗಳ ಪಾಲನೆ ಮತ್ತು ಆಚರಣೆಯಿಂದ ಜೀವನದಲ್ಲಿ ಆರೋಗ್ಯಕರವಾಗಿ ಹಾಗೂ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಕೈವಲ್ಯ ಜೈನ್, ಕೇವಲ್ ಜೈನ್, ಧೀಮನ್ ಬಲ್ಲಾಳ್ ಜಿನ ಭಜನೆ ಹಾಡಿದರು. ಅಕ್ಷಯ , ಸಂಪದ , ದೀಕ್ಷಾ ಮತ್ತು ಸಂಧ್ಯಾ ಅವರ ತಂಡ ಜಿನ ಭಜನೆ ಹಾಡಿದರು. ಸಾರ್ಥಕ್ ಜೈನ್ ಬಾಹುಬಲಿ ಸ್ವಾಮಿಯ ಕಥೆ ಹೇಳಿದರು. ದೀಕ್ಷಾ ಜೈನ್ ಅವರು ಜೈನ ಧರ್ಮದಲ್ಲಿ ಹಿಂಸೆ ಅಥವಾ ಅಹಿಂಸೆ ಎಂದು ಪರಿಗಣಿಸುವ ಕರ್ಮಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಜಿನ ಭಜನೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಮಿಲನ್ ಸದಸ್ಯರಿಗೆ ಮತ್ತು ಸಾಧಕರಿಗೆ ಪ್ರಶಸ್ತಿ ಪತ್ರ ಗಳನ್ನು ನೀಡಿ ಗೌರವಿಸಲಾಯಿತು. ಆರವ್ ಜೈನ್ ಅವರು ಗಿಟಾರ್ ಮೂಲಕ ಪಂಚ ನಮಸ್ಕಾರ ಮಂತ್ರವನ್ನು ನುಡಿಸಿ ಮತ್ತು ಆಖ್ಯ ಹೆಗ್ಡೆ ಅವರು ಗಿಟಾರ್ ನುಡಿಸುತ್ತಾ ಪಾರ್ಶ್ವನಾಥ ಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು . ಕೋಶಾಧಿಕಾರಿ Dr. ವೈಶಾಕ್ ವಿದ್ಯಾಧರ್ ವಂದಿಸಿದರು. ಮಿಲನ್ ಕಾರ್ಯದರ್ಶಿ ಅಶ್ವಿನಿ ಚಂದ್ರ ಪ್ರಭು ಅವರು ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮ ದ ನಂತರ ಸದಸ್ಯರಿಗೆ ಮೋಜಿನ ಸ್ಪರ್ಧೆಗಳನ್ನು ನಡೆಸಿಕೊಟ್ಟರು . ಕಾರ್ಯಕ್ರಮದ ಆತಿಥೇಯರಾಗಿ ಸಾಯಿನಾಥ್ ಹೆಗ್ಡೆ, ಉಜ್ವಲ್ ಶ್ರೇಯಸ್, Dr.ವೈಶಾಕ್ ವಿದ್ಯಾಧರ್, ದಯಾನಂದ ಪಾಟೀಲ್ ಕುಟುಂಬದವರು ಸಹಕರಿಸಿದರು. ವರದಿ ಧೀರೇಂದ್ರ ಬಲ್ಲಾಳ್

ಆರ್.ಅನನ್ಯಾ ಜೈನ್-ತೇರ್ಗಡೆ

Article Image

ಆರ್.ಅನನ್ಯಾ ಜೈನ್-ತೇರ್ಗಡೆ

ಮೂಡುಬಿದಿರೆ: ಇಟಲಿಯ ಮಿಲನ್‌ನ ಪ್ರತಿಷ್ಠಿತ ಪಾಲಿಟೆಕ್ನಿಕೊ ಡಿ ಮಿಲನೋ ವಿಶ್ವವಿದ್ಯಾಲಯದಲ್ಲಿ ಆರ್.ಅನನ್ಯಾ ಜೈನ್‌ರವರು ವಾಸ್ತುಶಿಲ್ಪ ವಿನ್ಯಾಸ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಮೂಡುಬಿದಿರೆಯ ಡಾ. ಬಿ.ಪಿ. ಸಂಪತ್ ಕುಮಾರ್ ಮತ್ತು ವೀರಶ್ರೀ ದಂಪತಿಗಳ ಪುತ್ರಿ.

ಸಿಂಗಾಪುರ: 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ

Article Image

ಸಿಂಗಾಪುರ: 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪ್ರಥಮ ವಿದೇಶ ಪ್ರವಾಸ. ಸಿಂಗಾಪುರದಲ್ಲಿ ಹೊಸ ಜಿನಾಲಯದಲ್ಲಿ 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ ವಿಧಿ ವಿಧಾನ ಪೂರ್ವಕ ಅದ್ದೂರಿಯಾಗಿ ಪೂಜ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು. ಒಂದು ವಾರ ಸಿಂಗಾಪುರ ಮತ್ತು ಮಲೇಶಿಯಾ ಧಾರ್ಮಿಕ ವಿಜಯ ಯಾತ್ರೆಯನ್ನು ಮುಗಿಸಿ ಶ್ರವಣಬೆಳಗೊಳಕ್ಕೆ ಬಂದಾಗ ಸಿಂಗಾಪುರ ಜೈನ್ ಮಿಲನ್ ಅಧ್ಯಕ್ಷ ಸುಮಂತ್ ಪ್ರಕಾಶ್ ಮೈಸೂರಿನ ಪ್ರಕಾಶ್ ಮತ್ತು ಪ್ರಮೀಳಾ ಹಾಗೂ ಪ್ರಸನ್ನ ಕುಮಾರ್ ಮತ್ತು ನಾಗರತ್ನ ರವರು ಪೂಜ್ಯರನ್ನು ಭೇಟಿ ಮಾಡಿದ್ದರು. ಪೂಜ್ಯ ಸ್ವಾಮೀಜಿಯವರು ಸಿಂಗಾಪುರ ಜಿನಬಿಂಬ ಪ್ರತಿಷ್ಠಾ ಕಾರ್ಯಕ್ರಮದ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

Article Image

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

ಲಕ್ನೋ ಬಳಿಯ ಕಾಕೋರಿ ದಿಗಂಬರ ಜೈನ ಅತಿಶಯ ಕ್ಷೇತ್ರದಲ್ಲಿ ಭಗವಾನ್ ಅಧಿನಾಥ ಸ್ವಾಮಿ ಪಂಚ ಕಲ್ಯಾಣ, ಕರ‍್ಕಳ ಶಿಲೆಯಲ್ಲಿ ನಿರ್ಮಾಣಗೊಂಡ ನೂತನ ಮೂರು ಅಡಿಯ ಪದ್ಮಾವತಿದೇವಿ ಮೂರ್ತಿಯ ಪ್ರತಿಷ್ಠಾಪನೆಯು ಆಚಾರ್ಯ 108 ವಿಶುದ್ಧ ಸಾಗರ, ಆಚಾರ್ಯ ಸುಬಲ ಸಾಗರ, ವಿವಿಕ್ತ ಶ್ರೀ ಮಾತಾಜಿಗಳವರುಗಳ ಪಾವನ ಸಾನಿಧ್ಯದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ಜಿನ ಆಗ ಮೊಕ್ತ ರೀತಿಯಲ್ಲಿ ನೆರವೇರಿತು. ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರು ಜ್ಞಾನವೇ ಸರ್ವರಿಗೂ ಹಿತವನ್ನು ಉಂಟು ಮಾಡುವುದು ಸಮಾನತೆ-ಸಭ್ಯತೆಯ ಪ್ರತೀಕ ಸಮವ ಸರಣ. ಉ.ಪ್ರ ಅವಧ್ಯ ಪ್ರಾಂತ್ಯದಲ್ಲಿ ಅತೀ ಹೆಚ್ಚು 18 ತೀರ್ಥಂಕರರು ಜನ್ಮ ಪಡೆದ ಪವಿತ್ರ ಭೂಮಿ ಭಗವಂತರ ಭಕ್ತಿ ಮುಕ್ತಿಗೆ ಸೋಪಾನ ಎಂದು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ರವೀಂದ್ರ ಕೀರ್ತಿ ಸ್ವಾಮೀಜಿ ಹಸ್ತಿ ನಾಪುರ, ನರೇಶ್ ಪಂಡಿತ್,ಪ್ರವೀಣ್ ಶಾಸ್ತ್ರೀ, ಭೂಪಾಲ್, ಚಂದೇರಿ ಬ್ರ. ಬನಾರಸಿ ದಾಸ್ ಕ್ಷೇತ್ರದ ಅಧ್ಯಕ್ಷ ಕೈಲಾಶ್, ಸಂದೀಪ್, ಸನ್ಮತ್, ಸಜಲ್ ಜೈನ್, ಪಣಿರಾಜ್, ಅನುರಾಗ ಮಿಶ್ರ ಜಿಲ್ಲಾ ನ್ಯಾಯಧೀಶರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಳಿಕ 21 ಅಡಿಯ ಭಗವಾನ್ ಅಧಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕದಿಂದ ಮಹಾ ಮಸ್ತಕಾಭಿಷೇಕ ನೆರವೇರಿತು.

ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಗೆ ಪ್ರಶಸ್ತಿ

Article Image

ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ಗೆ ಪ್ರಶಸ್ತಿ

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ 2025–2026ನೇ ಸಾಲಿನಲ್ಲಿ ಸಮಾಜಮುಖಿ ಸೇವಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ದಾಖಲಿಸಿದ್ದು, 55 ಇನ್ನರ್ ವೀಲ್ ಕ್ಲಬ್‌ಗಳ ಪೈಕಿ ಅತ್ಯಧಿಕ ಸಂಖ್ಯೆಯ 200 ಸಮಾಜಮುಖಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ "Special Recognition for Remarkable Highest Number of Projects" ವಿಶೇಷ ಗೌರವವನ್ನು ಪಡೆದುಕೊಂಡಿದೆ. ಕ್ಲಬ್‌ನ ಅಧ್ಯಕ್ಷೆ ಶ್ವೇತ ಜೈನ್ ಅವರ ಸಮರ್ಥ ನಾಯಕತ್ವ, ದೂರದೃಷ್ಟಿ ಮತ್ತು ಸಮಾಜಸೇವೆಯ ಬದ್ಧತೆಯ ಫಲವಾಗಿ ಈ ಮಹತ್ವದ ಸಾಧನೆ ಸಾಧ್ಯವಾಗಿದೆ. ಅವರ ಮಾರ್ಗದರ್ಶನದಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ,ಮಕ್ಕಳ ಹಕ್ಕುಗಳು, ಹಿರಿಯ ನಾಗರಿಕರ care, ಪರಿಸರ ಸಂರಕ್ಷಣೆ ಹಾಗೂ ವಿವಿಧ ಸಮಾಜಮುಖಿ ಕ್ಷೇತ್ರಗಳಲ್ಲಿ ಅನೇಕ ಪರಿಣಾಮಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು. ಈ ಸಾಧನೆಗೆ ಕಾರ್ಯದರ್ಶಿ ಅನಿತಾ ಪೃತ್ವಿರಾಜ್ ಶೆಟ್ಟಿ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯೆಯರ ಶ್ರಮ, ಸಹಕಾರ ಮತ್ತು ಸಮರ್ಪಿತ ಸೇವೆಯೂ ಪ್ರಮುಖ ಕಾರಣವಾಗಿದೆ ಎಂಬುದನ್ನು ಅಧ್ಯಕ್ಷರು ನೆನಪಿಸಿಕೊಳ್ಳುತ್ತಾರೆ.

ಡಾ. ಪದ್ಮಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

Article Image

ಡಾ. ಪದ್ಮಪ್ರಸಾದ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ

ಬೆಳ್ರಂಗಡಿ: ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ. ಪದ್ಮಪ್ರಸಾದ್ ರವರು ಡಾ.ಪಾಂಡುರಂಗರಾವ್ ಎಂ. ವಿರವರ ಮಾರ್ಗದರ್ಶನದಲ್ಲಿ “ಎ ಡೀಪ್ ಲರ್ನಿಂಗ್ ಹೈಬ್ರಿಡ್ ಮಾಡೆಲ್ ಫಾರ್ ಇಂಪ್ರೂವಿಂಗ್ ಮಷಿನ್ ಟ್ರಾನ್ಸ್‌ಲೇಶನ್ ಆಫ್ ಲೋ-ರಿಸೋರ್ಸ್ ಲ್ಯಾಂಗ್ವೇಜ್” ಎಂಬ ಸಂಶೋಧನಾ ಪ್ರಬಂಧಕ್ಕೆ ಜೈನ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ನಲ್ಲಿ “ಡಾಕ್ಟರ್ ಆಫ್ ಫಿಲಾಸಫಿ” (PHD) ಪದವಿ ಪ್ರದಾನಗೊಂಡಿದೆ. ಇವರು ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ರತ್ನವರ್ಮ ಜೈನ್ ಮತ್ತು ವಸಂತಿ ಜೈನ್ ದಂಪತಿಗಳ ಪುತ್ರ.

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

Article Image

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಆವಾರ್ಡ್ & ಕಾನ್ಪರೆನ್ಸ್ 2026 ರಲ್ಲಿ ಕರ್ನಾಟಕದ ಹುಬ್ಬಳ್ಳಿಯ ವರೂರಿನ ಎ.ಜಿ.ಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಗೆ 2026ರ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಲಾಯಿತು. ಶೈಕ್ಷಣಿಕ, ನಾವೀನ್ಯತೆ ಮತ್ತು ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಾಂಶುಪಾಲರಾದ ಡಾ. ಸಂದೀಪ್ ಕ್ಯಾತನವರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

Article Image

ಮೂಡುಬಿದಿರೆ: ಲೆಕ್ಕ ಪರಿಶೋಧಕರ (ಸಿ.ಎ) ಕಛೇರಿ ಶುಭಾರಂಭ

ಮೂಡುಬಿದಿರೆ ನಾಗರಕಟ್ಟೆ ರಸ್ತೆಯ ಕೆನರಾ ಟ್ರೇಡ್ ಸೆಂಟರ್ ಕಟ್ಟಡದಲ್ಲಿ ಸಿ.ಎ ಅಕ್ಷಯ ಜೈನ್, ಲೆಕ್ಕ ಪರಿಶೋಧಕರು (Chartered Accountant) ಇವರ ನೂತನ ಕಛೇರಿಯ ಶುಭಾರಂಭವು ಜರುಗಿತು. ಈ ಸಂದರ್ಭದಲ್ಲಿ ಸಿ.ಎ ಪ್ರಭಾತ ಕುಮಾರ್, ಸಿ.ಎ ಅಭಿನಯ್ ಕುಲಾಲ್, ಡಾ. ಅಶೋಕ ಜೈನ್, ಕತ್ತೋಡಿ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಪುಣೆ: ವಧು ವರರ ಪರಿಚಯಾತ್ಮಕ ಮಹಾಮೇಳ

Article Image

ಪುಣೆ: ವಧು ವರರ ಪರಿಚಯಾತ್ಮಕ ಮಹಾಮೇಳ

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವರನಿಗೆ ವಧು, ವಧುವಿಗೆ ವರ ಸುಲಭವಾಗಿ ಸಿಕ್ಕಿ ಮದುವೆಯಾಗುವುದು ತುಂಬಾ ಕಷ್ಟಸಾಧ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಹುಡುಗರಿಗೆ ಹುಡುಗಿಯರು ಸಿಗದಿರುವುದೇ ಗಂಭೀರವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಎಲ್ಲಾ ಸಮುದಾಯದಲ್ಲೂ ಇದೆ ಆದರೆ ಜೈನ ಸಮುದಾಯದಲ್ಲಿ ತುಸು ಹೆಚ್ಚು ಎಂದೇ ಹೇಳಬೇಕು. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅನೇಕ ಮಾಹಿತಿ ಕೇಂದ್ರಗಳು, ಮೇಳಗಳು ಮತ್ತು ಮೆಟ್ರಿಮೊನಿ ಇತ್ಯಾದಿ ಸಂಸ್ಥೆಗಳು ಹುಟ್ಟಿಕೊಂಡಿವೆಯಾದರೂ ಅವೆಲ್ಲವೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇದನ್ನು ಮನಗಂಡು ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯೊಂದು "ಮನೋಮಿಲನ್ " ಎಂಬ ಹೆಸರಿನಿಂದ ಜೈನ ಸಮಾಜದ ಹಿತದೃಷ್ಟಿಯಿಂದ ರಾಷ್ಟ್ರಮಟ್ಟದಲ್ಲಿ "ಆರ್ಯನ್ ಸಂಸ್ಥೆ ಪ್ರಾಯೋಜಕತ್ವದಲ್ಲಿ "*ಮನೋಮಿಲನ್ " ಎಂಬ ವಧು ವರರ ಪರಿಚಯಾತ್ಮಕ ಮಹಾ ಮೇಳ ( 2026 ) ವನ್ನು *ಪುಣೆ * ಯಲ್ಲಿ ಆಯೋಜಿಸಿದ್ದಾರೆ. ಇದರ ಪ್ರಯೋಜನವನ್ನು ಅಗತ್ಯವಿರುವವರು ಪಡೆದುಕೊಳ್ಳಬಹುದು. “ಮನೋಮಿಲನ” ಎಂದರೆ ಹೃದಯಗಳ ಒಂದಾಗುವಿಕೆ, “ಇಲ್ಲಿ ಮನಗಳು ಒಂದಾಗುತ್ತವೆ… ಸಂಬಂಧಗಳು ಬೆಸೆಯುತ್ತವೆ.” ಇದೇ ಉದ್ದೇಶ ಹೊಂದಿದ ಈ ಸಂಸ್ಥೆಯ ಪ್ರಾಮಾಣಿಕ ಸಮಾಜ ಸೇವಾ ಪ್ರಯತ್ನ ಇದು. ಮಹಾಮೇಳ ನಡೆಯುವ ಸ್ಥಳ : ಆರ್ಯನ್ ವರ್ಲ್ಡ್ ಸ್ಕೂಲ್, ಭೀಲಾರೆವಾಡಿ, ಕತರಾಜ್ ಸಮೀಪ ಪುಣೆ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 7030912526 ಮೇಳ ನೆಡೆಯುವ ದಿನಾಂಕ: ಮೇ 30 ಶನಿವಾರ ಮತ್ತು 31 ರವಿವಾರ ಮೇಳದ ವೈಶಿಷ್ಠೆಗಳು : * ದೇಶದ ವಿವಿಧ ಪ್ರಮುಖ ಸ್ಥಳಗಳಿಂದ ಸುಸಂಸ್ಕೃತ ಮತ್ತು ಉತ್ತಮ ಸ್ಥಾನ ಮಾನ ಹೊಂದಿದ ಕುಟುಂಬ ಪರಿವಾರ ಭಾಗವಹಿಸುತ್ತಾರೆ. * ವೇದಿಕೆಯಲ್ಲಿ ಪರಸ್ಪರ ಪರಿಚಯದೊಂದಿಗೆ ಸಂದರ್ಶನದ ಅವಕಾಶ. * ಅಭ್ಯರ್ಥಿಗಳ ವ್ಯಕ್ತಿಯ ಬಗೆಗಿನ ವ್ಯಕ್ತಿಚಿತ್ರದ ವಿವರಗಳ ಪ್ರಕಟಣೆ. * ಕುಟುಂಬಗಳ ಚರ್ಚೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ. * ಕತ್ರಾಜ ಮತ್ತು ಸ್ವರ್ಗೆಟ್ ಗಳಿಂದ ಉಚಿತ ವಾಹನದ ವ್ಯವಸ್ಥೆ * ಬೇರೆ ಸ್ಥಳಗಳಿಂದ ಬರುವವರಿಗೆ ವಾಸ್ತವ್ಯದ ವ್ಯವಸ್ಥೆ * ಮಾತನಾಡುವ ಕಲೆ ಅಭಿವೃದ್ಧಿಗೆ ತರಬೇತಿ * ರಿಯಾಯತಿ ದರದಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆ * 7000 ಕ್ಕೂ ಹೆಚ್ಚು ವಧು ವರರ ಡಾಟಾಬ್ಯಾಂಕ್ ವಿತರಿಸುವ ಸೌಲಭ್ಯ * ನೋಂದಣಿ ಶುಲ್ಕ ಕೇವಲ ₹ 700/- ಈ ಸಂಸ್ಥೆಯ ವಿಶೇಷವೆಂದರೆ ಭಾರತವೂ ಸೇರಿದಂತೆ ಇಡೀ ಪ್ರಪಂಚದಾದ್ಯಂತ ಯಾವುದೇ ಸ್ಥಳದಿಂದಲೂ ಜೈನ ವಧುವರ ಆಕಾಂಕ್ಷಿಗಳು ಸಂಸ್ಥೆಯ ವೆಬ್ಸೈಟ್ ಮೂಲಕ ಸುಲಭ ಸರಳ ಹಾಗೂ ಸುರಕ್ಷಿತ ಆರು ಹಂತದ ಕ್ರಿಯೆಗಳನ್ನು ಉಪಯೋಗಿಸಿ ತಮಗೆ ಬೇಕಾದವರನ್ನು ಆಯ್ಕೆಮಾಡಲು ಅನುಕೂಲವಾಗುವಂತೆ ವಿಪುಲವಾದ ಪ್ರೊಫೈಲ್ ಗಳನ್ನು ಪರಿಶೀಲಿಸಬಹುದಾಗಿದೆ ಮತ್ತು ನೇರವಾಗಿ ಸಂಪರ್ಕಿಸಬಹುದಾಗಿದೆ. ಇಂತ ವಿಶೇಷತೆ ಯಾವುದೇ ಮೆಟ್ರಿಮೊನಿಗಳಲ್ಲಿ ಇರುವುದಿಲ್ಲ. ಇದು ಅತ್ಯಂತ ಅನುಕೂಲವಾಗಿರುವುದರಿಂದ ಪ್ರತಿಯೊಬ್ಬ ಅನ್ವೇಷಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ - ವೆಬ್ ಸೈಟ್ : wwwaaryanamanomilan.com ಬಳಸಬಹುದು. ಪ್ರಮುಖ ಸಂಘಟಕರು : * ಶ್ರೀ ಮಿಳಿಂದ ಲಡ್ಗೆ - ಆರ್ಯನ್ ವರ್ಲ್ಡ್ ಸ್ಕೂಲ್ ಮತ್ತು ಆರ್ಯನ್ ಮನೋಮಿಲನ್ ಸಂಸ್ಥೆಯ ಸಂಸ್ಥಾಪಕರು. ಮೊಬೈಲ್ ನಂ -7030912526 ಕರ್ನಾಟಕದ ಸಂಘಟನಾ ಕಮಿಟಿ ಮುಖ್ಯಸ್ಥರು: * ಶ್ರೀ ರಾಜೇಂದ್ರ ಹರ್ದಿ ಮೊಬೈಲ್ ನಂ 9341690909 ವರದಿ : ಎಸ್ ಆರ್ ಮಲ್ಲಸಮುದ್ರ

ಶೃತ ಪಂಚಮಿ ಆಚರಣೆ

Article Image

ಶೃತ ಪಂಚಮಿ ಆಚರಣೆ

ಹೊಂಬುಜ: ಅತಿಶಯ ಶ್ರೀಕ್ಷೇತ್ರದಲ್ಲಿ ಪೂರ್ವ ಪರಂಪರೆಯಂತೆ ನಡೆದುಕೊಂಡು ಬಂದಿರುವ ಶೃತ ಪಂಚಮಿ ಮಹೋತ್ಸವವನ್ನು ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜೂನ್. 19 ಶುಕ್ರವಾರದಂದು ನೆರವೇರಲಿದೆ. ಅಂದು 8 ವರ್ಷ ಮೇಲ್ಪಟ್ಟ ಜೈನ ಬಾಲಕ-ಬಾಲಕಿಯರಿಗೆ ಸಾಮೂಹಿಕ ವ್ರತೋಪದೇಶ ಹಾಗೂ ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ‍್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಶೇಷ ಜಿನಪೂಜೆಯೊಂದಿಗೆ ಶಾಸ್ತ್ರಗಳನ್ನು ಪೂಜಿಸಿ, ಪಠಿಸಿ ಜಿನವಾಣಿಗೆ ಭಕ್ತಿಭಾವದ ನಮನ ಸಲ್ಲಿಸಲಾಗುವುದು. ವ್ರತೋಪದೇಶ ಹಾಗೂ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವವರು ಶ್ರೀಮಠದ ಆಡಳಿತ ಕಾರ್ಯಾಲಯದಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ: 08185-262722, 9481453653, 9483801460

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

Article Image

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

ಹುಬ್ಬಳ್ಳಿ:- ಡಾ| ರಾಜಶ್ರೀ ಕೆ.ಸೂಜಿರವರು 2026 ಸಾಲಿನ ಮಾರ್ಚ್ ತಿಂಗಳಿನಲ್ಲಿ ಆರ್ಯುವೇದ ವಾಚಸ್ಪತಿ (ಮಾಸ್ಟರ್ಸ್ ಪದವಿ)ಯನ್ನು ಆರ್ಯುವೇದ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಹುಬ್ಬಳ್ಳಿಯ ಶಕುಂತಳ ಎಂ.ಸೂಜಿರವರ ಮೊಮ್ಮಗಳು ಮತ್ತು ಆಸ್ಮಿತಾ ಕಿರಣ್ ಸೂಜಿ ಮತ್ತು ಕಿರಣ್ ಎಂ. ಸೂಜಿರವರ ಪುತ್ರಿ.

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

Article Image

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

ಕಾಗವಾಡ: ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಸಂಪತ್ತಿಗಿಂತ ಸತ್ಯ ಮುಖ್ಯ ಇಂಥಹ ಸದ್ಗುಣಗಳನ್ನು ಹೊಂದಿರುವ ಯುವಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಸಾಧುಸಂತರು, ರಾಜಕಾರಣಿಗಳು, ಸಮಾಜ ಸೇವಕರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತು ಕಾರ್ಯ ಮಾಡಿದಲ್ಲಿ ಸಮೃದ್ಧವಾದ ದೇಶ ನಿರ್ಮಾಣವಾಗಲು ಸಾಧ್ಯ ಅಂಥ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕಂಬದಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಅವರು ಕಾಗವಾಡ ತಾಲೂಕಿನ ಸುಕ್ಷೇತ್ರ ಉಗಾರ ಬುದ್ರುಕ್‌ ಗ್ರಾಮದ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನ, ಭೋಜನ ಶಾಲೆ, ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಭಾಷೆಯ ಶಿಕ್ಷಣ ಕೊಡಿಸಿದರೂ ಕೂಡ ಜೈನ ಧರ್ಮದ ಆಚಾರ, ವಿಚಾರಗಳನ್ನು ಪ್ರತಿದಿನ ಮಕ್ಕಳಿಗೆ ಬೋದಿಸುವುದರ ಜೊತೆಗೆ ತಾವೂ ಕೂಡ ಅಹಿಂಸಾ ಪರಮೋಧರ್ಮದ ತತ್ವಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು ತಾವೆಲ್ಲರು ಭಕ್ತಿ ಮಾರ್ಗದಲ್ಲಿ ನಡೆಯಿರಿ, ಆ ತಾಯಿ ಪದ್ಮಾವತಿ ನಿಮಗೆ ಆಶೀರ್ವದಿಸುತ್ತಾಳೆ. ಯಾರ ಬಳಿ ಭಕ್ತಿ ಇದೇಯೋ ಅಲ್ಲಿ ಶಕ್ತಿ ಇದೆ ಎಂದರು. ಪರಮಪೂಜ್ಯ ಜಗದ್ಗುರು ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯಮಹಾಸ್ವಾಮಿಗಳು ಮಾತನಾಡುತ್ತ ಭಕ್ತಿಯಿಂದ ಶಕ್ತಿ, ಶಕ್ತಿಯಿಂದ ಯುಕ್ತಿ, ಸಂಪಾದಿಸಿದರೆ ಪದ್ಮಾವತಿ ದೇವಿ ತಮಗೆ ಖಂಡಿತವಾಗಿಯೂ ಒಲಿದು ತಮಗೆ ಬಂದಂತಾ ಕಷ್ಟಗಳನ್ನು ದೂರವಾಡುವ ಶಕ್ತಿ ಆ ತಾಯಿಗಿದೆ ಎಂದರು. ರಾಜ್ಯಸ್ಥಾನದ ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಹೊಂದಿರುವ ಉಗಾರ ಶ್ರೀ ಪದ್ಮಾವತಿ ದೇವಿಯ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಇಲ್ಲಿ ಬಂದು ಹೋಗುವ ಶ್ರಾವಕ,ಶ್ರಾವಕಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಯಾತ್ರಿ ನಿವಾಸ, ಭವನ ನಿರ್ಮಿಸಿರುವ ಧರ್ಮದರ್ಶಿ ಶೀತಲಗೌಡ ಪಾಟೀಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಸೌಂದಾಮ ಹುಮಜಾ ಮಠಗಳ ವಾತಾವರಣ ಈಗ ಉಗಾರ ಪದ್ಮಾವತಿ ಮಂದಿರದಲ್ಲಿ ನಿರ್ಮಾಣವಾಗಿದೆ. ಧಾರ್ಮಿಕ ಕಾರ್ಯದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ಕೆ.ಎ ವನಜೋಳ ಅವರ ಹಾಗೆ ಧರ್ಮ ಕಾರ್ಯದಲ್ಲಿ ಕೈ ಜೋಡಿಸಬೇಕಾಗುತ್ತದೆ. ನಾನು ಮತ್ತು ಶಾಸಕ ಅಭಯ ಪಾಟೀಲರು ಕೂಡ ಧರ್ಮದ ಕೆಲಸದಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ವಿವರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮುಗೆಣ್ಣವರ, ಮೋಹನರಾವ್‌ ಶಹಾ, ಸಂಜಯ ಪಾಟೀಲ, ಮಹಾವೀರ ನಿಲಜಗಿ, ಡಾ.ಮಹಾವೀರ ದಾನಿಗೊಂಡ, ಬಾಹುಬಲಿ ನಾಗನೂರಿ, ಸುನೀಲ ಪಾಟೀಲ, ಮಹಾವೀರ ಕಾತ್ತಾಳೆ, ಸಂಜಯ ನಾಡಗೌಡ, ಅಭಯಕುಮಾರ ಅಕಿವಾಟೆ, ಅಶೋಕ ಚೌಗುಲೆ, ಕಲ್ಲಪ್ಪ ವನಜೋಳ, ಎಮ್.ಎಚ್.ನಂದಗಾಂವ, ಸಂಜಯ ಕುಚನೂರೆ, ಮಹೇಂದ್ರ ಖೇಮಲಾಪೂರೆ, ಡಾ.ನೀರಜಾ ನಾಗೇಂದ್ರಕುಮಾರ, ಬಮ್ಮಣ್ಣ ಚೌಗಲೆ, ವರ್ಧಮಾನ ಕೋರಿ, ಪ್ರದೀಪ ಚಿಂಚವಾಡೆ, ಆದಿನಾಥ ವಸವಾಡೆ ಉಪಸ್ಥಿತರಿದ್ದರು. ಈ ವೇಳೆ ಮಹಾದಾನಿಗಳನ್ನು ಸನ್ಮಾನಿಸಲಾಯಿತು. ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಜ್ರಕುಮಾರ ಮಗದುಮ್‌ ಸ್ವಾಗತಿಸಿ ವಂದಿಸಿದರು.

ಪೂಜಾ ಮಹೋತ್ಸವ

Article Image

ಪೂಜಾ ಮಹೋತ್ಸವ

ಗದಗ: ಭ|| ಶ್ರೀ 1008 ನೇಮಿನಾಥ ಸ್ವಾಮಿ ಜಿನಮಂದಿರದ 38ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಸೋಂದಾ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಮೇ 18ರಂದು ಜರುಗಲಿದೆ.

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

Article Image

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ದೇವರಿಗೆ ಸಹಸ್ರನಾಮ ಪುಷ್ಪಾರ್ಚನೆ ನಡೆಯಿತು. ಶ್ರದ್ಧಾಅಮಿತ್ ಮತ್ತು ಊರಿನ ಶ್ರಾವಕರು, ಶ್ರಾವಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತೋರಣಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

Article Image

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

ಮೂಡುಬಿದಿರೆ: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿಗೆ ಮೂಡುಬಿದಿರೆ ಪುರಸಭೆಯ ಸ್ವಚ್ಛತಾ ರಾಯಭಾರಿಯಾಗಿ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷೆ, ನ್ಯಾಯವಾದಿ ಶ್ವೇತಾ ಜೈನ್ ಅವರನ್ನು ಗೌರವ ಪೂರ್ವಕವಾಗಿ ನೇಮಕ ಮಾಡಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಇಂದು ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಶೂನ್ಯ ತ್ಯಾಜ್ಯ ಕಾರ್ಯಕ್ರಮಗಳ ಆಯೋಜನೆ, ಶೂನ್ಯ ತ್ಯಾಜ್ಯ ಕ್ಯಾಂಪಸ್ ಗಳ ರಚನೆಗಾಗಿ ಹಾಗೂ ಸ್ವಚ್ಛತೆಯ ಸಂದೇಶವನ್ನು ಸಾರುವ ಸಲುವಾಗಿ ಈ ನೇಮಕ ಮಾಡಲಾಗಿದೆ. ನ್ಯಾಯವಾದಿ ಶ್ವೇತಾ ಜೈನ್ ಅವರು ಭಾರತೀಯ ಜೈನ್ ಮಿಲನ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವ ಜೊತೆಗೆ ಬಸದಿ ಸ್ವಚ್ಛತಾ ತಂಡವನ್ನು ಕಟ್ಟಿಕೊಂಡು ಅವಿಭಜಿತ ಜಿಲ್ಲೆಯ ಹಲವು ಬಸದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜನಿತರಾಗಿದ್ದಾರೆ.

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

Article Image

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು,ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭ

Article Image

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭ

ಜೈನ ತತ್ತ್ವಗಳು ವಿಶ್ವಕ್ಕೆ ಶಾಂತಿಯ ಶ್ರೀ ರಕ್ಷೆ: ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳು ಪೀಠಾಧ್ಯಕ್ಷರು ಶ್ರೀ ಕ್ಷೇತ್ರ ಕನಕಗಿರಿ: ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು, ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

Article Image

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಜೈನಶಾಸ್ತ್ರ ಅಧ್ಯಯನ ಪೀಠ ಮತ್ತು ಜೆ. ಎಸ್. ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 12-3-2026 ರಂದು ಗುರುವಾರ ಧಾರವಾಡ ಜೆ.ಎಸ್.ಎಸ್.ಡಿ.ಆರ್.ಎಚ್. ಸಭಾ ಭವನದಲ್ಲಿ "ಸಾಹಿತ್ಯ ಸಂಸ್ಕೃತಿ" ಕುರಿತಾಗಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಮುಂಜಾನೆ 10.30 ಗಂಟೆಗೆ ಧಾರವಾಡ ಜೆ ಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತಪ್ರಸಾದ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿ ಡಾ. ಎಎಮ್ ಖಾನ್ ಇವರು ಉದ್ಘಾಟಿಸಲಿದ್ದಾರೆ. ಡಾ. ಜೆ.ಎಮ್. ನಾಗಯ್ಯ ನಿವೃತ್ತ ಪ್ರಾಧ್ಯಾಪಕರು ಕ ವಿ ವಿ ಇವರು ದಿಕ್ಸೂಚಿ ನುಡಿಗಳನ್ನಾಡುವರು. 11.30 ಗಂಟೆಗೆ ಮೊದಲ ಗೋಷ್ಠಿ "ಕನ್ನಡ ಸಾಹಿತ್ಯಕ್ಕೆ ರನ್ನ ಕವಿಯ ಕೊಡುಗೆ" ವಿಷಯವಾಗಿ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಡಾ. ವೈ ಎಂ ಭಜಂತ್ರಿ ಇವರು ಉಪನ್ಯಾಸ ನೀಡಲಿದ್ದು ಅಧ್ಯಕ್ಷತೆಯನ್ನು ಖ್ಯಾತ ಶಾಸನ ತಜ್ಞರು ಹಿರಿಯ ಸಾಹಿತಿ ಹನುಮಾಕ್ಷಿ ಗೋಗಿ ವಹಿಸುವರು. ಊಟದ ವಿರಾಮದ ನಂತರ ಮಧ್ಯಾನ್ಹ 2 ಗಂಟೆಗೆ ಎರಡನೇ ಗೋಷ್ಠಿ "ಸರ್ವ ಧರ್ಮ ಸಮನ್ವಯ ಕೇಂದ್ರ : ಶ್ರೀ ಕ್ಷೇತ್ರ ಧರ್ಮಸ್ಥಳ " ವಿಷಯವಾಗಿ ರಂಗ ಕರ್ಮಿ ಸಾಹಿತಿ ಡಾ. ಶಶಿಧರ ನರೇಂದ್ರ ಮಾತನಾಡುವರು. ಅಧ್ಯಕ್ಷತೆಯನ್ನು ಸಾಹಿತಿ ಪ್ರಾಧ್ಯಾಪಕಿ ಡಾ. ವೀಣಾಯಲಿಗಾರ ವಹಿಸುವರು. ಮಧ್ಯಾನ್ಹ 3.30 ಗಂಟೆಗೆ ಜನತಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತಪ್ರಸಾದ ಇವರ ಗೌರವ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು ಹಿರಿಯ ಸಾಹಿತಿ ಪ್ರೊ ಕೆ. ಎಸ್. ಕೌಜಲಗಿ ಇವರ ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಇದೇ ಸಂದರ್ಭದಲ್ಲಿ 'ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ 'ಎಂಬ ವಿಷಯ ಕುರಿತು ಆಯೋಜಿಸಿದ್ದ ಲೇಖನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಜೈನಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಹಾಗೂ ಸಲಹಾ ಸಮಿತಿ ಸದಸ್ಯರಾದ ಧರಣೇಂದ್ರ ಜವಳಿ, ಶಾಂತಿನಾಥ ಹೊತಪೇಟಿ, ಧನಪಾಲ ಮುನ್ನೊಳ್ಳಿ, ಡಾ. ರಾಯಪ್ಪ ಬಾಳಿಕಾಯಿ ಹಾಗೂ ಶಾಂತರಾಜ ಮಲ್ಲಸಮುದ್ರ ಉಪಸ್ಥಿತರಿರುವರು. ಅತ್ಯಂತ ವಿದ್ವತ್ಪೂರ್ಣ ಈ ವಿಚಾರ ಸಂಕಿರಣದಲ್ಲಿ ತಾವುಗಳು ತಪ್ಪದೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. ವರದಿ: ಎಸ್ ಆರ್ ಮಲ್ಲಸಮುದ್ರ

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

Article Image

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

ಉಜಿರೆ: ಪುದುವೆಟ್ಟು ಗ್ರಾಮದ ನಿಡ್ವಾಳ ಬಸದಿಯಲ್ಲಿ ಭಾನುವಾರ ಕೇವಲಜ್ಞಾನ ಕಲ್ಯಾಣ, ಸಮವಸರಣ ಪೂಜೆ, ಭವ್ಯ ಅಗ್ರೋಧಕ ಮೆರವಣಿಗೆ ಬಳಿಕ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿ ಮೂರ್ತಿಗೆ ೧೦೦೮ ಕಲಶಗಳಿಂದ ಅಭಿಷೇಕ ಹಾಗೂ ಮಹಾಮಂಗಲಾರತಿಯೊಂದಿಗೆ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನಗೊಂಡಿತು. ಪೂಜ್ಯ ಏಲಾಚಾರ್ಯ ಪ್ರಸಂಗ ಸಾಗರ ಮುನಿಮಹಾರಾಜರು ಮತ್ತು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶಾಮೃತ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಪ್ರತಿಷ್ಠಾಚಾರ್ಯ ಜಯರಾಜ ಇಂದ್ರರು ಮತ್ತು ಧರಣೇಂದ್ರ ಕುಮಾರ್ ಹಾಗೂ ಸ್ಥಳ ಪುರೋಹಿತರಾದ ಶ್ರೀಕೀರ್ತಿ ಇಂದ್ರರು, ಬೈಲಂಗಡಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಕೋಟ್ಯಣ್ಣ ಬಂಟರಾದ ಸುರೇಂದ್ರಕುಮಾರ್ ಜೈನ್, ಪಂಚಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಿ. ಧನಕೀರ್ತಿ ಆರಿಗ, ಉಪಾಧ್ಯಕ್ಷ ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿ ಚಂದ್ರನಾಥ ಜೈನ್, ಸಂಚಾಲಕ ಜಯವರ್ಮ ಕಾಜವ ಮತ್ತು ಕೋಶಾಧಿಕಾರಿ ಅಜಯ್ ಕುಮಾರ್ ಹಾಗೂ ಸರ್ವಸದಸ್ಯರು ಮತ್ತು ಊರಿನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಸಹಕರಿಸಿದರು

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

ಬೆಳ್ತಂಗಡಿ, ಫೆ. 08: ವೇಣೂರು ಕಲ್ಲು ಬಸದಿ ಸಮುಚ್ಚಯದ ಭ|| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಶ್ರೀ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ನಂತರ ಪೂಜ್ಯ ಶ್ರೀಗಳು ಆಶೀರ್ವಚನವನ್ನು ದಯಪಾಲಿಸಿದರು. ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ ದಿ. ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಇಂದ್ರ, ಸಮಿತಿಯ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ಸಮಿತಿಯ ಸರ್ವಸದಸ್ಯರು, ಊರ-ಪರವೂರ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಪದ್ಮಾವತಿ ದೇವಿಯ ಆರಾಧನ ಪೂರ್ವಕ ಪ್ರತಿಷ್ಠೆ ಮತ್ತು ಸರಸ್ವತಿ ದೇವಿ ಆರಾಧನಾ ಪೂರ್ವಕ ಪ್ರತಿಷ್ಠೆ ನೆರವೇರಿತು. ಶ್ರಾವಕ-ಶ್ರಾವಕಿಯರು ಸಹಕರಿಸಿದರು.

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

Article Image

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

ಪ್ರಾಚೀನ ಜೈನ ಕ್ಷೇತ್ರ ಹಾಗೂ ಅಮೂಲ್ಯವಾದ ಪಚ್ಚೆ ಪಾರ್ಶನಾಥ ಸ್ವಾಮಿಯ ಮತ್ತು ಮಹಾಮಾತೆ ಪದ್ಮಾವತಿ ದೇವಿಯ ಪರಿವಾರ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಯಾಗಿರುವ ಬಸದಿಯಲ್ಲಿ ತಾ. 25-01-2026 ರಂದು ವಾರ್ಷಿಕ ಪೂಜಾ ಮಹೋತ್ಸವವು ತುಂಬಾ ವೈಭವದಿಂದ ನೆರವೇರಿತು. ಸಿಂಹನಗದ್ದೆಯ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು. ಸಾನಿಧ್ಯ ವಹಿಸಿದ್ದ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಜೈನ ಪರಂಪರೆಯು ರಾಷ್ಟ್ರೀಯ ಚಿನ್ನೆಗಳ ಆಯ್ಕೆಯ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿ, ನಾವು ಜೈನರು ಎಂಬದನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಕರೆ ನೀಡಿದರು. ಅಲ್ಲದೆ ಪೂಜ್ಯ ಶಾಂತಿಸಾಗರರು ಹೇಳಿದ ಮಾರ್ಗದಲ್ಲಿ ಬಸದಿಯಲ್ಲಿ ಪೂಜೆಗಳನ್ನು ನಡೆಸುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸ ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಮಾತನಾಡಿ ಪೆನುಕೊಂಡ ಕ್ಷೇತ್ರದ ಜೈನ ಇತಿಹಾಸದ ಮಹತ್ವವನ್ನು ವಿವರಿಸಿ ಹೇಳಿದರು. ಅವರನ್ನು ಬಸದಿ ಟ್ರಸ್ಟ್ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೆನುಕೊಂಡ ತಾಲ್ಲೂಕಿನ ತಹಶೀಲ್ದಾರ್ ಸ್ವಾತಿರವರನ್ನು ಹಾಗೂ ಮುಖಂಡರಾದ ವೆಂಕಟೇಶ್ವರಲು ರಾವ್ ಮತ್ತು ಸ್ಥಳೀಯ ಮುಖಂಡರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಅಭಿಯಂತರರಾದ ಹೆಚ್.ಡಿ. ಪಾರ್ಶ್ವನಾಥರವರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಯ್ಕೆಗೊಂಡ ಬಸದಿ ಸಮಿತಿಯ ಪದಾಧಿಕಾರಿಗಳು, ಸ್ವಾಮೀಜಿಯವರ ಸಮ್ಮುಖದಲ್ಲಿ ತಾವು ಬಸದಿ ಅಭಿವೃದ್ಧಿಗೆ ತ್ರಿಕರಣಪೂರ್ವಕವಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಕೈಗೊಂಡರು. ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಆರ್.ಎ. ಸುರೇಶ್‌ ಕುಮಾ‌ರ್‌ರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 108 ಕಳಶಾಭಿಷೇಕ ಮತ್ತು ಪಂಚಾಮೃತ ಅಭಿಷೇಕಗಳ ಮೂಲಕ ವಾರ್ಷಿಕೋತ್ಸವ ಪೂಜೆಯು ಎಲ್ಲರೂ ಮೆಚ್ಚುವಂತೆ ನಡೆಯಿತು. ಆಗಮಿಸಿದ್ದ ಭಕ್ತರಿಗೆ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಸಮರ್ಪಕವಾಗಿ ಏರ್ಪಡಿಸಲಾಗಿತ್ತು.

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

ವೇಣೂರು: ಇಲ್ಲಿನ ಕಲ್ಲು ಬಸದಿ ಸಮಚ್ಚಯದ ಭ| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಫೆ. ೦೮ರಂದು (ನಾಳೆ) ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

First Previous

Showing 1 of 12 pages

Next Last