ಬೆಂಗಳೂರು : ಜಿನಸಮ್ಮಿಲನ ಸೀಸನ್ -09 ಕಬಡ್ಡಿ ಪಂದ್ಯಾಟ
Published Date: 09-Mar-2025 Link-Copied
ಬೆಂಗಳೂರಿನ ಸುಹಾಸ್ತಿ ಜೈನ್ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09 ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಪರಮ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು. “ರಾಜರ್ಷಿ ಚಿನ್ನದ ಹೆಜ್ಜೆ” ಎಂಬ ಶೀರ್ಷಿಕೆಯಲ್ಲಿ ಪರ್ಯಾಯ ಫಲಕವನ್ನು ನೀಡುತಿದ್ದೇವೆ. ಏ. 06ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾ ನಿಯಮಗಳು ಮತ್ತು ಸೂಚನೆ: * ತಂಡದಲ್ಲಿ 7 + 3 ಆಟಗಾರರಿಗೆ ಅವಕಾಶವಿದ್ದು ಕೊನೆಯ ಸಮಯದಲ್ಲಿ ಆಟಗಾರರ ಬದಲಾವಣೆಗೆ ಯಾವುದೇ ಅವಕಾಶ ಇರುವುದಿಲ್ಲ. * ಪಂದ್ಯಗಳನ್ನು ಅಗ್ ಮಾದರಿಯಲ್ಲಿ ಪಂದ್ಯಗಳನ್ನು ಮತ್ತು ಸುಸಜ್ಜಿತ ಮ್ಯಾಟ್ ಗಳಲ್ಲಿ ಅಡಿಸಲಾಗುವುದು. * ಪಂದ್ಯಗಳ ವಿಜೇತರಿಗೆ ಪ್ರಥಮ, ದ್ವಿತೀಯ, ತ್ರಿತೀಯ ಮತ್ತು ಚತುರ್ಥ ಬಹುಮಾನ ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. * ಉತ್ತಮ ರೈಡರ್, ಡಿಫೆಂಡರ್ ಮತ್ತು ಅಲೌಂಡರ್ ಗಳಿಗೆ ಅಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. * ಒಂದು ತಂಡದಲ್ಲಿ ಆಡಿದ ಆಟಗಾರರು ಬೇರೆ ತಂಡದಲ್ಲಿ ಅಡುವಂತಿಲ್ಲ. * ಅಸಭ್ಯವಾಗಿ ವರ್ತಿಸಿದ ತಂಡವನ್ನು ಪಂದ್ಯಾವಳಿಯಿಂದ ಹೊರಗಿಡಲಾಗುವುದು * ನಿರ್ಣಾಯಕರು ಹಾಗೂ ಆಯೋಜಕರ ತೀರ್ಮಾನವೇ ಅಂತಿಮ. * ತಂಡಗಳ ಸೇರ್ಪಡೆ ನಿಗದಿತ ದಿನಾಂಕ 30-03-2025 ರ ಒಳಗೆ ನೋಂದಾಯಿಸಿಕೊಳ್ಳಬೇಕು. * ತಂಡಗಳಿಗೆ ಪ್ರವೇಶ ಶುಲ್ಕ ತಲಾ 2000/- ರೂಗಳು ಆಗಿರುತ್ತದೆ. ಸ್ಥಳ : ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು ಸಂಯೋಜಕರು: ಮಹಾವೀರ್ ಬಿ ಜೆ ಜೈನ್, ದಿಲೀಪ್ ಜೈನ್, ರೋಹಿತ್ ಜೈನ್, ಅಭಿನಂದನ್ ಜೈನ್ ಬಿದರೂರು, ಸುಧೀರ್ ಜೈನ್ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9611403305, 9483691093