Article Image

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

Article Image

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ ಆಚರಣೆಯ ಸಂದರ್ಭದಲ್ಲಿ ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಮತ್ತು ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು ನಂತರ ಉತ್ತಮ ಮಾರ್ದವ ಧರ್ಮದ ಬಗ್ಗೆ ಡಾ. ನೀರಜಾ ನಾಗೇಂದ್ರಕುಮಾರ್ ಅವರು ಉಪನ್ಯಾಸ ನೀಡಿದರು. ಹುಬ್ಬಳ್ಳಿ ಜೈನ ಸಮಾಜದ ಲೋಬೋಗೋಳ್, ವಿದ್ಯಾಧರ್, ಬೀಳಗಿ, ರತ್ನಾಕರ್ ಅಣ್ಣಿಗೇರಿ, ಶಾಂತಿನಾಥ ಹೋತಪೇಟೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

Article Image

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

ಕಾರ್ಕಳ: ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಿಂಹ ಮಾಸದ ಮಂಗಳವಾರದ ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳದ ಶ್ರೀ ಜೈನ ಮಠದಲ್ಲಿ ಜರುಗಿದವು. ವಿಶೇಷ ಆಮಂತ್ರಿತರಾದ ಶ್ರೀ ಕ್ಷೇತ್ರ ಕೊಲ್ಲಾಪುರ, ಶ್ರೀ ದಿಗಂಬರ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಮ್ಮ ಪಾವನ ಸಾನಿಧ್ಯವನ್ನು ನೀಡಿದ ಈ ಪುಣ್ಯ ಸಂದರ್ಭದಲ್ಲಿ ಕಾರ್ಕಳ ಶ್ರೀ ಮಠದ ವತಿಯಿಂದ ಪೂಜ್ಯರನ್ನು ಮಠಾಧೀಶರು ಕಾರ್ಕಳದ ಸಮಸ್ತ ಜೈನ ಬಾಂಧವರ ಪರವಾಗಿ ಅತ್ಯಂತ ಪ್ರೀತಿಯಿಂದ ಗೌರವ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ ಇವರು ಮಾಡಿದರು.

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

Article Image

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

ಉಜಿರೆ: ದಶಲಕ್ಷಣಪರ್ವ ಆಚರಣೆಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ಬರೆದ “ಪರ್ಯೂಷಣ ಪರ್ವ” ಕೃತಿಯನ್ನು ಸೋಮವಾರ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪುಸ್ತಕದಲ್ಲಿರುವ ಉಪಯುಕ್ತ ಆಧ್ಯಾತ್ಮಿಕ ಮಾಹಿತಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕ ಪುಷ್ಪದಂತ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ನಿರಂಜನ್ ಜೈನ್, ಆರ್.ಯನ್. ಪೂವಣಿ ಉಪಸ್ಥಿತರಿದ್ದರು.

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

Article Image

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

ಜೈನ ಧರ್ಮವು ಜಗತ್ತಿನ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು ಜೈನ ಧರ್ಮದ ತತ್ವ ಸಿದ್ಧಾಂತಗಳು ವೈಜ್ಞಾನಿಕ ಹಿನ್ನೆಲೆಯಲ್ಲಿದೆ ಜೈನ ಧರ್ಮೀಯರಲ್ಲಿ ಜೈನ ಧರ್ಮದ ಪ್ರಜ್ಞೆ ಉಳಿಸಿ ಬೆಳೆಸುವಲ್ಲಿ ಜಿನಚೈತ್ಯಾಲಯಗಳು ಪೂರಕ ಮತ್ತು ಪ್ರೇರಕ ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ 600 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಭ| 1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿಯು ಪಾಳುಬಿದ್ದಿತ್ತು ಈದೀಗ ಈ ಸೀಮೆಯ ಜೈನ ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಮತ್ತು ಬಸದಿಗೆ ಸಂಬಂಧಪಟ್ಟ ಎಲ್ಲಾ ಮನೆತನಗಳು ಸೇರಿಕೊಂಡು ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಿದ್ದು ಇದರ ಶಿಲಾನ್ಯಾಸ ಸಮಾರಂಭ ದಿನಾಂಕ 28-08-2024ರಂದು ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಇವರ ದಿವ್ಯ ಹಸ್ತದಿಂದ ಶಿಲಾನ್ಯಾಸ ಮತ್ತು ವಾಸ್ತು ತಜ್ಞ ಪಾದೂರು ಸುದರ್ಶನ್ ಇಂದ್ರ ಇವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು ಈ ಸಂದರ್ಭದಲ್ಲಿ ನಿಡ್ವಾಳ ಬಸದಿಗೆ ಸೇರಿರುವ ಎಲ್ಲಾ ಊರ-ಪರವೂರ ಶ್ರಾವಕ ಶ್ರಾವಕೀಯರು ಭಾಗವಹಿಸಿದ್ದರು.

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

Article Image

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕದಲ್ಲಿ ಜೈನ ಧರ್ಮ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಉತ್ತರ ಕರ್ನಾಟಕದ ಸಂಘಟನೆ ಕೊರತೆಯ ಜೊತೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಸುಹಾಸ್ತಿ ಜೈನ ಮಿಲನ. ಮುಖಂಡ, ಕಲಾವಿದ ಚಿತ್ತ ಜಿನೇಂದ್ರ ತಿಳಿಸಿದರು. ಅವರು ರಾಜಾಜಿನಗರ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ, ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜೈನ ಧರ್ಮದ ಸಮಸ್ಯೆ, ಸಂಘಟನೆ, ಸಂಸ್ಕೃತಿ, ಸಂಸ್ಕಾರ, ಆರ್ಥಿಕ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ಎದ್ದು ಕಾಣುತ್ತಿವೆ, ಜೈನ ಧರ್ಮದ ಪರಿಸ್ಥಿತಿ ಹೀನಾಯವಾಗಿದ್ದು ಸಂಘಟನೆ ಕೊರತೆ ಎದ್ದು ಕಾಣುತ್ತಿವೆ ಈ ಬಗ್ಗೆ ಎಲ್ಲರೂ ಸಂಘಟಿತರಾಗಿ ಧ್ವನಿ ಗೂಡಿಸಬೇಕೆಂದರು. ರಾಜಾಜಿನಗರ ಜೈನ್ ಮಿಲನ್ ಅಧ್ಯಕ್ಷೇ ಮಮತಾ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಧಾ ಬಾಹುಬಲಿ, ಬಾಹುಬಲಿ ಗೌರಜ್ ಸೇರಿದಂತೆ ರಾಜಾಜಿನಗರ ಜೈನ ಮಿಲನ್ ಪದಾಧಿಕಾರಿಗಳು, ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಚಿತ್ತ ಜಿನೇಂದ್ರರವರನ್ನು ಸನ್ಮಾನಿಸಲಾಯಿತು. ಜೆ. ರಂಗನಾಥ - ತುಮಕೂರು

ಅಷ್ಟಾಹ್ನಿಕ ಪೂಜಾ ಕಾರ್ಯಕ್ರಮ

Article Image

ಅಷ್ಟಾಹ್ನಿಕ ಪೂಜಾ ಕಾರ್ಯಕ್ರಮ

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಕಾರ್ಕಳದ ಪರಮಪೂಜ್ಯ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾನುವಾರ ಅಷ್ಟಾಹ್ನಿಕ ಪೂಜೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಗುಣ ಎಸ್.ಡಿ. ಶೆಟ್ಟಿ ಉಜಿರೆ ಅವರ ಮಗಳು ಪ್ರಗತಿ ರಾಜಿತ್ ಶೆಟ್ಟಿ, ಶ್ರೀ ಕ್ಷೇತ್ರ ಚಂದ್ರಪುರಕ್ಕೆ 52 ಜಿನ ಬಿಂಬಗಳಿರುವ ನಂದೀಶ್ವರ ಮಂಟಪವನ್ನು ದಾನವಾಗಿ ನೀಡಿದ್ದು, ಕೊಲ್ಲಾಪುರ ಸಮೀಪ ಉದ್ಗಾವ್‌ನಲ್ಲಿ ಆಚಾರ್ಯ ಶ್ರೀ 108 ವಿಶುದ್ದ ಸಾಗರಮುನಿ ಮಹಾರಾಜರಿಂದ ನಂದೀಶ್ವರ ಮಂಟಪಕ್ಕೆ ಲಘು ಪಂಚ ಕಲ್ಯಾಣ ನಡೆಯಿತು. ಆಷಾಢ ಮಾಸದ ಅಷ್ಟಾಹ್ನಿಕ ಪರ್ವದ ಮೊದಲ ಅಷ್ಟಮಿಯ ದಿನದಂದು ಬೆಳಗ್ಗೆ 10.30ಕ್ಕೆ ಜಿನ ಮಂದಿರದಲ್ಲಿ ವಿಶೇಷ ಆರಾಧನೆ ಹಾಗೂ ವಿಶೇಷ ಪೂಜೆಗಳು ನೆರವೇರಿದ ನಂತರ ವಿರಾಜಮಾನಗೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದರು. ಉಜಿರೆ ಎಸ್.ಡಿ. ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

Article Image

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನೀಡಲಾಗುವ "ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ"ಯನ್ನು ಕನ್ನಡ ವಿಭಾಗದಲ್ಲಿ ಬೆಳಗಾವಿಯ ಹಳ್ಳಿಯ ಸಂದೇಶ ಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ಬೆಳಗಾವಿಯ ಮರಾಠಾ ಮಂದಿರದಲ್ಲಿ ಜ. 18ರಂದು ಬ್ಯಾರಿಸ್ಟರ್‌ ನಾಥ್ ಪೈ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 5 ಸಾವಿರ ರೂ. ನಗದು ಗೌರವ ಧನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಚೇತನ್ ಫಣಿರಾಜ್ ಗೆ ಸನ್ಮಾನ

Article Image

ಚೇತನ್ ಫಣಿರಾಜ್ ಗೆ ಸನ್ಮಾನ

ಹಾಸನ: ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಆವರಣದಲ್ಲಿ ಸಹಕಾರ ಭಾರತಿ ಇತ್ತಿಚಿಗೆ ಆಯೋಜಿಸಿದ್ದ ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನದಲ್ಲಿ, 100 ವರ್ಷ ಪೂರೈಸಿರುವ ಕ್ರೆಡಿಟ್ ಸೊಸೈಟಿಗಳ ಸಹಕಾರ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹಾಸನದ ಜೈನ ಮಂಡಳಿ ಪತ್ತಿನ ಸಹಕಾರ ಸಂಘಕ್ಕೆ 103 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ, ವತಿಯಿಂದ ಸಂಘದ ಅದ್ಯಕ್ಷರಾದ ಹೆಚ್.ಪಿ. ಚೇತನ್ ಫಣಿರಾಜ್ರವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ಸಚಿವರಾದ ಭಗವತ ಕರಾಢ್, ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಜ್ಯೋತಿಂದರ್ ಮೆಹ್ತಾರವರು ಮತ್ತು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷರಾದ ದೀನಾನಾಥ್ ಠಾಕೂರ್ ಇತರರು ಉಪಸ್ಥಿತರಿದ್ದರು.

First Previous

Showing 1 of 1 pages

Next Last