Article Image

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

Article Image

ಅ. 24: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ಅ. 24 ರಂದು ಶುಕ್ರವಾರ ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳು ಪೂಜ್ಯ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡುವರು. ಸಭಾಕಾರ್ಯಕ್ರಮ: ಅಪರಾಹ್ನ ನಾಲ್ಕು ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ತುಮಕೂರಿನ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶಾಸಕರುಗಳಾದ ಹರೀಶ್ ಪೂಂಜ, ಕೆ. ಪ್ರತಾಪಸಿಂಹ ನಾಯಕ್ ಮತ್ತು ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ಶುಭಾಶಂಸನೆ ಮಾಡುವರು. ಹಿರಿಯ ನೌಕರರ ಸನ್ಮಾನ ಹಾಗೂ ಹೆಗ್ಗಡೆಯವರು ಹೊಸ ಯೋಜನೆಗಳನ್ನು ಪ್ರಕಟಿಸುವರು. ಹಬ್ಬದ ವಾತಾವರಣ: ದೀಪಾವಳಿ ಹಬ್ಬದ ಜೊತೆಗೆ ಧರ್ಮಸ್ಥಳದಲ್ಲಿ ಪಟ್ಟಾಭಿಷೇಕದ ವರ್ಧಂತ್ಯುತ್ಸವದ ಅಂಗವಾಗಿ ಎಲ್ಲೆಲ್ಲೂ ಸಂಭ್ರಮ- ಸಡಗರದ ವಾತಾವರಣವಿದೆ. ಬಸದಿ, ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ ಹಾಗೂ ವಸತಿಛತ್ರಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳು ಮತ್ತು ಪ್ರಾಕೃತಿಕ ಪರಿಕರಗಳಿಂದ ಅಲಂಕರಿಸಿದ್ದು, ಕಣ್ಮನ ಸೆಳೆಯುತ್ತಿವೆ. 1968ರ ಅಕ್ಟೋಬರ್ 24 ರಂದು ಧರ್ಮಸ್ಥಳದ ಇಪ್ಪತ್ತೊಂದನೆ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಸಂಸ್ಥೆಗಳು, ಕೆರೆಗಳಿಗೆ ಕಾಯಕಲ್ಪ, ಉಚಿತ ಸಾಮೂಹಿಕ ವಿವಾಹ ಸಮಾರಂಭ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಆಯುರ್ವೇದಕ್ಕೆ ಪ್ರೋತ್ಸಾಹ, ಶ್ರದ್ಧಾಕೇಂದ್ರಗಳ ಸ್ವಚ್ಛತಾ ಅಭಿಯಾನ, ರುದ್ರಭೂಮಿ ಮೊದಲಾದ ವಿನೂತನ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಮೂಲಕ ಉನ್ನತ ಸೇವೆ-ಸಾಧನೆ ಮಾಡಿ ಎಲ್ಲರ ಪ್ರೀತಿ-ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

Article Image

ಬೆಳ್ತಂಗಡಿ: ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮ

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗುಂಡದ ಬಸದಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರದ ನಿಮಿತ್ತ ನಿರ್ಮಾಣಗೊಂಡ ನೂತನ ಶಿಲಾಮಯ ಬಸದಿಯ ಮುಖ್ಯ ದ್ವಾರದ ಕಲ್ಲಿನ ದಾರಂದವನ್ನು‌ ಇಡುವ ಕಾರ್ಯಕ್ರಮವು ಇಂದು ಬೆಳಿಗ್ಗೆ ಕಾರ್ಕಳ ಶ್ರೀ ಜೈನಮಠದ ಪರಮ ಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಗಣ್ಯರು, ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.

ಕಾರ್ಕಳ: ದತ್ತಿನಿಧಿ ಪ್ರಶಸ್ತಿ ಪ್ರದಾನ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನಶಾಲೆ

Article Image

ಕಾರ್ಕಳ: ದತ್ತಿನಿಧಿ ಪ್ರಶಸ್ತಿ ಪ್ರದಾನ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನಶಾಲೆ

2025 - 26ನೇ ಸಾಲಿನಲ್ಲಿ ಜರುಗಿದ ಧಾರ್ಮಿಕ ಪಾಠ ಪರೀಕ್ಷೆ, ಶೈಕ್ಷಣಿಕದಲ್ಲಿ ಉನ್ನತ ಸ್ಥಾನ ಹೊಂದಿದ, ನಾಯಕತ್ವ ಗುಣವುಳ್ಳ, ಹೊಂದಾಣಿಕೆ ಹೊಂದಿದ ಒಬ್ಬ ವಿದ್ಯಾರ್ಥಿನಿಯನ್ನು ಹೇಮಾವತಿ ಅಮ್ಮನವರ ನೇತೃತ್ವದ ಆಡಳಿತ ಮಂಡಳಿಯ ಸದಸ್ಯರು ಆಯ್ಕೆ ಮಾಡಿ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತದೆ.ಈ ಪ್ರಯುಕ್ತ ಶ್ರೀ ಬಾಹುಬಲಿ ಶ್ರಾವಿಕಾಶ್ರಮ ದಾನ ಶಾಲೆ, ಕಾರ್ಕಳ ಇಲ್ಲಿಯ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಪದ್ಮಮಾಲಿನಿ ಕೆ.ಎ., ಇಡಕಿಣಿ, ಕಳಸ ಇವರಿಗೆ ಶ್ರವಣಬೆಳಗೊಳ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಧತ್ತಿನಿಧಿ ಪ್ರಶಸ್ತಿ ನೀಡಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಅಜಿತ್ ಕುಮಾರ್ ಕೊಕ್ರಡಿ, ಆಶ್ರಮದ ಆಡಳಿತ ಮಂಡಳಿಯ ಮಾಲತಿ ವಸಂತ್ ರಾಜ್, ಸುಮಾಲಿನಿ ವಿಜಯ್ ಕುಮಾರ್ ಅಜ್ರಿ, ಕಾರ್ಯದರ್ಶಿಗಳಾದ ಶಿಶುಪಾಲ್ ಪುವಣಿ ಹಾಗೂ ಜಯಲಕ್ಷ್ಮಿ ಅಜಿತ್ ಕುಮಾರ್ ರವರು, ಕಾರ್ಕಳ ಜೈನಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬರವರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವೇದಿಕೆಯಲ್ಲಿರುವವರು ಪದ್ಮಮಾಲಿನಿಯವರಿಗೆ, ದತ್ತಿನಿಧಿ ಪ್ರಶಸ್ತಿ ಪತ್ರ, ಶಾಲು, ಹಾರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಹಾಗೆಯೇ ದಶಲಕ್ಷಣ ಪರ್ವದ ಆರಂಭದಂದು ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ದಾನಶಾಲೆ, ಕಾರ್ಕಳ ಇವರ ಪಾವನ ಸಾನಿಧ್ಯದಲ್ಲಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆಗೊಂಡಿತು ಹಾಗೆಯೇ ಮಂಗಲ ಪ್ರವಚನವನ್ನು ದಯಪಾಲಿಸಿದರು. ಶೈಕ್ಷಣಿಕ ಮತ್ತು ಧಾರ್ಮಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಪೂಜ್ಯ ಸ್ವಾಮೀಜಿಯವರಿಂದ ನೀಡಲಾಯಿತು ಈ ಸುಸಂದರ್ಭದಲ್ಲಿ ಪರಮಪೂಜ್ಯ 108 ಮುನಿಶ್ರೀ ಮಹಿಮಾ ಸಾಗರ ಮುನಿ ಮಹಾರಾಜರು ಮಕ್ಕಳ ಮೇಲಿನ ಅಭಿಮಾನದಿಂದ ಹತ್ತು ದಿನದ ಭೋಜನ ವ್ಯವಸ್ಥೆಯನ್ನು ಮಾಡಿಸಿರುತ್ತಾರೆ.

ಬಿ. ಪ್ರಮೋದ್ ಕುಮಾರ್‌ರವರಿಗೆ ಶ್ಲಾಘನೀಯ ಸೇವಾ ಪದಕ

Article Image

ಬಿ. ಪ್ರಮೋದ್ ಕುಮಾರ್‌ರವರಿಗೆ ಶ್ಲಾಘನೀಯ ಸೇವಾ ಪದಕ

ಬೆಂಗಳೂರು, ಆ. 30: ರಾ‌ಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭ 2025 ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯಪಾಲರಾದ ಥಾಮರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಹಾಸನ ಜಿಲ್ಲೆ ಸಕಲೇಶಪುರ ಉಪ-ವಿಭಾಗದ ಡಿವೈಎಸ್‌ಪಿ ಆಗಿರುವ ಬಿ. ಪ್ರಮೋದ್ ಕುಮಾರ್‌ರವರಿಗೆ ಮಾನ್ಯ ರಾ‌ಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ-ಗಣರಾಜ್ಯೋತ್ಸವ ದಿನಾಚರಣೆ-2023ನ್ನು ನೀಡಿ ಗೌರವಿಸಿರುತ್ತಾರೆ.

ಪಿ. ವೀರೇಂದ್ರ ಕುಮಾರ್‌ರವರಿಗೆ ಶ್ಲಾಘನೀಯ ಸೇವಾ ಪದಕ

Article Image

ಪಿ. ವೀರೇಂದ್ರ ಕುಮಾರ್‌ರವರಿಗೆ ಶ್ಲಾಘನೀಯ ಸೇವಾ ಪದಕ

ಬೆಂಗಳೂರು, ಆ. 30: ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭ 2025 ಕಾರ್ಯಕ್ರಮದಲ್ಲಿ ರಾಜ್ಯದ ರಾಜ್ಯಪಾಲರಾದ ಥಾಮರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಬೆಂಗಳೂರು ಕೆಎಲ್‌ಎ ಡಿವೈಎಸ್‌ಪಿ ಆಗಿರುವ ಪಿ. ವೀರೇಂದ್ರ ಕುಮಾರ್‌ರವರಿಗೆ ಪೋಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷತೆ, ವೃತ್ತಿ ನಿಷ್ಠೆ, ಪ್ರಾಮಾಣಿಕತೆಯಿಂದ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕ-ಗಣರಾಜ್ಯೋತ್ಸವ ದಿನಾಚರಣೆ-2023ನ್ನು ನೀಡಿ ಗೌರವಿಸಿರುತ್ತಾರೆ.

ಸಾವಿರ ಕಂಬದ ಬಸದಿಗೆ ಬಂದ ಐರಾವತ

Article Image

ಸಾವಿರ ಕಂಬದ ಬಸದಿಗೆ ಬಂದ ಐರಾವತ

ಮೂಡುಬಿದಿರೆ: ಪ್ರಾಣಿ ಪ್ರಿಯರ ಸಂಘಟನೆ "ಪೇಟಾ"ದ ಮುತುವರ್ಜಿಯಲ್ಲಿ ಬಾಲಿವುಡ್ ತಾರೆ ರವೀನಾ ಟಂಡನ್ ಮತ್ತು ಆಕೆಯ ಪುತ್ರಿ ರಾಶಾ ತಾದಾನಿ ಕೊಡುಗೆಯಾಗಿ ನೀಡಿದ "ಐರಾವತ" ಜೈನಕಾಶಿ ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಯ ಆವರಣಕ್ಕೆ ಶುಕ್ರವಾರ ಸೇರಿಕೊಂಡಿದೆ. ಧಾರ್ಮಿಕ ಕೇಂದ್ರಗಳು ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಪಳಗಿಸಿದ ಆನೆಗಳನ್ನು ಬಳಸಿ ಅವುಗಳಿಗೆ ತನ್ನ ಕುಟುಂಬದೊಂದಿಗೆ ಕಾಡಿನ ಸಹಜ ಬದುಕನ್ನು ಕಸಿದುಕೊಂಡು ಹಿಂಸೆ ನೀಡಿದಂತಾಗುತ್ತದೆ ಎಂದು ಅದರ ವಿರುದ್ಧ ನೈಜ್ಯ ಆನೆಗಳನ್ನೇ ಹೋಲುವ ಮೆಕ್ಯಾನಿಕಲ್ ಆನೆಗಳನ್ನು ಪ್ರೋತ್ಸಾಹಿಸಿ ಎನ್ನುತ್ತಿರುವ ಪೇಟಾ ಇಂಡಿಯಾದ ಮುಂಬೈ ಮೂಲದ ಪ್ರೇರಣೆಯಿಂದ ಬಾಲಿವುಡ್ ತಾರಾ ಕುಟುಂಬದ ಕೊಡುಗೆಯಾಗಿ ಈ ಐರಾವತ ಒದಗಿ ಬಂದಿದೆ. ಜೈನಕಾಶಿಯಲ್ಲಿ ಚಾತುರ್ಮಾಸ ನಿರತ 108 ಗುಲಾಬ್ ಭೂಷಣ ಮುನಿ ಮಹಾರಾಜರು ನೂತನ ಐರಾವತವನ್ನು ಅನಾವರಣಗೊಳಿಸಿದರು. ಪಟ್ಟಾಭಿಷೇಕ ರಜತ ಮಹೋತ್ಸವ ಸಂಭ್ರಮದಲ್ಲಿರುವ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ , ಪಟ್ನಶೆಟ್ಟಿ ಸುಧೇಶ್ ಕುಮಾರ್, ಎಂ ಬಾಹುಬಲಿ ಪ್ರಸಾದ್, ಪೇಟಾ ಮುಂಬೈ ಘಟಕದ ಪದಾಧಿಕಾರಿಗಳಾದ ಅನುಷ್ಕಾ ಯಾದವ್, ಸುಧಾಕರ್ ರಾವ್ ಕರ್ನಾಲ್, ಶುಭಂ ಅಗರ್ವಾಲ್, ರೋಹನ್ ಸರ್ವಪ್ರಿಯ, ಮಹೆಕ್ ಜುನೇಜಾ ಸಹಿತ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ದೇಶದಲ್ಲೇ ಮೊದಲ ಬಸದಿಗೆ ಐರಾವತ! ಐತಿಹಾಸಿಕ ಸಾವಿರ ಕಂಬದ ಬಸದಿಯಲ್ಲಿ ನೆಲೆ ಕಂಡಿರುವ ಮೆಕ್ಯಾನಿಕಲ್ ಆನೆ ಐರಾವತ ದೇಶದಲ್ಲೇ ಮೊದಲ ಬಾರಿಗೆ ಜೈನ ಬಸದಿಗೆ ಬಂದಂತಾಗಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಬಸದಿ ಎನ್ನುವ ಹಿರಿಮೆ ಸಾವಿರ ಕಂಬದ ಬಸದಿಗೆ ಲಭಿಸಿದೆ. ಪೇಟಾ ಧಾರ್ಮಿಕ ಸಂಸ್ಥೆಗಳಿಗೆ ಒದಗಿಸುತ್ತಿರುವ 12 ನೆಯ ಹಾಗೂ ಮಂಗಳೂರು ವಲಯಕ್ಕೆ ದೊರೆತ ಮೊದಲ ಐರಾವತ ಇದಾಗಿದೆ. ಮೂರು ಮೀಟರ್ ಎತ್ತರ 800 ಕೆಜಿ ಭಾರ ಈ ಮೆಕ್ಯಾನಿಕಲ್ ಐರಾವತವನ್ನು ರಬ್ಬರ್, ಫೈಬರ್, ಮೆಟಲ್, ಮೆಶ್, ಫೋಮ್, ಕಬ್ಬಿಣ ಹಾಗೂ ಐದು ಮೋಟಾರುಗಳ ನೆರವಿನಿಂದ ನಿರ್ಮಿಸಲಾಗಿದೆ. ವಿದ್ಯುತ್ ಸಂಪರ್ಕ ನೀಡಿ ಅದನ್ನು ನೈಜ್ಯ ಆನೆಯಂತೆ ಬಳಸಿಕೊಳ್ಳಲು ಸಾಧ್ಯವಿದೆ. ಚಕ್ರಗಳ ನೆರವಿನಿಂದ ರಸ್ತೆಯಲ್ಲೂ ಒಡಾಡಿಬಹುದಾಗಿದೆ. 2023ರಲ್ಲಿ ಇಂತಹ ಸಾಹಸಕ್ಕೆ ಮುಂದಾದ ಪೇಟಾ ದಕ್ಷಿಣ ಭಾರತದ ಹಲವೆಡೆ ಮೆಕ್ಯಾನಿಕಲ್ ಆನೆಗಳನ್ನು ಹಸ್ತಾಂತರಿಸಿದೆ.

ನ್ಯಾಯವಾದಿ ಶ್ವೇತಾ ಕೆ. ಅವರ ನೂತನ ಕಚೇರಿ ಉದ್ಘಾಟನೆ

Article Image

ನ್ಯಾಯವಾದಿ ಶ್ವೇತಾ ಕೆ. ಅವರ ನೂತನ ಕಚೇರಿ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ನ್ಯಾಯವಾದಿ ಮತ್ತು ನೋಟರಿ ಶ್ವೇತಾ ಕೆ. ಅವರ ನೂತನ ಕಚೇರಿಯು ಸ್ವರಾಜ್ಯ ಮೈದಾನದ ಮುಂಭಾಗದಲ್ಲಿರುವ ಕೋರ್ಟ್ ರಸ್ತೆಯ ಶೆಟ್ಟೀಸ್ ರಾಮಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ಆ. 29ರಂದು ಅಪರಾಹ್ನ ಉದ್ಘಾಟನೆಗೊಂಡಿತು. ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್ ಅವರು ದೀಪ ಪ್ರಜ್ವಲನದ ಮೂಲಕ ನೂತನ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ., ನ್ಯಾಯವಾದಿಗಳಾದ ಎಂ. ಆರ್. ಬಲ್ಲಾಳ್, ಕೆ.ಆರ್. ಪಂಡಿತ್, ದಿವಿಜೇಂದ್ರ, ಎಂ.ಎಸ್‌. ತಂತ್ರಿ, ಕಟ್ಟಡದ ಮಾಲೀಕ ಪಾಲಡ್ಕ ಹರಿಪ್ರಸಾದ್ ಶೆಟ್ಟಿ, ಹಿರಿಯ ಉದ್ಯಮಿ ಕೆ. ಶ್ರೀಪತಿ ಭಟ್, ಪ್ರಭಾತ್ ಸಿಲ್ಸ್‌ನ ಪ್ರಭಾಚಂದ್ರ ಜೈನ್‌, ರಾಜವರ್ಮ ಬೈಲಂಗಡಿ, ಟೆಂಪಲ್ ಟೌನ್ ರೋಟರಿ ಅಧ್ಯಕ್ಷ ಹರೀಶ್‌ ಎಂ.ಕೆ.. ನಿಕಟಪೂರ್ವ ಅಧ್ಯಕ್ಷ ಪೂರ್ಣಚಂದ್ರ ಜೈನ್‌ ಮತ್ತಿತರರು ಉಪಸ್ಥಿತರಿದ್ದರು. ನ್ಯಾಯವಾದಿ ಶ್ವೇತಾ ಕೆ. ಮತ್ತು ಪ್ರಮಯಿ ಅತಿಥಿಗಳನ್ನು ಗೌರವಿಸಿದರು. ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.

ಮೂಡುಬಿದಿರೆ: ರತ್ನತ್ರಯ ಸೂತ್ರ ಧಾರಣೆ ಮತ್ತು ಬಸದಿಗಳಲ್ಲಿ ವಿಶೇಷ ಪೂಜೆ

Article Image

ಮೂಡುಬಿದಿರೆ: ರತ್ನತ್ರಯ ಸೂತ್ರ ಧಾರಣೆ ಮತ್ತು ಬಸದಿಗಳಲ್ಲಿ ವಿಶೇಷ ಪೂಜೆ

ಮೂಡುಬಿದಿರೆ: ಇಲ್ಲಿಯ ಶ್ರೀ ಜೈನ ಮಠದಲ್ಲಿ ಆ. 09ರಂದು ನೂಲ ಹುಣ್ಣಿಮೆ ಶ್ರಾವಣದ ದಿನ ಆಚರಿಸುವ ರತ್ನತ್ರಯ ಸೂತ್ರ ಧರಿಸುವ ಹಬ್ಬವನ್ನು ಆಚರಿಸಲಾಯಿತು. ಕಾಶಿಯ 18 ಬಸದಿಗಳಲ್ಲಿ ವಿಶೇಷ ಪೂಜೆ, ಹವನ ಮೂಲಕ ಶ್ರಾವಕರು ರತ್ನತ್ರಯ ಸೂತ್ರ ಧರಿಸಿದರು. ಆಚಾರ್ಯ ಗುಲಾಬ್ ಭೂಷಣ ಮುನಿರಾಜ್ ಉಪಸ್ಥಿತರಿದ್ದರು. ಧರ್ಮ ನಿರತರಾದವರಿಗೆ ರಕ್ಷಣೆ ನೀಡುವ ಭಾವನೆ ಮಾಡುವ ದಿನ ಎಂದು ಇಂದು ಶ್ರೀ ಮಠದಲ್ಲಿ ಹವನದ ಬಳಿಕ ಜನಿವಾರ ಧಾರಣೆ ಸಂದರ್ಭದಲ್ಲಿ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿ ತಮ್ಮ ಅನುಗ್ರಹ ಆಶೀರ್ವಾದದಲ್ಲಿ ತಿಳಿಸಿದರು. ಅಪರಾಹ್ನ ಶ್ರೀ ಮಠದ ಶಾಂತಿ ಭವನದಲ್ಲಿ ಶಾಂತಿ ಚಕ್ರ ಆರಾಧನೆಯ 16ನೇ ಆರಾಧನೆ ಸಮಾಪನಗೊಂಡಿತು. ಆಚಾರ್ಯರ ಭಟ್ಟಾರಕರ ಪಾದ ಪೂಜೆ ಆರತಿ ಮಾಡಿ ಭಕ್ತವೃಂದ ಧರ್ಮಲಾಭಗಳಿಸಿದರು. ಅಭಯ ಚಂದ್ರ ಜೈನ್, ತಿಲಕ್ ಪ್ರಸಾದ್, ದರ್ಶನ್ ಶೆಟ್ಟಿ, ಸಂಜಯಂತ ಕುಮಾರ್, ಸುದೇಶ್ ಬೆಟ್ ಕೇರಿ, ಶ್ವೇತಾ ಜೈನ್ ಸೂರಜ್, ಮೊದಲಾದವರು ಉಪಸ್ಥಿತರಿದ್ದರು. ಉ.ಪ್ರ, ಮಹಾರಾಷ್ಟ್ರ, ಮ.ಪ್ರ, ಇಂದೂರಿನ ನೂರಾರು ಸಂಖ್ಯೆಯ ಭಕ್ತರು ಶ್ರೀಗಳಿಂದ ಜನಿವಾರ ಹಾಗೂ ರಕ್ಷಾ ಸೂತ್ರ ಪಡೆದರು.

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

Article Image

ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಮಹಿಳಾ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು( ಗ್ರಾ)ಮತ್ತು ಇನ್ನರ್ ವೀಲ್ ಕ್ಲಬ್ ಇವರ ಸಹಯೋಗದೊಂದಿಗೆ ದ.ಕ.ಜಿ.ಪ. ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೈನ್ ಇದರ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪುಚ್ಚೇರಿ ಕಟ್ಟೆ ಅಂಗನವಾಡಿ ಕಾರ್ಯಕರ್ತೆ ವಿಜಯರವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಿಗಿ ಇವರು ಸ್ತನ್ಯಪಾನ ಸಪ್ತಾಹವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಸ್ತನ್ಯಪಾನದ ಮಹತ್ವ ಹಾಗೂ ಎಲ್ಲಾ ಮಹಿಳೆಯರಿಗೆ ಇದರ ಅರಿವನ್ನು ಮೂಡಿಸುವಲ್ಲಿ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಜವಾಬ್ದಾರಿಗಳನ್ನು ತಿಳಿಸುತ್ತಾ ಇನ್ನರ್ ವೀಲ್ ಕ್ಲಬ್ ನ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆಯಾಗಿರುವ ನೋಟರಿ ನ್ಯಾಯವಾದಿಗಳಾದ ಶ್ವೇತ ಜೈನ್ ಸ್ತನ್ಯಪಾನವು ಹೇಗೆ ಶಿಶುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂಬುದನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಸಮುದಾಯ ಆರೋಗ್ಯ ಕೇಂದ್ರ ಮೂಡುಬಿದ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಎದೆ ಹಾಲಿನಿಂದ ತಾಯಿಗೆ ಮತ್ತೆ ಮಗುವಿಗೆ ಆಗುವ ಪ್ರಯೋಜನಗಳು ಎದೆ ಹಾಲು ಉಣಿಸುವಿಕೆಗೆ ಕುಟುಂಬ ಹಾಗೂ ಸಮಾಜದ ಪ್ರೋತ್ಸಾಹದ ಅಗತ್ಯತೆ, ಸ್ವಚ್ಛತಾ ಕ್ರಮಗಳು, ಪಾಲಿಸಬೇಕಾದ ಆಹಾರ ಕ್ರಮಗಳು ಮುಂತಾದ ಸವಿವರ ಮಾಹಿತಿಯನ್ನು ನೀಡಿದರು. ಪುರಸಭಾ ಸದಸ್ಯರಾದ ಪುರಂದರ ದೇವಾಡಿಗರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷೆತೆ ಇದ್ದ ಪುರಸಭಾ ಸದಸ್ಯರಾದ ಶಕುಂತಲಾ ದೇವಾಡಿಗರವರು ಕಾರ್ಯಕ್ರಮದ ಆಯೋಜನೆ ಹಾಗೂ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು. ಇನ್ನರ್ ವೀಲ್ ಕ್ಲಬ್ ವತಿಯಿಂದ ಆಗಮಿಸಿದ ಎಲ್ಲಾ ತಾಯಂದಿರಿಗೆ ಪ್ರೋತ್ಸಾಹದಾಯಕ ಸ್ಮರಣಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಅನಿತಾ ಪೃಥ್ವಿರಾಜ್, ಸಂಯೋಜಕಿ ಸುಜಾತ ಜೈನ್, ಶಾಲಿನಿ ನಾಯಕ್, ಪ್ರಕಾಶಿನಿ ಹೆಗ್ಡೆ, ಸುಜಯ ವೇದ ಕುಮಾರ್, ರತ್ನ ಪರಾಡ್ಕರ್, ವೀಣಾ ಜೈನ್, ಸ್ವಾತಿ ಬೋರ್ಕರ್ ಉಪಸ್ಥಿತರಿದ್ದರು. ಹಿರಿಯ ಮೇಲ್ವಿಚಾರಕಿ ಕಾತ್ಯಾಯಿನಿ ಶಾಲಾ ಸಹ ಶಿಕ್ಷಕಿ ಪ್ಲಾವಿಯಾ ಅಂಗನವಾಡಿ ಕಾರ್ಯಕರ್ತೆಯರಾದ ಸುಮತಿ, ವಿಜಯ, ಹೇಮಾವತಿ, ನಿರ್ಮಲ, ಪ್ರಿಯದರ್ಶಿನಿ ಎಸ್ ಜೈನ್, ವಿದ್ಯಾ, ಸಹಾಯಕಿ ಮಂಜವ್ವ, ಆರೋಗ್ಯ ಇಲಾಖೆಯ ಸಿಬ್ಬಂದಿ ಅನ್ನಪೂರ್ಣ ಬಾಲ ವಿಕಾಸ ಸಮಿತಿ ಸದಸ್ಯರು, ತಾಯಂದಿರು, ಪುಟಾಣಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿಯಾದ ಕಾತ್ಯಾಯಿನಿಯವರು ಎಲ್ಲರನ್ನು ಸ್ವಾಗತಿಸಿ ಪ್ರಿಯದರ್ಶಿನಿ ಎಸ್ ಜೈನ್ ನಿರೂಪಿಸಿ, ಸುಮತಿ ಧನ್ಯವಾದವಿತ್ತರು.

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನೆ

Article Image

ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದನೆ

ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರು ಮೂಡಬಿದ್ರಿ ಶ್ರೀ ದಿಗಂಬರ ಜೈನ ಮಠದಲ್ಲಿ ನಡೆದ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳು ಕರ್ನಾಟಕ ಸರಕಾರಿ ನಿವೃತ್ತಿ ನೌಕರರ ಸಂಘ ಬೆಂಗಳೂರು ಹಾಗೂ ಬೆಳ್ತಂಗಡಿ ತಾಲೂಕು ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಆದ ಡಾ. ಕೆ. ಜಯಕೀರ್ತಿ ಜೈನ್ ರವರಿಗೆ ಅಭಿನಂದಿಸಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಸದಸ್ಯರಾದ ಪರಿಮಳ, ಬಾಹುಬಲಿ ಪ್ರಸಾದ್, ಉಪಸ್ಥಿತರಿದ್ದರು.

ಕರಿಮಣೇಲು ಗುತ್ತು ಸನತ್ ಕುಮಾರ್ ಸೇಮಿತ ಅವರಿಗೆ ಸನ್ಮಾನ

Article Image

ಕರಿಮಣೇಲು ಗುತ್ತು ಸನತ್ ಕುಮಾರ್ ಸೇಮಿತ ಅವರಿಗೆ ಸನ್ಮಾನ

ನಾರಾವಿ ಜೂ. 7: ನಾರಾವಿ ರಾಮೇರುಗುತ್ತು ಪದ್ಮರಾಜ ಅಧಿಕಾರಿ ಮತ್ತು ಕರಿಮಣೇಲುಗುತ್ತು ಅನಂತಮತಿಯವರ ದ್ವಿತೀಯ ಪುತ್ರರಾದ ಕರಿಮಣೇಲುಗುತ್ತು ಕೆ. ಸನತ್ ಕುಮಾರ್ ಸೇಮಿತರವರ 96ನೇ ಹುಟ್ಟುಹಬ್ಬದ ಪ್ರಯುಕ್ತ ಭ| ಶ್ರೀ ೧೦೦೮ ಧರ್ಮನಾಥ ಸ್ವಾಮಿಯಲ್ಲಿ ನವಗ್ರಹ ಶಾಂತಿ ಮತ್ತು ಪದ್ಮಾವತಿ ಅಮ್ಮನವರಿಗೆ ಲಕ್ಷ ಹೂವಿನಪೂಜೆ ನಡೆದು ಬಳಿಕ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಮತ್ತು ಬಸದಿಯ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಊರ-ಪರವೂರ ಗಣ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಡಾ. ಜೀವಂಧ‌ರ್ ಬಳ್ಳಾಲ್ ಅವರಿಗೆ ಸಮ್ಮಾನ

Article Image

ಡಾ. ಜೀವಂಧ‌ರ್ ಬಳ್ಳಾಲ್ ಅವರಿಗೆ ಸಮ್ಮಾನ

ಕೊಡಿಯಾಲ್‌ಬೈಲ್‌: ಭಾರತೀಯ ಜೈನ್ ಮಿಲನ್ ಮಂಗಳೂರು ಆಶ್ರಯದಲ್ಲಿ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಡಾ| ಜೀವಂಧ‌ರ್ ಬಳ್ಳಾಲ್ ಅವರನ್ನು ಸಮ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ಮಂಗಳೂರು ಇದರ ಅಧ್ಯಕ್ಷ ರತ್ನಾಕರ ಜೈನ್, ಪ್ರಮುಖರಾದ ಸುದರ್ಶನ್ ಜೈನ್, ಸುಕುಮಾ‌ರ್ ಬಳ್ಳಾಲ್, ಮಿಲನ್, ವೈಶಾಲಿ ಪಡಿವಾಳ್, ಪುಷ್ಪರಾಜ್ ಜೈನ್, ಸನತ್ ಕುಮಾರ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಹೊಂಬುಜ: ಶ್ರುತ ಪಂಚಮಿ ಆಚರಣೆ

Article Image

ಹೊಂಬುಜ: ಶ್ರುತ ಪಂಚಮಿ ಆಚರಣೆ

ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪೂರ್ವ ಪರಂಪರೆಯಂತೆ ನಡೆದುಕೊಂಡು ಬಂದಿರುವ 'ಶ್ರುತ ಪಂಚಮಿ ಮಹೋತ್ಸವ' ವನ್ನು ಮೇ. 31, 2025ರ ಶನಿವಾರದಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನೆರವೇರಲಿದೆ. ಅಂದು 8 ವರ್ಷ ಮೇಲ್ಪಟ್ಟ ಜೈನ ಬಾಲಕ-ಬಾಲಕಿಯರಿಗೆ ಸಾಮೂಹಿಕ ವ್ರತೋಪದೇಶ ಹಾಗೂ ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಶೇಷ ಜಿನಪೂಜೆಯೊಂದಿಗೆ ಶಾಸ್ತ್ರಗಳನ್ನು ಪೂಜಿಸಿ, ಪಠಿಸಿ ಜಿನವಾಣಿಗೆ ಭಕ್ತಿಭಾವದ ನಮನ ಸಲ್ಲಿಸಲಾಗುವುದು. ಸದ್ಧರ್ಮ ಬಾಂಧವರು ಈ ಪೂಜಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ. ವ್ರತೋಪದೇಶ ಹಾಗೂ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವವರು ಶ್ರೀಮಠದ ಆಡಳಿತ ಕಾರ್ಯಾಲಯದಲ್ಲಿ ಸಂಪರ್ಕಿಸಬೇಕಾಗಿ ವಿನಂತಿ. ಸಂಪರ್ಕ: 08185-262722, 9481453653, 9483801460

'ಭುವನವಾಹಿನಿ' ಅಂಕಣಕಾರ ಎಂ.ರತ್ನ ಕುಮಾರ್ ರಿಗೆ ಕ.ಸಾ.ಪ. ಸನ್ಮಾನ

Article Image

'ಭುವನವಾಹಿನಿ' ಅಂಕಣಕಾರ ಎಂ.ರತ್ನ ಕುಮಾರ್ ರಿಗೆ ಕ.ಸಾ.ಪ. ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ 'ಹಿರಿಯ ಕವಿ ಮನೆ ಭೇಟಿ' ಸರಣಿ ಕಾರ್ಯಕ್ರಮದನ್ವಯ ಈ ಬಾರಿ ಕನ್ನಡದ ದೈನಿಕಗಳಾದ ನವ ಭಾರತ, ಉದಯವಾಣಿ, ಹೊಸದಿಗಂತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಜೈನ ಮಾಸಿಕ 'ಭುವನವಾಹಿನಿ' ಪತ್ರಿಕೆಯ ಅಂಕಣಕಾರರಾಗಿರುವ ಹಿರಿಯ ಕನ್ನಡ, ತುಳು ಸಾಹಿತಿ ರತ್ನ ಕುಮಾರ್ ಎಂ. ಅವರ ಮನೆಗೆ ಭೇಟಿ ನೀಡಿ ಅವರನ್ನು ಹಾರ, ಶಾಲು, ಪೇಟ, ಶ್ರೀಫಲಾದಿಗಳನ್ನು ಸಮರ್ಪಿಸಿ, ಸನ್ಮಾನಿಸಿ, ಪುಸ್ತಕ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರತ್ನ ಕುಮಾರರು, ತಾನು ಬೆಳೆದು ಬಂದ ಹಾದಿಯನ್ನು ಹಂಚಿಕೊಂಡು "ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಸಾಹಿತಿಗಳಂತೂ ಹೊಸ ದೃಷ್ಟಿ, ಹೊಸ ಸೃಷ್ಟಿಯೊಂದಿಗೆ ಹೊಸ ಕೊಡುಗೆಗಳನ್ನು ನೀಡುತ್ತಲೇ ಇರಬೇಕು. ಹಿರಿಯ ಕವಿಗಳನ್ನು ಮನೆಗೇ ಬಂದು ಆತ್ಮೀಯವಾಗಿ ಸನ್ಮಾನಿಸುವ ಪರಿಷತ್ತಿನ ಕಾರ್ಯಕ್ರಮ ಅಭಿನಂದನೀಯ" ಎಂದು ನುಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಕ. ಸಾ. ಪ. ಕೇಂದ್ರ ಮಾರ್ಗದರ್ಶನ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗಣೇಶ ಪ್ರಸಾದಜೀ ರತ್ನ ಕುಮಾರ್ ರ ಬದುಕು ಬರಹಗಳ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಪರಿಷತ್ತಿನ ಮಹಿಳಾ ಪ್ರತಿನಿಧಿ ಡಾ. ಮೀನಾಕ್ಷಿ ರಾಮಚಂದ್ರ, ಜಿಲ್ಲಾ ಪ್ರತಿನಿಧಿ ಸನತ್ ಕುಮಾರ್ ಜೈನ್, ರತ್ನ ಕುಮಾರ್ ರ ಪತ್ನಿ ಎಂ. ಎನ್. ಇಂದಿರಾ, ಪುತ್ರ ಅಜಿತ ಕುಮಾರ್, ಸೊಸೆ ಪ್ರದೀಪ್ತಾ ಅಜಿತ್, ಮೊಮ್ಮಕ್ಕಳು ಮತ್ತು ರತ್ನ ಕುಮಾರ್ ರ ಅಭಿಮಾನಿ ವೃಂದದವರು ಉಪಸ್ಥಿತರಿದ್ದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು.

ಹಿರಿಯ ಸಂಶೋಧಕ ಡಾ. S. D. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ

Article Image

ಹಿರಿಯ ಸಂಶೋಧಕ ಡಾ. S. D. ಶೆಟ್ಟಿ ದಂಪತಿಗಳಿಗೆ ಗೌರವಾರ್ಪಣೆ

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ದಿನಾಂಕ 16.5.25ರಂದು ವಿಶೇಷ ಪೂಜೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಂಶೋಧಕರೂ ಡಾ. ಹಾಮಾನಾ ಸಂಶೋಧನಾ ಕೇಂದ್ರ ಉಜಿರೆಯ ನಿರ್ದೇಶಕರೂ ಅದ ಡಾ. S. D. ಶೆಟ್ಟಿ ಹಾಗೂ ಸುಗುಣ ಶೆಟ್ಟಿ ದಂಪತಿಗಳನ್ನು ಅವರ ಸಾಧನೆ ಮತ್ತು ಮದುವೆಯ 50ನೇ ವರ್ಷದ ಪ್ರಯುಕ್ತ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿಯ ಪರವಾಗಿ ಸಮಿತಿ ಸಂಚಾಲಕರು ಡಾ. ಜಯಕೀರ್ತಿ ಜೈನ್ ನೇತೃತ್ವದಲ್ಲಿ ಗೌರವಿಸಲಾಯಿತು. ಉಪಾಧ್ಯಕ್ಷ ಶ್ರೀ ಜಿನರಾಜ ಪೂವಣಿ ರಾಜ್ಯ ಸರ್ಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ ಕೊಕ್ಕಡ ಶಾಖೆಯ ಪ್ರಬಂಧಕರಾದ ಪಿ. ಅತೀಶಯ ಜೈನ್, ರಾಣಿ ಕಾಳಲಾ ದೇವಿ ಜೈನ್ ಮಹಿಳಾ ಸಮಾಜದ ರಕ್ಷಾ ಪುರೋಹಿತರಾದ ಅರಹಂತ ಇಂದ್ರ, ಜಿನೇಶ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ

Article Image

ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ

ಬಂಟ್ವಾಳ : ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದ್ರಿ ಇದರ ಜಂಟಿ ಮಾಸಿಕ ಸಭೆ ಹಾಗೂ ಡಾ. ಪ್ರಭಾಚಂದ್ರ ಜೈನ್ ರವರ ಅಭಿನಂದನಾ ಕಾರ್ಯಕ್ರಮ ದಿನಾಂಕ 4/5/2025ನೇ ಆದಿತ್ಯವಾರ ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿಯ ಸ್ವಸ್ತಿಕ್ ಸಭಾಭವನದಲ್ಲಿ ನಡೆಯಿತು. ಜೈನ್ ಮಿಲನ್ ಬಂಟ್ವಾಳದ ಅಧ್ಯಕ್ಷರಾದ ಮಧ್ವರಾಜ್ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾರು ನಾಲ್ಕೂವರೆ ದಶಕಗಳಿಂದ ಸಿದ್ಧಕಟ್ಟೆಯಲ್ಲಿ ಜನಪ್ರಿಯ ವೈದ್ಯರಾಗಿರುವ ಪ್ರಭಾಚಂದ್ರ ಜೈನ್ ಇವರನ್ನು ಉಭಯ ಜೈನ್ ಮಿಲನ್‌ಗಳ ವತಿಯಿಂದ ಸನ್ಮಾನಿಸಲಾಯಿತು. ಡಾ. ಪ್ರಭಾಚಂದ್ರ ಜೈನ್ ಇವರನ್ನು ಸನ್ಮಾನಿಸಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಮಾತನಾಡುತ್ತಾ ಡಾ. ಪ್ರಭಾ ಚಂದ್ರ ಜೈನ್ ಕೇವಲ ವೈದ್ಯರು ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು, ಇವರ ಅಭಿನಂದನಾ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದ್ದು ಇದರಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದರು. ನಲ್ಲೂರoಗಡಿ ಬಸದಿಯ ಮೊಕ್ತೇಸರರು ಮತ್ತು ಮಾಜಿ ಮಂತ್ರಿಗಳಾದ ಕೆ. ಅಭಯಚಂದ್ರ ಜೈನ್ ಮಾತನಾಡಿ ಜೈನ್ ಮಿಲನ್ ಗಳು ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ, ಸಿದ್ದಕಟ್ಟೆಯಲ್ಲಿ ಡಾ. ಪ್ರಭಾಚಚಂದ್ರ ಜೈನ್‌ರವರ ಆರೋಗ್ಯ ಸೇವೆಯನ್ನು ಪಡೆಯದ ವ್ಯಕ್ತಿಗಳಿಲ್ಲ ಅವರು ಕೇವಲ ವೈದ್ಯರಾಗಿರದೆ , ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು . ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೂಡಬಿದ್ರೆಯ ನಿವೃತ್ತ ಕನ್ನಡ ಅಧ್ಯಾಪಕರಾದ ಶ್ರೀಧರ್ ಜೈನ್ ಅಭಿನಂದನ ಭಾಷಣ ಮಾಡಿದರು. ಡಾ. ಸುದೀಪ್ ಸಿದ್ದಕಟ್ಟೆ ಸನ್ಮಾನ ಪತ್ರವನ್ನು ವಾಚಿಸಿದರು. ರಶ್ಮಿತ ಯುವರಾಜ್ ಜೈನ್ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಭಾಶ್ಚಂದ್ರ ಜೈನ್, ಜಯರಾಜ ಕಂಬಳಿ, ರಾಜೇಶ್ ಕುಮಾರ್, ಪುಷ್ಪರಾಜ್, ಶಶಿಕಲಾ ಮತ್ತು ಗೀತಾ ಜಿನ ಚಂದ್ರ ಉಪಸ್ಥಿತರಿದ್ದರು. ಸಿದ್ಧಕಟ್ಟೆಯ ಶ್ರೀ ಅನಂತಪದ್ಮ ಮಹಿಳಾ ಸಂಘ, ಸ್ವಸ್ತಿಕ್ ಯುವಜನ ಸಂಘ, ಮೂಡಬಿದ್ರೆಯ ಸರ್ವಮಂಗಳ ಮಹಿಳಾ ಸಂಘದ ಅಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಶಾ ಸುಧಾಕರ್ ಮತ್ತು ಅರ್ಪಿತ ಪ್ರಾಣೇಶ್ ಪ್ರಾರ್ಥಿಸಿದರು. ಉದಯ್ ಕುಮಾರ್ ಜೈನ್ ಸ್ವಾಗತಿಸಿ ನಿರಂಜನ್ ಕುಮಾರ್ ಧನ್ಯವಾದ ನೀಡಿದರು. ಭರತ್ ಕುಮಾರ್ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.

ಮೂಡುಬಿದಿರೆ: ಶ್ರೀ ದಿಗಂಬರ ಜೈನ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ

Article Image

ಮೂಡುಬಿದಿರೆ: ಶ್ರೀ ದಿಗಂಬರ ಜೈನ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ

ನಮ್ಮ ರಾಷ್ಟ್ರದ ಯುದ್ಧ ಸನ್ನಿವೇಶದ ಸಂದರ್ಭದಲ್ಲಿ ಜೈನ ಕಾಶಿ ಶ್ರೀ ದಿಗಂಬರ ಜೈನ ಮಠದಲ್ಲಿ 11.5.2025 ರಂದು ಬೆಳಿಗ್ಗೆ 8.45ಕ್ಕೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಉಪಸ್ಥಿತಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಕ್ಷೀರ ಅಭಿಷೇಕ ನೆರವೇರಿಸಿ, ಪಟ್ಟದ ಮಹಾ ಮಾತೆ ಅಭಿಷ್ಟವರ ಪ್ರಧಾಯಿನಿ ಯಕ್ಷಿ ಕೂಷ್ಮಾoಡಿನೀದೇವಿ, ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ಮಾಡಿ, ಯುದ್ಧ ಸಂಧರ್ಭ ಎಲ್ಲಾ ಭಯೋತ್ಪದನೆ ದೂರವಾಗಲಿ ಸರ್ವ ಧರ್ಮಿಯರು ಸರ್ವ ಭಾಷೆಯವರು ನಾವೆಲ್ಲರೂ ಐಕ್ಯತೆಯಿಂದ ಭಾರತ ದೇಶದ ವಿಜಯ ಪ್ರಾಪ್ತಿಗಾಗಿ ಪ್ರಾರ್ಥಿಸೋಣ ಲೋಕದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಯಾಗಲಿ ಇಂತಹ ವಿಷಮ ಸ್ಥಿತಿಯಲ್ಲಿ ರಾಷ್ಟ್ರ ಧರ್ಮದ ಏಕತೆಗಾಗಿ ಶ್ರಮಿಸೋಣ ಭಾರತ ಸರಕಾರ ಹಾಗೂ ಸೈನಿಕರ ಆತ್ಮ ಸ್ಥೈರ್ಯ ಹೆಚ್ಚಿಸೋಣ ಎಂದು ಶ್ರೀ ಗಳವರು ನುಡಿದರು ಅಭಯ ಚಂದ್ರ ಜೈನ್, ದಯಾನಂದ ಪೈ, ವಿಜಯ ಕುಮಾರ್, ಬಾಹುಬಲಿ ಪ್ರಸಾದ್, ಎ ಗುಣಪಾಲ್ ಹೆಗ್ಡೆ, ಗುಣಪಾಲ್ ಮುದ್ಯ ನಿರಂಜನ್, ರಾಘವೇಂದ್ರ ಭಂಡಾರ್ಕರ್, ಶ್ರೀಧರ್ ಅರಮನೆ, ವೃoದ ರಾಜೇಂದ್ರ, ಶ್ವೇತಾ ಜೈನ್ ,ವೀಣಾ, ಸುದಾ, ಮಂಜುಳಾ ಅಭಯ ಚಂದ್ರ ಮೊದಲಾದವರಿದ್ದರು ವರದಿ: ಸಂಜಯಂತ ಕುಮಾರ್ ಶೆಟ್ಟಿ ವ್ಯವಸ್ಥಾಪಕರು, ಸ್ವಸ್ತಿಶ್ರೀ ಭಟ್ಟಾರಕ ನಗರ, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನ ಮಂದಿರದಲ್ಲಿ ವಿಶೇಷ ಪೂಜೆ

Article Image

ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಜಿನ ಮಂದಿರದಲ್ಲಿ ವಿಶೇಷ ಪೂಜೆ

ನಮ್ಮ ಭಾರತದ ಹೆಮ್ಮೆಯ ಸೇನಾ ಕಾರ್ಯಾಚರಣೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗಲಿ ಎಂದು ಹಾರೈಸುತ್ತ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿ ವಿಶೇಷ ಸಂಕಲ್ಪದೊಂದಿಗೆ ಪೂಜೆಯನ್ನು ದಿನಾಂಕ 8.5.25 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರ ಚಂದ್ರಪುರದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಭಗವಾನ್ ೧೦೦೮ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ನಡೆಸಲಾಯಿತು.. ಈ ಸಂದರ್ಭದಲ್ಲಿ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದರು.

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಸಾಂಸ್ಕ್ರತಿಕ ವೈಭವ

Article Image

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಸಾಂಸ್ಕ್ರತಿಕ ವೈಭವ

ಮಠದಕಣಿ ಯ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 47ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಭಾನುವಾರ (6-10-2024) ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಿರುತೆರೆ ನಟಿ, ಭರತನಾಟ್ಯ ಕಲಾವಿದೆ ತನ್ವಿ ರಾವ್ ರವರಿಗೆ ಮಕ್ಕಿಮನೆ ಕಲಾವೃಂದದ ಗೌರವ ಪ್ರಶಸ್ತಿ "ಕರುನಾಡ ಕಲಾ ಸಿರಿ" ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ವೇತಾ ಜೈನ್ ವಕೀಲರು ಮೂಡುಬಿದಿರೆ, ಅಶೋಕ್ ಎ. ಮಂಗಳೂರು, ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ಲೋಕಯ್ಯ ಶೆಟ್ಟಿಗಾರ, ವಿಶ್ವನಾಥ್ ಶೆಟ್ಟಿಗಾರ, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು, ಗೌರವ್ ಶೆಟ್ಟಿಗಾರ, ಕೃತಿ ಸನಿಲ್, ಪೆರಣಾ ಜೆ, ಶ್ರೇಯಾ ಭಟ್, ಅಪೇಕ್ಷಾ ಎ, ಸಾನಿಧ್ಯ ಜೈನ್, ನಯನಾ ಮೊದಲಾದವರು ಸಹಕರಿಸಿದರು. ಶ್ರಾವ್ಯ ಕಿಶೋರ್, ಪಾರ್ಥನಾ ರೋಹಿತ್, ರಿಮಾ ಜಗನ್ನಾಥ್, ವಂಸತ್ ನಾಯ್ಕ್, ಆಶಿಶ್ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಶ್ರೇಯಾ ದಾಸ್ ಹಾಗೂ ಅರ್ಚಿತ್ ಜೈನ್ ನಿರೂಪಿಸಿದರು.

ಎಕ್ಸಲೆಂಟ್‌ನ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾಸೇವಾರತ್ನ ಪುರಸ್ಕಾರ

Article Image

ಎಕ್ಸಲೆಂಟ್‌ನ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾಸೇವಾರತ್ನ ಪುರಸ್ಕಾರ

ಮೂಡುಬಿದಿರೆ: ವಿಶ್ವಶಾಂತಿ ಯುವಸೇವಾ ಸಮಿತಿ(ರಿ.) ಬೆಂಗಳೂರು ಆಯೋಜನೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಆದಿನಾಥ ವೈಭವ ಜಿನಸಹಸ್ರನಾಮ ಸ್ತುತಿ ಗಾಯನ ವಿಶ್ವದಾಖಲೆ ಕಾರ‍್ಯಕ್ರಮದಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಯುವರಾಜ್ ಜೈನ್ ಅವರಿಗೆ ವಿಶ್ವಶಾಂತಿ ವಿದ್ಯಾ ಸೇವಾರತ್ನ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಕ್ರಾಂತಿಕಾರಕ ಸಾಧನೆ. ಸಾಮಾಜಿಕ ಕ್ಷೇತ್ರಗಳಲ್ಲಿ ಸೇವಾ ತತ್ವರತೆ, ಜೈನ ಧರ್ಮದ ಸಂಘಟನೆಯಲ್ಲಿನ ಬದ್ಧತೆ, ನಾಡುನುಡಿಗೆ ಅನನ್ಯ ಕೊಡುಗೆಯನ್ನು ಗುರುತಿಸಿ ಈ ಪುರಸ್ಕಾರ ಮಾಡಲಾಯಿತು. ವೇದಿಕೆಯಲ್ಲಿ ಮೂಡುಬಿದ್ರೆ ಜೈನ ಮಠದ ಪರಮಪೂಜ್ಯ ಭಾರತಭೂಷಣ ಜಗದ್ಗುರು ಸ್ವಸ್ತಿಶ್ರೀ ಭಟ್ಟಾರಕ ಡಾ. ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಡಿ. ಹರ್ಷೆಂದ್ರ ಹೆಗ್ಡೆ, ಮಾಜಿಸಚಿವರಾದ ಅಭಯಚಂದ್ರ ಜೈನ್, ಎಕ್ಸಲೆಂಟ್ ಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ ಜೈನ್, ಧವಳಾ ಕಾಲೇಜು ಉಪನ್ಯಾಸಕರಾದ ಅಜಿತ್‌ಪ್ರಸಾದ್, ವೀಣಾ ಬಿ. ಆರ್. ಶೆಟ್ಟಿ, ವಿಶ್ವಶಾಂತಿ ಯುವಸೇನಾ ಸಮಿತಿಯ ನವೀನ್ ಪ್ರಸಾದ್ ಜಾಂಬಳೆ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಸಮಿತಿಯ ಧೀರಜ್ ಹೊಳೆನರಸೀಪುರ ಕಾರ‍್ಯಕ್ರಮ ನಿರ್ವಹಿಸಿದರು.

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಶಲಕ್ಷಣ ಪರ್ವ ಆಚರಣೆ

Article Image

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಶಲಕ್ಷಣ ಪರ್ವ ಆಚರಣೆ

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಿನಾಂಕ 08.09.2024 ನೇ ಭಾನುವಾರದಿಂದ ದಿನಾಂಕ 10.09.2024 ನೇ ಮಂಗಳವಾರದವರೆಗೆ ಕಾರ್ಕಳ ದಾನಶಾಲಾ ಜೈನ ಮಠದ ರಾಜಗುರು ಧ್ಯಾನ ಯೋಗಿ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವವನ್ನು ಶ್ರದ್ಧಾ ಭಕ್ತಿಯಿಂದ ಪ್ರತಿ ವರ್ಷದಂತೆ ಆಚರಿಸಲಾಯಿತು. ಉತ್ತಮ ಕ್ಷಮಾಧರ್ಮದಂದು ಧಾರ್ಮಿಕ ಚಿಂತಕರಾದ ಭರತ್ ರಾಜ್ ಮುಡಾರು, ಹಿರಿಯ ಮಾಘಮಾಲ, ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಅಶೋಕ್ ಕುಮಾರ್ ಬಲ್ಲಾಳ್, ಪ್ರಭಾತ್ ಕುಮಾರ್, ಕಾರ್ಕಳ ಜೈನ್ ಮಿಲನಿನ ಅಧ್ಯಕ್ಷರಾದ ಅಶೋಕ್ ಎಚ್. ಎಂ., ಆಶ್ರಮದ ಮೇಲ್ವಿಚಾರಕರಾದ ವೀರೇಂದ್ರ ಜೈನ್ ಇವರುಗಳು ದೀಪ ಬೆಳಗಿಸುವುದರ ಮೂಲಕ 10 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿದಿನ ಸಂಜೆ ಶ್ರೀ ಜಿನಪೂಜೆ, ಭಜನೆ, ಮಹಾಮಂಗಳಾರತಿ, ವಿದ್ವಾಂಸರಿಂದ ಉಪನ್ಯಾಸ, ತತ್ವಾರ್ಥ ಸೂತ್ರವಾಚನ, ನಿಲಯದ ವಿದ್ಯಾರ್ಥಿಗಳಿಂದ ಭಾಷಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕೊನೆಯ ದಿನವಾದ ದಿನಾಂಕ 17.09.2024 ನೇ ಮಂಗಳವಾರ ಉತ್ತಮ ಬ್ರಹ್ಮಚರ್ಯ ಧರ್ಮದ ಆಚರಣೆಯಂದು ಆಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎಂ.ಕೆ. ವಿಜಯಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೋಶಾಧಿಕಾರಿಗಳಾದ ಎಸ್. ಅನಂತರಾಜ್ ಪೂವಣಿ ಮತ್ತು ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬ್ರಹ್ಮದೇವ ಆರ್. ಕೆ. ಕಳಸ ಇವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ಯೋಗರಾಜ್ ಶಾಸ್ತ್ರಿ ಇವರು ಸ್ವಾಗತಿಸಿದರು. ಪರ್ವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ ಧಾರ್ಮಿಕ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ವತಿಯಿಂದ 7 ನೇ, 10 ನೇ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಬಿ. ಭರತ್ ರಾಜ್ ಇವರು ಪ್ರತಿವರ್ಷದಂತೆ ಇಬ್ಬರು ವಿದ್ಯಾರ್ಥಿಗಳ ಭೋಜನಶುಲ್ಕದ ವೆಚ್ಚವನ್ನು ದಾನವಾಗಿ ನೀಡಿದರು. ಅದೇ ರೀತಿ ದಿ| ಕೆ ನಾಗ ಕುಮಾರ ಇಂದ್ರ ಮತ್ತು ಇವರ ಧರ್ಮಪತ್ನಿ ದಿ| ವಿಜಯ ಲಕ್ಷ್ಮಿ ಇವರ ಸ್ಮರಣಾರ್ಥವಾಗಿ ಮೃತರ ಪುತ್ರಿ ಬಬಿತಾ ಮಂಜುನಾಥ್ ಪ್ರಸಾದ್ ಇವರು ಮೂವರು ವಿದ್ಯಾರ್ಥಿಗಳಿಗೆ ಔಷಧ ದಾನವನ್ನು ಮಾಡಿದರು. ಹಾಗೆ ಕಾರ್ಕಳದ ಹಿರಿಯ ಶ್ರಾವಕರಾದ ಸಾಂತ್ರಬೆಟ್ಟು ಪುಷ್ಪಾವತಿ ಅಮ್ಮ ಇವರು ಆಶ್ರಮದ ಭೋಜನ ನಿಧಿಗೆ ರೂ. 15000ವನ್ನು ದಾನವಾಗಿ ನೀಡಿದರು. ಪರ್ವದ ಹತ್ತು ದಿನಗಳ ಪೂಜಾ ಮತ್ತು ಇತರ ವೆಚ್ಚಗಳ ದಾನಿಗಳನ್ನು ಹಾಗೂ ಸಂಸ್ಥೆಗೆ ಧನ ಸಹಾಯ ಮಾಡಿದ, ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದ ಮಹನೀಯರುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಆಶ್ರಮದ ಸಹ ಮೇಲ್ವಿಚಾರಕರಾದ ಶ್ರೀ ಬಾಹುಬಲಿ ಇವರು ತತ್ವಾರ್ಥಸೂತ್ರ ಪಠಿಸಿದರು. ವಿದ್ಯಾರ್ಥಿಗಳಾದ ಉತ್ಸವ್ ಮತ್ತು ಧ್ರುವ ಪ್ರಾರ್ಥಿಸಿದರು. ಪವನ್ ವರದಿ ಮಂಡಿಸಿದರು. ಪಾರ್ಶ್ವನಾಥ್ ಸಂದೇಶ ವಾಚಿಸಿದರು. ಪ್ರಜ್ವಲ್ ಮತ್ತು ಹರ್ಷಿತ್ ವಿದ್ಯಾರ್ಥಿ ಭಾಷಣ ನೆರವೇರಿಸಿದರು. ರಜತ್ ಧನ್ಯವಾದ ಸಮರ್ಪಿಸಿದರು. ತೀರ್ಥನ್ ಇವರು ಕಾರ್ಯಕ್ರಮ ನಿರೂಪಿಸಿದರು.

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

Article Image

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ

ಹುಬ್ಬಳ್ಳಿ ಜೈನ್ ಬೋರ್ಡಿಂಗ್ ನಲ್ಲಿ ದಶಲಕ್ಷಣ ಪರ್ವ ಆಚರಣೆಯ ಸಂದರ್ಭದಲ್ಲಿ ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಮತ್ತು ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು ನಂತರ ಉತ್ತಮ ಮಾರ್ದವ ಧರ್ಮದ ಬಗ್ಗೆ ಡಾ. ನೀರಜಾ ನಾಗೇಂದ್ರಕುಮಾರ್ ಅವರು ಉಪನ್ಯಾಸ ನೀಡಿದರು. ಹುಬ್ಬಳ್ಳಿ ಜೈನ ಸಮಾಜದ ಲೋಬೋಗೋಳ್, ವಿದ್ಯಾಧರ್, ಬೀಳಗಿ, ರತ್ನಾಕರ್ ಅಣ್ಣಿಗೇರಿ, ಶಾಂತಿನಾಥ ಹೋತಪೇಟೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

Article Image

ಶ್ರೀ ಜೈನ ಮಠ, ದಾನಶಾಲೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು

ಕಾರ್ಕಳ: ಶ್ರೀ ಜೈನ ಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಿಂಹ ಮಾಸದ ಮಂಗಳವಾರದ ವಿಶೇಷ ಪೂಜಾ ಕಾರ್ಯಕ್ರಮಗಳು ಕಾರ್ಕಳದ ಶ್ರೀ ಜೈನ ಮಠದಲ್ಲಿ ಜರುಗಿದವು. ವಿಶೇಷ ಆಮಂತ್ರಿತರಾದ ಶ್ರೀ ಕ್ಷೇತ್ರ ಕೊಲ್ಲಾಪುರ, ಶ್ರೀ ದಿಗಂಬರ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಮ್ಮ ಪಾವನ ಸಾನಿಧ್ಯವನ್ನು ನೀಡಿದ ಈ ಪುಣ್ಯ ಸಂದರ್ಭದಲ್ಲಿ ಕಾರ್ಕಳ ಶ್ರೀ ಮಠದ ವತಿಯಿಂದ ಪೂಜ್ಯರನ್ನು ಮಠಾಧೀಶರು ಕಾರ್ಕಳದ ಸಮಸ್ತ ಜೈನ ಬಾಂಧವರ ಪರವಾಗಿ ಅತ್ಯಂತ ಪ್ರೀತಿಯಿಂದ ಗೌರವ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಠದ ವ್ಯವಸ್ಥಾಪಕರಾದ ಧನಕೀರ್ತಿ ಕಡಂಬ ಇವರು ಮಾಡಿದರು.

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

Article Image

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

ಉಜಿರೆ: ದಶಲಕ್ಷಣಪರ್ವ ಆಚರಣೆಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ಬರೆದ “ಪರ್ಯೂಷಣ ಪರ್ವ” ಕೃತಿಯನ್ನು ಸೋಮವಾರ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪುಸ್ತಕದಲ್ಲಿರುವ ಉಪಯುಕ್ತ ಆಧ್ಯಾತ್ಮಿಕ ಮಾಹಿತಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕ ಪುಷ್ಪದಂತ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ನಿರಂಜನ್ ಜೈನ್, ಆರ್.ಯನ್. ಪೂವಣಿ ಉಪಸ್ಥಿತರಿದ್ದರು.

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

Article Image

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

ಜೈನ ಧರ್ಮವು ಜಗತ್ತಿನ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು ಜೈನ ಧರ್ಮದ ತತ್ವ ಸಿದ್ಧಾಂತಗಳು ವೈಜ್ಞಾನಿಕ ಹಿನ್ನೆಲೆಯಲ್ಲಿದೆ ಜೈನ ಧರ್ಮೀಯರಲ್ಲಿ ಜೈನ ಧರ್ಮದ ಪ್ರಜ್ಞೆ ಉಳಿಸಿ ಬೆಳೆಸುವಲ್ಲಿ ಜಿನಚೈತ್ಯಾಲಯಗಳು ಪೂರಕ ಮತ್ತು ಪ್ರೇರಕ ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ 600 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಭ| 1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿಯು ಪಾಳುಬಿದ್ದಿತ್ತು ಈದೀಗ ಈ ಸೀಮೆಯ ಜೈನ ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಮತ್ತು ಬಸದಿಗೆ ಸಂಬಂಧಪಟ್ಟ ಎಲ್ಲಾ ಮನೆತನಗಳು ಸೇರಿಕೊಂಡು ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಿದ್ದು ಇದರ ಶಿಲಾನ್ಯಾಸ ಸಮಾರಂಭ ದಿನಾಂಕ 28-08-2024ರಂದು ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಇವರ ದಿವ್ಯ ಹಸ್ತದಿಂದ ಶಿಲಾನ್ಯಾಸ ಮತ್ತು ವಾಸ್ತು ತಜ್ಞ ಪಾದೂರು ಸುದರ್ಶನ್ ಇಂದ್ರ ಇವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು ಈ ಸಂದರ್ಭದಲ್ಲಿ ನಿಡ್ವಾಳ ಬಸದಿಗೆ ಸೇರಿರುವ ಎಲ್ಲಾ ಊರ-ಪರವೂರ ಶ್ರಾವಕ ಶ್ರಾವಕೀಯರು ಭಾಗವಹಿಸಿದ್ದರು.

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

Article Image

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕದಲ್ಲಿ ಜೈನ ಧರ್ಮ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಉತ್ತರ ಕರ್ನಾಟಕದ ಸಂಘಟನೆ ಕೊರತೆಯ ಜೊತೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಸುಹಾಸ್ತಿ ಜೈನ ಮಿಲನ. ಮುಖಂಡ, ಕಲಾವಿದ ಚಿತ್ತ ಜಿನೇಂದ್ರ ತಿಳಿಸಿದರು. ಅವರು ರಾಜಾಜಿನಗರ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ, ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜೈನ ಧರ್ಮದ ಸಮಸ್ಯೆ, ಸಂಘಟನೆ, ಸಂಸ್ಕೃತಿ, ಸಂಸ್ಕಾರ, ಆರ್ಥಿಕ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ಎದ್ದು ಕಾಣುತ್ತಿವೆ, ಜೈನ ಧರ್ಮದ ಪರಿಸ್ಥಿತಿ ಹೀನಾಯವಾಗಿದ್ದು ಸಂಘಟನೆ ಕೊರತೆ ಎದ್ದು ಕಾಣುತ್ತಿವೆ ಈ ಬಗ್ಗೆ ಎಲ್ಲರೂ ಸಂಘಟಿತರಾಗಿ ಧ್ವನಿ ಗೂಡಿಸಬೇಕೆಂದರು. ರಾಜಾಜಿನಗರ ಜೈನ್ ಮಿಲನ್ ಅಧ್ಯಕ್ಷೇ ಮಮತಾ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಧಾ ಬಾಹುಬಲಿ, ಬಾಹುಬಲಿ ಗೌರಜ್ ಸೇರಿದಂತೆ ರಾಜಾಜಿನಗರ ಜೈನ ಮಿಲನ್ ಪದಾಧಿಕಾರಿಗಳು, ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಚಿತ್ತ ಜಿನೇಂದ್ರರವರನ್ನು ಸನ್ಮಾನಿಸಲಾಯಿತು. ಜೆ. ರಂಗನಾಥ - ತುಮಕೂರು

ಅಷ್ಟಾಹ್ನಿಕ ಪೂಜಾ ಕಾರ್ಯಕ್ರಮ

Article Image

ಅಷ್ಟಾಹ್ನಿಕ ಪೂಜಾ ಕಾರ್ಯಕ್ರಮ

ಶಿಶಿಲ ಶ್ರೀ ಕ್ಷೇತ್ರ ಚಂದ್ರಪುರ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಕಾರ್ಕಳದ ಪರಮಪೂಜ್ಯ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶುಭ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಾನುವಾರ ಅಷ್ಟಾಹ್ನಿಕ ಪೂಜೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಗುಣ ಎಸ್.ಡಿ. ಶೆಟ್ಟಿ ಉಜಿರೆ ಅವರ ಮಗಳು ಪ್ರಗತಿ ರಾಜಿತ್ ಶೆಟ್ಟಿ, ಶ್ರೀ ಕ್ಷೇತ್ರ ಚಂದ್ರಪುರಕ್ಕೆ 52 ಜಿನ ಬಿಂಬಗಳಿರುವ ನಂದೀಶ್ವರ ಮಂಟಪವನ್ನು ದಾನವಾಗಿ ನೀಡಿದ್ದು, ಕೊಲ್ಲಾಪುರ ಸಮೀಪ ಉದ್ಗಾವ್‌ನಲ್ಲಿ ಆಚಾರ್ಯ ಶ್ರೀ 108 ವಿಶುದ್ದ ಸಾಗರಮುನಿ ಮಹಾರಾಜರಿಂದ ನಂದೀಶ್ವರ ಮಂಟಪಕ್ಕೆ ಲಘು ಪಂಚ ಕಲ್ಯಾಣ ನಡೆಯಿತು. ಆಷಾಢ ಮಾಸದ ಅಷ್ಟಾಹ್ನಿಕ ಪರ್ವದ ಮೊದಲ ಅಷ್ಟಮಿಯ ದಿನದಂದು ಬೆಳಗ್ಗೆ 10.30ಕ್ಕೆ ಜಿನ ಮಂದಿರದಲ್ಲಿ ವಿಶೇಷ ಆರಾಧನೆ ಹಾಗೂ ವಿಶೇಷ ಪೂಜೆಗಳು ನೆರವೇರಿದ ನಂತರ ವಿರಾಜಮಾನಗೊಂಡಿದೆ. ಈ ಪುಣ್ಯ ಕಾರ್ಯದಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದರು. ಉಜಿರೆ ಎಸ್.ಡಿ. ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

Article Image

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನೀಡಲಾಗುವ "ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ"ಯನ್ನು ಕನ್ನಡ ವಿಭಾಗದಲ್ಲಿ ಬೆಳಗಾವಿಯ ಹಳ್ಳಿಯ ಸಂದೇಶ ಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ಬೆಳಗಾವಿಯ ಮರಾಠಾ ಮಂದಿರದಲ್ಲಿ ಜ. 18ರಂದು ಬ್ಯಾರಿಸ್ಟರ್‌ ನಾಥ್ ಪೈ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 5 ಸಾವಿರ ರೂ. ನಗದು ಗೌರವ ಧನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಚೇತನ್ ಫಣಿರಾಜ್ ಗೆ ಸನ್ಮಾನ

Article Image

ಚೇತನ್ ಫಣಿರಾಜ್ ಗೆ ಸನ್ಮಾನ

ಹಾಸನ: ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಆವರಣದಲ್ಲಿ ಸಹಕಾರ ಭಾರತಿ ಇತ್ತಿಚಿಗೆ ಆಯೋಜಿಸಿದ್ದ ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನದಲ್ಲಿ, 100 ವರ್ಷ ಪೂರೈಸಿರುವ ಕ್ರೆಡಿಟ್ ಸೊಸೈಟಿಗಳ ಸಹಕಾರ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹಾಸನದ ಜೈನ ಮಂಡಳಿ ಪತ್ತಿನ ಸಹಕಾರ ಸಂಘಕ್ಕೆ 103 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ, ವತಿಯಿಂದ ಸಂಘದ ಅದ್ಯಕ್ಷರಾದ ಹೆಚ್.ಪಿ. ಚೇತನ್ ಫಣಿರಾಜ್ರವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ಸಚಿವರಾದ ಭಗವತ ಕರಾಢ್, ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಜ್ಯೋತಿಂದರ್ ಮೆಹ್ತಾರವರು ಮತ್ತು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷರಾದ ದೀನಾನಾಥ್ ಠಾಕೂರ್ ಇತರರು ಉಪಸ್ಥಿತರಿದ್ದರು.

First Previous

Showing 1 of 1 pages

Next Last