ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ: ಬೆಸ್ಟ್ ಆರ್ಟಿಕಲ್ ಅವಾರ್ಡ್
ಅಸೋಸಿಯೇಷನ್ ಆಫ್ ಫಾರ್ಮಾಟಿಕಲ್ ಟೀಚರ್ಸ್ ಆಫ್ ಇಂಡಿಯಾ (APTI) ಸಂಸ್ಥೆಯು ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ ಶ್ರೀ ಇಶ್ವರ್ ಎನ್. ಹುಕ್ಕೇರಿ ಮೆಮೋರಿಯಲ್ ಅವಾರ್ಡ್ - 2025 ಅಡಿಯಲ್ಲಿ ಕ್ಲಿನಿಕಲ್ ಪ್ರಾಕ್ಟಿಸ್ ಕ್ಷೇತ್ರದ “ಬೆಸ್ಟ್ ಆರ್ಟಿಕಲ್ ಅವಾರ್ಡ್” ಅನ್ನು ಪ್ರದಾನ ಮಾಡಿದೆ. ಡಾ. ಜಿನೇಶ್ ನಾಗವಿ ಅವರು “Assessment of Compliance in Hypertensive and Diabetic Patients at Primary Health Care: A Prospective Study" ಎಂಬ ಸಂಶೋಧನಾ ಲೇಖನವನ್ನು Indian Journal of Pharmacy Practice ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಈ ಸಂಶೋಧನೆ ಗುಣಮಟ್ಟ, ವೈಜ್ಞಾನಿಕ ಆಳತೆ ಹಾಗೂ ಸಮಕಾಲೀನ ಆರೋಗ್ಯ ಸವಾಲುಗಳಿಗೆ ಹೊಂದಿಕೆಯಾಗಿರುವುದಕ್ಕಾಗಿ ಈ ಗೌರವಕ್ಕೆ ಪಾತ್ರವಾಗಿದೆ. ಈ ಪ್ರಶಸ್ತಿಯನ್ನು 74ನೇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಕಾಂಗ್ರೆಸ್ (IPC) ಸಮಾವೇಶದ ಸಂದರ್ಭದಲ್ಲಿ, 2025ರ ಡಿಸೆಂಬರ್ 19 ರಿಂದ 21ರವರೆಗೆ ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC), ಕರ್ನಾಟಕದಲ್ಲಿ ಆಯೋಜಿಸಲಾದ APTI ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪದಾನ ಮಾಡಲಾಯಿತು. ಈ ಗೌರವವು ಸಾಮಾನ್ಯವಾಗಿ ವೈಜ್ಞಾನಿಕ ವಿಶ್ಲೇಷಣೆಯ ಶ್ರೇಷ್ಠತೆ, ಸಂಶೋಧನಾ ನವೀನತೆ ಹಾಗೂ ಪ್ರಸ್ತುತ ಫಾರ್ಮಾಸ್ಯೂಟಿಕಲ್ ಕ್ಷೇತ್ರದ ಅಗತ್ಯಗಳಿಗೆ ಸ್ಪಂದಿಸುವ ಸಂಶೋಧನೆಗಳಿಗೆ ಮಾತ್ರ ನೀಡಲಾಗುತ್ತದೆ. ಈ ಪ್ರಶಸ್ತಿ ದೊರಕಿರುವುದು ಡಾ. ಜಿನೇಶ್ ನಾಗವಿ ಅವರ ಸಂಶೋಧನಾ ಕಾರ್ಯದ ಗುಣಮಟ್ಟ, ವೈಜ್ಞಾನಿಕ ಪುಸ್ತುತಿಕೆಯ ಸ್ಪಷ್ಟತೆ ಹಾಗೂ ತಜ್ಞ ವಿಮರ್ಶಕರ ಸಮಿತಿಯಿಂದ ದೊರೆತ ಉನ್ನತ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ. ಡಾ. ಜಿನೇಶ್ ಬಹುಬಲಿ ನಾಗವಿ ಅವರು ಪ್ರಸ್ತುತ ಶಾರದಾ ವಿಲಾಸ್ ಕಾಲೇಜ್ ಆಫ್ ಫಾರ್ಮಸಿ, ಶಾರದಾ ವಿಲಾಸ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್, ಮೈಸೂರು ಇಲ್ಲಿ ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಅವರು HESDAR ಸೆಂಟರ್, ಮೈಸೂರುನಲ್ಲಿ ಗೌರವಾನ್ವಿತ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಧನ ಡಾ. ಜಿನೇಶ್ ನಾಗವಿ ಅವರ ವೃತ್ತಿಪರ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತೀಯ ಫಾರ್ಮಾಸ್ಯೂಟಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅವರ ಕೊಡುಗೆಗೆ ಮತ್ತೊಂದು ಗೌರವವಾಗಿದೆ.
