Article Image 1 Article Image 2

ಮಹಿಳಾ ವಿಭಾಗದಲ್ಲಿ ಉಜಿರೆ ಎಸ್‌ಡಿಎಂಗೆ ಪ್ರಶಸ್ತಿ, ಆರೋಗ್ಯ ವಿ.ವಿ. ಕಬಡ್ಡಿ: ಆಳ್ವಾಸ್ ಚಾಂಪಿಯನ್

Article Image

ಮಹಿಳಾ ವಿಭಾಗದಲ್ಲಿ ಉಜಿರೆ ಎಸ್‌ಡಿಎಂಗೆ ಪ್ರಶಸ್ತಿ, ಆರೋಗ್ಯ ವಿ.ವಿ. ಕಬಡ್ಡಿ: ಆಳ್ವಾಸ್ ಚಾಂಪಿಯನ್

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಅತಿಥ್ಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಜ್ಯ ಮಟ್ಟ) ಕಬಡ್ಡಿ ಪಂದ್ಯಾಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಮಹಿಳಾ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜುಗಳು ಚಾಂಪಿಯನ್ ಆಗಿವೆ. ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ಅಂಕಣದಲ್ಲಿ ಬುಧವಾರ ನಡೆದ ಪುರುಷರ ಫೈನಲ್‌ನಲ್ಲಿ ಮಂಗಳೂರಿನ ಎ.ಜೆ. ಇನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ಮಣಿಸಿದ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಪ್ರಶಸ್ತಿ ಎತ್ತಿ ಹಿಡಿಯಿತು. ಮಹಿಳಾ ವಿಭಾಗದಲ್ಲಿ ಬಾಗಲಕೋಟೆಯ ಸಜ್ಜಲಶ್ರೀ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜನ್ನು ಮಣಿಸಿದ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಅತಿಥೇಯ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ತೃತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ಅತ್ಯುತ್ತಮ ರೈಡರ್ ಆಗಿ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ವೀರೇಶ್, ಅತ್ಯುತ್ತಮ ಡಿಫೆಂಡರ್ ಆಗಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಹೇಮಂತ್ ಜಿ. ವೈ., ಅತ್ಯುತ್ತಮ ಆಲ್ ರೌಂಡರ್ ಆಗಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮಹಮ್ಮದ್ ಸತಾರ್ ಪುರಸ್ಕೃತರಾದರು. ಮಹಿಳಾ ಅತ್ಯುತ್ತಮ ರೈಡರ್ ಆಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿಭಾಗದ ಮಾನಸ, ಎಸ್‌ಡಿಎಂ ಅತ್ಯುತ್ತಮ ರಕ್ಷಕರಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಎಸ್‌ಡಿಎಂ ನ ಪ್ರಗತಿ, ಅತ್ಯುತ್ತಮ ಆಲ್‌ರೌಂಡರ್ ಆಗಿ ಸಜನಶ್ರೀ, ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನ ನಂದಿತಾ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. ಸಮಾರೋಪ ಪದ್ಮಶ್ರೀ ಅನಿಲ ಏಜೆನ್ಸಿ ವ್ಯವಸ್ಥಾಪಕ ಪಾಲುದಾರರಾದ ಅಭಿಜಿತ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವೀಕ್ಷಕರಾದ ಧರ್ಮೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕರಾದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ವನಿತಾ ಶೆಟ್ಟಿ, ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಶನ್ ಪಿಂಟೊ ಇದ್ದರು.

ವಿದ್ಯಾಗಿರಿ: ಸ್ಪಟಿಕ ವಿದ್ಯಾರ್ಥಿ ವೇದಿಕೆಯ ಸಮಾರೋಪ ಸಮಾರಂಭ

Article Image

ವಿದ್ಯಾಗಿರಿ: ಸ್ಪಟಿಕ ವಿದ್ಯಾರ್ಥಿ ವೇದಿಕೆಯ ಸಮಾರೋಪ ಸಮಾರಂಭ

ನಿಮ್ಮ ವ್ಯಕ್ತಿತ್ವ ಹಾಗೂ ಕೌಶಲಗಳ ಮೂಲಕವೇ ಸಮಾಜಕ್ಕೆ ಪರಿಚಿತರಾಗಿ ಎಂದು ಆಳ್ವಾಸ್ ಕಾಲೇಜಿನ ಕುಲಸಚಿವ (ಅಕಾಡೆಮಿಕ್ಸ್) ಡಾ ಟಿ. ಕೆ. ರವೀಂದ್ರನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ವಿಚಾರ ಸಂಕಿರಣ ಸಭಾಂಗಣದಲ್ಲಿ ಪದವಿ ಸಮಾಜ ಕಾರ್ಯ ವಿಭಾಗದ ಸ್ಪಟಿಕ ವಿದ್ಯಾರ್ಥಿ ವೇದಿಕೆಯ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ದೊಡ್ಡದಾಗಿ ಕನಸು ಕಾಣಬೇಕು ಇದರಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ವರ್ತಮಾನದಲ್ಲಿ ಜಗತ್ತು ಒಂದು ಪುಟ್ಟ ಹಳ್ಳಿ ಆಗಿದೆ. ಅವಕಾಶಗಳು ವಿಸ್ತಾರಗೊಂಡಿದ್ದು, ಸ್ಪರ್ಧೆ ಹೆಚ್ಚಿದೆ ಎಂದರು. ಸಮಾಜ ಕಾರ್ಯದ ವಿದ್ಯಾರ್ಥಿಗಳಿಗೆ ಅವಕಾಶಗಳ ಕೊರತೆ ಬರಲು ಸಾಧ್ಯವಿಲ್ಲ. ಈ ವೃತ್ತಿಯೂ ನೀಡುವ ಸಂತೃಪ್ತಿ ಬೇರೆ ಕಡೆಯೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮ ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲ. ಆದರೆ, ಅದಕ್ಕೆ ತಕ್ಕ ಅಭ್ಯರ್ಥಿಗಳ ಕೊರತೆ ಇದೆ. ಹಾಗಾಗಿ ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ವೃದ್ಧಿಸಿಕೊಳ್ಳಿ ಎಂದರು. ಎಸ್.ಕೆ.ಎಫ್. ಬಾಯ್ಲೆರ್ಸ್ ಮತ್ತು ಡ್ರೆಯರ‍್ಸ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಪ್ರಶಾಂತ್ ದೇವಾಡಿಗ ಮಾತನಾಡಿ, ‘ನಿಮ್ಮ ಜೀವನದ ಗುರಿಯನ್ನು ಆಲೋಚಿಸಿ. ಆ ಗುರಿಯನ್ನು ಸಾಧಿಸಲು ಬೇಕಾದ ಸಿದ್ಧತೆಗಳನ್ನು ನಡೆಸಿ’ ಎಂದರು. ವೃತ್ತಿ ಜೀವನಕ್ಕೆ ಬೇಕಾದ ವಿವಿಧ ಕೌಶಲ, ಜ್ಞಾನ, ಹಾಗೂ ವರ್ತನೆಗಳ ಮೇಲೆ ಗಮನವಿರಿಸಿ ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸ್ಪಟಿಕ ವಿದ್ಯಾರ್ಥಿ ವೇದಿಕೆಯೂ ಅನೇಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಹಾಗೂ ಕಾಲೇಜಿನ ಅಭಿವೃದ್ಧಿಗೆ ಉತ್ತಮ ಕೆಲಸ ಮಾಡಿದೆ. ಸಮಾಜಕಾರ್ಯ ವಿಭಾಗದ ಸೇವಾ ಮನೋಭಾವ ಶ್ಲಾಘನೀಯ ಎಂದು ಹೇಳಿದರು. ಪದವಿ ಸಮಾಜ ಕಾರ್ಯದ ಮುಖ್ಯಸ್ಥೆ ಡಾ. ಮಧುಮಲಾ, ಸ್ಪಟಿಕ ವಿದ್ಯಾರ್ಥಿ ವೇದಿಕೆಯ ಸಂಯೋಜಕಿ ಡಾ. ಸ್ವಪ್ನ ಆಳ್ವ ಇದ್ದರು.

ರಾಜ್ಯಮಟ್ಟದ ಮಹಿಳಾ ಟೇಬಲ್ ಟೆನಿಸ್: ಎಸ್‌ಡಿಎಂ ಕಾನೂನು ಕಾಲೇಜು ಚಾಂಪಿಯನ್

Article Image

ರಾಜ್ಯಮಟ್ಟದ ಮಹಿಳಾ ಟೇಬಲ್ ಟೆನಿಸ್: ಎಸ್‌ಡಿಎಂ ಕಾನೂನು ಕಾಲೇಜು ಚಾಂಪಿಯನ್

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಅಂತರ್ ಕಾಲೇಜು ಮಹಿಳಾ ಟೇಬಲ್ ಟೆನಿಸ್ ಪಂದ್ಯದಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ತಂಡ ಚಾಂಪಿಯನ್ ಆಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಕಾನೂನು ಕಾಲೇಜಿನಲ್ಲಿ ನಡೆದ ಪಂದ್ಯಾಟದಲ್ಲಿ ರಾಜ್ಯದ ವಿವಿಧಕಾಲೇಜುಗಳ 15ಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ವಿಜೇತ ತಂಡವು ಪ್ರಶಸ್ತಿ ಶೆಟ್ಟಿ, ಭಾಗ್ಯಶ್ರೀ, ಪ್ರಮಯಿ ಜೈನ್ ಅವರನ್ನು ಒಳಗೊಂಡಿದ್ದು, ಎಸ್‌ಡಿಎಂನ ದೈಹಿಕ ಶಿಕ್ಷಣ ನಿರ್ದೇಶಕ ಶಶಿಪ್ರಸಾದ್ ತಂಡದ ನೇತೃತ್ವ ವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಶೆಟ್ಟಿ ಪಂದ್ಯಾಟದ ಉತ್ತಮ ಕ್ರೀಡಾಪಟು ಬಹುಮಾನವನ್ನು ಗೆದ್ದುಕೊಂಡಿದ್ದಾರೆ.

ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವೀ. ಹೆಗ್ಗಡೆಯವರ ನಿರ್ದೇಶನದಂತೆ ದಿನಾಂಕ ಜೂ. 16 ಆದಿತ್ಯವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಉಚಿತ ಹಿಯರಿಂಗ್ ಟೆಸ್ಟ್ (ಉಚಿತ ಶ್ರವಣ ಪರೀಕ್ಷೆ), ಮಕ್ಕಳು ಮತ್ತು ವಯಸ್ಕರಲ್ಲಿ ಮೂಗಿನ ದ್ರವದ ತಪಾಸಣೆ, ಅಲರ್ಜಿಗೆ ಚಿಕಿತ್ಸೆ, ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ, ವರ‍್ಟಿಗೋ ಪರೀಕ್ಷೆ ಮತ್ತು ಚಿಕಿತ್ಸೆ, ಧ್ವನಿ ಬದಲಾವಣೆಗಳ ಪರೀಕ್ಷೆ ಮತ್ತು ಚಿಕಿತ್ಸೆ, ಕಿವುಡುತನದ ಪರೀಕ್ಷೆ ಮತ್ತು ಚಿಕಿತ್ಸೆ, ಥೈರಾಯಿಡ್ ಪರೀಕ್ಷೆ ಮತ್ತು ಚಿಕಿತ್ಸೆ, ಕಿವಿ-ಮೂಗು- ಗಂಟಲು ಕ್ಯಾನ್ಸರ್ ತಪಾಸಣೆ, ಗೊರಕೆಗೆ ಚಿಕಿತ್ಸೆ ಇತ್ಯಾದಿ ಸೌಲಭ್ಯಗಳು ಈ ಶಿಬಿರದಲ್ಲಿ ದೊರೆಯಲಿದೆ. ಉಜಿರೆ ಎಸ್.ಡಿ.ಎಂ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ MBBS, MS (ENT & HNS) Fellowship in Head & Neck Oncologist ಇವರು ರೋಗ ತಪಾಸಣೆ ನಡೆಸಲಿದ್ದಾರೆ. ಡಾ| ರೋಹನ್ ಎಂ. ದೀಕ್ಷಿತ್ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ತಜ್ಞರಾಗಿದ್ದಾರೆ. ಇವರು ಪ್ರತಿದಿನ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಒಳರೋಗಿ ವಿಭಾಗದಲ್ಲಿ 10%, ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧರ್ಮಸ್ಥಳ: “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ “ಜೈಬಾಲಾಜಿ” ಹಾಯಿದೋಣಿ

Article Image

ಧರ್ಮಸ್ಥಳ: “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡ “ಜೈಬಾಲಾಜಿ” ಹಾಯಿದೋಣಿ

ಕುಂದಾಪುರದಲ್ಲಿ ಪಂಚಗಂಗಾವಳಿ ನದಿಯಲ್ಲಿ ಕಳೆದ 14 ವರ್ಷಗಳಿಂದ ಚಿಪ್ಪುಗಳನ್ನು ಸಾಗಿಸುತ್ತಿದ್ದ “ಜೈಬಾಲಾಜಿ” ಹಾಯಿದೋಣಿಯನ್ನು ಸೋಮವಾರ ಧರ್ಮಸ್ಥಳದಲ್ಲಿ “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಅರ್ಪಿಸಲಾಯಿತು. ಕುಂದಾಪುರದ ಖಾರ್ವಿಕೇರಿಯ ಜೈಬಾಲಾಜಿ ಎಂಟರ್‌ಪ್ರೈಸಸ್ ಮಾಲಕ ವೆಂಕಟೇಶ್ ಖಾರ್ವಿ ತಮ್ಮ ಹಾಯಿದೋಣಿಯನ್ನು “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಸಮರ್ಪಿಸಿದರು. ಸವಿವರ ಮಾಹಿತಿ: 51 ಅಡಿ ಉದ್ದ ಹಾಗೂ 10 1/2 ಅಡಿ ಅಗಲದ ಬೃಹತ್ ಹಾಯಿದೋಣಿ ಒಂದೇ ಮರದ ಹಲಗೆಯಿಂದ ನಿರ್ಮಿತವಾಗಿದೆ. ಇದಕ್ಕೆ 22 ಅಡಿ ಎತ್ತರದ ಕಾಟಿಮರ ಮತ್ತು ಹಾಯಿ ಇದೆ. 20 ವರ್ಷಗಳ ಹಿಂದೆ ಇಂತಹ ಹತ್ತು ದೊಣಿಗಳಿದ್ದವು. ಚಿಪ್ಪು, ಮರ, ಹಂಚು ಸಾಗಾಟಕ್ಕೂ ಅವುಗಳು ಬಳಕೆಯಾಗುತ್ತಿದ್ದವು. ಚಿಪ್ಪು ಸದ್ಯ ನಶಿಸುತ್ತಾ ಬಂದಿರುವುದರಿಂದ ಮುಂದಿನ ಪೀಳಿಗೆಗೆ ಕೊಂಕಣಿ ಖಾರ್ವಿಸಮಾಜದ ಜನಜೀವನ ಹಾಗೂ ಹಾಯಿದೋಣಿ ಬಗ್ಗೆ ಪರಿಚಯ ಮಾಡಿಕೊಳ್ಳಲು ಹಾಯಿ ದೋಣಿ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅನುಮತಿ ಮತ್ತು ಆಶೀರ್ವಾದಗಳೊಂದಿಗೆ ಇದನ್ನು “ಮಂಜೂಷಾ”ಕ್ಕೆ ಸಮರ್ಪಿಸಲಾಗಿದೆ ಎಂದು ಮಾಲಕ ವೆಂಕಟೇಶ್ ಖಾರ್ವಿ ತಿಳಿಸಿದ್ದಾರೆ. ಕೊಂಕಣಿ ಖಾರ್ವಿ ಸಮಾಜದ ಸುಭಾಷ್ ಖಾರ್ವಿ, ಸುನಿಲ್ ಖಾರ್ವಿ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್‌: ಅರ್ಜಿ ವಿತರಣೆ ಆರಂಭ

Article Image

ಖಾಸಗಿ ಬಸ್‌ಗಳಲ್ಲಿ ವಿದ್ಯಾರ್ಥಿ ಪಾಸ್‌: ಅರ್ಜಿ ವಿತರಣೆ ಆರಂಭ

ಮಂಗಳೂರು, ಜೂ. 2: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಹಾಗೂ ಸರ್ವಿಸ್ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಕೆನರಾ ಬಸ್‌ ಮಾಲಕರ ಸಂಘದಿಂದ ನೀಡುವ 2024-25ನೇ ಸಾಲಿನ ಶೇ. 50 ರಿಯಾಯಿತಿ ಪಾಸುಗಳ ಅರ್ಜಿ ವಿತರಣೆ ಪ್ರಾರಂಭಗೊಂಡಿದೆ. ಸಂಘದ ಕಚೇರಿಗಳಾದ ಮಂಗಳೂರು, ಪಡುಬಿದ್ರಿ, ಉಡುಪಿ, ಕುಂದಾಪುರ, ಕಾರ್ಕಳ, ಮೂಡುಬಿದಿರೆ, ಕಿನ್ನಿಗೋಳಿ, ಹಿರಿಯಡಕ, ಹೆಬ್ರಿ, ಸಿದ್ಧಾಪುರ, ಬೈಂದೂರು, ಹಾಲಾಡಿ, ಕೇಂದ್ರದಲ್ಲಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳನ್ನು ನೀಡಿ ವಿದ್ಯಾರ್ಥಿ ಪಾಸುಗಳನ್ನು ಪಡೆದುಕೊಳ್ಳುವಂತೆ ಕೆನರಾ ಬಸ್ ಮಾಲಕರ ಸಂಘದ ಪ್ರಕಟಣೆ ತಿಳಿಸಿದೆ.

ಆದೀಶ್ ಜೈನ್‌ರವರ ಚಿಕಿತ್ಸೆಗೆ ನೆರವಾಗಿ

Article Image

ಆದೀಶ್ ಜೈನ್‌ರವರ ಚಿಕಿತ್ಸೆಗೆ ನೆರವಾಗಿ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ನಿವಾಸಿ ಧರ್ಮಪಾಲ್ ಜೈನ್‌ರವರ ಪುತ್ರ ಆದೀಶ್ ಜೈನ್ (20 ವರ್ಷ) ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇವರ ಮಗನ ಕ್ಯಾನ್ಸರ್ ಚಿಕಿತ್ಸೆಯು ಮಂಗಳೂರಿನ ಜಸ್ಟೀಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಹಾಸ್ಪಿಟಲ್‌ನಲ್ಲಿ ನಡೆಯುತ್ತಿದೆ. ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ಲಕ್ಷಾಂತರ ರೂಪಾಯಿಗಳ ಹಣವನ್ನು ಕ್ರೂಡೀಕರಿಸಲು ತುಂಬಾ ಕಷ್ಟವಾಗಿದ್ದು, ಚಿಕಿತ್ಸೆಗೆ ನೆರವು ನೀಡಬೇಕೆಂದು ತಂದೆ-ತಾಯಿ ವಿನಂತಿಸಿಕೊಂಡಿದ್ದಾರೆ. ನೆರವನ್ನು ನೀಡುವವರು PUSHPAVATHI (ತಾಯಿ) A/c- 01712250001817 IFSC- CNRB0010171 ಮಾಹಿತಿಗಾಗಿ ಸಂಪರ್ಕಿಸಿ– 7022728669, 7338528071 ಧರ್ಮಪಾಲ್ ಜೈನ್ (ತಂದೆ) PhonePe: 7338528071 PhonePay & Google payಯಲ್ಲಿ ದಿನಕ್ಕೆ 20,000ಕ್ಕಿಂತ ಜಾಸ್ತಿ ಭಾರದ ಕಾರಣ ಆದಷ್ಟು ಈ A/c ಗೆ ಹಾಕಬೇಕಾಗಿ ವಿನಂತಿ

ಮೂಡಬಿದಿರೆ: ಇಂಜಿನಿಯರ್ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟ್ ನ ವಿದ್ಯಾರ್ಥಿಗಳು ರ‍್ಯಾಂಕ್

Article Image

ಮೂಡಬಿದಿರೆ: ಇಂಜಿನಿಯರ್ ಕೋರ್ಸ್ ಗಳ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟ್ ನ ವಿದ್ಯಾರ್ಥಿಗಳು ರ‍್ಯಾಂಕ್

ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ(ಕಾಮೆಡ್-ಕೆ) ಇಂಜಿನಿಯರ್ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಮೂಡಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ 4 ವಿದ್ಯಾರ್ಥಿಗಳು ಅಧಿಕ ಪರ್ಸಂಟೇಜ್‌ನೊಂದಿಗೆ ರ‍್ಯಾಂಕ್ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಪ್ರಾಪ್ತಿ ಬೆಳಕೇರಿ 99.7861210 ಪರ್ಸಂಟೇಜ್‌ನೊಂದಿಗೆ 234ನೇ ರ‍್ಯಾಂಕ್ ಪಡೆದಿದ್ದಾರೆ. ರೋಹನ್ ಎಸ್. 99.4987613 ಪರ್ಸಂಟೇಜ್‌ನೊಂದಿಗೆ 548ನೇ ರ‍್ಯಾಂಕ್, ಅಮೋಘ ಪಾಟೀಲ್ 98.5252788 ಪರ್ಸಂಟೇಜ್‌ನೊಂದಿಗೆ 1559ನೇ ರ‍್ಯಾಂಕ್ ಪಡೆದಿದ್ದಾರೆ. ಇವರ ಸಾಧನೆಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

ಬೀದಿನಾಯಿ ಮತ್ತು ಸಾಕುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಅಭಿಯಾನ

Article Image

ಬೀದಿನಾಯಿ ಮತ್ತು ಸಾಕುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಅಭಿಯಾನ

ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ (ರಿ.) ಬಜಗೋಳಿ ಇದರ ಆಶ್ರಯದಲ್ಲಿ ಬೀದಿನಾಯಿ ಮತ್ತು ಸಾಕುನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಅಭಿಯಾನವನ್ನು ಜೂನ್ 2, ಆದಿತ್ಯವಾರದಂದು ಬೆಳಿಗ್ಗೆ 9.00ಗಂಟೆಯಿಂದ ಸಂಜೆ 4.00ಗಂಟೆಯವರೆಗೆ ಹಮ್ಮಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಸ್ಥಳ- ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ಬಜಗೋಳಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ವೀರು ಬಜಗೋಳಿ- 9611944763

ಮೂಡಬಿದ್ರೆ: ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ

Article Image

ಮೂಡಬಿದ್ರೆ: ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ

ಮೂಡುಬಿದ್ರಿ ಕೋ-ಓಪರೇಟಿವ್ ಸರ್ವೀಸ್ ಸೊಸೈಟಿ ಲಿ. ಮೂಡಬಿದ್ರೆ ಮತ್ತು ಎಂ.ಸಿ. ಲಿಯೋಡ್ ಫಾರ್ಮಾ ಇವರ ಆಶ್ರಯದಲ್ಲಿ ‘ಉಚಿತ ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ’ವನ್ನು 50 ವರ್ಷ ವಯಸ್ಸು ಮೀರಿದ ಬ್ಯಾಂಕಿನ ಸದಸ್ಯರಿಗಾಗಿ ಮೇ 26 ರಂದು ಭಾನುವಾರ ಪೂರ್ವಾಹ್ನ ಗಂಟೆ 9-30ರಿಂದ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಅಗತ್ಯವಿರುವ ಸದಸ್ಯರಿಗೆ ಮೂಳೆ ರೋಗ ತಜ್ಞರಾದ ಡಾ| ಗುರುಪ್ರಸಾದ್ D.ortho, M.S. (Ortho) ಅವರಲ್ಲಿ ಸಲಹೆ, ಸೂಚನೆಗಳನ್ನು ಪಡೆಯುವ ಅವಕಾಶವಿದೆ. ಅರ್ಹ ವ್ಯಕ್ತಿಗಳಿಗೆ ಉಚಿತ ಔಷಧಿಯನ್ನು ನೀಡಲಾಗುವುದು. ಸೂಚನೆಗಳು: * ಕಾರ್ಯಕ್ರಮದ ಮೊದಲಿಗೆ 50 ವರ್ಷ ಪ್ರಾಯ ಮೀರಿದ ನಂತರ ಮೂಳೆ ಸವೆತವನ್ನು ತಡೆಯುವ ಕುರಿತು 10 ನಿಮಿಷಗಳ ಭಾಷಣ ಮತ್ತು ಪ್ರಶ್ನೋತ್ತರ ಕಾರ್ಯಕ್ರಮವಿದೆ. * ಈ ಸದಾವಕಾಶವು ಮೊದಲು ಬಂದ 100 ಮಂದಿ ಅರ್ಹ ಸದಸ್ಯರಿಗೆ ಮಾತ್ರ.

ಉಜಿರೆ: ರುಡ್‌ಸೆಟ್ ಉಚಿತ ತರಬೇತಿ

Article Image

ಉಜಿರೆ: ರುಡ್‌ಸೆಟ್ ಉಚಿತ ತರಬೇತಿ

ಬೆಳ್ತಂಗಡಿ: ಉಜಿರೆಯ ರುಡ್‌ಸೆಟ್‌ನಲ್ಲಿ ನಡೆಯಲಿರುವ ಉಚಿತ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ಡಿಟಿಪಿ ಮೇ 27 ರಿಂದ ಜು. 10ರ ವರೆಗೆ, ಮಹಿಳೆಯರ ವಸ್ತ್ರವಿನ್ಯಾಸ ಮೇ 30 ರಿಂದ ಜೂ. 28ರ ವರೆಗೆ, ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಜೂ. 11ರಿಂದ ಜು. 10ರ ವರೆಗೆ, ಕಂಪ್ಯೂಟರ್ ಟ್ಯಾಲಿ (ಅಕೌಂಟಿಂಗ್) ಜು. 11ರಿಂದ ಆ. 9ರ ವರೆಗೆ ನಡೆಯಲಿವೆ. ಆಸಕ್ತ 18ರಿಂದ 45 ವರ್ಷ ವಯೋಮಿತಿಯ, ಕನ್ನಡ ಓದು-ಬರಹ ಬಲ್ಲ ಯುವಕ/ಯುವತಿಯರು ರುಡ್‌ಸೆಟ್ ಸಂಸ್ಥೆಯ emailujirerudsetigmail.comಗೆ ಸಲ್ಲಿಸಬಹುದು. ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸುವವರು ಮೊಬೈಲ್ ಸಂಖ್ಯೆ 6364561982ಗೆ ಸಲ್ಲಿಸಬಹುದು. ನೇರವಾಗಿಯೂ ಅರ್ಜಿ ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು, ನಿರ್ದೇಶಕರು ರುಡ್‌ಸೆಟ್ ಸಂಸ್ಥೆ ಸಿದ್ದವನ ಉಜಿರೆ ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 08256-236404 ಸಂಪರ್ಕಿಸಬಹುದು. ಜತೆಗೆ https://forms.gle/Z2xPLE1FigamcMBd9 ಅರ್ಜಿ ಸಲ್ಲಿಸಲು ಅವಕಾಶ ಇದೆ.

41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

Article Image

41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

ಹೊಸದಿಲ್ಲಿ: ಸಕ್ಕರೆ, ಹೃದಯ ಹಾಗೂ ಯಕೃತ್ತಿನಕಾಯಿಲೆಗಳಿಗೆ ಸಂಬಂಧಿಸಿದ 41 ಔಷಧಗಳ ಬೆಲೆಯನ್ನು ಕೇಂದ್ರ ಸರಕಾರ ತಗ್ಗಿಸಿದೆ. ಈ ಕುರಿತು ಔಷಧಾಲಯ ಇಲಾಖೆ ಹಾಗೂ ರಾಷ್ಟ್ರೀಯ ಔಷಧಾಲಯ ಬೆಲೆ ಪ್ರಾಧಿಕಾರ ಸೂಚನೆ ನೀಡಿದೆ. ಆ್ಯಂಟಾಸಿಡ್‌ಗಳು, ಮಲ್ಟಿವಿಟಮಿನ್‌ಗಳು, ಆಂಟಿಬಯಾಟಿಕ್‌ಗಳು, ಸೋಂಕು, ಅಲರ್ಜಿ, ಜ್ವರ, ನೋವು ನಿವಾರಣೆ ಸಹಿತ ಅತೀ ಹೆಚ್ಚಾಗಿ ಬಳಸುವ 41 ಮಾತ್ರೆ ಹಾಗೂ ಔಷಧಗಳು ಇನ್ನು ಮುಂದೆ ಇನ್ನಷ್ಟು ಕಡಿಮೆ ಬೆಲೆಗೆ ದೊರೆಯಲಿವೆ. ದೇಶದಲ್ಲಿ ಸುಮಾರು 10 ಕೋಟಿ ಮಧುಮೇಹಿಗಳಿದ್ದು, ಬೆಲೆ ಕಡಿಮೆಯಾಗಿದ್ದರಿಂದ ಅವರಿಗೆ ಅನುಕೂಲವಾಗಲಿದೆ.

ಉಜಿರೆ: ಉಚಿತ ತರಬೇತಿ

Article Image

ಉಜಿರೆ: ಉಚಿತ ತರಬೇತಿ

ಧರ್ಮಸ್ಥಳದ ಸಮೀಪ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ಕಂಪ್ಯೂಟರ್ ಡಿಟಿಪಿ(45 ದಿನಗಳು)ಯ ಉಚಿತ ತರಬೇತಿಯನ್ನು ಮೇ 27ರಿಂದ ಜು. 10ರವರೆಗೆ ಆಯೋಜಿಸಲಾಗಿದೆ. ವಯೋಮಿತಿ: 18ರಿಂದ 45 ವರ್ಷಗಳು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು, ಹೆಚ್ಚಿನ ಮಾಹಿತಿಗಾಗಿ: 08256236404, 9591044014, 9448348569, 9980885900, 9902594791, 9448484237 ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸಲು: 6364561982 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು: online website: rudsetitraining.org

ಉಚಿತ ಅಧಿಕ ರಕ್ತದೊತ್ತಡದ ತಪಾಸಣೆ ಮತ್ತು ತಡೆಗಟ್ಟುವ ಶಿಬಿರ

Article Image

ಉಚಿತ ಅಧಿಕ ರಕ್ತದೊತ್ತಡದ ತಪಾಸಣೆ ಮತ್ತು ತಡೆಗಟ್ಟುವ ಶಿಬಿರ

ಹುಬ್ಬಳ್ಳಿ (ವಿದ್ಯಾನಗರ)ಯ ಎಸ್.ಡಿ.ಎಂ. ಪಾಲಿಕ್ಲಿನಿಕ್‌ನಲ್ಲಿ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜು ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಮೆಡಿಸನ್ ವಿಭಾಗದವರ ಸಹಯೋಗದೊಂದಿಗೆ “ಜಾಗತಿಕ ಅಧಿಕ ರಕ್ತದೊತ್ತಡದ ದಿನ” ದ ಅಂಗವಾಗಿ ಮೇ ತಿಂಗಳ 17 ರಂದು(ಶುಕ್ರವಾರ) ಬೆಳ್ಳಿಗ್ಗೆ 09.00 ರಿಂದ ಮಧ್ಯಾಹ್ನ 01.00 ಗಂಟೆಯವರೆಗೆ ಉಚಿತ ರಕ್ತದೊತ್ತಡ ತಪಾಸಣೆ ಮತ್ತು ತಡೆಗಟ್ಟಲು ಮಾಡಬೇಕಾದ ವ್ಯಾಯಾಮದ ಮಹತ್ವದ ಬಗ್ಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅಧಿಕ ರಕ್ತದೊತ್ತಡ ಹೊಂದಿದವರು ಮತ್ತು 40 ವರ್ಷ ದಾಟಿದವರು ಈ ಉಚಿತ ಶಿಬಿರಕ್ಕೆ ಬಂದು ಎಸ್.ಡಿ.ಎಂ. ಕಾರ್ಡಿಯೋರೆಸ್ಪರೇಟರಿ ಫಿಸಿಯೋಥೆರಪಿ ಅವರಿಂದ ಸೂಕ್ತ ಮಾಹಿತಿ, ತಪಾಸಣೆ, ಮಾರ್ಗದರ್ಶನ ಪಡೆದುಕೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಂಗಳೂರು: ಬೆಳೆ ಹಾನಿ ಪರಿಹಾರ ಪಾವತಿ

Article Image

ಮಂಗಳೂರು: ಬೆಳೆ ಹಾನಿ ಪರಿಹಾರ ಪಾವತಿ

ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದ ಮೇಲೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರ ಪಾವತಿಸುವ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ರೈತರಿಗೆ 2,000 ರೂ. ವರೆಗೆ ಪಾವತಿಸಲು ಸರಕಾರ ಆದೇಶಿಸಿದೆ. ಬೆಳೆ ಹಾನಿ ಪರಿಹಾರ ಪಾವತಿ ಸಂಬಂಧ ಮಾಹಿತಿ ಪಡೆದುಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ವಿವರ: ಜಿಲ್ಲಾಧಿಕಾರಿಗಳ ಕಚೇರಿ, ದೂರವಾಣಿ ಸಂಖ್ಯೆ: 0824-2442590, 1077, ಮಂಗಳೂರು ಉಪವಿಭಾಗ ಅಧಿಕಾರಿಗಳ ಕಚೇರಿ, ದೂರವಾಣಿ ಸಂಖ್ಯೆ: 0824-222058, ಮಂಗಳೂರು ತಾಲೂಕು ಕಚೇರಿ ದೂರವಾಣಿ ಸಂಖ್ಯೆ: 0824-2220587 ಹಾಗೂ ಮೂಡುಬಿದಿರೆ ತಾಲೂಕು ಕಚೇರಿ ದೂರವಾಣಿ ಸಂಖ್ಯೆ: 08258-238100ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಕ್ಸಲೆಂಟ್ ಸಂಸ್ಥೆಗೆ ಸ್ವಾಮೀಜಿದ್ವಯರ ಭೇಟಿ

Article Image

ಎಕ್ಸಲೆಂಟ್ ಸಂಸ್ಥೆಗೆ ಸ್ವಾಮೀಜಿದ್ವಯರ ಭೇಟಿ

ಮೂಡುಬಿದಿರೆ ಇಲ್ಲಿನ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ತಿಪಟೂರು ನೊಣವಿನಕೆರೆಯ ಕಾಡ ಸಿದ್ದೇಶ್ವರ ಮಠದ ಶ್ರೀ ಶ್ರೀ ಅಭಿನವ ಕಾಡ ಸಿದ್ದೇಶ್ವರ ಸ್ವಾಮೀಜಿ ಹಾಗೂ ಶನಿವಾರ ಸಂತೆಯ ಹೆಗ್ದಳ್ಳಿ ಮಠದ ಶ್ರೀ ಶ್ರೀ ವಿಶ್ವನಾಥ ಸ್ವಾಮೀಜಿ ಭೇಟಿ ನೀಡಿ ಅನುಗ್ರಹ ಸಂದೇಶ ನೀಡಿದರು. ಸಂಸ್ಥೆಯ ಅಧ್ಯಕ್ಷರಿಂದ ವಿದ್ಯಾಸಂಸ್ಥೆಯ ಶೈಕ್ಷಣಿಕ ಅಭಿವೃದ್ದಿಯ ಬಗ್ಗೆ ಸವಿವರ ಪಡೆದ ಶ್ರೀಗಳು ಸಂತಸ ವ್ಯಕ್ತಪಡಿಸಿದರು. ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಪರಮ ಪೂಜ್ಯ ಸ್ವಾಮೀಜಿಗಳ ಪಾದಪೂಜೆ ಮಾಡಿ ಸ್ವಾಗತಿಸಿದರು. ಬಳಿಕ ಫಲಪುಷ್ಪಗಳೊಂದಿಗೆ ಗೌರವಿಸಲಾಯಿತು. ಮಠದ ವತಿಯಿಂದ ಯುವರಾಜ ಜೈನ್ ಹಾಗೂ ರಶ್ಮಿತಾ ಜೈನ್ ದಂಪತಿಗಳನ್ನು ಸ್ವಾಮೀಜಿಯವರು ಸನ್ಮಾನಿಸಿದರು.

ಬೆಳ್ತಂಗಡಿ: ಪಹಣಿಗೆ ಆಧಾರ್ ಸೀಡಿಂಗ್ ಕಡ್ಡಾಯ

Article Image

ಬೆಳ್ತಂಗಡಿ: ಪಹಣಿಗೆ ಆಧಾರ್ ಸೀಡಿಂಗ್ ಕಡ್ಡಾಯ

ತಾಲೂಕಿನ ಎಲ್ಲ ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)ಬಿ(2) ರ ಅಡಿ ಪಹಣಿಗಳಿಗೆ ಆಧಾರ್ ಸೀಡಿಂಗ್ ಮಾಡಲು ಅವಕಾಶ ನೀಡಲಾಗಿದ್ದು ತಾಲೂಕಿನ ಎಲ್ಲ ರೈತರು ತಮ್ಮ ಜಮೀನಿನ . ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಇಲಾಖೆಯ ವೆಬ್ ಸೈಟ್ https://landrecords.karnataka.gov.in/service4 ನಲ್ಲಿ ಲಾಗಿನ್ ಮಾಡಿಕೊಂಡು ಆಧಾರ್ ನೊಂದಿಗೆ ಲಿಂಕ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಅಥವಾ ಪಹಣಿ ಹಾಗೂ ಆಧಾ‌ರ್ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.

ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಬೆ.10.30ಕ್ಕೆ ಪ್ರಕಟ:

Article Image

ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಬೆ.10.30ಕ್ಕೆ ಪ್ರಕಟ:

ಬೆಂಗಳೂರು, ಮೇ 8: ಪ್ರಸಕ್ತ ಸಾಲಿನ ಪರೀಕ್ಷೆ-1ರ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ https://karresults. nic.in ನಲ್ಲಿ ಬೆಳಗ್ಗೆ 10.30ರಿಂದ ಫಲಿತಾಂಶ ವೀಕ್ಷಿಸಲು ಸಾಧ್ಯವಾಗಲಿದೆ. ಮಾ.25ರಿಂದ ಎ.6ರ ವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಿತ್ತು. ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. karresults.nic.inನಲ್ಲಿ ಫಲಿತಾಂಶ.

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಮೇ 31ರವರೆಗೆ ಅವಕಾಶ

Article Image

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಮೇ 31ರವರೆಗೆ ಅವಕಾಶ

ವಾಹನಗಳ ಮೇಲೆ ಹೈ ಸೇಫ್ಟಿ ರಿಜಿಸ್ಟ್ರೇಶನ್ ಪ್ಲೇಟ್ (ಹೆಚ್‌ಎಸ್‌ಆರ್‌ಪಿ) ಅಳವಡಿಕೆಗೆ ಮೇ 31 ವರೆಗೆ ಅವಕಾಶ ನೀಡಲಾಗಿದ್ದು, ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ವಿಧಿಸುವ ಸಾಧ್ಯತೆ ಇದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಎರಡು ಗಡುವಿನ ವಿಸ್ತರಣೆಗಳ ಹೊರತಾಗಿಯೂ, ರಾಜ್ಯದಲ್ಲಿ ಕೇವಲ 34 ಲಕ್ಷ ಹೆಚ್‌ಎಸ್‌ಆರ್‌ಪಿಗಳು ಮಾತ್ರ ನೋಂದಾಯಿಸಲ್ಪಟ್ಟಿವೆ. ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ) ಸಿ. ಮಲ್ಲಿಕಾರ್ಜುನ ಮಾತನಾಡಿ, ಫೆಬ್ರವರಿಯಿಂದ ಸುಮಾರು 18 ಲಕ್ಷ ನೋಂದಣಿಗಳು ನಡೆದಿವೆ ಮತ್ತು ಹೆಚ್ಚಿನ ವಾಹನಗಳು ಇನ್ನೂ ಹೆಚ್‌ಎಸ್‌ಆರ್‌ಪಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರು, ಮಧ್ಯಮ, ಭಾರಿ ವಾಣಿಜ್ಯ ವಾಹನಗಳು, ಟಿಲ್ಲರ್ & ಟ್ರಾಕ್ಟರ್‌ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸುವುದು ಕಡ್ಡಾಯ. ರಾಜ್ಯ ಸರ್ಕಾರವು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಮೇ 31ರವರೆಗೆ ಅವಕಾಶ ನೀಡಿದೆ. ನಂತರ ಜೂ. 1 ರಿಂದ ಪೊಲೀಸ್ ಇಲಾಖೆ ಜೊತೆಗೂಡಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮೇ ಎರಡನೇ ವಾರದಲ್ಲಿ ಎಸೆಸೆಲ್ಸಿ ಫಲಿತಾಂಶ ಪ್ರಕಟ

Article Image

ಮೇ ಎರಡನೇ ವಾರದಲ್ಲಿ ಎಸೆಸೆಲ್ಸಿ ಫಲಿತಾಂಶ ಪ್ರಕಟ

ಬೆಂಗಳೂರು, ಮೇ 2: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಮೇ ಎರಡನೇ ವಾರದಲ್ಲಿ ಪ್ರಕಟಿಸಲು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಆದರೆ ಫಲಿತಾಂಶ ಪ್ರಕಟಣೆಯ ದಿನಾಂಕ ನಿಗದಿಯಾಗಿಲ್ಲ. ಮಾ. 25ರಿಂದ ಎ. 6ರ ವರೆಗೆ 2,750 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದವು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗಿತ್ತು. ಎಲ್ಲ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ಅಂಕಗಳ ಕೂಡುವಿಕೆ ನಡೆಯುತ್ತಿದೆ. ಮೇ 7ರ ಒಳಗೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳ್ಳಲಿವೆ. ಮೇ 7ರಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮತದಾನ ಇರುವುದರಿಂದ ಅನಂತರ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಬೆಂಗಳೂರು: ಇಂದಿನಿಂದ ಮೇ 25ರವರೆಗೆ ಹೈಕೋರ್ಟ್‌ಗೆ ಬೇಸಿಗೆ ರಜೆ

Article Image

ಬೆಂಗಳೂರು: ಇಂದಿನಿಂದ ಮೇ 25ರವರೆಗೆ ಹೈಕೋರ್ಟ್‌ಗೆ ಬೇಸಿಗೆ ರಜೆ

ಹೈಕೋರ್ಟ್‌ಗೆ ಇಂದಿನಿಂದ ಮೇ 25ರವರೆಗೆ ಬೇಸಿಗೆ ರಜೆ ಇರಲಿದೆ. ಈ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳು ಕಾರ್ಯನಿರ್ವಹಿಸಲಿವೆ. ಈ ವೇಳೆ, ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುವುದು. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ, ಸಿವಿಲ್ ರೂಪದ ಅರ್ಜಿಗಳ ವಿಚಾರಣೆ ಇರುವುದಿಲ್ಲ, ಇ-ಫೈಲಿಂಗ್ ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ.

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ

Article Image

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಉಚಿತ ತರಬೇತಿ

ಧರ್ಮಸ್ಥಳದ ಸಮೀಪ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಸ್ವಉದ್ಯೋಗ ಆಕಾಂಕ್ಷಿಗಳಿಗೆ ಟಿ.ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ದುರಸ್ಥಿ (30 ದಿನಗಳು) ಏ. 29ರಿಂದ ಮೇ. 28ರವರೆಗೆ ಹಾಗೂ ಎಸಿ ಮತ್ತು ರೆಫ್ರಿಜರೇಟರ್ (30 ದಿನಗಳು) ಮೇ. 13ರಿಂದ ಜೂ. 11ರವರೆಗೆ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ. ವಯೋಮಿತಿ: 18 ರಿಂದ 45ವರ್ಷಗಳು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುವುದು. ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 08256236404/9591044014/9900793675/9448484237/9980885900/9902594791 ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಲು: 6364561982 Online Website: rudsetitraining.org

ಮೂಡುಬಿದಿರೆ: ಬೃಹತ್ ರಕ್ತದಾನ ಶಿಬಿರ

Article Image

ಮೂಡುಬಿದಿರೆ: ಬೃಹತ್ ರಕ್ತದಾನ ಶಿಬಿರ

ಮೂಡುಬಿದಿರೆ: ಇಲ್ಲಿಯ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಸಮಿತಿ, ಹಾಗೂ ಶ್ರೀ ಜೈನ ಮಠ, ಜೈನ್ ಮಿಲನ್, ಶ್ರೀ ಮಹಾವೀರ ಸಂಘ, ತೌಳವ ಪುರೋಹಿತರ ಸಂಘ, ತ್ರಿಭುವನ್ ಯೂತ್ ಅಸೋಸಿಯೆಶನ್, ಸರ್ವಮಂಗಳಾ ಮಹಿಳಾ ಸಂಘ, ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆ, ಇವರ ಸಹಭಾಗಿತ್ವದಲ್ಲಿ 2623ನೇ ಭ|| ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಪ್ರಯುಕ್ತ ಎ.ಜೆ. ಬ್ಲಡ್ ಬ್ಯಾಂಕ್, ಮಂಗಳೂರು ಇವರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಏ.21 ರಂದು ಮೂಡುಬಿದಿರೆಯ ಶ್ರೀ ಮಹಾವೀರ ಭವನದಲ್ಲಿ ಬೆಳಿಗ್ಗೆ ಗಂಟೆ 9.00ರಿಂದ ಮಧ್ಯಾಹ್ನ 1.00ರವರೆಗೆ ನಡೆಯಲಿದೆ. ನೋಂದಣಿಗೆ ಸಂಪರ್ಕಿಸಿ: ಡಾ| ಮಹಾವೀರ್ ಜೈನ್: 9008384865 ಸ್ವಾಮಿ ಪ್ರಸಾದ್: 9448253507 ಅನಂತವೀರ ಜೈನ್: 7676478816

ಧಾರವಾಡ: ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಲಹಾ ಶಿಬಿರ

Article Image

ಧಾರವಾಡ: ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಲಹಾ ಶಿಬಿರ

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾಲಯದವರಿಂದ ದಿನಾಂಕ ಎಪ್ರಿಲ್ 18 ರಿಂದ 20ರ ವರೆಗೆ ಬೆಳಿಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಮೂರು ದಿನಗಳ ಉಚಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸಲಹಾ ಶಿಬಿರ ನಡೆಯಲಿದೆ. ಆಸಕ್ತರು ಎಸ್.ಡಿ.ಎಂ. ದಂತ ಮಹಾವಿದ್ಯಾಲಯದ ಆವರಣದಲ್ಲಿರುವ ಪ್ರಕೃತಿ ಚಿಕಿತ್ಸಾಲಯಕ್ಕೆ ಬಂದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಚಿಕಿತ್ಸಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 0836–2468142, 90361 47874

ದ್ವಿತೀಯ ಪಿಯುಸಿ ಫಲಿತಾಂಶ: ಎಕ್ಸಲೆಂಟ್ ಮೂಡುಬಿದಿರೆಗೆ ಉತ್ತಮ ಫಲಿತಾಂಶ

Article Image

ದ್ವಿತೀಯ ಪಿಯುಸಿ ಫಲಿತಾಂಶ: ಎಕ್ಸಲೆಂಟ್ ಮೂಡುಬಿದಿರೆಗೆ ಉತ್ತಮ ಫಲಿತಾಂಶ

ಮೂಡುಬಿದಿರೆ: ಮಾರ್ಚ್ ನಲ್ಲಿ ನಡೆದ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ. ಜೈನ ಕಾಶಿಯಾದ ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ರೂಪುಗೊಂಡಿದ್ದು, ಎಕ್ಸಲೆಂಟ್ ವಿದ್ಯಾಸಂಸ್ಥೆ ಕಳೆದ ಹನ್ನೊಂದು ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸುತ್ತಿದ್ದು, ಶಿಸ್ತು ಸಂಸ್ಕಾರಬದ್ಧ ಜೀವನದ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರಂತರವಾಗಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿ ತುಮಕೂರಿನ ಗುಣಸಾಗರ ಡಿ. 597 ಅಂಕವನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿರುತ್ತಾರೆ ಮತ್ತು ಚಿತ್ರದುರ್ಗದ ಭಾರ್ಗವಿ ಎಂ.ಜೆ. 595 ಅಂಕವನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ. ಶಿವಮೊಗ್ಗದ ಧ್ರುವ ಜಿ. ಹೆಗ್ಡೆ(591), ಉಡುಪಿಯ ಪ್ರಾಪ್ತಿ ಬೆಳಕೇರಿ(591) ಮೈಸೂರಿನ ಸುಹಾಸ್ ಎಂ.ಎಸ್.(590), ಕೊಡಗಿನ ಸ್ಪೂರ್ತಿ ಎಂ.ಜಿ.(590), ಉತ್ತರ ಕನ್ನಡದ ರಿಷಬ್ ರಾಜೇಶ್ ನಾಯಕ್(590) ರಾಜ್ಯದ ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದದಲ್ಲಿ ಗದಗಿನ ಸ್ಪೂರ್ತಿ ಸಿ.ಪಾಟೀಲ್ 593 ಅಂಕವನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದಿರುತ್ತಾರೆ. ಹಾಸನದ ಖುಷಿ ಕೆ.(591), ದಕ್ಷಿಣ ಕನ್ನಡದ ರೋಚನಾ ಮಲ್ಯ(590), ಹಾಸನದ ಎ.ಪಿ. ರಕ್ಷಾ(589), ಹುಬ್ಬಳ್ಳಿಯ ಶರದ್ ಎಂ.ಭಟ್(589), ಮಂಡ್ಯದ ಸಾನಿಕಾ ಜೈನ್(589), ಹಾಸನದ ಮೋಕ್ಷಾ ಜೈನ್(588), ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕ್ರತಿ ಪೂಜಾರಿ(588) ಉತ್ತಮ ಅಂಕವನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಸಂಸ್ಥೆಯ ಹದಿನೈದು ವಿದ್ಯಾರ್ಥಿಗಳು ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆದಿರುತ್ತಾರೆ. ಪರೀಕ್ಷೆಗೆ ಹಾಜರಾದ 852 ವಿದ್ಯಾರ್ಥಿಗಳಲ್ಲಿ 851 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 649 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 201 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಾಗಿದ್ದು ಸಂಸ್ಥೆಯ ಒಟ್ಟು ಫಲಿತಾಂಶ 99.90% ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Article Image

ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

ಬೆಳ್ತಂಗಡಿ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥನದ ವರ್ಷಾವಧಿ ಜಾತ್ರಾ ಮಹೋತ್ಸವವು ಏ. 13ರಿಂದ ಪ್ರಾರಂಭಗೊಂಡು ಏ. 22ರವರೆಗೆ ನೆರವೇರಲಿದ್ದು, ಏ. 25ರಂದು ಶ್ರೀ ಭದ್ರಾಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ನೆರವೇರಲಿದ್ದು ಈ ಪ್ರಯುಕ್ತ ಚಂಡಿಕಾಯಾಗ ಹಾಗೂ 1008 ಹೂವಿನ ಪೂಜೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮ: ಏ. 14ರಂದು ರಾತ್ರಿ 7 ರಿಂದ ಭರತನಾಟ್ಯ ಕಾರ್ಯಕ್ರಮ ‘ನೃತ್ಯಾರ್ಪಣಂ’, ಏ. 16ರಂದು ರಾತ್ರಿ 7ರಿಂದ ‘ಮೀನಾಕ್ಷಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ, ಏ. 17 ರಂದು ರಾತ್ರಿ 7 ರಿಂದ ‘ಶ್ರೀ ರಾಮ ಕಾರುಣ್ಯ’ ಯಕ್ಷಗಾನ ತಾಳಮದ್ದಳೆ, ಏ. 18ರಂದು ರಾತ್ರಿ 7ರಿಂದ ತುಳುನಾಡ ಕಲಾವಿದರು ವೇಣೂರು ಇವರಿಂದ ಮನರಂಜನಾ ಕಾರ್ಯಕ್ರಮ, ಏ. 19ರಂದು ರಾತ್ರಿ 7ರಿಂದ 9.30ರವರೆಗೆ ‘ಯಕ್ಷ-ಗಾನ-ವೈಭವ’, ರಾತ್ರಿ 9.30ರಿಂದ ಶಿವಾಂಜಲಿ ಡಾನ್ಸ್ ಇನ್‌ಸ್ಟಿಟ್ಯೂಟ್, ವೇಣೂರು ಇವರಿಂದ ‘ಹಾಸ್ಯ-ನಾಟ್ಯ-ವೈಭವ’, ಏ.21ರಂದು ಸಂಜೆ 6.30ರಿಂದ ಪಾವಂಜೆ ಮೇಳದ ಯಕ್ಷಗಾನ- ಶ್ರೀ ದೇವಿ ಮಹಾತ್ಮೆ ನಡೆಯಲಿದೆ.

ದ್ವಿತೀಯ ಪಿಯುಸಿ ಫಲಿತಾಂಶ: ದ.ಕ ಜಿಲ್ಲೆ ಪ್ರಥಮ

Article Image

ದ್ವಿತೀಯ ಪಿಯುಸಿ ಫಲಿತಾಂಶ: ದ.ಕ ಜಿಲ್ಲೆ ಪ್ರಥಮ

ಬೆಳ್ತಂಗಡಿ: 2023-24 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ದ.ಕ ಜಿಲ್ಲೆ 97.37% ಫಲಿತಾಂಶದೊಂದಿಗೆ ಪ್ರಥಮ ಸ್ಥಾನ, ಉಡುಪಿ 96.80% ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಈ ವರ್ಷ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಒಟ್ಟು 6,81,079 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ 5,52,690 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನ

Article Image

ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನ

ಬೆಂಗಳೂರು: ಕಂದಾಯ ಇಲಾಖೆಯ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಏಪ್ರಿಲ್ 5ರಿಂದ ಮೇ 4ರವರೆಗೆ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಅರ್ಜಿ ಶುಲ್ಕ ಪಾವತಿಸಲು ಮೇ 7ರ ಬ್ಯಾಂಕ್‌ ಅವಧಿಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮುನ್ನ ಫೆ.20ರಂದು ಅಧಿಸೂಚನೆ ಹೊರಡಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 3ರವರೆಗೆ ಅವಕಾಶ ಕೊಡಲಾಗಿತ್ತು. ಆದರೆ, ಆನ್‌ಲೈನ್‌ ಅರ್ಜಿಯಲ್ಲಾದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ, ಈಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ‌

ಮಂಗಳೂರು: ಆರ್ಥೋಪೆಡಿಕ್ ಮತ್ತು ರಕ್ತ ಪರೀಕ್ಷೆಯ ತಪಾಸಣಾ ಶಿಬಿರ

Article Image

ಮಂಗಳೂರು: ಆರ್ಥೋಪೆಡಿಕ್ ಮತ್ತು ರಕ್ತ ಪರೀಕ್ಷೆಯ ತಪಾಸಣಾ ಶಿಬಿರ

ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಮಂಗಳೂರು ಬಿಗ್ ಸಿಟಿ ಲೀಜನ್, ಎಸ್‌ಸಿಐ ಉಳ್ಳಾಲ ರಾಣಿ ಅಬ್ಬಕ್ಕ ಲೀಜನ್, ಎಸ್‌ಸಿಐ ಮಂಗಳೂರು ಕರಾವಳಿ ಲೀಜನ್ ಪ್ರದೇಶ - ಡಿಯ ಸಹಯೋಗದಲ್ಲಿ 'White Glove' ಡಯಾಗ್ನೊಸ್ಟಿಕ್ಟ್ ಮತ್ತು ಕ್ಲಿನಿಕ್ ನ ಸಹಕಾರದೊಂದಿಗೆ ಆರ್ಥೋಪೆಡಿಕ್ ಮತ್ತು ರಕ್ತ ಪರೀಕ್ಷೆಯ ತಪಾಸಣಾ ಶಿಬಿರವು ಏಪ್ರಿಲ್ 6 ಮತ್ತು 7 ರಂದು ಬೆಳಗ್ಗೆ 9.00 ರಿಂದ ಮಧ್ಯಾಹ್ನ 2.00 ವರೆಗೆ ನಡೆಯಲಿದೆ. ಸ್ಥಳ: 4ನೇ ಮಹಡಿ, ಇಂಡಸ್ ಬಿಸಿನೆಸ್ ಸೆಂಟರ್ ಆರ್ಯ ಸಮಾಜ ರಸ್ತೆ, ಕದ್ರಿ ಮಂಗಳೂರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9118787911.

ಇಂದು ಪ್ರಥಮ ಪಿಯು ಪಲಿತಾಂಶ

Article Image

ಇಂದು ಪ್ರಥಮ ಪಿಯು ಪಲಿತಾಂಶ

ಬೆಂಗಳೂರು, ಮಾ. 29: ಪ್ರಥಮ ಪಿಯುಸಿ ಪರೀಕ್ಷಾ ಪಲಿತಾಂಶ ಶನಿವಾರ karresults.nic.in ನಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಪ್ರಕಟಗೊಳ್ಳಲಿದೆ. ಬೆಳಗ್ಗೆ 9 ರಿಂದ 11ರ ಮಧ್ಯೆ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಮೇ. 20ರಿಂದ ಮೇ. 31ರವರೆಗೆ ನಡೆಯಲಿದ್ದು, ನೋಂದಾಯಿಸಿಕೊಳ್ಳಲು ಏ. 20 ಕೊನೆಯ ದಿನವಾಗಿದೆ.

First Previous

Showing 3 of 5 pages

Next Last