ಎಲೆಚುಕ್ಕಿ ರೋಗ: ಸಹಾಯ ಧನಕ್ಕೆ ರೈತರು ಹೀಗೆ ಅರ್ಜಿ ಸಲ್ಲಿಸಿ
Published Date: 30-May-2025 Link-Copied
ಬೆಳ್ತಂಗಡಿ: ತಾಲೂಕಿನಾದ್ಯಂತ ಅಡಿಕೆ ಎಲೆಚುಕ್ಕೆ ಬಾಧೆ ತೀವ್ರವಾಗಿ ಅಡಿಕೆ ಬೆಳೆಯ ಉತ್ಪಾದಕತೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವೈಜ್ಞಾನಿಕ ಸಮಿತಿ ರಚಿಸಿ ರೈತರಿಗೆ ಸಹಾಯವಾಗುವಂತೆ ಸಹಾಯಧನ ನೀಡಲು ಶಿಫಾರಸ್ಸು ಮಾಡಿದೆ. ಅದರಂತೆ ಅಡಿಕೆ ಎಲೆಚುಕ್ಕೆ ರೋಗದ ಸಮಗ್ರ ನಿರ್ವಹಣೆಗೆ ಶೇ.30ರ ಸಹಾಯ ಧನದಂತೆ ರೈತರು ಖರೀದಿ ಮಾಡಿದ ಶಿಲೀಂದ್ರನಾಶಕ/ಪೋಷಕಾಂಶಗಳ ಜಿ.ಎಸ್.ಟಿ. ನಮೂದು ಹೊಂದಿದ ಮತ್ತು ಎ.2025ರ ನಂತರ ಖರೀದಿಸಿರುವ ಬಿಲ್ಲುಗಳನ್ನು ಯೋಜನೆಯ ಮಾರ್ಗಸೂಚಿಯಂತೆ ನಿಗದಿಪಡಿಸಿದ ಅರ್ಜಿ ಜೊತೆಗೆ ಬೆಳ್ತಂಗಡಿ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಈ ಮೂಲಕ ಸೂಚಿಸಲಾಗಿದೆ. ಅರ್ಜಿ ಜೊತೆಗೆ ಪಹಣಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ಎ. 2025ರ ನಂತರ ಖರೀದಿಸಿದ ಜಿ.ಎ.ಟಿ. ಹೊಂದಿರುವ ಮೂಲ ಬಿಲ್ಲುಗಳನ್ನು ಸಲ್ಲಿಸುವುದು. ವರ್ಗವಾರು, ಅರ್ಜಿಗಳ ಜೊತೆಗನುಗುಣವಾಗಿ ತಾಲೂಕಿಗೆ ಹಂಚಿಕೆಯಾದ ಅನುದಾನದಂತೆ ಸಹಾಯಧನಕ್ಕೆ ಅರ್ಜಿಗಳನ್ನು ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಿ: ಬೆಳ್ತಂಗಡಿ ಹೋಬಳಿ: ಮಹಾವೀರ ಶೇಬಣ್ಣ ಮೊ.ನಂ: 8123921087 ವೇಣೂರು ಹೋಬಳಿ: ಭೀಮರಾಯ ಸೊಡಗಿ ಮೊ.ನಂ: 9741713598 ಕೊಕ್ಕಡ ಹೋಬಳಿ: ಮಲ್ಲಿನಾಥ ಬಿರಾದಾರ ಮೊ.ನಂ: 9986411477 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು: ಕೆ.ಎಸ್. ಚಂದ್ರಶೇಖರ್, ಮೊ.ನಂ: 9448336863