ಬೆಳ್ತಂಗಡಿ ಮುಳಿಯ ಜುವೆಲ್ಸ್‌ನಲ್ಲಿ ಚಿನ್ನದಂತ ನನ್ನ ಅಪ್ಪ ವಿಶೇಷ ಅನುಬಂಧದ ಕಾರ್ಯಕ್ರಮ ನಡೆಯಿತು
Published Date: 23-Jun-2025 Link-Copied
ಬೆಳ್ತಂಗಡಿ: ನಾಡಿನ ಪ್ರಸಿದ್ದ ಮತ್ತು ಶುಧ್ದತೆಗೆ ಹೆಸರುವಾಸಿದ ಎಂಟು ದಶಕಗಳ ಪರಂಪರೆಯಿರುವ ಮುಳಿಯ ಜುವೆಲ್ಸ್ ನ ಬೆಳ್ತಂಗಡಿ ಶಾಖೆಯಲ್ಲಿ 'ಚಿನ್ನದಂತ ನನ್ನ ಅಪ್ಪ' ವಿಶೇಷ ಅನುಬಂಧ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜೂ.22 ರಂದು ನಡೆಯಿತು. ಪ್ರಥಮ ಬಹುಮಾನವನ್ನು ತಂದೆ ಮಗಳಾದ ಕವಿತೇಶ್ ನಾವರ - ದಕ್ಷಿ, ದ್ವಿತೀಯ ಬಹುಮಾನವನ್ನು ತಂದೆ ಮಗನಾದ ಪ್ರಸನ್ನ - ಪ್ರತ್ಯುಷ್ ಹಾಗೂ ಸಾಮಾನದಕರ ಬಹುಮಾನವನ್ನು ಚೈತ್ರೇಶ್- ಶೈವಿ ಸಿ ಎಚ್, ರವಿಚಂದ್ರ ಶೆಣೈ-ಲತಾ ಶೆಣೈ ಹಾಗೂ ಹೆರಾಲ್ಡ್ ಪಿಂಟೊ - ಕ್ರಿಸ್ಟ ಪಡೆದುಕೊಂಡಿದ್ದಾರೆ. ಪ್ರಜ್ಞಾ ಓಡಿಲ್ನಾಳ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಮುಳಿಯ ಸಂಸ್ಥೆಯ ವ್ಯವಸ್ಥಾಪಕರು ಲೋಹಿತ್ ಕುಮಾರ್, ಉಪ ಶಾಖಾಪ್ರಭಂಧಕರಾದ ದಿನೇಶ್ ಹಾಗೂ ಮುಳಿಯ ಸಿಬ್ಬಂದಿ ವರ್ಗದವರು, ಉಪಸ್ಥಿತರಿದ್ದರು.