Article Image

ರಾಷ್ಟ್ರಮಟ್ಟದ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಪ್ರತಿಭೆ ಮೌಲ್ಯ ವೈ. ಆರ್. ಜೈನ್

Article Image

ರಾಷ್ಟ್ರಮಟ್ಟದ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಮೂಡಬಿದ್ರೆಯ ಪ್ರತಿಭೆ ಮೌಲ್ಯ ವೈ. ಆರ್. ಜೈನ್

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಇವರು ಶಾಲಾ ಮಕ್ಕಳಿಗಾಗಿ ಪ್ರತಿ ವರ್ಷವೂ ಆಯೋಜಿಸುವ ರಾಷ್ಟ್ರಮಟ್ಟದ ಯುವ ವಿಜ್ಞಾನಿ ಕಾರ್ಯಕ್ರಮ ‘ಯುವಿಕ’ಗೆ ಈ ಬಾರಿ ಎಕ್ಸಲೆಂಟ್ ಮೂಡುಬಿದಿರೆಯ ಪ್ರತಿಭೆ ಮೌಲ್ಯ ವೈ. ಆರ್. ಜೈನ್ ಆಯ್ಕೆಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಯನ್ನು ಗೈದಿದ್ದಾರೆ. ಇಸ್ರೋ’ ನ ವಿವಿಧ ಕೇಂದ್ರಗಳಲ್ಲಿ ಎರಡು ವಾರಗಳ ಕಾಲ ಜರಗುವ 'ಯುವಿಕ-2024' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈ ಬಾರಿ ದೇಶದ ಎಲ್ಲಾ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 85,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಕಾಂಕ್ಷಿಗಳಾಗಿ ಅರ್ಜಿಯನ್ನು ಸಲ್ಲಿಸಿದ್ದರು. ವಿದ್ಯಾರ್ಥಿಗಳ ಮೂರು ವರುಷಗಳ ಶೈಕ್ಷಣಿಕ ಸಾಧನೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ವೈಜ್ಞಾನಿಕ, ಕ್ರೀಡಾ ಸಾಧನೆಗಳು, ಒಲಂಪಿಯಾಡ್ ತತ್ಸಮಾನ ಸ್ಪರ್ಧೆಗಳಲ್ಲಿ ಪಡೆದ ರ‍್ಯಾಂಕ್ ಜೊತೆಗೆ ಮುಖ್ಯವಾಗಿ ಇಸ್ರೋ ಆಯೋಜಿಸುವ ಆನ್‌ಲೈನ್ ರಸಪ್ರಸ್ನೆಯಲ್ಲಿ ವಿದ್ಯಾರ್ಥಿಯ ಪಲಿತಾಂಶ ಇವೆಲ್ಲವನ್ನು ಮಾನದಂಡವನ್ನಾಗಿರಿಸಿ 250 ಮಂದಿ ವಿದ್ಯಾರ್ಥಿಗಳನ್ನು ಪ್ರಸಕ್ತ ಸಾಲಿನ ‘ಯುವಿಕ’ಗೆ ಆಯ್ಕೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ 12 ಮಂದಿಗಳಲ್ಲಿ ರಾಜ್ಯ ಪಠ್ಯಕ್ರಮ ಭೋಧಿಸುವ ಶಿಕ್ಷಣ ಸಂಸ್ಥೆಯಿಂದ ಆಯ್ಕೆಯಾಗಿ ಭಾಗವಹಿಸಿದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ ಮೂಡುಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮೌಲ್ಯ ವೈ. ಆರ್. ಜೈನ್ ಆಗಿರುವುದು ಶಿಕ್ಷಣ ಕಾಶಿ ಎನಿಸಿದ ಮೂಡುಬಿದಿರೆಗೆ ವಿಶೇಷ ಮೆರಗನ್ನು ತಂದಿದೆ ಈಗಾಗಲೇ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿ, ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ ತಯಾರಿ, ಜಿಲ್ಲಾ ರಾಜ್ಯ ಮಟ್ಟದ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆಯ ಜೊತೆಗೆ ರಾಷ್ಟ್ರ, ರಾಜ್ಯಮಟ್ಟದ ಅಟಲ್ ಮಾರಥಾನ್, ಇನ್‌ಸ್ಪಾಯರ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿನೂತನವಾದ ಸಂಶೋಧನಾತ್ಮಕ ಮಾದರಿಗಳನ್ನು ಪ್ರಸ್ತುತ ಪಡಿಸುವ ಮೂಲಕ ಗಮನ ಸೆಳೆದಿರುವ ಈ ಪ್ರತಿಭೆ ಮೂಡುಬಿದಿರೆಯ ಪ್ರತಿಷ್ಠಿತ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಇವರ ಸುಪುತ್ರಿಯಾಗಿದ್ದಾಳೆ.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಮೇ 30 ರಂದು ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಸಮಾರಂಭ

Article Image

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಮೇ 30 ರಂದು ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಸಮಾರಂಭ

ಉಜಿರೆ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭ ಇದೇ 30 ರಂದು ಗುರುವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಬೆಂಗಳೂರಿನ ಪದ್ಮಿನಿ ಪದ್ಮರಾಜ್ ರವರು ತಿಳಿಸಿದ್ದಾರೆ. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸೇವೆ, ಸಾಧನೆ ಬಗ್ಗೆ ಅವರು ಧರ್ಮಸ್ಥಳದಲ್ಲಿ ಮಾಹಿತಿ ನೀಡಿದರು. ಮೇ 30 ರಂದು ಗುರುವಾರ ಪೂರ್ವಾಹ್ನ ಹತ್ತು ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವರು. ಹೇಮಾವತಿ ವೀ. ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಖ್ಯಾತ ಹೃದ್ರೋಗ ತಜ್ಞರಾದ ಬೆಂಗಳೂರಿನ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರೀಯವರು ಮತ್ತು ಚಲನಚಿತ್ರ ನಟಿ ಪದ್ಮಜಾ ರಾವ್ ರವರು ಶುಭಾಶಂಸನೆ ಮಾಡುವರು. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ, ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುರೀಮಾ ಯಶವಂತ್, ಹುಣಸೂರಿನ ಛಾಯಾ ಮತ್ತು ಮೈಸೂರಿನ ಕುಮಾರಿ ಅನನ್ಯಾ ಅವರನ್ನು ಸನ್ಮಾನಿಸಲಾಗುವುದು. ರಾಜ್ಯದಲ್ಲಿರುವ ಜೈನ ಮಹಿಳಾ ಒಕ್ಕೂಟದ ಎಲ್ಲಾ ಶಾಖೆಗಳಿಂದ ಸುಮಾರು ಒಂದು ಸಾವಿರ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದು ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಪದ್ಮಿನಿ ಪದ್ಮರಾಜ್ ರವರು ಮಾಹಿತಿ ನೀಡಿದರು.

ನಿಧನ: ಕಟ್ಟೆಮನೆ ಉದಯ್ ಕುಮಾರ್

Article Image

ನಿಧನ: ಕಟ್ಟೆಮನೆ ಉದಯ್ ಕುಮಾರ್

ಪುಂಜಾಲಕಟ್ಟೆ: ಇಲ್ಲಿಯ ಕಟ್ಟೆಮನೆ ಉದಯ್ ಕುಮಾರ್ (77ವ) ಇವರು ಮೇ 21 ರಂದು ರಾತ್ರಿ ನಿಧನ ಹೊಂದಿದರು. ಇವರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು- ವರ್ಗವನ್ನು ಅಗಲಿದ್ದಾರೆ

ನಿಧನ: ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ

Article Image

ನಿಧನ: ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ

ಗುರುವಾಯನಕೆರೆ ಶಕ್ತಿನಗರದ ಧನಂಜಯ ಇಂದ್ರ(72ವ) ಇವರು ಇಂದು (ಮೇ. 19) ಬೆಳಗ್ಗೆ ನಿಧನ ಹೊಂದಿದರು. ಇವರು ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ಬಸದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಓರ್ವ ಮಗ, ಸೊಸೆ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ಮೂಡುಬಿದಿರೆಯ ಮಾಸಿಕ ಸಭೆ ವಾಲ್ಪಾಡಿ ಬಸದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀಪಾಲ್ ಎಸ್. ರವರು ತಮ್ಮ ಧರ್ಮಪತ್ನಿ ಮತ್ತು ಮಾತೃಶ್ರೀಯವರ ಸ್ಮರಣೆಯಲ್ಲಿ ಕೊಡಮಾಡುವ "ವಜ್ರಶ್ರೀ ಅರ್ಚಕ ಪುರಸ್ಕಾರ"ವನ್ನು ಅಳಿಯೂರು ಬಸದಿಯ ಹಿರಿಯ ಅರ್ಚಕರಾದ ರತ್ನವರ್ಮ ಇಂದ್ರರ ಸೇವೆಯನ್ನು ಗುರುತಿಸಿ, ರತ್ನವರ್ಮ ಇಂದ್ರ ಹಾಗೂ ವಿನಯ ದಂಪತಿಯನ್ನು ಶಾಲು, ಫಲಕಾಣಿಕೆ, ಸನ್ಮಾನ ಪತ್ರ ಹಾಗೂ ನಗದು ಪುರಸ್ಕಾರದೊಂದಿಗೆ ಜೈನ್ ಮಿಲನ್ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಮಿಲನ್ ಅಧ್ಯಕ್ಷ ದಿನೇಶ್ ಕುಮಾರ್ ಆನಡ್ಕ, ಶ್ವೇತಾ ಜೈನ್, ಪ್ರಭಾಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ವೇಣೂರು: ಸುರಭಿ ಮನೆ ಶ್ರೀಮತಿ ವಸಂತಿ ನಿಧನ

Article Image

ವೇಣೂರು: ಸುರಭಿ ಮನೆ ಶ್ರೀಮತಿ ವಸಂತಿ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು, ಬಜಿರೆ ಗ್ರಾಮದ ಸುರಭಿ ಮನೆ ನಿವಾಸಿ, ಬಿ. ರತ್ನವರ್ಮ ಇಂದ್ರರ ಧರ್ಮಪತ್ನಿ ಶ್ರೀಮತಿ ವಸಂತಿ (76ವ) ಇವರು ಇಂದು (ಎ.1) ನಿಧನ ಹೊಂದಿದರು. ಇವರು ಮಕ್ಕಳಾದ ಪ್ರಮೋದ್ ಕುಮಾರ್, ಶುಭ, ಮತ್ತು ಪೂರ್ಣಿಮಾ, ಸವಿತ, ಸುಧೀರ್ ಕುಮಾರ್ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಡಾ. ಪ್ರಭಾತ್ ಬಲ್ನಾಡು ಪ್ರಾಂಶುಪಾಲರಾಗಿ ಪದೋನ್ನತಿ

Article Image

ಡಾ. ಪ್ರಭಾತ್ ಬಲ್ನಾಡು ಪ್ರಾಂಶುಪಾಲರಾಗಿ ಪದೋನ್ನತಿ

ಮೂಡುಬಿದಿರೆಯ 52 ವರ್ಷಗಳ ಇತಿಹಾಸವನ್ನು ಹೊಂದಿರುವ ಜೈನ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಪ್ರಭಾತ್ ಬಲ್ನಾಡು ಪೇಟೆಯವರು ಪದೋನ್ನತಿ ಹೊಂದಿದ್ದಾರೆ. 1999ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆಯಲ್ಲಿ ಉಪನ್ಯಾಸ ವೃತ್ತಿ ಆರಂಭಿಸಿದ ಇವರು ಕಳೆದ 22 ವರ್ಷಗಳಿಂದ ಜೈನ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಆಕಾಶವಾಣಿ ಹಾಗೂ ಟಿವಿ ಮಾಧ್ಯಮಗಳ ಸಂಪನ್ಮೂಲ ವ್ಯಕ್ತಿಯಾಗಿ, ಇತಿಹಾಸ ಸಂಶೋಧಕರಾಗಿ, ಲೇಖಕರಾಗಿ, ಜೆಸಿಐ ತರಬೇತುದಾರರಾಗಿ, ಅಧ್ಯಕ್ಷರಾಗಿ ಹತ್ತಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಸಕ್ರಿಯರಾಗಿರುವ ಇವರು ಹಿರಿಯ ಯಕ್ಷಗಾನ ಸಂಘಟಕ ಮರ್ಕಂಜದ ಯುವರಾಜ ಜೈನ್ ಮತ್ತು ಪ್ರಸನ್ನ ದಂಪತಿಗಳ ಪುತ್ರ.

ಹಾಸನ: ಡಾ. ಎಸ್. ಎ. ನಿತಿನ್ ನೇಮಕ

Article Image

ಹಾಸನ: ಡಾ. ಎಸ್. ಎ. ನಿತಿನ್ ನೇಮಕ

ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರನ್ನಾಗಿ ಡಾ.ಎಸ್.ಎ ನಿತಿನ್ ಅವರನ್ನು ನೇಮಕ ಮಾಡಲಾಗಿದೆ. ಇವರು ಪ್ರಸ್ತುತ ನಗರದ ರಾಜೀವ್ ಗಾಂಧಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಉಪಾಧ್ಯಕ್ಷರಾಗಿ ಸೂರಜ್ ಜೈನ್ ಮಾರ್ನಾಡ್ ಆಯ್ಕೆ

Article Image

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಉಪಾಧ್ಯಕ್ಷರಾಗಿ ಸೂರಜ್ ಜೈನ್ ಮಾರ್ನಾಡ್ ಆಯ್ಕೆ

ಕಳೆದ ಅನೇಕ ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸೂರಜ್ ಜೈನ್ ಅವರು ಇದೀಗ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಈ ಹಿಂದೆ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿಯು ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅದೇ ರೀತಿ ಅನೇಕ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಮೂಡುಬಿದಿರೆ ತಾಲೂಕಿನ ಮಾರ್ನಾಡಿನವರು

ಅಮೇರಿಕಾದ ಹಾರ್ವರ್ಡ್ ಯೂನಿವರ್ಸಿಟಿಗೆ ಪ್ರದೀಪ್ ಜೈನ್ ಬಲ್ನಾಡು ಪೇಟೆ

Article Image

ಅಮೇರಿಕಾದ ಹಾರ್ವರ್ಡ್ ಯೂನಿವರ್ಸಿಟಿಗೆ ಪ್ರದೀಪ್ ಜೈನ್ ಬಲ್ನಾಡು ಪೇಟೆ

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರೇಟೆಜಿಕ್ ಲೀಡರಶಿಪ್ ಪ್ರೋಗ್ರಾಮ್ ಗೆ (strategic Leadership ) ಸುಳ್ಯ ತಾಲೂಕು ಮರ್ಕಂಜದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ ಯಾಗಿದ್ದು ಇದರಲ್ಲಿ ಭಾಗವಹಿಸಲು ಶನಿವಾರ ಅಮೆರಿಕದ ಬೋಸ್ಟನ್ ಗೆ ತೆರಳಿದ್ದಾರೆ. ಇದೇ ಸಂದರ್ಭ ಅವರು ಅಮೆರಿಕದ ನ್ಯೂಯಾರ್ಕ್ ಮತ್ತು ವಾಷಿಂಗ್ಟನಿಗೂ ಭೇಟಿ ನೀಡಲಿದ್ದಾರೆ. ದೇಶದಾದ್ಯಂತ 25 ರಾಜ್ಯಗಳಲ್ಲಿ 750 ಶಾಖೆಗಳನ್ನು ಹೊಂದಿರುವ ಉಜ್ಜಿವನ್ ಬ್ಯಾಂಕ್ ಇದರ ಹೌಸಿಂಗ್ ಲೋನ್ ವಿಭಾಗದ ರಾಷ್ಟ್ರಮಟ್ಟದ ವ್ಯವಹಾರ ಮುಖ್ಯಸ್ಥರಾಗಿರುವ ಇವರು ಸುಳ್ಯ ತಾಲೂಕು ಬಲ್ನಾಡು ಪೇಟೆ ಬಸದಿಯ ಆಡಳಿತ ಮುಕ್ತೆಸರರಾದ ಮತ್ತು ಯಕ್ಷಗಾನ ಸಂಘಟಕರಾದ ಮರ್ಕಂಜ ಯುವರಾಜ ಜೈನ್ ಮತ್ತು ಪ್ರಸನ್ನ ದಂಪತಿಗಳ ಕಿರಿಯ ಪುತ್ರರಾಗಿದ್ದಾರೆ.

ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವಾರ್ಪಣೆ

Article Image

ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವಾರ್ಪಣೆ

SCDCC ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಂ. ಎನ್. ರಾಜೇಂದ್ರ ಕುಮಾರ್ ಅವರನ್ನು ಮುಲ್ಕಿ ಅರಮನೆಯ ವತಿಯಿಂದ ಎಂ ಗೌತಮ್ ಜೈನ್ ಹಾಗೂ ಪವಿತ್ರೇಶ್ ಗೌರವಾರ್ಪಣೆ ಸಲ್ಲಿಸಿದರು.

ನೂತನ ಅಧ್ಯಕ್ಷರಾಗಿ ಹರ್ಷವರ್ಧನ ಪಡಿವಾಳ್ ಅವರು ಆಯ್ಕೆ

Article Image

ನೂತನ ಅಧ್ಯಕ್ಷರಾಗಿ ಹರ್ಷವರ್ಧನ ಪಡಿವಾಳ್ ಅವರು ಆಯ್ಕೆ

ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರದ (ಮೂಡಾ) ನೂತನ ಅಧ್ಯಕ್ಷರಾಗಿ ನ್ಯೂ ಪಡಿವಾಳ್ ಮಾಲಕ ಹರ್ಷವರ್ಧನ ಪಡಿವಾಳ್ ಅವರು ಆಯ್ಕೆಯಾಗಿದ್ದಾರೆ. ಕಳೆದ ಕೆಲ ಸಮಯಗಳಿಂದ ಅಧ್ಯಕ್ಷರಿಲ್ಲದೇ ಇದ್ದ ಮೂಡಾ ಕ್ಕೆ ಇದೀಗ ಹೊಸ ಸಾರಥಿಯ ನೇಮಕವಾಗಿರುತ್ತದೆ.

ಹಿರಿಯ ಸಾಹಿತಿ ನಾಗರಾಜ್ ಪೂವಣಿ ನಿಧನ

Article Image

ಹಿರಿಯ ಸಾಹಿತಿ ನಾಗರಾಜ್ ಪೂವಣಿ ನಿಧನ

ಹಿರಿಯ ಸಾಹಿತಿ, ಬರಹಗಾರರು, ನಾ ವುಜಿರೆ ಎಂದೇ ಪ್ರಸಿದ್ಧಿ ಹೊಂದಿದ್ದ ಎಸ್‌ಡಿಎಂ ಕಾಲೇಜಿನ ಹಿಂದಿ ವಿಭಾಗದ ನಿವೃತ್ತ ಪ್ರೋಫೆಸರ್, ನಾಗರಾಜ್ ಪೂವಣಿ (84 ವ). ಇವರು ಇಂದು (ಮಾ. 11) ನಿಧನ ಹೊಂದಿದರು. ಇವರು ಪತ್ನಿ ಸರಸ್ವತಿ ನಾ ವುಜಿರೆ ಮತ್ತು ಪುತ್ರ ಪಾಶ್ವನಾಥ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಕಾರ್ಕಳದ ಶ್ರದ್ಧಾ ಜೈನ್ ಅವರಿಗೆ ಪ್ರಧಾನಿ ಮೋದಿ ಗೌರವ

Article Image

ಕಾರ್ಕಳದ ಶ್ರದ್ಧಾ ಜೈನ್ ಅವರಿಗೆ ಪ್ರಧಾನಿ ಮೋದಿ ಗೌರವ

ಹೊಸದಿಲ್ಲಿ ಮಾ. 8: ಕಾರ್ಕಳದ ಶ್ರದ್ಧಾ ಜೈನ್, ತಾಂಜಾನಿಯಾದ ಕಿಲಿ ಪೌಲ್ ಸಹಿತ ಸಾಮಾಜಿಕ ಜಾಲತಾಣಗಳ ಮೂಲಕ ಜನಮನ ಗೆದ್ದಿರುವ ಒಟ್ಟು 20 ಕ್ಷೇತ್ರಗಳ 23 ಯುವ ಕ್ರಿಯೇಟರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದೇಶದ ಪ್ರಪ್ರಥಮ 'ನ್ಯಾಷನಲ್ ಕ್ರಿಯೇಟರ್ಸ್ ಪ್ರಶಸ್ತಿ'ಯನ್ನು ಪ್ರದಾನ ಮಾಡಿದರು. ಅತ್ಯಂತ ಸೃಜನಶೀಲ ಮಹಿಳಾ ಕ್ರಿಯೇಟರ್ ವಿಭಾಗದಲ್ಲಿ 'ಅಯ್ಯೋ ಶ್ರದ್ಧಾ' ಎಂದೇ ಖ್ಯಾತರಾಗಿರುವ ಕನ್ನಡತಿ ಶ್ರದ್ಧಾ ಜೈನ್ ಅವರು ಪ್ರಶಸ್ತಿ ಪಡೆದರು. ಇವರಲ್ಲದೆ ಪಂಖ್ತಿ ಪಾಂಡೆ, ಕೀರ್ತಿಕಾ ಗೋವಿಂದಸ್ವಾಮಿ, ಗಾಯಕಿ ಮೈಥಿಲಿ ಠಾಕೂರ್, ಮಲ್ಹಾರ್ ಕಳಂಬೆ ಸಹಿತ ಹಲವು ಯುವ ಪ್ರತಿಭೆಗಳ ಜತೆಗೆ ಮೂವರು ಅಂತರಾಷ್ಟ್ರೀಯ ಕ್ರಿಯೇಟರ್‌ಗಳಿಗೆ ಕೂಡ ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ, ನಾವೆಲ್ಲರೂ ಭಾರತದಲ್ಲೇ ರೂಪಿಸೋಣ, ಜಗತ್ತಿಗಾಗಿ ರೂಪಿಸೋಣ ಎಂದ ಪ್ರಧಾನಿ, ಭಾರತದ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವಂತೆ ಮತ್ತು ನಾರಿ ಶಕ್ತಿಯ ಥೀಮ್‌ನೊಂದಿಗೆ ಕಂಟೆಂಟ್ ರೂಪಿಸುವಂತೆ ಪ್ರಶಸ್ತಿ ಪುರಸ್ಕೃತರಿಗೆ ಕರೆ ನೀಡಿದರು.'ಅಯ್ಯೋ ಶ್ರದ್ಧಾ ಕಾರ್ಕಳ ತಾಲೂಕಿನ ಬಜಗೋಳಿ ವರ್ಧಮಾನ ಜೈನ್ ಹಾಗೂ ದಿ.ಸುಶೀಲಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಶ್ರದ್ಧಾ ಒಬ್ಬರು. 'ಅಯ್ಯೋ ಶ್ರದ್ಧಾ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಶ್ರದ್ಧಾ, ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ ನಾವು ಭಾರತೀಯರು ನಗುವ ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ ಎಂದರು.

ದ.ಕ ಜಿಲ್ಲಾ ಸಮಿತಿಗೆ ಸುಪ್ರೀತ್ ಜೈನ್ ಆಯ್ಕೆ

Article Image

ದ.ಕ ಜಿಲ್ಲಾ ಸಮಿತಿಗೆ ಸುಪ್ರೀತ್ ಜೈನ್ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯರಾಗಿ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಸುಪ್ರೀತ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಪತ್ರಕರ್ತರಾಗಿ, ಈ ಹಿಂದೆ ಕೂಡ ಸಾಮಾಜಿಕ ಮಾಧ್ಯಮ ಪ್ರಕೋಷ್ಠದಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು.

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

Article Image

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

ಚತ್ತೀಸ್‌ಗಢದ, ಚಂದ್ರಗಿರಿತೀರ್ಥ ಡೊಂಗರಗಢದಲ್ಲಿ ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ಪ್ರಾಥಃಸ್ಮರಣೀಯ ದಿಗಂಬರ ಜೈನ ಸರೋವರದ ರಾಜಹಂಸ, ಈ ಶತಮಾನದ ಶ್ರೇಷ್ಠ ತಪಸ್ವಿ ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರು ಇಂದು(ಫೆ.18) ಬೆಳಗಿನಜಾವ 2.30ಕ್ಕೆ ಸಮಾಧಿಮರಣ ಹೊಂದಿದರು. ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿದೇವಿ ಹಾಗೂ ಮಲ್ಲಪ್ಪಾಜಿಯವರ ಸುಪುತ್ರರಾಗಿ ಜನಿಸಿ ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಜೈನ ಮುನಿಯಾದರು. ಕಾಲಕ್ರಮೇಣ ಇವರ ತಂದೆ-ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಕೂಡ ಜೈನ ದೀಕ್ಷೆಪಡೆದು ಜಿನನ ಮಾರ್ಗವನ್ನು ಹಿಡಿದು ನಡೆದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು ಆಚಾರ್ಯರ ‘ಮೂಕ ಮಾಟಿ’ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟಿತವಾಗಿದ್ದು ಅದರೊಟ್ಟಿಗೆ ‘ತೋತಾ ಕ್ಯೂ ರೋತಾ’ ಹಾಗೂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

Article Image

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಬಾವಂತಬೆಟ್ಟು ನಿವಾಸಿ, ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ ನಿರಂಜನ್ ಜೈನ್ ಬಾವಂತಬೆಟ್ಟು (75 ವ.)ರವರು ಇಂದು (ಫೆ. 12) ನಿಧನರಾಗಿದ್ದಾರೆ. ಇವರು 1973ರಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸುಮಾರು 38 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಅರುಣ, ಮಕ್ಕಳಾದ ಪವಿತ್ರ, ಚೈತ್ರ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ

ಡಾ| ಎನ್. ಸಾಹಿತ್ ಜೈನ್ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್

Article Image

ಡಾ| ಎನ್. ಸಾಹಿತ್ ಜೈನ್ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್

2023ನೇ ಜುಲೈ ತಿಂಗಳಲ್ಲಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ನಡೆಸಿದ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಡಾ| ಎನ್. ಸಾಹಿತ್ ಜೈನ್ ರಾಜ್ಯಮಟ್ಟದಲ್ಲಿ 3ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಕಾರ್ಕಳ ತಾಲೂಕಿನ ನಲ್ಕೆದಬೆಟ್ಟುಗುತ್ತು, ಜಿನಪ್ರಸಾದ ನಿಲಯದ ಎನ್. ಅರವಿಂದ ಕುಮಾರ್ ಜೈನ್ ಮತ್ತು ಪದ್ಮಕಾಂತಿ ದಂಪತಿಗಳ ಪುತ್ರ .

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಶಾಂತಿ ಪ್ರಸಾದ್‌ ಹೆಗ್ಡೆ ಅವರು ಆಯ್ಕೆ

Article Image

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಶಾಂತಿ ಪ್ರಸಾದ್‌ ಹೆಗ್ಡೆ ಅವರು ಆಯ್ಕೆ

ದ.ಕ. ಜಿಲ್ಲೆಯಲ್ಲಿ ಹೆಸರುವಾಸಿಯಾಗಿ, ಮೂಡಬಿದ್ರೆಯಲ್ಲಿ ವಕೀಲ ವೃತ್ತಿಯನ್ನು ಮಾಡುತ್ತ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಿ ಪ್ರಸಾದ್ ಹೆಗ್ಡೆಯವರು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಇವರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಪ್ರಸಿದ್ಧ ಹಿರಿಯ ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ (ಪಿ.ಪಿ. ಹೆಗ್ಡೆ)ಯವರ ಸಹೋದರರಾಗಿರುತ್ತಾರೆ.

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

Article Image

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನೀಡಲಾಗುವ "ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ"ಯನ್ನು ಕನ್ನಡ ವಿಭಾಗದಲ್ಲಿ ಬೆಳಗಾವಿಯ ಹಳ್ಳಿಯ ಸಂದೇಶ ಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ಬೆಳಗಾವಿಯ ಮರಾಠಾ ಮಂದಿರದಲ್ಲಿ ಜ. 18ರಂದು ಬ್ಯಾರಿಸ್ಟರ್‌ ನಾಥ್ ಪೈ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 5 ಸಾವಿರ ರೂ. ನಗದು ಗೌರವ ಧನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಡಾ. ಜಿನದತ್ತ ದೇಸಾಯಿ ಇವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ

Article Image

ಡಾ. ಜಿನದತ್ತ ದೇಸಾಯಿ ಇವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ

ನಿವೃತ್ತ ಜಿಲ್ಲಾ ನ್ಯಾಯಾಧೀಶರೂ, ಸಮಾಜದ ಹಿರಿಯ ಸಾಹಿತಿಗಳೂ, ಈ ನಾಡು ಕಂಡ ಅಪರೂಪದ ಜನಪ್ರಿಯ ಕವಿ, ಶಿಕ್ಷಣ ಪ್ರೇಮಿ ಡಾ. ಜಿನದತ್ತ ದೇಸಾಯಿ ಇವರು ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಹಲವಾರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಮತ್ತು ಜೀವಮಾನದ ಅಮೋಘ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ 2023ನೇ ಸಾಲಿನ ಪ್ರತಿಷ್ಠಿತ "ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು ರೂ. ಹತ್ತು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಆಯ್ಕೆ

Article Image

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಆಯ್ಕೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಮಾಡುವ "ದಾನ ಚಿಂತಾಮಣಿ ಅತ್ತಿಮಬ್ಬೆ " ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಭಾಜನರಾಗಿದ್ದಾರೆ. ಜನವರಿ 31ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಗುತ್ತದೆ.

ಚೇತನ್ ಫಣಿರಾಜ್ ಗೆ ಸನ್ಮಾನ

Article Image

ಚೇತನ್ ಫಣಿರಾಜ್ ಗೆ ಸನ್ಮಾನ

ಹಾಸನ: ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಆವರಣದಲ್ಲಿ ಸಹಕಾರ ಭಾರತಿ ಇತ್ತಿಚಿಗೆ ಆಯೋಜಿಸಿದ್ದ ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನದಲ್ಲಿ, 100 ವರ್ಷ ಪೂರೈಸಿರುವ ಕ್ರೆಡಿಟ್ ಸೊಸೈಟಿಗಳ ಸಹಕಾರ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹಾಸನದ ಜೈನ ಮಂಡಳಿ ಪತ್ತಿನ ಸಹಕಾರ ಸಂಘಕ್ಕೆ 103 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ, ವತಿಯಿಂದ ಸಂಘದ ಅದ್ಯಕ್ಷರಾದ ಹೆಚ್.ಪಿ. ಚೇತನ್ ಫಣಿರಾಜ್ರವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ಸಚಿವರಾದ ಭಗವತ ಕರಾಢ್, ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಜ್ಯೋತಿಂದರ್ ಮೆಹ್ತಾರವರು ಮತ್ತು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷರಾದ ದೀನಾನಾಥ್ ಠಾಕೂರ್ ಇತರರು ಉಪಸ್ಥಿತರಿದ್ದರು.

ಪದ್ಮಾವತಿ ಅಮ್ಮ

Article Image

ಪದ್ಮಾವತಿ ಅಮ್ಮ

ಹಾಸನ ಜಿಲ್ಲೆಯ ಜಾವಗಲ್ ನ ನಿವಾಸಿ ಪದ್ಮಾವತಿ ಅಮ್ಮ (95ವ) ಇವರು ಜ. 8ರಂದು ನಿಧನ ಹೊಂದಿದರು. ಇವರು ಮಕ್ಕಳಾದ ಮರುದೇವಿಯಮ್ಮ, ಧರ್ಮಪಾಲ್ ಎಚ್. ಎ. ಮತ್ತು ಪೂರ್ಣಿಮಾ ಜೈನ್ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಆದಿನಾಥ ಉಪಾಧ್ಯೆಗೆ ಪಿಎಚ್.ಡಿ

Article Image

ಆದಿನಾಥ ಉಪಾಧ್ಯೆಗೆ ಪಿಎಚ್.ಡಿ

ಬೆಳಗಾವಿ: ಗುಲ್ಬರ್ಗಾ ವಿಶ್ವವಿದ್ಯಾಲಯವು ಗಣಿತಶಾಸ್ತ್ರ ವಿಷಯದಲ್ಲಿ ‘ನ್ಯೂಮರಿಕಲ್ ಸ್ಟಡಿ ಆಫ್ ಸ್ಲೈಡರ್ ಆ್ಯಂಡ್ ಸ್ಕ್ವೀಝ್ ಫಿಲ್ಮ್ ಬೇರಿಂಗ್ಸ್ ಲೂಬ್ರಿಕೇಟೆಡ್ ವಿಥ್ ನಾನ್- ನ್ಯೂಟೋನಿಯನ್ ಪ್ಲೂಯಿಡ್’ ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧಕ್ಕೆ ಆದಿನಾಥ ಚಂದ್ರನಾಥ ಉಪಾಧ್ಯೆ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಮೂಲತಃ ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಆದಿನಾಥ ಉಪಾಧ್ಯೆ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕಲಬುರ್ಗಿಯ ಜಿಲ್ಲೆಯ ಸೇಡಂನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಡಾ| ಕಾಶೀನಾಥ ಬಿರಾದಾರ ಮಾರ್ಗದರ್ಶಕರಾಗಿದ್ದರು. ಇವರು ತಾಳಿಕೋಟೆಯ ಚಂದ್ರನಾಥ ಜೆ. ಉಪಾಧ್ಯ ಮತ್ತು ವಿಜಯಮಾಲಾ ಚಂದ್ರನಾಥ ಉಪಾಧ್ಯ ದಂಪತಿಗಳ ಪುತ್ರ.

ಆಕರ್ಷಣಿ ಶೈಲೆಂದ್ರ ಕುಮಾರ್

Article Image

ಆಕರ್ಷಣಿ ಶೈಲೆಂದ್ರ ಕುಮಾರ್

ಅಜ್ಜಿಬೆಟ್ಟು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ನ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿರುವ ಆಕರ್ಷಣಿ ಶೈಲೆಂದ್ರ ಕುಮಾರ್ ಇವರು ಬಂಟ್ವಾಳ ತಾಲೂಕು ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

Article Image

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಲಿ., ಇದರ ಅಧ್ಯಕ್ಷರಾಗಿ “ಸಹಕಾರ ರತ್ನ” ಎಂ. ಬಾಹುಬಲಿ ಪ್ರಸಾದ್ ನ್ಯಾಯವಾದಿ ಇವರು ಎರಡನೇ ಬಾರಿಗೆ ಸರ್ವಾನುಮತದಿಂದ ಪುನರ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ. ಅಭಯಚಂದ್ರ ಜೈನ್, ಅಶೋಕ ಕಾಮತ್ ಎಂ.ಪಿ., ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಮನೋಜ್ ಕುಮಾರ್ ಶೆಟ್ಟಿ ಸಿ. ಎಚ್. ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ. ಈಗಾಗಲೇ ಎಂ. ಗಣೇಶ್ ನಾಯಕ್, ಜಾರ್ಜ್ ಮೋನಿಸ್, ಎಂ. ಪದ್ಮನಾಭ ಹಾಗೂ ದಯಾನಂದ ನಾಯ್ಕ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಾ. ಅಜಿತ ಮುರುಗುಂಡೆ

Article Image

ಡಾ. ಅಜಿತ ಮುರುಗುಂಡೆ

ಡಾ. ಅಜಿತ ಮುರುಗುಂಡೆ ಅವರ ಕೃತಿ ಕೆ. ಸಾ. ಪ. ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ. ಕನ್ನಡ ಸಾಹಿತ್ಯ ಪರಿಷತ್ತು ೨೦೨೦ ಎರಡನೇ ಸಾಲಿನ ವಿವಿಧ ದತ್ತಿ ಪ್ರತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಬೆಂಗಳೂರಿನ ಡಾ. ಅಜಿತ ಮುರಗುಂಡೆ ಇವರು ಬರೆದ ‘ರತ್ನಾಕರ ವರ್ಣಿಯ ಹಾಡುಗಳು, ಸಾಹಿತ್ಯ ಮತ್ತು ತಾತ್ವಿಕತೆ’ ಈ ಕೃತಿ ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲ ಶೆಟ್ಟಿ ಡಾ. ಮದನಕೇಸರಿ ಜೈನ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಸ್ತುತ ಇವರು ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

First Previous

Showing 3 of 3 pages

Next Last