Article Image

ಹಿರಿಯ ಸಾಹಿತಿ ನಾಗರಾಜ್ ಪೂವಣಿ ನಿಧನ

Article Image

ಹಿರಿಯ ಸಾಹಿತಿ ನಾಗರಾಜ್ ಪೂವಣಿ ನಿಧನ

ಹಿರಿಯ ಸಾಹಿತಿ, ಬರಹಗಾರರು, ನಾ ವುಜಿರೆ ಎಂದೇ ಪ್ರಸಿದ್ಧಿ ಹೊಂದಿದ್ದ ಎಸ್‌ಡಿಎಂ ಕಾಲೇಜಿನ ಹಿಂದಿ ವಿಭಾಗದ ನಿವೃತ್ತ ಪ್ರೋಫೆಸರ್, ನಾಗರಾಜ್ ಪೂವಣಿ (84 ವ). ಇವರು ಇಂದು (ಮಾ. 11) ನಿಧನ ಹೊಂದಿದರು. ಇವರು ಪತ್ನಿ ಸರಸ್ವತಿ ನಾ ವುಜಿರೆ ಮತ್ತು ಪುತ್ರ ಪಾಶ್ವನಾಥ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಕಾರ್ಕಳದ ಶ್ರದ್ಧಾ ಜೈನ್ ಅವರಿಗೆ ಪ್ರಧಾನಿ ಮೋದಿ ಗೌರವ

Article Image

ಕಾರ್ಕಳದ ಶ್ರದ್ಧಾ ಜೈನ್ ಅವರಿಗೆ ಪ್ರಧಾನಿ ಮೋದಿ ಗೌರವ

ಹೊಸದಿಲ್ಲಿ ಮಾ. 8: ಕಾರ್ಕಳದ ಶ್ರದ್ಧಾ ಜೈನ್, ತಾಂಜಾನಿಯಾದ ಕಿಲಿ ಪೌಲ್ ಸಹಿತ ಸಾಮಾಜಿಕ ಜಾಲತಾಣಗಳ ಮೂಲಕ ಜನಮನ ಗೆದ್ದಿರುವ ಒಟ್ಟು 20 ಕ್ಷೇತ್ರಗಳ 23 ಯುವ ಕ್ರಿಯೇಟರ್‌ಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ದೇಶದ ಪ್ರಪ್ರಥಮ 'ನ್ಯಾಷನಲ್ ಕ್ರಿಯೇಟರ್ಸ್ ಪ್ರಶಸ್ತಿ'ಯನ್ನು ಪ್ರದಾನ ಮಾಡಿದರು. ಅತ್ಯಂತ ಸೃಜನಶೀಲ ಮಹಿಳಾ ಕ್ರಿಯೇಟರ್ ವಿಭಾಗದಲ್ಲಿ 'ಅಯ್ಯೋ ಶ್ರದ್ಧಾ' ಎಂದೇ ಖ್ಯಾತರಾಗಿರುವ ಕನ್ನಡತಿ ಶ್ರದ್ಧಾ ಜೈನ್ ಅವರು ಪ್ರಶಸ್ತಿ ಪಡೆದರು. ಇವರಲ್ಲದೆ ಪಂಖ್ತಿ ಪಾಂಡೆ, ಕೀರ್ತಿಕಾ ಗೋವಿಂದಸ್ವಾಮಿ, ಗಾಯಕಿ ಮೈಥಿಲಿ ಠಾಕೂರ್, ಮಲ್ಹಾರ್ ಕಳಂಬೆ ಸಹಿತ ಹಲವು ಯುವ ಪ್ರತಿಭೆಗಳ ಜತೆಗೆ ಮೂವರು ಅಂತರಾಷ್ಟ್ರೀಯ ಕ್ರಿಯೇಟರ್‌ಗಳಿಗೆ ಕೂಡ ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ, ನಾವೆಲ್ಲರೂ ಭಾರತದಲ್ಲೇ ರೂಪಿಸೋಣ, ಜಗತ್ತಿಗಾಗಿ ರೂಪಿಸೋಣ ಎಂದ ಪ್ರಧಾನಿ, ಭಾರತದ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವಂತೆ ಮತ್ತು ನಾರಿ ಶಕ್ತಿಯ ಥೀಮ್‌ನೊಂದಿಗೆ ಕಂಟೆಂಟ್ ರೂಪಿಸುವಂತೆ ಪ್ರಶಸ್ತಿ ಪುರಸ್ಕೃತರಿಗೆ ಕರೆ ನೀಡಿದರು.'ಅಯ್ಯೋ ಶ್ರದ್ಧಾ ಕಾರ್ಕಳ ತಾಲೂಕಿನ ಬಜಗೋಳಿ ವರ್ಧಮಾನ ಜೈನ್ ಹಾಗೂ ದಿ.ಸುಶೀಲಾ ದಂಪತಿಯ ಇಬ್ಬರು ಪುತ್ರಿಯರಲ್ಲಿ ಶ್ರದ್ಧಾ ಒಬ್ಬರು. 'ಅಯ್ಯೋ ಶ್ರದ್ಧಾ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಪ್ರಸ್ತುತ ಬೆಂಗಳೂರಿನಲ್ಲಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಶ್ರದ್ಧಾ, ಎಷ್ಟೇ ಒತ್ತಡದ ಪರಿಸ್ಥಿತಿ ಇದ್ದರೂ ನಾವು ಭಾರತೀಯರು ನಗುವ ಮಾರ್ಗವನ್ನು ಕಂಡುಕೊಳ್ಳುತ್ತಲೇ ಇರುತ್ತೇವೆ ಎಂದರು.

ದ.ಕ ಜಿಲ್ಲಾ ಸಮಿತಿಗೆ ಸುಪ್ರೀತ್ ಜೈನ್ ಆಯ್ಕೆ

Article Image

ದ.ಕ ಜಿಲ್ಲಾ ಸಮಿತಿಗೆ ಸುಪ್ರೀತ್ ಜೈನ್ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯರಾಗಿ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಸುಪ್ರೀತ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಪತ್ರಕರ್ತರಾಗಿ, ಈ ಹಿಂದೆ ಕೂಡ ಸಾಮಾಜಿಕ ಮಾಧ್ಯಮ ಪ್ರಕೋಷ್ಠದಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು.

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

Article Image

ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರ ಸಮಾಧಿಮರಣ

ಚತ್ತೀಸ್‌ಗಢದ, ಚಂದ್ರಗಿರಿತೀರ್ಥ ಡೊಂಗರಗಢದಲ್ಲಿ ಆಧ್ಯಾತ್ಮ ಕವಿ, ಲೇಖಕ, ವಿಮರ್ಶಕ, ಪ್ರಾಥಃಸ್ಮರಣೀಯ ದಿಗಂಬರ ಜೈನ ಸರೋವರದ ರಾಜಹಂಸ, ಈ ಶತಮಾನದ ಶ್ರೇಷ್ಠ ತಪಸ್ವಿ ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮುನಿಮಹಾರಾಜರು ಇಂದು(ಫೆ.18) ಬೆಳಗಿನಜಾವ 2.30ಕ್ಕೆ ಸಮಾಧಿಮರಣ ಹೊಂದಿದರು. ಕರ್ನಾಟಕದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದಲ್ಲಿ ಶ್ರೀಮತಿದೇವಿ ಹಾಗೂ ಮಲ್ಲಪ್ಪಾಜಿಯವರ ಸುಪುತ್ರರಾಗಿ ಜನಿಸಿ ಆಚಾರ್ಯ ದೇಷಭೂಷಣ ಮಹಾರಾಜರಿಂದ ಪ್ರಭಾವಿತರಾಗಿ ಜೈನ ಮುನಿಯಾದರು. ಕಾಲಕ್ರಮೇಣ ಇವರ ತಂದೆ-ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಕೂಡ ಜೈನ ದೀಕ್ಷೆಪಡೆದು ಜಿನನ ಮಾರ್ಗವನ್ನು ಹಿಡಿದು ನಡೆದರು. ಆಚಾರ್ಯರೊಟ್ಟಿಗೆ ಸದಾಕಾಲ ಸಾವಿರಕ್ಕೂ ಹೆಚ್ಚು ಅವರ ಶಿಷ್ಯರು ದೇಶದಾದ್ಯಂತ ವಿಹಾರ ಮಾಡಿ ಜಿನಧರ್ಮದ ಪ್ರಸಾರ ಹಾಗೂ ಧರ್ಮಜ್ಞಾನವನ್ನು ಪ್ರಸರಿಸಿದರು ಆಚಾರ್ಯರ ‘ಮೂಕ ಮಾಟಿ’ ಎಂಬ ಗ್ರಂಥವು ಜಗತ್ತಿನ ಎಲ್ಲ ಭಾಷೆಗಳಲ್ಲಿ ಪ್ರಕಟಿತವಾಗಿದ್ದು ಅದರೊಟ್ಟಿಗೆ ‘ತೋತಾ ಕ್ಯೂ ರೋತಾ’ ಹಾಗೂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

Article Image

ಬಾವಂತಬೆಟ್ಟು ನಿರಂಜನ್ ಜೈನ್ ನಿಧನ

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಬಾವಂತಬೆಟ್ಟು ನಿವಾಸಿ, ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ ನಿರಂಜನ್ ಜೈನ್ ಬಾವಂತಬೆಟ್ಟು (75 ವ.)ರವರು ಇಂದು (ಫೆ. 12) ನಿಧನರಾಗಿದ್ದಾರೆ. ಇವರು 1973ರಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕಣಿಯೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸುಮಾರು 38 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಪತ್ನಿ ಅರುಣ, ಮಕ್ಕಳಾದ ಪವಿತ್ರ, ಚೈತ್ರ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ

ಡಾ| ಎನ್. ಸಾಹಿತ್ ಜೈನ್ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್

Article Image

ಡಾ| ಎನ್. ಸಾಹಿತ್ ಜೈನ್ ರಾಜ್ಯ ಮಟ್ಟದಲ್ಲಿ 3ನೇ ರ‍್ಯಾಂಕ್

2023ನೇ ಜುಲೈ ತಿಂಗಳಲ್ಲಿ ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ನಡೆಸಿದ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಡಾ| ಎನ್. ಸಾಹಿತ್ ಜೈನ್ ರಾಜ್ಯಮಟ್ಟದಲ್ಲಿ 3ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಕಾರ್ಕಳ ತಾಲೂಕಿನ ನಲ್ಕೆದಬೆಟ್ಟುಗುತ್ತು, ಜಿನಪ್ರಸಾದ ನಿಲಯದ ಎನ್. ಅರವಿಂದ ಕುಮಾರ್ ಜೈನ್ ಮತ್ತು ಪದ್ಮಕಾಂತಿ ದಂಪತಿಗಳ ಪುತ್ರ .

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಶಾಂತಿ ಪ್ರಸಾದ್‌ ಹೆಗ್ಡೆ ಅವರು ಆಯ್ಕೆ

Article Image

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಶಾಂತಿ ಪ್ರಸಾದ್‌ ಹೆಗ್ಡೆ ಅವರು ಆಯ್ಕೆ

ದ.ಕ. ಜಿಲ್ಲೆಯಲ್ಲಿ ಹೆಸರುವಾಸಿಯಾಗಿ, ಮೂಡಬಿದ್ರೆಯಲ್ಲಿ ವಕೀಲ ವೃತ್ತಿಯನ್ನು ಮಾಡುತ್ತ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಿ ಪ್ರಸಾದ್ ಹೆಗ್ಡೆಯವರು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಇವರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ಪ್ರಸಿದ್ಧ ಹಿರಿಯ ನ್ಯಾಯವಾದಿ ಪದ್ಮಪ್ರಸಾದ್ ಹೆಗ್ಡೆ (ಪಿ.ಪಿ. ಹೆಗ್ಡೆ)ಯವರ ಸಹೋದರರಾಗಿರುತ್ತಾರೆ.

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

Article Image

ಕುಂತಿನಾಥ ಕಲಮನಿ ಅವರಿಗೆ ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ

ಬೆಳಗಾವಿಯ ಸಾರ್ವಜನಿಕ ಗ್ರಂಥಾಲಯ ವತಿಯಿಂದ ನೀಡಲಾಗುವ "ಸಾರ್ವಜನಿಕ ಗ್ರಂಥಾಲಯ ಪತ್ರಕರ್ತ ಪ್ರಶಸ್ತಿ"ಯನ್ನು ಕನ್ನಡ ವಿಭಾಗದಲ್ಲಿ ಬೆಳಗಾವಿಯ ಹಳ್ಳಿಯ ಸಂದೇಶ ಪತ್ರಿಕೆಯ ಸಂಪಾದಕರಾದ ಕುಂತಿನಾಥ ಕಲಮನಿ ಅವರಿಗೆ ಬೆಳಗಾವಿಯ ಮರಾಠಾ ಮಂದಿರದಲ್ಲಿ ಜ. 18ರಂದು ಬ್ಯಾರಿಸ್ಟರ್‌ ನಾಥ್ ಪೈ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 5 ಸಾವಿರ ರೂ. ನಗದು ಗೌರವ ಧನ, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಡಾ. ಜಿನದತ್ತ ದೇಸಾಯಿ ಇವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ

Article Image

ಡಾ. ಜಿನದತ್ತ ದೇಸಾಯಿ ಇವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ

ನಿವೃತ್ತ ಜಿಲ್ಲಾ ನ್ಯಾಯಾಧೀಶರೂ, ಸಮಾಜದ ಹಿರಿಯ ಸಾಹಿತಿಗಳೂ, ಈ ನಾಡು ಕಂಡ ಅಪರೂಪದ ಜನಪ್ರಿಯ ಕವಿ, ಶಿಕ್ಷಣ ಪ್ರೇಮಿ ಡಾ. ಜಿನದತ್ತ ದೇಸಾಯಿ ಇವರು ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಹಲವಾರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಮತ್ತು ಜೀವಮಾನದ ಅಮೋಘ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ 2023ನೇ ಸಾಲಿನ ಪ್ರತಿಷ್ಠಿತ "ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು ರೂ. ಹತ್ತು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಆಯ್ಕೆ

Article Image

ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಆಯ್ಕೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಮಾಡುವ "ದಾನ ಚಿಂತಾಮಣಿ ಅತ್ತಿಮಬ್ಬೆ " ಪ್ರಶಸ್ತಿಗೆ ಕೌಸಲ್ಯಾ ಧರಣೇಂದ್ರಯ್ಯರವರು ಭಾಜನರಾಗಿದ್ದಾರೆ. ಜನವರಿ 31ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ 5 ಲಕ್ಷ ರೂ.ಗಳ ನಗದು ಬಹುಮಾನವನ್ನು ನೀಡಿ ಸನ್ಮಾನಿಸಲಾಗುತ್ತದೆ.

ಚೇತನ್ ಫಣಿರಾಜ್ ಗೆ ಸನ್ಮಾನ

Article Image

ಚೇತನ್ ಫಣಿರಾಜ್ ಗೆ ಸನ್ಮಾನ

ಹಾಸನ: ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಆವರಣದಲ್ಲಿ ಸಹಕಾರ ಭಾರತಿ ಇತ್ತಿಚಿಗೆ ಆಯೋಜಿಸಿದ್ದ ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಅಧಿವೇಶನದಲ್ಲಿ, 100 ವರ್ಷ ಪೂರೈಸಿರುವ ಕ್ರೆಡಿಟ್ ಸೊಸೈಟಿಗಳ ಸಹಕಾರ ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹಾಸನದ ಜೈನ ಮಂಡಳಿ ಪತ್ತಿನ ಸಹಕಾರ ಸಂಘಕ್ಕೆ 103 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ, ವತಿಯಿಂದ ಸಂಘದ ಅದ್ಯಕ್ಷರಾದ ಹೆಚ್.ಪಿ. ಚೇತನ್ ಫಣಿರಾಜ್ರವರನ್ನು ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಭಾರತ ಸರ್ಕಾರದ ಕೇಂದ್ರ ಸಚಿವರಾದ ಭಗವತ ಕರಾಢ್, ಪಟ್ಟಣ ಸಹಕಾರಿ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಜ್ಯೋತಿಂದರ್ ಮೆಹ್ತಾರವರು ಮತ್ತು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷರಾದ ದೀನಾನಾಥ್ ಠಾಕೂರ್ ಇತರರು ಉಪಸ್ಥಿತರಿದ್ದರು.

ಪದ್ಮಾವತಿ ಅಮ್ಮ

Article Image

ಪದ್ಮಾವತಿ ಅಮ್ಮ

ಹಾಸನ ಜಿಲ್ಲೆಯ ಜಾವಗಲ್ ನ ನಿವಾಸಿ ಪದ್ಮಾವತಿ ಅಮ್ಮ (95ವ) ಇವರು ಜ. 8ರಂದು ನಿಧನ ಹೊಂದಿದರು. ಇವರು ಮಕ್ಕಳಾದ ಮರುದೇವಿಯಮ್ಮ, ಧರ್ಮಪಾಲ್ ಎಚ್. ಎ. ಮತ್ತು ಪೂರ್ಣಿಮಾ ಜೈನ್ ಹಾಗೂ ಅಪಾರ ಬಂಧು-ವರ್ಗವನ್ನು ಅಗಲಿದ್ದಾರೆ.

ಆದಿನಾಥ ಉಪಾಧ್ಯೆಗೆ ಪಿಎಚ್.ಡಿ

Article Image

ಆದಿನಾಥ ಉಪಾಧ್ಯೆಗೆ ಪಿಎಚ್.ಡಿ

ಬೆಳಗಾವಿ: ಗುಲ್ಬರ್ಗಾ ವಿಶ್ವವಿದ್ಯಾಲಯವು ಗಣಿತಶಾಸ್ತ್ರ ವಿಷಯದಲ್ಲಿ ‘ನ್ಯೂಮರಿಕಲ್ ಸ್ಟಡಿ ಆಫ್ ಸ್ಲೈಡರ್ ಆ್ಯಂಡ್ ಸ್ಕ್ವೀಝ್ ಫಿಲ್ಮ್ ಬೇರಿಂಗ್ಸ್ ಲೂಬ್ರಿಕೇಟೆಡ್ ವಿಥ್ ನಾನ್- ನ್ಯೂಟೋನಿಯನ್ ಪ್ಲೂಯಿಡ್’ ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧಕ್ಕೆ ಆದಿನಾಥ ಚಂದ್ರನಾಥ ಉಪಾಧ್ಯೆ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಮೂಲತಃ ಬಿಜಾಪುರ ಜಿಲ್ಲೆಯ ತಾಳಿಕೋಟೆಯ ಆದಿನಾಥ ಉಪಾಧ್ಯೆ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕಲಬುರ್ಗಿಯ ಜಿಲ್ಲೆಯ ಸೇಡಂನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಡಾ| ಕಾಶೀನಾಥ ಬಿರಾದಾರ ಮಾರ್ಗದರ್ಶಕರಾಗಿದ್ದರು. ಇವರು ತಾಳಿಕೋಟೆಯ ಚಂದ್ರನಾಥ ಜೆ. ಉಪಾಧ್ಯ ಮತ್ತು ವಿಜಯಮಾಲಾ ಚಂದ್ರನಾಥ ಉಪಾಧ್ಯ ದಂಪತಿಗಳ ಪುತ್ರ.

ಆಕರ್ಷಣಿ ಶೈಲೆಂದ್ರ ಕುಮಾರ್

Article Image

ಆಕರ್ಷಣಿ ಶೈಲೆಂದ್ರ ಕುಮಾರ್

ಅಜ್ಜಿಬೆಟ್ಟು ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ನ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿರುವ ಆಕರ್ಷಣಿ ಶೈಲೆಂದ್ರ ಕುಮಾರ್ ಇವರು ಬಂಟ್ವಾಳ ತಾಲೂಕು ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

Article Image

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಲಿ., ಇದರ ಅಧ್ಯಕ್ಷರಾಗಿ “ಸಹಕಾರ ರತ್ನ” ಎಂ. ಬಾಹುಬಲಿ ಪ್ರಸಾದ್ ನ್ಯಾಯವಾದಿ ಇವರು ಎರಡನೇ ಬಾರಿಗೆ ಸರ್ವಾನುಮತದಿಂದ ಪುನರ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ. ಅಭಯಚಂದ್ರ ಜೈನ್, ಅಶೋಕ ಕಾಮತ್ ಎಂ.ಪಿ., ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಮನೋಜ್ ಕುಮಾರ್ ಶೆಟ್ಟಿ ಸಿ. ಎಚ್. ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ. ಈಗಾಗಲೇ ಎಂ. ಗಣೇಶ್ ನಾಯಕ್, ಜಾರ್ಜ್ ಮೋನಿಸ್, ಎಂ. ಪದ್ಮನಾಭ ಹಾಗೂ ದಯಾನಂದ ನಾಯ್ಕ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಾ. ಅಜಿತ ಮುರುಗುಂಡೆ

Article Image

ಡಾ. ಅಜಿತ ಮುರುಗುಂಡೆ

ಡಾ. ಅಜಿತ ಮುರುಗುಂಡೆ ಅವರ ಕೃತಿ ಕೆ. ಸಾ. ಪ. ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ. ಕನ್ನಡ ಸಾಹಿತ್ಯ ಪರಿಷತ್ತು ೨೦೨೦ ಎರಡನೇ ಸಾಲಿನ ವಿವಿಧ ದತ್ತಿ ಪ್ರತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಬೆಂಗಳೂರಿನ ಡಾ. ಅಜಿತ ಮುರಗುಂಡೆ ಇವರು ಬರೆದ ‘ರತ್ನಾಕರ ವರ್ಣಿಯ ಹಾಡುಗಳು, ಸಾಹಿತ್ಯ ಮತ್ತು ತಾತ್ವಿಕತೆ’ ಈ ಕೃತಿ ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲ ಶೆಟ್ಟಿ ಡಾ. ಮದನಕೇಸರಿ ಜೈನ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಸ್ತುತ ಇವರು ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

First Previous

Showing 8 of 8 pages

Next Last