Article Image

ದಶಲಕ್ಷಣ ಮಹಾಪರ್ವ ಆಚರಣೆ

Article Image

ದಶಲಕ್ಷಣ ಮಹಾಪರ್ವ ಆಚರಣೆ

ಹುಬ್ಬಳ್ಳಿ: ಅಲ್ಪ ಸಂಖ್ಯಾತ ಜೈನ ಸೇವಾ ಸಂಘ, ನವನಗರ ಶ್ರೀ ಬಹುರೂಪಿಣಿ ಮಹಿಳಾ ಮಂಡಳ ನವನಗರ ಹಾಗೂ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್, ಹುಬ್ಬಳ್ಳಿ-ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆಯು ದಿನಾಂಕ 16-09-2026 ರಿಂದ 26-9-2026 ರ ವರೆಗೆ ಪ್ರತಿದಿನ ಸಂಜೆ 6.00 ಗಂಟೆಗೆ ನವಗ್ರಹ ಸಭಾ ಭವನ, ಭ. ಮುನಿಸುವೃತ ಜೈನ ಮಂದಿರ, ಮಹಾವೀರ ಸರ್ಕಲ್‌, ಪಂಚಾಕ್ಷರಿ ನಗರ, ನವನಗರ, ಹುಬ್ಬಳ್ಳಿ ಇಲ್ಲಿ ನಡೆಯಲಿದೆ.

ಅಥಣಿಯಲ್ಲಿ ಭವ್ಯ ಶಾಂತಿ ಕಳಸ ರಥಯಾತ್ರೆಗೆ ನಾಂದಣಿ ಭಟ್ಟಾರಕರಿಂದ ಚಾಲನೆ

Article Image

ಅಥಣಿಯಲ್ಲಿ ಭವ್ಯ ಶಾಂತಿ ಕಳಸ ರಥಯಾತ್ರೆಗೆ ನಾಂದಣಿ ಭಟ್ಟಾರಕರಿಂದ ಚಾಲನೆ

ಬೆಳಗಾವಿ: ದಿಗಂಬರ ಜೈನ ಪರಂಪರೆಯ ಪುನರುಜ್ಜೀವಕ, 20ನೇ ಶತಮಾನದ ಪ್ರಥಮಾಚಾರ್ಯ ಪ.ಪೂ. ಚಾರಿತ್ರ ಚಕ್ರವರ್ತಿ ಆಚಾರ್ಯ 108 ಶ್ರೀ ಶಾಂತಿಸಾಗರ ಮಹಾರಾಜರ 71ನೇ ಪುಣ್ಯತಿಥಿ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಭವ್ಯ ಶಾಂತಿ ಕಳಸ ರಥಯಾತ್ರೆಗೆ ಅಥಣಿ ನಗರದ ಶ್ರೀ ಶಿವಯೋಗಿ (ಹಲ್ಯಾಳ) ಸರ್ಕಲ್ ನಲ್ಲಿ ನಾಂದಣಿ ಸಂಸ್ಥಾನ ಮಠದ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿಗಳವರು, ವಿಧಿವತ್ತಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು, "ಆಚಾರ್ಯ ಶಾಂತಿಸಾಗರರು ಕೇವಲ ಒಬ್ಬ ಮುನಿಯಲ್ಲ, ಒಂದು ಯುಗ. ಅವರು ತೋರಿದ ತ್ಯಾಗ, ಸಂಯಮದ ಹಾದಿಯಲ್ಲೇ ಇಂದಿನ ಸಮಾಜಕ್ಕೆ ಶಾಂತಿ ಇದೆ. ಈ ಶಾಂತಿ ಕಳಸ ರಥವು ಕೇವಲ ರಥವಲ್ಲ, ಅದು ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ. ಅಥಣಿಯ ಶ್ರಾವಕರ ಭಕ್ತಿ ಅತ್ಯಂತ ಶ್ಲಾಘನೀಯ" ಎಂದು ನುಡಿದರು. ಶಾಂತಿ ಕಲಶದ ಸವಾಲವನ್ನು ಜಿನನಗೌಡ ಪಾಟೀಲ್, ಮತ್ತು ಭಾರಮೂ ಪಾಟೀಲ ದಮಾತಿಗಳು ಪಡೆದಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನೀಯರ್ ಅರುಣ ಯಲಗುದ್ರಿ, ಸಾತಗೌಡ ಅಥಣಿ, ನಾಗರಾಜ್ ಘೋಂಗಡಿ, ಪ್ರಫುಲ್ ಪಡನಾಡ, ರಾಜು ಕರ್ಪೂರಶೆಟ್ಟಿ, ಅಶೋಕ ಪಡನಾಡ, ಪ್ರಶಾಂತ ಇಜಾರೆ, ಮಹಾವೀರ ಜಕನೂರ, ಸಂತೋಷ ಬೊಮ್ಮಣ್ಣವರ, ನಿತಿನ ಘೊಂಗಡಿ, ಚಕ್ರವರ್ತಿ ಕಿನಿಂಗೆ ಸೇರಿದಂತೆ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಕುರಿತು: ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರು 1872ರಲ್ಲಿ ಬೆಳಗಾವಿ ಜಿಲ್ಲೆಯ ಭೋಜ ಗ್ರಾಮದಲ್ಲಿ ಜನಿಸಿದರು. ಸುಮಾರು 700 ವರ್ಷಗಳ ಕಾಲ ನಿಂತು ಹೋಗಿದ್ದ ದಿಗಂಬರ ಮುನಿ ಪರಂಪರೆಯನ್ನು 20ನೇ ಶತಮಾನದಲ್ಲಿ ಪುನಃ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಹಿಂಸೆ, ಅಪರಿಗ್ರಹ ಮತ್ತು ಅನೇಕಾಂತವಾದದ ತತ್ವಗಳನ್ನು ತಮ್ಮ ಕಟ್ಟುನಿಟ್ಟಿನ ತಪಸ್ಸಿನ ಮೂಲಕ ಜಗತ್ತಿಗೆ ಸಾರಿದ ಇವರು, 18-09-1955 ರಂದು ಮಹಾರಾಷ್ಟ್ರದ ಕುಂಥಲಗಿರಿಯಲ್ಲಿ ಸಲ್ಲೇಖನ ವ್ರತದ ಮೂಲಕ ಸಮಾಧಿ ಹೊಂದಿದರು. ಇವರ ಪುಣ್ಯತಿಥಿ ಮಹೋತ್ಸವವು ದಿ.13-09-2026 ರಂದು ನಾಂದಣಿಯಲ್ಲಿ ನಡೆಯಲಿದೆ.

ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮ

Article Image

ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮ

ಸುಹಾಸ್ತಿ ಯುವ ಜೈನ್ ಮಿಲನ್, ಬೆಂಗಳೂರು ವತಿಯಿಂದ ಆಯೋಜಿಸಲಾಗುತ್ತಿರುವ ಪ್ರತಿಷ್ಠಿತ ಜಿನಸಮ್ಮಿಲನ ಕಾರ್ಯಕ್ರಮವು ಇದೇ ಬರುವ ಡಿಸೆಂಬರ್ 11, 12 & 13ರಂದು ಸಮ್ಮೇದ ಶಿಖರ್ಜಿಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಜಿನಸಮ್ಮಿಲನದ ವಿಶೇಷ ಲೋಗೋವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ಡಾ. ಹೆಗ್ಗಡೆಯವರು ಮುಂಬರುವ ಜಿನಸಮ್ಮಿಲನ ಕಾರ್ಯಕ್ರಮಕ್ಕೆ ಶುಭಹಾರೈಸಿ, ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ ಹಾಗೂ ಯುವಜನರಿಗೆ ಮತ್ತಷ್ಟು ಪ್ರೇರಣೆಯಾಗಲಿ ಎಂದು ಆಶೀರ್ವದಿಸಿದರು. ನಂತರ ಹೇಮಾವತಿ ವೀ. ಹೆಗ್ಗಡೆಯವರನ್ನು ಭೇಟಿ ಮಾಡಲಾಯಿತು. ಅವರು ಜಿನಸಮ್ಮಿಲನವು ಯಶಸ್ವಿಯಾಗಿ ನೆರವೇರಲಿ, ಯುವ ಜನರನ್ನು ಮತ್ತಷ್ಟು ಒಗ್ಗೂಡಿಸಿ ಸಮಾಜದಲ್ಲಿ ಸಕರಾತ್ಮಕ ಚಟುವಟಿಕೆಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷರಾದ ದರ್ಶನ್ ಜೈನ್ ಮಾರಲಗೋಡು, ಚಿತ್ತ ಜಿನೇಂದ್ರ, ಮಾಜಿ ಅಧ್ಯಕ್ಷರಾದ ಪುಟ್ಟುಸ್ವಾಮಿ, ಮಾಜಿ ಕಾರ್ಯದರ್ಶಿ ಅಭಿನಂದನ್ ಜೈನ್ ಬಿದರೂರು ಹಾಗೂ ಅಭಿಷೇಕ್ ಉಪಸ್ಥಿತರಿದ್ದರು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

Article Image

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು

ಬೆಳಗಾವಿ:- ದಕ್ಷಿಣ ಭಾರತ ಜೈನ ಸಭೆಯ ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ನಲ್ಲಿ ಪ್ರಥಮಾಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪುಣ್ಯತಿಥಿ ಹಾಗೂ ದಶಲಕ್ಷಣ ಪರ‍್ವನಿಮಿತ್ತ ಕೈ. ಶ್ರೀ ನೇಮಿನಾಥ ಕಲ್ಲಪ್ಪಾ ಇಂಚಲ ಮತ್ತು ಶ್ರೀಮತಿ ಸುಮಿತ್ರಾದೇವಿ ನೇಮಿನಾಥ ಇಂಚಲ ಸಾಂಸ್ಕೃತಿಕ ಸ್ಪರ್ಧೆಗಳು-2026ನ್ನು ಆಯೋಜಿಸಲಾಗಿದೆ. ಕಂಠಪಾಠ ಸ್ಪರ್ಧೆ: (5 ರಿಂದ 10 ವರ್ಷಗಳು) ವಿಷಯ: ಗೊಮ್ಮಟ ಸ್ತುಥಿ (ಥುದಿ) (ವಿಸಟ್ಟ ಕಂದೊಟ್ಟ) ಭಾಷಣ ಸ್ಪರ್ಧೆ: (11 ರಿಂದ 22 ವರ್ಷಗಳು) ವಿಷಯ: 1) ವರ್ಧಮಾನ (ಮಹಾವೀರ) ತೀರ್ಥಂಕರ ಚರಿತ್ರೆ 2) ವರ್ತಮಾನ ಕಾಲದ 24 ತೀರ್ಥಂಕರರ ಮೋಕ್ಷಸ್ಥಾನ (ಕೂಟ)ಗಳ ಹೆಸರು ಸಮಯ: 5 ನಿಮಿಷ (Five minutes) ಭಾಷಣ ಸ್ಪರ್ಧೆ: (23 ರಿಂದ 40 ವರ್ಷಗಳು) ವಿಷಯ: 1) “ರತ್ನತ್ರಯ”-ವಿಶ್ಲೇಷಣೆ ಸಮಯ: 5 ನಿಮಿಷ (Five minutes) ಸ್ಪರ್ಧೆಯ ದಿನಾಂಕ: 06-09-2026 ಸ್ಥಳ: “ಶಾಂತಿಸ್ಮಾರಕ”, ಮಾಣಿಕಬಾಗ ದಿಗಂಬರ ಜೈನ ಬೊರ್ಡಿಂಗ, ಪಿ.ಬಿ.ರಸ್ತೆ, ಬೆಳಗಾವಿ. ವಿ.ಸೂ: 1) ಸ್ಪರ್ಧೆಗೆ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ 30-08-2026 2) ಸ್ಪರ್ಧೆಗೆ ಭಾಗವಹಿಸುವ ಅಭ್ಯರ್ಥಿಗಳು ನಿಮ್ಮ ಆಧಾರ ಕಾರ್ಡನ್ನು ತೆಗೆದುಕೊಂಡು ಬನ್ನಿರಿ. 3) ಬಹುಮಾನವನ್ನು ಅದೇ ದಿನ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:- 7022691008, 9481106489, 8762640855, 8095939274, 9448013923

ಬಿದರೂರು ಜೈನ ಬಸದಿಯಲ್ಲಿ ವಿಶೇಷ ಪೂಜೆ, ಅಭಿಷೇಕ

Article Image

ಬಿದರೂರು ಜೈನ ಬಸದಿಯಲ್ಲಿ ವಿಶೇಷ ಪೂಜೆ, ಅಭಿಷೇಕ

ಸಾಗರ/ಕಾರ್ಗಲ್‌: ಇತಿಹಾಸ ಪ್ರಸಿದ್ಧ ಬಿದರೂರು ಜೈನ ಬಸದಿಯಲ್ಲಿ ಶ್ರಾವಣ ಶುಕ್ರವಾರದ ಅಂಗವಾಗಿ ಭಗವಾನ್ ವರ್ಧಮಾನ ಸ್ವಾಮಿ, ಕೂಷ್ಮಾಂಡಿನಿ ಮಾತೆ ಹಾಗೂ ಪದ್ಮಾವತಿ ಮತ್ತು ಸಿದ್ಧಯಿನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಅರ್ಚಕರಾದ ಮೋಹನ ಕುಮಾರ ಇಂದ್ರರು, ವಿದ್ಯಾಧರ ಇಂದ್ರರು, ಛವಿಷಾ ಇಂದ್ರರ ನೇತೃತ್ವದಲ್ಲಿ ಕುಂಕುಮಾರ್ಚನೆ, ಅಷ್ಟ ವಿಧಾರ್ಚನೆಗಳು ಮತ್ತು ಮಹಾಮಂಗಳಾರತಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ಮುಕುಟಸಪ್ತಮಿ ಆಚರಣೆ

Article Image

ಮುಕುಟಸಪ್ತಮಿ ಆಚರಣೆ

ಹುಬ್ಬಳ್ಳಿ: ಛಬ್ಬಿ ಗ್ರಾಮದ ಭಗವಾನ್ ಶ್ರೀ 1008 ಶಾಂತಿನಾಥ ತೀರ್ಥಂಕರ ಜಿನ ಮಂದಿರದಲ್ಲಿ ಸ್ಥಳೀಯ ಸಮಸ್ತ ಜೈನ್ ಸಮಾಜದ ವತಿಯಿಂದ ಮುಕುಟಸಪ್ತಮಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ವಾಣ ಲಾಡು ಸಮರ್ಪಣೆ ಕಾರ್ಯಕ್ರಮದಲ್ಲಿ ಪಾವನ ಸಾನಿಧ್ಯವನ್ನು ಪರಮ ಪೂಜ್ಯ ಡಾ 108 ಶ್ರೀ ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರು ವಹಿಸಿದ್ದರು. ಪಾರಿಶ್ವನಾಥ ತೀರ್ಥಂಕರರ ಮೋಕ್ಷ ಹೊಂದಿದ ಪವಿತ್ರ ದಿನ, ತನ್ನಿಮಿತ್ತ ಜಿನ ಮಂದಿರದಲ್ಲಿ ಪಂಚಾಮೃತ ಅಭಿಷೇಕ ಮಹಾ ಶಾಂತಿ ಮಂತ್ರ ನಂತರ ಸಭಾ ಮಂಟಪದಲ್ಲಿ 150 ಮಕ್ಕಳಿಂದ ಪಾರಿಶ್ವನಾಥ ತೀರ್ಥಂಕರಿಗೆ ಅಭಿಷೇಕ ಪೂಜಾ ವಿಧಿವಿದಾನ ನಡೆದವು. ನಂತರ ಮಹಾವೀರ ಯುವಕ ಮಂಡಳದವರಿಂದ ಸಮ್ಮೇದ ಶಿಖರ್ಜಿಯಲ್ಲಿ ಇರುವ 24 ಕೂಟ (ಮಂದಿರ) ಸ್ತಬ್ದ ಚಿತ್ರ ರಚನೆ ಮಾಡಿ ತೀರ್ಥಂಕರರಿಗೆ ನಿರ್ವಾಣ ಲಾಡು ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುನಿಮಹಾರಾಜರು ಮಾನವ ಜನ್ಮ ಸಿಕ್ಕಿದು ಮಹಾಪುಣ್ಯ ಕಾರಣ ಎಲ್ಲರು ದೇವರ ದರ್ಶನ ಸ್ವಾಧ್ಯಾಯ ಜಪ ಮಾಡಬೇಕು. ಮುಕುಟ ಅಂದರೆ ಕಿರೀಟ ಇದ್ದಹಾಗೆ ಮೋಕ್ಷ ಮಾರ್ಗದ ಕಡೆ ಹೋಗುವ ಹಾಗೆ ಆದಕಾರಣ ತಾವುಗಳು ತನು ಮನ ಧನದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮರ್ಪಣಾ ಭಾವದಿಂದ ಭಾಗವಹಿಸಿ ಪುಣ್ಯವನ್ನು ಸಂಪಾದಿಸಿಕೊಳ್ಳಿ ಎಂದು ಪ್ರವಚನದಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು. ವರದಿ : ಎಸ್ ಆರ್ ಮಲ್ಲಸಮುದ್ರ

ಮೋಕ್ಷ ಕಲ್ಯಾಣ ಮಹೋತ್ವವ

Article Image

ಮೋಕ್ಷ ಕಲ್ಯಾಣ ಮಹೋತ್ವವ

ವಿಜಯಪುರ, ಮಹೇಂದ್ರಗಿರಿಯಲ್ಲಿರುವ ಭಗವಾನ್ ಶ್ರೀ 1008 ಸಹಸ್ರಪಣಿ ಪಾರ್ಶ್ವನಾಥ ದಿಗಂಬರ ಜೈನ ಬಸದಿಯಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಮಹೋತ್ವವ - ಮುಕುಟ ಸಪ್ತಮಿ ಕಾರ್ಯಕ್ರಮವು ಪ.ಪೂ. ಸಪ್ತಭಂಗ ವ್ಯಾಖ್ಯಾತಾ, ವಾತ್ಸಲ್ಯಮೂರ್ತಿ ಪಟ್ಟಾಚಾರ್ಯ ಶ್ರೀ ತನ್ಮಯ ಸಾಗರ ಮಹಾರಾಜರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಶ್ರವಣಬೆಳಗೂಳ ದಿಗಂಬರ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ - ವಿಧಾನಗಳು ನೆರವೇರಲಿರುವುದು

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

Article Image

ಜೈನ ಸಾಹಿತ್ಯ ಸಿರಿ ಕಾರ್ಯಕ್ರಮ

ಬೆಂಗಳೂರು, ಆ.9- ರಾಮಾಯಣ ಕಾವ್ಯ ಭಾರತೀಯರಿಗೆ ಮಹತ್ವದ ಸಾಹಿತ್ಯ ಪರಂಪರೆಯಾಗಿದ್ದು, ಜೈನರಾಮಾಯಣವು ವೈದಿಕ ರಾಮಾಯಣಕ್ಕಿಂತ ಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ ಎಂದು ಪ್ರೊ. ಜಿ. ಅಶ್ವತ್ಥನಾರಾಯಣ ಹೇಳಿದರು. ಜೈನ ಮಿಲನ್ ಸೆಂಟ್ರಲ್ ಬೆಂಗಳೂರು ಹಾಗೂ ಜಯನಗರದ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಜೈನ ಸಾಹಿತ್ಯ ಸಿರಿ ಕಾರ್ಯಕ್ರಮದಲ್ಲಿ ಪ್ರೊ. ಜೀವಂಧರಕುಮಾರ ಹೋತಪೇಟಿ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿರುವ ಆಧ್ಯಾತ್ಮ ಯೋಗಿ ರಾಮ್‌ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜೈನ ರಾಮಾಯಣಗಳಲ್ಲಿ ಪ್ರತಿನಾಯಕ ರಾವಣನನ್ನು ನೋಡುವ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. ಶಾಸ್ತ್ರ ಮತ್ತು ಕಾವ್ಯವನ್ನು ಒಳಗೊಂಡಿರುವ ಆಧ್ಯಾತ್ಮಯೋಗಿ ರಾಮ ಕೃತಿಯ ಪುಟಪುಟಗಳಲ್ಲೂ ಜೈನಧರ್ಮದ ಶಾಸ್ತ್ರದ ತಿಳಿವಳಿಕೆ ಕಾಣಬಹುದು. ಮೂಲ ಕೃತಿಕಾರ ರವಿಶೇಷಣರು ರಚಿಸಿರುವ 18 ಸಾವಿರ ಶ್ಲೋಕಗಳ ಕೃತಿಯನ್ನು ಪ್ರೊ. ಜೀವಂಧರಕುಮಾರ ಹೋತಪೇಟೆ ಅಪೂರ್ವವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಹೇಳಿದರು. ಪ್ರೊ. ಜೀವಂಧರಕುಮಾರ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ತನ್ನ ಭವಿಷ್ಯದ ರೂವಾರಿಯಾಗಿದ್ದು, ಮಾನವ ಆತ್ಮ ಪರಮಾತ್ಮನಾಗುವ ಸಾಧ್ಯತೆ ಹೊಂದಿದೆ. ಸಂಸಾರ ಬಂಧನದಿಂದ ಮುಕ್ತರಾಗಲು ಮನುಷ್ಯ ಪ್ರಯತ್ನಿಸಬೇಕು ಎಂದರು. ಅನಿತಾ ಸುರೇಂದ್ರ ಕುಮಾರ ಮಾತನಾಡಿ, ಜೈನ ಸಾಹಿತ್ಯ ಸಿರಿ ಮೂಲಕ ಜನಸಾಮಾನ್ಯರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುತ್ತಿದೆ ಎಂದರು. ಡಾ. ನಲ್ಲೂರು ಪ್ರಸಾದ್‌, ಮಮತ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಡಾ. ಪದ್ಮನಿ ನಾಗರಾಜು, ಬ್ರಾಹ್ಮಲ ಮದನಕುಮಾರ, ದೀಪಾಂಜಲಿ ಗೌರಾಜ್ ಉಪಸ್ಥಿತರಿದ್ದರು. ದಿಶಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

Article Image

ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ

ಸಾಲಿಗ್ರಾಮ: ಪ. ಪೂಜ್ಯ ಸಂತಶಿರೋಮಣಿ ಆಚಾರ್ಯಶ್ರೀ 108 ವಿದ್ಯಾಸಾಗರಜೀ ಮಹಾರಾಜರ ಶಿಷ್ಯರಾದ ಹಾಗೂ ನೂತನ ಪ. ಪೂಜ್ಯ ಆಚಾರ್ಯ ಶ್ರೀ 108 ಸಮಯ ಸಾಗರಜೀ ಮಹಾರಾಜರ ಅಜ್ಞಾನುವರ್ತಿ ಶಿಷ್ಯರಾದ ಪ. ಪೂಜ್ಯ ಮುನಿಶ್ರೀ 108 ಪಾಯಸಾಗರಜೀ ಮಹಾರಾಜರ ರವರ ಪಾವನ ವರ್ಷಾಯೋಗದ ಚಾತುರ್ಮಾಸ ಮಂಗಳ ಕಳಸ ಸ್ಥಾಪನೆ ಕಾರ್ಯಕ್ರಮವು ದಿನಾಂಕ 9/8/2026 ರಂದು ನಡೆಯಲಿರುವುದು. ವಿ.ಸೂ: ಪ್ರತಿ ದಿನ ತ್ಯಾಗಿ ನಿವಾಸದಲ್ಲಿ ಬೆಳಗ್ಗೆ 6:00 ಗಂಟೆಗೆ ಭಗವಂತರಿಗೆ ಅಭಿಷೇಕ ಮತ್ತು ಪೂಜೆ ಸಂಜೆ 05:45 ಗಂಟೆಗೆ ಭಕ್ತಿ. ಆರತಿ ಮತ್ತು ಪ್ರವಚನ ನೆರವೇರಲಿದೆ.

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

Article Image

ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ

ಮೈಸೂರಿನ ಬಳಿ ಇರುವ ಕುಮಾರ ಬೀಡು ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಜೈನ ಬಸದಿಯು ಈಗ ಶಿಥಿಲವಾಗಿ ಪಾಳು ಬಿದ್ದಿರುವುದು ಪತ್ತೆಯಾಗಿದೆ. ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಎರಡು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗಳು ಎರಡು ಶಾಸನಗಳು ಮತ್ತು ಅನೇಕ ಜಿನ ಬಿಂಬಗಳು ಸ್ಥಳದಲ್ಲಿವೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಜಿ ಡಿ ಪಾರ್ಶ್ವನಾಥ್ ಮತ್ತು ವೀರೇಂದ್ರ ಬೇಗೂರ್ ರವರು ಸ್ಥಳ ಪರಿಶೀಲನೆಗಾಗಿ ಇತ್ತೀಚೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕುಮಾರಬೀಡು ಅಭಿವೃದ್ಧಿಗಾಗಿ ರಚಿಸಿರುವ ಟ್ರಸ್ಟಿನ ಅಧ್ಯಕ್ಷರಾದ ಮಿತ್ರಸೇನ ಜೈನ್ ಉಪಾಧ್ಯಕ್ಷ ಚಂದ್ರಶೇಖರ್ ಅರಿಗ ಕಾರ್ಯದರ್ಶಿ ಮಹಾವೀರ ಗೋಗಿ ಸಹಕಾರ್ಯದರ್ಶಿ ವಾಗೀಶ್ವರಿ ಪ್ರಕಾಶ್ ಸಂಘಟನಾ ಕಾರ್ಯದರ್ಶಿ ನವೀನ್ ಬಸ್ತಿ ಮತ್ತು ಟ್ರಸ್ಟಿಯಾದ ಶಾಂತಪ್ಪ ಮೈಸೂರು ಜೈನ ಸಮಾಜದ ಅಧ್ಯಕ್ಷರಾದ ಸುನಿಲ್ ಕುಮಾರ್ ತೀರ್ಥಕ್ಷೇತ್ರ ಕಮಿಟಿಯ ಕರ್ನಾಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಬಾಕ್ಲೀವಾಲ್ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್ ಪ್ರಸನ್ನ ಕುಮಾರ್ ವರ್ಧಮಾನ ಜೈನ್ ಮಿಲನ್ ಉಪಾಧ್ಯಕ್ಷರಾದ ನಾಗರತ್ನ ಮತ್ತು ಚಂದ್ರಿಕಾ ರವರು ಕುಮಾರಬೀಡು ಉಪಸ್ಥಿತರಿದ್ದರು.

ಗದಗ:- ಶ್ರೀ ಶಾಂತಿನಾಥ ವಿಧಾನ

Article Image

ಗದಗ:- ಶ್ರೀ ಶಾಂತಿನಾಥ ವಿಧಾನ

ಜೈನ ವಿಧಿವಿಧಾನಗಳು ಆತ್ಮದ ಶುದ್ಧೀಕರಣ ಮತ್ತು ಕರ್ಮಗಳ ವಿನಾಶಕ್ಕೆ ಅತ್ಯಂತ ಮಹತ್ವದ ಸಾಧನಗಳಾಗಿದ್ದು, ‘ಶಾಂತಿನಾಥ ವಿಧಾನ’ವು ಅತ್ಯಂತ ಪವಿತ್ರ ಮತ್ತು ಪ್ರಭಾವಶಾಲಿ ಪೂಜಾ ಆಚರಣೆಯಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ ವಿದಿತಸಾಗರ ಮಹಾರಾಜರು ಉಪದೇಶಿದರು. ಅವರು ಗದಗ ಜಿಲ್ಲಾ ದಿಗಂಬರ ಜೈನ ಸಂಘವು ಹುಡ್ಕೋ ಕಾಲೋನಿಯ ಸಚ್ಚಿದಾನಂದ ಮಠದ ಭವನದಲ್ಲಿ ಆಯೋಜಿಸಿದ್ದ ‘ಶ್ರೀ ಶಾಂತಿನಾಥ ವಿಧಾನ’ದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಜೈನ ಪರಂಪರೆಯಲ್ಲಿ 16ನೆಯ ತೀರ್ಥಂಕರ ಶಾಂತಿನಾಥರನ್ನು ‘ಶಾಂತಿಯ ಅಧಿದೇವತೆ’ ಎಂದು ಆರಾಧಿಸಲಾಗುತ್ತದೆ. ಈ ವಿಧಾನವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಒತ್ತಡ, ಕೋಪ, ಕ್ರೌರ್ಯಗಳು ದೂರವಾಗಿ ಇಡೀ ವಿಶ್ವದಲ್ಲಿ ಅಹಿಂಸೆ ಮತ್ತು ಶಾಂತಿ ನೆಲೆಸುತ್ತದೆ. ವ್ಯಾಪಾರ, ಉದ್ಯೋಗ, ಶಿಕ್ಷಣ, ಕುಟುಂಬದಲ್ಲಿ ಎದುರಾಗುವ ಕಷ್ಟಗಳು, ವಿಘ್ನಗಳು ಮತ್ತು ಪ್ರಾಕೃತಿಕ ವಿಕೋಪಗಳು ನಿವಾರಣೆಯಾಗುತ್ತವೆ. ಈ ವಿಧಿಯಲ್ಲಿ ಜಲ, ಚಂದನ, ಅಕ್ಷತೆ, ಪುಷ್ಪ, ದೀಪ, ಧೂಪ, ಫಲ, ಅರ್ಘ್ಯ ಎಂಬ ಅಷ್ಟದ್ರವ್ಯಗಳನ್ನು ಮಂತ್ರಘೋಷಗಳೊಂದಿಗೆ ಶಾಂತಿನಾಥ ತೀರ್ಥಂಕರರಿಗೆ ಸಮರ್ಪಿಸಲಾಗುತ್ತದೆ. ಈ ವಿಧಾನದಲ್ಲಿ ಭಾಗಿಯಾಗಿರುವ ತಾವೆಲ್ಲರೂ ಪುಣ್ಯಶಾಲಿಗಳಾಗಿದ್ದು, ಈ ಪರಂಪರೆಯನ್ನು ನಿರಂತರವಾಗಿ ಮುಂದುವರೆಸಲು ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಶ್ರಾವಕರು ನಗರದಲ್ಲಿ ಬಸದಿ, ಸಭಾಭವನ ನಿರ್ಮಿಸಲು ಉದಾರವಾಗಿ ಸಹಾಯ-ಸಹಕಾರ ನೀಡಬೇಕೆಂದು ಕೋರಿದರು. ಸಂಘದ ಗೌರವಾಧ್ಯಕ್ಷ ಡಾ. ಅಪ್ಪಣ್ಣ ಹಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಗದಗ ಜಿಲ್ಲೆಯ ಪ್ರದೇಶದಲ್ಲಿ 7ನೆಯ ಶತಮಾನದಿಂದಲೂ ಅನೇಕ ಜೈನ ಮುನಿಗಳು, ಆರ್ಯಿಕೆಯರು ವಿಹಾರ ಕೈಗೊಂಡು ಧರ್ಮಪ್ರಭಾವನೆ ಮೂಲಕ ಲೋಕಕಲ್ಯಾಣ ಚಟುವಟಿಕೆಗಳನ್ನು ಕೈಗೊಳ್ಳುತ್ತ ಬಂದಿದ್ದು, ಆ ಪರಂಪರೆ ಮುನಿಶ್ರೀ ವಿದಿತಸಾಗರ ಮಹಾರಾಜರಿಂದಲೂ ಮುಂದುವರೆದಿರುವುದು ಇಲ್ಲಿಯ ಜೈನ ಸಮಾಜದ ಸೌಭಾಗ್ಯವಾಗಿದೆ ಎಂದು ಹೇಳಿದರು. ವಿಧಾನದಲ್ಲಿ ಪ್ರಕಾಶ ಮುತ್ತಿನ, ಸಂಕಪ್ಪ ನಾವಳ್ಳಿ, ಎಂ.ಟಿ. ಕಬ್ಬಿಣ, ಟಿವಿ-9 ವರದಿಗಾರ ಸಂಜಯ ಪಾಂಡ್ರೆ, ಎ.ಎನ್. ಬಸ್ತಿ, ನಾಗರಾಜ ತುಕೋಳ, ಯಶವಂತ ಸಿದ್ದಣ್ಣವರ, ಸುಭಾಸ ಅಂಗಡಿ, ಅನಂತರಾಜ ಬಸ್ತಿ, ರವಿ ಮುತ್ತಿನ, ಎ.ವಾಯ್. ಇಂಚಲ, ಹನಮಂತಗೌಡ ಮತಗಟ್ಟಿ, ಬಿ.ಎಸ್. ನಾವಳ್ಳಿ, ಪರಿಮಳಾ ಕುಲಕರ್ಣಿ, ಸಹನಾ ಹಂಜೆ, ಸುಮನ ಮುತ್ತಿನ, ಶೋಭಕ್ಕ ಇಂಚಲ, ವಸಂತಮಾಲಾ ದೇಸಾಯಿ, ಅನಂತಮತಿ ಬಸ್ತಿ, ಸುಪ್ರಿಯಾ ನಾವಳ್ಳಿ, ಮಧುಮತಿ ಕಬ್ಬಿಣ ಸೇರಿದಂತೆ ಜಿಲ್ಲೆಯ ಹಿರಿಯರು, ಶ್ರಾವಕ- ಶ್ರಾವಿಕೆಯರು ಭಾಗವಹಿಸಿ ಅಷ್ಟದ್ರವ್ಯಗಳಿಂದ ಪೂಜೆ ಸಲ್ಲಿಸಿ ಕೃತಾರ್ಥರಾದರು. ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಅವರು ಅಧ್ಯಕ್ಷೀಯ ನುಡಿಗಳಲ್ಲಿ ಮುನಿಶ್ರೀ ಅವರು ಗದಗ ನಗರಕ್ಕೆ ಆಗಮಿಸಿ ಧರ್ಮಪ್ರಭಾವನೆ ಕೈಗೊಂಡು ಶಾಂತಿನಾಥ ವಿಧಾನ ಆಚರಣೆಗೆ ಮಾರ್ಗದರ್ಶನದೊಂದಿಗೆ ಸಾನ್ನಿಧ್ಯ ವಹಿಸಿರುವುದು ಸದಾಕಾಲ ಸ್ಮರಣೀಯವಾಗಿದ್ದು, ಎಚ್.ಕೆ. ಪಾಟೀಲ ಅವರು ನಗರಾಭಿವೃದ್ಧಿ ಇಲಾಖೆಯಿಂದ ಬಸದಿ ಮತ್ತು ಸಭಾಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಕೊಡುವುದಾಗಿ ಜಿಲ್ಲೆಯ ಜೈನ ಸಮಾಜಕ್ಕೆ ಭರವಸೆ ನೀಡಿದ್ದಾರೆ. ಅವರ ಸಹಾಯ-ಸಹಕಾರದಿಂದ ನಗರದಲ್ಲಿ ಬಸದಿ ನಿರ್ಮಿಸಿ ಲೋಕಕಲ್ಯಾಣ ಚಟುವಟಿಕೆಗಳನ್ನು ಸಾಂಗವಾಗಿ ಮುಂದುವರೆಸಲಾಗುವುದೆಂದು ಹೇಳಿದರು. ಡಾ| ಅಪ್ಪಣ್ಣ ಹಂಜೆರವರು ಸ್ವಾಗತಿಸಿದರು. ಪ್ರಕಾಶ ಮುತ್ತಿನ ವಂದಾರ್ಪಣೆಗೈದರು. ಶಾಂತಿನಾಥ ತೀರ್ಥಂಕರರಿಗೆ ಆರತಿ ಮಾಡುವುದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

Article Image

ರಾಮಚಂದ್ರ ಕಿಲ್ಲೇದಾರರಿಗೆ ಪಿ.ಎಚ್.ಡಿ. ಪ್ರದಾನ

ಬೆಳಗಾವಿ: ಕಾಗವಾಡ ತಾಲೂಕಿನ ಉಗಾರಖುರ್ದ ಪಟ್ಟಣದ ಪೀಪಲ್ಸ್ ಎಜ್ಯುಕೇಶನ್ ಸೊಸೈಟಿಯ ಪ್ರಾಚಾರ್ಯರು ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಗೌರವಾನ್ವಿತ ಸಿಂಡಿಕೇಟ್ ಸದಸ್ಯರಾದ ರಾಮಚಂದ್ರ ಕಿಲ್ಲೇದಾರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. (ಡಾಕ್ಟರ್ ಆಫ್ ಫಿಲಾಸಫಿ) ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಿದೆ. ವಿಶ್ವ ವಿದ್ಯಾಲಯದ ವಾಣಿಜ್ಯ ನಿಕಾಯದ ವ್ಯವಹಾರ ನಿರ್ವಹಣೆ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾದ ಪ್ರೊ. ಎಸ್.ಸಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಇವರು ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇವರು ಉಗಾರ ಖುರ್ದದ ಹೆಸರಾಂತ ಶೈಕ್ಷಣಿಕ ಸಂಸ್ಥೆಯಾದ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2008 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಅವರ ನೇತೃತ್ವದಲ್ಲಿ ಒಂದರಿಂದ ಎಂಟನೆ ತರಗತಿಯ ಇಂಗ್ಲಿಷ್ ಮಾಧ್ಯಮಶಾಲೆ, ಪಿಯುಸಿ (ಕಲಾ ಮತ್ತು ವಾಣಿಜ್ಯ) ಹಾಗೂ ಬಿ.ಬಿ.ಎ., ಬಿ.ಸಿ.ಎ. ಮತ್ತು ಬಿ.ಕಾಂ. ಪದವಿ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಗ್ರಾಮೀಣ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವದ ನೀಡುತ್ತಿದೆ.

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

Article Image

ಉತ್ತರ ಪ್ರದೇಶ: ಪಂಚ ಕಲ್ಯಾಣ ಮಹೋತ್ಸವ

ಲಕ್ನೋ ಬಳಿಯ ಕಾಕೋರಿ ದಿಗಂಬರ ಜೈನ ಅತಿಶಯ ಕ್ಷೇತ್ರದಲ್ಲಿ ಭಗವಾನ್ ಅಧಿನಾಥ ಸ್ವಾಮಿ ಪಂಚ ಕಲ್ಯಾಣ, ಕರ‍್ಕಳ ಶಿಲೆಯಲ್ಲಿ ನಿರ್ಮಾಣಗೊಂಡ ನೂತನ ಮೂರು ಅಡಿಯ ಪದ್ಮಾವತಿದೇವಿ ಮೂರ್ತಿಯ ಪ್ರತಿಷ್ಠಾಪನೆಯು ಆಚಾರ್ಯ 108 ವಿಶುದ್ಧ ಸಾಗರ, ಆಚಾರ್ಯ ಸುಬಲ ಸಾಗರ, ವಿವಿಕ್ತ ಶ್ರೀ ಮಾತಾಜಿಗಳವರುಗಳ ಪಾವನ ಸಾನಿಧ್ಯದಲ್ಲಿ ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ಉಪಸ್ಥಿತಿಯಲ್ಲಿ ಜಿನ ಆಗ ಮೊಕ್ತ ರೀತಿಯಲ್ಲಿ ನೆರವೇರಿತು. ಆಚಾರ್ಯ ವಿಶುದ್ಧ ಸಾಗರ ಮುನಿ ಮಹಾರಾಜರು ಜ್ಞಾನವೇ ಸರ್ವರಿಗೂ ಹಿತವನ್ನು ಉಂಟು ಮಾಡುವುದು ಸಮಾನತೆ-ಸಭ್ಯತೆಯ ಪ್ರತೀಕ ಸಮವ ಸರಣ. ಉ.ಪ್ರ ಅವಧ್ಯ ಪ್ರಾಂತ್ಯದಲ್ಲಿ ಅತೀ ಹೆಚ್ಚು 18 ತೀರ್ಥಂಕರರು ಜನ್ಮ ಪಡೆದ ಪವಿತ್ರ ಭೂಮಿ ಭಗವಂತರ ಭಕ್ತಿ ಮುಕ್ತಿಗೆ ಸೋಪಾನ ಎಂದು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ರವೀಂದ್ರ ಕೀರ್ತಿ ಸ್ವಾಮೀಜಿ ಹಸ್ತಿ ನಾಪುರ, ನರೇಶ್ ಪಂಡಿತ್,ಪ್ರವೀಣ್ ಶಾಸ್ತ್ರೀ, ಭೂಪಾಲ್, ಚಂದೇರಿ ಬ್ರ. ಬನಾರಸಿ ದಾಸ್ ಕ್ಷೇತ್ರದ ಅಧ್ಯಕ್ಷ ಕೈಲಾಶ್, ಸಂದೀಪ್, ಸನ್ಮತ್, ಸಜಲ್ ಜೈನ್, ಪಣಿರಾಜ್, ಅನುರಾಗ ಮಿಶ್ರ ಜಿಲ್ಲಾ ನ್ಯಾಯಧೀಶರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಳಿಕ 21 ಅಡಿಯ ಭಗವಾನ್ ಅಧಿನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕದಿಂದ ಮಹಾ ಮಸ್ತಕಾಭಿಷೇಕ ನೆರವೇರಿತು.

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

Article Image

ಹುಬ್ಬಳ್ಳಿ: ಎ.ಜಿ.ಎಂ ಕಾಲೇಜಿಗೆ ಪ್ರಶಸ್ತಿ

ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಆವಾರ್ಡ್ & ಕಾನ್ಪರೆನ್ಸ್ 2026 ರಲ್ಲಿ ಕರ್ನಾಟಕದ ಹುಬ್ಬಳ್ಳಿಯ ವರೂರಿನ ಎ.ಜಿ.ಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿಗೆ 2026ರ ಇಂಡಿಯಾ ಎಲೈಟ್ ಎಜುಕೇಶನ್ & ಇನ್ಸ್ಟಿಟ್ಯೂಷನಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಲಾಯಿತು. ಶೈಕ್ಷಣಿಕ, ನಾವೀನ್ಯತೆ ಮತ್ತು ಆಡಳಿತದಲ್ಲಿನ ಶ್ರೇಷ್ಠತೆಗಾಗಿ ಪ್ರಾಂಶುಪಾಲರಾದ ಡಾ. ಸಂದೀಪ್ ಕ್ಯಾತನವರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಶೃತ ಪಂಚಮಿ ಆಚರಣೆ

Article Image

ಶೃತ ಪಂಚಮಿ ಆಚರಣೆ

ಹೊಂಬುಜ: ಅತಿಶಯ ಶ್ರೀಕ್ಷೇತ್ರದಲ್ಲಿ ಪೂರ್ವ ಪರಂಪರೆಯಂತೆ ನಡೆದುಕೊಂಡು ಬಂದಿರುವ ಶೃತ ಪಂಚಮಿ ಮಹೋತ್ಸವವನ್ನು ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜೂನ್. 19 ಶುಕ್ರವಾರದಂದು ನೆರವೇರಲಿದೆ. ಅಂದು 8 ವರ್ಷ ಮೇಲ್ಪಟ್ಟ ಜೈನ ಬಾಲಕ-ಬಾಲಕಿಯರಿಗೆ ಸಾಮೂಹಿಕ ವ್ರತೋಪದೇಶ ಹಾಗೂ ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ‍್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಶೇಷ ಜಿನಪೂಜೆಯೊಂದಿಗೆ ಶಾಸ್ತ್ರಗಳನ್ನು ಪೂಜಿಸಿ, ಪಠಿಸಿ ಜಿನವಾಣಿಗೆ ಭಕ್ತಿಭಾವದ ನಮನ ಸಲ್ಲಿಸಲಾಗುವುದು. ವ್ರತೋಪದೇಶ ಹಾಗೂ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವವರು ಶ್ರೀಮಠದ ಆಡಳಿತ ಕಾರ್ಯಾಲಯದಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ: 08185-262722, 9481453653, 9483801460

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

Article Image

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

ಕಾಗವಾಡ: ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಸಂಪತ್ತಿಗಿಂತ ಸತ್ಯ ಮುಖ್ಯ ಇಂಥಹ ಸದ್ಗುಣಗಳನ್ನು ಹೊಂದಿರುವ ಯುವಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಸಾಧುಸಂತರು, ರಾಜಕಾರಣಿಗಳು, ಸಮಾಜ ಸೇವಕರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತು ಕಾರ್ಯ ಮಾಡಿದಲ್ಲಿ ಸಮೃದ್ಧವಾದ ದೇಶ ನಿರ್ಮಾಣವಾಗಲು ಸಾಧ್ಯ ಅಂಥ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕಂಬದಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಅವರು ಕಾಗವಾಡ ತಾಲೂಕಿನ ಸುಕ್ಷೇತ್ರ ಉಗಾರ ಬುದ್ರುಕ್‌ ಗ್ರಾಮದ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನ, ಭೋಜನ ಶಾಲೆ, ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಭಾಷೆಯ ಶಿಕ್ಷಣ ಕೊಡಿಸಿದರೂ ಕೂಡ ಜೈನ ಧರ್ಮದ ಆಚಾರ, ವಿಚಾರಗಳನ್ನು ಪ್ರತಿದಿನ ಮಕ್ಕಳಿಗೆ ಬೋದಿಸುವುದರ ಜೊತೆಗೆ ತಾವೂ ಕೂಡ ಅಹಿಂಸಾ ಪರಮೋಧರ್ಮದ ತತ್ವಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು ತಾವೆಲ್ಲರು ಭಕ್ತಿ ಮಾರ್ಗದಲ್ಲಿ ನಡೆಯಿರಿ, ಆ ತಾಯಿ ಪದ್ಮಾವತಿ ನಿಮಗೆ ಆಶೀರ್ವದಿಸುತ್ತಾಳೆ. ಯಾರ ಬಳಿ ಭಕ್ತಿ ಇದೇಯೋ ಅಲ್ಲಿ ಶಕ್ತಿ ಇದೆ ಎಂದರು. ಪರಮಪೂಜ್ಯ ಜಗದ್ಗುರು ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯಮಹಾಸ್ವಾಮಿಗಳು ಮಾತನಾಡುತ್ತ ಭಕ್ತಿಯಿಂದ ಶಕ್ತಿ, ಶಕ್ತಿಯಿಂದ ಯುಕ್ತಿ, ಸಂಪಾದಿಸಿದರೆ ಪದ್ಮಾವತಿ ದೇವಿ ತಮಗೆ ಖಂಡಿತವಾಗಿಯೂ ಒಲಿದು ತಮಗೆ ಬಂದಂತಾ ಕಷ್ಟಗಳನ್ನು ದೂರವಾಡುವ ಶಕ್ತಿ ಆ ತಾಯಿಗಿದೆ ಎಂದರು. ರಾಜ್ಯಸ್ಥಾನದ ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಹೊಂದಿರುವ ಉಗಾರ ಶ್ರೀ ಪದ್ಮಾವತಿ ದೇವಿಯ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಇಲ್ಲಿ ಬಂದು ಹೋಗುವ ಶ್ರಾವಕ,ಶ್ರಾವಕಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಯಾತ್ರಿ ನಿವಾಸ, ಭವನ ನಿರ್ಮಿಸಿರುವ ಧರ್ಮದರ್ಶಿ ಶೀತಲಗೌಡ ಪಾಟೀಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಸೌಂದಾಮ ಹುಮಜಾ ಮಠಗಳ ವಾತಾವರಣ ಈಗ ಉಗಾರ ಪದ್ಮಾವತಿ ಮಂದಿರದಲ್ಲಿ ನಿರ್ಮಾಣವಾಗಿದೆ. ಧಾರ್ಮಿಕ ಕಾರ್ಯದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ಕೆ.ಎ ವನಜೋಳ ಅವರ ಹಾಗೆ ಧರ್ಮ ಕಾರ್ಯದಲ್ಲಿ ಕೈ ಜೋಡಿಸಬೇಕಾಗುತ್ತದೆ. ನಾನು ಮತ್ತು ಶಾಸಕ ಅಭಯ ಪಾಟೀಲರು ಕೂಡ ಧರ್ಮದ ಕೆಲಸದಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ವಿವರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮುಗೆಣ್ಣವರ, ಮೋಹನರಾವ್‌ ಶಹಾ, ಸಂಜಯ ಪಾಟೀಲ, ಮಹಾವೀರ ನಿಲಜಗಿ, ಡಾ.ಮಹಾವೀರ ದಾನಿಗೊಂಡ, ಬಾಹುಬಲಿ ನಾಗನೂರಿ, ಸುನೀಲ ಪಾಟೀಲ, ಮಹಾವೀರ ಕಾತ್ತಾಳೆ, ಸಂಜಯ ನಾಡಗೌಡ, ಅಭಯಕುಮಾರ ಅಕಿವಾಟೆ, ಅಶೋಕ ಚೌಗುಲೆ, ಕಲ್ಲಪ್ಪ ವನಜೋಳ, ಎಮ್.ಎಚ್.ನಂದಗಾಂವ, ಸಂಜಯ ಕುಚನೂರೆ, ಮಹೇಂದ್ರ ಖೇಮಲಾಪೂರೆ, ಡಾ.ನೀರಜಾ ನಾಗೇಂದ್ರಕುಮಾರ, ಬಮ್ಮಣ್ಣ ಚೌಗಲೆ, ವರ್ಧಮಾನ ಕೋರಿ, ಪ್ರದೀಪ ಚಿಂಚವಾಡೆ, ಆದಿನಾಥ ವಸವಾಡೆ ಉಪಸ್ಥಿತರಿದ್ದರು. ಈ ವೇಳೆ ಮಹಾದಾನಿಗಳನ್ನು ಸನ್ಮಾನಿಸಲಾಯಿತು. ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಜ್ರಕುಮಾರ ಮಗದುಮ್‌ ಸ್ವಾಗತಿಸಿ ವಂದಿಸಿದರು.

ಪೂಜಾ ಮಹೋತ್ಸವ

Article Image

ಪೂಜಾ ಮಹೋತ್ಸವ

ಗದಗ: ಭ|| ಶ್ರೀ 1008 ನೇಮಿನಾಥ ಸ್ವಾಮಿ ಜಿನಮಂದಿರದ 38ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಸೋಂದಾ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಮೇ 18ರಂದು ಜರುಗಲಿದೆ.

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

Article Image

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು,ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

Article Image

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

ಪ್ರಾಚೀನ ಜೈನ ಕ್ಷೇತ್ರ ಹಾಗೂ ಅಮೂಲ್ಯವಾದ ಪಚ್ಚೆ ಪಾರ್ಶನಾಥ ಸ್ವಾಮಿಯ ಮತ್ತು ಮಹಾಮಾತೆ ಪದ್ಮಾವತಿ ದೇವಿಯ ಪರಿವಾರ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಯಾಗಿರುವ ಬಸದಿಯಲ್ಲಿ ತಾ. 25-01-2026 ರಂದು ವಾರ್ಷಿಕ ಪೂಜಾ ಮಹೋತ್ಸವವು ತುಂಬಾ ವೈಭವದಿಂದ ನೆರವೇರಿತು. ಸಿಂಹನಗದ್ದೆಯ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು. ಸಾನಿಧ್ಯ ವಹಿಸಿದ್ದ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಜೈನ ಪರಂಪರೆಯು ರಾಷ್ಟ್ರೀಯ ಚಿನ್ನೆಗಳ ಆಯ್ಕೆಯ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿ, ನಾವು ಜೈನರು ಎಂಬದನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಕರೆ ನೀಡಿದರು. ಅಲ್ಲದೆ ಪೂಜ್ಯ ಶಾಂತಿಸಾಗರರು ಹೇಳಿದ ಮಾರ್ಗದಲ್ಲಿ ಬಸದಿಯಲ್ಲಿ ಪೂಜೆಗಳನ್ನು ನಡೆಸುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸ ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಮಾತನಾಡಿ ಪೆನುಕೊಂಡ ಕ್ಷೇತ್ರದ ಜೈನ ಇತಿಹಾಸದ ಮಹತ್ವವನ್ನು ವಿವರಿಸಿ ಹೇಳಿದರು. ಅವರನ್ನು ಬಸದಿ ಟ್ರಸ್ಟ್ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೆನುಕೊಂಡ ತಾಲ್ಲೂಕಿನ ತಹಶೀಲ್ದಾರ್ ಸ್ವಾತಿರವರನ್ನು ಹಾಗೂ ಮುಖಂಡರಾದ ವೆಂಕಟೇಶ್ವರಲು ರಾವ್ ಮತ್ತು ಸ್ಥಳೀಯ ಮುಖಂಡರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಅಭಿಯಂತರರಾದ ಹೆಚ್.ಡಿ. ಪಾರ್ಶ್ವನಾಥರವರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಯ್ಕೆಗೊಂಡ ಬಸದಿ ಸಮಿತಿಯ ಪದಾಧಿಕಾರಿಗಳು, ಸ್ವಾಮೀಜಿಯವರ ಸಮ್ಮುಖದಲ್ಲಿ ತಾವು ಬಸದಿ ಅಭಿವೃದ್ಧಿಗೆ ತ್ರಿಕರಣಪೂರ್ವಕವಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಕೈಗೊಂಡರು. ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಆರ್.ಎ. ಸುರೇಶ್‌ ಕುಮಾ‌ರ್‌ರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 108 ಕಳಶಾಭಿಷೇಕ ಮತ್ತು ಪಂಚಾಮೃತ ಅಭಿಷೇಕಗಳ ಮೂಲಕ ವಾರ್ಷಿಕೋತ್ಸವ ಪೂಜೆಯು ಎಲ್ಲರೂ ಮೆಚ್ಚುವಂತೆ ನಡೆಯಿತು. ಆಗಮಿಸಿದ್ದ ಭಕ್ತರಿಗೆ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಸಮರ್ಪಕವಾಗಿ ಏರ್ಪಡಿಸಲಾಗಿತ್ತು.

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವ ಆಚರಣೆ

Article Image

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವ ಆಚರಣೆ

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವವನ್ನು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಮುಖ್ಯ ಅತಿಥಿಗಳಾದ ವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಪಿ. ವಿಠ್ಠಲ್ ರಾವ್ ಅವರು ದ್ವಜಾರೋಹಣವನ್ನು ಮಾಡಿದರು. ಮುಖ್ಯ ಅತಿಥಿಗಳಾದ ಡಾ. ಪಿ. ವಿಠ್ಠಲ್ ರಾವ್ ಅವರು ತಮ್ಮ ಸಂದೇಶ ಭಾಷಣದಲ್ಲಿ ಮಾತನಾಡುತ್ತಾ: ಗಣರಾಜ್ಯೋತ್ಸವವು ಸಮಾನತೆ ಮತ್ತು ನ್ಯಾಯದ ತತ್ವಗಳನೊಳಗೊಂಡ ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ. ಭಾರತದಲ್ಲಿ ಶಿಕ್ಷಣವು ರಾಷ್ಟ್ರೀಯ ಅಭಿವೃದ್ದಿಯ ಅಡಿಪಾಯದೊಂದಿಗೆ ವೈವಿಧ್ಯತೆಯೇ ಶಕ್ತಿ ಹೊಂದಿದೆ. ಪ್ರತಿಯೊಬ್ಬರು ತಮ್ಮ ಉತ್ತಮ ಆರೋಗ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಕಡೆಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಪೌರತ್ವ ಮತ್ತು ನೈತಿಕ ನಾಯಕತ್ವದ ಜವಾಬ್ದಾರಿಗಳಿಗೆ ಸಿದ್ದವಾಗಬೇಕು. ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆ ಭಾರತದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿವೆ. ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್, ಹಣಕಾಸಿನ ಅಧಿಕಾರಿಗಳಾದ ವಿ. ಜಿ. ಪ್ರಭು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಉಪ ಪ್ರಾಂಶುಪಾಲರುಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಡಾ. ಕಿರಣ ಐತಾಳ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.. ಡಾ. ಆದಿತ್ಯಾ ಅಗ್ನಿಹೋತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುನಿಲ್ ಕುಮಾರ್ ಕೆ. ಎಸ್. ವಂದಿಸಿದರು

ಧಾರವಾಡದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Article Image

ಧಾರವಾಡದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಧಾರವಾಡದ ಹೊಸಯಲ್ಲಾಪುರದ ದಿಗಂಬರ ಜೈನ್ ಸಮಾಜ ಟ್ರಸ್ಟ್ ವತಿಯಿಂದ ಶ್ರೀ ಆದಿನಾಥ ಜೈನ ಬಸದಿಯಲ್ಲಿ 77ನೆಯ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಟ್ರಸ್ಟ್‌ನ ಉಪಾಧ್ಯಕ್ಷರಾದ ಡಾ. ಆರ್. ಎ. ಬಾಳಿಕಾಯಿ ಅವರು ಧ್ವಜ ಅನಾವರಣ ಮಾಡಿ, ಭಾರತೀಯ ಸಂವಿಧಾನವು: ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಜಾತಿ, ಧರ್ಮ, ಲಿಂಗ ಆಧಾರಿತ ಭೇದಭಾವವನ್ನು ತಿರಸ್ಕರಿಸುತ್ತದೆ. ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನಿರ್ದಿಷ್ಟಪಡಿಸುತ್ತದೆ. ಇದು ಕೇವಲ ಕಾನೂನು ಪುಸ್ತಕವಲ್ಲ, ಒಂದು ಸಾಮಾಜಿಕ ಒಪ್ಪಂದವಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಮಾತ್ರವಲ್ಲದೆ ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಬೆಳೆಯುತ್ತಿರುವ ಭಾರತಕ್ಕಾಗಿ ಕೆಲಸ ಮಾಡಲು ನಾವು ಇಂದು ಪ್ರತಿಜ್ಞೆ ಮಾಡೋಣ, ಎಂದು ತಿಳಿಸುತ್ತ, ಟ್ರಸ್ಟಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟಿನ ಕಾರ್ಯದರ್ಶಿ ಅರುಣ ಬ್ಯಾಡಗಿ, ಸಹ ಕೋಶಾಧ್ಯಕ್ಷ ಯಲ್ಲಪ್ಪ ಜೈನರ ಮತ್ತು ಆಡಳಿತ ಮಂಡಳಿ ಸದಸ್ಯರಾದ ಶ್ರೀಧರ ಬಸ್ತಿ, ಶ್ರಾವಕ-ಶ್ರಾವಕಿಯರು ಹಾಗೂ ಇತರರು ಉಪಸ್ಥಿತರಿದ್ದರು. ಡಾ. ಆರ್. ಎ. ಬಾಳಿಕಾಯಿ ಉಪಾಧ್ಯಕ್ಷರು, ದಿಗಂಬರ ಜೈನ್ ಸಮಾಜ ಟ್ರಸ್ಟ್, ಹೊಸಯಲ್ಲಾಪುರ, ಧಾರವಾಡ

ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಬಿಡುಗಡೆ

Article Image

ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಬಿಡುಗಡೆ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಜೈನ ಕ್ಷೇತ್ರ ಬ್ರಹ್ಮಯಕ್ಷನ ಮಹೋನ್ನತ ಮಹಿಮಾ ಕ್ಷೇತ್ರ ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಜೈನ ಸಮಾಜದ ನಿರೀಕ್ಷಿತ ಸಂಶೋಧನಾ ಕೃತಿಯಾದ "ಕರ್ನಾಟಕ ಜೈನ ಪರಂಪರೆಯಲ್ಲಿ ಬ್ರಹ್ಮಯಕ್ಷ" ಹಾಗೂ "ನಿರಂಜನ ವೈಭವ" ಎಂಬ ಎರಡು ಕೃತಿಗಳನ್ನು ನಿವೃತ್ತ ಇಂಜಿನಿಯರ್ ಹಾಗೂ ಹಾಸನ ಮಹಾವೀರ ಜೈನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ನಾಗೇಂದ್ರಯ್ಯರವರು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕೃತಿಯನ್ನು ಕುರಿತು ವೃಷಬ್ ಕುಮಾರ್ ರವರು ಮಾತಾನಾಡಿದರು. ಕೃತಿಕಾರರಾದ ವೀರೇಂದ್ರ ಕುಮಾರ್ ರವರು ಜೈನ ಯಕ್ಷಯಕ್ಷಿಯರ ಮಹತ್ವ ಹಾಗೂ ಬ್ರಹ್ಮ ಯಕ್ಷರ ಆರಾಧನೆಯ ಕುರಿತು ಉಪನ್ಯಾಸ ಮಾಡಿದರು. ಈ ಕೃತಿಯ ಪ್ರಕಾಶಕರಾದ ಸಿಂದಗೆರೆ ಸುಪಾರ್ಶ್ವ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾದ ನಾಗರತ್ನರಾಜಯ್ಯ ಹಾಗೂ ಕಾರ್ಯದರ್ಶಿಗಳಾದ ಪಾರ್ಶ್ವನಾಥಯ್ಯರವರು, ವಿಪುಲ್ ಜೈನ್ ಅತುಲ್ ಜೈನ್ ಚಂದ್ರಕೀರ್ತಿ, ಹಾಸನ ದ ಧನಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ನಾಡಿನ ತುಮಕೂರು ಮೈಸೂರು ಹಾಸನ ಬೆಂಗಳೂರು ಅಡಗೂರು ಮಾಯಸಂದ್ರ ಶ್ರವಣಬೆಳಗೊಳ ದಿಂದ ಜನರು ಆಗಮಿಸಿ ಈ ಕಾರ್ಯಕ್ರಮ ಕ್ಕೆ ಸಾಕ್ಷಿಯಾದರು.

ಡಾ. ನಿರಂಜನ್ ಕುಮಾರ್ ಅವರಿಗೆ ಡಾ. ಮುರಳಿ ಮನೋಹರ ಜೋಶಿ ಜೀವಮಾನ ಸಾಧನಾ ಪ್ರಶಸ್ತಿ

Article Image

ಡಾ. ನಿರಂಜನ್ ಕುಮಾರ್ ಅವರಿಗೆ ಡಾ. ಮುರಳಿ ಮನೋಹರ ಜೋಶಿ ಜೀವಮಾನ ಸಾಧನಾ ಪ್ರಶಸ್ತಿ

ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರಿಗೆ ಪದ್ಮವಿಭೂಷಣ ಡಾ. ಮುರಳಿ ಮನೋಹರ ಜೋಶಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಶ್ರೇಷ್ಠ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ಅಕ್ಟೋಬರ್ 31, 2025 ರಂದು ನವದೆಹಲಿಯಲ್ಲಿ ನಡೆದ ವಿಶ್ವ ಶೈಕ್ಷಣಿಕ ಒಕ್ಕೂಟದ ((Federation of World Academics)) ಸಮಾರಂಭದ 8ನೇ ವಾರ್ಷಿಕ ಸಮ್ಮೇಳನದಲ್ಲಿ ನೀಡಲಾಯಿತು. ಮಾಜಿ ಮಾನವ ಸಂಪನ್ಮೂಲ ಸಚಿವರು ಹಾಗೂ ಶ್ರೇಷ್ಠ ಶಿಕ್ಷಕರು ಆದ ಡಾ. ಮುರಳಿ ಮನೋಹರ ಜೋಶಿ ಅವರು ಈ ಪ್ರಶಸ್ತಿಗಳನ್ನು ನೀಡಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

Article Image

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಅಕ್ಟೋಬರ್ 24 ಶುಕ್ರವಾರ) ಇಂದು ಮತ್ತು 25 ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ರವರೆಗೆ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಾ ತಜ್ಞರುಗಳಾದ ಡಾ| ಪ್ರತೀಕ್ಷ್.ಪಿ, ಡಾ| ಹರೀಶ್ ಬಿ.ಎಸ್, ಡಾ| ದೇವೇಂದ್ರ ಕುಮಾರ್. ಪಿ, ಡಾ| ಶತಾನಂದ ಪ್ರಸಾದ್ ರಾವ್, ಡಾ| ರಜತ್ ಹೆಚ್.ಪಿ ಭಾಗವಹಿಸಲಿದ್ದಾರೆ. ಮೂಳೆಗಳ ತಪಾಸಣೆ, ಸಂಧಿವಾತ ಆರೈಕೆ, ಮೊಣಕಾಲಿನ ಆಥ್ರೋಸ್ಕೋಪಿಕ್ ಲಿಗಮೆಂಟ್‌ಗಳ ತಪಾಸಣೆ, ಬೆನ್ನುಮೂಳೆ ಮತ್ತು ಕುತ್ತಿಗೆ ನೋವಿನ ತಪಾಸಣೆ, ಭುಜದ ನೋವಿನ ತಪಾಸಣೆ, ಶಸ್ತ್ರಚಿಕಿತ್ಸೆ ರಹಿತ ಮೂಳೆಯ ಆರೈಕೆ, ಮೊಣಗಂಟು ಮತ್ತು ಸೊಂಟ ನೋವಿನ ತಪಾಸಣೆ, ಪಾದ ಮತ್ತು ಮೊಣಕಾಲಿನ ತಪಾಸಣೆ, ಸ್ಪೋರ್ಟ್ಸ್ ಇಂಜುರಿ ತಪಾಸಣೆಗಳನ್ನು ನಡೆಸಲಾಗುವುದು. ಉಚಿತ ವೈದ್ಯರ ಸಮಾಲೋಚನೆ, ಉಚಿತ ಮೂಳೆ ಸಾಂದ್ರತೆ ಪರೀಕ್ಷೆ, ಉಚಿತ ಎಕ್ಸ್ರೇ, ಒಳರೋಗಿ ವಿಭಾಗದಲ್ಲಿ ಸರ್ಜರಿ ಮೇಲೆ 10% ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ರಕ್ತ ಪರೀಕ್ಷೆ ಮತ್ತು ರೆಡಿಯೋಲಾಜಿ ಪರೀಕ್ಷೆಯಲ್ಲಿ 20% ರಿಯಾಯಿತಿ, ಔಷಧದಲ್ಲಿ 10% ರಿಯಾಯಿತಿ ದೊರೆಯಲಿದೆ. ಕೀಹೋಲ್ ಸರ್ಜರಿ, ಪಾದದ ಸರ್ಜರಿ, ಎಂಡೋಸ್ಕೋಪಿ ಸರ್ಜರಿ, ಲೇಸರ್ ಸರ್ಜರಿ, ಎಲ್ಲಾ ತರಹದ ಆರ್ಥೋಸ್ಕೋಪಿಕ್ ಲಿಗ್‌ಮೆಂಟ್ ಸರ್ಜರಿ, ಸಂಪೂರ್ಣ ಮಂಡಿ ಮತ್ತು ಸೊಂಟದ ಬದಲಾವಣೆ ಮತ್ತು ಡಿಸ್ಕ್ ಸರ್ಜರಿಯಲ್ಲಿ ವಿಶೇಷ ರಿಯಾಯಿತಿ ದೊರೆಲಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಲು 7760397878 ಅಥವಾ 8073349216 ಈ ದೂರವಾಣಿಗಳನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.

ಮೈಸೂರು: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರ ಭೇಟಿ

Article Image

ಮೈಸೂರು: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರ ಭೇಟಿ

ಮೈಸೂರು, ಅ.10: ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಬಸದಿಗಳ ಸಂರಕ್ಷಣೆಯ ಬಗ್ಗೆ ವಿವರವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಆಯುಕ್ತರು ಬಸದಿಗಳಿಗೆ ಯಾವುದೇ ರೀತಿಯ ತೊಂದರೆಗಳನ್ನು ಮಾಡುವುದಿಲ್ಲ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಒಂದೆರಡು ದಿನದಲ್ಲಿ ಲಿಖಿತವಾಗಿ ಉತ್ತರ ನೀಡುವುದಾಗಿ ಭರವಸೆ ನೀಡಿದರು. ಎಲ್ಲಾ ಬಸದಿಗಳನ್ನು ಸಂರಕ್ಷಣೆ ಮಾಡಲು ಇಲಾಖೆ ಒತ್ತು ನೀಡಲಿದೆ ಎಂಬುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಕೆ ಜಯಕೀರ್ತಿ ಜೈನ್, ವಿಜಯಕುಮಾರ್. H, ಸುರೇಂದ್ರ ಕುಮಾರ್ ಜೈನ್, ಅಜಿತ್ ಕುಮಾರ್ ಜೈನ್ ಮುಂತಾದವರು ಉಪಸ್ಥಿತರಿದ್ದರು

ಭರತೇಶ ವೈಭವ ಕಾವ್ಯ ವಾಚನ ಪ್ರವಚನ ಸಪ್ತಾಹ ಸಂಭ್ರಮ

Article Image

ಭರತೇಶ ವೈಭವ ಕಾವ್ಯ ವಾಚನ ಪ್ರವಚನ ಸಪ್ತಾಹ ಸಂಭ್ರಮ

ಮಂಗಳೂರು: ಬಹುಜನರ ಅಪೇಕ್ಷೆಯ ಮೇರೆಗೆ ಮಂಗಳೂರು ನಗರದಲ್ಲಿ ದ್ವಿತೀಯ ಬಾರಿಗೆ ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಪ್ರಸ್ತುತ ಪಡಿಸುವ ವಿಶೇಷ ಕಾರ್ಯಕ್ರಮ ಮಹಾಕವಿ ರತ್ನಾಕರ ವರ್ಣಿವಿರಚಿತ ಮಹಾಕಾವ್ಯ ಭರತೇಶ ವೈಭವ ಕಾವ್ಯ ವಾಚನ - ಪ್ರವಚನ ಸಪ್ತಾಹ ಸಂಭ್ರಮವು ದಿನಾಂಕ 05-10-2025 ರಿಂದ ತಾ. 12-10-2025ರ ವರೆಗೆ ಪ್ರತಿದಿನ ಸಂಜೆ ಗಂಟೆ 6.00 ರಿಂದ 8.00ರ ವರೆಗೆ ವರ್ಧಮಾನ ಸಿದ್ದಾರ್ಥ ಭವನ, ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್‌ ಇಲ್ಲಿ ಜರುಗಲಿದೆ. ಉದ್ಘಾಟನೆ : ಶ್ರೀ ಅಭಿಷೇಕ್ ಬಿ.ಎಸ್., BE, MBA ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಮೆಸ್ಕಾಂ ಸಬ್‌ಡಿಸನ್, ಕಾವೂರು, ಮಂಗಳೂರು ಕಾವ್ಯವಾಚನ : ಶ್ರೀ ಸಾತ್ವಿಕ್ ಜೈನ್ ಎನ್., ಬಜಗೋಳಿ ಎಂ.ಸಿ.ಎ. ವಿದ್ಯಾರ್ಥಿ, ಎನ್.ಐ.ಟಿ.ಕೆ. ಪ್ರವಚನ : ಶ್ರೀ ಮುನಿರಾಜ ರೆಂಜಾಳ, ಕಾರ್ಕಳ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಮಂಗಳೂರಿನ ಹೃದಯಭಾಗ ಪಾಂಡೇಶ್ವರದಲ್ಲಿ ಐಷಾರಾಮಿ ಅಭಿಷ್ ವಿಸ್ಟಾ ಸೀ ವ್ಯೂ ಅಪಾರ್ಟ್ಮೆಂಟ್

Article Image

ಮಂಗಳೂರಿನ ಹೃದಯಭಾಗ ಪಾಂಡೇಶ್ವರದಲ್ಲಿ ಐಷಾರಾಮಿ ಅಭಿಷ್ ವಿಸ್ಟಾ ಸೀ ವ್ಯೂ ಅಪಾರ್ಟ್ಮೆಂಟ್

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಭಿಷ್ ಬಿಲ್ರ‍್ಸ್ ಸಂಸ್ಥೆಯ ನೂತನ ಐಶಾರಾಮಿ ವಸತಿ ಸಮುಚ್ಚಯ ಅಭಿಷ್ ವಿಸ್ಟಾವನ್ನು ಅನಾವರಣಗೊಳಿಸಿದ್ದು, ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಗರದ ಹೃದಯ ಭಾಗವಾದ ಪಾಂಡೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ಅಭಿಷ್ ವಿಸ್ಟಾ ಅಪಾರ್ಟ್ಮೆಂಟ್ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ. ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಈ ಪ್ರೀಮಿಯಂ ಅಪಾರ್ಟ್ಮೆಂಟ್ ತನ್ನ ವಿಶಿಷ್ಟ ಸ್ಥಳ ಮತ್ತು ಆಕರ್ಷಕ ವಿನ್ಯಾಸದಿಂದ ವಿಶಿಷ್ಟತೆ ಸಾಧಿಸಿದೆ. ಮೂರನೇ ಮಹಡಿಯ ಮೇಲ್ಭಾಗದಿಂದಲೇ ಸಮುದ್ರ ಹಾಗೂ ಪಶ್ಚಿಮ ಘಟ್ಟದಿಂದ ಹರಿದು ಬರುವ ನೇತ್ರಾವತಿ ಹಾಗೂ ಪಲ್ಗುಣಿ ನದಿಯ ಸಂಗಮದ ವಿಹಂಗಮಕ ನೋಟ ಕಣ್ಣು ಸೆಳೆಯುತ್ತದೆ. ನೈಸರ್ಗಿಕ ಸೌಂದರ್ಯದೊಂದಿಗೆ ನಗರದ ಚೈತನ್ಯವನ್ನೂ ಅನುಭವಿಸಲು ಸಾಧ್ಯವಾಗುವ ಈ ವಾಸಸ್ಥಳವು `ಗುಡ್ ಲೊಕೇಶನ್ - ರಿಚ್ ಲೊಕೇಶನ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರದ ಪ್ರಮುಖ ಭಾಗ ಎಂದರೆ ಪ್ರೆಮ್ ಲೊಕೇಷನ್‌ನಲ್ಲಿ ಒಂದಾಗಿರುವ ಪಾಂಡೇಶ್ವರ - ಮಂಗಳಾದೇವಿ ದೇವಸ್ಥಾನ ಮುಖ್ಯ ರಸ್ತೆಯಲ್ಲೆ ಅಭಿಷ್ ವಿಸ್ಟಾ ನಿರ್ಮಾಣವಾಗುತ್ತಿದೆ. ಈ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಎರಡುವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಹಣಕಾಸು ಸೌಲಭ್ಯ: ಈ ಯೋಜನೆಯಲ್ಲಿ ಮನೆ ಖರೀದಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳೊಂದಿಗೆ ಅಭಿಷ್ ಬಿಲ್ರ‍್ಸ್ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದಾಗಿ ಮನೆ ಖರೀದಿಗೆ ಸುಲಭವಾಗಿ ಗ್ರಾಹಕರಿಗೆ ಹಣಕಾಸು ಸೌಲಭ್ಯ ಸಿಗಲಿದೆ. ಸಾರ್ವಜನಿಕ ಸಾರಿಗೆ, ಉತ್ತಮ ಪರಿಸರ, ಶಾಪಿಂಗ್ ಮಾಲ್, ದೇವಸ್ಥಾನ, ಮಸೀದಿ, ಚರ್ಚ್, ಶಿಕ್ಷಣ ಸಂಸ್ಥೆ, ವೃತ್ತಿಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜುಗಳು ಆಸುಪಾಸಿನಲ್ಲಿರುವ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸುಲಭವಾಗಿ ತಲುಪುವಂತಿರುವ ಅಭಿಷ್ ವಿಸ್ಟಾದಲ್ಲಿ ಗ್ರಾಹಕರು ಮನೆ ಬುಕ್ ಮಾಡಬಹುದಾಗಿದೆ. 1660 ಚದರ ಅಡಿಯಿಂದ 1875 ಚದರ ಅಡಿ ವರೆಗಿನ ಮೂರು ಬೆಡ್ ರೂಂನ ಮನೆ ನಿರ್ಮಾಣವಾಗಲಿದೆ. ಪ್ರತಿ ಮಹಡಿಯಲ್ಲಿ ಐದು ಮನೆ ಇದ್ದು, ಗಾಳಿ ಬೆಳಕಿಗೆ ತೆರೆದುಕೊಂಡಿದೆ. ಒಟ್ಟು 17 ಮಹಡಿಯ ಈ ವಸತಿ ಸಮುಚ್ಚಯದಲ್ಲಿ ಎರಡು ಮಹಡಿ ಕಾರು ನಿಲುಗಡೆ, 14 ಮಹಡಿಯಲ್ಲಿ 70 ಮನೆಗಳು ಹಾಗೂ ಟಾಪ್ ಫ್ಲೋರ್‌ನಲ್ಲಿ ಕ್ಲಬ್ ಹೌಸ್ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಅತೀ ಎತ್ತರದ ಹಾಗೂ ಬೃಹತ್ ವಸತಿ ಸಮುಚ್ಚಯ ಇದಾಗಿದ್ದು, ಅಭಿಷ್ ವಿಸ್ಟಾ ಕೇವಲ ವಾಸಸ್ಥಳವಲ್ಲ, ಬುದ್ಧಿವಂತ ಹೂಡಿಕೆದಾರರಿಗಾಗಿ ಭವಿಷ್ಯದ ಮೌಲ್ಯವರ್ಧಿತ ಆಸ್ತಿ ಕೂಡ ಹೌದು. ಆಧುನಿಕ ಜೀವನಶೈಲಿಯ ಕನಸನ್ನು ನನಸು ಮಾಡುವ ಅಭಿಷ್ ವಿಸ್ಟಾ ಇಂದು ನಗರದ ಅತ್ಯಂತ ಆಕರ್ಷಕ ಪ್ರೀಮಿಯಂ ಅಪಾರ್ಟ್ಮೆಂಟ್ ಯೋಜನೆಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ. ಅಭಿಷ್‌ನ ವಿಸ್ತಾದ ವಿಶೇಷತೆ: ಪ್ರೆಮ್ ಲೊಕೇಷನ್ 17 ಮಹಡಿ – 70 ಮನೆ ಚತುಷ್ಪಥ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ವಸತಿ ಸಮುಚ್ಚಯ ಮೂರನೇ ಮಹಡಿಯ ಬಳಿಕ ನೇತ್ರಾವತಿ, ಪಲ್ಗುಣಿ ನದಿ ಹಾಗೂ ಸಮುದ್ರದ ಸಂಗಮದ ವಿಹಂಗಮ ನೋಟ ಅತ್ಯಾಧುನಿಕ ಸೌಲಭ್ಯ, ಟ್ರಾಫಿಕ್ ಜಂಜಾಟದಿಂದ ಮುಕ್ತಿ ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ ಎಲ್ಲ ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸ ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್, ಪಾರ್ಟಿ ಹಾಲ್ ಚಿ‌ಲ್ಡ್ರನ್ಸ್ ಪ್ಲೇ ಏರಿಯಾ. ವಾಕಿಂಗ್‌ಗಾಗಿ ಫೂಟ್ ರಿಫ್ಲೆಕ್ಸೋಲಜಿ ಪಥ ಅತಿಥಿಗಳು ಹಾಗೂ ಮಾಲೀಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್ ಆಧುನಿಕ ಪರಿಕರಗಳೊಂದಿಗೆ ಆಕರ್ಷಕ ವಿನ್ಯಾಸ ಕಡಿಮೆ, ಮಧ್ಯಮ ಆದಾಯದ ಕುಟುಂಬಕ್ಕೆ ಸೂಕ್ತ ಟೆರೆಸ್‌ನಲ್ಲಿ ಲ್ಯಾಂಡ್ ಸ್ಕೇಪ್.

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

Article Image

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

ಬೆಳ್ತಂಗಡಿ: ಜೈನ ಬಸದಿಗಳ ಮುಖ್ಯ ಅರ್ಚಕರು ಹಾಗೂ ಸಹಾಯಕ ಅರ್ಚಕರುಗಳಿಗೆ ಅವರ ದೈನಂದಿನ ಜೀವನ ನಿರ್ವಹಣೆಗೆ ಅನುಕೂಲ ಆಗುವಂತೆ ಮಾಸಿಕ ಗೌರವಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುದಾನವನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಿಡುಗಡೆಗೊಳಿಸಿರುತ್ತಾರೆ. ಈ ಯೋಜನೆ ಪ್ರಥಮ ಬಾರಿಗೆ ಜಾರಿಯಾಗುತ್ತಿರುವುದು ನಮಗೆಲ್ಲ ಸಂತೋಷವನ್ನುಂಟು ಮಾಡಿದೆ. ಯೋಜನೆಯನ್ನು ಜಾರಿ ಮಾಡಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ರವರಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಝಮೀರ್ ರವರಿಗೆ ಹಾಗೂ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಶ್ರಮವಹಿಸಿದ ನಮ್ಮ ಸಮಾಜದ ಎಚ್. ನಾಭಿರಾಜ ಜೈನ್ ಹಾಗೂ ಕರ್ನಾಟಕ ಸರಕಾರಕ್ಕೆ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಂಚಾಲಕರಾದ ಡಾ. ಕೆ ಜಯಕೀರ್ತಿ ಜೈನ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರತಿಷ್ಠಿತ ರತ್ನಾಕರ ಬ್ಯಾಂಕ ನಿಂದ ಮೂರು ತಲೆಮಾರಿನ ಗ್ರಾಹಕರಿಗೆ ಸನ್ಮಾನ

Article Image

ಪ್ರತಿಷ್ಠಿತ ರತ್ನಾಕರ ಬ್ಯಾಂಕ ನಿಂದ ಮೂರು ತಲೆಮಾರಿನ ಗ್ರಾಹಕರಿಗೆ ಸನ್ಮಾನ

ಮಹಾರಾಷ್ಟ್ರ ಮೂಲದ ಪ್ರತಿಷ್ಠಿತರತ್ನಾಕರ ಬ್ಯಾಂಕ್ (RBL Bank) ಇದು ಹುಬ್ಬಳ್ಳಿಯಲ್ಲಿ ತನ್ನ ಶಾಖೆಯನ್ನು ಸುಮಾರು 42 ವರ್ಷಗಳ ಹಿಂದೆ ತೆರೆಯಿತು. ಆಗಿನಿಂದ ಇಂದಿನವರೆಗೂ ಈ ಬ್ಯಾಂಕು ಬ್ಯಾಂಕಿಂಗ್ ಸೇವೆಯಲ್ಲಿ ಸಾರ್ವಜನಿಕ ವಲಯದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ. ಪ್ರಸ್ತುತ ಈ ರತ್ನಾಕರ ಬ್ಯಾಂಕ್ ಮೂರು ತಲೆಮಾರಿನಿಂದ ಈಗಲೂ ಅತ್ಯಂತ ಕ್ರೀಯಾಶೀಲವಾಗಿ ವ್ಯವಹರಿಸುತ್ತಿರುವ ಈಗ ಮೂರನೇ ಜನರೇಷನ್ ಗ್ರಾಹಕರನ್ನು ಗುರುತಿಸಿ ಗೌರವಿಸಲು ಮುಂದಾಗಿದೆ. ಇತ್ತೀಚಿಗೆ ಪ್ರತಿಷ್ಠಿತ ಖಾಸಗಿ ಹೋಟೆಲ್ ಒಂದರಲ್ಲಿ ಮೂರು ತಲೆಮಾರಿನ ಗ್ರಾಹಕರಲ್ಲಿ ಪ್ರಮುಖರಾದ ಹುಬ್ಬಳ್ಳಿ ಮಹಾವೀರ ಗಲ್ಲಿಯ ಪ್ರತಿಷ್ಠಿತ ಮೆ. ಎಸ್. ಬಿ. ಬೀಳಗಿ & ಸನ್ಸ್ ಹೆಸರಿನ ವ್ಯಾಪಾರಿ ಸಂಸ್ಥೆಯ ಮುಖ್ಯಸ್ಥ ಬ್ರಹ್ಮಕುಮಾರ ಎಸ್ ಬೀಳಗಿ, ಇವರ ಪುತ್ರ ಅಜಯ ಬಿ. ಬೀಳಗಿ ಹಾಗೂ ಇವರ ಪುತ್ರಿ ಪ್ರಣೀತ ಎ. ಬೀಳಗಿ ಇವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜಯಶೀಲಾ ಬೀಳಗಿ ಮತ್ತು ಚಂದನಾ ಎ. ಬೀಳಗಿ ಇದ್ದರು. ಹಾಗೆಯೇ ಹುಬ್ಬಳ್ಳಿಯ ಇನ್ನೊರ್ವ ಗಿರಿಯ ಗ್ರಾಹಕ ಮೆ| ರಾಧಾಕೃಷ್ಣ ಇಂಡಸ್ಟ್ರೀಸ್ ಮಾಲೀಕರಾದ ಉದಯ ದಡೋತಿ ಮತ್ತು ಪ್ರತಿಭಾ ದಡೋತಿ ಮತ್ತು ಇವರ ಪುತ್ರ ಗುಣಧರ ದಡೋತಿ ಹಾಗೂ ಇವರ ಪತ್ನಿ ಶಲಾಖಾ ಇವರನ್ನು ಸನ್ಮಾನಿಸಿ ಗೌರವಿಸಿದರು ಜೊತೆಗೆ ಅತ್ಯಂತ ಹಿರಿಯ ಗ್ರಾಹಕರು ಬ್ಯಾಂಕನ ಹಿತೈಸಿಗಳೂ ಆದ 92 ವಸಂತಗಳನ್ನು ಕಂಡ ಸುರೇಂದ್ರ ನಾವಳ್ಳಿ ಇವರನ್ನೂ ಬ್ಯಾಂಕ್ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಬ್ಯಾಂಕು ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ. ಬ್ಯಾಂಕಿನ ಹಿರಿಯ ಅಧಿಕಾರಿ ನಂಜುಂಡ ಸ್ವಾಮಿ, ಬ್ರಾಂಚ್ ಮ್ಯಾನೇಜರ್ ಚಂದ್ರಗೌಡ ಪಾಟೀಲ್, ಟಾಸ್ಕ್ ಮ್ಯಾನೇಜರ್ - ಸಂಗಪ್ಪ ಉಕ್ಕಲಿ, ಸಿಬ್ಬಂದಿ ರತ್ನಾ ಉಪಾಧ್ಯೆ ಮತ್ತು ಕಾವೇರಿ ರಾಥೋಡ್ ಇವರು ಈ ಸನ್ಮಾನ ಸಮಾರಂಭವನ್ನು ನೆರವೇರಿಸಿದರು. ವರದಿ : ಎಸ್. ಆರ್. ಮಲ್ಲಸಮುದ್ರ

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನವರಾತ್ರಿ ಮಹೋತ್ಸವ-2025 ಸಾಂಸ್ಕ್ರತಿಕ ವೈಭವ

Article Image

ಮಂಗಳೂರು: ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ನವರಾತ್ರಿ ಮಹೋತ್ಸವ-2025 ಸಾಂಸ್ಕ್ರತಿಕ ವೈಭವ

ಮಠದಕಣಿ ಶ್ರೀ ವೀರಭದ್ರ - ಮಹಾಮಾಯಿ ದೇವಸ್ಥಾನದ ನವರಾತ್ರಿ ಮಹೋತ್ಸವದಲ್ಲಿ ಮಹಾಮಾಯಿ ಫ್ರೆಂಡ್ಸ್ ಎಸೋಸಿಯೇಶನ್ 48ನೇ ವಾರ್ಷಿಕೋತ್ಸವದ ಪ್ರಯುಕ್ತ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದಿಂದ ಬುಧವಾರ(24-9-2025) ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಎಲ್ಲರ ಮೆಚ್ಚುಗೆ ಪಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಖ್ಯ ಅಥಿತಿಗಳಾಗಿ ಮಕ್ಕಳ ಕಲ್ಯಾಣ ಸಮಿತಿ ದ.ಕ ಜಿಲ್ಲಾ ಅಧ್ಯಕ್ಷೆ ಹಾಗೂ ವಕೀಲರಾದ ಡಾ. ಅಕ್ಷತಾ ಆದರ್ಶ್ ಮೂಡುಬಿದಿರೆ ಮತ್ತು ಸಂಪತ್ ಜೈನ್ ಮುಂಡೂರು, ಬಾಲಕೃಷ್ಣ ಕಲ್ಬಾವಿ, ವಿಶ್ವನಾಥ್ ಶೆಟ್ಟಿಗಾರ, ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೃತ್ಯ ನಿರ್ದೇಶಕರುಗಳಾದ ರೀಮಾ ಜಗನ್ನಾಥ್ ಮಾರ್ನಮಿಕಟ್ಟೆ , ವಿದುಷಿ ಪ್ರಾರ್ಥನಾ ರೋಹಿತ್ ಹೊಸಬೆಟ್ಟು , ವಂಸತ್ ಕುಮಾರ್, ಆಶಿಶ್ ಅಂಚನ್, ಹರೀಶ್ ಆಚಾರ್ಯ ಅವರನ್ನು ಸನ್ಮಾನಿಸಿಗೌರವಿಸಲಾಯಿತು. ಪ್ರಿಯಾ ಸುದೇಶ್ ಕುಮಾರ್ ಮಂಗಳೂರು ನಿರೂಪಿಸಿದರು. ಗೌರವ್ ಶೆಟ್ಟಿಗಾರ, ಉಷಾ ಅಶೋಕ್, ಧಾತ್ರಿ, ಕೃತಿ ಸನಿಲ್, ಪ್ರೇರಣ ಜೆ,ಅಪೇಕ್ಷಾ ಎ. ಮೊದಲಾದವರು ಸಹಕರಿಸಿದರು.

First Previous

Showing 1 of 4 pages

Next Last