Article Image

ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆ

Article Image

ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆ

ರಾಜ್ಯ ಜೈನ ಜಾಗೃತಿ ಸಂಘ (ರಿ) ಕರ್ನಾಟಕ ಬೆಳಗಾವಿ ಇದರ ವತಿಯಿಂದ ಶ್ರೀ ಭಗವಾನ್ ಮಹಾವೀರ ತೀರ್ಥಂಕರರ 2624ನೇಯ ಜನ್ಮ ಕಲ್ಯಾಣದ ಮಹೋತ್ಸವದ ಅಂಗವಾಗಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮಹಾವೀರ ತೀರ್ಥಂಕರರ ಬಗ್ಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಷಯ: ಭಗವಾನ್ ಮಹಾವೀರ ತೀರ್ಥಂಕರರ ಜೀವನ ಹಾಗೂ ಧರ್ಮೋಪದೇಶಗಳ ಕುರಿತು. 1) 5 ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು (ಜೈನ ಧರ್ಮಿಯರು ಮಾತ್ರ) (ಜನನ ಪ್ರಮಾಣ ಪತ್ರ ಕಳುಹಿಸಬೇಕು) 2) ಸದರಿ ಭಾಷಣದ 5 ನಿಮಿಷಗಳ ವಿಡಿಯೋ ಮಾಡಿ ಈ ಕೆಳಗೆ ತಿಳಿಸಿದ ಮೊ: 9916176515 ಹಾಗೂ ಮೊ: 9448644206 ನಂಬರಗಳಿಗೆ ಕಳಿಸಿಕೊಡಬೇಕು 3) ಭಾಷಣದ ವಿಡಿಯೋಗಳನ್ನು ದಿನಾಂಕ 6-04-2025ರೊಳಗಾಗಿ ಕಳಿಸಿಕೊಡಬೇಕು 4) ಸದರಿ ವಿಡಿಯೋಗಳನ್ನು ತಜ್ಞ ವಿದ್ವಾಂಸರು ಹಾಗೂ ಸ್ವಾಮೀಜಿಗಳವರೊಂದಿಗೆ ಪರಿಶೀಲಿಸಿ ನೋಡಿ, ಅದರಲ್ಲಿ ಅತೀ ಉತ್ತಮ ವಿಡಿಯೋ ಮಾಡಿದ ಮಕ್ಕಳ ಭಾಷಣದ ವಿಡಿಯೋಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಎಂದು ಆಯ್ಕೆ ಮಾಡಲಾಗುವುದು. 5) ಸದರಿ ಭಾಷಣದ ಫಲಿತಾಂಶವನ್ನು ದಿನಾಂಕ 10-04-2025 ರಂದು ಪ್ರಕಟಿಸಲಾಗುವುದು 6) ವಿಜೇತರಿಗೆ : ಪ್ರಥಮ ಬಹುಮಾನ ರೂ 1008, ದ್ವಿತೀಯ ಬಹುಮಾನ ರೂ 751, ತೃತೀಯ ಬಹುಮಾನ ರೂ 501ಗಳನ್ನು ನಗದು ರೂಪದಲ್ಲಿ ಕೊಡಲಾಗುವುದು. ವಿಜೇತ ಮಕ್ಕಳು ಅವರ ಬ್ಯಾಂಕಿನ ಅಥವಾ ಅವರ ಪಾಲಕರ ಬ್ಯಾಂಕಿನ ಖಾತೆ ಸಂಖ್ಯೆ ಹಾಗೂ ಐ ಎಫ್ ಎಸ್ ಸಿ ಕೋಡ್ ಹಾಗೂ ಬ್ಯಾಂಕಿನ ಹೆಸರನ್ನು ಮೇಲ್ದಂಡ ಮೊಬೈಲ್ ವಾಟ್ಸಾಪ್‌ಗೆ ಕಳಿಸಬೇಕು. 7) ಭಾಗವಹಿಸಿದ ಮಕ್ಕಳೆಲ್ಲರಿಗೂ ರಾಜ್ಯ ಜೈನ ಜಾಗೃತಿ ಸಂಘ (ರಿ) ವತಿಯಿಂದ ಪ್ರಶಸ್ತಿ ಪತ್ರಗಳನ್ನು ಕೊಡಲಾಗುವುದು.

ಮಂಚೇನಹಳ್ಳಿ: ಧಾರ್ಮಿಕ ಶಿಬಿರ

Article Image

ಮಂಚೇನಹಳ್ಳಿ: ಧಾರ್ಮಿಕ ಶಿಬಿರ

ಮಂಚೇನಹಳ್ಳಿ:‌ ಶ್ರೀ ಭಗವಾನ್ ಬಾಹುಬಲಿ ಟ್ರಸ್ಟ್, ಶ್ರೀ ಕೋಡಿಬ್ರಹ್ಮದೇವರ ಧರ್ಮಸಂಸ್ಥೆಯ ವತಿಯಿಂದ ಇದೇ ಏಪ್ರಿಲ್ 15ರಿಂದ 19ರವರೆಗೆ ಮಕ್ಕಳಿಗೆ ಮತ್ತು ಯುವಕರಿಗೆ ಧಾರ್ಮಿಕ ಶಿಬಿರವನ್ನು ಏರ್ಪಡಿಸಲಾಗಿದೆ. ಐದೂ ದಿನಗಳು ಊಟ ಮತ್ತು ವಸತಿಯ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಲು ಇಚ್ಛಿಸುವವರು ಕೆಳಗಿನ ದೂರವಾಣಿ ಸಂಖ್ಯೆಯಲ್ಲಿ ಹೆಸರನ್ನು ನೀಡಿ ನೊಂದಾಯಿಸಿಕೊಳ್ಳತಕ್ಕದ್ದು. ಉಳಿದುಕೊಳ್ಳುವ ವ್ಯವಸ್ಥೆ ಸೀಮಿತವಾಗಿರುವುದರಿಂದ ಮೊದಲು ಕರೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ದೂರವಾಣಿ ಸಂಖ್ಯೆ : ತ್ರಿಶಲಾ ಬ್ರಹ್ಮಯ್ಯ-94484 57738, ವಿ.ಜೆ. ಬ್ರಹ್ಮಯ್ಯ-94480 74801, ಕೆ.ಬಿ. ಅಶೋಕ್ ಕುಮಾರ್-95136 29196, ಪಿ.ಸಿ. ರಾಜೇಶ್-98454 84399, ವಿ.ಎಸ್. ಬ್ರಹ್ಮಪ್ರಕಾಶ್-98450 31482, ಎಂ.ಎಸ್‌. ದೇವರಾಜ್-92422 78089

ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ

Article Image

ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ

ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರವನ್ನು ಮಾಡಿಕೊಂಡು ಬರುತ್ತಿದೆ. ಕಳೆದ 10 ವರ್ಷಗಳಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. 11ನೆಯ ವರ್ಷದಲ್ಲಿ ಕೀರ್ತಿಶೇಷ‌ ಆರ್.‌ ಜೆ. ಅನಂತರಾಜಯ್ಯ ಸಂಸ್ಕರಣೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ದಿನಾಂಕ 09-03-2025 ನೇ ಬುಧವಾರ ಮಧ್ಯಾಹ್ನ ತುಮಕೂರಿನ "ಸ್ನೇಹ ಸಂಗಮ ಕನ್ವೆನ್‌ಷನ್ ಹಾಲ್", ಶಿರಾ ರಸ್ತೆ, ತುಮಕೂರು ಇಲ್ಲಿ ಏರ್ಪಡಿಸಿ ವಿತರಣೆ ಮಾಡಲಾಯಿತು. ವೇದಿಕೆಯ ಗಣ್ಯರೆಲ್ಲಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಹಾಗೂ ಪಚ್ಚೆ ಪಾರ್ಶ್ವನಾಥ ಸ್ವಾಮಿ ಮತ್ತು ಆರ್.ಜೆ. ಅನಂತರಾಜಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಉದ್ಘಾಟನೆ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪೆನುಗೊಂಡ ಪಚ್ಚೆ ಪಾರ್ಶ್ವನಾಥಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಆರ್.ಪಿ. ಚಂದ್ರಕೀರ್ತಿರವರು ಮಾತನಾಡುತ್ತಾ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಈ ಟ್ರಸ್ಟ್‌ನ ಕೆಲಸವನ್ನು ಗಮನಿಸಿರುವುದರಿಂದ ನೀವು ಗಳಿಸುವಂತಾದಾಗ ಅದರಲ್ಲಿ ಒಮ್ಮೆಯಾದರೂ ಈ ಟ್ರಸ್ಟ್‌ಗೆ ಸಹಾಯ ಮಾಡಿದಲ್ಲಿ ಇನ್ನು ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿದ್ವಾಂಸರು ವಿದ್ಯೋದಯ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದ ಪ್ರೊ. ಕೆ. ಚಂದ್ರಣ್ಣನವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡುತ್ತಾ ಅನಂತರಾಜಯ್ಯನವರು ವ್ಯಾಪಾರ ಧರ್ಮ, ಸಹಾಯ ಧರ್ಮ ಇವರೆಡನ್ನು ಮೈಗೂಡಿಸಿಕೊಂಡು ಇಷ್ಟು ದೊಡ್ಡ ಪ್ರತಿಷ್ಠಾನವನ್ನು ಕಟ್ಟಿ ಬೆಳೆಸಿದರು. ಅವರು ಮಾಡಿದ ಸಂಪಾದನೆಯಲ್ಲಿ ಕಿಂಚಿತ್ ಹಣ ಉಳಿಸಿ ಇವತ್ತು ನಿಮಗೆಲ್ಲಾ ವಿದ್ಯಾರ್ಥಿ ವೇತನವನ್ನು ನೀಡಲು ಕಾರಣ ಕರ್ತರಾಗಿದ್ದಾರೆ. ಅವರ ವೈಯಕ್ತಿಕ ಜೀವನವನ್ನು ಮಾದರಿ ಜೀವನವಾಗಿತ್ತು. ಅವರನ್ನು ಬಲ್ಲ ಎಲ್ಲರೂ ಅವರ ಗುಣಗಳಿಗೆ ತಲೆಬಾಗುತ್ತಿದ್ದರು. ಅಂತಹವರು ಇಂದು ನಮ್ಮ ಮುಂದೆ ದೈಹಿಕವಾಗಿ ಇಲ್ಲ ಮಾನಸಿಕವಾಗಿ ಉಳಿದಿದ್ದಾರೆ. ಅವರ ಆಸೆ ಕೈಗೂಡಬೇಕಾದರೆ ಈ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಿ ಒಳ್ಳೆಯ ಪದವಿ ಪಡೆದು ಒಳ್ಳೆಯ ಕೆಲಸವನ್ನು ಪಡೆಯಬೇಕೆಂದು ಈ ಮೂಲಕ ಅವರ ಆತ್ಮಕ್ಕೆ ಶಾಂತಿ ನೀಡಿದಂತಾಗುತ್ತದೆ ಹಾಗೂ ನಿಮ್ಮ ತಂದೆ ತಾಯಿಗಳಿಗೂ ಗೌರವ ಸಿಗುತ್ತದೆ. ಈ ಕೆಲಸವನ್ನು ನೀವು ಮಾಡಬೇಕು ಎಂದು ಕಿವಿಮಾತು ಹೇಳಿದರು. ಆರ್.ಜೆ. ಅನಂತರಾಜಯ್ಯನವರ ಈ ಟ್ರಸ್ಟ್‌ನ ಸದಸ್ಯರುಗಳೆಲ್ಲಾ ಒಬ್ಬೊಬ್ಬರು ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಕ್ಕಳಾದ ನಾಗರಾಜು ಮತ್ತು ಪಾರ್ಶ್ವನಾಥ್ ಇವರುಗಳು ಕೂಡ ಆರ್.ಎ. ಸುರೇಶ್ ಕುಮಾರ್‌ರವರ ಜೊತೆ ಸೇರಿ ಟ್ರಸ್ಟ್‌ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ ಅದಕ್ಕೆ ಅವರ ತಾಯಿಯವರಾದ ಸಾದ್ವಿ ಸರೋಜಮ್ಮನವರ ಪೂರ್ಣ ಬೆಂಬಲ ಆಶೀರ್ವಾದವಿದೆ ಎಂದು, ಈ 11 ನೇ ವರ್ಷದಲ್ಲಿ 19 ವಿದ್ಯಾರ್ಥಿನಿಯರು 14 ಹುಡುಗರು ಒಟ್ಟು 33 ವಿದ್ಯಾರ್ಥಿಗಳಿಗೆ ರೂ. 7,20,000-00 ರೂಪಾಯಿಗಳನ್ನು ವಿತರಣೆ ಮಾಡಲಾಯಿತು. ಎ. ಎನ್. ರಾಜೇಂದ್ರಪ್ರಸಾದ್‌ರವರು ಕೀರ್ತಿಶೇಷ ಆರ್.ಜೆ. ಅನಂತರಾಜಯ್ಯನವರ ಸಮಗ್ರ ಜೀವನ ಚರಿತ್ರೆಯನ್ನು ಸಭೆಗೆ ವಿವರವಾಗಿ ಪರಿಚಯ ಮಾಡಿಕೊಟ್ಟರು. ಪ್ರೊ.ಪಿ.ಪಾರ್ಶ್ವನಾಥ್ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ಗಣಿತ ಶಾಸ್ತ್ರದ ವಿಭಾಗದ ಮುಖ್ಯಸ್ಥರು ಇವರು ಸಭೆಯಲ್ಲಿ ಆಗಮಿಸಿದ ಮಕ್ಕಳಿಗೆ ಹಿತ ನುಡಿಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ನೇತ್ರ ತಜ್ಞರಾದ ಡಾ. ಕೆ. ಆರ್. ರಂಗನಾಥ್ ರವರು ಮಕ್ಕಳಿಗೆ ಶ್ರೇಯಸ್ಸು ಬರಲೆಂದು ಹಾಗೂ ಆರ್.ಜೆ. ಅನಂತರಾಜಯ್ಯನವರ ಕುಟುಂಬದವರು ಈ ಕಾರ್ಯಕ್ರಮವನ್ನು ಅನುಚಾನವಾಗಿ ನಡೆಸಿಕೊಂಡು ಬರುತ್ತಿರುವುದು ನಿಮಗೆಲ್ಲಾ ಒಂದು ಬೆಂಬಲವಾಗಿದೆ ಎಂದು ಆಶೀರ್ವಚನ ನೀಡಿದರು. ಜೈನ ಸಮಾಜದ ಹಿರಿಯರಾದ ಶ್ರೇಯಾಂಶ ಕುಮಾರ್‌ರವರು ಮಕ್ಕಳಿಗೆ ಹಿತ ವಚನ ನುಡಿದರು. ಪ್ರೇರಣಾ ಜೈನ್ ರವರು ಪ್ರಾರ್ಥಿಸಿ, ಪೆನಕೊಂಡ ಶ್ರೀ ಪಚ್ಚೆ ಪ್ರತಿಷ್ಠಾನದ ಅಧ್ಯಕ್ಷರಾದ ಆರ್.ಎ. ಸುರೇಶ್‌ ಕುಮಾರ್ ರವರು ಸ್ವಾಗತಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಪಚ್ಚೆ ಪ್ರತಿಷ್ಠಾನದ ಉದ್ದೇಶ ಮತ್ತು ನಿಯಮಗಳಂತೆ ನಾವು ಪ್ರತಿವರ್ಷ ಈ ವಿದ್ಯಾರ್ಥಿ ವೇತನವನ್ನು ಪುರಸ್ಕರಿಸಿ ಕೊಡುತ್ತಲಿದ್ದೇವೆ. ಇದಕ್ಕೆ ಸಾಕ್ಷಿಭೂತರಾಗಿ ಆಗಮಿಸಿರುವ ಎಲ್ಲರಿಗೂ ಸ್ವಾಗತ ಬಯಸಿದರು. ಅಲ್ಲದೇ ಎಲ್ಲರೂ ನಮ್ಮ ತಂದೆಯವರ ಉದ್ದೇಶವನ್ನು ಈಡೇರಿಸಲು ಸಹಕರಿಸಬೇಕೆಂದು ಸಭೆಯಲ್ಲಿ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಆರ್.‌ ಎಸ್. ಜ್ವಾಲನಪ್ಪನವರು ವಂದನಾರ್ಪಣೆ ಸಲ್ಲಿಸಿದರು. ಟ್ರಸ್ಟಿಗಳಾದ ಆರ್. ಎ. ಪಾರ್ಶ್ವನಾಥ, ಆರ್. ಎ. ನಾಗಾರಾಜುರವರು ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿಕೊಟ್ಟರು. ಆರ್.ಎನ್. ಮಹಾವೀರ್ ಮತ್ತು ಆರ್.ಪಿ. ಮೋನಿಕಾರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆ

Article Image

ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆ

ಮಂಗಳೂರಿನ ಮಂಗಳ ಸ್ಟೇಡಿಯಮ್ ನಲ್ಲಿ ನಡೆದ ದ.ಕ.ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುವ ಕಾಶಿಪಟ್ಣ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 12 ಮಂದಿ ಶಿಕ್ಷಕಿಯರು ಆಯ್ಕೆಯಾಗಿದ್ದು ಬೆಳ್ತಂಗಡಿ ತಾಲೂಕಿನಿಂದ ಪದ್ಮಶ್ರೀ ಜೈನ್ ಆಯ್ಕೆಯಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ದ.ಕ.ಜಿಲ್ಲಾ ಮಹಿಳಾ ಥ್ರೋಬಾಲ್ ತಂಡವು ಪದ್ಮಶ್ರೀ ಅವರ ನೇತೃತ್ವದಲ್ಲಿ ಭಾಗವಹಿಸಲಿದೆ.

ನರಸಿಂಹರಾಜಪುರ: ಕೇವಲ ಜ್ಞಾನಕಲ್ಯಾಣ ಮಹೋತ್ಸವ

Article Image

ನರಸಿಂಹರಾಜಪುರ: ಕೇವಲ ಜ್ಞಾನಕಲ್ಯಾಣ ಮಹೋತ್ಸವ

ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಭಗವಾನ್ ಶ್ರೀ ೧೦೦೮ ಚಂದ್ರಪ್ರಭ ಸ್ವಾಮಿ ಸ್ವಾಮಿಯವರ ಕೇವಲ ಜ್ಞಾನಕಲ್ಯಾಣ ಮಹೋತ್ಸವವು ಪ. ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾ ಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ಇಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅಷ್ಟಮ ನಂದೀಶ್ವರದ ೫೨ ಜಿನಬಿಂಬಗಳಿಗೆ ೫೪ ಕಲಶಗಳಿಂದ ಮಹಾಭಿಷೇಕ

Article Image

ಅಷ್ಟಮ ನಂದೀಶ್ವರದ ೫೨ ಜಿನಬಿಂಬಗಳಿಗೆ ೫೪ ಕಲಶಗಳಿಂದ ಮಹಾಭಿಷೇಕ

ಮೂಡುಬಿದಿರೆ: ದರೆಗುಡ್ಡೆಯಲ್ಲಿರುವ ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಅಷ್ಟಮ ನಂದೀಶ್ವರದ ೫೨ ಜಿನಬಿಂಬಗಳಿಗೆ ೫೪ ಕಲಶಗಳಿಂದ ಮಹಾಭಿಷೇಕವು ಮೂಡುಬಿದಿರೆ ಶ್ರಿ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮಾ. 23ರಂದು ನೆರವೇರಲಿದೆ. ದಿನಾಂಕ 22-03-2025ನೇ ಶನಿವಾರ ಗಂಟೆ 9ಕ್ಕೆ ನೂತನ ನಂದೀಶ್ವರ 52 ಅರಿಹಂತರ ಜಿನಬಿಂಬಗಳು ಪೂಜಾ ಸ್ಥಳಕ್ಕೆ ಆಗಮನ, ಗಂಟೆ 10ರಿಂದ ನಂದೀಶ್ವರರ 52 ಅರಿಹಂತರಿಗೆ ಪ್ರತ್ಯೇಕ ಪಂಚಾಮೃತ ಅಭಿಷೇಕ ನೆರವೇರಲಿರುವುದು ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ

Article Image

ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವ

ಉಳ್ಳಾಲ ಭಗವಾನ್ ಆದಿನಾಥ ಸ್ವಾಮಿ, ಭಗವಾನ್ ಪಾರ್ಶ್ವನಾಥ ಸ್ವಾಮಿ, ಮಾತೆ ಪದ್ಮಾವತೀ ದೇವಿ ಬಸದಿಯ ಪಂಚಕಲ್ಯಾಣ ಮಹೋತ್ಸವದ ವಾರ್ಷಿಕ ವರ್ಧಂತಿ ಪೂಜಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದೊಂದಿಗೆ ದಿನಾಂಕ 23-03-2025ನೇ ಆದಿತ್ಯವಾರ ಜರಗಲಿದೆ. ಪೂಜಾ ಕಾರ್ಯಕ್ರಮ ಮೂಲಸ್ವಾಮಿಗೆ ೨೪ ಕಲಶ ಅಭಿಷೇಕ, ಮಾತೆ ಶ್ರೀ ಪದ್ಮಾವತಿ ದೇವಿಗೆ ಲಕ್ಷ ಹೂವಿನ ಮಹಾಪೂಜೆ, ಶ್ರೀ ಕ್ಷೇತ್ರಪಾಲನಿಗೆ ಕ್ಷೀರಾಭಿಷೇಕ, ಶ್ರೀ ನಾಗಬ್ರಹ್ಮ ಸಾನ್ನಿಧ್ಯ ಪೂಜಾ ಸೇವೆ.

ಪ್ರೋ. ಪದ್ಮಾಶೇಖರ್ ಅವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

Article Image

ಪ್ರೋ. ಪದ್ಮಾಶೇಖರ್ ಅವರಿಗೆ ಸಿದ್ಧಾಂತಕೀರ್ತಿ ಪ್ರಶಸ್ತಿ

ಹೊಂಬುಜ ಜೈನ ಮಠದಿಂದ ನೀಡುವ 2025ನೇ ಸಾಲಿನ ಸಿದ್ಧಾಂತಕೀರ್ತಿ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ, ಸಾಹಿತಿ, ಪ್ರೋ. ಪದ್ಮಾಶೇಖರ್ ಅವರಿಗೆ ವಾರ್ಷಿಕ ಮಹಾರಥೋತ್ಸವ ಮುನ್ನಾ ದಿನವಾದ ಮಾ.21 ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ತಿಳಿಸಿದ್ದಾರೆ. ಈ ಪ್ರಶಸ್ತಿಯು 51 ಸಾವಿರ ರೂ. ನಗದು ಒಳಗೊಂಡಿದೆ. ಕವಯತ್ರಿ, ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ, ಆಡಳಿತಗಾರ್ತಿ, ವಿಮರ್ಶಕಿ ಹಾಗೂ ಮಹಿಳಾ ಪರ ಹೋರಾಟಗಾರ್ತಿಯಾಗಿ ಪ್ರೊ. ಪದ್ಮಾ ಶೇಖರ್ ಬಹುಮುಖ ಸಾಧನೆ ಮಾಡಿದ್ದಾರೆ. ವಿಮರ್ಶೆ, ಸಂಶೋಧನೆ, ಕಾವ್ಯ, ಜೀವನಚರಿತ್ರೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಪಿಎಚ್.ಡಿ ಸಂಶೋಧಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ನೇತೃತ್ವದಲ್ಲಿ ಆರು ಸಾವಿರಕ್ಕೂ ಹೆಚ್ಚು ಪ್ರಾಚೀನ ತಾಳೆಪತ್ರಗಳನ್ನು ಡಿಜಟಲೀಕರಣ ಮಾಡಲಾಗಿದೆ. ಈಗಾಗಲೇ ಇವರಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಠಲಾನುಗ್ರಹ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಆದರ್ಶ ಮಹಿಳಾ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. ಪ್ರಸ್ತುತ ಇವರು ಮೈಸೂರಿನಲ್ಲಿ ನೆಲೆಸಿರುತ್ತಾರೆ.

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದ ವಾರ್ಷಿಕೋತ್ಸವ

Article Image

ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲ ಜಿನಮಂದಿರದ ವಾರ್ಷಿಕೋತ್ಸವ

ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದಲ್ಲಿ ಪ.ಪೂ. ಸ್ವಸ್ತಿಶ್ರೀ ಸೌರಭಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಸಂಸ್ಥಾನ ಮಠ ತಿಜಾರ ರಾಜಸ್ಥಾನ ಇವರ ಪಾವನ ಸಾನ್ನಿಧ್ಯ ಹಾಗೂ ಮಾರ್ಗದರ್ಶನದೊಂದಿಗೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ವಿಜೃಂಭಣೆಯಿಂದ ವಾರ್ಷಿಕೋತ್ಸವ ಹಾಗೂ ಶಾಂತಿ ಚಕ್ರ ಆರಾಧನೆ, ಪದ್ಮಾವತಿ ಅಮ್ಮನವರ ಆರಾಭನೆ, ಲಕ್ಷ ಹೂವಿನ ಪೂಜೆ, ೨೪ ಕಲಶಾಭಿಷೇಕ, ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಪ್ರತಿಷ್ಠಾ ಪುರೋಹಿತರಾದ ಜಯರಾಜ್ ಇಂದ್ರ ಮತ್ತು ಅರಹಂತ ಇಂದ್ರ ಹಾಗೂ ತಂಡದವರಿಂದ ಮಾ. 11ರಂದು ಜರುಗಿತು. ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಆಡಳಿತ ಮಂಡಳಿ ಸದಸ್ಯರಾದ ಎಚ್. ವಿಜಯ ಕುಮಾರ್, ಮನೋರಮಾ, ವಿಮಲ, ಅಜಿತ್ ಕುಮಾರ್, ಶೋಭಾ, ಚಂದನಾ, ಸುಮಂತ್ ಜೈನ್ ಮುಂತಾದವರನ್ನು ಪೂಜ್ಯ ಸ್ವಾಮೀಜಿಯವರು ಅಭಿನಂದಿಸಿ, ಆಶೀವರ್ದಿಸಿದರು. ಪೂಜ್ಯ ಸ್ವಾಮೀಜಿಗಳವರು ಮಾತನಾಡುತ್ತಾ, ಶ್ರೀ ಕ್ಷೇತ್ರ ಚಂದ್ರಪುರವು ಅತೀ ಪ್ರಾಚೀನವಾದ ಕ್ಷೇತ್ರವಾಗಿದ್ದು, ಈ ಕ್ಷೇತ್ರವು ಅತಿಶಯವಾಗಿರುತ್ತದೆ. ಈ ಕ್ಷೇತ್ರ ದರ್ಶನ ಮಾಡಿದವರ ಪಾಪವು ನಾಶವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಕ್ಷೇತ್ರದಲ್ಲಿ ನಿರಂತರವಾಗಿ ಆರಾಧನೆಗಳು, ಪೂಜೆಗಳು ನಡೆದು ಲೋಕ ಕಲ್ಯಾಣವಾಗಲಿ. ಈ ಕ್ಷೇತ್ರಕ್ಕೆ ಇನ್ನೊಮ್ಮೆ ಬೇಟಿ ನೀಡಿ ಈ ಕ್ಷೇತ್ರದಲ್ಲಿ ಎರಡು ದಿನ ಇದ್ದು ಧಾರ್ಮಿಕ ಕಾರ್ಯಕ್ರಮ ನಡೆಸುವುದಾಗಿ ಆಶೀರ್ವಚನ ನೀಡಿದರು. ಸಮಿತಿಯ ಸಂಚಾಲಕರಾದ ಡಾ.ಕೆ. ಜಯಕೀರ್ತಿ ಜೈನ್ ಕಾರ್ಯಕ್ರಮ ನಿರ್ವಹಿದರು. ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಮತ್ತು ರಾಣಿ ಕಾಳಲಾದೇವಿ ಮಹಿಳಾ ಮಂಡಲದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅನಿತಾ ಸುರೇಂದ್ರ ಕುಮಾರ್‌ರವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ 2025

Article Image

ಅನಿತಾ ಸುರೇಂದ್ರ ಕುಮಾರ್‌ರವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ 2025

ಸಮಾಜ ಸೇವಕಿ, ಮುನಿಗಳ ಚಾತುರ್ಮಾಸದ ರುವಾರಿ, ಪ್ರತಿಯೊಂದು ಮನೆ ಮನೆಯಲ್ಲಿ ಜಿನಭಜನೆಯ ಮುಖಾಂತರ ಮನೆ ಮಾತಾಗಿರುವ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್‌ರವರಿಗೆ ಬೆಂಗಳೂರಿನ ರಾಣಿ ಅಬ್ಬಕ್ಕ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ "ವೀರರಾಣಿ ಅಬ್ಬಕ್ಕ ಪ್ರಶಸ್ತಿ"ಯನ್ನು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಣಿ ಅಬ್ಬಕ್ಕ ಉತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.

ಹೂವಿನ ಹಡಗಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ

Article Image

ಹೂವಿನ ಹಡಗಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಪನ್ನ

ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ಪಟ್ಟಣದ ಪಾರ್ಶ್ವನಾಥ ಜಿನ ಮಂದಿರದ ಶ್ರೀ ಪಾರ್ಶ್ವನಾಥ ಸಭಾ ಮಂಟಪದಲ್ಲಿ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಹಭಾಗಿತ್ವದಲ್ಲಿ ಮಾ. 08ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದೀಪ ಪ್ರಜ್ವಲನಿಯ ಮೂಲಕ ಉದ್ಘಾಟಿಸಲಾಯಿತು. ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರಾದ ಎಂ.ಡಿ. ಪದ್ಮಾವತಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಹಿಳಾ ಸಾಧಕೀಯರಾದ ಮಹಾವೀರ ಅಲ್ಪಸಂಖ್ಯಾತರ ಪತಿನ ಸಹಕಾರ ಸಂಘದ ಪುಷ್ಪವತಿ ಪಾರ್ಶ್ವನಾಥ ರೇವಡಿ, ಶಿಲ್ಪ ಸಂತೋಷ ಸೂಗುರು, ನಾಗ ಮಂಜುಳಾ ಜೈನ್‌ರನ್ನು ಸನ್ಮಾನಿಸಲಾಯಿತು. ಚಂಪರಾಯಪ್ಪ ಹೊಳಲು ಸ್ವಾಗತಿಸಿದರು. ಅನುಷಾ ಮಯೂರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಮೇಘ ಭಾಗೇಶ್ ಜೈನರ್ ವಂದಿಸಿದರು.

ಡಾ. ಹೆಚ್.ಎ.ಪಾಶ್ವ೯ನಾಥ್ ಅವರಿಗೆ ಪ್ರೊ.ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ

Article Image

ಡಾ. ಹೆಚ್.ಎ.ಪಾಶ್ವ೯ನಾಥ್ ಅವರಿಗೆ ಪ್ರೊ.ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ

ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ (ಕೆ.ಆರ್.ನಗರ) ಸಂಸ್ಥೆಯು ತನ್ನ 40ನೇ ವಾಷಿ೯ಕೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವದ ಅಂಗವಾಗಿ ಫೆ.23ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿನ ಅತ್ಯಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಹಿರಿಯ ಸಾಹಿತಿಗಳು ಹಾಗೂ ರಂಗಭೂಮಿ ಕಲಾವಿದರು ಆಗಿರುವ ಡಾ. ಹೆಚ್.ಎ. ಪಾಶ್ವ೯ನಾಥ್ ಅವರಿಗೆ ಪ್ರೊ, ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಪ್ರದಾನಮಾಡಿ ಗೌರವಿಸಿದರು. ಇವರು‌ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯ ವರದಿ

Article Image

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯ ವರದಿ

ದಿನಾಂಕ 07-03-2025 ಶುಕ್ರವಾರದಂದು ರತ್ನತ್ರಯ ಜೈನ ಮಿಲನ್‌ನ ಮಾಸಿಕ ಸಭೆಯನ್ನು ಆನ್‌ಲೈನ್‌ಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರೇಮಕುಮಾರಿ, ಸುಖಾನಂದ, ರತ್ನತ್ರಯ ಜೈನ ಮಿಲನ ಅಧ್ಯಕ್ಷರಾದ ನವೀನ್ ಕುಮಾರ್ ಗುಬ್ಬಿ ಇವರು ಉಪಸ್ಥಿತರಿದ್ದರು. ಪಂಚ ನಮಸ್ಕಾರ ಪಠಣೆ ಮತ್ತು ಆರ್. ಎಸ್. ಭಾಮ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೀಣಾ ಅರಿಹಂತ್ ಅವರು ರತ್ನತ್ರಯ ಮಿಲನಿನ ಉದ್ದೇಶವನ್ನು ತಿಳಿಸಿದರು. ಪದ್ಮಸೂರಿ ಅವರು ಹಿಂದಿನ ಸಭೆಯ ವರದಿಯನ್ನು ಮಂಡಿಸಿದರು. ಪೂರ್ಣಿಮಾ ಜಯಂತರವರು ಮಾರ್ಚ್ ತಿಂಗಳ ಪರ್ವವಾಚನ ಮಾಡಿದರು. ಸುನೀತಾ ಸುಂದರರಾಜ್ ಅವರು ಕಳೆದ ತಿಂಗಳಲ್ಲಿ ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ ಸದಸ್ಯರಿಗೆ ಶುಭ ಕೋರಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದ ಸಿ. ಪಿ. ಉಷಾ ರಾಣಿಯವರು ವೀರ್ ಚಂದ್ ಗಾಂಧಿಯವರ ಬದುಕು ಮತ್ತು ಸಾಧನೆಗಳ ಕುರಿತು ಉಪನ್ಯಾಸ ಮಾಡಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನಂತ ಕುಮಾರಿ ಅವರು ನಡೆಸಿಕೊಟ್ಟರು. ಶೋಭಿತ ನವೀನಕುಮಾರ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವೇಣೂರು: ಮಹಿಳಾ ದಿನಾಚರಣೆ ಆಚರಣೆ

Article Image

ವೇಣೂರು: ಮಹಿಳಾ ದಿನಾಚರಣೆ ಆಚರಣೆ

ಬೆಳ್ತಂಗಡಿ ತಾಲೂಕು, ವೇಣೂರಿನ ಬ್ರಾಹ್ಮೀ ಜೈನ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ರಂದು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟಣೆಯನ್ನು ಹಿರಿಯರು ಆದ ವೇಣೂರಿನ ಸುನಂದಾದೇವಿ ಬಿ. ಪಿ. ಇಂದ್ರರವರು ನೆರವೇರಿಸಿದರು. ‌ ಮುಖ್ಯ ಭಾಷಣಕಾರರಾಗಿ ಬೆಳ್ತಂಗಡಿಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ಉಷಾ ನಾಯಕ್‌ರವರು ಆಗಮಿಸಿ, ಮಹಿಳೆಯರು ತನ್ನ ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿ ನಿರ್ವಹಿಸುವ ವಿವಿಧ ಪಾತ್ರಗಳ ಬಗ್ಗೆ ವಿವರಿಸಿದರು. ಮಹಿಳೆ ಎಂದೂ ಕುಗ್ಗಬಾರದು ಸವಾಲುಗಳನ್ನು ತಾಳ್ಮೆಯಿಂದ ಎದುರಿಸಬೇಕು ಎಂದು ಹೇಳಿದರು. ಬ್ರಾಹ್ಮೀ ಜೈನ ಮಹಿಳಾ ಸಂಘದ ಕೋಶಾಧಿಕಾರಿಯಾದ ವಾಣಿಶ್ರೀ ವೃಷಭರಾಜ್‌ರವರು ಮಹಿಳೆಯರ ಉದಾಹರಣೆ ಮೂಲಕ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ನಂತರ ಬ್ರಾಹ್ಮೀ ಜೈನ ಮಹಿಳಾ ಸಂಘದ ಹಿರಿಯ ಸದಸ್ಯರಾದ ಸುನಂದಾ ಭರತ್‌ರಾಜ್‌ ಮತ್ತು ಶಶಿಪ್ರಭಾ ಸುರೇಶ್‌ ಆರಿಗರವರನ್ನು ಮಹಿಳಾ ದಿನಾಚರಣೆ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ರಾಹ್ಮೀ ಜೈನ ಮಹಿಳಾ ಸಂಘದ ಅದ್ಯಕ್ಷರು ಮತ್ತು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ನಿರ್ದೇಶಕಿಯಾಗಿರುವ ಸರೋಜಾ ಗುಣಪಾಲ್‌‌ ಜೈನ್‌ರವರು ಮಹಿಳಾ ದಿನಾಚರಣೆ ಸಂಕ್ಷಿಪ್ತ ಮಾಹಿತಿ ನೀಡಿದರು. ಗೌರವ ಉಪಸ್ಥಿತಿಯನ್ನು ಬ್ರಾಹ್ಮೀ ಜೈನ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಸನ್ನ ಆರ್.‌ ಹೆಗ್ಡೆರವರು ವಹಿಸಿದ್ದರು. ದೀಪಶ್ರೀ ಕತ್ತೋಡಿ ಮತ್ತು ಪ್ರಿಯಾಲತಾ ಮೂಡುಕೋಡಿರವರು ಪ್ರಾರ್ಥಿಸಿ, ಕಾರ್ಯದರ್ಶಿ ಆಶಾಲತಾ ಜೈನ್‌ ಸ್ವಾಗತಿಸಿದರು. ಮಮತಾ ಪ್ರಸಾದ್‌ ಜೈನ್‌ರವರು ವಂದಿಸಿದರು. ಕಾರ್ಯಕ್ರಮವನ್ನು ಸಂಧ್ಯಾ ಸುಕುಮಾರ್‌ ಜೈನ್‌ರವರು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ

Article Image

ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಮತ್ತು ಶ್ರೀ ಜ್ವಾಲಮಾಲಿನಿ ಮಹಿಳಾ ಸಮಾಜ ಹೂವಿನಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತುಂಗಭದ್ರ ಪ್ರೌಢಶಾಲೆಯಲ್ಲಿ ಎಸ್.ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ, ಪರೀಕ್ಷೆ ಹೇಗೆ ಬರೆಯಬೇಕು, ಅದನ್ನು ಹೀಗೆ ಎದುರಿಸಬೇಕು ಎಂಬ ಬಗ್ಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು. ಪರೀಕ್ಷೆಯಲ್ಲಿ ಫೇಲಾದರೂ ವಿದ್ಯಾರ್ಥಿಗಳಲ್ಲಿರುವ ಸದಾವಕಾಶಗಳು, ಇನ್ನಿತರ ವಿಚಾರಗಳನ್ನು ಹಾಗೂ ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷ ಎಂ. ಡಿ. ಪದ್ಮಾವತಿ, ಉಪಾಧ್ಯಕ್ಷರಾದ ಜಯಶ್ರೀ ಮಂಜುನಾಥ್ ಜೈನ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸೀಮಾ ಪ್ರಶಾಂತ್ ಹೊಳಲು ಕಾರ್ಯದರ್ಶಿ ಚಂಪಾರಾಯಪ್ಪ ಹೊಳಲು, ಖಜಾಂಚಿ ಮೇಘ ಬಾಗೇಶ ಜೈನರ್, ಸದಸ್ಯರಾದ ಪದ್ಮ ಅಜಿತ್ ಹೊಳಲು, ವೈಶಾಲಿ ಅಮಿತ್ ಹೊಳಲು, ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪೆನ್ಸಿಲ್ ಗಳನ್ನು ವಿತರಿಸಲಾಯಿತು. ಜೆ ರಂಗನಾಥ- ತುಮಕೂರು

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ

Article Image

ಅಳದಂಗಡಿಯಲ್ಲೊಂದು ಅಪರೂಪದ ಕಾರ್ಯಕ್ರಮ

ಕರಂಬಾರು ಗುತ್ತು ಪ್ರಸನ್ನ ಹೆಗ್ಡೆ ಹಾಗೂ ನವೀನ್ ಲೋಬೋ ಮಾಲಕತ್ವದ SKY ELECTRICALS SERVICE ಹಾಗೂ PRIME ASSOCIATE ಅಳದಂಗಡಿ ಶಾಖೆ ಉದ್ಘಾಟನೆಯು ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದ ಬಳಿಯ ಪಾವನಿ ಕಾಂಪ್ಲೆಕ್ಸ್ ನಲ್ಲಿ ಫೆ.28ರಂದು ನಡೆಯಿತು. ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಆಸುಪಾಸಿನ ಲೈನ್ ಮೆನ್ ಗಳನ್ನು ಸನ್ಮಾನಿಸುವುದರ ಮೂಲಕ ಮಾಲಕ ಪ್ರಸನ್ನ ಹೆಗ್ಡೆ ಮಾದರಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಸರಿಸುಮಾರು 20 ಮಂದಿ ಮೆಸ್ಕಾಂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರಾದ ನಿರಂಜನ್ ಜೈನ್ ಕುದ್ಯಾಡಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಅಜಿಲರು, ಉದ್ಯಮಿಗಳಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಡಾ. ಶಶಿಧರ್ ಡೋಂಗ್ರೆ, ಯೋಗೀಶ್ ನಡಕ್ಕರ, ಅಶ್ವಿನ್ ಪಿರೇರಾ ಮೂಡುಬಿದಿರೆ, ರವಿಪ್ರಸಾದ್ ಶೆಟ್ಟಿ ಮೂಡುಬಿದಿರೆ, ಸಂದೀಪ್ ಕುಮಾರ್ ಮೆಸ್ಕಾಂ ಇಂಜಿನಿಯರ್, ಗ್ರಾಮಪಂಚಾಯತ್ ಅಧ್ಯಕ್ಷೆ ಸರಸ್ವತಿ, ಗ್ರಾಮ ಪಂಚಾಯತ್ ಅಧಿಕಾರಿ ಪೂರ್ಣಿಮಾ ಜೆ, ನಿತ್ಯಾನಂದ ಶೆಟ್ಟಿ ನೊಚ್ಚ ಭಾಗವಹಿಸಿ ಶುಭಕೋರಿದರು. ಆಮಂತ್ರಣ ವಿಜಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀರಂಗ ಮಯ್ಯ ಸಹಕರಿಸಿದರು.

ಕಾರ್ಕಳ: ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿಯ ನಿರ್ಮಾಣ ಕಲ್ಯಾಣ ಮಹೋತ್ಸವ

Article Image

ಕಾರ್ಕಳ: ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿಯ ನಿರ್ಮಾಣ ಕಲ್ಯಾಣ ಮಹೋತ್ಸವ

ಶ್ರೀ ಕರ್ನಾಟಕ ಜೈನ ಪುರೋಹಿತ ಸಂಘ ಕಾರ್ಕಳ, ಇದರ ವತಿಯಿಂದ ಭಗವಾನ್ ೧೦೦೮ ಶ್ರೀ ಆದಿನಾಥ ಸ್ವಾಮಿಯ ನಿರ್ಮಾಣ ಕಲ್ಯಾಣ ಮಹೋತ್ಸವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಆ ಸಂದರ್ಭದಲ್ಲಿ ಹಿರಿಯ ಪುರೋಹಿತರಿಗೆ ಗೌರವ ಸಮರ್ಪಣಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮಗಳು ನಡೆದವು.

ನರಸಿಂಹರಾಜಪುರ: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ನರಸಿಂಹರಾಜಪುರ: ವಾರ್ಷಿಕ ರಥಯಾತ್ರಾ ಮಹೋತ್ಸವ

ಶ್ರೀ ಕ್ಷೇತ್ರ ಸಿಂಹನಗದ್ದೆ ಅತಿಶಯ ಮಹಾಕ್ಷೇತ್ರದಲ್ಲಿ ಭಗವಾನ್ ಶ್ರೀ ೧೦೦೮ ಚಂದ್ರಪ್ರಭ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಜ್ವಾಲಾಮಾಲಿನಿ ಅಮ್ಮನವರ ವಾರ್ಷಿಕ ರಥಯಾತ್ರಾ ಮಹೋತ್ಸವವು ಪ.ಪೂ. ಸ್ವಸ್ತಿಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ, ಮಾರ್ಗದರ್ಶನ ಹಾಗೂ ಪಾವನ ಸಾನ್ನಿಧ್ಯದಲ್ಲಿ ಇದೇ ಬರುವ ದಿನಾಂಕ 21-03-2025ರಿಂದ ಮೊದಲ್ಗೊಂಡು ದಿನಾಂಕ 25-03-2025ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಜಿನ ಸಹಸ್ರನಾಮ ಮತ್ತು ಭಕ್ತಾಮರ ಪುಂಜ ಅರ್ಘ್ಯ

Article Image

ಜಿನ ಸಹಸ್ರನಾಮ ಮತ್ತು ಭಕ್ತಾಮರ ಪುಂಜ ಅರ್ಘ್ಯ

ಅಳಿಯೂರು: ಇಲ್ಲಿನ ಆದಿನಾಥ ಸ್ವಾಮಿ ಬಸದಿಯಲ್ಲಿ ನಾಳೆ (ಫೆ. 26) ಮಧ್ಯಾಹ್ನ 2.00ರಿಂದ‌ ಭಗವಾನ್‌ ಶ್ರೀ ಆದಿನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಪರ್ವ ದಿನದ ಪ್ರಯುಕ್ತ ಶ್ರೀ ಜ್ವಾಲಾಮಾಲಿನಿ ಮಹಿಳಾ ಸಂಘದ ವತಿಯಿಂದ ಜಿನ ಸಹಸ್ರನಾಮ ಮತ್ತು ಭಕ್ತಾಮರ ಪುಂಜ ಅರ್ಘ್ಯ ನಡೆಯಲಿದೆ. ಹಾಗೂ ಸಂಜೆ ಗಂಟೆ 6.30ಕ್ಕೆ ಆರತಿ ಮತ್ತು ಜಿನಭಜನೆ ಕಾ‍ರ್ಯಕ್ರಮ ಜರಗಲಿದೆ.

ಸವಣಾಲು : ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಮಹೋತ್ಸವ

Article Image

ಸವಣಾಲು : ಬಸದಿಯಲ್ಲಿ ಧಾಮ ಸಂಪ್ರೋಕ್ಷಣ ಮಹೋತ್ಸವ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯು ಊರ ಹಾಗೂ ಪರವೂರ ದಾನಿಗಳಿಂದ ಜೀರ್ಣೋದ್ಧಾರಗೊಂಡಿದ್ದು, ಧಾಮ ಸಂಪ್ರೋಕ್ಷಣ ಮಹೋತ್ಸವವು ಫೆ. 28 (ಶುಕ್ರವಾರ) ಹಾಗೂ ಮಾರ್ಚ್ 1 (ಶನಿವಾರ) ಮತ್ತು 2 ರಂದು (ಭಾನುವಾರ) ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಬಸದಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಕಿಶೋರ್ ಹೆಗ್ಡೆ, ಎರ್ಮೆದೋಡಿ ಗುತ್ತು ಮತ್ತು ಕಾರ್ಯದರ್ಶಿ ಸುರೇಶ್ ಕುಮಾರ್, ಉಜಿರೆ ತಿಳಿಸಿದ್ದಾರೆ. ಫೆ:28: ಶುಕ್ರವಾರ: ಬೆಳಿಗ್ಗೆ ಗಂಟೆ 8 ರಿಂದ ಇಂದ್ರಪ್ರತಿಷ್ಠೆ, ತೋರಣಮುಹೂರ್ತ, ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ. ಅಪರಾಹ್ನ ಗಂಟೆ 2.30ರಿಂದ ನಾಂದಿಮಂಗಲ ಪೂಜಾವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, ನಾಗಪ್ರತಿಷ್ಠೆ, ಭಗವಾನ್ ಆದಿನಾಥ ಸ್ವಾಮಿಗೆ 24 ಕಲಶ ಅಭಿಷೇಕ, ಮಹಾಪೂಜೆ ಮಾ. 1: ಶನಿವಾರ: ಬೆಳಿಗ್ಗೆ 8 ಗಂಟೆಯಿಂದ ನಿತ್ಯವಿಧಿ ಸಹಿತ ವಾಸ್ತು ಪೂಜಾವಿಧಾನ, ನವಗ್ರಹ ಶಾಂತಿ, ಅಪರಾಹ್ನ ಗಂಟೆ 2 ರಿಂದ ಪದ್ಮಾವತಿ ದೇವಿಗೆ ರಜತಕವಚ ಸಮರ್ಪಣೆ, ಆರಾಧನೆ, ಲಕ್ಷ ಹೂವಿನ ಪೂಜೆ, ಭಗವಾನ್ ಆದಿನಾಥ ಸ್ವಾಮಿಗೆ ೫೪ ಕಲಶ ಅಭಿಷೇಕ, ಮಹಾಪೂಜೆ ಮಾ. 2: ಭಾನುವಾರ: ಬೆಳಿಗ್ಗೆ ಗಂಟೆ 8 ರಿಂದ ಧಾಮ ಸಂಪ್ರೋಕ್ಷಣೆ, ಭಗವಾನ್ ಆದಿನಾಥ ಸ್ವಾಮಿ ಪ್ರತಿಷ್ಠೆ, ಶಿಖರಾರೋಹಣ. ಅಪರಾಹ್ನ ಗಂಟೆ 3.30 ರಿಂದ ಭಕ್ತಾಮರ ಆರಾಧನೆ. ಭಗವಾನ್ ಆದಿನಾಥ ಸ್ವಾಮಿಗೆ 108 ಕಲಶ ಅಭಿಷೇಕ, ಮಹಾಪೂಜೆ, ತೋರಣ ವಿಸರ್ಜನೆ. ಸೇವಾಕರ್ತೃಗಳು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು. ಪ್ರತಿಷ್ಠಾಚಾರ್ಯ ಬೆಳ್ತಂಗಡಿ ಜಯರಾಜ ಇಂದ್ರರು, ಪುಷ್ಪರಾಜ ಇಂದ್ರರು ಮತ್ತು ಸ್ಥಳ ಪುರೋಹಿತ ವೃಷಭರಾಜ ಇಂದ್ರರು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವರು. ಧಾರ್ಮಿಕ ಸಭೆ: ಮಾ. 2 ರಂದು ಭಾನುವಾರ ಸಂಜೆ 5 ಗಂಟೆಯಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸುವರು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕಿಶೋರ್ ಹೆಗ್ಡೆ: ಮೊ: 9148659620

ಬಂಟ್ವಾಳ ಜೈನ್ ಮಿಲನ್ ಮತ್ತು ಶ್ರೀ ಅನಂತಪಾರ್ಶ್ವ ಜೈನ್ ಮಿಲನ್, ಕುಪ್ಪೆಪದವು ಇವುಗಳ ಜಂಟಿ ಮಾಸಿಕ ಸಭೆ

Article Image

ಬಂಟ್ವಾಳ ಜೈನ್ ಮಿಲನ್ ಮತ್ತು ಶ್ರೀ ಅನಂತಪಾರ್ಶ್ವ ಜೈನ್ ಮಿಲನ್, ಕುಪ್ಪೆಪದವು ಇವುಗಳ ಜಂಟಿ ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ವಲಯ 8, ಮಂಗಳೂರು ವಿಭಾಗ ಇದರ ಆಶ್ರಯದಲ್ಲಿ ಬಂಟ್ವಾಳ ಜೈನ್ ಮಿಲನ್ ಮತ್ತು ಶ್ರೀ ಅನಂತಪಾರ್ಶ್ವ ಜೈನ್ ಮಿಲನ್, ಕುಪ್ಪೆಪದವು ಇವುಗಳ ಜಂಟಿ ಮಾಸಿಕ ಸಭೆ ಹಾಗೂ ಜಿನ ಭಜನ ವಿಜೇತ ತಂಡಗಳಿಗೆ ಪುರಸ್ಕಾರ ಸಮಾರಂಭ ಮತ್ತು ಮಾಹಿತಿ ಕಾರ್ಯಕ್ರಮವು ದಿನಾಂಕ 23- 2 -2025 ಆದಿತ್ಯವಾರ ಅಪರಾಹ್ನ 3.30ಕ್ಕೆ ಸರಿಯಾಗಿ ಕುಪ್ಪೆಪದವು ಅನಂತರಾಜ್ ಸಭಾಭವನದಲ್ಲಿ ನಡೆಯಿತು. ಪ್ರಾರಂಭದಲ್ಲಿ ನೇರೆಂಕಿ ಪಾರ್ಶ್ವನಾಥ್ ಮೂಡಬಿದ್ರೆ ಇವರು ಜೈನ ಬಸದಿಗಳ ದಾಖಲೀಕರಣದ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿವರಣೆಯೊಂದಿಗೆ ನಡೆಸಿಕೊಟ್ಟರು. ಬಳಿಕ ನಡೆದ ಮಾಸಿಕ ಸಭೆಯಲ್ಲಿ ನೇರಂಕಿ ಪಾರ್ಶ್ವನಾಥ್ ಇವರನ್ನು ಸನ್ಮಾನಿಸಲಾಯಿತು . ವಿಜೇತ ಜಿನಭಜನಾ ತಂಡಗಳಾದ ಅನಂತ ಶ್ರೀ ಜನಭಜನಾ ತಂಡ ಬಜಗೋಳಿ, ಬ್ರಾಹ್ಮಿ ಜಿನಭಜನಾ ತಂಡ ಮೂಡಬಿದ್ರೆ , ಸಮ್ಯಕ್ತ ಜಿನಭಜನಾ ತಂಡ, ಬಂಟ್ವಾಳ, ಅನಂತಪಾರ್ಶ್ವ ಜಿನಭಜನಾ ತಂಡ ಕುಪ್ಪೆ ಪದವು ಇದರ ಸದಸ್ಯರನ್ನು ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ. ಉಜ್ವಲ ಕಂಬಳಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಭಾಗ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ವಹಿಸಿದ್ದರು. ಮಧ್ವರಾಜ್ ಜೈನ್ ಅಧ್ಯಕ್ಷರು ಬಂಟ್ವಾಳ ಜೈನ್ ಮಿಲನ್, ಸ್ವರ್ಣ ಲತಾ ಅಜಿತ್ ಕುಮಾರ್ ಅಧ್ಯಕ್ಷರು ಅನಂತಪಾರ್ಶ್ವ ಜೈನ್ ಮಿಲನ್ ಕುಪ್ಪೆ ಪದವು ಉಪಸ್ಥಿತರಿದ್ದರು. ಜೈನ್ ಮಿಲನ್ ವಲಯ 8ರ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಜಿನಭಜನಾ ತಂಡಗಳಿಗೆ ಪುರಸ್ಕಾರ ನೀಡಿ ಅಭಿನಂದಿಸಿದರು. ವಲಯ ನಿರ್ದೇಶಕರಾದ ಸೋಮಶೇಖರ್ ಶೆಟ್ಟಿ, ಪ್ರಮೋದ್ ಕುಮಾರ್, ಶ್ರೀವರ್ಮ ಅಜ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಡಾ. ಸುದೀಪ್ ಕುಮಾರ್ ಮಾಜಿ ಅಧ್ಯಕ್ಷರು, ಜೈನ್ ಮಿಲನ್ ಬಂಟ್ವಾಳ, ಭೋಜರಾಜ ಜೈನ್ ಸ್ಥಾಪಕ ಅಧ್ಯಕ್ಷರು ಅನಂತಪಾರ್ಶ್ವ ಜೈನ್ ಮಿಲನ್ ಕುಪ್ಪೆಪದವು ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಿಲನ್ ಕಾರ್ಯದರ್ಶಿಗಳಾದ ಭರತ್ ಕುಮಾರ್, ಹರ್ಷ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನ್ವಿತಾ ಜೈನ್ ಸ್ವಾಗತಿಸಿ, ಸುಪ್ರಿಯಾ ಭರತ್ ಧನ್ಯವಾದ ನೀಡಿದರು. ಕಾಂಚನಶ್ರೀ, ನಿಶ್ಚಿತಾ ಜೈನ್ ಸನ್ಮಾನ ಪತ್ರವನ್ನು ಓದಿದರು. ಮಂಗಳೂರು ವಿಭಾಗ ಕಾರ್ಯದರ್ಶಿ, ವೀರ್ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು. ಜೈನ್ ಮಿಲನ್ ಕುಪ್ಪೆಪದವು ಆತಿಥ್ಯವನ್ನು ವಹಿಸಿದ್ದರು.

ಹಂ.ಪ. ನಾಗರಾಜಯ್ಯ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

Article Image

ಹಂ.ಪ. ನಾಗರಾಜಯ್ಯ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ

ಉಡುಪಿ, ಫೆ. 24: ಮಾಹೆ ವಿ.ವಿ.ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡುವ ಟಿ. ವಿಮಲಾ ಪೈ ಪ್ರಾಯೋಜಿತ 2024ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಹಿರಿಯ ಸಾಹಿತಿ ಪ್ರೊ| ಹಂ.ಪ. ನಾಗರಾಜಯ್ಯ(ಹಂಪನಾ) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 1 ಲ. ರೂ., ಪಾರಿತೋಷಕ, ಪ್ರಶಸ್ತಿಪತ್ರ ಒಳಗೊಂಡಿದೆ. ಮಾ.23ರಂದು ಗೋವಿಂದ ಪೈ ಸಂಶೋಧನ ಸಂಪುಟದ ದ್ವಿತೀಯ ಭಾಗದ ಬಿಡುಗಡೆ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿ ಸದಸ್ಯರಾದ ಡಾ| ತಾಳ್ತಜೆ ವಸಂತ ಕುಮಾರ್, ಡಾ| ಕೆ. ಚಿನ್ನಪ್ಪ ಗೌಡ, ಡಾ| ಪ್ರಭಾಕರ ಜೋಷಿ, ಡಾ| ಕಿಶೋರಿ ನಾಯಕ್‌, ಡಾ| ಎಸ್. ಪಾಡೀಗಾರ್ ಸಹಕರಿಸಿದ್ದಾರೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಪದವಿ ಪ್ರದಾನ

Article Image

ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಪದವಿ ಪ್ರದಾನ

ಜಮಖಂಡಿಯ ೧೦೦೮ ಶ್ರೀ ಪಾರ್ಶ್ವನಾಥ ದಿಗಂಬರ ಜೈನ್ ಮಂದಿರದ ಅರ್ಚಕರಾದ ಪಂಡಿತ್ ಬಾಹುಬಲಿ ಉಪಾಧ್ಯರವರಿಗೆ ಜಿಂಜರ್ ವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಪಂಚಕಲ್ಯಾಣ ಪ್ರತಿಷ್ಠ ಮಹಾಮಹೋತ್ಸವದಲ್ಲಿ “ಸಾಧನ ರತ್ನ” ಪ್ರಶಸ್ತಿಯನ್ನು ಹಾಗೂ ಜೈನ್ ಇಂಡಿಯನ್ ಟಿ.ವಿ ವತಿಯಿಂದ “ಕರ್ನಾಟಕ ಪುರೋಹಿತ ರತ್ನ” ಎಂಬ ಪದವಿಯನ್ನು ನೀಡಿ ಗೌರವಿಸಲಾಗಿದೆ. ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ: ಪ್ರತಿಷ್ಠ ರತ್ನ, ಪ್ರತಿಷ್ಠ ಶಿರೋಮಣಿ, ಪ್ರತಿಷ್ಠ ಬಾಸ್ಕರ, ಪ್ರತಿಷ್ಠ ಪ್ರವೀಣ, ಪಂಡಿತರತ್ನ, ವಾಣಿಭೂಷಣ, ಪ್ರತಿಷ್ಠಾಚಾರ್ಯ.

ಮೈಸೂರು: ವಾರ್ಷಿಕ ಪೂಜಾ ಮಹೋತ್ಸವ

Article Image

ಮೈಸೂರು: ವಾರ್ಷಿಕ ಪೂಜಾ ಮಹೋತ್ಸವ

ಮೈಸೂರು: ಇಲ್ಲಿಯ ಶ್ರೀ ಆದಿನಾಥ ತೀರ್ಥಂಕರ ಸೇವಾ ಸಮಿತಿಯವರ ಆಶ್ರಯದಲ್ಲಿ ಶ್ರೀ ೧೦೦೮ ಆದಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ಜಿನರಾತ್ರಿ ವಾರ್ಷಿಕ ಪೂಜಾ ಮಹೋತ್ಸವ ಆಚರಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಆದಿನಾಥ ಸಭಾಂಗಣ ಶ್ರೀ ಕ್ಷೇತ್ರ ಶ್ರೀರಂಗ ಪಟ್ಟಣದಲ್ಲಿ ದಿನಾಂಕ 27-02-2025ನೇ ಗುರುವಾರದಂದು ನಡೆಯಲಿದೆ. ಪಾವನ ಸಾನ್ನಿಧ್ಯ, ಆಶೀರ್ವಚನ: ಪ.ಪೂ. ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಶ್ರೀ ಕ್ಷೇತ್ರ ಕನಕಗಿರಿ ಅಧ್ಯಕ್ಷತೆ: ಬಿ.ಎಸ್. ಸಂತೋಷ್ ಕುಮಾರ, ಅಧ್ಯಕ್ಷರು, ಶ್ರೀ ಆದಿನಾಥ ಸೇವಾ ಟ್ರಸ್ಟ್, ಮೈಸೂರು ಉಪನ್ಯಾಸ: ಪಂಪ ಮಹಾಕವಿ ವಿರಚಿತ ಆದಿ ಪುರಾಣ ಉಪನ್ಯಾಸಕರು: ಡಾ. ಹೆಚ್.ಪಿ. ಮೋಹನ ಕುಮಾರ ಶಾಸ್ತ್ರಿ, ಕುಲಸಚಿವರು, ಆಚಾರ್ಯ ಗುರುಕುಲ, ಮೈಸೂರು ದಿವ್ಯ ಉಪಸ್ಥಿತಿ: ಪ್ರತಿಷ್ಟಾಚಾರ್ಯ ಎಸ್. ಎಂ. ಸನ್ಮತಿಕುಮಾರ ಶಾಸ್ತ್ರಿ, ಶ್ರೀರಂಗ ಪಟ್ಟಣ ಕ್ಷೇತ್ರ ಸಂರಕ್ಷಕರು ಮತ್ತು ಶ್ರಾವಿಕಭೂಷಣೆ ಪದ್ಮಲತಾ ಸನ್ಮತಿಕುಮಾರ, ಶ್ರೀ ಕ್ಷೇತ್ರ ಶ್ರೀ ರಂಗ ಪಟ್ಟಣ, ಮಂಡ್ಯ ಜಿಲ್ಲೆ.

ಕಾರ್ಕಳ: ಭಾರತೀಯ ಜೈನ್‌ ಮಿಲನಿನ ಮಾಸಿಕ ಸಭೆ

Article Image

ಕಾರ್ಕಳ: ಭಾರತೀಯ ಜೈನ್‌ ಮಿಲನಿನ ಮಾಸಿಕ ಸಭೆ

ಕಾರ್ಕಳ: ಇಲ್ಲಿಯ ಭಾರತೀಯ ಜೈನ್‌ ಮಿಲನಿನ ಫೆಬ್ರವರಿ ತಿಂಗಳ ಮಾಸಿಕ ಸಭೆಯು ನಾಳೆ (ಫೆ.23) ಹಿರಿಯಂಗಡಿಯಲ್ಲಿರುವ ಶ್ರೀ ಮಹಾವೀರ ಭವನದಲ್ಲಿ ನಡೆಯಲಿದೆ. ಚಾವಡಿ ಚರ್ಚೆ: ವಿಷಯ: ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಆಧುನಿಕತೆ ನಡೆಸಿಕೊಡುವವರು: ಮುನಿರಾಜ ರೆಂಜಾಳ ಭಾಗವಹಿಸುವವರು: ಮಹಾವೀರ ಜೈನ್‌ ಇಚಲಂಪಾಡಿ, ನಿರಂಜನ್‌ ಅಳಿಯೂರು, ಅಜಿತ್‌ ಕುಮಾರ್‌ ಜೈನ್‌ ಕೊಕ್ರಾಡಿ, ಶ್ವೇತಾ ಜೈನ್‌ ಮೂಡುಬಿದಿರೆ.

ವಿಟ್ಲ: ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

Article Image

ವಿಟ್ಲ: ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ

ಶ್ರೀ ಕ್ಷೇತ್ರ ವಿಟ್ಲದಲ್ಲಿ ಫೆಬ್ರವರಿ 13 ರಿಂದ ಫೆ. 17ರವರೆಗೆ ನಡೆಯುತ್ತಿರುವ ಭ|| 1008 ಚಂದ್ರನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಮಹೋತ್ಸವದಲ್ಲಿ ದಿನಾಂಕ 16-02-2025ರ ಭಾನುವಾರದಂದು ಸಂಜೆ 7.00 ಗಂಟೆಗೆ ಮಂಗಳೂರು ಜೈನ ಸಮಾಜ ಅರ್ಪಿಸುವ “ ಶ್ರೀ ಚಂದ್ರನಾಥ ತೀರ್ಥಂಕರರ ಪಂಚಕಲ್ಯಾಣ ವೈಭವ” ಜರುಗಲಿದೆ. ಸಾಹಿತ್ಯ ಮತ್ತು ನಿರ್ದೇಶನ: ಸುಕುಮಾರ್ ಬಲ್ಲಾಳ್ ಮಂಗಳೂರು ನೃತ್ಯ ನಿರ್ದೇಶನ: ವಿಧುಷಿ ಶಾಶ್ವತಿ ಸಚಿನ್ ಮಂಗಳೂರು ರಂಗ ನಿರ್ವಹಣೆ ಹಾಗೂ ಸಂಯೋಜನೆ: ಸಚಿನ್ ಜೈನ್ ಮಂಗಳೂರು ಸಂಗೀತ: ಜಿನಗಾನ ವಿಶಾರದೆ ಜಯಶ್ರೀ ಡಿ. ಜೈನ್ ಹೊರನಾಡು ವಿಶೇಷ ಆಕರ್ಷಣೆ: ನವಿಲು ಬಸದಿಯಲ್ಲಿ ನವಿಲು ನೃತ್ಯ ಪುಟ್ಟ ಮಕ್ಕಳಿಂದ ಸಮವಸರಣ ನಿರ್ಮಾಣ ಒಂದೇ ವೇದಿಕೆಯಲ್ಲಿ ನೂರು ಶ್ರಾವಕ-ಶ್ರಾವಕಿಯರ ಅಭೂತಪೂರ್ವ ಪ್ರದರ್ಶನ.

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಗೆ ಪದವಿ

Article Image

ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಗೆ ಪದವಿ

ಶ್ರೀ ಧ ಮಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಭಾರತ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯೂಷ್ ಸಚಿವರಾದ ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್ ಇವರಿಂದ ಧರ್ಮಸ್ಥಳದ ಡಾ. ಚಿರನ್ವಿ ಜೈನ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನದಲ್ಲಿ ಪದವಿಯನ್ನು ಪಡೆದರು. ಇವರು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ ಜೈನ್ ಹಾಗೂ ರತ್ನಶ್ರೀ ದಂಪತಿ ಪುತ್ರ. ಇವರು ಇದೇ ಕಾಲೇಜಿನಲ್ಲಿ ಎಮ್. ಡಿಗೆ (ಸ್ನಾತಕೋತ್ತರ ಪದವಿ) ಪ್ರವೇಶಾತಿಯನ್ನು ಪಡೆದಿದ್ದಾರೆ.

ಅಬ್ಯಾಕಸ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಷಡ್ಜ

Article Image

ಅಬ್ಯಾಕಸ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಷಡ್ಜ

ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಲ್ಲಿಯೇ ಅತ್ಯಂತ ಅದ್ಬುತ ಪ್ರತಿಭಾವಂತ ಪುಟ್ಟ ಬಾಲಕ ಷಡ್ಜ ಹುಬ್ಬಳ್ಳಿಯಲ್ಲಿ ಎಜು ಸ್ಮಾರ್ಟ್ ಕೇರ್ "ಅಬ್ಯಾಕಸ್" ( ಅಂಕಗಣಿತದ ಕೌಶಲ್ಯ) ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಬೆಂಗಳೂರಿನಲ್ಲಿಯೂ ಪ್ರಥಮ ಬಹುಮಾನ ತನ್ನದಾಗಿರಿಸಿಕೊಂಡಿದ್ದಾನೆ. ಇದೀಗ ಮುಂಬೈಯಲ್ಲಿ ಕಳೆದ ವಾರ ನಡೆದ 17ನೇ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ, ಅಬ್ಯಾಕಸ್ ಮತ್ತು ಗ್ರೇಡಿಂಗ್ ಪರೀಕ್ಷೆಯಲ್ಲಿ "ಅಚೀವರ್ " ಪ್ರಶಸ್ತಿ ಪಡೆದ ಈ ಬಾಲಕ ಹುಬ್ಬಳ್ಳಿಯ ಕೇಂದ್ರೀಯ ವಿದ್ಯಾಲಯದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವನು ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ನ ಸದಸ್ಯರು ಧರ್ಮನುರಾಗಿಗಳೂ ಆದ ಶಿಲ್ಪಾ ವಿಜಯಕುಮಾರ ಕಾಶಿನ ಅವರ ಮೊಮ್ಮಗ, ಉಪನ್ಯಾಸಕಿ ಭಾಗ್ಯಶ್ರೀ ಮತ್ತು ಭಾರತೀಯ ಅಂಚೆ ಇಲಾಖೆಯ ಉದ್ಯೋಗಿ ಜೀವಂಧರ ಕಾಶಿನರವರ ಪುತ್ರ, ಪ್ರಭಾ ನಾಯಕ್ ಇವರು ಷಡ್ಜನಿಗೆ ಮಾರ್ಗದರ್ಶಕರಾಗಿ ಪ್ರೇರಣೆ ಪ್ರೋತ್ಸಾಹ ನೀಡಿದ್ದಾರೆ. ಶಾಂತರಾಜ ಮಲ್ಲಸಮುದ್ರ

ಇಂಡಿಯನ್ ವುಮೆನ್ ನೆಟ್‌ವಕ್‌೯ನ 2025-26ನೇ ಸಾಲಿನ ಅಧ್ಯಕ್ಷೆಯಾಗಿ ಪದ್ಮಿನಿ ಎಸ್. ನವಲಗೂಂದ ಆಯ್ಕೆ

Article Image

ಇಂಡಿಯನ್ ವುಮೆನ್ ನೆಟ್‌ವಕ್‌೯ನ 2025-26ನೇ ಸಾಲಿನ ಅಧ್ಯಕ್ಷೆಯಾಗಿ ಪದ್ಮಿನಿ ಎಸ್. ನವಲಗೂಂದ ಆಯ್ಕೆ

ಇಂಡಿಯನ್ ವುಮೆನ್ ನೆಟ್‌ವಕ್‌೯ (ಸಿಐಐ-ಐಡಬ್ಲ್ಯುಎನ್) ಕರ್ನಾಟಕ, 2025-26ನೇ ಸಾಲಿನ ಅಧ್ಯಕ್ಷೆಯಾಗಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿನಿ ಪದ್ಮಿನಿ ಎಸ್. ನವಲಗೂಂದ ಅವರ ನೇಮಕವನ್ನು ಫೆಬ್ರವರಿ 5, 2025 ರಂದು ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಘೋಷಿಸಿದೆ. ಸ್ವೀಕಾರ ಭಾಷಣದಲ್ಲಿ, ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿ, ಮಹಿಳಾ ವೃತ್ತಿಪರರಿಗೆ ಬೆಂಬಲಾತ್ಮಕ ಪರಿಸರವನ್ನು ನಿರ್ಮಿಸಲು ತಮ್ಮ ಬದ್ಧತೆಯನ್ನು ವಿವರಿಸುತ್ತಾ, ಮುಂದಿನ ವರ್ಷದ ದೃಷ್ಟಿಕೋನವನ್ನು ಹಂಚಿಕೊಂಡರು. ಇವರು, ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪೂರ್ವ ವಿದ್ಯಾರ್ಥಿನಿ, ಪ್ರಸ್ತುತ ಬೋಶ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ ಲಿಮಿಟೆಡ್‌ನಲ್ಲಿ ಉತ್ಪನ್ನ ಅನುಕೂಲತೆ ಅಧಿಕಾರಿ. ಡಿಟ್ರಾಯಿಟ್ನಲ್ಲಿ 2024ನೇ ಸಾಲಿನಲ್ಲಿ ಆಟೋಮೋಟಿವ್ ವುಮೆನ್ ಆಫ್ ದ ಇಯರ್ ಪ್ರಶಸ್ತಿಯನ್ನು ಪಡೆದಿರುವ ಪ್ರಥಮ ಭಾರತೀಯ ಮಹಿಳೆ. ಅವರು ಮಹಿಳಾ ನೆಟ್‌ವಕ್‌೯ಗೆ ಸಹಾಯ ಮಾಡುವ ಹಲವಾರು ಉಪಕ್ರಮಗಳನ್ನು ಚಲಾಯಿಸುವಲ್ಲಿ ವಿಶಾಲ ಅನುಭವವನ್ನು ಹೊಂದಿರುವ ನಾಯಕಿಯಾಗಿರುತ್ತಾರೆ.

ಬಜಿರೆ: ಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ

Article Image

ಬಜಿರೆ: ಬಸದಿಯಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ಉಜಿರೆ: ವೇಣೂರು ಬಳಿ ಇರುವ ಬಜಿರೆ ಗ್ರಾಮದ ಹಲ್ಲಂದೋಡಿ ಬಸದಿ ಭಗವಾನ್ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ಇದೇ 26 ರಂದು ಭಾನುವಾರ ವಾರ್ಷಿಕ ಪೂಜಾಮಹೋತ್ಸವ ನಡೆಯಲಿದೆ ಎಂದು ಬಸದಿಯ ಬಿ. ಶಶಿಕುಮಾರ್ ಇಂದ್ರ ತಿಳಿಸಿದ್ದಾರೆ. ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಏಳು ಗಂಟೆಯಿಂದ ವಿಮಾನಶುದ್ಧಿ, ಶಾಂತಿ ಹೋಮದ ಬಳಿಕ 108 ಕಲಶ ಅಭಿಶೇಕ ನಡೆಯಲಿದೆ. ಅಪರಾಹ್ನ ಎರಡು ಗಂಟೆಯಿಂದ ಕಲಿಕುಂಡಯಂತ್ರಾರಾಧನೆ, ಅಷ್ಟಾವಧಾನ ಪೂಜೆ ನಡೆಯಲಿದೆ. ಸಂಜೆ ಗಂಟೆ 5.30 ರಿಂದ ಪದ್ಮಾವತಿ ಅಮ್ಮನವರಿಗೆ ಲಕ್ಷಹೂವಿನ ಪೂಜೆ ನಡೆಯಲಿದೆ. ಬಳಿಕ ಮೂಡಬಿದ್ರೆಯ ಪೂಜ್ಯ ಚಾರುಕೀರ್ತಿ ಭಟ್ಟಾರಕಸ್ವಾಮೀಜಿ ಮಂಗಲಪ್ರವಚನ ನೀಡುವರು.

First Previous

Showing 5 of 8 pages

Next Last