Article Image

ಮಂಗಳೂರು: ಧವಳ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ವಾರ್ಷಿಕ ಮಹಾಸಭೆ

Article Image

ಮಂಗಳೂರು: ಧವಳ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ವಾರ್ಷಿಕ ಮಹಾಸಭೆ

ಮಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ಇತ್ತೀಚೆಗೆ ಆರಂಭವಾದ ಧವಳ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸೆ. 1 ರಂದು ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಸಿದ್ದಾರ್ಥ ಸಭಾಭವನ (ಜೈನ್ ಬೋರ್ಡಿಂಗ್) ದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುದರ್ಶನ್ ಜೈನ್ ಇವರು ಈ ಸಂಸ್ಥೆಯ 2023-24 ನೇ ಸಾಲಿನಲ್ಲಿ 65.40 ಕೋಟಿಯಷ್ಟು ವ್ಯವಹಾರ ನಡೆಸಿ, ರೂ. 9.50 ಕೋಟಿ ಠೇವಣಿಯೊಂದಿಗೆ ಸಾಲ ಸೌಲಭ್ಯ ಒದಗಿಸಿ, ರೂ. 2.45 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಯಪಡಿಸಿದರು. ನಿರ್ದೇಶಕಾರದ ಶಶಿಕಲಾ ಕೆ.ಹೆಗ್ಡೆ ಕಾರ್ಕಳ ಇವರು ಸಭೆ ಕಾರ್ಯ ಕಲಾಪಗಳ ಕಾರ್ಯ ಸೂಚಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ ಇವರು 2023-24 ನೇ ಸಾಲಿನ ಆರ್ಥಿಕ ವ್ಯವಹಾರಗಳ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಕಳೆದ ಸಾಲಿನ ವರದಿಯನ್ನು ಸುಧೀರ್ ಕುಮಾರ್ ವೈ, ಇವರು ಮಂಡಿಸಿದರೆ, ನಿರ್ದೇಶಕರಾದ ಪುಷ್ಪರಾಜ್ ಜೈನ್ ಇವರು ಈ ಸಂಸ್ಥೆ ಸ್ಥಾಪಿಸಿದ ಉದ್ದೇಶವನ್ನು ಸಭೆಗೆ ತಿಳಿಯಪಡಿಸಿದರು, ಹಾಗೂ ಇನ್ನೋರ್ವ ನಿರ್ದೇಶಕರಾದ ರಾಜೇಶ್ ಎಮ್. ರವರು ಮಾತನಾಡುತ್ತಾ ಸಂಸ್ಥೆಯ ಮಹಾಸಭೆಯ ಅಧಿಕಾರ-ಸದಸ್ಯರ ಕರ್ತವ್ಯಗಳ ಬಗ್ಗೆ ಸದಸ್ಯರಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಹೊಸ್ಮಾರು ಶಿಶುಪಾಲ್ ಜೈನ್ ರವರು ಸ್ವಾಗತಿಸಿದರು. ಸಂಸ್ಥೆಯ ಗೌರವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಣೆಯೊಂದಿಗೆ ಲೆಕ್ಕ ಪತ್ರಗಳನ್ನು ಮಂಡಿಸಿದರು. ಹಿರಿಯ ಪ್ರಭಂದಕ ನಿವೇಶ್ ಕುಮಾರ್ ಮುಂದಿನ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆದರು. ನಿರ್ದೇಶಕರಾದ ಸಚಿನ್ ಕುಮಾರ್ ವಂದಿಸಿದರು.

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ

Article Image

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ

ಮೂಡುಬಿದಿರೆ: ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಟ್ಟಾಭಿಷೇಕ 25ನೇ ವರ್ದಂತಿ ಉತ್ಸವದ ಅಂಗವಾಗಿ ಮಹಾವೀರ ಭವನದಲ್ಲಿ ಆ.29ರಂದು ಗುರುವಂದನೆ ಕಾರ್ಯಕ್ರಮ ನಡೆಯಿತು. ವಿದ್ವಾಂಸ ಡಾ. ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಭಟ್ಟಾರಕ ಪರಂಪರೆ ಈ ಭಾಗದಲ್ಲಿ ವಿಶೇಷವಾದದ್ದು. ಭಾರತೀಯ ಧಾರ್ಮಿಕ ಪರಂಪರೆಯ ಸಂತ ಎಂದ ಅವರು ತಮ್ಮ ವರ್ದಂತಿ ಉತ್ಸವವನ್ನು ಆಡಂಬರದಿಂದ ಆಚರಿಸದೆ, ಪುರಾತನ ಜಿನ ಚೈತ್ಯಾಲಯದ ಜೀರ್ಣೋದ್ಧಾರ, 25 ತಾಳಮದ್ದಳೆ ಸರಣಿ ಕಾರ್ಯಕ್ರಮ, ಪ್ರಾಚೀನ, ಅಪರೂಪದ ಗ್ರಂಥಗಳಿರುವ ರಮಾರಾಣಿ ಶೋಧ ಸಂಸ್ಥಾನಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವುದು ಅರ್ಥಪೂರ್ಣ ಆಚರಣೆ ಎಂದರು. ಭಟ್ಟಾರಕ ಸ್ವಾಮೀಜಿಯವರು ಶ್ರಾವಕ, ಶ್ರಾವಕಿಯರಿಗೆ ಆಶೀರ್ವಾದವಿತ್ತರು. ಬಸದಿಗಳ ಮೊಕ್ತೇಸರರಾದ ಪಟ್ಟಶೆಟ್ಟಿ ಸುದೇಶ್ ಆದರ್ಶ, ಎ. ಸುದೀಶ್ ಕುಮಾರ್ ಬೆಕ್ಕೇರಿ, ಚೌಟರ ಅರಮನೆಯ ಕುಲದೀಪ ಎಂ., ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ., ಧಾರ್ಮಿಕ ಮುಖಂಡರಾದ ಧನಕೀರ್ತಿ ಬಲಿಪ, ಶೈಲೇಂದ್ರ ಕುಮಾರ್, ಕೃಷ್ಣರಾಜ ಹೆಗ್ಡೆ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಜಯಪ್ರಕಾಶ್ ಪಡಿವಾಳ್, ಸುಭಾಶ್ಚಂದ್ರ ಚೌಟ, ಮತ್ತಿತರರು ಉಪಸ್ಥಿತರಿದ್ದರು. ನೇಮಿರಾಜ್ ಕಾರ್ಯಕ್ರಮ ನಿರೂಪಿಸಿದರು. ನಂತರ ಅಹಿಂಸ ವಿಜಯ ಹಾಗೂ ತ್ರಿಶಂಕು ಸ್ವರ್ಗ ತಾಳಮದ್ದಳೆ ನಡೆಯಿತು.

ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್‌ನಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ

Article Image

ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್‌ನಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ

ಸತ್ತೂರು, ಧಾರವಾಡ: "ಆರೋಹಣ"ವನ್ನು 23 ಆಗಸ್ಟ್ 2024 ರಂದು ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಉದ್ಘಾಟಿಸಿದರು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ವಿವಿಧ ಪಠ್ಯೇತರ ಚಟುವಟಿಕೆ, ಮನರಂಜನೆ ಕಾರ್ಯಕ್ರಮ, ಕ್ರೀಡೆ, ರಂಗೋಲಿ, ಛಾಯಾಗ್ರಹಣ, ಚಿತ್ರಕಲೆ, ಅಡುಗೆ, ಮೆಹಂದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಚಟುವಟಿಕೆಗಳನ್ನು ಒಳಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಮನಸ್ಸು ಮತ್ತು ದೇಹದ ಸಮತೋಲನೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು. ಮುಖ್ಯ ಅತಿಥಿಗಳಾದ ಡಾ. ನಿರಂಜನ ಕುಮಾರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮತನಾಡುತ್ತಾ: "ಆರೋಹಣ" ಎಂದರೆ ಉತ್ತಮ ಸಾಧನೆಗಾಗಿ ಸೃಜನಶೀಲತೆಯನ್ನು ಕಂಡುಕೊಳ್ಳುವುದು. ಸೃಜನಶೀಲತೆಯು ಅವರ ಅಧ್ಯಯನದ ಉದ್ದಕ್ಕೂ ವಿದ್ಯಾರ್ಥಿಗಳ ಶಕ್ತಿಯಾಗಿರಬೇಕು. ವಿದ್ಯಾರ್ಥಿಗಳು ಪರಸ್ಪರ ಹೋಲಿಕೆ ಮಾಡದೆ ಆರೋಗ್ಯಕರ ಸ್ಪರ್ಧೆಯನ್ನು ಅಳವಡಿಸಿಕೊಳ್ಳಬೇಕು. ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳು ಅವುಗಳ ಪುನರಾವರ್ತನೆಯಾಗದಂತೆ ಮುನ್ನಡೆಯಬೇಕು. ಶಿಕ್ಷಣವು ಸ್ಪಷ್ಟ ಉದ್ದೇಶ ಮತ್ತು ಜಾಗತಿಕ ಬೆಳವಣಿಗೆಯತ್ತ ಗಮನಹರಿಸಬೇಕು ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಅಜಯಕುಮಾರ ಓಲಿ ಸ್ವಾಗತಿಸಿದರು. ಡಾ. ಅಜಯ್ ಎಸ್.ಕೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಕುಮಾರಿ ಅಕ್ಸಾ ಶಫೀಕ್ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಆಚಾರ್ಯ ವಂದನಾರ್ಪಣೆ ಸಲ್ಲಿಸಿದರು.

ತೌಳವ ಇಂದ್ರ ಸಮಾಜ(ರಿ.)ದಿಂದ ಆಟಿಡೊಂಜಿ ವಿಹಾರ ಕೂಟ

Article Image

ತೌಳವ ಇಂದ್ರ ಸಮಾಜ(ರಿ.)ದಿಂದ ಆಟಿಡೊಂಜಿ ವಿಹಾರ ಕೂಟ

ತೌಳವ ಇಂದ್ರ ಸಮಾಜದ "ಆಟಿಡೊಂಜಿ ವಿಹಾರ ಕೂಟ" ವಿನೂತನವಾದ ಕಾರ್ಯಕ್ರಮ ರವಿವಾರ ಕಾರ್ಕಳ ಶಿರ್ಲಾಲಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಸೂಡಿ ಬಸದಿ ಪರಿಸರದಲ್ಲಿ ನಡೆಯಿತು.ಬಸದಿಗೆ ಬನ್ನಿ ಕಾರ್ಯಕ್ರಮದಿಂದ ಪ್ರೇರಿತರಾಗಿ ಈ ಕಾರ್ಯಕ್ರಮ ರೂಪಿಸಲಾಗಿದ್ದು ಸದಸ್ಯರೆಲ್ಲರೂ ಮೂಡಬಿದಿರೆಯಿಂದ ಸೂಡಿಗೆ ವಿಹಾರಗೈದು ಆಟಿ ಕೂಟ ನಡೆಸಿದರು. "ಸೂಡಿ ಬಸದಿ ಸಂದರ್ಶಿಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎನ್ನುತ್ತಾ "ಪ್ರಸ್ತುತ ಕಾಲಘಟ್ಟದಲ್ಲಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಸುವ ಪ್ರಯತ್ನ ಇದಾಗಿದ್ದು ಹಳ್ಳಿ ಪ್ರದೇಶದಲ್ಲಿರುವ ಬಸದಿಗಳನ್ನು ಸಂದರ್ಶಿಸಿ ಸ್ಥಳೀಯರೊಡನೆ ಒಂದುದಿನ ಕಳೆದು ಸಂಪರ್ಕ ಕೊಂಡಿಯನ್ನು ಹೆಚ್ಚಿಸಿಕೊಳ್ಳುವುದು ಒಂದು ಒಳ್ಳೆಯ ಕಾರ್ಯಕ್ರಮ ಅಲ್ಲದೆ ಸ್ಥಳೀಯ ಆಡಳಿತ ಮಂಡಳಿಯವರ ಕಾರ್ಯಕ್ಕೆ ಪ್ರೋತ್ಸಾಹ ಹಾಗೂ ಬೆಂಬಲ ಕೊಟ್ಟಂತೆಯೂ ಆಗುತ್ತದೆ "ಎಂದು ಮುಖ್ಯ ಅತಿಥಿಯಾದ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಗುಣಪಾಲ ಕಡಂಬ ಇಂದಿಲ್ಲಿ ಹೇಳಿದರು. ಸೂಡಿ ಬಸದಿ ಆಡಳಿತ ಮಂಡಳಿ ಕಾರ್ಯದರ್ಶಿ ಸೂರಜ್ ಜೈನ್ ರವರು ಮಾತನಾಡುತ್ತಾ ತೌಳವ ಇಂದ್ರ ಸಮಾಜದ ವಿನೂತನ ವಿಶಿಷ್ಟ ಶೈಲಿಯ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಜ್ಞಾನಚಂದ್ರ ಇಂದ್ರರು ಪ್ರಾಸ್ತಾವಿಕ ಮಾತು ಆಡಿ, ಅತಿಥಿಗಳನ್ನು ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಅರ್ಕಕೀರ್ತಿ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಬಸದಿಯ ಶ್ರೀ ಆದಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಪೂಜೆಯನ್ನು ನಯನ ಇಂದ್ರರು ನೆರವೇರಿಸಿದ ಬಳಿಕ ಬಸದಿಯ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಸದಸ್ಯರಿಗೆ ವಿವಿಧ ಮನರಂಜನಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಮದ್ಯಾಹ್ನ ಗಂಜಿ ಚಟ್ನಿಯೂಟ, ಉಪಹಾರಕ್ಕೆ ಬಸಳೆಪುಂಡಿ, ಅರಸಿನ ಎಲೆಕಡುಬು ಮುಂತಾದ ಸಾಂಪ್ರದಾಯಿಕ ತಿಂಡಿಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಅಲ್ಲಿಂದ ವಿಹಾರ ನಿರ್ಮಾಣ ಹಂತದಲ್ಲಿರುವ ಮೂಡಾರು ಬಸದಿಗೆ ತೆರಳಿ ದರ್ಶನ ಪಡೆದು ಮುಂದುವರಿದು ಹತ್ತಿರದ ಜಲಪಾತ ವೀಕ್ಷಣೆಯೂ ನಡೆಯಿತು. ಮೇಘನಾ ಪ್ರಾರ್ಥನೆ ನೆರವೇರಿಸಿದರು, ತೌಳವ ಇಂದ್ರ ಸಮಾಜದ ಉಪಾಧ್ಯಕ್ಷರಾದ ಅಕ್ಷಯ ಕುಮಾರ್ ಮಳಲಿಯವರು ಕಾರ್ಯಕ್ರಮ ಸಂಯೋಜಿಸಿ, ನಿರ್ವಹಣೆ ಮಾಡಿದರು, ಕಾರ್ಯದರ್ಶಿ ಅಭಯಕುಮಾರ್ ಬಿ. ಧನ್ಯವಾದಗಳನ್ನು ಅರ್ಪಿಸಿದರು.

ಭಾರತಿಯ ಜೈನ್ ಮಿಲನ್ ವಲಯ 8 ರ ವಾರ್ಷಿಕ ಮಹಾಸಭೆ

Article Image

ಭಾರತಿಯ ಜೈನ್ ಮಿಲನ್ ವಲಯ 8 ರ ವಾರ್ಷಿಕ ಮಹಾಸಭೆ

ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ ಬೆಂಗಳೂರಿನ ಮಂಜುನಾಥ ಸ್ವಾಮಿ ಕಲಾಮಂಟಪದಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಾಮೂಹಿಕ ಪಂಚ ನಮಸ್ಕಾರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ನಿರ್ದೇಶಕರಾದ B. ಸೋಮಶೇಖರ ಶೆಟ್ಟಿ ಹಾಗೂ ಇತರ ಉಪಾಧ್ಯಕ್ಷರು, ನಿರ್ದೇಶಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು, ಜೈನ್ ಮಿಲನ್ ರಾಷ್ಟೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು, ಸಭಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅವರು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಜಿನಭಜನೆ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ನೀಡಿದರು. ವಲಯಾಧ್ಯಕ್ಷರಾದ ಯುವರಾಜ್ ಭಂಡಾರಿ ಅವರು ಎಲ್ಲಾ ವಿಭಾಗಗಳ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು, ಕಾರ್ಯದರ್ಶಿ ರತ್ನರಾಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಲಯದ ಪದಾಧಿಕಾರಿಗಳು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು, ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ವೇಣೂರು: ಭಾರತೀಯ ಜೈನ್ ಮಿಲನ್ ತಿಂಗಳ ಮಾಸಿಕ ಸಭೆ

Article Image

ವೇಣೂರು: ಭಾರತೀಯ ಜೈನ್ ಮಿಲನ್ ತಿಂಗಳ ಮಾಸಿಕ ಸಭೆ

ವೇಣೂರು: ಭಾರತೀಯ ಜೈನ್ ಮಿಲನ್ ನ ಜುಲೈ ತಿಂಗಳ ಮಾಸಿಕ ಸಭೆ ಹಾಗೂ ಆಹಾರವೋತ್ಸವ ಕಾರ್ಯಕ್ರಮವನ್ನು ಆ. 15ರಂದು ಶ್ರೀ ಬಾಹುಬಲಿ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ವೀರ್ ವೀರಾಂಗನೆಯರು ತಮ್ಮ ಮನೆಯಲ್ಲಿ ತಯಾರಿಸಿದ ಸುಮಾರು 50 ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಸುಕುಮಾರ್ ಜೈನ್ ವಹಿಸಿದ್ದರು. ಆಹಾರೋತ್ಸವದ ಉದ್ಘಾಟನೆಯನ್ನು ತಿಮ್ಮಣ್ಣರಸರಾದ ಡಾಕ್ಟರ್ ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಹತ್ವದ ಕುರಿತು ಉದ್ಘಾಟಕರು ಮತ್ತು ಅತಿಥಿಗಳು ವಿವರಿಸಿದರು. ವಿಜಯರಾಜ ಅಧಿಕಾರಿ ಅವರ ಪ್ರಾರ್ಥನೆಯೊಂದಿಗೆ ನಿರ್ಮಲ್ ಕುಮಾರ್ ಜೈನ್ ಸ್ವಾಗತಿಸಿ, ಪ್ರಾರಂಭವಾದ ಕಾರ್ಯಕ್ರಮವನ್ನು ಮಹಾವೀರ ಜೈನ್ ನಿರೂಪಿಸಿದರು. ಸುನಿತಾ ಎನ್. ಬಲ್ಲಾಳ್ ರವರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸುಮಾರು 150 ವೀರ್ ವೀರಾಂಗನೆಯರು ಮತ್ತು ವೀರ್ ಕುವರಿಯರು ಮತ್ತು ವೀರ್ ಕುವರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾಲತಿ ವಸಂತರಾಜ್ ಕಾರ್ಕಳ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

Article Image

ಮಾಲತಿ ವಸಂತರಾಜ್ ಕಾರ್ಕಳ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಶ್ರಾಂತ ಭೋಧಕರಾದ ಮಾಲತಿ ವಸಂತರಾಜ್ ಕಾರ್ಕಳ ಇವರ ಶೈಕ್ಷಣಿಕ ಕ್ಷೇತ್ರದ ಸೇವೆಯ ಪರಿಗಣನೆಯ ಮೇಲೆ "ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ"ಯನ್ನು ನೀಡಿ ಸನ್ಮಾನಿಲಾಯಿತು.

ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಇವರಿಗೆ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ

Article Image

ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಇವರಿಗೆ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಅಳದಂಗಡಿ ಇವರ ಜೈನ ಆಗಮ ಶಾಶ್ತç ಸಂಕೃತಿ ಅಧ್ಯಯನ ಜ್ಞಾನಕ್ಕಾಗಿ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ ಮಾಡಿ ಸನ್ಮಾನಿಲಾಯಿತು.

ಶ್ವೇತಾ ದಿಲೀಪ್ ನಾರಾವಿ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

Article Image

ಶ್ವೇತಾ ದಿಲೀಪ್ ನಾರಾವಿ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ವೇತಾ ದಿಲೀಪ್ ನಾರಾವಿ ಇವರ ಧಾರ್ಮಿಕ ಕ್ಷೇತ್ರದ ಪರಿಗಣನೆಯ ಮೇಲೆ “ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ”ಯನ್ನು ನೀಡಿ ಸನ್ಮಾನಿಲಾಯಿತು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಇವರಿಗೆ ಗೌರವ ಸನ್ಮಾನ

Article Image

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಇವರಿಗೆ ಗೌರವ ಸನ್ಮಾನ

ಧರ್ಮಸ್ಥಳ: ಮಕ್ಕಳನ್ನು ದೇವರ ಮಕ್ಕಳೆಂದು ಭಾವಿಸುತ್ತಾ, ಹಲವಾರು ಕಾರ್ಯಕ್ರಮ ಸಂಘಟನೆ, ಸೇವಾ ಚಟುವಟಿಕೆ, ಸಂಘ ಸಂಸ್ಥೆಗಳ ಸ್ಥಾಪನೆ, ಸಾವಿರಾರು ಕಲಾವಿದರಿಗೆ ಬೆಳಕಾದ ವಿಷಯಕ್ಕಾಗಿ ಆಮಂತ್ರಣ ಪರಿವಾರದ ಮುಖ್ಯಸ್ಥ ವಿಜಯ ಕುಮಾರ್ ಜೈನ್ ಅಳದಂಗಡಿ ಇವರಿಗೆ ಜು.21 ರಂದು ಸನ್ಮಾನ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳ ನೇತ್ರಾವತಿ ಬಳಿಯ ಪ್ರಣವ್ ಸಭಾಂಗಣದಲ್ಲಿ ದ.ಕ.ಜಿಲ್ಲಾ ಜಾನಪದ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಚುಟುಕು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಘಟಕ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಪದಗ್ರಹಣ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಮಂತ್ರಣ ಸಂಸ್ಥೆಯವರು ಸೇರಿ ಈ ಸನ್ಮಾನ ನೆರವೇರಿಸಿದರು. ಈ ಸಮಾರಂಭದಲ್ಲಿ ಹಿರಿಯರಾದ ಬಿ. ಭುಜಬಲಿ ಧರ್ಮಸ್ಥಳ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಬಿ. ಸುವರ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್. ಪ್ರಕಾಶ್ ಶೆಟ್ಟಿ, ಉದ್ಯಮಿ ಲ| ನಿತ್ಯಾನಂದ ನಾವರ, ಸಿ.ಎ.ಬ್ಯಾಂಕ್ ಅಧ್ಯಕ್ಷರಾದ ಪ್ರೀತಮ್ ಧರ್ಮಸ್ಥಳ, ಡಾ. ದೀಪಾಲಿ ಡೊಂಗ್ರೆ, ಗ್ರಾ.ಪಂ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್ ಧರ್ಮಸ್ಥಳ, ವಿದ್ಯಾಧರ್ ಜೈನ್ ಉಪ್ಪಿನಂಗಡಿ, ಬೆಳ್ತಂಗಡಿ ಜೆಸಿಐ ಮಂಜುಶ್ರೀ ಅಧ್ಯಕ್ಷರಾದ ರಂಜಿತ್ ಹೆಚ್.ಡಿ., ಪ್ರಣವ್ ಸಭಾಂಗಣ ಮಾಲಕರಾದ ಸುರೇಂದ್ರ ಪ್ರಭು, ಮಲ್ಲಿನಾಥ್ ಜೈನ್ ಧರ್ಮಸ್ಥಳ, ಶ್ರೀದೇವಿ ಸಚಿನ್, ಬೇಬಿ ಪೂಜಾರಿ ಪುನ್ಕೆತ್ಯಾರು, ಶಾರದ ಶೆಟ್ಟಿ ಅಳದಂಗಡಿ, ಸದಾನಂದ ಬಿ.ಕುದ್ಯಾಡಿ, ಅರುಣ್ ಜೈನ್ ಅಳದಂಗಡಿ, ರಂಜನ್ ನೆರಿಯ, ಸ್ನೇಕ್ ಪ್ರಕಾಶ್ ಶೆಟ್ಟಿ ಧರ್ಮಸ್ಥಳ, ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಹರೀಶ್ ವೈ ಚಂದ್ರಮ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಪ್ರಧಾನ ಸಂಚಾಲಕ ಅಭಿಷೇಕ್ ಬಜಗೋಳಿ, ಅಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು, ಉಪಾಧ್ಯಕ್ಷೆ ವಿಂಧ್ಯಾ ಎಸ್.ರೈ ಕಡೇಶಿವಾಲಯ, ನಿರ್ದೇಶಕರುಗಳಾದ ಚೇತನ್ ಕುಮಾರ್ ಅಮೈ, ಸ್ವಾತಿ ಸೂರಜ್ ಶಿಶಿಲ, ಆರ್.ಜೆ ಇಂದ್ರ ಕುಂದಾಪುರ, ಆಶಾ ಅಡೂರು, ವಿದ್ಯಾಶ್ರೀ ಅಡೂರ್ ಸ್ವಾತೀ ಕುಲಾಲ್ ಕಡ್ತಲ, ಕವಿತಾ ದಿನೇಶ್ ಕಟೀಲು, ಪ್ರಜ್ಞಾ ವಾಣಿಗೋರೆ ಕಾರ್ಕಳ, ಕೇಶವ ನೆಲ್ಯಾಡಿ, ಪರ್ಣಶಾ ಗೋಖಲೆ, ಹೇಮಾ ಜಯರಾಮ್ ರೈ ಕುರಿಯ, ಸುಶ್ಮೀತಾ ಮೂಡಬಿದ್ರೆ, ಹೆಚ್. ಕೆ. ನಯನಾಡು, ಪ್ರಸಾದ್ ನಾಯಕ್ ಕಾರ್ಕಳ ಮುಂತಾದವರು ಉಪಸ್ಥಿತರಿದ್ದರು.

ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ

Article Image

ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ

ವೈದ್ಯರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್‌ನವರು ಹಲವು ಖ್ಯಾತ ವೈದ್ಯರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ಜೂನ್ 25ರಂದು ಸಂಜೆ 6 ಗಂಟೆಗೆ ನಯನ ಸಭಾಂಗಣದಲ್ಲಿ ಜರುಗಿದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸನ್ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡಾ. ನೀರಜಾ ನಾಗೇಂದ್ರ ಕುಮಾರ್ ಅವರಿಗೆ ‘ವೈದ್ಯ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.

ಹುಬ್ಬಳ್ಳಿ: ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಅಸ್ತಿತ್ವಕ್ಕೆ

Article Image

ಹುಬ್ಬಳ್ಳಿ: ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಅಸ್ತಿತ್ವಕ್ಕೆ

ಹುಬ್ಬಳ್ಳಿ-ಧಾರವಾಡ ಅವಳಿನಗರಗಳಲ್ಲಿ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಪ್ರಿಯ ಸಮಾನ ಮನಸ್ಕರು ಕೂಡಿ ಸಂಘಟಿಸಿರುವ "ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ (ರಿ.) ಜೂನ್ 26 ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿತ ನಾನಾ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶ ಹೊಂದಿರುವ ಟ್ರಸ್ಟಿಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ ಗೌರವ ಅಧ್ಯಕ್ಷರಾಗಿದ್ದು ಇತರ ಪದಾಧಿಕಾರಿಗಳು ಈ ಮುಂದಿನವರಾಗಿದ್ದಾರೆ. ಡಾ. ಜಿನದತ್ತ ಹಡಗಲಿ(ಅಧ್ಯಕ್ಷರು), ಡಾ. ಭರಮಪ್ಪ ಭಾವಿ(ಉಪಾಧ್ಯಕ್ಷರು), ಶಾಂತಿನಾಥ ಕೆ. ಹೋತಪೇಟಿ(ಪ್ರಧಾನ ಕಾರ್ಯದರ್ಶಿ), ಶಾಂತರಾಜ ಮಲ್ಲಸಮುದ್ರ(ಕಾರ್ಯದರ್ಶಿ), ಮಂಜುನಾಥ ಚವಡಣ್ಣವರ(ಖಜಾಂಚಿ), ಧರಣೇಂದ್ರ ಜವಳಿ, ರಾಯಪ್ಪ ಬಾಳಿಕಾಯಿ, ಮಹಾವೀರ ಉಪಾಧ್ಯೆ, ಶ್ರೀಧರ ಬಸ್ತಿ, ಪ್ರತಿಭಾ ಕಾಗೆ, ತನುಜಾ ರೋಖಡೆ(ಕಾರ್ಯಕಾರಿಣಿ ಸದಸ್ಯರು). ಹೆಚ್ಚಿನ ಮಾಹಿತಿಗೆ: 9945719235, 9980897979, 8762235112ಗಳಿಗೆ ಸಂಪರ್ಕಿಸಬಹುದು. ಶಾಂತಿನಾಥ ಕೆ. ಹೋತಪೇಟಿ (ಪ್ರಧಾನ ಕಾರ್ಯದರ್ಶಿ): 9980897979

ಮಂಗಳೂರು ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಮಂಗಳೂರು ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಮಿತವಾದ ವ್ಯಾಯಾಮ, ಮಿತವಾದ ಆಹಾರ ಪದ್ಧತಿಯನ್ನು ರೂಢಿಸಿಕೊಂಡಾಗ ಉತ್ತಮ ಆರೋಗ್ಯ ಪಡೆಯಬಹುದು ಎಂದು ಕೆ. ಎಂ.ಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ದಿತೇಶ್ ಎಂ. ಅವರು ಹೇಳಿದರು. ಇವರು ಲಾರ್ಡ್ ಮಹಾವೀರ ಜೈನ್ ಬೋರ್ಡಿಂಗ್ ಶಾಲೆಯ ವರ್ಧಮಾನ ಸಿದ್ದಾರ್ಥ ಸಭಾಂಗಣದಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ಇದರ ಮಾಸಿಕ ಸಭೆಯ ಸಂದರ್ಭದಲ್ಲಿ ಹೃದಯದ ಆರೋಗ್ಯ ಕಾಪಾಡುವುದು ಹೇಗೆ? ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬಳಿಕ ಎನ್. ಜಗತ್ಪಾಲ್, ಸುಮತಿ ದಂಪತಿಯನ್ನು ಸಮ್ಮಾನಿಸಲಾಯಿತು. ದ.ಕ. ಜೈನ್ ಮಿಲನ್ ನಿರ್ದೇಶಕ ಸುಕುಮಾರ ಬಳ್ಳಾಲ್, ಸುರೇಶ್ ಬಳ್ಳಾಲ್, ಪುಷ್ಪರಾಜ್ ಜೈನ್, ಕಾರ್ಯದರ್ಶಿ ವೈಶಾಲಿ ಪಡಿವಾಲ್, ಪ್ರಮುಖರಾದ ನಿರ್ಮಲ್ ಕುಮಾರ್, ಮಹಾವೀರ ಪ್ರಸಾದ್, ಸನತ್ ಕುಮಾರ್ ಜೈನ್, ಸಂತೋಷ್ ಕುಮಾರ್ ಜೈನ್ ಉಪಸ್ಥಿತರಿದ್ದರು ಮಂಗಳೂರು ಭಾರತೀಯ ಜೈನ್ ಮಿಲನ್ ಅಧ್ಯಕ್ಷರಾದ ರತ್ನಾಕರ್ ಜೈನ್ ಸ್ವಾಗತಿಸಿದರು. ರಾಜೇಶ್ ಎಂ. ಸಮ್ಮಾನಿತರನ್ನು ಪರಿಚಯಿಸಿದರು. ಪ್ರಿಯಾ ಸುದೇಶ್ ನಿರೂಪಿಸಿ, ವಂದಿಸಿದರು.

ಶಿಶಿಲ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ

Article Image

ಶಿಶಿಲ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ

ಶಿಶಿಲ ಗ್ರಾಮದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ಭಾನುವಾರ ಲೋಕಾಕಲ್ಯಾಣಕ್ಕಾಗಿ ಕಲ್ಯಾಣ ಮಂದಿರ ಆರಾಧನೆ ಹಾಗೂ ಪದ್ಮಾವತಿ ಅಮ್ಮನವರ ವಿಶೇಷ ಪೂಜೆಯು ಪ್ರತಿಷ್ಠಾಚಾರ್ಯ ಜಯರಾಜ ಇಂದ್ರ ಹಾಗೂ ಸಹಪುರೋಹಿತರ ಸಹಕಾರದಲ್ಲಿ ನಡೆಯಿತು. ದಾನಿಗಳಾದ ವಿಜಯಕುಮಾರ್, ಕಣಿಯೂರು, ಸುರೇಂದ್ರ ಹೆಗ್ಡೆ ಮತ್ತು ಉಜಿರೆಯ ಶಶಿಪ್ರಭಾ ಅವರನ್ನು ಗೌರವಿಸಲಾಯಿತು. ಬಸದಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜದ ಸದಸ್ಯರು ಸಕ್ರಿಯ ಸಹಕಾರ ನೀಡಿದರು.

ಸಾಹಿತಿ ರವಿರಾಜ್‌ರವರಿಗೆ ಸನ್ಮಾನ

Article Image

ಸಾಹಿತಿ ರವಿರಾಜ್‌ರವರಿಗೆ ಸನ್ಮಾನ

ಭಾರತೀಯ ಜೈನ್ ಮಿಲನ್ ಮೂಡಬಿದ್ರೆ ಶಾಖೆಯ ಮಾಸಿಕ ಸಭೆಯಲ್ಲಿ ಸಾಹಿತಿ, ಕವಿ, ಸಂಗೀತಗಾರ “ಕಲಾಭೂಷಣ” ಎಂ. ರವಿರಾಜ್ ಅವರನ್ನು ಸನ್ಮಾನಿಸಲಾಯಿತು. ಮೂಡಬಿದ್ರೆಯ ಎಂ.ಸಿ.ಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ಜರುಗಿದ ಸಮಾರಂಭದಲ್ಲಿ ಶಾಖಾ ಅಧ್ಯಕ್ಷರಾದ ಆನಡ್ಕ ದಿನೇಶ್ ಕುಮಾರ್, ವಲಯಾಧಿಕಾರಿಗಳಾದ ಜಯರಾಜ್ ಕಂಬಳಿ, ವಕೀಲರಾದ ಎಂ. ಬಾಹುಬಲಿ ಪ್ರಸಾದ್, ವಕೀಲೆ ಶ್ವೇತಾ ಜೈನ್ ಮತ್ತಿತರರು ಹಾಜರಿದ್ದರು. ಸನ್ಮಾನ ಸ್ವೀಕರಿಸಿದ ರವಿರಾಜ್‌ರವರು ತಾನು 52 ವರ್ಷಗಳ ಹಿಂದೆ ರಚಿಸಿದ “ಮಹಾವೀರ ವಿದ್ಯಾಲಯ ಚರಿತೆ” ಎಂಬ ಕಥನ ಕಾವ್ಯವನ್ನು ವಾಚಿಸಿದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಮೇ 30 ರಂದು ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಸಮಾರಂಭ

Article Image

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಮೇ 30 ರಂದು ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಸಮಾರಂಭ

ಉಜಿರೆ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭ ಇದೇ 30 ರಂದು ಗುರುವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಬೆಂಗಳೂರಿನ ಪದ್ಮಿನಿ ಪದ್ಮರಾಜ್ ರವರು ತಿಳಿಸಿದ್ದಾರೆ. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸೇವೆ, ಸಾಧನೆ ಬಗ್ಗೆ ಅವರು ಧರ್ಮಸ್ಥಳದಲ್ಲಿ ಮಾಹಿತಿ ನೀಡಿದರು. ಮೇ 30 ರಂದು ಗುರುವಾರ ಪೂರ್ವಾಹ್ನ ಹತ್ತು ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸುವರು. ಹೇಮಾವತಿ ವೀ. ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಖ್ಯಾತ ಹೃದ್ರೋಗ ತಜ್ಞರಾದ ಬೆಂಗಳೂರಿನ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರೀಯವರು ಮತ್ತು ಚಲನಚಿತ್ರ ನಟಿ ಪದ್ಮಜಾ ರಾವ್ ರವರು ಶುಭಾಶಂಸನೆ ಮಾಡುವರು. ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ, ಬೆಳಗಾವಿಯ ಸುಮನ್ ಪತ್ರಾವಳಿ, ಮೂಡಬಿದ್ರೆಯ ವೀಣಾ ಶೆಟ್ಟಿ, ಬೆಂಗಳೂರಿನ ಸುರೀಮಾ ಯಶವಂತ್, ಹುಣಸೂರಿನ ಛಾಯಾ ಮತ್ತು ಮೈಸೂರಿನ ಕುಮಾರಿ ಅನನ್ಯಾ ಅವರನ್ನು ಸನ್ಮಾನಿಸಲಾಗುವುದು. ರಾಜ್ಯದಲ್ಲಿರುವ ಜೈನ ಮಹಿಳಾ ಒಕ್ಕೂಟದ ಎಲ್ಲಾ ಶಾಖೆಗಳಿಂದ ಸುಮಾರು ಒಂದು ಸಾವಿರ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದು ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಪದ್ಮಿನಿ ಪದ್ಮರಾಜ್ ರವರು ಮಾಹಿತಿ ನೀಡಿದರು.

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

Article Image

ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ

ಭಾರತೀಯ ಜೈನ್ ಮಿಲನ್ ಮೂಡುಬಿದಿರೆಯ ಮಾಸಿಕ ಸಭೆ ವಾಲ್ಪಾಡಿ ಬಸದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀಪಾಲ್ ಎಸ್. ರವರು ತಮ್ಮ ಧರ್ಮಪತ್ನಿ ಮತ್ತು ಮಾತೃಶ್ರೀಯವರ ಸ್ಮರಣೆಯಲ್ಲಿ ಕೊಡಮಾಡುವ "ವಜ್ರಶ್ರೀ ಅರ್ಚಕ ಪುರಸ್ಕಾರ"ವನ್ನು ಅಳಿಯೂರು ಬಸದಿಯ ಹಿರಿಯ ಅರ್ಚಕರಾದ ರತ್ನವರ್ಮ ಇಂದ್ರರ ಸೇವೆಯನ್ನು ಗುರುತಿಸಿ, ರತ್ನವರ್ಮ ಇಂದ್ರ ಹಾಗೂ ವಿನಯ ದಂಪತಿಯನ್ನು ಶಾಲು, ಫಲಕಾಣಿಕೆ, ಸನ್ಮಾನ ಪತ್ರ ಹಾಗೂ ನಗದು ಪುರಸ್ಕಾರದೊಂದಿಗೆ ಜೈನ್ ಮಿಲನ್ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಮಿಲನ್ ಅಧ್ಯಕ್ಷ ದಿನೇಶ್ ಕುಮಾರ್ ಆನಡ್ಕ, ಶ್ವೇತಾ ಜೈನ್, ಪ್ರಭಾಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು.

First Previous

Showing 4 of 4 pages

Next Last