Article Image

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ ಸಂಪನ್ನ

Article Image

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ ಸಂಪನ್ನ

ವೇಣೂರು: ರಥೋತ್ಸವದಂತಹ ಪುಣ್ಯ ಕಾರ್ಯ ಗಳಲ್ಲಿ ನಿಷ್ಠೆ ಯಿಂದ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಲ್ಲಿ ಜಿನೇಂದ್ರ ಭಗವಂತರ ಅನುಗ್ರಹ ನಮಗೆ ಪ್ರಾಪ್ತವಾಗುತ್ತದೆ. ಸಮ್ಯಕ್ ಜ್ಞಾನ, ಸಮ್ತಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯದ ಪ್ರತೀಕವೇ ರಥೋತ್ಸವ. ಇದರಿಂದ ಶ್ರಾವಕ-ಶ್ರಾವಕಿಯರಾದ ನಮ್ಮಲ್ಲಿ ಧಾರ್ಮಿಕ ಪ್ರಜ್ಞೆಯು ಜಾಗೃತವಾಗುತ್ತದೆ ಎಂದು ಮೂಡಬಿದ್ರೆ ಶ್ರೀ ಜೈನಮಠದ ಪ. ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ನುಡಿದರು. ಅವರು ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ವಹಿಸಿ, ಮಾತನಾಡಿ ಈ ವರ್ಷದಿಂದ ವೇಣೂರು ಯಾತ್ರಿ ನಿವಾಸದಲ್ಲಿ “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರ ಪ್ರಾರಂಭಿಸಿದ್ದು, ಶ್ರಾವಕ-ಶ್ರಾವಕಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ಸರಕಾರದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೂಡುಬಿದಿರೆ ಇವರು “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಳೆದ ಬಾರಿಯ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿರುವುದಕ್ಕೆ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ ವೇಣೂರು ತೀರ್ಥಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ: ರಥೋತ್ಸವದ ಧಾರ್ಮಿಕ ಸಭೆಯಲ್ಲಿ 90ವರ್ಷ ದಾಟಿದ ಹಿರಿಯ ಶ್ರಾವಕಿ ಗುಣಾವತಿ ಪಿ.ಎ. ಆಳ್ವ ಪಂಜಾಲ್‌ಬೈಲು, ಹಿರಿಯ ಶ್ರಾವಕ ಜಗತ್ಪಾಲ ಮುದ್ಯ ಕತ್ತೋಡಿ ಹಾಗೂ ಹಿರಿಯ ಶ್ರಾವಕಿ ಗುಣಾವತಿ ಅಮ್ಮ ಬರಮೇಲು ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಇತ್ತೀಚೆಗೆ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪಡೆದ ಮಾಂಡೋವಿ ಮೋಟರ್ಸ್‌ನ ಚೀಫ್ ಜನರಲ್ ಮೇನೆಜರ್ ನೇರೆಂಕಿ ಪಾರ್ಶ್ವನಾಥ ಜೈನ್, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ದ್ವಿಶಾನ್ ಜೈನ್ ಕಂಚ ಇವರನ್ನು ಗೌರವಿಸಲಾಯಿತು. 2024ರ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯ ಪ್ರತಿಭಾವಂತ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರದ ಪ್ರಾಯೋಜಕರುಗಳಾದ ದಿ. ಅಂತಪ್ಪ ಆಳ್ವರು, ಬಡಕೋಡಿ ದಿ. ಆದಿರಾಜ ಶೆಟ್ಟಿ, ಮಾರಗುತ್ತು ದಿ. ವಿಜಯರಾಜ ಅಧಿಕಾರಿ ಕುಟುಂಬಸ್ಥರನ್ನು ಹಾಗೂ ಅಕ್ಷಯ ಕುಮಾರ್ ಕಂಬಳಿ ಉಜಿರೆ ಮೂಡುಬಿದಿರೆಯ ಎಮ್. ವಿ. ಶೆಟ್ಟಿ ಇವರನ್ನು ಗೌರವಿಸಲಾಯಿತು. ಚಾರ್ವಿ ಪ್ರಾರ್ಥಿಸಿ, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ, ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಜೊತೆ ಕಾರ್ಯದರ್ಶಿ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವೇಣೂರು, ಮೂಡುಬಿದಿರೆ, ಪರುಷಗುಡ್ಡೆ ಜಿನಭಜನಾ ತಂಡಗಳಿಂದ ಜಿನಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಉತ್ಸವ, ಶ್ರೀ ಕೊಡಮಣಿತ್ತಾಯ ದೈವದ ನೇಮ, ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕ, ದ್ವಜಾವರೋಹಣದೊಂದಿಗೆ ರಥಯಾತ್ರಾ ಮಹೋತ್ಸವ ಸಂಪನ್ನಗೊಂಡಿತು.

ಪೂಜಾ ಕಾರ್ಯಕ್ರಮ

Article Image

ಪೂಜಾ ಕಾರ್ಯಕ್ರಮ

ಮೂಡುಬಿದಿರೆ: ದರೆಗುಡ್ಡೆಯಲ್ಲಿರುವ ಶ್ರೀ 1008 ಅನಂತನಾಥ ಸ್ವಾಮಿ ಬಸದಿಯಲ್ಲಿ ಬೆಳಗ್ಗೆ ಗಂಟೆ 9ರಿಂದ ಶ್ರೀ 1008 ಅನಂತನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಷ್ಟಮ ನಂದೀಶ್ವರದ 52 ಜಿನಬಿಂಬಗಳಿಗೆ 54 ಕಲಶಗಳಿಂದ ಮಹಾಭಿಷೇಕವು ಮೂಡುಬಿದಿರೆ ಶ್ರಿ ಜೈನ ಮಠದ ಪ. ಪೂ. ಭಾರತಭೂಷಣ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಮತ್ತು ಆ‌ಶೀರ್ವಚನದೊಂದಿಗೆ ಮಾ. 22ರಂದು ನೆರವೇರಲಿರುವುದು.

24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ

Article Image

24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ

ವೇಣೂರು ಭಗವಾನ್ ಶ್ರೀ ಬಾಹುಬಲಿ ಬೆಟ್ಟದ ಬಲ ಭಾಗದಲ್ಲಿರುವ ಬಿನ್ನಾಣಿ ಬಸದಿ ಭ| ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯ ಗಂಧಕುಟಿಗೆ, ಎಡ ಭಾಗದಲ್ಲಿರುವ ಅಕ್ಕಂಗಳ ಬಸದಿ ಭ| ಶ್ರೀ ಶಾಂತಿನಾಥ ಸ್ವಾಮಿ ಸನ್ನಿಧಿಯ ಗಂಧಕುಟಿಗೆ ಪರಮಪೂಜ್ಯ ಮುನಿಶ್ರೀ ೧೦೮ ಶ್ರೀ ಆದಿತ್ಯ ಸಾಗರ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ದಾನವಾಗಿ ನೀಡಿದ 24 ತೀರ್ಥಂಕರರ ರತ್ನದ ಜಿನಬಿಂಬಗಳಿಗೆ ಭ| ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ಶುಭ ಸಂದರ್ಭದಲ್ಲಿ ನಾಳೆ (ಮಾ. 14) ಬೆಳಿಗ್ಗೆ 9.00 ಗಂಟೆಗೆ ಕ್ಷೀರ ಅಭಿಷೇಕ ಹಾಗೂ ಮಹಾಪೂಜೆ ನೆರವೇರಲಿರುವುದು.

ಶ್ರೀ ಕ್ಷೇತ್ರ ದೇವಗಿರಿ: ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವ

Article Image

ಶ್ರೀ ಕ್ಷೇತ್ರ ದೇವಗಿರಿ: ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಚಿಕ್ಕನಕೊಡಿಗೆ ದೇವಗಿರಿ ಕ್ಷೇತ್ರದ ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರ ಮತ್ತು ಚತುರ್ವಿಂಶತಿ ತೀರ್ಥಂಕರರ ಭವ್ಯ ಸಮವಸರಣದ ಮುಂಭಾಗದಲ್ಲಿ ನೂತನ ಮಾನಸ್ತಂಭೋಪರಿ ಚತುರ್ಮುಖ ಜಿನಬಿಂಬದ ಪ್ರತಿಷ್ಠಾ ಮಹೋತ್ಸವವು ಕಾರ್ಕಳ ಶ್ರೀ ಜೈನಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಂಗಳ ಆಶೀರ್ವಾದ ಮತ್ತು ದಿವ್ಯ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ದಿನಾಂಕ : 15-3-2025ನೇ ಶನಿವಾರದಿಂದ ಮೊದಲ್ಗೊಂಡು ದಿನಾಂಕ : 17-03-2025ನೇ ಸೋಮವಾರದ ಪರ್ಯಂತ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪನಾ ಪೂರ್ವಕವಾಗಿ ಜರುಗಲಿದೆ. ಧಾರ್ಮಿಕ ವಿಧಿ-ವಿಧಾನಗಳು: ದಿನಾಂಕ : 15-03-2025ನೇ ಶನಿವಾರ ಬೆಳಿಗ್ಗೆ ಗಂಟೆ 7-45ರಿಂದ ನಿತ್ಯವಿಧಿ ಸಹಿತ ಇಂದ್ರ ಪ್ರತಿಷ್ಠೆ, ಬೆಳಿಗ್ಗೆ 8-55ರ ಮೇಷ ಲಗ್ನ ಸುಮುಹೂರ್ತದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ದಿವಾಗಂಟೆ 11-45ರ ವೃಷಭ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಅಪರಾಹ್ನ ಗಂಟೆ 2-00ರಿಂದ ನಾಂದಿಮಂಗಲ ವಿಧಾನ, ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಸಂಜೆ ಗಂಟೆ 4-15ರ ಕರ್ಕಾಟಕ ಲಗ್ನದಲ್ಲಿ ಶ್ರೀ ಕ್ಷೇತ್ರಪಾಲ ಸ್ವಾಮಿ ಪ್ರತಿಷ್ಠೆ, ಸಂಜೆ ಗಂಟೆ 5-25ರ ಸಿಂಹಲಗ್ನದಲ್ಲಿ ನಾಗಾರಾಧನಾ ಪೂರ್ವಕ ನಾಗಪ್ರತಿಷ್ಠೆ, ನವಕಲಶ ಅಭಿಷೇಕ, ಮಹಾಮಂಗಳಾರತಿ. ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 7-00ರಿಂದ ಮಲೆನಾಡು ಪ್ರಾಂತ್ಯದ ಆಯ್ದ ಜಿನಭಜನಾ ತಂಡಗಳಿಂದ “ಜಿನಗಾನ ಪ್ರಸ್ತುತಿ” ದಿನಾಂಕ : 16-03-2025ನೇ ಭಾನುವಾರ ಬೆಳಿಗ್ಗೆ ನಿತ್ಯವಿಧಿ ಸಹಿತ ಗಂಟೆ 8-30ರಿಂದ ೮೧ ಕಲಶಗಳಿಂದ ಮಾನಸ್ತಂಭ ನವಪದ ಶುದ್ಧಿ ವಿಧಾನ, ಮಾನಸ್ತಂಭದ ಆವರಣದಲ್ಲಿ ವಾಸ್ತುಪೂಜಾ ವಿಧಾನ, ನವಗ್ರಹ ಮಹಾಶಾಂತಿ ವಿಧಾನ, ದಿಕ್ಪಾಲಕ ಬಲಿ, ಬೆಳಿಗ್ಗೆ ಗಂಟೆ 9-00ರಿಂದ ಸಾಮೂಹಿಕ ವೃತೋಪದೇಶ, ಬೆಳಿಗ್ಗೆ ಗಂಟೆ 10-00ರಿಂದ ವೃಷಭಾದಿ ಚತುರ್ವಿಂಶತಿ ತೀರ್ಥಂಕರರಿಗೆ ಮಹಾಭಿಷೇಕ, ಮಧ್ಯಾಹ್ನ ಗಂಟೆ 2-00ರಿಂದ ಚತುರ್ವಿಂಶತಿ ತೀರ್ಥಂಕರರ ಆರಾಧನೆ. ಸಂಜೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ 24 ಕಲಶ ಅಭಿಷೇಕ, ಮಹಾಮಂಗಳಾರತಿ. ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ಗಂಟೆ 6-00ರಿಂದ ಸುದೇಶ್ ಜೈನ್ ಮತ್ತು ಬಳಗ, ಮಕ್ಕಿಮನೆ ಕಲಾವೃಂದ, ಮಂಗಳೂರು ಇವರ ಸಂಯೋಜನೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ವೈಭವ - ಪ್ರಸಿದ್ಧ ಜಿನಭಜನಾ ತಂಡಗಳಿಂದ ಜಿನಗಾನ ಪ್ರಸ್ತುತಿ ದಿನಾಂಕ : 17-03-2025ನೇ ಸೋಮವಾರ ನಿತ್ಯವಿಧಿಯೊಂದಿಗೆ ಗಂಧಯಂತ್ರಾರಾಧನಾ ಸಹಿತ ದಿವಾಗಂಟೆ 10-25ರಿಂದ 10-35ರ ಸುಮುಹೂರ್ತದಲ್ಲಿ ಚತುರ್ಮುಖ ಜಿನಬಿಂಬ ಶುದ್ದಿ, ಮಂತ್ರನ್ಯಾಸಪೂರ್ವಕ ನಯನೋನ್ಮಿಲನ, ದಿವಾಗಂಟೆ 11-15ರಿಂದ 11-45ರ ವೃಷಭ ಲಗ್ನ ಸುಮುಹೂರ್ತದಲ್ಲಿ ಮಾನಸ್ತಂಭೋಪರಿ ಶ್ರೀ ಜಿನಬಿಂಬ ಪ್ರತಿಷ್ಠಾಪನೆ, ಅಭಿಷೇಕ, ಮಧ್ಯಾಹ್ನ 12-25ರ ಅಭಿಜಿನ್ ಮುಹೂರ್ತದಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧನಾಪೂರ್ವಕ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 2-00ರಿಂದ ಮಾನಸ್ತಂಭೋಪರಿ ಜಿನಬಿಂಬಗಳಿಗೆ ೧೦೮ ಕಲಶಗಳ ಮಹಾಭಿಷೇಕ, ಸಮವಸರಣದಲ್ಲಿ ಕಲಿಕುಂಡ ಯಂತ್ರಾರಾಧನೆ, ೨೪ ಕಲಶಗಳ ಅಭಿಷೇಕ, ರಾತ್ರಿ 7-30ರಿಂದ ಸರ್ವಾಷ್ಣಯಕ್ಷ ಉತ್ಸವ, ಗುರುಗಳ ಪಾದಪೂಜೆ, ಕಂಕಣ ವಿಸರ್ಜನೆ, ತೋರಣ ವಿಸರ್ಜನೆ. ಧಾರ್ಮಿಕ ಸಭಾ ಕಾರ್ಯಕ್ರಮ: ಸಂಜೆ 6-00ರಿಂದ ಪೂಜ್ಯ ಭಟ್ಟಾರಕ ಶ್ರೀಗಳಿಂದ ಮಂಗಲ ಪ್ರವಚನ, ಸನ್ಮಾನ ಸಮಾರಂಭ.

ವಾರ್ಷಿಕ ರಥಯಾತ್ರ ಮಹೋತ್ಸವದ ಇಂದಿನ ಕಾರ್ಯಕ್ರಮ

Article Image

ವಾರ್ಷಿಕ ರಥಯಾತ್ರ ಮಹೋತ್ಸವದ ಇಂದಿನ ಕಾರ್ಯಕ್ರಮ

ವೇಣೂರು: ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರ ಮಹೋತ್ಸವವು ದಿನಾಂಕ 14.03.2025ನೇ ಶುಕ್ರವಾರ ಜರುಗಲಿರುವುದು. ಅದರ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ಗಂಟೆ 10:00ಕ್ಕೆ ಬೆಟ್ಟದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಶಾಂತಿಚಕ್ರ ಆರಾಧನೆ ನೆರವೇರಲಿದೆ. ಇಂದು ಸಾಯಂಕಾಲ ಗಂಟೆ 6:30 ರಿಂದ ರಥಯಾತ್ರ ಮಹೋತ್ಸವದ ಪ್ರಯುಕ್ತ ಶ್ರೀ ರಕ್ಷಾ ಯಂತ್ರಾರಾಧನೆ, ಶ್ರೀ ಬಲಿಪೂಜೆ, ವಸಂತಕಟ್ಟೆ ಪೂಜೆ, ಶ್ರೀ ವಿಹಾರ, ಶ್ರೀ ದೇವರ ಉತ್ಸವ ಹಾಗೂ ಶ್ರೀ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ಜರಗಲಿರುವುದು.

ಶಿಶಿಲ ವಾರ್ಷಿಕೋತ್ಸವ

Article Image

ಶಿಶಿಲ ವಾರ್ಷಿಕೋತ್ಸವ

ಬೆಳ್ತಂಗಡಿ: ತಾಲೂಕಿನ, ಶಿಶಿಲ, ಶ್ರೀ ಕ್ಷೇತ್ರ ಚಂದ್ರಪುರದಲ್ಲಿರುವ ಭ| ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನಮಂದಿರದ ವಾರ್ಷಿಕೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾ. 11ರಂದು ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಪೂಜಾ ಕಾರ್ಯಕ್ರಮಗಳು: ತಾ. 11-03-2025ನೇ ಮಂಗಳವಾರ ಬೆಳಿಗ್ಗೆ 7.45ರ ಶುಭ ಲಗ್ನದಲ್ಲಿ ತೋರಣ ಮುಹೂರ್ತ ನಂತರ ವಿಮಾನ ಶುದ್ಧಿ ಪ್ರಾರಂಭ, ಬೆಳಿಗ್ಗೆ 9.19ರ ಶುಭ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಬೆಳಿಗ್ಗೆ 9.30ರಿಂದ ಶಾಂತಿ ಚಕ್ರ ಆರಾಧನೆ ಮತ್ತು ಪದ್ಮಾವತಿ ಆರಾಧನೆ, ಮಧ್ಯಾಹ್ನ 12ರಿಂದ 24 ಕಲಶ ಅಭಿಷೇಕ ಮಹೋತ್ಸವ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪಾದಪೂಜೆ, ಶ್ರೀ ಜಿನಗಂಧೋದಕ ವಿತರಣೆ. ವಿ.ಸೂ.: ಪೂಜ್ಯ ಸ್ವಾಮೀಜಿಯವರಿಂದ ಶ್ರೀಕ್ಷೇತ್ರ ಚಂದ್ರಪುರ-ಶಿಶಿಲದ ಸ್ಥಳ ಪರಿಚಯ ಪುಸ್ತಕ ಬಿಡುಗಡೆ

ಕಂಬದಹಳ್ಳಿಯಲ್ಲಿ ಜಿನರಾತ್ರಿ ನಿಮಿತ್ತ ಅಖಂಡ ಣಮೋಕಾರ ಮಂತ್ರ ಪಠಣ

Article Image

ಕಂಬದಹಳ್ಳಿಯಲ್ಲಿ ಜಿನರಾತ್ರಿ ನಿಮಿತ್ತ ಅಖಂಡ ಣಮೋಕಾರ ಮಂತ್ರ ಪಠಣ

ಕಂಬದಹಳ್ಳಿ: ಭ| ಶ್ರೀ ಆದಿನಾಥ ತೀರ್ಥಂಕರರ ಮೋಕ್ಷ ಕಲ್ಯಾಣ ನಿಮಿತ್ತ ಜಿನರಾತ್ರಿಯಂದು ಕಂಬದಹಳ್ಳಿಯಲ್ಲಿ ಪ. ಪೂ. ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಇಪ್ಪತ್ತ ನಾಲ್ಕು ಗಂಟೆಗಳ ಕಾಲ ಅಖಂಡ ಣಮೋಕಾರ ಮಂತ್ರ ಪಠಣ ಜರಗಿತು.

ವೇಣೂರು: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವೇಣೂರು: ವಾರ್ಷಿಕ ರಥಯಾತ್ರಾ ಮಹೋತ್ಸವ

ವೇಣೂರು: ದಿನಾಂಕ 14.03.2025ನೇ ಶುಕ್ರವಾರ ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವವು ಜರಗಲಿರುವುದು ಅದರ ಪೂರ್ವಭಾವಿಯಾಗಿ ದಿನಾಂಕ 11.03.2025ನೇ ಮಂಗಳವಾರ (ಇಂದು) ಸಾಯಂಕಾಲ ಗಂಟೆ 6.00ಕ್ಕೆ ತೋರಣ ಮುಹೂರ್ತ, ವಿಮಾನ ಶುದ್ಧಿ, ದ್ವಜಾರೋಹಣ, ಪಾದಾಭಿಷೇಕ ಜರಗಲಿರುವುದು. ವಿ.ಸೂ.: ದಿನಾಂಕ 13.03.2025ನೇ ಗುರುವಾರ ರಾತ್ರಿ ಗಂಟೆ 7.00ರಿಂದ ಶ್ರೀ ದೇವರ ಶ್ರೀ ವಿಹಾರ ನೆರವೇರಲಿದೆ.

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಕಬಡ್ಡಿ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಕಬಡ್ಡಿ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಪರಮ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು. “ರಾಜರ್ಷಿ ಚಿನ್ನದ ಹೆಜ್ಜೆ” ಎಂಬ ಶೀರ್ಷಿಕೆಯಲ್ಲಿ ಪರ್ಯಾಯ ಫಲಕವನ್ನು ನೀಡುತಿದ್ದೇವೆ. ಏ. 06ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾ ನಿಯಮಗಳು ಮತ್ತು ಸೂಚನೆ: * ತಂಡದಲ್ಲಿ 7 + 3 ಆಟಗಾರರಿಗೆ ಅವಕಾಶವಿದ್ದು ಕೊನೆಯ ಸಮಯದಲ್ಲಿ ಆಟಗಾರರ ಬದಲಾವಣೆಗೆ ಯಾವುದೇ ಅವಕಾಶ ಇರುವುದಿಲ್ಲ. * ಪಂದ್ಯಗಳನ್ನು ಅಗ್ ಮಾದರಿಯಲ್ಲಿ ಪಂದ್ಯಗಳನ್ನು ಮತ್ತು ಸುಸಜ್ಜಿತ ಮ್ಯಾಟ್ ಗಳಲ್ಲಿ ಅಡಿಸಲಾಗುವುದು. * ಪಂದ್ಯಗಳ ವಿಜೇತರಿಗೆ ಪ್ರಥಮ, ದ್ವಿತೀಯ, ತ್ರಿತೀಯ ಮತ್ತು ಚತುರ್ಥ ಬಹುಮಾನ ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. * ಉತ್ತಮ ರೈಡರ್, ಡಿಫೆಂಡರ್ ಮತ್ತು ಅಲೌಂಡರ್ ಗಳಿಗೆ ಅಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. * ಒಂದು ತಂಡದಲ್ಲಿ ಆಡಿದ ಆಟಗಾರರು ಬೇರೆ ತಂಡದಲ್ಲಿ ಅಡುವಂತಿಲ್ಲ. * ಅಸಭ್ಯವಾಗಿ ವರ್ತಿಸಿದ ತಂಡವನ್ನು ಪಂದ್ಯಾವಳಿಯಿಂದ ಹೊರಗಿಡಲಾಗುವುದು * ನಿರ್ಣಾಯಕರು ಹಾಗೂ ಆಯೋಜಕರ ತೀರ್ಮಾನವೇ ಅಂತಿಮ. * ತಂಡಗಳ ಸೇರ್ಪಡೆ ನಿಗದಿತ ದಿನಾಂಕ 30-03-2025 ರ ಒಳಗೆ ನೋಂದಾಯಿಸಿಕೊಳ್ಳಬೇಕು. * ತಂಡಗಳಿಗೆ ಪ್ರವೇಶ ಶುಲ್ಕ ತಲಾ 2000/- ರೂಗಳು ಆಗಿರುತ್ತದೆ. ಸ್ಥಳ : ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು ಸಂಯೋಜಕರು: ಮಹಾವೀರ್ ಬಿ ಜೆ ಜೈನ್, ದಿಲೀಪ್ ಜೈನ್, ರೋಹಿತ್‌ ಜೈನ್, ಅಭಿನಂದನ್ ಜೈನ್ ಬಿದರೂರು, ಸುಧೀರ್ ಜೈನ್ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9611403305, 9483691093

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಥ್ರೋ ಬಾಲ್‌ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಥ್ರೋ ಬಾಲ್‌ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ಥ್ರೋ ಬಾಲ್‌ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ತಂಡದ ದಾಖಲಾತಿ ಮತ್ತು ಕ್ರೀಡಾ ನಿಯಮಗಳು * ಪ್ರತಿ ತಂಡದಲ್ಲಿ ಏಳು ಜನ ಆಟಗಾರರನ್ನು ಮತ್ತು ಮೂರು ಜನ ಬದಅ ಆಟಗಾರರನ್ನು ಹೊಂದಿರಬೇಕು. * ತಂಡವನ್ನು ದಿನಾಂಕ 30 ಮಾರ್ಚ್ 2025 ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು. * ಒಂದು ತಂಡಕ್ಕೆ ಪ್ರವೇಶ ಶುಲ್ಕ 1000/- ರೂ ಅಗಿರುತ್ತದೆ. * ಒಬ್ಬ ಆಟಗಾರರಿಗೆ ಒಂದು ತಂಡದಲ್ಲಿ ಮಾತ್ರ ಅಡಲು ಅವಕಾಶವಿರುತ್ತದೆ. * ವಿಜೇತ ತಂಡಗಳಿಗೆ ವಿಶೇಷ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ಏರುತ್ತದೆ. * ನಿರ್ಣಾಯಕರ ಮತ್ತು ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು, ಸಂಯೋಜಕರು: ಅರ್ಹನ್ ಜೈನ್, ತನುಜ ಜೈನ್, ಕವಿತ ಮಂಜಯ್ಯ ಜೈನ್, ವೃಷಭ್ ಜೈನ್ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 9481252358, 9036109108

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಆಶು ಭಾಷಣ ಸ್ಪರ್ಧೆ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಆಶು ಭಾಷಣ ಸ್ಪರ್ಧೆ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಆಶು ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ಸಾಮಾನ್ಯ ನಿಯಮಗಳು: * ಕನಿಷ್ಠ ನಿಮಿಷ ಹಾಗೂ ಗರಿಷ್ಠ 5 ನಿಮಿಷಗಳ ಸಮಯಾವಕಾಶ ನೀಡಲಾಗುವುದು. * 4 ನಿಮಿಷವಾದಾಗ ಒಂದು ಎಚ್ಚರಿಕೆಯ ಬೆಲ್ ನೀಡಲಾಗುವುದು. * ಭಾಷಣವು ಕನ್ನಡದಲ್ಲಿ ಮಾತ್ರ ಇರಬೇಕು * ಸ್ಪರ್ಧೆಯಲ್ಲಿ ಭಾಗವಹಿಸುವವರು ನೊಂದಾಯಿಸಲು ಕೊನೆಯ ದಿನಾಂಕ: 30-03-2025 ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು, ಸಂಯೋಜಕರು: ಮಂಜಯ್ಯ ಜೈನ್ ಮಳ್ಳೋಡಿ, ಪುಟ್ಟಸ್ವಾಮಿ ಜೈನ್, ಉದಂಕ ಜೈನ್, ಸಂತೋಷ ಬಿ.ವಿ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 9611555108, 9480565905

ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ಜರಗುವ ಆಯನ ಮತ್ತು ಸಿರಿಗಳ ಜಾತ್ರೆ

Article Image

ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ಜರಗುವ ಆಯನ ಮತ್ತು ಸಿರಿಗಳ ಜಾತ್ರೆ

ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ವರ್ಷಂಪ್ರತಿ ಜರಗುವ ಆಯನ ಮತ್ತು ಸಿರಿಗಳ ಜಾತ್ರೆಯು ಇಂದಿನಿಂದ ಪ್ರಾರಂಭಗೊಂಡು ದಿನಾಂಕ 13-03-2025ನೇ ಗುರುವಾರದವರೆಗೆ ಜರಗಲಿರುವುದು. ದಿನಾಂಕ 13-03-2025ನೇ ಗುರುವಾರ ರಾತ್ರಿ ಗಂಟೆ 9.00ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ಸಂಚಾರಿ ಚಿಕ್ಕಮೇಳದ ಸಹಯೋಗದೊಂದಿಗೆ ಊರ-ಪರವೂರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ "ಕದಂಬ ಕೌಶಿಕ" ಎಂಬ ಕನ್ನಡ ಯಕ್ಷಗಾನ ಬಯಲಾಟ ಜರಗಲಿದೆ.

ಸರಗೂರು:ಅಷ್ಟಾಹ್ನಿಕ ಪೂಜೆ

Article Image

ಸರಗೂರು:ಅಷ್ಟಾಹ್ನಿಕ ಪೂಜೆ

ಮೈಸೂರು ಜಿಲ್ಲೆ, ಸರಗೂರು ಪಟ್ಟಣದ ಬಸದಿಯಲ್ಲಿ ಶ್ರೀ ನಂದೀಶ್ವರ ಅಷ್ಟಾಹ್ನಿಕ ಪರ್ವದ ಮೊದಲ ದಿನದ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಆರಾಧನೆಗಳು ನಡೆದವು. ಸಮಾಜದ ಮುಖಂಡರಾದ ಸೋಮಪ್ರಭ ಸೇರಿದಂತೆ ಜೈನ ಸಮಾಜದ ಮುಖಂಡರುಗಳು, ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಜೈನ ಮಹಿಳಾ ಸಂಘಟನೆಗಳು ಮುಖಂಡರುಗಳು, ಶ್ರಾವಕ-ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. -ಜೆ ರಂಗನಾಥ ತುಮಕೂರು

ವೇಣೂರು: ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವೇಣೂರು: ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವ

ವೇಣೂರು: ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವವು ದಿನಾಂಕ 11-03-2025 ಮಂಗಳವಾರದಿಂದ ಮೊದಲ್ಗೊಂಡು 15-03-2025ರ ಶನಿವಾರದವರೆಗೆ ಜರುಗಲಿದೆ. ದಿನಾಂಕ 14-03-2025ರ ಶುಕ್ರವಾರ ರಾತ್ರಿ ಗಂಟೆ 7-00ರಿಂದ ಭಗವಾನ್‌ ಶ್ರೀ ೧೦೦೮ ಬಾಹುಬಲಿ ಸ್ವಾಮಿ ಸನ್ನಿಧಿಯಲ್ಲಿ ರಥಯಾತ್ರಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಭಾರತಭೂಷಣ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಜರಗಲಿರುವುದು. ರಾತ್ರಿ ಗಂಟೆ 7-30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ: ಆಶೀರ್ವಚನ: ಪ. ಪೂ. ಭಾರತಭೂಷಣ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀ ಜೈನ ಮಠ ಮೂಡುಬಿದಿರೆ ಅಧ್ಯಕ್ಷತೆ: ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಅಳದಂಗಡಿ ಅರಮನೆ, ಉಪಾಧ್ಯಕ್ಷರು, ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ವೇಣೂರು ಮುಖ್ಯ ಅತಿಥಿಗಳು: ಕೆ. ಅಭಯಚಂದ್ರ ಜೈನ್‌, ಮಾಜಿ ಸಚಿವರು, ಕರ್ನಾಟಕ ಸರಕಾರ ಪ್ರತಿಭಾ ಪುರಸ್ಕಾರ: 2024ರ ಎಸ್.ಎಸ್.‌ಎಲ್‌.ಸಿ. ಮತ್ತು ಪಿ.ಯು.ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಅಭಿನಂದನೆ: 90 ವರ್ಷ ದಾಟಿದ ಹಿರಿಯ ಶ್ರಾವಕ/ಶ್ರಾವಕಿಯರಿಗೆ. ಯಾತ್ರಿ ನಿವಾಸದಲ್ಲಿ ನೂತನ ಶ್ರುತ ಭಂಡಾರ (ಸ್ವಾಧ್ಯಾಯ ಕೇಂದ್ರ) ಉದ್ಘಾಟನಾ ಸಮಾರಂಭ: ಸಂಜೆ ಗಂಟೆ 6-00ಕ್ಕೆ ಪಾವನ ಸಾನ್ನಿಧ್ಯ: ಪ. ಪೂ. ಭಾರತಭೂಷಣ ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಶ್ರೀ ಜೈನ ಮಠ ಮೂಡುಬಿದಿರೆ ಉಪಸ್ಥಿತಿ: ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಅಳದಂಗಡಿ ಅರಮನೆ ಉದ್ಘಾಟನೆ: ಕೆ. ಅಭಯಚಂದ್ರ ಜೈನ್‌, ಮಾಜಿ ಸಚಿವರು, ಕರ್ನಾಟಕ ಸರಕಾರ

ವೇಣೂರು: ಬಾಹುಬಲಿ ಬೆಟ್ಟದ ರಥೋತ್ಸವದಂದು ವಿದ್ಯಾರ್ಥಿವೇತನ

Article Image

ವೇಣೂರು: ಬಾಹುಬಲಿ ಬೆಟ್ಟದ ರಥೋತ್ಸವದಂದು ವಿದ್ಯಾರ್ಥಿವೇತನ

ವೇಣೂರು: ಬೆಳ್ತಂಗಡಿ ತಾಲೂಕು, ವೇಣೂರು ಭ| ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವವು ಮಾ.14ರಂದು ಜರಗಲಿರುವುದು. ಅಂದು ರಾತ್ರಿ 7.30ರಿಂದ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ದಿ| ಡಾ| ಪಿ. ಅಂತಪ್ಪ ಆಳ್ವ ರವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಪಂಜಾಲಬೈಲು ವೇಣೂರು ಹಾಗೂ ಬಡಕೋಡಿ ಹೊಸಮನೆ ದಿ| ಪಿ. ಆದಿರಾಜ ಶೆಟ್ಟಿ ಹಾಗೂ ಶ್ರೀಮತಿ ದಿ| ಶಾರದಾದೇವಿಯವರ ಸ್ಮರಣಾರ್ಥ ಮಕ್ಕಳಿಂದ ಹಾಗೂ ಮಾರಗುತ್ತು ದಿ|ವಿಜಯರಾಜ ಅಧಿಕಾರಿಯವರ ಸ್ಮರಣಾರ್ಥ ಪತ್ನಿ ರಾಜೇಶ್ವರಿ ವಿ.ಅಧಿಕಾರಿ ಹಾಗೂ ಶ್ರೀ ಅಕ್ಷಯ ಕುಮಾರ್ ಕಂಬಳಿ ಮತ್ತು ಮಕ್ಕಳು ಜಿನಪದ ಬೆಳಾಲುರಸ್ತೆ ಉಜಿರೆ ಇವರಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ಅರ್ಹ ಪ್ರತಿಭಾವಂತ ಜೈನ ವಿದ್ಯಾರ್ಥಿಗಳು 2024ನೇ ಸಾಲಿನ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ಜೆರಾಕ್ಸ್‌ ನೊಂದಿಗೆ ಅರ್ಜಿಯನ್ನು ಕಾರ್ಯದರ್ಶಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಯಾತ್ರಿ ನಿವಾಸ ಶ್ರೀ ಮಹಾವೀರ ನಗರ ವೇಣೂರು-574242 ಇವರಿಗೆ ಕಳುಹಿಸಿಕೊಡುವಂತೆ ವಿನಂತಿಸಲಾಗಿದೆ. ಅರ್ಜಿದಾರರು ಸರಿಯಾದ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ಮಾರ್ಚ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಛೇರಿ ಮೊಬೈಲ್ ನಂ: 9606356288

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ವಾಲಿಬಾಲ್‌ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ವಾಲಿಬಾಲ್‌ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ರಾಜ್ಯಮಟ್ಟದ ವಾಲಿಬಾಲ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ನಿಯಮಗಳು : * ಪ್ರತಿ ತಂಡದಲ್ಲಿ ಆರು ಜನ ಆಟಗಾರರು ಹಾಗೂ ಮೂರು ಜನ ಆಟಗಾರರು ಪರ್ಯಾಯ ಆಟಗಾರರಾಗಿ ಅಟವಾಡಲು ಅವಕಾಶವಿರುತ್ತದೆ. * ಒಬ್ಬ ಆಟಗಾರನಿಗೆ ಒಂದು ತಂಡದಲ್ಲಿ ಮಾತ್ರ ಆಡಲು ಅವಕಾಶವಿರುತ್ತದೆ. * ನಿರ್ಣಾಯಕರ ಮತ್ತು ಆಯೋಜಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. * ತಂಡದ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕ 30 ಮಾರ್ಚ್ 2025 ಆಗಿರುತ್ತದೆ. * ವಿಜೇತ ತಂಡಗಳಿಗೆ ವಿಶೇಷ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ಏರುತ್ತದೆ. * ಒಂದು ತಂಡಕ್ಕೆ ಪ್ರವೇಶ ಶುಲ್ಕ 1000/- ರೂ ಆಗಿರುತ್ತದೆ. ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜನಗರ, ಬೆಂಗಳೂರು, ಸಂಯೋಜಕರು: ದರ್ಶನ್ ಜೈನ್ ಮಾರಲಗೋಡು, ಅಮೃತ ಜೈನ್ ಬಿದರೂರು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ಸೋಹನ್ ಜೈನ್, ಸಂತೋಷ್ ಡಿ ಜೈನ್ 9035943205 94807 22321

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ರಂಗೋಲಿ ಪಂದ್ಯಾಟ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ರಂಗೋಲಿ ಪಂದ್ಯಾಟ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಜೈನ ಮಹಿಳೆಯರಿಗೆ ಏ. 06ರಂದು ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯ ನಿಯಮಗಳು : * ಸ್ಪರ್ಧೆಯಲ್ಲಿ ಭಾಗವಹಿಸುವವರು ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿ ಹಾಜರಿರಬೇಕು. * ರಂಗೋಲಿ ಸ್ಪರ್ಧೆಯ ಕಾಲಾವಧಿ ಒಂದು ಗಂಟೆ. * ರಂಗೋಲಿಯು ಜೈನ ಧರ್ಮದ ಸಂದೇಶವನ್ನು ಸಾರುವ ಅಂಶಗಳನ್ನು ಹೊಂದಿರಬೇಕು. * ಸ್ಪರ್ಧಿಗಳು ತಮ್ಮ ಹೆಸರನ್ನು ಗೂಗಲ್ ಅಂಕ್ ಅಥವಾ ಅಯೋಜಕರಲ್ಲಿ ನೊಂದಾಯಿಸಬೇಕು. * ರಂಗೋಲಿ ಜಡಿಸುವವರು ನಿಗದಿಪಡಿಸಿದ 3 X 3 ಅಡಿ ಜಾಗದಲ್ಲೆ ಜಡಿಸಬೇಕು. * ರಂಗೋಲಿ ಬಿಡಿಸಲು ಬೇಕಾದ ವಸ್ತುಗಳನ್ನು ಸ್ಪರ್ಧಿಗಳೇ ತರತಕ್ಕದ್ದು. * ತೀರ್ಪುಗಾರರ ಆಯ್ಕೆಯ ಅನುಸಾರ ಪ್ರಥಮ, ದ್ವಿತೀಯ, ಮತ್ತು ತೃತೀಯ ಫಲಿತಾಂಶ ಘೋಷಿಸಲಾಗುವುದು. * ತರಕಾಲ, ಹೂವು, ಹರಳು ಮತ್ತು ಕಾಳು ಬೆಳೆ ಸೇರಿದಂತೆ ವಿಶೇಷ ವಸ್ತುಗಳನ್ನು ಸೌಂದರ್ಯಕ್ಕಾಗಿ ಬಳಸಬಹುದು. * ಸ್ಪರ್ಧೆಯಲ್ಲಿ ಭಾಗವಹಿಸುವವರು ನೊಂದಾಯಿಸಲು ಕೊನೆಯ ದಿನಾಂಕ: 30-03-2025 ಸ್ಥಳ : ಸೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜಿನಗರ, ಬೆಂಗಳೂರು, ಸಂಯೋಜಕರು: ಪೂಜಾ ದರ್ಶನ್ ಜೈನ್, ಸಂಗೀತ ವಜ್ರ ಕುಮಾರ್, ಸಂಧ್ಯಾ ಉದಂಕ ಜೈನ್, ಪ್ರಜ್ವಲ್ ಜೈನ್ ಜೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: 7406434903 7892973503

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಚಿತ್ರಕಲೆ ಸ್ಪರ್ಧೆ

Article Image

ಬೆಂಗಳೂರು : ಜಿನಸಮ್ಮಿಲನ ಸೀಸನ್‌ -09 ಚಿತ್ರಕಲೆ ಸ್ಪರ್ಧೆ

ಬೆಂಗಳೂರಿನ ಸುಹಾಸ್ತಿ ಜೈನ್‌ ಮಿಲನ್‌ನ ಪ್ರತಿಷ್ಠಿತ ಹೆಮ್ಮೆಯ ಕಾರ್ಯಕ್ರಮ ಜಿನಸಮ್ಮಿಲನ-2025 ಸೀಸನ್-09‌ ಪ್ರತಿವರ್ಷದಂತೆ ಈ ವರ್ಷವೂ ಹಲವು ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಲು ಲಿಂಕ್: https://forms.gle/SkmFayT6oLUS1iso6 ಏ. 06ರಂದು ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ನಿಯಮಗಳು : * ಚಿತ್ರಕಲೆಯು 4 ವಿಭಾಗಗಳಲ್ಲಿ ಇರುತ್ತದೆ (ಚಿಣ್ಣರ, ಬಾಲ್ಯ, ಕಿಶೋರ & ಯುವ) ಚಿಣ್ಣರ 1 ರಿಂದ 4 ನೇ ತರಗತಿ, ಬಾಲ್ಯ 5 ರಿಂದ 7 ನೇ ತರಗತಿ, ಕಿಶೋರ 8 ರಿಂದ 10 ನೇ ತರಗತಿ & ಯುವ PUC ನಂತರ. * ಸ್ಪರ್ಧಿಗಳು ತಮ್ಮ ಹೆಸರನ್ನು ಗೂಗಲ್ ಅಂಕ್ ಮೂಲಕ ನೋಂದಾಯಿಸಬೇಕಾಗಿ ವಿನಂತಿ. * ಚಿತ್ರ ಕಲೆಯು ಜೈನ ಧರ್ಮದ ಬಗ್ಗೆ ಇರಬೇಕು ಹಾಗೂ ಚಿತ್ರ ಬಿಡಿಸಲು ಕಾಲಾವಕಾಶ 1 ಗಂಟೆ. * ಚಿತ್ರಕಲೆಯು ಕ್ರೆಯಾನ್ಸ್, ಸ್ಟೇಟ್ಟೆನ್ & ವಾಟರ್ ಕಲರ್ ಯಾವುದಾದರೂ ಮಾಡಬಹುದು. * A3 ಡ್ರಾಯಿಂಗ್ ಶೀಟ್ ನಲ್ಲಿ ಚಿತ್ರವನ್ನು ಬಿಡಿಸಬೇಕು ಮತ್ತು ಶೀಟನ್ನು ಸ್ಥಳದಲ್ಲಿಯೇ ಒದಗಿಸಲಾಗುತ್ತದೆ. * ಚಿಣ್ಣರ ವಿಭಾಗಕ್ಕೆ ಚಿತ್ರವನ್ನು ಕೊಡಲಾಗುತ್ತದೆ, ಕಲಲಿಂಗ್ ಮಾಡಬೇಕು. * ತೀರ್ಪುಗಾರರ ಆಯ್ಕೆಯ ಅನುಸಾರ ಫಲಿತಾಂಶವನ್ನು ಘೋಷಿಸಲಾಗುತ್ತದೆ. * ಸ್ಪರ್ಧಾಳುಗಳು ನೋಂದಾಯಿಸಲು ಕೊನೆಯ ದಿನಾಂಕ: 30-03-2025. ಸ್ಥಳ : ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜು ರಾಜಾಜಿನಗರ, ಬೆಂಗಳೂರು, ಸಂಯೋಜಕರು: ಸಂದೇಶ್ ಜೈನ್, ತೇಜಪ್ಪ ಜೈನ್, ಅಭಿಷೇಕ್ ಜೈನ್, ರಚನಾ ಜಿನೇಂದ್ರ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8105077689 9483596608

ಸವಣಾಲು: ಧಾಮ ಸಂಪ್ರೋಕ್ಷಣ ವೈಭವ

Article Image

ಸವಣಾಲು: ಧಾಮ ಸಂಪ್ರೋಕ್ಷಣ ವೈಭವ

ಉಜಿರೆ: ಆಧ್ಯಾತ್ಮವೇ ಭಾರತದ ಆತ್ಮವಾಗಿದ್ದು ಪರಿಶುದ್ಧ ಶ್ರದ್ಧಾ-ಭಕ್ತಿಯಿಂದ ದೇವರ ಸೇವೆ ಮಾಡಿದಾಗ ಸರ್ವಶಕ್ತನಾದ ಭಗವಂತನು ನಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ಬೆಳ್ತಂಗಡಿ ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಆದಿನಾಥಸ್ವಾಮಿ ಬಸದಿಯಲ್ಲಿ ಭಾನುವಾರ ಧಾಮ ಸಂಪ್ರೋಕ್ಷಣ ಸಂದರ್ಭದಲ್ಲಿ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಎಲ್ಲರಲ್ಲಿಯೂ ದೇವರನ್ನು ಕಂಡು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ನಂಬಿಕೆಗಿಂತಲೂ ಜಿಜ್ಞಾಸೆ ಹಾಗೂ ಅನ್ವೇಷಣಾ ಪ್ರವೃತ್ತಿಯಿಂದಾಗಿ ಕಷ್ಟ ಬಂದಾಗ ಆರ್ತರಾಗಿ ಪರಿಹಾರಕ್ಕಾಗಿ ನಾವು ದೇವರ ಭಕ್ತಿ ಮಾಡುತ್ತೇವೆ. ದೇವರ ಅನುಗ್ರಹದಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಕರ್ಮ ಸಿದ್ಧಾಂತವನ್ನು ನಂಬುವ ನಾವು ತಾಳ್ಮೆಯಿಂದ ಧರ್ಮದ ಮರ್ಮವನ್ನರಿತು ಆಚರಿಸಿದಾಗ ಜೀವನ ಪಾವನವಾಗುತ್ತದೆ. ನಮ್ಮ ಹಿರಿಯರು, ಸಾಧು-ಸಂತರು ಇದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದ ಅವರು ಜೈನರ ತ್ಯಾಗ, ಅಹಿಂಸೆ, ಅಪರಿಗ್ರಹ ಮೊದಲಾದ ತತ್ವ-ಸಿದ್ಧಾಂತಗಳಿಂದ ಶಾಂತಿ-ಸಾಮರಸ್ಯದ ಬದುಕು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಪಡುಬಿದ್ರೆ ಬೀಡು ರತ್ನಾಕರ ರಾಜ್ ಅರಸು, ರಕ್ಷಿತ್ ಶಿವರಾಂ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಶುಭಾಶಂಸನೆ ಮಾಡಿದರು. ವಿಶಿಷ್ಠ ಸೇವೆ-ಸಾಧನೆ ಮಾಡಿದ ವೇಣೂರಿನ ಪ್ರವೀಣಕುಮಾರ್ ಇಂದ್ರ ಮತ್ತು ಉಜಿರೆಯ ಸುರೇಶ್‌ಕುಮಾರ್ ಅವರನ್ನು ಗೌರವಿಸಲಾಯಿತು. ಪ್ರತಿಷ್ಠಾಚಾರ್ಯರಾದ ಬೆಳ್ತಂಗಡಿಯ ಕೆ. ಜಯರಾಜ ಇಂದ್ರ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬಿ. ರಾಜಶೇಖರ ಅಜ್ರಿ, ಬಸದಿ ಸಮಿತಿಯ ಕೋಶಾಧಿಕಾರಿ ಚಾಮರಾಜ ಸೇಮಿತ, ವೃಷಭರಾಜ ಇಂದ್ರ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, ಸ್ವಧರ್ಮದಲ್ಲಿ ಜೀವಿಸಿ, ಪರಧರ್ಮವನ್ನು ಪ್ರೀತಿಸುವ ಜೈನರು ಗುಣಗಳ ಆರಾಧಕರಾಗಿದ್ದು ಸರ್ವಧರ್ಮೀಯರೊಂದಿಗೂ ಶಾಂತಿ-ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಬಸದಿಯ ಸೇವೆಯಲ್ಲಿ ಜನರ ಶ್ರದ್ಧಾ-ಭಕ್ತಿಯ ಪರಿಶ್ರಮವನ್ನು ಶ್ಲಾಘಿಸಿ, ಅಭಿನಂದಿಸಿದರು. ಕಿಶೋರ್‌ಹೆಗ್ಡೆ ಎರ್ಮೆತ್ತೋಡಿಗುತ್ತು ಸ್ವಾಗತಿಸಿದರು. ಮುಂಡೂರುಗುತ್ತು ಆಕರ್ಷ್ ಜೈನ್ ಧನ್ಯವಾದವಿತ್ತರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಧಾರ್ಮಿಕ ವಿಧಿ-ವಿಧಾನಗಳು: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಭಾನುವಾರದ ಪೂಜೆಯ ಸೇವಾಕರ್ತೃಗಳಾಗಿ ಪುಣ್ಯಭಾಗಿಗಳಾದರು. ಭಗವಾನ್ ಆದಿನಾಥ ಸ್ವಾಮಿಯ ಪ್ರತಿಷ್ಠೆ, ಶಿಖರಾರೋಹಣ, ಭಕ್ತಾಮರ ಆರಾಧನೆ, ೧೦೮ ಕಲಶ ಅಭಿಷೇಕದ ಬಳಿಕ ಮಹಾಪೂಜೆ ನಡೆಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ನಿರೀಕ್ಷಾ ಜೈನ್ ಹೊಸ್ಮಾರು ಇವರು ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.

ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆ

Article Image

ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆ

ಇಂದಿನ ಜಾಗತೀಕರಣ ಹಾಗೂ ಉಧಾರಿಕರಣದ ಕಾಲಘಟ್ಟದಲ್ಲಿ ಸಂಸ್ಕೃತಿ, ಸಂಸ್ಕಾರ, ಶಾಂತಿ ಮತ್ತು ಅಹಿಂಸೆಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಕಾಲಕ್ಕೆ ತಕ್ಕಂತೆ ನಾವು ಬದಲಾವಣೆ ಕಾಣುವುದು ಅಗತ್ಯವಾಗಿದೆ ಎಂದು ಧಾರವಾಡದ ಎಸ್‌.ಡಿ.ಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ್ ಕುಮಾರ್ ತಿಳಿಸಿದರು. ಅವರು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆ, ಪೆನುಗೊಂಡೇ ಪಟ್ಟಣದ ಶ್ರೀ ಅಜಿತನಾಥ ತೀರ್ಥಂಕರ ಬಸದಿ ಆವರಣದಲ್ಲಿ ನಡೆದ ಬೆಂಗಳೂರಿನ ಕುಬೇರ ಜೈನ್ ಮಿಲನ್ ನ 180ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಶ್ರೀ ಧರ್ಮಸ್ಥಳ ಧರ್ಮೊತ್ತನ ಟ್ರಸ್ಟ ನಿಂದ ಶ್ರೀ ಅಜಿತನಾಥ ಬಸದಿ ಜೀರ್ಣೋದ್ಧಾರಗೊoಡು ಹೊಸ ರೂಪ ಕಂಡಿದೆ, ಜೈನ ಧರ್ಮ ಚಿಕ್ಕ ಧರ್ಮವಾದರೂ ಸುರಕ್ಷಿತ ಹಾಗೂ ವಿಶಿಷ್ಟ ಧರ್ಮವಾಗಿದೆ, ನಮ್ಮ ಧರ್ಮ ಶ್ರಮಣ ಪರಂಪರೆ ಹೊಂದಿದೆ, ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಅಶಾಂತಿ, ಹಿಂಸೆ, ರಕ್ತಪಾತ, ತಾಂಡವ ಮಾಡುತ್ತಿದ್ದು ಯುದ್ಧದ ಕಾರ್ಮೋಡ ಕವಿದಿದೆ. ಬದಲಾವಣೆ ಇಂದು ಅಗತ್ಯವಾಗಿದ್ದು ಇವಕ್ಕೆಲ್ಲ ಶಾಂತಿ ಮತ್ತು ಅಹಿಂಸೆಗೆ ಪೂರಕವಾಗಿರುವ ಜೈನ ಧರ್ಮದ ಸಿದ್ಧಾಂತಗಳು ಅಗತ್ಯ ಎಂದರು. ಯಾವುದೇ ಕಾರ್ಯಕ್ಕೆ ನಾವು ಹೊಂದಿಕೊಳ್ಳುವ ಭಾವನೆ, ಭೂಮಿಯ ಮೇಲೆ ಬದುಕುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು. ಡಾ ಪದ್ಮಲತ ನಿರಂಜನ್ ಮಾತನಾಡಿ ಎಲ್ಲರಿಗೂ ಪ್ರೀತಿಸುವ ಶಕ್ತಿ ನೀಡಲಿ ಎಂದು ಹಾರೈಸಿ ಭಕ್ತಿಗೀತೆ ಹಾಡಿದರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಮಾಜಿ ಅಧ್ಯಕ್ಷೇ ಪದ್ಮಿನಿ ಪದ್ಮರಾಜ್ ಮಾತನಾಡಿ ಭಾರತೀಯ ಜೈನ ಮಿಲನ್ ಹಾಗೂ ಜೈನ ಮಹಿಳಾ ಒಕ್ಕೂಟಗಳು ಧರ್ಮಸ್ಥಳದ ಧರ್ಮಕಾರ್ಯಗಳು ಪ್ರಶಂಸನಿಯ, ಧರ್ಮ ಸಂಸ್ಕಾರ ಕಾರ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಮಾಜ ಬಂದುಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಅಮರಾಪುರ ಜೈನ ಸಮಾಜದ ಅಧ್ಯಕ್ಷ ಪದ್ಮರಾಜ್, ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷ ಕೆ. ಜೆ. ಎ. ಮಂಜುನಾಥ್ ಯುವರಾಜ್, ನಾಗಕುಮಾರ್ ಸಂಜು, ಮಂಜು, ಅಮರಾಪುರ ಚಂದ್ರಿಕೀರ್ತಿ, ಅಮರಾಪುರ ಅನಿಲ್, ಬೆಂಗಳೂರಿನ ಕುಬೇರ ಜೈನ್ ಮಿಲನ್ ಅಧ್ಯಕ್ಷರು, ಪದಾಧಿಕಾರಿಗಳು, ಅಮರಾಪುರ, ಪೆನಗೊಂಡೆ, ಜೈನ್ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಜೈನ ಸಮಾಜದ ಮುಖಂಡರುಗಳು, ವಿವಿಧ ಮಹಿಳಾ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು. ಇಸ್ರೋ ಅಜಿತ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪುರೋಹಿತ್ ಕೋಮಲ್ ಕುಮಾರ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಜೆ ರಂಗನಾಥ- ತುಮಕೂರು

ವೇಣೂರು: ಮುನಿಮಹಾರಾಜರ ಪುರಪ್ರವೇಶ

Article Image

ವೇಣೂರು: ಮುನಿಮಹಾರಾಜರ ಪುರಪ್ರವೇಶ

ಪರಮ ಪೂಜ್ಯ ವಾತ್ಸಲ್ಯಮೂರ್ತಿ ಗಣಾಧರ ಆಚಾರ್ಯ ಶ್ರೀ 108 ಕುಂಥುಸಾಗರ ಮಹಾರಾಜರು ಸತ್ಗಂಗ ಸಮೇತರಾಗಿ ವೇಣೂರು ಶ್ರೀ ಬಾಹುಬಲಿ ಕ್ಷೇತ್ರಕ್ಕೆ ಇಂದು ಬೆಳಿಗ್ಗೆ 8.00ಗಂಟೆಗೆ ಪುರಪ್ರವೇಶ ಗೈದಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು, ಕಾರ್ಯದರ್ಶಿಗಳಾದ ವಿ. ಪ್ರವೀಣ್‌ ಕುಮಾರ್‌ ಇಂದ್ರ, ಕೋಶಾಧಿಕಾರಿಗಳಾದ ಜಯರಾಜ್‌ ಕಂಬಳಿ ಮತ್ತು ಸಮಿತಿಯ ಎಲ್ಲಾ ಸದಸ್ಯರು ಹಾಗೂ ಸಮಸ್ತ ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಮುನಿಮಹಾರಾಜರುಗಳು ಇಂದು ಸಂಜೆ 4.00ಗಂಟೆಗೆ ವೇಣೂರಿನಿಂದ ಪೆರಿಂಜೆ ಬಸದಿಗೆ ವಿಹಾರ ಹೊರಡಲಿದ್ದಾರೆ.

ಸವಣಾಲು: ಧಾಮ ಸಂಪ್ರೋಕ್ಷಣ ಮಹೋತ್ಸವ

Article Image

ಸವಣಾಲು: ಧಾಮ ಸಂಪ್ರೋಕ್ಷಣ ಮಹೋತ್ಸವ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಸವಣಾಲು ಗ್ರಾಮದಲ್ಲಿರುವ ಭಗವಾನ್ ಆದಿನಾಥಸ್ವಾಮಿ ಬಸದಿಯು ಜೀಣೋದ್ಧಾರಗೊಂಡಿದ್ದು ಶುಕ್ರವಾರ ಬೆಳಿಗ್ಗೆ ಇಂದ್ರಪ್ರತಿಷ್ಠೆ ಹಾಗೂ ತೋರಣ ಮುಹೂರ್ತದೊಂದಿಗೆ ಧಾಮಸಂಪ್ರೋಕ್ಷಣೆಯ ವಿಧಿ-ವಿಧಾನಗಳು ಶುಭಾರಂಭಗೊಂಡವು. ಪ್ರತಿಷ್ಠಾಚಾರ್ಯರಾದ ಬೆಳ್ತಂಗಡಿಯ ಜಯರಾಜ ಇಂದ್ರರು ಇಂದ್ರಪ್ರತಿಷ್ಠೆಯ ವಿಧಿ-ವಿಧಾನಗಳ ಮಹತ್ವವನ್ನು ವಿವರಿಸಿದರು. ಶುಕ್ರವಾರದಿಂದ ಮೂರು ದಿನಗಳಲ್ಲಿ ನಡೆಯುವ ಪೂಜಾಕಾರ್ಯಕ್ರಮಗಳಲ್ಲಿ ಪುರೋಹಿತರು, ಸೇವಾಕರ್ತರು ಹಾಗೂ ಶ್ರಾವಕರು ಮತ್ತು ಶ್ರಾವಕಿಯರು ಮನ, ವಚನ, ಕಾಯದಿಂದ ತ್ರಿಕರಣಪೂರ್ವಕವಾಗಿ ಪರಿಶುದ್ಧರಾಗಿದ್ದು ಶ್ರದ್ಧಾ-ಭಕ್ತಿಯಿಂದ, ವೃತ-ನಿಯಮಗಳ ಪಾಲನೆಯೊಂದಿಗೆ ಭಾಗವಹಿಸಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು ಎಂದು ಹೇಳಿದರು. ಪ್ರತಿಷ್ಠಾಚಾರ್ಯರುಗಳಾದ ಜಯರಾಜಇಂದ್ರರು ಮತ್ತು ಪುಷ್ಪರಾಜಇಂದ್ರರು, ಸ್ಥಳ ಪುರೋಹಿತರುಗಳಾದ ವೃಷಭರಾಜಇಂದ್ರರ ನೇತೃತ್ವದಲ್ಲಿ ಸಹಪುರೋಹಿತರ ಸಹಭಾಗಿತ್ವದೊಂದಿಗೆ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ವಿಮಾನಶುದ್ಧಿ, ಮುಖವಸ್ತ್ರ ಉದ್ಘಾಟನೆ, ನಾಂದಿಮಂಗಲ ಪೂಜಾವಿಧಾನ, ಕ್ಷೇತ್ರಪಾಲ ಪ್ರತಿಷ್ಠೆ, ನಾಗಪ್ರತಿಷ್ಠೆ ಹಾಗೂ ಭಗವಾನ್ ಆದಿನಾಥಸ್ವಾಮಿಗೆ ೨೪ ಕಲಶ ಅಭಿಷೇಕ ಹಾಗೂ ಮಹಾಪೂಜೆ ನಡೆಯಿತು. ಕಿಶೋರ್ ಹೆಗ್ಡೆ, ಎರ್ಮೆತ್ತೋಡಿಗುತ್ತು , ಉಜಿರೆಯ ಸುರೇಶ್ ಕುಮಾರ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಇಂದು ಶನಿವಾರ ವಾಸ್ತುಪೂಜಾ ವಿಧಾನ, ನವಗ್ರಹಶಾಂತಿ, ಪದ್ಮಾವತಿದೇವಿಗೆ ರಜತಕವಚ ಸಮರ್ಪಣೆ, ಲಕ್ಷ ಹೂವಿನಪೂಜೆ, ಭಗವಾನ್ ಆದಿನಾಥಸ್ವಾಮಿಗೆ ೫೪ ಕಲಶ ಅಭಿಷೇಕ ಮತ್ತು ಮಹಾಪೂಜೆ ನಡೆಯುತ್ತದೆ. ನಾಳೆ, ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಸೇವಾಕರ್ತೃಗಳಾಗಿದ್ದು ಭಗವಾನ್ ಆದಿನಾಥ ಸ್ವಾಮಿ ಪ್ರತಿಷ್ಠೆ ಹಾಗೂ ೧೦೮ ಕಲಶ ಅಭಿಷೇಕ, ಶಿಖರಾರೋಹಣ, ಭಕ್ತಾಮರ ಆರಾಧನೆ, ಮಹಾಪೂಜೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಸಭೆ: ಸಂಜೆ 5 ಗಂಟೆಗೆ ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕರುಗಳಾದ ಹರೀಶ್ ಪೂಂಜ ಮತ್ತು ಕೆ. ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ಹರೀಶ್ ಕುಮಾರ್, ರಕ್ಷಿತ್‌ಶಿವರಾಂ, ಸುಮಂತ್ ಕುಮಾರ್, ಸಂದೀಪ್ ಜೈನ್, ಪ್ರವೀಣ ಕುಮಾರ್ ಇಂದ್ರ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

“ಕರ್ನಾಟಕದ ಪ್ರಾಣೋಪಾಸಕ” ಆಲೂರು ವೆಂಕಟರಾವ ಅವರ 61ನೇ ಪುಣ್ಯಸ್ಮರಣೆ ಕಾರ್ಯಕ್ರಮ

Article Image

“ಕರ್ನಾಟಕದ ಪ್ರಾಣೋಪಾಸಕ” ಆಲೂರು ವೆಂಕಟರಾವ ಅವರ 61ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಅವರ 61ನೇ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು (ಫೆ. 25)ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಸರಳ, ಸುಂದರವಾಗಿ ಸಂಪನ್ನಗೊಂಡಿತು. ಕಾರ್ಯಕ್ರಮದ ಮೊದಲು ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಪ್ರೇಸ್‌ ಇನ್ಫಾರ್ಮೇಶನ ಬ್ಯೂರೊ ಭಾರತ ಸರ್ಕಾರದ ನಿವೃತ್ತ ಪ್ರಿನ್ಸಿಪಲ್ ಡಿ. ಜಿ.ಮನೀಶ ದೇಸಾಯಿಯವರು ಹಾಗೂ ಇತರ ಗಣ್ಯರು ಭವನದ ಆವರಣದೊಳಗಿರುವ ಆಲೂರು ವೆಂಕಟರಾವ ಅವರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಪಣೆ ಮಾಡಿ ನಮನ ಸಲ್ಲಿಸಿದರು. ಮನೀಶ ದೇಸಾಯಿಯವರು ಮಾತನಾಡಿ ಕನ್ನಡದ ಮೂಲ ಕೃಷಿಕ ಆಲೂರು ವೆಂಕಟರಾವ ಅವರ ಹೆಸರಿನ ಮಾತ್ರದಿಂದಲೇ ಪುಳಕಿತಗೊಂಡ ಆ ಕಾಲದ ವಿದ್ಯಾರ್ಥಿಗಳಾದ ನಾವು ಅವರನ್ನು ನೋಡಿರದಿದ್ದರು. ಅವರ ಕನ್ನಡದ ಕಾವ್ಯಗಳಿಂದ ಪ್ರೇರಿತರಾಗಿ ಸಾಧನೆಕೇರಿಯಲ್ಲಿ ಸರ್‌ಕ್ಯೂಲೇಟಿಂಗ್‌ ಲೈಬ್ರರಿ ಪ್ರಾರಂಭಿಸಿ ಅಲ್ಲಿ ಕರ್ನಾಟಕ ಗತವೈಭವ, ಲೋಕಮಾನ್ಯ ತಿಲಕರ ಕನ್ನಡ ಗೀತಾರಹಸ್ಯ ಕನ್ನಡ ಅನುವಾದ ಹಾಗೂ ಇನ್ನಿತರ ಮಹತ್ವದ ಕನ್ನಡ ಕೃತಿಗಳನ್ನು ಸಂಗ್ರಹಿಸಿ ವಿತರಿಸಿದ್ದು ಇಂದಿಗೂ ನನ್ನ ನೆನಪಿನಲ್ಲಿದೆ ಎಂದು ಆಲೂರರ ಕನ್ನಡ ಕಟ್ಟುವ ಕಾರ್ಯಗಳನ್ನು ಸ್ಮರಿಸಿಕೊಂಡರು. ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಾಧ್ಯಾಪಕ, ಸಾಹಿತಿ, ಡಾ. ಜಿನದತ್ತ ಹಡಗಲಿಯವರು ಮಾತನಾಡಿ, ಒಂದು ಕಾಲಕ್ಕೆ ವೈಭವಯುತ ಸಾಮ್ರಾಜ್ಯವೆಂದೇ ಗುರುತಿಸಿಕೊಂಡಿದ್ದ ವಿಜಯನಗರದ ಹಂಪಿಯ ಭಗ್ನಾವಶೇಷಗಳು, ಪಳೆಯುಳಿಕೆಗಳು ತಮ್ಮ ಹೃದಯವನ್ನು ಕಲಕಿ ಬಿಟ್ಟಾಗ ತೀವ್ರ ಹತಾಶೆಯನ್ನುಭವಿಸಿದ ಆಲೂರರು ಆ ದಿನವನ್ನು ತಮ್ಮ ಜೀವನದಲ್ಲಿ ಕ್ರಾಂತಿ ಮಾಡಿದ ದಿನವೆಂದೇ ಭಾವಿಸುತ್ತಾರೆ. ಆ ಕ್ಷಣದಿಂದ ವಿಜಯನಗರದ ಪುನರುತ್ಥಾನ, ಕನ್ನಡ ಕರ್ನಾಟಕತ್ವ, ಕರ್ನಾಟಕ ಏಕೀಕರಣಗಳ ಹೊಸ ಹೊಳಪುಗಳನ್ನು ಕಂಡು ಅವುಗಳ ಸಾಕ್ಷಾತ್ಕಾರವಾಗಿ ಪಣತೊಡುತ್ತಾರೆ. ವಂಗಭಂಗ ಚಳುವಳಿಯ ಕಾವು ಇವರನ್ನು ತಟ್ಟಿ ಮತ್ತಷ್ಟು ದು:ಖವಾಗಿ ನಿಸ್ವಾರ್ಥ ಭಾವನೆಯಿಂದ ಈ ನಾಡು ನನ್ನ ಮನೆ, ಈ ದೇಶ ನನ್ನ ಕುಟುಂಬವೆಂಬ ಸೂತ್ರವನ್ನು ಮೂಲವಾಗಿಸಿಕೊಂಡು ತಮ್ಮ ಹೊರಾಟಕ್ಕೆ ಶ್ರೀಕಾರ ಹಾಕುತ್ತಾರೆ. ಕನಾಟಕ ವಿದ್ಯಾವರ್ಧಕ ಸಂಘ, ವಾಗ್ಬೂಷಣ ಪತ್ರಿಕೆಯ ಸಂಪಾದಕತ್ವ ಮುಂತಾದವುಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ, ಧಾರವಾಡದಲ್ಲಿ 1907ರಲ್ಲಿ ಮೊದಲಬಾರಿ ಕನ್ನಡ ಗ್ರಂಥಕರ್ತರ ಸಮ್ಮೇಳನ ನಡೆಸುತ್ತಾರೆ ಇದರ ಮುಂದುವರಿಕೆಯಾಗಿ ಜರುಗಿದ 3ನೇಯ ಸಮ್ಮೇಳನವು ಈ ನಾಡಿನ ಪ್ರತಿಷ್ಠಿತ ಸಂಸ್ಥೆ “ಕನ್ನಡ ಸಾಹಿತ್ಯ ಪರಿಷತ್ತಿನ" ಹುಟ್ಟಿಗೆ ನಾಂದಿಯಾಗುತ್ತದೆ. ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳಂತಹ ಪುಸ್ತಕಗಳನ್ನು ಪ್ರಕಟಿಸಿ ಮಲಗಿದ ಕನ್ನಡಿಗರತ್ತ ಚಾಟಿ ಬೀಸುತ್ತಾರೆ. ಆಲೂರರ ಇಂಥ ಕ್ರಾಂತಿಕಾರಿ ಹೆಜ್ಜೆಗಳನ್ನು ಸರಿಯಾಗಿಯೇ ಗುರುತಿಸಿದ ವರಕವಿ ಬೇಂದ್ರೆ ಅಲೂರರನ್ನು “ಕರ್ನಾಟಕ ಪ್ರಾಣೋಪಾಸಕ"ರೆಂದು ಹೆಮ್ಮೆಯಿಂದ ಕೊಂಡಾಡುತ್ತಾರೆ. ಹೀಗೆ ಆಲೂರುರೆಂದರೆ ಅದೊಂದು ಕನ್ನಡ ಗುಡಿಯ ಗೋಪೂರವಾಗಿದ್ದು ಕನ್ನಡಗಿರಲ್ಲರ ಪ್ರಾತ: ಸ್ಮರಣೀಯರಾಗಿದ್ದಾರೆ ಎಂದು ಡಾ. ಜಿನದತ್ತ ಹಡಗಲಿಯವರು ಆಲೂರರ ಸಾಧನೆಗಳನ್ನು ಸ್ಮರಿಸಿಕೊಂಡರು. ಟ್ರಸ್ಟ್ ಅಧ್ಯಕ್ಷ ಡಾ. ಪ್ರಮೋದ ಗಾಯಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಎಚ್. ಎ ಕಾಖಂಡಕಿ, ಕವಿ ನರಸಿಂಹ ಪರಾಂಜಪೆ, ಎಸ್.ಎಮ್ ದೇಶಪಾಂಡೆ, ಎಮ್. ಎಮ್ ಚಿಕ್ಕಮಠ, ರಮೇಶ ಪರ್ವತಿಕರ, ಅನಿಲ ಕಾಖಂಡಕಿ, ಮುರಳಿ ಹುಯಿಲಗೋಳ, ಭಾರತಿ ದೇಸಾಯಿ, ಶ್ರೀಕಾಂತ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು. ಗೀತಾ ಆಲೂರ ಪ್ರಾರ್ಥಿಸಿದರು. ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಟ್ರಸ್ಟಿ ಡಾ. ದೀಪಕ ಆಲೂರ ಕಾರ್ಯಕ್ರಮ ನಿರೂಪಿಸಿದರು, ಶ್ರೀನಿವಾಸ ವಾಡಪ್ಪಿ ವಂದಿಸಿದರು.

ಮೂಡುಬಿದಿರೆ: ಪ್ರಥಮ ವಾರ್ಷಿಕೋತ್ಸವ

Article Image

ಮೂಡುಬಿದಿರೆ: ಪ್ರಥಮ ವಾರ್ಷಿಕೋತ್ಸವ

ಮೂಡಬಿದಿರೆ: ಸಂಪೂರ್ಣ ಜೀರ್ಣೋದ್ಧಾರಗೊಂಡ ಶ್ರೀ ಶಾಂತಿನಾತ ಸ್ವಾಮಿ ಬಸದಿ, ಹಿರೇ ಅಮ್ಮನವರ ಬಸದಿ ಹಾಗೂ ಮೇಗಿನ ನೆಲೆಯ ಚತುರ್ವಿಂಶತಿ ತೀರ್ಥಂಕರರ ಬಸದಿ, ದ್ವಜಾಸ್ತಂಭ ಮತ್ತು ಚಂದ್ರಶಾಲೆ ಇದರ ಧಾಮ ಸಂಪ್ರೋಕ್ಷಣೆ ಹಾಗೂ ಪ್ರತಿಷ್ಠಾ ಮಹೋತ್ಸವವು ತಾ. 10.02.2024 ರಿಂದ 16.02.2024ರ ಪರ್ಯಂತ ವೈಭವಯುತವಾಗಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಂಡ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವವು ಮೂಡಬಿದಿರೆ ಶ್ರೀ ಜೈನ ಮಠದ ಪ. ಪೂ. ಭಾರತ ಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ನಾಳೆ (ಫೆ. 26) ಧಾಮ‍್ಕ ವಿಧಿವಿಧಾನಗಳೊಂದಿಗೆ ಜರಗಲಿರುವುದು.

ಪಂಚಕಲ್ಯಾಣ ಮಹೋತ್ಸವ

Article Image

ಪಂಚಕಲ್ಯಾಣ ಮಹೋತ್ಸವ

ಸಾಗರ ತಾಲೂಕಿನ ಸುಳ್ಳಳ್ಳಿ ಅಂಚೆ, ಆವಿಗೆಯಲ್ಲಿ ಭಗವಾನ್ ಶ್ರೀ 1008 ಚಂದ್ರನಾಥ ಸ್ವಾಮಿಯ ಜಿನ - ಚೈತ್ಯಾಲಯವನ್ನು ನೂತನವಾಗಿ ನಿರ್ಮಿಸಿದ್ದು, ಇದರ ಪಂಚಕಲ್ಯಾಣ ಮಹೋತ್ಸವ ಮತ್ತು ಮಾನಸ್ತಂಭೋಪರಿ ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಹಾಗೂ ಕನಕಗಿರಿ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಕಂಬದಹಳ್ಳಿ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು, ಹೊಂಬುಜ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಹಾಗೂ ನರಸಿಂಹರಾಜಪುರ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಇವರುಗಳ ದಿವ್ಯ ಸಾನ್ನಿಧ್ಯದಲ್ಲಿ ಇಂದಿನಿಂದ (ಫೆ.17) ಪ್ರಾರಂಭಗೊಂಡು ದಿನಾಂಕ 21-02-2025ನೇ ಶುಕ್ರವಾರದವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬೆಳ್ತಂಗಡಿ: ವಾರ್ಷಿಕ ಸಮಾರಂಭ

Article Image

ಬೆಳ್ತಂಗಡಿ: ವಾರ್ಷಿಕ ಸಮಾರಂಭ

ಶ್ರೀ ಅತಿಶಯ ಕ್ಷೇತ್ರ ಪರುಷಗುಡ್ಡೆ ಬಸದಿಯ 1008 ಭ|| ಶ್ರೀ ಪಾಶ್ವ೯ನಾಥ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಹಾಗೂ ಶ್ರೀ ಪದ್ಮಾವತೀ ಅಮ್ಮನವರ ಬಿಂಬ ಪ್ರತಿಷ್ಠಾ ಮಹೋತ್ಸವದ ವಾರ್ಷಿಕೋತ್ಸವ ಸಮಾರಂಭವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮಾರ್ಗದರ್ಶನ ಮತ್ತು ಆಶೀರ್ವಾದಗಳೊಂದಿಗೆ ಜರಗಲಿರುವುದು ಹಾಗೂ ಬೆಳಿಗ್ಗೆ 10.00ಗಂಟೆಗೆ ಚತುರ್ವಿಂಶತಿ ತೀರ್ಥಂಕರರ ಚರಣ ಕೂಟಗಳ ದರ್ಶನದ ದಾರಿಯನ್ನು ಲೋಕಾರ್ಪಣೆ ಮಾಡಲಿರುವರು ಹಾಗೂ ಶಾಸಕರ ಅನುದಾನದಿಂದ ಬಸದಿಗೆ ಪ್ರವೇಶಿಸುವ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆಯನ್ನು ಶಾಸಕರಾದ ಹರೀಶ್ ಪೂಂಜಾರವರು ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

ನಲ್ಲೂರು ಜಗತ್ಪಾಲ ಕಡಂಬರಿಗೆ ಸನ್ಮಾನ

Article Image

ನಲ್ಲೂರು ಜಗತ್ಪಾಲ ಕಡಂಬರಿಗೆ ಸನ್ಮಾನ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ 'ಹಿರಿಯ ರೆಡೆಗೆ ಸಾಹಿತ್ಯ ನಡಿಗೆ' ಕಾರ್ಯಕ್ರಮದಲ್ಲಿ ಬಜಗೋಳಿ ನಲ್ಲೂರು ಜಗತ್ಪಾಲ ಕಡಂಬರಿಗೆ ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆಗಾಗಿ ನಲ್ಲೂರು ಗುಣಲಲಿತ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಕಳ ತಾಲೂಕು ಸಮ್ಮೇಳನದ ಸಭಾಧ್ಯಕ್ಷರಾದ ಕೆ ಗುಣಪಾಲ ಕಡಂಬ, ಕ.ಸಾ.ಪ. ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಉದ್ಯಮಿ ಬಜಗೋಳಿ ಡಾ ರವೀಂದ್ರ ಶೆಟ್ಟಿ, ನಿತ್ಯಾನಂದ ಪೈ, ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ರೂಪ ರವೀಂದ್ರ ಶೆಟ್ಟಿ, ನಲ್ಲೂರು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನಾಗೇಶ್, ದೇವದಾಸ ಕೆರೆಮನೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ವರಂಗ: ವಾರ್ಷಿಕ ರಥಯಾತ್ರಾ ಮಹೋತ್ಸವ

Article Image

ವರಂಗ: ವಾರ್ಷಿಕ ರಥಯಾತ್ರಾ ಮಹೋತ್ಸವ

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ವರಂಗದಲ್ಲಿರುವ ಭಗವಾನ್ ಶ್ರೀ 1008 ನೇಮಿನಾಥ ಸ್ವಾಮಿ ಬಸದಿಯ ವಾರ್ಷಿಕ ರಥಯಾತ್ರಾ ಮಹೋತ್ಸವವು ಪರಮ ಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವ ಮತ್ತು ಪಾವನ ಸಾನ್ನಿಧ್ಯದಲ್ಲಿ ನಾಳೆ (ಫೆ.13) ಯಿಂದ ಪ್ರಾರಂಭಗೊಂಡು ಫೆ.17ರವರೆಗೆ ನೆರವೇರಲಿದೆ.

ಪಾಣೆಮಂಗಳೂರು: 72ನೇ ವಾರ್ಷಿಕೋತ್ಸವ

Article Image

ಪಾಣೆಮಂಗಳೂರು: 72ನೇ ವಾರ್ಷಿಕೋತ್ಸವ

ಶ್ರೀ ಕ್ಷೇತ್ರ ಪಾಣೇರ್ ಭ|| 1008 ಶ್ರೀ ಅನಂತನಾಥ ತೀರ್ಥಂಕರ ಜಿನ ಚೈತ್ಯಾಲಯದ 72ನೇ ವಾರ್ಷಿಕೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಡಾ|| ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ ಹಾಗೂ ಶುಭಾಶೀರ್ವಾದಗಳೊಂದಿಗೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಸಹಕಾರದೊಂದಿಗೆ ದಿನಾಂಕ 14-02-2025ನೇ ಶುಕ್ರವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕ ಮಹೋತ್ಸವ

Article Image

ವಾರ್ಷಿಕ ಮಹೋತ್ಸವ

ಬೆಳ್ತಂಗಡಿ ತಾಲೂಕಿನ ಪೆರಿಂಜೆಯಲ್ಲಿರುವ ಶ್ರೀ ಪುಷ್ಪದಂತ ಸ್ವಾಮಿ ಬಸದಿಯ ವಾರ್ಷಿಕ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನಮಠದ ಪ. ಪೂ. ಭಾರತಭೂಷಣ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ, ನವಗ್ರಹ ಶಾಂತಿ 24 ಕಲಶ ಅಭಿಷೇಕ ಹಾಗೂ ಮಹೋತ್ಸವದೊಂದಿಗೆ ಫೆ. 14ರಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

First Previous

Showing 5 of 11 pages

Next Last