Article Image

ಸುಮ್ಮಗುತ್ತು, ಬಂಡಶಾಲೆ: ಭ| ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ

Article Image

ಸುಮ್ಮಗುತ್ತು, ಬಂಡಶಾಲೆ: ಭ| ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ

ಕಾರ್ಕಳ ತಾಲೂಕಿನ ಬಜಗೋಳಿ ಸುಮ್ಮಗುತ್ತು, ಬಂಡಶಾಲೆಯ ಐತಿಹಾಸಿಕ ಪರಮ ಪುನೀತ ಧರ್ಮಶಾಲೆ ತೀರ್ಥ, ಭಗವಾನ್ ಶ್ರೀ ಶ್ರೀ ಶ್ರೀ ಮುನಿಸುವ್ರತ ತೀರ್ಥಂಕರರ ವಾರ್ಷಿಕ ಮಹೋತ್ಸವ ಹಾಗೂ ೧೦೦೮ ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನಮಠದ ಜಗದ್ಗುರು ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಮಾರ್ಗದರ್ಶನ, ದಿವ್ಯ ಉಪಸ್ಥಿತಿ, ನೇತೃತ್ವದಲ್ಲಿ ಜನವರಿ 27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ವೇಣೂರು ಕಲ್ಲು ಬಸದಿ: ಫೆ. 4 - ವಾರ್ಷಿಕ ಮಹೋತ್ಸವ

Article Image

ವೇಣೂರು ಕಲ್ಲು ಬಸದಿ: ಫೆ. 4 - ವಾರ್ಷಿಕ ಮಹೋತ್ಸವ

ವೇಣೂರು ಕಲ್ಲುಬಸದಿ ಸಮುಚ್ಚಯದ ಭ| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಶ್ರೀ ಆದಿನಾಥ ಸ್ವಾಮಿ, ಶ್ರೀ 24 ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಫೆಬ್ರವರಿ 4ರಂದು ಕಾರ್ಕಳ, ದಾನಶಾಲೆ ಶ್ರೀ ಜೈನಮಠದ ಪರಮಪೂಜ್ಯ ‘ಧ್ಯಾನಯೋಗಿ' ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರ ನೇತೃತ್ವದಲ್ಲಿ ಜರಗಲಿರುವುದು ಎಂದು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿ (ರಿ.) ಪ್ರಕಟಣೆಯಲ್ಲಿ ತಿಳಿಸಿದೆ.

ಧರ್ಮಸ್ಥಳ: ಭ| ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 42ನೇ ವರ್ಧಂತ್ಯುತ್ಸವ

Article Image

ಧರ್ಮಸ್ಥಳ: ಭ| ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 42ನೇ ವರ್ಧಂತ್ಯುತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳದ ಭ| ಶ್ರೀ ಬಾಹುಬಲಿ ಮೂರ್ತಿಯ ಪ್ರತಿಷ್ಠಾ ಮಹೋತ್ಸವದ 42ನೇ ವರ್ಧಂತ್ಯುತ್ಸವ ನಿಮಿತ್ತ ಅಗ್ರೋದಕ ಮೆರವಣಿಗೆ ಮತ್ತು 216 ಕಲಶಗಳಿಂದ ಭ| ಶ್ರೀ ಬಾಹುಬಲಿ ಸ್ವಾಮಿಯ ಪಾದಾಭಿಷೇಕ ಕಾರ್ಯಕ್ರಮವು ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ದಿನಾಂಕ 01-02-2024 ರಿಂದ ದಿನಾಂಕ 02-02-2024ರವರೆಗೆ ನೆರವೇರಲಿದೆ.

ಕಾರ್ಕಳ: ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣೆ ಮತ್ತು ಶ್ರೀ ಜೈನ ಮಠದ ನೂತನ ಕಟ್ಟಡದ ಪ್ರವೇಶೋತ್ಸವ

Article Image

ಕಾರ್ಕಳ: ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಧಾಮ ಸಂಪ್ರೋಕ್ಷಣೆ ಮತ್ತು ಶ್ರೀ ಜೈನ ಮಠದ ನೂತನ ಕಟ್ಟಡದ ಪ್ರವೇಶೋತ್ಸವ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪ್ರಾಚೀನ ಕಾರ್ಕಳ ಶ್ರೀ ಜೈನ ಮಠವು ಬೈರವದೇವ ಅರಸರಿಂದ ಸ್ಥಾಪನೆಯಾಗಿದ್ದು, ಇದೀಗ ಶಿಥಿಲಗೊಂಡ ಕಾರಣ ಪೀಠಾಧೀಶರಾಗಿರುವ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಅಪೇಕ್ಷೆಯನ್ನು ಸಾಕಾರಗೊಳಿಸುವ ದೃಷ್ಠಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆ ಹಾಗೂ ನೇತೃತ್ವದಲ್ಲಿ ಮತ್ತು ಸಮಾಜ ಬಾಂಧವರ ಸಹಕಾರದೊಂದಿಗೆ ಸುಂದರವಾದ, ವಿಶಾಲವಾದ ಹಾಗೂ ಆಗಮೋಕ್ತ ಪದ್ಧತಿಯಂತೆ ವಾಸ್ತುವಿನ್ಯಾಸ ಹೊಂದಿರುವ ಮಠದ ನೂತನ ಕಟ್ಟಡದ ನಿರ್ಮಾಣ ಕಾರ್ಯವು ದಿನಾಂಕ 20-08-2022ರಂದು ಶಿಲಾನ್ಯಾಸ ಪೂರ್ವಕ ಪ್ರಾರಂಭಗೊಂಡು ಇದೀಗ ಲೋಕಾರ್ಪಣೆಗೆ ಸಿದ್ಧವಾಗಿದೆ. ಪ.ಪೂ. ೧೦೮ ಶ್ರೀ ಅಮೋಘಕೀರ್ತಿ ಮುನಿಮಹಾರಾಜರು ಮತ್ತು ಪ.ಪೂ. ೧೦೮ ಶ್ರೀ ಅಮರಕೀರ್ತಿ ಮುನಿಮಹಾರಾಜರ ಪಾವನ ಸಾನ್ನಿಧ್ಯದಲ್ಲಿ, ಕಾರ್ಕಳ ಶ್ರೀ ಜೈನ ಮಠದ ಪ.ಪೂ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಮತ್ತು ಸಮಸ್ತ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಭ| ಶ್ರೀ ಚಂದ್ರನಾಥ ಸ್ವಾಮಿ ಬಸದಿ ಧಾಮ ಸಂಪ್ರೋಕ್ಷಣಾ ಮತ್ತು ಶ್ರೀ ಮಠದ ನೂತನ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮವು ದಿನಾಂಕ 24-01-2024ನೇ ಬುಧವಾರದಿಂದ ಮೊದಲ್ಗೊಂಡು ದಿನಾಂಕ 26-01-2024ನೇ ಶುಕ್ರವಾರದ ಪರ್ಯಂತ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರಗಲಿದೆ.

ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭ

Article Image

ಆನೆಕೆರೆ ಚತುರ್ಮುಖ ಕೆರೆ ಬಸದಿ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಐತಿಹಾಸಿಕ ಆನೆಕೆರೆ ಚತುರ್ಮುಖ ಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವವು ಇಂದಿನಿಂದ ಪ್ರಾರಂಭಗೊಂಡು ಜ. 22ರ ವರೆಗೆ ನಡೆಯಲಿದೆ. ಸುಮಾರು 5 ಶತಮಾನಗಳಷ್ಟು ಪ್ರಾಚೀನ ಆನೆಕೆರೆ ಬಸದಿ ಐವರು ತೀರ್ಥಂಕರರ ಭವ್ಯ ಬಿಂಬಗಳಿಂದ ಕೂಡಿದೆ. ಚತುರ್ಮುಖ ಬಸದಿಯ ವಾಸ್ತು ಶೈಲಿಯನ್ನು ಹೊಂದಿರುವ ಕೆರೆ ಬಸದಿಯನ್ನು ಭೈರವರಸರ ವಂಶಸ್ಥ ಪಾಂಡ್ಯನಾಥ ಪಾಂಡ್ಯಪ್ಪೊಡೆಯ 16.05.1545ರಲ್ಲಿ ಕಟ್ಟಿಸಿದರು ಎಂದು ಇತಿಹಾಸ ಹೇಳುತ್ತದೆ. 2022ರಲ್ಲಿ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದ್ದು, ಸುಮಾರು 26 ಎಕರೆ ವಿಸ್ತೀರ್ಣದಲ್ಲಿ ಆನೆಕೆರೆ ಬಸದಿಯು ಶೋಭಿಸುತ್ತಿದೆ. ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಶ್ರೀ ಜೈನಮಠ, ದಾನಶಾಲಾ ಕಾರ್ಕಳ ಇವರ ನೇತೃತ್ವದಲ್ಲಿ ಮತ್ತು ಸಮಸ್ತ ಭಟ್ಟಾರಕರ ಪಾವನ ಸಾನಿಧ್ಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವರ ಸಹಕಾರದೊಂದಿಗೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಕಲ್ಯಾಣ ಮಹೋತ್ಸವವು ನೂತನ ಶಿಲಾಮಂದಿರಲ್ಲಿ ಆಗಮೋಕ್ತ ವಿಧಿ- ವಿಧಾನಗಳೊಂದಿಗೆ ಸಂಪನ್ನಗೊಳ್ಳಲಿದೆ. ನೂತನ ಆನೆಕೆರೆ ಬಸದಿಯು ಸುಂದರವಾದ ಕೆತ್ತನೆಯಲ್ಲಿ ಶಿಲಾಮಯವಾಗಿ ರೂಪುಗೊಂಡ ದ್ವಾರಪಾಲಕರು, ತಿರುಗಿಸಬಹುದಾದಂತಹ ಕಂಬಗಳು, ಪಾಣಿಪೀಠದ ಬುಡದಲ್ಲಿ ಸೂಕ್ಷ್ಮವಾದ ಕೆತ್ತನೆಗಳು, ಶಾಶ್ವತ ವಿದ್ಯುತ್ ದೀಪಾಲಂಕಾರ ಹೀಗೆ ಅನೇಕ ವಿಶೇಷತೆಗಳೊಂದಿಗೆ ಲೋಕಾರ್ಪಣೆಗೆ ಸಿದ್ದವಾಗಿದೆ.

ಫೆ. 22ರಿಂದ ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Article Image

ಫೆ. 22ರಿಂದ ಮಾ. 1: ವೇಣೂರು ಭ| ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವವು ಪರಮಪೂಜ್ಯ ಯುಗಳ ಮುನಿವರ್ಯರಾದ ೧೦೮ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ೧೦೮ ಅಮರಕೀರ್ತಿ ಮುನಿ ಮಹಾರಾಜರ ಪಾವನ ಸಾನಿಧ್ಯ-ಶುಭಾಶೀರ್ವಾದಗಳೊಂದಿಗೆ, ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ʼರಾಜರ್ಷಿʼ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಕಾರ್ಯಾಧ್ಯಕ್ಷತೆಯಲ್ಲಿ ಫೆ. 22ರಿಂದ ಮಾ. 1ರ ತನಕ ಜರಗಲಿದೆ.

ಧರ್ಮದ ಕಾಲಂನಲ್ಲಿ ಜೈನ ಎಂದು ಸೇರಿಸಿ

Article Image

ಧರ್ಮದ ಕಾಲಂನಲ್ಲಿ ಜೈನ ಎಂದು ಸೇರಿಸಿ

ಪಾವಗಡ: ಜೈನ ಧರ್ಮ ವಿಶ್ವಧರ್ಮವಾಗಿದೆ. ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಜೈನಪೀಠಗಳಿವೆ. ಇದೊಂದು ಶ್ರೇಷ್ಠ ಅಹಿಂಸಾ ಧರ್ಮವಾಗಿದೆ. ಹಿಂದಿನ ಜನಸಂಖ್ಯೆಗಿಂತ ಈಗ ಜೈನ ಧರ್ಮೀಯರ ಜನಸಂಖ್ಯೆ ಕ್ಷೀಣಿಸುತ್ತಿದೆ. ಧರ್ಮದ ಕಾಲಂನಲ್ಲಿ ಜೈನ ಎಂದು ಬರೆಯುವಂತೆ ಜೈನ ಸಮಾಜದ ಹಿರಿಯ ಮುಖಂಡ ಬ್ರಹ್ಮದೇವಯ್ಯ ಮನವಿ ಮಾಡಿದರು. ತಾಲ್ಲೂಕಿನ ನಿಡಗಲ್ ಬೆಟ್ಟದಲ್ಲಿ ಶ್ರೀಕೃಷ್ಣಹರಣ ಪಾರ್ಶ್ವನಾಥ ತೀರ್ಥಂಕರರ ಜನುಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಶಳ್ಳಕ್ಕಿರೆ ದಿಗಂಬರ ಜೈನ ಸಮಾಜದ ಅಧ್ಯಕ್ಷ, ಉದ್ಯಮಿ ಹಂಬಣ್ಣನವರು ಕಾರ್ಯಕ್ರಮ ಉದ್ಘಾಟಿಸಿದರು. ನಿಡಗಲ್ ಕಷ್ಟ ಹರಣ ಪಾರ್ಶ್ವನಾಥ ಜನುಮ ದಿನದ ಸಮಿತಿ ಅಧ್ಯಕ್ಷ ಪಿ.ಸುಂದರ ರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಆರ್. ಬಿ. ಜಯಣ್ಣ, ಗೌರಿಪುರ ಪಾರ್ಶ್ವನಾಥ್ ಕುಜ ನಾಗಭೂಷಣ್, ಟ್ರಸ್ಟಿ ಆರ್. ಎಸ್ ಕುಬೇರಪ್ಪ, ಭರತ್, ರಾಜು, ಪ್ರದೀಪ್, ಜೈನ್, ಶೈನ್ ಜೈನ್, ತುಮಕೂರು ಜೈನ ಸಮಾಜದ ನಿರ್ದೇಶಕರಾದ ಬ್ರಹ್ಮ ಪ್ರಕಾಶ್, ಮಂಡಿ ನಾಗರಾಜ್, ಸುನಿಲ್ ಅಮರಾಪುರ ಸೇರಿದಂತೆ ಜೈನ ಮಹಿಳಾ ಮಂಡಳಿಗಳು ಭಾಗವಹಿಸಿದ್ದವು. ನಂತರ ದ್ರವ್ಯ ಅಭಿಷೇಕ ಹರಾಜುಗಳ ಪ್ರಕ್ರಿಯೆ ನಡೆಯಿತು.

First Previous

Showing 5 of 5 pages

Next Last