ಸ್ವ। ಶ್ಯಾಮಲಾದೇವಿ ಸ್ಮರಣಾರ್ಥ ಜೈನ ವಿದ್ಯಾರ್ಥಿ ವೇತನ
ಮಹಾವೀರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಪ್ರತಿವರ್ಷದಂತೆ ಈ ಸಾಲಿನಲ್ಲೂ ಅರ್ಹ ಜೈನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ 'ವಿಶೇಷ ವಿದ್ಯಾರ್ಥಿ ವೇತನ' ನೀಡಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಯಂ ನಿವಾಸಿಗಳಾಗಿರಬೇಕು. ಪ್ರಸ್ತುತ ಪಿ.ಯು.ಸಿ, ಡಿಪ್ಲೋಮ, ಪದವಿ, ಸ್ನಾತಕೋತ್ತರ ಅಥವಾ ಉನ್ನತ ಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು. ಅರ್ಜಿ ಜೊತೆಗೆ ಶೈಕ್ಷಣಿಕ ದಾಖಲೆಗಳ ಪ್ರತಿಗಳು, ಮೊಬೈಲ್ ಸಂಖ್ಯೆ, ಇ- ಮೇಲ್, ಅರ್ಜಿದಾರರ ಭಾವಚಿತ್ರ ಲಗತ್ತಿಸಬೇಕು. ಅರ್ಜಿ ಸಲ್ಲಿಸುವ ವಿಧಾನ: ಭರ್ತಿ ಮಾಡಿದ ಅರ್ಜಿಯನ್ನು mccs.schlr@gmail.com ಗೆ ಇ-ಮೇಲ್ ಮಾಡಿ ಅಥವಾ ಸಮೀಪದ ನಮ್ಮ ಶಾಖೆಗೆ ಸಲ್ಲಿಸಿ. ಅಂತಿಮ ದಿನಾಂಕ: 07/09/2026. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು 10/09/2026 ರಂದು ಸಂಜೆ 4:00 on www.mahaveerasociety.com ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ: ದಿನಾಂಕ: 13-09-2026 ಸಮಯ: ಬೆಳಿಗ್ಗೆ 10:30 ಗಂಟೆಗೆ ಸ್ಥಳ: 'ತಕ್ಷಿಲ', ಬಲ್ಲಾಳ್ ಭಾಗ್, ಮಂಗಳೂರು. ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಹಾಡು ಇತ್ಯಾದಿಗಳಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ನಿಮ್ಮ ವಿದ್ಯಾರ್ಥಿವೇತನ ಅರ್ಜಿಯಲ್ಲಿ ನಮೂದಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
