ನಿತಿನ್ ಹೆಚ್.ಪಿ. ರವರಿಗೆ 'ಸಂಸ್ಕೃತಿ ಸಂರಕ್ಷಕ' ಗೌರವ
Published Date: 24-Jan-2025 Link-Copied
ಕೋಲ್ಕತಾ, ಡಿಸೆಂಬರ್ 30, 2024: ಐಟಿ ತಂತ್ರಜ್ಞ, ಜೈನ ಸಂಶೋಧಕ ಹಾಗೂ www.jainheritagecentres.com (ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ) ನ ಸಂಸ್ಥಾಪಕರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ನಿತಿನ್ ಹೆಚ್.ಪಿ. ರವರ "ಜೈನಧರ್ಮದ ಸಂರಕ್ಷಣೆ ಮತ್ತು ಸಂವರ್ಧನೆ"ಯ ಕಾರ್ಯವನ್ನು ಗುರುತಿಸಿ, ಶ್ರೀ ಭಾರತವಾರ್ಷೀಯ ದಿಗಂಬರ ಜೈನ ತೀರ್ಥಸಂರಕ್ಷಿಣಿ ಮಹಾಸಭಾದ ಪಶ್ಚಿಮ ಬಂಗಾಳ ವಿಭಾಗವು "ಸಂಸ್ಕೃತಿ ಸಂರಕ್ಷಕ" ಎಂಬ ಬಿರುದನ್ನು ನೀಡಿ ಗೌರವಿಸಿದೆ. ಕೋಲ್ಕತ್ತಾದ ಬಡಾ ಬಜಾರ್ ನ ಜೈನಭವನದಲ್ಲಿ 30 ಡಿಸೆಂಬರ್ 2024ರಂದು ನಡೆದ ವಿಶೇಷ ಸಮಾರಂಭದಲ್ಲಿ ಇವರನ್ನು ಸತ್ಕರಿಸಿ ಸನ್ಮಾನಿಸಲಾಯಿತು. ನಿತಿನ್ ರವರು ಕರ್ನಾಟಕ ವಲ್ಲದೇ ಭಾರತದ ಇತರ ರಾಜ್ಯಗಳ ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ ರಾಜ್ಯದ ಜೈನ ಪರಂಪರೆ ಕೇಂದ್ರಗಳಿಗೆ ಕ್ಷೇತ್ರಕಾರ್ಯವನ್ನು ಕೈಗೊಂಡು ಪಶ್ಚಿಮ ಬಂಗಾಳದಲ್ಲಿ ಜೈನಧರ್ಮದ ಕುರಿತು ಕಳೆದ ಎರಡು ವರ್ಷಗಳಿಂದ ವಿಶೇಷ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ದಿಗಂಬರ ಜೈನ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ರಾಜ್ ಕುಮಾರ್ ಸೇಠಿ, ಮಹಾಸಭಾದ ಪಶ್ಚಿಮ ಬಂಗಾಳ ವಿಭಾಗದ ಪದಾಧಿಕಾರಿಗಳು ಹಾಗೂ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.