10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ
Published Date: 08-Jan-2025 Link-Copied
ವೇಣೂರು: ಇಲ್ಲಿನ ಶ್ರೀ ಬಾಹುಬಲಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಜೈನ ಭಾಂಧವರಿಗಾಗಿ 10ನೇ ವರ್ಷದ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು “ಶ್ರೀ ಬಾಹುಬಲಿ ಟ್ರೋಫಿ 2025” ಬಾಹುಬಲಿ ಬೆಟ್ಟದ ಬಳಿ ಇರುವ “ಇಂದ್ರ ಗ್ರೌಂಡ್”ನಲ್ಲಿ ಜ. 04ರಂದು ನಡೆಯಿತು. ಮೂಡುಬಿದಿರೆ ಶ್ರೀ ಜೈನ ಮಠದ ಭಾರತಭೂಷಣ ಪ. ಪೂ. ಡಾ| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರು ಪಾವನ ಸಾನ್ನಿಧ್ಯವಹಿಸಿ, ಕ್ರೀಡೆಯ ಬಗ್ಗೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿ ಆಶೀರ್ವಚನವನ್ನಿತ್ತರು. ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಸುಮಂತ್ ಜೈನ್ ನೆರವೇರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ, ದ.ಕ, ಜೈನ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾದ ವಿನಯ್ ಹೆಗ್ಡೆ ನಾರಾವಿ ವಹಿಸಿದ್ದರು. ಮುಖ್ಯ ಅತಿಥಿಗಳಾದ ವೇಣೂರಿನ ಪದ್ಮಾಂಬ ಸಮೂಹ ಸಂಸ್ಥೆಗಳ ಮಾಲಕರಾದ ಜಿನರಾಜ್ ಜೈನ್, ಜೈನ್ ಮಿಲನ್ ಅಧ್ಯಕ್ಷರಾದ ಸುಕುಮಾರ್ ಜೈನ್, ಬಾಹುಬಲಿ ಯುವಜನ ಸಂಘದ ಅಧ್ಯಕ್ಷರಾದ ಪ್ರಭಾಚಂದ್ರ ಜೈನ್, ಶಮಂತ್ ಕುಮಾರ್ ಜೈನ್ ಕಳೆಂಜಿರೋಡಿ ಪಡಂಗಡಿ, ಸತ್ಯಪ್ರಸಾದ್ ವಿ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ| ಕೆ. ರವೀಂದ್ರನಾಥ್ ಪ್ರಸಾದ್, ಡಾ. ಜಯಕೀರ್ತಿಜೈನ್, ಸತೀಶ್ ಕೊಂಬ, ಜಿನರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು. ನಿಧಿ, ಸುಶ್ಮಿತಾ, ಋತ್ವಿರವರು ಪ್ರಾರ್ಥಿಸಿದರು. ನಿಧಿರವರು ಸ್ವಾಗತಿಸಿ, ಮಹಾವೀರ ಜೈನ್ ಮೂಡುಕೋಡಿಗುತ್ತುರವರು ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ನಡೆದು. ಜ. 05ರಂದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿನಯ ಕುಮಾರ್ ಜೈನ್‌ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಶಾಂತ್ ಕರಿಮುಗೇರು, ಸಂಭಾಷಣೆ ಉದಯಕುಮಾರ್, ಜಿನರಾಜ್ ಜೈನ್, ಸುದತ್ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸನ್ಮತ್‌ರಾಜ್ ನಿರೂಪಿಸಿದರು. ವಿಜೇತರ ಪಟ್ಟಿ: ಪ್ರಥಮ ಬಹುಮಾನ: ಬಳಂಜ ಟೀಮ್ ದ್ವಿತೀಯ ಬಹುಮಾನ: ಜೈನ್ ಫ್ರೆಂಡ್ಸ್ ಮೂಡುಬಿದಿರೆ ತೃತೀಯ ಬಹುಮಾನ: ಶ್ರೀ ಬಾಹುಬಲಿ ವೇಣೂರು ಚತುರ್ಥ ಬಹುಮಾನ: ಅರ್ವ ಟೀಮ್