ಮಲೆನಾಡು ಜೈನ್ ಮಿಲನ್ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾರ್ ರಾಜಶೇಖರಯ್ಯ ಜನ್ಮ ಶತಮಾನೋತ್ಸವ
Published Date: 26-Nov-2024 Link-Copied
ನ.16: ಮೇಲ್ಕಂಡ ಸಂಸ್ಥೆಯ ಆಶ್ರಯದಲ್ಲಿ ಶೃಂಗೇರಿ ಸ್ವಾತಂತ್ರ್ಯ ಹೋರಾಟಗಾರ ಶೃಂಗೇರಿ ಚಿನಿವಾಶ್ ರಾಜಶೇಖರಯ್ಯನವರ ಜನ್ಮ ಶತಮಾನೋತ್ಸವವನ್ನು ಶೃಂಗೇರಿ ಬಸದಿ ಆವರಣದಲ್ಲಿ ಆಚರಿಸಲಾಯಿತು. ಚಿನಿವಾಶ್ ರಾಜಶೇಖರಯ್ಯನವರ ಮಗಳು ಕೀರ್ತಿಲತಾ ಮಲ್ಲಪ್ರಸಾದ್ ಶ್ರೀಯುತರ ಸ್ಮರಣಾರ್ಥ ಹತ್ತು ಜನ ಫಲಾನುಭವಿಗಳಿಗೆ ತಲಾ ಹತ್ತು ಸಾವಿರ ರೂ. ಸಹಾಯಧನ ನೀಡಿದರು. ಮಿಲನ್‌ನ ಅಧ್ಯಕ್ಷ ಶ್ರೇಣಿಕ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಾರವಿ ಹಾಗೂ ಪ್ರವೀಣ್ ಪೂಜಾರಿ ಅತಿಥಿಗಳಾಗಿ ಆಗಮಿಸಿದ್ದರು. ಜೇಸಿ ಟ್ರೈನರ್ ಎನ್. ಪಿ. ಪಾಂಡುರಂಗ ರಾಜಶೇಖರಯ್ಯನವರ ಗುಣಗಾನ ಮಾಡಿದರು. ಕೀರ್ತಿಲತಾ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ| ನಿರಂಜನ್ ಸ್ವಾಗತಿಸಿ ಶುಭಾಶ್ಚಂದ್ರ ವಂದಿಸಿದರು ನಂತರ ಜೈನ ಬಸದಿಯಲ್ಲಿ ಮಿಲನ್ ಸದಸ್ಯರು ಶ್ರದ್ಧಾಭಕ್ತಿಯೊಂದಿಗೆ ದೀಪೋತ್ಸವ ಆಚರಿಸಿದು. ಶಶಿಪ್ರಭಾ ಶಾಂತಕುಮಾರ್ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ಶ್ರಾವಕಿಯರು ನಡೆಸಿಕೊಟ್ಟರು.