ಪುತ್ತೂರು: ಮಂಗಳೂರು ವಿಭಾಗದ ಮಿಲನ್ ಪದಾಧಿಕಾರಿಗಳ ಕಾರ್ಯಗಾರ
Published Date: 05-Oct-2024 Link-Copied
ಪುತ್ತೂರು: ಭಾರತೀಯ ಜೈನ್ ಮಿಲನ್ ವಲಯ - 8 ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ವಿಭಾಗದ ಎಲ್ಲಾ ಮಿಲನ್ ಪದಾಧಿಕಾರಿಗಳ ಕಾರ್ಯಗಾರವು ಪುತ್ತೂರು ಜೈನ್ ಮಿಲನ್ ಆತಿಥೇಯದಲ್ಲಿ ಮಹಾವೀರ ವೆಂಚರ್‌ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸೋನಿಯ ಯಶೋವರ್ಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ವಲಯ - 8 ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್ ಉಡುಪಿ, ಉಪಾಧ್ಯಕ್ಷ ಸುದರ್ಶನ್ ಜೈನ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಂಜಿನಿಯರ್ ಹಾಗೂ ಉದ್ಯಮಿ ವಿ.ಕೆ ಜೈನ್ ಪುತ್ತೂರು, ಭಾರತೀಯ ಜೈನ್ ಮಿಲನ್ ವಲಯ -8 ರ ಉಪಾಧ್ಯಕ್ಷ ಜಿತೇಶ್ ಜೈನ್ ಮಂಗಳೂರು ಭಾಗವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ವಲಯದ ಎಲ್ಲಾ ನಿರ್ದೇಶಕರುಗಳು, ಸುಭಾಶ್ಚಂದ್ರ ಜೈನ್ ಕಾರ್ಯದರ್ಶಿ ವಲಯ-8 ಮತ್ತು ಪುತ್ತೂರು ಜೈನ್ ಮಿಲನ್ ಅಧ್ಯಕ್ಷ ಸತೀಶ್ ಪಡಿವಾಳ್, ಕಾರ್ಯದರ್ಶಿ ರಾಜೇಶ್ ಕುಮಾರ್ ಪಿ, ಕೋಶಾಧಿಕಾರಿ ನರೇಂದ್ರ ಪಡಿವಾಳ್ ಆಸೀನರಾಗಿದ್ದರು.. ವಲಯ - 8ರ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿ, ಜೈನ್ ಮಿಲನ್ ಪುತ್ತೂರು ಅಧ್ಯಕ್ಷ ಸತೀಶ್ ಪಡಿವಾಳ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಕುಮಾರ್ ಪಿ. ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 125 ಜಿನ ವೀರ, ವೀರಾಂಗನೆಯವರು ಭಾಗವಹಿಸಿದ್ದರು.