ಭಾರತೀಯ ಜೈನ್ ಮಿಲನ್ ಮಾಸಿಕ ಸಭೆ


Logo

Published Date: 17-Jan-2024 Link-Copied

ಬೆಂಗಳೂರು: ಇಲ್ಲಿಯ ರತ್ನತ್ರಯ ಜೈನ್ ಮಿಲನಿನ ಮಾಸಿಕ ಸಭೆಯು ಶ್ರೀ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಜ. 6ರಂದು ಜರುಗಿತು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲರಾದ ನಾಗಶ್ರೀ ಮುಪ್ಪಾನೆ ಆಗಮಿಸಿದ್ದರು. ಗಣ್ಯರೆಲ್ಲರೂ ಸೇರಿ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ ಕಾರ್ಯಕ್ರಮ ಪ್ರಾರಂಭವಾಯಿತು. ಪೂರ್ಣಿಮಾರವರು ಡಿಸೆಂಬರ್ ತಿಂಗಳಲ್ಲಿ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬವನ್ನು ಅಚರಿಸಿಕೊಂಡ ಮಿಲನ್ ಸದಸ್ಯರಿಗೆ ಶುಭಕೋರಿದರು. ಪದ್ಮಾ ಸೂರಿರವರು ಮಿಲನಿನ ನಡಾವಳಿಯನ್ನು ವಾಚಿಸಿದರು. ನಂತರ ಬೆಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದ ಮಿಲನಿನ ಸದಸ್ಯರನ್ನು ಅಭಿನಂದಿಸಲಾಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಗಶ್ರೀ ಮುಪ್ಪಾನೆಯವರು, “ಜೈನ ಧರ್ಮದಲ್ಲಿ ಭಟ್ಟಾರಕ ಮಹತ್ವ, ಜೈನ ಮಠ ಮತ್ತು ಆಸ್ತಿ ಸಂರಕ್ಷಸಿಕೊಳ್ಳುವಲ್ಲಿ ನಮ್ಮ ಪಾತ್ರ” ಎಂಬ ವಿಷಯದ ಬಗ್ಗೆ ಕೂಲಂಕುಷವಾಗಿ ಮಾತನಾಡಿ ಅರಿವು ಮೂಡಿಸಿದರು. ನವೀನ್ ಕುಮಾರ್ ಗುಬ್ಬಿರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರೇಮಾ ಸುಖಾನಂದ ಉಪಸ್ಥಿತರಿದ್ದರು. ಅನಂತಕುಮಾರಿರವರು ಸ್ವಾಗತಿಸಿ, ಶ್ವೇತಾ ನವೀನ್ ವಂದಿಸಿದರು. ಧೀರಜ್ ಜೈನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅತಿಥ್ಯವನ್ನು ಪದ್ಮರಾಜ್ ಹಾಗೂ ಅನಂತ ಕುಮಾರಿರವರು ವಹಿಸಿಕೊಂಡಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img