ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 2ನೇ ದಿನದ ಕಾರ್ಯಕ್ರಮ
Published Date: 23-Sep-2024 Link-Copied
ಸಮುದ್ರ ಯಾರನ್ನು ಮುಳುಗಿಸುವುದಿಲ್ಲ. ದೋಣಿಯಲ್ಲಿರುವ ದೋಷ ಮುಳುಗಿಸುತ್ತದೆ. ವ್ಯಕ್ತಿಯ ದುರಭ್ಯಾಸ ವ್ಯಕ್ತಿಯನ್ನು ಮುಗಿಸುತ್ತದೆ ಎಂದು ವಿವೇಕ್ ವಿ. ಪಾಯಸ್ ನುಡಿದರು. ಭಜಕನಿಗೆ ಕಾಳಜಿ ಇರಬೇಕು, ಜ್ಞಾನ ಇರಬೇಕು, ಭಕ್ತಿ-ಶ್ರದ್ಧೆ ಇರಬೇಕು. ಭಕ್ತಿ ಇಲ್ಲದ ಭಜನೆ ವ್ಯರ್ಥ. ವ್ಯಸನದಲ್ಲಿ ಬಿದ್ದವ ವ್ಯಸನದಲ್ಲಿ ಸಾಯುತ್ತಾನೆ. ವ್ಯಸನಿಯಾದ ವ್ಯಕ್ತಿಯನ್ನು ಕುಟುಂಬ, ಸಮಾಜ ದೂರ ಮಾಡುತ್ತದೆ. ವ್ಯಕ್ತಿಯ ಸೋಲಿಗೆ ದೌರ್ಬಲ್ಯಗಳೆ ಮೂಲ ಕಾರಣವಾಗಿದೆ. ಯಾವ ಹೆಣ್ಣಿಗೂ ಕುಡುಕ ಗಂಡ ಬೇಡ, ಯಾವ ಕುಟುಂಬಕ್ಕೂ ವ್ಯಸನಿಯಾದವ ಬೇಡ, ಯಾವ ದೇವರಿಗೂ ಕುಡುಕ ಭಕ್ತ ಬೇಡ ಎಂದು ಭಜನಾ ಕಮ್ಮಟದ 2ನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ “ಆರೋಗ್ಯಕರ ಅಭ್ಯಾಸಗಳ ಕುರಿತು” ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್ ರವರು ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಷಾ ಹೆಬ್ಬಾರ್, ಸಂಗೀತ ವಿದುಷಿ ಮಣಿಪಾಲ ಹಾಗೂ ಮನೋರಮ ತೋಳ್ಪಾಡಿತ್ತಾಯ, ಸುನಿಲ್ ಕೊಪ್ಪ ಇವರು ಭಜನಾ ಹಾಡುಗಳನ್ನು 176 ಮಂದಿ ಭಜಕರಿಗೆ ಕಲಿಸಿಕೊಟ್ಟರು. ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಉಪಸ್ಥಿತರಿದ್ದರು. ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್‌ರವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು, ಪೂರ್ಣಿಮಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಎಮ್ ರಂಗ ಶಿಕ್ಷಣ ಕೇಂದ್ರ, ಉಜಿರೆ ಇವರು ‘ಬೇಂದ್ರೆ’ ನಾಟಕವನ್ನು ಪ್ರದರ್ಶಿಸಿದರು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಸದಸ್ಯರಾದ ಸತೀಶ್ ಪೈ, ಭವಾನಿ, ಮೋಹನ್ ಶೆಟ್ಟಿ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಶ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಶಿಬಿರಾರ್ಥಿಗಳಾಗಿ ರಾಘವೇಂದ್ರ, ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.