ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಸಂಯಮ
Published Date: 12-Sep-2024 Link-Copied
ಸಣ್ಣ ವಯಸ್ಸಿನಲ್ಲೇ “ಬಿಸಿನೆಸ್ ಐಕಾನ್" ಎಂದು ಹೆಸರು ಮಾಡಿರುವ ಅವನು ದಾರಿಯಲ್ಲಿ ಮುನಿ ಮಹಾರಾಜರನ್ನು ನೋಡಿ “ಜೀವನದಲ್ಲಿ ಸಾಧಿಸುವುದನ್ನು ಬಿಟ್ಟು ಇಷ್ಟು ಸಣ್ಣ ವಯಸ್ಸಿನಲ್ಲಿ ಯಾಕೆ ವೈರಾಗ್ಯ ತಾಳುತ್ತಾರೆ ಎಂದು ಡ್ರೈವರ್ ಬಳಿ ಹೇಳಿದಾಗ ಯಾವತ್ತೂ ಹಿಂತುರುಗಿ ಮಾತಾನಾಡದ ಡ್ರೈವರ್ ಕಾರ್ ನಿಲ್ಲಿಸಿ ಅಂತಹ ಮುನಿಗಳ ಕಾಲ ಧೂಳಿಗೆ ಸಮವಲ್ಲ ನಾವು ನೀವೂ.. ನೀವು ನೋಡಿದ ಇಬ್ಬರೂ ಮುನಿಗಳು ಕೋಟ್ಯಾಧಿಪತಿಗಳು ಆದರೆ ಅದೆಲ್ಲ ಬಿಟ್ಟು ವೈರಾಗ್ಯ ಭಾವದಿಂದ ದೀಕ್ಷೆ ತೆಗೆದುಕೊಂಡು ಅವರ ಆತ್ಮಕಲ್ಯಾಣ ಮಾಡುತ್ತಾ ಭವ್ಯ ಜೀವಿಗಳ ಕಲ್ಯಾಣವನ್ನು ಮಾಡುತ್ತಿದ್ದಾರೆ. ಎಂದಾಗ ಆತ ಅದೇ ಮುನಿಗಳ ಬಳಿ ತನ್ನ ಕಾರು ಚಾಲಕನ ಜೊತೆಗೆ ಹೋಗಿ “ನಾವಿರುವ ಜಗತ್ತಿನಲ್ಲಿ ನೀವು ಸಹ ಇದ್ದು ಯಾವುದೇ ಭೋಗಕ್ಕೆ ಆಕರ್ಷಿಸಲ್ಪಡದೇ ಹೇಗಿರುತ್ತೀರಿ?" ಎಂದು ಕೇಳಿದ. ಮುನಿಗಳು ಉತ್ತರಿಸುತ್ತಾ "ನಾವು ಪಂಚೇಂದ್ರಿಯಗಳ ಅಧೀನತೆಯಲ್ಲಿ ಇಲ್ಲದೇ ನಮ್ಮ ವಿವೇಕತೆಯ ಅಧೀನತೆಯಲ್ಲಿದ್ದು ಇಂದ್ರಿಯಗಳ ನಿಗ್ರಹದಲ್ಲಿದ್ದು ಸಂಯಮವನ್ನು ಪಾಲಿಸುತ್ತೇವೆ. ಈ ಸಂಯಮದ ಪಾಲನೆಯಿಂದ ಯಾವುದೇ ವಿಕಾರತೆಗೆ ಒಳಗಾಗದೇ ಆತ್ಮ ಕಲ್ಯಾಣದ ಬೆಲೆ ಅರಿತವನಿಗೆ ಸಂಯಮದ ಪಾಲನೆಯ ಮನಸ್ಸು ಅಂತರಾತ್ಮದಿಂದ ಆಗುತ್ತದೆ". ಎಂದಾಗ ಆ ಇಬ್ಬರೂ ಮುನಿಗಳಿಬ್ಬರ ಕಾಲಿಗೆ ಬಿದ್ದು ಆ ಪ್ರಸಿದ್ಧ ವ್ಯಾಪಾರಸ್ಥ ಕೆಲವೇ ವರುಷಗಳಲ್ಲಿ ತನ್ನ ವ್ಯವಹಾರವನ್ನು ಮಗನಿಗೆ ವಹಿಸಿ ದೀಕ್ಷೆ ತೆಗೆದುಕೊಳ್ಳುತ್ತಾನೆ. ಸಂಯಮದ ಪಾಲನೆಯಿಂದ ಲೌಖಿಕ ಸುಖದೊಂದಿಗೆ ಪಾರಮಾರ್ಥಿಕ ಸುಖ ದೊರೆತು ಆತ್ಮ ಕಲ್ಯಾಣವಾಗುತ್ತದೆ ಶ್ವೇತಾ ನಿಹಾಲ್ ಜೈನ್