ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಶೌಚ
Published Date: 10-Sep-2024 Link-Copied
ಆ ವ್ಯಾಪಾರಸ್ಥ ಇನ್ನೇನು ತನ್ನ ಕಾರಲ್ಲಿ ಕುಳಿತು ಡ್ರೈವ್ ಮಾಡಬೇಕೆನ್ನುವಷ್ಟರಲ್ಲಿ ಅವನ ಪರ್ಸ್ ಕಳೆದುಹೋಗಿತ್ತು, ಕೂಡಲೇ ಆಗಷ್ಟೇ ಹೋಗಿದ್ದ ದೇವಸ್ಥಾನದಲ್ಲೂ ಪರ್ಸ್ ದೊರೆಯದಿದ್ದಾಗ ನಿರಾಶೆಯಲ್ಲಿ ಇನ್ನೇನು ಕಾರಲ್ಲಿ ಕೂರಬೇಕೆನ್ನುವಷ್ಟರಲ್ಲಿ ಭಿಕ್ಷುಕನೊಬ್ಬ ಕುಂಟುತ್ತಾ ಆ ವ್ಯಾಪಾರಸ್ಥನನ್ನು ಕೂಗಿ ರ್ಪಟ್ಟು “ನಿಮ್ಮ ಪರ್ಸ್ ಇಲ್ಲೇ ಬಿದ್ದಿತ್ತು. ನಿಮ್ಮನ್ನು ಎಷ್ಟು ಕೂಗಿ ಕರೆದರೂ ನೀವು ನೋಡ್ಲೆ ಇಲ್ಲ ಎಂದಾಗ ಅವನ ಕಣ್ಣುಗಳು ತುಂಬಿ ಬಂದು ಪರ್ಸ್‌ನಲ್ಲಿದ್ದ ಸ್ವಲ್ಪ ಹಣ ವ್ಯಾಪಾರಸ್ಥ ಭಿಕ್ಷುಕನಿಗೆ ಕೊಟ್ಟಾಗ ಭಿಕ್ಷುಕ ಒಂದು ಪೈಸೆಯನ್ನು ತೆಗೆದುಕೊಳ್ಳದೇ ಇವತ್ತಿಗೆ ನನಗೆ ಎಷ್ಟು ಬೇಕಿದೆ ಅಷ್ಟು ಹಣ ದೊರೆತಿದೆ ಇನ್ನೊಮ್ಮೆ ಈ ಕಡೆ ಬಂದಾಗ ಹೊಟ್ಟೆಗೆ ಇಲ್ಲದಿದ್ದಾಗ ಹಣ ಕೊಡಿ" ಎಂದಷ್ಟೇ ಹೇಳಿ ಕುಂಟುತ್ತಾ ತನ್ನ ಜಾಗಕ್ಕೆ ಹಿಂತಿರುಗಿದ. ಆ ಸಮಯಕ್ಕೆ ವ್ಯಾಪಾರಸ್ಥನಿಗೆ ಲೋಭದ ಆಸೆಯಿಂದ ಗೆಳೆಯನೇ ಕೊಡಿಸಿದ ಪ್ರಾಜೆಕ್ಟನ್ನು ಗೆಳೆಯನನ್ನು ಬಿಟ್ಟು ಮಾಡಲು ಹೊರಟಿರುವುದಕ್ಕೆ ಪಶ್ಚಾತ್ತಾಪಪಟ್ಟು ಇಂತಹ ಭಿಕ್ಷುಕನೇ ಲೋಭವನ್ನು ಬಿಟ್ಟು ಯೋಚಿಸುತ್ತಿರುವಾಗ ನಾನೆಷ್ಟು ನೀಚ ಎಂದೆನಿಸಿತು. ಲೋಭ ಕಷಾಯ ಬದುಕಿನ ನೆಮ್ಮದಿಯನ್ನು ಕ್ಷೀಣಗೊಳಿಸುತ್ತದೆ. ಹಾಗೆ ಲೋಭ ಮನಸ್ಸಿನ ಮಲಿನತೆಯನ್ನು ಮುಕ್ತಗೊಳಿಸಿ ಆತ್ಮ ಕಲ್ಯಾಣಕ್ಕೆ ಪ್ರೇರಣಿಯಾಗುತ್ತದೆ ಎನ್ನುವ ಮಾತು ಎಲ್ಲೋ ಓದಿರುವುದು ಅವನಿಗೆ ನೆನಪಾಗಿ ಗೆಳೆಯನಲ್ಲಿ ಮನಸ್ಸಿನಲ್ಲೇ ಕ್ಷಮೆ ಕೇಳಿದ. ಲೋಭದ ಆಭಾವವೇ ಭಾವದ ಪರಿಶುದ್ಧತೆ. ಉತ್ತಮ ಶೌಚ ಧರ್ಮ ಲೌಖಿಕ ಮತ್ತು ಪಾರಮಾರ್ಥಿಕ ಜೀವನದ ಅಭ್ಯುದಕ್ಕೂ ಸಂಜೀವಿನಿ. ಶ್ವೇತಾ ನಿಹಾಲ್ ಜೈನ್