ದಶಧರ್ಮಗಳಲ್ಲಿ ನ್ಯಾನೋ ಕಥೆ ಆರ್ಜವ ಧರ್ಮ


Logo

Published Date: 09-Sep-2024 Link-Copied

ಉತ್ತಮ ಆರ್ಜವ ಧರ್ಮ : ಯೋಗಗಳ ವಕ್ರತೆ ಇಲ್ಲದಿರುವುದೇ ಆರ್ಜವ, ಅಂದರೆ ಕಪಟತೆ, ಕುಟಿಲತೆ, ಮಾಯಾಚಾರದಿಂದ ದೂರಯಿರುವುದು. ಕಾರ್ಯ, ಕೃತಿ, ಮನಸ್ಸು ಈ ಮೂರರಲ್ಲೂ ಏಕತೆಯಲ್ಲಿರುವುದು.ಅನ್ಯರ ಎದುರು ಹೇಗೆ ನಮ್ಮ ನುಡಿ ವರ್ತನೆ ಇರುವುದೋ ಅದೇ ರೀತಿ ಅವರು ಸಮ್ಮುಖದಲ್ಲಿ ಇಲ್ಲದೇ ಇದ್ದಾಗ ಅದೇ ಗೌರವ ಅಭಿಮಾನದಿಂದ ಇರುವುದು. ದಶಧರ್ಮಗಳಲ್ಲಿ ನ್ಯಾನೋ ಕಥೆ ಆರ್ಜವ ಧರ್ಮ ಅವರಿಬ್ಬರು ಒಂದೇ ಶಾಲಾ ಸಹಪಾಠಿಗಳು, ಒಬ್ಬ ಕಂಪನಿಯಲ್ಲಿ ಅ ಉದ್ಯೋಗದಲ್ಲಿದ್ದರೆ ಮತ್ತೊಬ್ಬ ನಿರುದ್ಯೋಗಿಯಾಗಿದ್ದ. ಉದ್ಯೋಗಕ್ಕಾಗಿ ಗೆಳೆಯನಲ್ಲಿ ಅವಕಾಶ ಕೇಳುತ್ತಿದ್ದಾಗ, ಗೆಳೆಯ ತನ್ನ ಪರಿಚಯಸ್ಥರ ಕಂಪನಿಯಲ್ಲಿ ಉದ್ಯೋಗ ಕೊಡಿಸಿದ, ಉದ್ಯೋಗ ದೊರೆತ ಕೆಲವೇ ತಿಂಗಳಲ್ಲಿ ವೃತ್ತಿಯಲ್ಲಿ ಬಹು ಬೇಗನೆ ಪ್ರಗತಿ ಕಂಡಾಗ ಅವನ ಏಳಿಗೆ ಉದ್ಯೋಗ ಕೊಡಿಸಿದವನಿಗೆ ಸಹಿಸಲಾಗಲಿಲ್ಲ, ನಾನೇ ಉದ್ಯೋಗ ಕೊಡಿಸಿ ಈಗ ನನಗಿಂತಲೂ ಹೆಚ್ಚಿನ ಸಂಬಳ ಪಡೆಯುತ್ತಿದ್ದಾನೆ ಎನ್ನುವ ಇರ್ಷಾ ಭಾವನೆಯಿಂದ ಅವನು ಉದ್ಯೋಗ ಕಳೆದು ಕೊಳ್ಳುವಂತೆ ಮಾಡಿದ. ಒಂದು ಸಂದರ್ಭದಲ್ಲಿ ಟಿವಿ ಪರದೆ ಮೇಲೆ ಪಂಡಿತರೊಬ್ಬರು ಆರ್ಜವ ಧರ್ಮದ ವ್ಯಾಖ್ಯಾನ ಮಾಡುತ್ತಿದ್ದರು "ನಾವು ಕಾಯಾ ವಾಚಾ ಮನಸಾ ಮೂರರಲ್ಲಿ ಏಕತೆ ಸಾಧಿಸಿ, ನುಡಿದಂತೆ ನಡೆಯಬೇಕು. ಕಪಟತೆಯಿಲ್ಲದೆ, ಇನ್ನೊಬ್ಬರಿಗೆ ಹಾನಿಯನ್ನು ಮಾಡದೇ ಬದುಕಬೇಕು. ಎಲ್ಲರಲ್ಲೂ ಸರಳಭಾವದಿಂದಯಿರುವುದೇ ಆರ್ಜವ ಧರ್ಮ "ಆರ್ಜವ ಧರ್ಮ ಪಾಲನೆಯಿಂದ ಮನಸ್ಸಿನ ಕಷಾಯಗಳು ಶಮನಗೊಳ್ಳುವುದರೊಂದಿಗೆ ಉತ್ತಮ ಭವ ಪ್ರಾಪ್ತಿಯಾಗುವುದು, "ಪಂಡಿತರ ಮಾತು ಕೇಳಿ, ಕೂಡಲೇ ಗೆಳೆಯನ ಮುಂದೆ ತಾನು ಮಾಡಿದ ದ್ರೋಹವನ್ನು ಹೇಳಿಕೊಂಡು ನಿನಗೆ ಉದ್ಯೋಗ ದೊರೆಯಲು ಹೇಗೆ ನಾನು ಕಾರಣನೋ ಹಾಗೆಯೇ ನನ್ನ ಕುಟೀಲ ಬುದ್ದಿಯಿಂದ ನಿನ್ನ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದೆ ಎಂದು ಅವನ ಎದುರೇ ಮರುಗಿದ. ತನ್ನ ಪಾಪದ ಕೆಲಸಕ್ಕಾಗಿ ಪಾಶ್ಚಾತ್ತಾಪ ಪಟ್ಟು ಗೆಳೆಯ ಉದ್ಯೋಗ ಪಡೆಯುವ ತನಕ ಅವನ ಖರ್ಚು ಎಲ್ಲವನ್ನು ಅವನೇ ನೋಡಿಕೊಂಡ, ಮುಂದೆ ಇಬ್ಬರೂ ಒಂದು ವ್ಯವಹಾರದಲ್ಲಿ ಯಶಸ್ವಿಯಾಗಿ ದಾನ ಧರ್ಮ ಪೂಜೆಯಲ್ಲಿ ತಮ್ಮ ಜೀವನ ಕಳೆದರು. ಉತ್ತಮ ಆರ್ಜವ ಧರ್ಮ ಇಹ ಪರದಲ್ಲೂ ಸನ್ಮಮಂಗಲ ಉಂಟಾಗುತ್ತದೆ. ಶ್ವೇತಾ ನಿಹಾಲ್ ಜೈನ್

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img