ದಶಲಕ್ಷಣ ಪರ್ವದ ಉದ್ಘಾಟನಾ ಸಮಾರಂಭ


Logo

Published Date: 09-Sep-2024 Link-Copied

ವೇಣೂರಿನಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ (ರಿ.) ವತಿಯಿಂದ ನಡೆಯುತ್ತಿರುವ ದಶಲಕ್ಷಣ ಪರ್ವ ಆಚರಣೆಯ ಉದ್ಘಾಟನಾ ಸಮಾರಂಭವು ಇಂದು (ಅ.08ರಂದು) ಶ್ರೀ ಬಾಹುಬಲಿ ಕ್ಷೇತ್ರ (ಯಾತ್ರಿ ನಿವಾಸ)ದಲ್ಲಿ ನಡೆಯಿತು. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಜರುಗಿ, ನಂತರ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರ್ವಗಳ ರಾಜ ದಶಲಕ್ಷಣ ಮಹಾಪರ್ವ. ಜೀವನ ಬಿಟ್ಟು ಧರ್ಮವಿಲ್ಲ. ಸಿಟ್ಟನ್ನು ನಿಗ್ರಹಿಸುವುದನ್ನ ಜೈನ ಆಚಾರ್ಯರು ತಿಳಿಸಿದ್ದಾರೆ. ಜ್ಞಾನಕ್ಕೆ ಗುಣಕ್ಕೆ ಉತ್ತಮ ಬೆಲೆ ಇದೆ. ಒಳಗಿನ ನಮ್ಮ ಮನಸ್ಸನ್ನು ಪರಿವರ್ತನೆ ಮಾಡಬೇಕು ಎಂದು ಜೈನ ಧರ್ಮ ಹೇಳುತ್ತದೆ ಎಂದರು. ಕ್ರೋಧವು ಮಾಯಾದಿಂದ ಮಾನದಿಂದ ಲೋಭದಿಂದ ಹೊರ ಬರಬಾರದು ಕ್ಷಮಾ ಧರ್ಮವನ್ನು ಪಾಲಿಸಬೇಕು. ಕ್ಷಮೆಯನ್ನು ಧಾರಣೆ ಮಾಡಬೇಕು. ದಶಲಕ್ಷಣವನ್ನು ನಾವು ನಮ್ಮ ಜೀವನದಲ್ಲಿ ಪಾಲಿಸೋಣ ಎಂದು ಹೇಳಿದರು. ಕೆ. ಅಭಯಚಂದ್ರ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅವರು ಶಿಕ್ಷಣದಿಂದ ಒಳ್ಳೆಯ ಸ್ಥಾನಮಾನ, ಸಮಾಜದಲ್ಲಿ ಉತ್ತಮ ಗೌರವ ಸಿಗುತ್ತದೆ ಎಂದರು. ಈಗಿನ ಕಾಲಘಟ್ಟದಲ್ಲಿ ಯುವ ಪೀಳಿಗೆಯನ್ನು ಹುರಿದುಂಬಿಸುವ ಕೆಲಸ ಆಗಬೇಕು ಎಂದು ಹೇಳಿದರು. ಇತ್ತೀಚೆಗೆ ನಿಧನರಾದ ಯಂ. ವಿಜಯರಾಜ ಅಧಿಕಾರಿಯವರ ಪ್ರೀತಿ, ಪ್ರಾಮಾಣಿಕತೆ, ನೇರ ನುಡಿಯ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರಭಾತ್ ಬಲ್ನಾಡ್‌ರವರು ಉತ್ತಮ ಕ್ಷಮಾ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಮನುಷ್ಯ ಜನ್ಮ ಶ್ರೇಷ್ಠವಾದ ಜನ್ಮವಾಗಿದೆ. ಪರ್ವಗಳ ರಾಜ ದಶಲಕ್ಷಣ ಪರ್ವದ ಹತ್ತು ಲಕ್ಷಣಗಳನ್ನು ಯಾವ ವ್ಯಕ್ತಿ ಅನುಸರಿಸುತ್ತಾನೋ ಅವನು ಪರಿಪೂರ್ಣವಾಗುತ್ತಾನೆ, ನಾಲ್ಕು ಕಷಾಯಗಳಾದ ಕ್ರೋಧ, ಮಾಯಾ, ಮಾನ, ಲೋಭ, ಇವುಗಳನ್ನು ನಿಗ್ರಹಿಸುವುದರಿಂದ ಮಾತ್ರ ಉತ್ತಮ ಕ್ಷಮಾ ಧರ್ಮವನ್ನು ಪಾಲಿಸಿದಂತಾಗುತ್ತದೆ. ಪುಣ್ಯ ಸಂಪಾದನೆಯು ಕ್ಷಮೆಯಿಂದಾಗುತ್ತದೆ. ಕ್ಷಮಾ ಧರ್ಮದ ಪಾಲನೆಯಿಂದ ಮೋಕ್ಷ ಮಾರ್ಗವನ್ನು ಪಡೆಯೋಣ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್‌ರವರು ಯಾವುದು ಕೂಡ ಭಗವಂತನ ಇಚ್ಚೆಯಿಲ್ಲದೇ ನಡೆಯುವುದಿಲ್ಲ ಮನಸ್ಸಿನಲ್ಲಿ ಒಳ್ಳೆಯ ಭಾವನೆಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಕೆಲವು ಘಟನೆಗಳನ್ನು ವಿವರಿಸುವ ಮೂಲಕ ಕ್ಷಮಾ ಧರ್ಮವನ್ನು ತಿಳಿಸಿದರು. ಯಾವುದೇ ಕಾರ್ಯಕ್ರಮ ಮಾಡುವಾಗ ಕ್ಷಮಾ ಧರ್ಮ ಇದ್ದರೆ ಮಾತ್ರ ಆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಾಗವನ್ನು ನೀಡಿ ಸಹಕರಿಸಿದ ವಿಜೇತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿಯ ಮಾಜಿ ಕಾರ್ಯದರ್ಶಿಗಳಾದ ಮಾರಗುತ್ತು ಯಂ. ವಿಜಯರಾಜ್ ಅಧಿಕಾರಿ ಅವರಿಗೆ ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಸಮಿತಿಯ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿಗಳಾದ ಜಯರಾಜ್ ಕಂಬಳಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಮತ್ತು ಶಿವಪ್ರಸಾದ್ ಅಜಿಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ನಿಧಿ ಜೈನ್ ಪ್ರಾರ್ಥಿಸಿ, ಸಮಿತಿಯ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವಿತ್ತರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img