ಮಂಗಳೂರು: ಧವಳ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ವಾರ್ಷಿಕ ಮಹಾಸಭೆ
Published Date: 05-Sep-2024 Link-Copied
ಮಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ಇತ್ತೀಚೆಗೆ ಆರಂಭವಾದ ಧವಳ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸೆ. 1 ರಂದು ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಸಿದ್ದಾರ್ಥ ಸಭಾಭವನ (ಜೈನ್ ಬೋರ್ಡಿಂಗ್) ದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುದರ್ಶನ್ ಜೈನ್ ಇವರು ಈ ಸಂಸ್ಥೆಯ 2023-24 ನೇ ಸಾಲಿನಲ್ಲಿ 65.40 ಕೋಟಿಯಷ್ಟು ವ್ಯವಹಾರ ನಡೆಸಿ, ರೂ. 9.50 ಕೋಟಿ ಠೇವಣಿಯೊಂದಿಗೆ ಸಾಲ ಸೌಲಭ್ಯ ಒದಗಿಸಿ, ರೂ. 2.45 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಯಪಡಿಸಿದರು. ನಿರ್ದೇಶಕಾರದ ಶಶಿಕಲಾ ಕೆ.ಹೆಗ್ಡೆ ಕಾರ್ಕಳ ಇವರು ಸಭೆ ಕಾರ್ಯ ಕಲಾಪಗಳ ಕಾರ್ಯ ಸೂಚಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ ಇವರು 2023-24 ನೇ ಸಾಲಿನ ಆರ್ಥಿಕ ವ್ಯವಹಾರಗಳ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಕಳೆದ ಸಾಲಿನ ವರದಿಯನ್ನು ಸುಧೀರ್ ಕುಮಾರ್ ವೈ, ಇವರು ಮಂಡಿಸಿದರೆ, ನಿರ್ದೇಶಕರಾದ ಪುಷ್ಪರಾಜ್ ಜೈನ್ ಇವರು ಈ ಸಂಸ್ಥೆ ಸ್ಥಾಪಿಸಿದ ಉದ್ದೇಶವನ್ನು ಸಭೆಗೆ ತಿಳಿಯಪಡಿಸಿದರು, ಹಾಗೂ ಇನ್ನೋರ್ವ ನಿರ್ದೇಶಕರಾದ ರಾಜೇಶ್ ಎಮ್. ರವರು ಮಾತನಾಡುತ್ತಾ ಸಂಸ್ಥೆಯ ಮಹಾಸಭೆಯ ಅಧಿಕಾರ-ಸದಸ್ಯರ ಕರ್ತವ್ಯಗಳ ಬಗ್ಗೆ ಸದಸ್ಯರಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಹೊಸ್ಮಾರು ಶಿಶುಪಾಲ್ ಜೈನ್ ರವರು ಸ್ವಾಗತಿಸಿದರು. ಸಂಸ್ಥೆಯ ಗೌರವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಣೆಯೊಂದಿಗೆ ಲೆಕ್ಕ ಪತ್ರಗಳನ್ನು ಮಂಡಿಸಿದರು. ಹಿರಿಯ ಪ್ರಭಂದಕ ನಿವೇಶ್ ಕುಮಾರ್ ಮುಂದಿನ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆದರು. ನಿರ್ದೇಶಕರಾದ ಸಚಿನ್ ಕುಮಾರ್ ವಂದಿಸಿದರು.