ಸತ್ತೂರು, ಧಾರವಾಡ: ಡಾ. ಎಸ್.ಕೆ ಜೋಶಿ ಅವರಿಗೆ ಬಿಳ್ಕೋಡುಗೆ ಸಮಾರಂಭ
Published Date: 18-Aug-2024 Link-Copied
ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹಿರಿಯ ರೇಡಿಯಾಲಜಿ ಪ್ರಾಧ್ಯಾಪಕರು ಮತ್ತು ಮಾಜಿ ಪ್ರಾಂಶುಪಾಲರು ಹಾಗೂ ವಿಶ್ವವಿದ್ಯಾಲಯದ ಸಹ ಉಪ ಕುಲಪತಿಗಳಾದ ಡಾ. ಎಸ್.ಕೆ ಜೋಶಿಯವರು ಸೇವಾ ನಿವೃತ್ತಿ ಹೊಂದಿದ ಸಂಧರ್ಭದಲ್ಲಿ ಇತ್ತೀಚಿಗೆ ಅವರನ್ನು ಬೀಳ್ಕೋಡಲಾಯಿತು. ಸುಮಾರು 21 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹಾಗೂ ಸಹ ಉಪ ಕುಲಪತಿಗಳಾಗಿ ಅನನ್ಯ ಕೊಡುಗೆಯನ್ನು ನೀಡಿದ ಡಾ. ಎಸ್.ಕೆ ಜೋಶಿ ಅವರ ಸೇವೆಯನ್ನು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಶ್ಲಾಘಿಸಿದರು ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಬೆಳವಣಿಗೆಗೆ ಅವರ ಸೇವೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಯಾದ ವಿ. ಜಿ. ಪ್ರಭು ಅವರು ಡಾ. ಎಸ್.ಕೆ ಜೋಶಿ ಅವರಿಗೆ ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಡಾ. ಎಸ್.ಕೆ ಜೋಶಿಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಾವು ಎಸ್.ಡಿಎಂ. ಸಂಸ್ಥೆಗೆ ಸೇರುವಾಗ ಆಡಳಿತ ಮಂಡಳಿಯವರ ಮಾಡಿದ ಸಹಕಾರವನ್ನು ಸ್ಮರಿಸಿಕೊಂಡರು. ತಮ್ಮ ಸುದೀರ್ಘ 21 ವರ್ಷಗಳ ಸೇವೆಗೆ ಅನುವು ಮಾಡಿಕೊಟ್ಟ ಕುಲಪತಿಗಳು, ಉಪ ಕಲಪತಿಗಳು ಮತ್ತಿತರೆಲ್ಲರಿಗೂ ತಮ್ಮ ಕೃತಜ್ಞತೆಯನ್ನು ಹೇಳಿದರು. ತಾವು ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಈ ಸಂದರ್ಭದಲ್ಲಿ ಎಸ್.ಡಿಎಂ. ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ವೈದ್ಯಕೀಯ ಅಧೀಕ್ಷಕರು, ಉಪ ವೈದ್ಯಕೀಯ ಅಧೀಕ್ಷಕರು, ಶೂಶ್ರುಷಕ ಅಧೀಕ್ಷಕರು ಮತ್ತು ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ನರೇಂದ್ರ ಶಾ ಅವರು ಡಾ. ಎಸ್.ಕೆ. ಜೋಶಿ ಅವರ ಸಮರ್ಪಣಾ ಸೇವೆ ಮತ್ತು ಅವರು ಕಾಲೇಜಿನಲ್ಲಿ ಅನುಸರಿಸಿದ ಶಿಸ್ತು ಬದ್ದತೆಯನ್ನು ಸ್ಮರಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ವಿನುತಾ ಚಿಕ್ಕಮಠ್ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಬಾಬಣ್ಣ ಶೆಟ್ಟಿಗಾರ್ ವಂದನಾರ್ಪಣೆ ಸಲ್ಲಿಸಿದರು.