ಮುನಿಶ್ರೀ ಪುಣ್ಯಸಾಗರ ಮಹಾರಾಜರ ಆಶೀರ್ವಾದ ಪಡೆದ ಧರ್ಮಸ್ಥಳದ ಹೆಗ್ಗಡೆ ಸಹೋದರರು
Published Date: 15-Aug-2024 Link-Copied
ಹುಬ್ಬಳ್ಳಿ ದಿಗಂಬರ ಜೈನ ಬೋರ್ಡಿಂಗಿನಲ್ಲಿ ಚಾತುರ್ಮಾಸ ನಿರತ ಮುನಿಶ್ರೀ ಪುಣ್ಯಸಾಗರ ಮಹಾರಾಜರ ದರ್ಶನಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಸುರೇಂದ್ರ ಹೆಗಡೆಯವರು ಇಂದು ನಗರಕ್ಕೆ ಆಗಮಿಸಿ ಪೂಜ್ಯರಿಂದ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಧಾರ್ಮಿಕ ಚರ್ಚೆಗಳನ್ನೂ ಮಾಡಿದ ಹೆಗ್ಗಡೆ ಸಹೋದರರು ಇಲ್ಲಿ ನಡೆದಿರುವ ವರ್ಷಾಯೋಗ ಧಾರ್ಮಿಕ ಪ್ರಭಾವನೆಗೆ ಪ್ರೇರಕವಾಗಿದೆ ಎಂದು ತಿಳಿಸಿ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಪೂಜ್ಯ ಶ್ರೀ ಹೆಗ್ಗಡೆ ಸಹೋದರರನ್ನು ದಿಗಂಬರ ಜೈನ ಬೋರ್ಡಿಂಗ ಆಡಳಿತಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು, ಈ ಸಂದರ್ಭದಲ್ಲಿ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ವಿದ್ಯಾಧರ್ ಪಾಟೀಲ, ಆರ್ ಟಿ ತವನಪ್ಪನವರ, ದೇವೇಂದ್ರಪ್ಪ ಕಾಗೇನವರ, ಜಿ ಜಿ ಲೋಗೋಳ, ವಿಮಲಚಂದ ಸಂಗಮಿ, ಪ್ರಶಾಂತ್ ಬಿಶೆಟ್ಟಿ, ಮಹಾವೀರ ಮಣಕಟ್ಟಿ, ಸಂತೋಷಕುಮಾರ ಮುರಗಿ ಪಾಟಿಲ, ಭರತ ಬೀಳಗಿ, ಮಹಿಳಾ ಅಧ್ಯಕ್ಷರಾದ ಸ್ಮಿತಾ ವಾಕಳೆ, ಎ ಎಸ್ ಪಾಟೀಲ, ಮನ್ಮತ ಕ್ಯಾಸಾ, ತ್ರಿಶಲಾ ಮಾಲಗತ್ತಿ ಮತ್ತು ಎಸ್ ಡಿ ಎಂನ ಕಾರ್ಯದರ್ಶಿ ಜೀವoದರಕುಮಾರ ಹಾಗೂ ಹಲವಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. ವರದಿ: ಎಸ್ ಆರ್ ಮಲ್ಲಸಮುದ್ರ