ಧರ್ಮದ ಕಾಲಂನಲ್ಲಿ ಜೈನ ಎಂದು ಸೇರಿಸಿ
Published Date: 16-Jan-2024 Link-Copied
ಪಾವಗಡ: ಜೈನ ಧರ್ಮ ವಿಶ್ವಧರ್ಮವಾಗಿದೆ. ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಜೈನಪೀಠಗಳಿವೆ. ಇದೊಂದು ಶ್ರೇಷ್ಠ ಅಹಿಂಸಾ ಧರ್ಮವಾಗಿದೆ. ಹಿಂದಿನ ಜನಸಂಖ್ಯೆಗಿಂತ ಈಗ ಜೈನ ಧರ್ಮೀಯರ ಜನಸಂಖ್ಯೆ ಕ್ಷೀಣಿಸುತ್ತಿದೆ. ಧರ್ಮದ ಕಾಲಂನಲ್ಲಿ ಜೈನ ಎಂದು ಬರೆಯುವಂತೆ ಜೈನ ಸಮಾಜದ ಹಿರಿಯ ಮುಖಂಡ ಬ್ರಹ್ಮದೇವಯ್ಯ ಮನವಿ ಮಾಡಿದರು. ತಾಲ್ಲೂಕಿನ ನಿಡಗಲ್ ಬೆಟ್ಟದಲ್ಲಿ ಶ್ರೀಕೃಷ್ಣಹರಣ ಪಾರ್ಶ್ವನಾಥ ತೀರ್ಥಂಕರರ ಜನುಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಪೂಜಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಶಳ್ಳಕ್ಕಿರೆ ದಿಗಂಬರ ಜೈನ ಸಮಾಜದ ಅಧ್ಯಕ್ಷ, ಉದ್ಯಮಿ ಹಂಬಣ್ಣನವರು ಕಾರ್ಯಕ್ರಮ ಉದ್ಘಾಟಿಸಿದರು. ನಿಡಗಲ್ ಕಷ್ಟ ಹರಣ ಪಾರ್ಶ್ವನಾಥ ಜನುಮ ದಿನದ ಸಮಿತಿ ಅಧ್ಯಕ್ಷ ಪಿ.ಸುಂದರ ರಾಜಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಆರ್. ಬಿ. ಜಯಣ್ಣ, ಗೌರಿಪುರ ಪಾರ್ಶ್ವನಾಥ್ ಕುಜ ನಾಗಭೂಷಣ್, ಟ್ರಸ್ಟಿ ಆರ್. ಎಸ್ ಕುಬೇರಪ್ಪ, ಭರತ್, ರಾಜು, ಪ್ರದೀಪ್, ಜೈನ್, ಶೈನ್ ಜೈನ್, ತುಮಕೂರು ಜೈನ ಸಮಾಜದ ನಿರ್ದೇಶಕರಾದ ಬ್ರಹ್ಮ ಪ್ರಕಾಶ್, ಮಂಡಿ ನಾಗರಾಜ್, ಸುನಿಲ್ ಅಮರಾಪುರ ಸೇರಿದಂತೆ ಜೈನ ಮಹಿಳಾ ಮಂಡಳಿಗಳು ಭಾಗವಹಿಸಿದ್ದವು. ನಂತರ ದ್ರವ್ಯ ಅಭಿಷೇಕ ಹರಾಜುಗಳ ಪ್ರಕ್ರಿಯೆ ನಡೆಯಿತು.