ಸತ್ತೂರು,ಧಾರವಾಡ: ಕಳೆವರ ಶರೀರರಚನಾಶಾಸ್ತ್ರದ ಕಾರ್ಯಾಗಾರ


Logo

Published Date: 03-Aug-2024 Link-Copied

ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಶರೀರರಚನಾಶಾಸ್ತ್ರ ವಿಭಾಗವು “ಕೈ ಯ ಶರೀರರಚನಾಶಾಸ್ತ್ರ” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆ. 3 ರಂದು ಏರ್ಪಡಿಸಲಾಗಿತ್ತು. ಶರೀರರಚನಾಶಾಸ್ತ್ರವು ಎಲ್ಲಾ ಆರೋಗ್ಯ ವೃತ್ತಿಪರರಿಗೆ ಮಾನವ ದೇಹದ ರಚನೆಯ ಬಗ್ಗೆ ಮೂಲಭೂತ ಜ್ಞಾನವನ್ನು ಒದಗಿಸುತ್ತದೆ. ಮಾನವನ ಕೈಗಳ ಮೂಳೆಗಳು, ಸ್ನಾಯುರಜ್ಜುಗಳು, ನರಮಂಡಲದ ರಚನೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ನಾವು ಕೈಗಳನ್ನು ನಿರಂತರ ಎಲ್ಲಾ ಕೆಲಸಗಳಿಗೆ ಬಳಸುವುದರಿಂದ ಕೈಗಳ ಚಲನೆಯೂ ಮುಖ್ಯವಾಗಿರುತ್ತದೆ. ಕೈ ಯ ಶರೀರರಚನಾಶಾಸ್ತ್ರ ದ ಪರಿಶೋಧನೆ, ಅದರ ವೈದ್ಯಕೀಯ ಪ್ರಸ್ತುತತೆ ಮತ್ತು ಶಸ್ತ್ರಚಿಕಿತ್ಸಾ ಪರಿಣಾಮಗಳು ವೈದ್ಯರಿಗೆ ಅಪಾರ ಜ್ಞಾನವನ್ನು ನೀಡುತ್ತದೆ. ಈ ಕಾರ್ಯಾಗಾರವನ್ನು ವಿಶೇಷವಾಗಿ ಮಾನವರ ಕೈಯಿಯ ಬಗ್ಗೆ ತಮ್ಮ ಜ್ಞಾನವನ್ನು ನವೀಕರಿಸಲು ಬಯಸುವ ವೈದ್ಯಕೀಯ ವೃತ್ತಿಪರರು ಮತ್ತು ಆರೋಗ್ಯ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ಸುಮಾರು 60ಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಶರೀರರಚನಾಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರುಗಳಾದ ಡಾ. ಎ. ವಿ. ಕುಲಕರ್ಣಿ ಮತ್ತು ಡಾ. ಎಸ್. ಕೆ. ದೇಶಪಾಂಡೆ ಈ ಕಾರ್ಯಾಗಾರವನ್ನು ಉದ್ಘಾಟಿಸಿದರು. ಎಸ್.ಡಿ.ಎಂ. ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ಎಂ ದೇಸಾಯಿರವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಕಾರ್ಯಾಗಾರವು ನಮ್ಮ ವೃತ್ತಿಯಾದ್ಯಂತ ಉಪಯುಕ್ತವಾಗಿರುವುದರಿಂದ ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸುಧಾರಿತ ಸೌಲಭ್ಯಗಳು ಮತ್ತು ಜ್ಞಾನದ ನವೀಕರಣವನ್ನು ಬಳಸಿಕೊಂಡು, ನಮ್ಮ ಬೋಧನೆಯನ್ನು ವರ್ಧಿಸಿಕೊಳ್ಳಬೇಕು ಎಂದರು. ಡಾ. ನಿರಂಜನ್ ಕುಮಾರ್ ಅವರು ಮಾದರಿ ತಯಾರಿಕೆಯ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು. ಶರೀರರಚನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ವೀಣಾ ಕುಲಕರ್ಣಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ರೋಶನಿ ಸದಾಶಿವ ಕಾರ್ಯಕ್ರಮ ನಿರೂಪಿಸಿದರು. ಡಾ. ವಿನಯ್ ಕುಲಕರ್ಣಿ ವಂದಿಸಿದರು

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img