ಕವಿತಾ ರಚನಾ ಕಮ್ಮಟ
Published Date: 26-Jul-2024 Link-Copied
ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ ಶಾಲೆಯ ಸಭಾ ಭವನದಲ್ಲಿ ದಿನಾಂಕ 26-07-2024ರಂದು ಒಂದು ದಿನದ ಕವಿತಾ ರಚನಾ ಕಮ್ಮಟ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪವನ್ ಕುಮಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ದಿವಾಕರ್ ಬಲ್ಲಾಲ್ ರವರು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಸಭೆಯ ಅಧ್ಯಕ್ಷರಾದ ಮಂಜುಳಾ ಜೈನ್ ರವರು ತಮ್ಮ ಅಧ್ಯಕ್ಷತೆ ನುಡಿಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು. ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಮಂಜುಳಾರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಣ್ಯರನ್ನು ಸಂಧ್ಯಾ ಸ್ವಾಗತಿಸಿದರು. ಸಾಕ್ಷಿ ಧನ್ಯವಾದಗೈದರು. ರೊಲಿಟಾ ಕಾರ್ಯಕ್ರಮವನ್ನು ನಿರೂಪಿಸಿದರು. ಕವಿತಾ ರಚನಾ ಕಮ್ಮಟ ಕಾರ್ಯಗಾರದ ಸಮಾರೋಪ ಸಮಾರಂಭವನ್ನು ಮಧ್ಯಾಹ 3.30 ಕ್ಕೆ ಶಾಲಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಯರಾದ ಶಶಿಕಾಂತ್ ವೈ ವಹಿಸಿದ್ದರು. ಅತಿಥಿಗಳಾಗಿ ಟಿ.ಎನ್. ಖಂಡಿಗೆ ಲೇಖಕರು ಮತ್ತು ವಿಮರ್ಶಕರು, ಪುರಸಭೆಯ ಸದಸ್ಯರಾದ ಶ್ವೇತಾ ಪವೀಣ್, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಪವನ್ ಕುಮಾರ್, ಶಾಲಾ ಹಿರಿಯ ಶಿಕ್ಷಕಿ ಅನುಪಮಾ ಕುಮಾರಿ ಹಾಗೂ ಸಾಹಿತ್ಯ ಸಂಘದ ಮೇಲ್ವಿಚಾರಕರಾದ ಮಂಜುಳರವರು ಉಪಸ್ಥಿತರಿದ್ದರು. ಟಿ.ಎನ್ ಖಂಡಿಗ ಇವರು ಕಾರ್ಯಕ್ರಮದ ಆಯೋಜನೆಯ ಕುರಿತು ಸಂತಸ ವ್ಯಕ್ತಪಡಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಓದುವಿಕೆಯ ಮಹತ್ವದ ಬಗ್ಗೆ ಕವನ ಮೂಲಕ ತಿಳಿಸಿದರು. ಇನ್ನೋರ್ವ ಅತಿಥಿಯಾದ ಶ್ವೇತಾ ಪ್ರವೀಣ್ ರವರು ಇನ್ನಷ್ಟು ಕವಿತೆಯನ್ನು ಬರೆಯಲು ವಿದ್ಯಾರ್ಥಿಗಳು ಮತ್ತಷ್ಟು ಪ್ರಯತ್ನವನ್ನು ಮಾಡಬೇಕೆಂದು ಶುಭ ಹಾರೈಸಿದರು. ಪವನ್ ಕುಮಾರ್ ರವರು ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕಾರ್ಯಗಾರದ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡರು. ಹಾಗೂ ತಾವೇ ಸ್ವತ: ರಚಿಸಿದ ಕವನಗಳನ್ನು ವಾಚಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಅಧ್ಯಕ್ಷೀಯ ನುಡಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಳ್ಳಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಸಂಧ್ಯಾರವರು ನಿರೂಪಿಸಿದರು.