ಶಿಕ್ಷಕ ಕೌಶಲ್ಯ ವರ್ಧನಾ ತರಬೇತಿ ಕಾರ್ಯಗಾರ
Published Date: 18-Jul-2024 Link-Copied
ದಿಗಂಬರ ಜೈನ ವಿದ್ಯಾವರ್ಧಕ ಸಂಘ(ರಿ.)ಮೂಡಬಿದ್ರೆ ಇದರ ಆಶ್ರಿತ ಸಂಸ್ಥೆಗಳಾದ ಜೈನ ಪ್ರೌಢಶಾಲೆ, ಡಿ.ಜೆ ಆಂಗ್ಲ ಮಾಧ್ಯಮ ಶಾಲೆ ಮತ್ತು ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಒಂದು ದಿನದ ‘ಶಿಕ್ಷಕ ಕೌಶಲ್ಯ ವರ್ಧನಾ’ ತರಬೇತಿ ಕಾರ್ಯಕ್ರಮವನ್ನು (Teacher’s skill Enhancement training program) ಜೈನ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ಕೆ. ಹೇಮರಾಜ್ ರವರು ನೆರವೇರಿಸಿದರು. ತರಬೇತುದಾರರಾಗಿ ರಾಷ್ಟ್ರೀಯ ತರಬೇತುದಾರರಾದ ಬಾಸುಮ ಕೊಡಗು ಆಗಮಿಸಿದ್ದರು. ಬೆಳಗ್ಗೆ 9.30 ರಿಂದ ಸಂಜೆ 4.00 ಗಂಟೆಯವರೆಗೆ ನಡೆದ ಈ ತರಬೇತಿ ಕಾರ್ಯಗಾರದಲ್ಲಿ ಶಿಕ್ಷಕರ ಅವಲೋಕನ, ವಿದ್ಯಾರ್ಥಿ-ಶಿಕ್ಷಕ ಸಂಬಂಧ, ಸಂವಹನ ಮಾಧ್ಯಮ, ಅಂತರ್ಜಾಲ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಪ್ರಭಾವ ಇತ್ಯಾದಿ ವಿಷಯಗಳನ್ನು ತರಬೇತುದಾರರು ಗುಂಪು ಚರ್ಚೆಗಳ ಮೂಲಕ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಜೈನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಶ್ಯಾಮ್ ಪ್ರಸಾದ್, ಡಿ.ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಾಂತ್ ವೈ, ಡಿ.ಜೆ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಹಾಗೂ 3 ವಿದ್ಯಾಸಂಸ್ಥೆಗಳ ಶಿಕ್ಷಕರು ಭಾಗವಹಿಸಿದ್ದರು. ಶಿಕ್ಷಕರಾದ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು ಮತ್ತು ಸುಧಾ ಕೆ. ತರಬೇತುದಾರರನ್ನು ಪರಿಚಯಿಸಿದರು.