ಎಕ್ಸಲೆಂಟ್: ವನಮಹೋತ್ಸವ ಆಚರಣೆ
Published Date: 06-Jul-2024 Link-Copied
ಕಲ್ಲಬೆಟ್ಟು ವ್ಯಾಪ್ತಿಯ ಗಂಟಾಲ್‌ಕಟ್ಟೆ ಹಾಗೂ ಮಹಾವೀರ ಕಾಲೇಜು ಪರಿಸರದ ವ್ಯಾಪ್ತಿಯ ಜನತೆಗೆ ಪರಿಸರದ ಬಗ್ಗೆ, ಗಿಡ ಮರ, ಸಸಿಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಲು ಗಿಡ ವಿತರಣಾ ಕಾರ್ಯಕ್ರಮವನ್ನು ಎಕ್ಸಲೆಂಟ್ ಸಂಸ್ಥೆಯು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಲೆಕ್ಕಪರಿಶೋಧಕ ಮೊಹಮ್ಮದ್ ಯಾಸಿರ್ ಉಪಸ್ಥಿತರಿದ್ದು, ಪರಿಸರದ ಜಾಗೃತಿಯ ಕನಸನ್ನು ಎಕ್ಸಲೆಂಟ್ ಸಂಸ್ಥೆಯು ಹೊಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎನ್ನುವುದನ್ನು ತಿಳಿಸಿದರು. ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿಯವರಾದ ರಶ್ಮಿತಾ ಜೈನ್‌ರವರು ಮಾತನಾಡಿ ಪರಿಸರವನ್ನು ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಲ್ಲಬೆಟ್ಟು ವ್ಯಾಪ್ತಿಯಿಂದ ವೇಣೂರು ಪರಿಸರದ ವ್ಯಾಪ್ತಿಯವರೆಗೂ ಒಂದು ಸಾವಿರದಷ್ಟು ಹಸಿರು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಈ ಸುಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್‌ನ ಮ್ಯಾನೇಜರ್ ಆಗಿರುವ ರಕ್ಷಿತ್ ಹಾಗೂ ಕರ್ನಾಟಕ ಬ್ಯಾಂಕ್‌ನ ಸಿಬ್ಬಂದಿವರ್ಗದವರು, ರೊಟೇರಿಯನ್ ಆಗಿರುವ ಉದಯ್ ಕುಮಾರ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯ ಶೈಕ್ಷಣಿಕ ಸಂಯೋಜಕರಾದ ಶ್ರೀಪ್ರಸಾದ್‌ರವರು ನೆರವೇರಿಸಿ ವಂದಿಸಿದರು.