ಮೂಡುಬಿದಿರೆ ಜೈನ್ ಮಿಲನ್ ಮಾಸಿಕ ಸಭೆ, ಸನ್ಮಾನ
Published Date: 09-Jun-2024 Link-Copied
ಮೂಡುಬಿದಿರೆ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಘಟಕದ ಮಾಸಿಕ ಸಭೆಯು ಇಲ್ಲಿನ ಎಂ. ಸಿ. ಎಸ್. ಬ್ಯಾಂಕ್ ಸಭಾಭವನದಲ್ಲಿ ಜೈನ್ ಮಿಲನ್ ಅಧ್ಯಕ್ಷ ಆನಡ್ಕ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭಾ ಕಾಯ೯ಕ್ರಮಕ್ಕೂ ಮೊದಲು ಹೃದ್ರೋಗ ಸಂಬಂಧಿ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮೂಡುಬಿದಿರೆಯ ಹೃದ್ರೋಗ ತಜ್ಞ ಡಾ. ದಿತೇಶ್ ಹೃದ್ರೋಗಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ರವಿರಾಜ್ ಎಂ. ಮತ್ತು ಕೊಡುಗೈ ದಾನಿ ನಿವೃತ್ತ ಟೆಲಿಕಾಂ ಇಂಜಿನಿಯರ್ ಎಂ. ವಿ. ಶೆಟ್ಟಿ ಅವರನ್ನು ಮಿಲನ್ ವತಿಯಿಂದ ಸನ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ವಲಯ ನಿದೇ೯ಶಕರಾದ ಪಿ. ಜಯರಾಜ್ ಕಂಬಳಿ, ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿ ನ್ಯಾಯವಾದಿ ಶ್ವೇತಾ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಸಿಕ ಸಭಾ ಕಾರ್ಯಕ್ರಮದ ಪ್ರಾಯೋಜಕರಾದ ಎಂ. ಸಿ. ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ನೇಮಿರಾಜ್, ಜೈನ್ ಮಿಲನ್ ಪದಾಧಿಕಾರಿಗಳಾದ ರಾಜೇಶ್, ಪುಷ್ಪರಾಜ್ ಜೈನ್, ಅನಂತವೀರ್ ಜೈನ್ ಉಪಸ್ಥಿತರಿದ್ದರು. ಸುರೇಖಾ ವಿ. ಹೆಗ್ಡೆ ಪ್ರಾಥಿ೯ಸಿದರು. ಪ್ರಶಾಂತ್ ಜೈನ್ ಮತ್ತು ಸಂಪತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ದಿನೇಶ್ ಚೌಟ ಸ್ವಾಗತಿಸಿದರು. ಡಾ. ಕ್ಷಮಾ ಜೈನ್ ಕಾರ್ಯಕ್ರಮ ನಿರೂಪಿಸಿದರು.