ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ಎಸ್ ಎಸ್ ಎಲ್ ಸಿಯಲ್ಲಿ ಶೇಕಡ 100 ಫಲಿತಾಂಶ
Published Date: 09-May-2024 Link-Copied
ಧರ್ಮಸ್ಥಳ: ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ಲಭಿಸಿದ್ದು, ಒಟ್ಟು 54 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳಿಗೆ ಏ+ ಹಾಗೂ 20 ವಿದ್ಯಾರ್ಥಿಗಳಿಗೆ ಏ ಗ್ರೇಡ್ ಲಭಿಸಿದ್ದು ಒಟ್ಟಾರೆಯಾಗಿ 29 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 23 ಪ್ರಥಮ ದರ್ಜೆ, ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಗೊಂಡಿರುತ್ತಾರೆ. ಅತ್ಯಧಿಕ 618 ಅಂಕಗಳೊಂದಿಗೆ ಶೇಕಡ 100 ಫಲಿತಾಂಶ ಲಭ್ಯವಾಗಿದ್ದು, ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಬಹಳ ಸಂತಸ ನೀಡಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ. ಸಂತಸ ವ್ಯಕ್ತಪಡಿಸಿದ್ದಾರೆ. ಸಾಧನೆ ಮಾಡಿರುವ ಮಕ್ಕಳ ವಿವರ ಇಂತಿವೆ: ಹಂಸಿನಿ ಭಿಡೆ-618(98.9%), ಆಶಿತಾ-606(97%), ಭಾರ್ಗವಿ-604(96.6%), ಶ್ರಿವತ್ಸ ಯು.-598(95.7%), ಸುಮಿತ್ ಎಸ್.-597(95.5%), ಚಿನ್ಮಯಿ-596(95.4%), ಸುಶಾನ್-596(95.4%), ಸಮನ್ವಿ ಪಿ.-593(94.9%), ಅನ್ವಿತಾ ಹೆಬ್ಬಾರ್ ಎಮ್-586(93.8%), ಅಶ್ವಿಜ್-578(92.5%), ದೀಕ್ಷಾ-578(92.5%), ಸಾನ್ವಿ ಜೈನ್-570(91.2%), ಚಿನ್ನಮ್ಮ-569(91%), ಜೆಸ್ವಿನ್ ಕೆ. ಜೆ.-567(90.7%), ಅನಘಾ ಎಮ್.ಡಿ-558(89.3%), ಕುಶಾಲ್ ಆರಾಧ್ಯ-558(89.3%), ಅನಿಕಾ ಪಿ.-557(89.1%), ದೀಕ್ಷಾ ರೋಸ್-555(88.8%), ನಿಶಾಂತ್-547(87.5%), ಪೂರ್ವಿಕಾ ಆರ್.-547(87.5%), ಜೆಸ್ನಾ ಎಮ್. ಡಿ.-546(87.4%), ಆದಿತ್ಯಾ ಎಚ್. ಎಸ್.-544(87%), ರೇವಂತ್ ಮನೋಹರ್ ರಾವ್-543(86.9%), ಅಭಿಜ್ನಾನ್ ಎ. ಶೆಟ್ಟಿ-542(86.7%), ಅಪೇಕ್ಷಾ- 542(86.7%), ಅಶ್ವಲ್ ಹೆಬ್ಬಾರ್ ಎಮ್.-540(86.4%), ಪವಿತ್ರಾ ಜೈನ್-537 (85.9%), ಹರ್ಷಿತಾ ವಿ. ಆರ್.-533(85.3%), ನಿವೇದ್ಯಾ ಆರ್. ಬಿ.-533(85.3%).