ಹೊಂಬುಜ: ಶ್ರೀ ಕುಂದಕುಂದ ವಿದ್ಯಾಪೀಠಕ್ಕೆ ಪ್ರವೇಶಾವಕಾಶ
Published Date: 18-Apr-2024 Link-Copied
ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಶುಭಾಶೀರ್ವಾದದೊಂದಿಗೆ ಜೈನ ಮಠದ ಆಶ್ರಯದಲ್ಲಿ ಸುವ್ಯವಸ್ಥಿತಗೊಂಡಿರುವ ಶ್ರೀ ಕುಂದಕುಂದ ವಿದ್ಯಾಪೀಠವು ಜೈನ ಬಾಂಧವರ ಪ್ರೋತ್ಸಾಹಕ್ಕೆ ಪಾತ್ರವಾಗಿ ಜೈನ ವಿದ್ಯಾರ್ಥಿಗಳಿಗೆ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವಲ್ಲಿ ಯಶಸ್ಸುಗಳಿಸಿ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ಶ್ರೀ ಕುಂದಕುಂದ ವಿದ್ಯಾಪೀಠಕ್ಕೆ 5 ರಿಂದ 10ನೇ ತರಗತಿಯವರೆಗಿನ, 2024-25ನೇ ಸಾಲಿನ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳ ನೋಂದಣಿ ಆರಂಭವಾಗಿದೆ. ಜೈನ ಪೋಷಕರು/ತಂದೆ ತಾಯಿಯರು ಬಾಲಕರನ್ನು ಈ ವಿದ್ಯಾಸ್ಫೂರ್ತಿ ಸೆಲೆಯ ವಿದ್ಯಾಪೀಠದ ಪ್ರವೇಶಕ್ಕೆ ತಾವು ಹಿಂದಿನ ತರಗತಿಯ ಉತ್ತೀರ್ಣರಾದ ಅಂಕಪಟ್ಟಿ ಹಾಗೂ ಅಲ್ಲಿಯ ಜೈನ ಸಮಾಜದ ಮುಖಂಡರಿಂದ ಪಡೆದ ಪರಿಚಯ ಪತ್ರ, ಮೂಲ ದಾಖಲೆಗಳೊಂದಿಗೆ ಸಂಪರ್ಕಿಸಬಹುದು ವಿ.ಸೂ: ಶ್ರೀ ಹೊಂಬುಜ ಪದ್ಮಾವತಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಪರಂಜ್ಯೋತಿ ಆಂಗ್ಲಮಾಧ್ಯಮ ಪ್ರಾಥಮಿಕ ಪಾಠಶಾಲೆಗೆ 8ನೇ ತರಗತಿಯಿಂದ ಅವಕಾಶವಿರುತ್ತದೆ ವ್ಯವಸ್ಥಾಪಕರು, ಶ್ರೀಕುಂದ ಕುಂದ ವಿದ್ಯಾಪೀಠ : 8123924492, 8762180697, 9481249127, 9481944083