ಪ್ರೊ. ಡೇವಿಡ್ ಎ. ಕೋಲಾ ಅವರಿಗೆ ಬಿಳ್ಕೋಡುಗೆ ಸಮಾರಂಭ


Logo

Published Date: 17-Apr-2024 Link-Copied

ಸತ್ತೂರು, ಧಾರವಾಡ: ಎಸ್.ಡಿ.ಎಂ. ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡೇವಿಡ್ ಎ. ಕೋಲಾ ಅವರಿಗೆ ಏ.16 ರಂದು ಎಸ್.ಡಿ.ಎಂ. ವಿಶ್ವವಿದ್ಯಾಲಯದ ವತಿಯಿಂದ ಬಿಳ್ಕೋಡಲಾಯಿತು. ಸುಮಾರು 13 ವರ್ಷಗಳಿಗಿಂತ ಹೆಚ್ಚು ಕಾಲ ಪ್ರಾಂಶುಪಾಲರು ಮತ್ತು ನರ್ಸಿಂಗ್ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪ್ರೊ. ಡೇವಿಡ್ ಎ. ಕೋಲಾ ಅವರ ಕೊಡುಗೆಗಳನ್ನು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಶ್ಲಾಘಿಸಿದರು ಮತ್ತು ಎಸ್.ಡಿ.ಎಂ. ನರ್ಸಿಂಗ್ ಕಾಲೇಜಿನ ಬೆಳವಣಿಗೆಗೆ ಅವರ ಸೇವೆ ಅಪಾರ ಕೊಡುಗೆ ನೀಡಿದೆ ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಯಾದ ವಿ.ಜಿ. ಪ್ರಭು, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎ ಸ್. ಅವರು ಪ್ರೊ. ಡೇವಿಡ್ ಎ. ಕೋಲಾ ಅವರಿಗೆ ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ವೈದ್ಯಕೀಯ ಅಧೀಕ್ಷಕರು, ಉಪ ವೈದ್ಯಕೀಯ ಅಧೀಕ್ಷಕರು, ಶೂಶ್ರುಷಕ ಅಧೀಕ್ಷಕರು ಮತ್ತು ನರ್ಸಿಂಗ್ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನರ್ಸಿಂಗ್ ಕಾಲೇಜಿನ ಹಿರಿಯ ಪ್ರಾಧ್ಯಾಪಕಿಯವರಾದ ಡಾ. ಗಂಗಾಬಾಯಿ ಕುಲಕರ್ಣಿ ಅವರು ಪ್ರೊ. ಡೇವಿಡ್ ಎ. ಕೋಲಾ ಅವರ ಸಮರ್ಪಣಾ ಸೇವೆ ಮತ್ತು ಅವರು ಕಾಲೇಜಿನಲ್ಲಿ ಅನುಸರಿಸಿದ ಶಿಸ್ತು ಬದ್ದತೆಯನ್ನು ಸ್ಮರಿಸಿದರು. ಡಾ. ನಾಗೇಶ ಅಜ್ಜವಾಡಿಮಠ ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಡಾ. ಪ್ರಸನ್ನ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿದರು. ಡಾ. ತಿಲಕ ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ಮೆಟಿಲ್ಡಾ ಬಿಜಾಪುರ ವಂದನಾರ್ಪಣೆ ಸಲ್ಲಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img