ಸೋಂದಾ: ಶ್ರೀ ಸ್ವಾದಿ ದಿಗಂಬರ ಜೈನ ಮಠದ ಭೂಮಿಪೂಜೆ ಶಿಲಾನ್ಯಾಸ ಕಾರ್ಯಕ್ರಮ
Published Date: 11-Apr-2024 Link-Copied
ಮಲೆನಾಡಿನ ಶಿರಸಿ ತಾಲೂಕಿನ ಸೋಂದಾದ ಶ್ರೀ ಸ್ವಾದಿ ದಿಗಂಬರ ಜೈನ ಮಠದ ಅತೀ ಪ್ರಾಚೀನ ಬಸದಿಯಾದ ಮುತ್ತಿನಕೆರೆಯ ಶ್ರೀ ಆದಿನಾಥ ಸ್ವಾಮಿ ಬಸದಿಯು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಬಸದಿಯನ್ನು 10ನೇ ಶತಮಾನದಲ್ಲಿ ಶ್ರೀ ಜಿನದೇವಣ್ಣ, 16ನೇ ಶತಮಾನದಲ್ಲಿ ಶ್ರೀ ಅರಸಪ್ಪನಾಯಕ, 1996ರಲ್ಲಿ ಹಿಂದಿನ ಭಟ್ಟಾರಕರು ಶಿಥಿಲವಾದ ಬಸದಿಯನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ. ಈಗ ಪುನಃ ಶಿಥಿಲಗೊಂಡ ಬಸದಿಯನ್ನು ಸಂಪೂರ್ಣವಾಗಿ ಶಿಲಾಮಯವಾಗಿ ಜೀರ್ಣೋದ್ಧಾರ ಮಾಡಬೇಕೆಂದು ಸಂಕಲ್ಪ ಮಾಡಿ ಭಗವಂತರನ್ನು ಬಾಲಾಲಯದಲ್ಲಿ ಸ್ಥಾಪಿಸಲಾಗಿದೆ. ಈ ಬಸದಿಯ ಭೂಮಿಪೂಜೆ ಶಿಲಾನ್ಯಾಸ ಕಾರ್ಯಕ್ರಮವು ಯುಗಳ ಮುನಿಗಳಾದ ೧೦೮ ಮುನಿಶ್ರೀ ಅಮರಕೀರ್ತಿ ಮಹಾರಾಜರು ಮತ್ತು ೧೦೮ ಮುನಿಶ್ರೀ ಅಮೋಘಕೀರ್ತಿ ಮಹಾರಾಜರ ಪಾವನ ಸಾನಿಧ್ಯದಲ್ಲಿ ಹಾಗೂ ಪ. ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಸ್ವಾಮೀಜಿಗಳವರ ಮಾರ್ಗದರ್ಶನ, ಪ. ಪೂ. ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ಏ.12ರಂದು (ನಾಳೆ) ನೆರವೇರಲಿದೆ.