ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ
Published Date: 27-Mar-2024 Link-Copied
ತೇರದಾಳ ಶ್ರೀ ವಾಸುಪೂಜ್ಯ ವೀತರಾಗ ದಿಗಂಬರ ಜೈನ ಮಂದಿರದ ವತಿಯಿಂದ ಭಗವಾನ ಶ್ರೀ 1008 ಮಹಾವೀರ ತೀರ್ಥಂಕರರ 2550ನೇ ಜನ್ಮಕಲ್ಯಾಣದ ನಿಮಿತ್ತವಾಗಿ ಪ.ಪೂ. ಸಂತ ಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಜೀವನ, ತಪ, ತ್ಯಾಗ ಮತ್ತು ಪ್ರೇರಣಾ ಕಾರ್ಯಗಳು ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಒಳಗೊಂಡಿರುತ್ತದೆ. ಸೂಚನೆಗಳು:- * ಪ್ರಬಂಧವನ್ನು A4 ಸೀಟ್‌ನಲ್ಲಿ ಒಂದೇ ಮಗ್ಗುಲಿನಲ್ಲಿ ಬರೆಯಬೇಕು. 10 ಪುಟ ಮೀರದಂತೆ ಇರಬೇಕು. * ಶುದ್ಧ ಕೈ ಬರಹ ಅಥವಾ ಟೈಪ್ ಮಾಡಬಹುದು. * ಪ್ರಬಂಧ ಬರೆಯಲು ವಯಸ್ಸಿನ ಮಿತಿ ಇಲ್ಲ. * ಪ್ರಬಂಧ ಬರೆಯುವವರ ಹೆಸರು, ವಿಳಾಸ, ವಾಟ್ಸ್ಆಪ್ ನಂಬರ್ ಕಡ್ಡಾಯವಾಗಿ ನಮೂದಿಸಬೇಕು. * ಪ್ರಬಂಧವನ್ನು ಕನ್ನಡ ಭಾಷೆಯಲ್ಲಿ ಮಾತ್ರ ಬರೆಯಬೇಕು. * ಆಯೋಜಕರ ತೀರ್ಮಾನ ಅಂತಿಮವಾಗಿರುತ್ತದೆ. * ಪ್ರಬಂಧ ಕಳುಹಿಸುವ ಕೊನೆಯ ದಿನಾಂಕ 16-04-2024 * ಪ್ರಬಂಧ ಕಳುಹಿಸುವ ವಿಳಾಸ- ಸಂತೋಷ ಶೆಟ್ಟಿ, ಗುರುಕುಲ ರೋಡ್, ಟೀಚರ್ ಕಾಲೋನಿ, A/Po ತೇರದಾಳ, 587315 ತಾ: ರಬಕವಿ-ಬನಹಟ್ಟಿ ಜಿ: ಬಾಗಲಕೋಟ * ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 9164896108, 7019326565, 8951742543 * ಪ್ರಬಂಧದಲ್ಲಿ ಭಾಗವಹಿಸುವ ಎಲ್ಲರಿಗೂ ಬಹುಮಾನ ನೀಡಲಾಗುವುದು.