ವೇಣೂರು : ಮಾ. 25ರಂದು ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆ
Published Date: 24-Mar-2024 Link-Copied
ಬೆಳ್ತಂಗಡಿ ತಾಲೂಕಿನ ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕವು ಇತ್ತೀಚೆಗೆ ಸಂಪನ್ನಗೊಂಡಿದ್ದು, ಇದೀಗ ಮಾ. 25ರಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವದ ದಿನವಾಗಿದ್ದು, ಆ ಪ್ರಯುಕ್ತ ನಾಳೆ (ಮಾ. 25)ರಂದು ಸಾಯಂಕಾಲ ಗಂಟೆ 6.00ರಿಂದ ಭ|| ಶ್ರೀ ಬಾಹುಬಲಿ ಸ್ವಾಮಿಗೆ ೫೪ ಕಲಶಗಳಿಂದ ಪಾದಾಭಿಷೇಕ, ಮಹೋತ್ಸವ ಹಾಗೂ ಮಹಾಪೂಜೆಯು ನೆರವೇರಲಿದೆ ಎಂದು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಪ್ರಕಟಣೆ ತಿಳಿಸಿದೆ.