ಇಂದು ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ
Published Date: 16-Mar-2024 Link-Copied
ಬೆಳ್ತಂಗಡಿ ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ವೇಣೂರು [ರಿ]. ವತಿಯಿಂದ ಇಂದು ಸಂಜೆ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ಜರಗಲಿರುವುದು. ಫೆ.22 ರಿಂದ ಮಾ. 01ರವರೆಗೆ ಜರಗಿದ ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಹಕರಿಸಿದ ಶ್ರಾವಕ ಶ್ರಾವಕಿಯರ ಅಭಿನಂದನಾ ಕಾರ್ಯಕ್ರಮವು ಮೂಡಬಿದ್ರೆ ಶ್ರೀ ಜೈನ ಮಠದ ಪರಮಪೂಜ್ಯ ‘ಭಾರತಭೂಷಣ' ಜಗದ್ಗುರು ಸ್ವಸಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರ ಅಧ್ಯಕ್ಷತೆಯಲ್ಲಿ, ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್‌ರವರ ಗೌರವ ಉಪಸ್ಥಿತಿಯಲ್ಲಿ, ಅಪರಾಹ್ನ ಗಂಟೆ 3-30 ಕ್ಕೆ ಶ್ರೀ ಭರತೇಶ ಸಮುದಾಯ ಭವನದಲ್ಲಿ ನಡೆಯಲಿದೆ. ಸಂಜೆ 5-00 ರಿಂದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಕೊಡಮಣಿತ್ತಾಯ ದೈವ ಹಾಗೂ ಕಲ್ಕುಡ-ಕಲ್ಲುರ್ಟಿ ದೈವಗಳ ಭಂಡಾರಗಳ ಆಗಮನ. 6-00 ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಜಲಾಭಿಷೇಕ ಪ್ರಾರಂಭ. ರಾತ್ರಿ 7-00 ರಿಂದ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗ ಪೂಜೆ, 7-30 ರಿಂದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ವಿವಿಧ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ, 8-00 ರಿಂದ ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಕುಡ ಕಲ್ಲುರ್ಟಿ ದೈವಗಳ ನೇಮ. ಈ ಎಲ್ಲ ಕಾರ್ಯಕ್ರಮಗಳು ಜರಗಲಿದೆ. ವಿ.ಸೂ: ಶ್ರಾವಕ ಬಂಧುಗಳು ರೂ.3000. ರೂ.5000, ರೂ.10000 ಕಲಶಗಳನ್ನು ಪಡೆದು ಅಭಿಷೇಕ ಮಾಡಬಹುದು. ದ್ರವ್ಯಾಬಿಷೇಕ ಮಾಡಲಿಚ್ಚಿಸುವ ಬಂಧುಗಳು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು. ಮೊ: 9606356288